HOLY ROSARY CHURCH, KUNDAPUR – 450 th JUBILEE SOUVENIR 2021

ರಾಷ್ಟ್ರೀಯ ಪೌಷ್ಟಿಕತೆಯ ಮಾಹಿತಿ ಶಿಬಿರ – ಪೌಷ್ಟಿಕ ಆಹಾರ ಸೇವಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು – ನ್ಯಾಯಧೀಶ ರಂಗೇ ಗೌಡ

JANANUDI.COM NETWORK

 

ರಾಷ್ಟ್ರೀಯ ಪೌಷ್ಟಿಕತೆಯ ಮಾಹಿತಿ ಶಿಬಿರ – ಪೌಷ್ಟಿಕ ಆಹಾರ ಸೇವಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು – ನ್ಯಾಯಧೀಶ ರಂಗೇ ಗೌಡ

ಕುಂದಾಪುರ, ಸೆ.11:’ ಪೌಷ್ಟಿಕತೆಯ ಆಹಾರ ಸೇವಿಸಿದರೆ ಮಗು ಹುಟ್ಟುತ್ತಾರೆ ಈ ರೀತಿಯಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು, ಮಗು ತಾಯಿಯ ಭ್ರೂಣದಲ್ಲಿರುವಾಗಲೇ ತಾಯಿ ಮಗುವಿಗಾಗಿ ಪೌಷ್ಟಿಕತೆಯ ಆಹಾರ ಸೇವಿಸಬೇಕು. ದೇವರು 90 ಶೇಕಡ ಮಗುವನ್ನು ಚೆನ್ನಾಗಿಯೆ ರಚಿಸುತ್ತಾನೆ, ಆದರೆ ಮಗುವಿನ ಬೆಳವಣಿಗೆಗಾಗಿ ತಾಯಿ ಉತ್ತಮ ಪೌಷ್ಟಿಕತೆಯ ಆಹಾರ ಸೇವಿಸ ಬೇಕು’ ಎಂದು ಹಿರಿಯ ನ್ಯಾಯಧೀಶ ಮತ್ತು ಅಧ್ಯಕ್ಷರು ತಾ.ಕಾ.ಸೇ. ಸಮಿತಿ ಗೌರವಾನ್ವಿತ ರಂಗೇ ಗೌಡ ಸಿ. ಅವರು ಹೇಳಿದರು.
ಅವರು ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ರಿ. ಅಭಿಯೋಗ ಇಲಾಖೆ ಕುಂದಾಪುರ ಮತ್ತು ರೋಟರಿ ಕ್ಲಬ್ ಕುಂದಾಪುರ ಸನ್‍ರೈಸ್ ಇವರ ಸಂಯುಕ್ತ ಆಶ್ರಯದಲ್ಲಿ ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕತೆಯ ಬಗ್ಗೆ ಮಾಹಿತಿ ಶಿಬಿರ ಮತ್ತು ಮಕ್ಕಳ ಹಕ್ಕುಗಳ ಶಿಬಿರ ಉದ್ಘಾಟಿಸಿ ಮಾತನಾಡುತಿದ್ದರು. ‘ಮಗುವಿಗೆ ತಾಯಿ ಹಾಲು ಉತ್ತಮ ಅದನ್ನು ಕಡ್ಡಾಯವಾಗಿ ತಾಯಿ ನೀಡಬೇಕು, ಅದು ಮಕ್ಕಳ ಹಕ್ಕು ಕೂಡ’ ಎಂದು ಅವರು ತಿಳಿಸಿದರು. ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಸಂಚಾಲಕ ಹೋಲಿ ರೋಜರಿ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಇವತ್ತು ಮಕ್ಕಳು ಜಂಕ್ಸ್ ಫುಡ್ ತಿಂದು ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ, ಮಕ್ಕಳು ಸಮತೂಕದ ಆಹಾರ ಸೇವಿಸಿ ಆರೋಗ್ಯವಂತರಾಬೇಕು, ಹಾಗೇ ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ ಬಹಳ ಉಪಯುಕ್ತ ಅದನ್ನು ಸದುಪಯೋಗವನ್ನು ಪಡೆದುಕೊಳ್ಳ ಬೇಕು’ ಎಂದು ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷ, ವಕೀಲರ ಸಂಘದ ಅಧ್ಯಕ್ಷರಾದ ಸಳ್ವಾಡಿ ನಿರಂಜನ ಹೆಗ್ಡೆ ‘ನಮ್ಮ ದೇಶದಲ್ಲಿ 46 ಶೇಕಡ ಮಕ್ಕಳಿಗೆ ಪೌಷ್ಟಿಕತೆಯಿಂದ ಅನ್ಯಾವಾಗುತ್ತ ಇದೆ, ನಾವು ವಿದೇಶಿಯ ವೇಷ ಭೂಷಣಕ್ಕೆ ಮಾರು ಹೋಗುತ್ತಿದ್ದೆವೆ, ವಿದೇಶಿಯರು ಪೌಷ್ಟಿಕತೆಯ ಆಹಾರ ಸೇವಿಸುತ್ತಾರೆ ಆದರೆ ನಾವು ಇಂತಹ ಅವರ ಒಳ್ಳೆಯ ಕಾರ್ಯಕ್ರಮಗಳ ಅನುಕರಣೆ ಮಾಡುವುದಿಲ್ಲಾ,’ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೈಂದೂರು ಆರೋಗ್ಯಾಧಿಕಾರಿ ಡಾ|ಪ್ರೇಮಾನಂದ ಮಕ್ಕಳ, ತಾಯಿಯ ಅಗತ್ಯತೆಯ ಪೌಷ್ಟಿಕತೆಯ ಆಹಾರದ ಬಗ್ಗೆ, ತಾಯಿ ಮಗುವಿಗೆ 2 ವರ್ಷದ ವರೆಗೆ ಎದೆ ಹಾಲು ನೀಡಬೇಕು ಮತ್ತು ಮಾನವನಿಗೆ ಬೇಕಾದ ಕಾರ್ಬೊನೈಟ್, ಪೆÇ್ರೀಟಿನ್ಸ್, ವೀಟಾಮೀನ್, ಕ್ಯಾಲ್ಸಿಯಮ್‍ವುಳ್ಳ ಬೇಕಾದ ಸಮತೂಕದ ಆಹಾರದ ಬಗ್ಗೆ ವಿವರ ನೀಡಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲರಾದ ಶ್ರೀಧರ ಪಿ.ಎಸ್. ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪ್ರಧಾನ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಧೀಶರು ಹಾಗೂ ಕಾರ್ಯದರ್ಶಿಯಾದ ಗೌರವಾನ್ವಿತ ಪ್ರವೀಣ್ ನಾಯ್ಕ್, ರೊ|ಹಾಜಿ ಅಬ್ದುಶೇಖ್ ಸಾಹೇಬ್ ಶುಭ ಕೊರೀದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಹಂದೆ ಪ್ರಸ್ತಾವಿಕ ಮಾತುಗಳನ್ನಾಡಿದರು, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಧೀಶರು ಗೌರವಾನ್ವಿತ ನಾಗರತ್ನಮ್ಮ ಉಪಸ್ಥಿತರಿದ್ದರು. ಭಾಸ್ಕರ ಸೇರೆಗಾರ್ ಕಾರ್ಯಕ್ರಮವನ್ನು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಉಪಸ್ಥಿತರಿದ್ದರು. ರೋಜರಿ ಕಿಂಡರ್ ಗಾರ್ಟನ್ ಮುಖ್ಯೋಪಧ್ಯಾಯಿನಿ ಶೈಲಾ ಲುವಿಸ್ ಸ್ವಾಗತಿಸಿದರು. ಶಿಕ್ಷಕಿ ವಿನೀತಾ ಡಿಸೋಜಾ, ವಂದಿಸಿದರು. ಶಿಕ್ಷಕಿ ವೀಣಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು,

 

 

Monthi fest was solemnly celebrated with traditional zeal and piety by the Belman St. Joseph’s church Parish here at belman

Photo and report by Walter monteiro Belman

Prior to the fest, from August 30, a nine day Novena with mass, rosary recitation in procession and offering flowers to ‘Balok Morie’, (infant Mary) was organised and sermon delivered by Fr Edwine Dsouza Parish Priest on all those days was indeed excellent, preparing everyone spiritually for the feast Day.
On September 8, Feast day Main Celebrant of Mass is Rev. Fr. Joachim Fernandies, a well-known writer, poet and preacher introduced the itinerary for the celebrations which was followed by blessings of New Corn, and offering flowers to ‘Balok Morie’. Children accompanied by elders sang gloriously ‘Moriek Hogolsian’, at the portico before proceeding for the holy mass.
A holy Eucharistic celebration was concelebrated by Rev. Fr. Joachim Fernandies. and co-celebrated by Fr Edwin Dsouza, Fr. Joachim fernandes, importance and significance of the Novena and Mary’s feast in the lives of people of coastal region. Children offered variety of fruits and fresh grown vegetables during the offertory. After Mass conducted blessing of Vehicle and distribution of Soviniour, the families were served ‘Kobu’ (sugarcane) and juice before leaving the church compound, our parishioner overjoyed and seen exchanging pleasantries of ‘Monthi Fest’

 

ಶ್ರೀನಿವಾಸಪುರ ಸೆಂಟ್ರಲ್, ಎಲ್.ಐ.ಸಿ. ಉಪಗ್ರಹ ಶಾಖೆ ಮತ್ತು ಜಿ.ಇ.ಎಫ್. ನೇತ್ರದೀಪ ಕಣ್ಣಿನಆಸ್ಪತ್ರೆ, ಕೋಲಾರ ಇವರ ಸಹಯೋಗದೊಂದಿಗೆಉಚಿತಕಣ್ಣಿನತಪಾಸಣಾ ಶಿಭಿರ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ



ಶ್ರೀನಿವಾಸಪುರ ಸೆಂಟ್ರಲ್, ಎಲ್.ಐ.ಸಿ. ಉಪಗ್ರಹ ಶಾಖೆ ಮತ್ತು ಜಿ.ಇ.ಎಫ್. ನೇತ್ರದೀಪ ಕಣ್ಣಿನಆಸ್ಪತ್ರೆ, ಕೋಲಾರ ಇವರ ಸಹಯೋಗದೊಂದಿಗೆಉಚಿತಕಣ್ಣಿನತಪಾಸಣಾ ಶಿಭಿರ



ಶ್ರೀನಿವಾಸಪುರ: ಮಾನವನಿಗೆಕಣ್ಣುದೃಷ್ಟಿ ಬಹಳ ಮುಖ್ಯವಾಗಿದ್ದು, ಸುಮಾರು 45-50 ವರ್ಷಗಳಾಗುವಷ್ಟರಲ್ಲಿ ಕಣ್ಣನ್ನು ಆಗಾಗ ತಪಾಸಣೆಗೊಳಿಸುವುದು ಬಹಳ ಮುಖ್ಯವಾಗಿದ್ದು, ಇಂತಹಉಚಿತಕಣ್ಣಿನತಪಾಸಣಾ ಶಿಭಿರದ ಪ್ರಯೋಜನವನ್ನುತಾಲ್ಲೂಕಿನಜನತೆ ಉಪಯೋಗಿಸಿಕೊಳ್ಳಬೇಕೆಂದು ರೋಟರಿಶ್ರೀನಿವಾಸಪುರ ಸೆಂಟ್ರಲ್ ನ ಅಧ್ಯಕ್ಷರಾದಆರ್.ವಿ. ಕುಲಕರ್ಣಿ ತಿಳಿಸಿದರು. 
ಪಟ್ಟಣದಎಂ.ಜಿ. ರಸ್ತೆಯಲ್ಲಿರುವ ಎಲ್.ಐ.ಸಿ. ಉಪಗ್ರಹ ಶಾಖೆಯಲ್ಲಿ, ರೋಟರಿ ಶ್ರೀನಿವಾಸಪುರ ಸೆಂಟ್ರಲ್, ಎಲ್.ಐ.ಸಿ. ಉಪಗ್ರಹ ಶಾಖೆ ಮತ್ತು ಜಿ.ಇ.ಎಫ್. ನೇತ್ರದೀಪ ಕಣ್ಣಿನಆಸ್ಪತ್ರೆ, ಕೋಲಾರಇವರ ಸಹಯೋಗದೊಂದಿಗೆಉಚಿತಕಣ್ಣಿನತಪಾಸಣಾ ಶಿಭಿರವನ್ನು ಏರ್ಪಡಿಸಿ ಮಾತನಾಡಿದಕುಲಕರ್ಣಿ, ಕಣ್ಣುದೃಷ್ಟಿ ಬಹಳ ಮುಖ್ಯವಾಗಿದ್ದು, ನಾವೆಲ್ಲರೂ ಹಸಿರು ತರಕಾರಿಯನ್ನುಉಪಯೋಗಿಸುವುದುಕಡಿಮೆಯಾಗಿರುವುದರಿಂದ 45-50 ವರ್ಷಕ್ಕೆ ನಮಗೆಲ್ಲಾಕಣ್ಣಿನದೃಷ್ಟಿ ಸಮಸ್ಯೆಯಾಗುತ್ತಿದ್ದು, ಆಗಾಗ ಕಣ್ಣಿನತಪಾಸಣೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ತಾಲ್ಲೂಕಿನ ಸಾರ್ವಜನಿಕರುಇಂತಹಉಚಿತ ಶಿಭಿರದಲ್ಲಿ ಕಣ್ಣಿನತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. 
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಕಾರ್ಯದರ್ಶಿ ಎನ್.ಕೃಷ್ಣಮೂರ್ತಿ ಮಾತನಾಡಿ, ಭಾರತೀಯಜೀವ ವಿಮಾ ನಿಗಮದ ಹುಟ್ಟು ಹಬ್ಬದ ಪ್ರಯುಕ್ತಎಲ್.ಐ.ಸಿ., ಶ್ರೀನಿವಾಸಪುರ ಶಾಖೆ, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮತ್ತುಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆ, ಕೋಲಾರಇವರ ಸಂಯುಕ್ತಆಶ್ರಯದಲ್ಲಿಉಚಿತಕಣ್ಣಿನತಪಾಸಣಾ ಶಿಭಿರವನ್ನು ಹಮ್ಮಿಕೊಂಡಿದ್ದು, ಈ ಶಿಭಿರದಲ್ಲಿ ಬೆಳಿಗಿನಿಂದ ಸುಮಾರು85ಪುರಶ ಮತ್ತು ಮಹಿಳೆಯರಿಗೆ ಕಣ್ಣಿನತಪಾಸಣೆಯನ್ನು ಮಾಡಿದ್ದು, ಇವರಲ್ಲಿ ಸುಮಾರು 50-55 ಜನರಿಗೆಕಣ್ಣಿನಲ್ಲಿ ಪೆÇರೆಇನ್ನಿತರೆ ತೊಂದರೆಗಳಿದ್ದು, ಇವರಿಗೆ ಶಸ್ತ್ರಚಿಕಿತ್ಸೆಅವಶ್ಯಕತೆಯಿದ್ದು, ಶಸ್ತ್ರಚಿಕಿತ್ಸೆಗಾಗಿಕೋಲಾರದಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆಯಲ್ಲಿಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು. ಇವರಿಗೆ ಶಸ್ತ್ರಚಿಕಿತ್ಸೆಯ ನಂತರಒಂದು ತಿಂಗಳ ಕಾಲ ಚಿಕಿತ್ಸೆಯೊಂದಿಗೆಉಚಿತವಾಗಿಔಷದಿಯನ್ನು ನೀಡಲಾಗುವುದುಎಂದರು. 
ಶಾಖಾ ವ್ಯವಸ್ಥಾಪಕರಾದ ಸತೀಶ್‍ಮಾತನಾಡಿ, ಭಾರತೀಯಜೀವ ವಿಮಾ ನಿಗಮದ ಹುಟ್ಟುಹಬ್ಬದ ಪ್ರಯುಕ್ತ ಶಾಖೆಯಲ್ಲಿ ಪ್ರತಿ ವರ್ಷವೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿಉಚಿತ ನೇತ್ರತಪಾಸಣಾ ಶಿಭಿರವನ್ನು ಹಮ್ಮಿಕೊಂಡಿದ್ದು, ಈ ಶಿಭಿರದಲ್ಲಿ ಸುಮಾರು85 ಮಂದಿ ಕಣ್ಣಿನತಪಾಸಣೆಯನ್ನು ಮಾಡಿಸಿಕೊಂಡಿದ್ದು, ಹೆಚ್ಚಿನಚಿಕಿತ್ಸೆಗಾಗಿಕೋಲಾರದ ಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆಯಲ್ಲಿಉಚಿತಚಿಕಿತ್ಸೆಯನ್ನು ಮಾಡಿಸಿಕೊಂಡು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆಯಡಾ: ಮಾಲಾ ಮತ್ತುತಂಡದವರು ನೇತ್ರತಪಾಸಣೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿರೋಟರಿ ಶ್ರೀನಿವಾಸಪುರ ಸೆಂಟ್ರಲ್ ನ ಕಮ್ಯೂನಿಟಿ ಸರ್ವೀಸ್ ನಿರ್ದೇಶಕರಾದಎಸ್. ಶಿವಮೂರ್ತಿ , ಶಾಖೆಯಅಧಿಕಾರಿಯಾದ ನಟೇಶ್ ಮತ್ತುಸಿಬ್ಬಂದಿ ಇನ್ನಿತರರು ಹಾಜರಿದ್ದರು.

125 year post centenary silver jubilee

Photo and report by Walter monteiro Belman
125 year post centenary silver jubilee
souvenir Release of our st. joseph’s church Belman Main guest Rev. Fr. Joachim Fernandes, A well-known  writer, poet and speaker release the book and Rev. Fr. Edwin Dsouza director youth mission in Udupi diocese and parish priest belman church. Alwyn Agera Vice president Parish council, Favositne Dsouza Secretary, were present the dais. Editor in Chief Stany Mendonca,and members of parish council, Editorial board were present the programme

ಕುಂದಾಪುರ ಯುವ ಸಂಚಾಲನೆಯಿಂದ ವಿವಿಧ ಸಾಂಸ್ಕ್ರತಿಕ ಸ್ಪರ್ಧೆಗಳು

JANANUDI.COM NETWORK

 

ಕುಂದಾಪುರ ಯುವ ಸಂಚಾಲನೆಯಿಂದ ವಿವಿಧ ಸಾಂಸ್ಕ್ರತಿಕ ಸ್ಪರ್ಧೆಗಳು

 


ಕುಂದಾಪುರ, ಸೆ.9: ಕುಂದಾಪುರ ರೋಜರಿ ಮಾತಾ ಚರ್ಚಿನ ಭಾರತೀಯ ಯುವ ಸಂಚಾಲನೆಯಿಂದ ಮೊಂತಿ ಹಬ್ಬದ ಪ್ರಯುಕ್ತ ಹಿರಿಯರಿಗೆ ಮತ್ತು ಕಿರಿಯರಿಗೆ ವಿವಿಧ ರೀತಿಯ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಎರ್ಪಡಿಸಿತ್ತು. ಸ್ಪರ್ಧೆಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಹುಮಾನಗಳನ್ನು ವಿತರಿಸಿ ‘ಮೊತಿ ಹಬ್ಬದ ಪ್ರಯುಕ್ತ ಎರ್ಪಡಿಸಿದ ಈ ಕಾರ್ಯಕ್ರಮದಲ್ಲಿ ನೀವೆಲ್ಲಾ ಉತ್ತಮವಾದ ಪ್ರದರ್ಶನಗಳನ್ನು ನೀಡಿದ್ದಿರಿ, 9 ತಿಂಗಳಿನ ಮಗುವಿನಿಂದ ಹಿಡಿದು 90 ವರ್ಷದ ಹಿರಿಯರೂ ಕೂಡ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಲ್ಲದೆ ಹಿರಿಯರು ಕೂಡ ಕುಣಿದು ಕುಪ್ಪಳಿಸಿದಕ್ಕೆ ಅಭಿನಂದನೆ ಸಲ್ಲಿಸುತ್ತಾ, ಮೊಂತಿ ಮಾತೆಯ ಆದರ್ಶವನ್ನು ಪಾಲಿಸೋಣ” ಎಂದು ನುಡಿದರು.
ಒಳಗಾಂಣ ಆಟದಲ್ಲಿ ವಿಜೇತರಾದ ಮಕ್ಕಳಿಗೆ ಹಿರಿಯರಿಗೆ. ಕಥೊಲಿಕ್ ಸಭಾ ಭಾಷಣ ಸ್ಪರ್ಧೆಯ ವಿಜೇತರಿಗೆ, ಚರ್ಚ ಪತ್ರ ರೊಜಾರಿಯುಮ್ ಪತ್ರದ ಕ್ವಿಜ್ ಸ್ಪರ್ಧಾ ವಿಜೇತರಿಗೆ ಪ್ರಾಂಶುಪಾಲ ವಂ|ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರು ವಂ|ಫಾ|ವಿಜಯ್ ಡಿಸೋಜಾ, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವೈಲೆಟ್ ತಾವ್ರೊ ಸರ್ವ ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಬಹುಮಾನಗಳನ್ನು ವಿತರಿಸಿದರು. ಕಥೊಲಿಕ್ ಸಭಾ ಅಧ್ಯಕ್ಷ ವಾಲ್ಟರ್ ಡಿಸೋಜಾ, ಕಾರ್ಯದರ್ಶಿ ವಿಲ್ಸನ್ ಡಿಆಲ್ಮೇಡ , ರೊಜಾರಿಯುಮ್ ಪತ್ರದ ಸಂಪಾದಕ ಬರ್ನಾಡ್ ಡಿಕೋಸ್ತಾ ಉಪಸ್ಥಿತರಿದ್ದರು.
ಉತ್ತಮ ಗಾಯನ ಪ್ರಶಸ್ತಿ ವೆಲಂಕಣಿ ವಾಳೆಗೆ, ಉತ್ತಮ ನ್ರತ್ಯ ಪ್ರಶಸ್ತಿ ನಿತ್ಯಾಧರ್ ವಾಳೆಗೆ ದೊರಕಿತು ದ್ವೀತಿಯ ಸಮಗ್ರ ಪ್ರಶಸ್ತಿ ರೋಜರಿ ಎ ವಾಳೆಗೆ, ಸಮಗ್ರ ಪ್ರಶಸ್ತಿ ನಿತ್ಯಾಧರ್ ವಾಳೆಗೆ ದೊರಕಿತು. ವೇದಿಕೆಯಲ್ಲಿ ಯುವ ಸಂಚಾಲನ ಅಧ್ಯಕ್ಷ ಆಲೆನ್ ತಾವ್ರೊ, ಕಾರ್ಯದರ್ಶಿ ನಿತಿನ್ ಬರೆಟ್ಟೊ, ಸಚೇತಕಿ ರೇಶ್ಮಾ ಫೆರ್ನಾಂಡಿಸ್, ತೀರ್ಪುದಾರದಾದ ಮೆಲ್ವಿನ್ ರೊಡ್ರಿಗಸ್, ರೆಬೆಕಾ ಲುವಿಸ್ ಉಪಸ್ಥಿತರಿದ್ದರು. ಸಾಂಸ್ಕ್ರತಿಕ ಕಾರ್ಯದರ್ಶಿ ಅಸ್ಮಿತಾ ಕೊರೆಯಾ ಸ್ವಾಗತಿಸಿ ಸಾಂಸ್ಕ್ರತಿಕ ಸ್ಪರ್ಧೆಯನ್ನು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮವನ್ನು ಅಶ್ವಿನ್ ಪಿಂಟೊ ನಡೆಸಿದರು, ಸಾಮ್ಯುವೇಲ್ ಲುವಿಸ್ ಧನ್ಯವಾದಗಳನ್ನು ಅರ್ಪಿಸಿದರು.

ಕೋಟದಲ್ಲಿ ಸಂಭ್ರಮದ ಮೊಂತಿ ಹಬ್ಬ

Pics by Shaun Fernandes 

JANANUDI.COM NETWORK 

ಕೋಟದಲ್ಲಿ ಸಂಭ್ರಮದ ಮೊಂತಿ ಹಬ್ಬ


ಕುಂದಾಪುರ,ಸೆ.9: ಕೋಟ ಸಂತ ಅಂತೋನಿ ಇಗರ್ಜಿಯಲ್ಲಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು ಹೊಸ ಬೆಳೆ, ಕುಟುಂಬದ ಹಬ್ಬ ಮೊಂತಿ ಹಬ್ಬವನ್ನು ಬಹಳ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಹೊಸ ತೆನೆ ಹಾಗೂ ಬಾಲೆ ಮೇರಿಯ ಮೂರ್ತಿಯನ್ನು ಚರ್ಚಿನ ಧರ್ಮಗುರು ವಂ|ಆಲ್ಪೊನ್ಸ್ ಡಿಲೀಮಾ ಆಶಿರ್ವದಿಸಿದ ಬಳಿಕ ಇಗರ್ಜಿಯಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶ ನೀಡಿದರು, ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ ವಾಡೆಯ ಗುರಿಕಾರರು, ಪ್ರತಿನಿಧಿಗಳು ಹಾಗೂ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಈ ಧಾರ್ಮಿಕ ಕ್ರಿಯೆಯಲ್ಲಿ ಭಾಗವಹಿಸಿದರು.

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಕೊಡುಗೆ ಬಹುಮುಖ್ಯ-ಎಸ್.ಮುನಿಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಕೊಡುಗೆ ಬಹುಮುಖ್ಯ-ಎಸ್.ಮುನಿಸ್ವಾಮಿ
ಕೋಲಾರ : ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಕೊಡುಗೆ ಬಹುಮುಖ್ಯವಾಗಿದ್ದು, ಶಿಕ್ಷಣ ವ್ಯವಸ್ಥೆಯು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು. 
 ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಕುರಿತು ಅವರು ಮಾತನಾಡಿದರು. ಉತ್ತಮ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ.  ಮಕ್ಕಳನ್ನು ತಿದ್ದಿ ತೀಡಿ ಸತ್ಪ್ರಜೆಗಳನ್ನಾಗಿ ಶಿಕ್ಷಕರು ಮಾಡುತ್ತಾರೆ. ಒಂದು ಮಗುವಿನ  ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು ಎಂದು ತಿಳಿಸಿದರು. 
 ಕೋಲಾರ ಜಿಲ್ಲೆಯಲ್ಲಿ ಒಟ್ಟು 2565 ಶಾಲೆಗಳಿದ್ದು, ಸುಮಾರು 7 ಸಾವಿರ ಶಿಕ್ಷಕರಿದ್ದಾರೆ. ಕರ್ನಾಟಕಕ್ಕೆ ಅತಿ ಹೆಚ್ಚು ಶಿಕ್ಷಕರನ್ನು ನೀಡಿರುವ ಜಿಲ್ಲೆ ಕೋಲಾರ. ಕೋಲಾರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ಪರ್ಧಾತ್ಮಕ ವರ್ಷಗಳ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು. ಇದರಿಂದ ಯುವಜನತೆ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ನೆರವಾಗುತ್ತದೆ ಎಂದರು. 
 ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಸರ್ಕಾರಿ ಶಾಲೆಗಳು ಹಾಗೂ ಗ್ರಾಮದ ಸುತ್ತ ಮುತ್ತ ಹಣ್ಣಿನ ಗಿಡಗಳು ಹಾಗೂ ಬಹುಉಪಯೋಗಿ ಗಿಡಗಳನ್ನು ಬೆಳೆಸಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಹುದ್ದೆಗಳಲ್ಲಿರುವ ಹಳೆಯ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಂದ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಳ್ಳುವ ಕೆಲಸ ಆಗಬೇಕು. ಇದರಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ ಎಂದು ಕಿವಿಮಾತು ಹೇಳಿದರು. 
 ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವುದು. ಈ ಗುರು ವೃತ್ತಿಗೆ ಮಹತ್ವವನ್ನು ತಂದು ಕೊಟ್ಟವರು ಸರ್ವಪಲ್ಲಿ ರಾಧಾಕೃಷ್ಣನ್‍ರವರು. ಇವರು ಸ್ವತಃ ಶಿಕ್ಷಕರಾಗಿ ಸೇವೆ ಸಲ್ಲಿಸಿ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದರು. ಇವರ ಜನ್ಮದಿನವನ್ನು ಇಂದು ನಾವು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು. 
 ನರೇಗಾ ಯೋಜನೆಯಡಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಈ ವರ್ಷದ ಅಂತ್ಯದೊಳಗೆ ಕಾಂಪೌಂಡ್‍ಗಳನ್ನು ನಿರ್ಮಿಸಲಾಗುವುದು. ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಕರು ಗಮನ ಹರಿಸಬೇಕು. ಪ್ರಪಂಚದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ಭಾರತ. ಭಾರತೀಯರ ಸರಾಸರಿ ವಯಸ್ಸು 29 ವರ್ಷ ಇದೆ ಎಂದು ತಿಳಿಸಿದರು. 
 ವಿಧಾನಪರಿಷತ್ ಸದಸ್ಯರಾದ ವೈ.ಎ ನಾರಾಯಣಸ್ವಾಮಿ ಅವರು ಮಾತನಾಡಿ, ಗುರು ಇಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಅಸಾಧ್ಯ. ಗುರು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾನೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಪ್ರಶಸ್ತಿಗೆ ಲಾಭಿ ನಡೆಯುತ್ತಿದ್ದು, ಇದು ನಿಲ್ಲಬೇಕು. ಮುಂದಿನ ದಿನಗಳಲ್ಲಿ ಎಲೆ ಮರಿ ಕಾಯಿಯಂತೆ ದುಡಿಯುತ್ತಿರುವ ಶಿಕ್ಷಕರನ್ನು ಪ್ರಶಸ್ಸಿಗೆ ಪರಿಗಣಿಸುವಂತೆ ಕಾನೂನು ರೂಪಿಸಲಾಗುವುದು. ಪ್ರಶಸ್ತಿಗೆ ಅರ್ಜಿ ಹಾಕುವ ಪದ್ದತಿಗೆ ಮುಕ್ತಿ ನೀಡಲಾಗುವುದು ಎಂದು ತಿಳಿಸಿದರು. 
 ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ಮಾತನಾಡಿ, ಹಿಂದೆ ಶಿಕ್ಷಣ ಪಡೆಯಲು ಅವಕಾಶಗಳ ಹಾಗೂ ಸೌಲಭ್ಯಗಳು ತುಂಬಾ ಕಡಿಮೆ ಇದ್ದವು. ಸಾರಿಗೆ ಸೌಲಭ್ಯಗಳಿರಲಿಲ್ಲ. ಆದರೆ ಇಂದು ಶಿಕ್ಷಣ ಪಡೆಯಲು ವಿಫುಲ ಅವಕಾಶಗಳಿವೆ. ಆದ್ದರಿಂದ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆಯಬೇಕು. ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಬೇಕು. ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೂ ಶಿಕ್ಷಕರು ಒತ್ತು ನೀಡಬೇಕು ಎಂದರು. 
 ಕಾರ್ಯಕ್ರಮದಲ್ಲಿ ಜಿಲ್ಲೆಯ ಉತ್ತಮ ಶಿಕ್ಷಕರ ಪ್ರಶಸ್ಸಿಗೆ ಭಾಜನರಾದ ಪ್ರಾಥಮಿಕ ಶಾಲಾ ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈ ವರ್ಷದಲ್ಲಿ ನಿವೃತ್ತರಾದ ಶಿಕ್ಷಕರಿಗೂ ಸನ್ಮಾನಿಸಲಾಯಿತು. 
 ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಸೂಲೂರು ಎಂ.ಆಂಜಿನಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಶೈಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಾಗಾನಂದ ಕೆಂಪರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅಶೋಕ್, ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಸ್. ಮುನಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ನಾಗರಾಜಗೌಡ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.

ಕುಷ್ಟರೋಗ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ- ಕೆ. ಶ್ರೀನಿವಾಸಗೌಡ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕುಷ್ಟರೋಗ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ- ಕೆ. ಶ್ರೀನಿವಾಸಗೌಡ
ಕೋಲಾರ: ಕುಷ್ಟರೋಗ ಮುಕ್ತ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆಯಲ್ಲದೆ ವೈದ್ಯಾಧಿಕಾರಿಗಳು ಹೆಚ್ಚು ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಶಾಸಕರಾದ 
ಕೆ. ಶ್ರೀನಿವಾಸಗೌಡ ಅವರು ತಿಳಿಸಿದರು.
      ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕುಷ್ಟರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಷ್ಟರೋಗವು ಪ್ರಾಚೀನ ಕಾಲದಿಂದ ಬಂದ ಕಾಯಿಲೆಯಾಗಿದ್ದು, ಸಾರ್ವಜನಿಕರು ಯಾವುದೇ ಸಂಕೋಚ, ತಾರತಮ್ಯವಿಲ್ಲದೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
     ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ಕುಷ್ಟರೋಗ ನಿವಾರಣೆಯಾಗದಿರುವುದು ಬೇಸರದ ಸಂಗತಿಯಾಗಿದೆ. ತರಕಾರಿಗಳು, ಸೊಪ್ಪು,  ಹಾಲು, ಮೊಟ್ಟೆ, ಮೊಳಕೆ ಕಾಳುಗಳು, ಇನ್ನಿತರ ಪೌಷ್ಠಿಕ ಆಹಾರಗಳನ್ನು ಪ್ರತಿಯೊಬ್ಬರೂ ಸೇವಿಸುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
   ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿಯಾದ ಡಾ. ನಾರಾಯಣಸ್ವಾಮಿ ಅವರು ಮಾತನಾಡಿ, ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನವನ್ನು ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 23 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವು 14 ದಿನಗಳ ಕಾಲ ನಡೆಯಲಿದ್ದು ಆಶಾಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ತಪಾಸಣೆ ಮಾಡಲಿದ್ದಾರೆ. ಇದರ ಉದ್ದೇಶ  ಸಾರ್ವಜನಿಕರು ಕುಷ್ಟರೋಗವನ್ನು ತಪಾಸಣೆ ಮಾಡಿಸಿಕೊಳ್ಳಲು ಮುಂದೆ ಬರದೇ ಗೌಪ್ಯವಾಗಿಡುತ್ತಿರುವುದರಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
    ಕುಷ್ಟರೋಗದ ಲಕ್ಷಣಗಳು ತಿಳಿ-ಬಿಳಿ ತಾಮ್ರ ವರ್ಣದ ಮಚ್ಚೆಗಳು, ಸ್ಪರ್ಶ ಜಾÐನ ಇಲ್ಲದಿರುವುದು, ನರಗಳ ಊತ, ಮಚ್ಚೆಗಳ ಮೇಲೆ ಕೂದಲು ಇಲ್ಲದಿರುವುದು, ಮಾಂಸ ಖಂಡಗಳ ನಿಷ್ಕ್ರಿಯತೆ, ಮೂಗು ಚಪ್ಪಟೆಯಾಗುವುದು, ಕಣ್ಣು ಮುಚ್ಚಲು ಆಗದಿರುವುದು, ಇನ್ನಿತರ ಅಂಶಗಳು ಕಂಡುಬಂದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
   ಜಿಲ್ಲೆಯಲ್ಲಿ 16,26,292 ಜನರಿದ್ದು, 3,49,481 ಮನೆಗಳಿವೆ. ಹಾಗಾಗಿ 1261 ತಂಡಗಳನ್ನು ನೇಮಿಸಿದು,್ದ ಆ ತಂಡಗಳಲ್ಲಿ 2522 ಮಂದಿ ಆಶಾಕಾರ್ಯಕರ್ತೆಯರಿದ್ದಾರೆ. 255 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ ದಿನ 20 ಮನೆಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಎಲ್ಲರೂ ಸಹಕರಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದ ಅವರು ಜಿಲ್ಲೆಯಲ್ಲಿ ಈ ವರ್ಷ 16 ಪ್ರಕರಣಗಳು ಪತ್ತೆಯಾಗಿದ್ದು, ಇವರಿಗೆ  ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
      ರಾಜ್ಯಮಟ್ಟದ ಕುಷ್ಠರೋಗ ನಿಯಂತ್ರಣಾಧಿಕಾರಿಯಾದ ಡಾ. ರೇಖಾ ಅವರು ಮಾತನಾಡಿ, ಸರ್ಕಾರವು 2025 ರೊಳಗೆ ಭಾರತವನ್ನು ಕುಷ್ಟರೋಗ ಮುಕ್ತ ದೇಶವನ್ನಾಗಿ ಮಾಡಲು ಪಣತೊಡಲಾಗಿದೆ. ತಪಾಸಣೆಯ ಸಮಯದಲ್ಲಿ ಕುಷ್ಠರೋಗ ಪ್ರಕರಣಗಳು ಪತ್ತೆಯಾದರೆ ಚಿಕಿತ್ಸೆ ನೀಡಲಾಗುವುದು. ಹಾಗಾಗಿ ಕುಷ್ಠರೋಗ ನಿರ್ಮೂಲನಾ ಆಂದೋಲನವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು. 
   ಇದೇ ಸಂದರ್ಭದಲ್ಲಿ ಪೌಷ್ಠಿಕ ಆಹಾರದ ಬಗ್ಗೆ ಸಾರ್ವಜನಿಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಡಾ.ಪ್ರೇಮ ಅವರು ಅರಿವು ಮೂಡಿಸಿದರು. 
     ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಯಾದ ಡಾ.ವಿಜಯ್‍ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿಯಾದ ಡಾ.ವಸಂತ್, ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಯಾದ ಶಾಂತಮ್ಮ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ರಮ್ಯದೀಪಿಕಾ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಂ ಟಿ ಬಿ ಶ್ರೀನಿವಾಸ್,  ಆರೋಗ್ಯ ಶಿಕ್ಷಣಾಧಿಕಾರಿಯಾದ ಪ್ರಸನ್ನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಡಾ.ಗೀತಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೈಲಾರಾಜ್, ಆಶಾಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಶ್ರೀನಿವಾಸಪುರ ಪುರಸಭೆ ವತಿಯಿಂದ ಗುರುವಾರ ಜಲ ಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ ಪುರಸಭೆ ವತಿಯಿಂದ ಗುರುವಾರ ಜಲ ಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶ್ರೀನಿವಾಸಪುರ: ನಾಗರಿಕರು ಮಳೆ ನೀರು ಕೊಯಿಲು ಮಾಡಲು ಮುಂದಾಗಬೇಕು. ಜಲಮೂಲಗಳು ಮಾಲೀನ್ಯಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್ ಹೇಳಿದರು.
  ಪಟ್ಟಣದಲ್ಲಿ ಪುರಸಭೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಜಲ ಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂತರ್ಜಲ ವಿಷವಾಗಿ ಮಾರ್ಪಟ್ಟಿದೆ. ನೀರನ್ನು ಶುದ್ಧೀಕರಿಸಿ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಮಳೆ ನೀರು ಶುದ್ಧ ನೀರಾಗಿದ್ದು, ವೈಜ್ಞಾನಿಕವಾಗಿ ಸಂಗ್ರಹಿಸಿದಲ್ಲಿ ಕುಡಿಯಲು ಯೋಗ್ಯವಾಗಿರುತ್ತದೆ ಎಂದು ಹೇಳಿದರು.
  ಅಮೂಲ್ಯವಾದ ನೀರನ್ನು ಪೋಲು ಮಾಡಬಾರದು. ಮಳೆಗಾಲದಲ್ಲಿ ಮನೆ ಪರಿಸರದಲ್ಲಿ ನಿಲ್ಲುವ ನೀರು ಕೆಟ್ಟು ರೋಗ ರುಚಿನ ಹರಡದಂತೆ ನೊಡಿಕೊಳ್ಳಬೇಕು. ಪಟ್ಟಣದ ಸ್ವಚ್ಛತೆ ವಿಷಯದಲ್ಲಿ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
  ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್‌, ಪೃಥ್ವಿರಾಜ್‌, ಸಿಎಒ ಕೆ.ಎನ್‌.ರಾಜೇಶ್ವರಿ, ಇ ಇ ಶೇಖರ್‌ ರೆಡ್ಡಿ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.