HOLY ROSARY CHURCH, KUNDAPUR – 450 th JUBILEE SOUVENIR 2021

ಕೆ.ಎಸ್.ಪಿ ಕ್ಲಿಯರ್ ಪಾಸ್ ಕೋವಿಡ್-19 ಪಾಸ್ ಪ್ರಶ್ನೋತ್ತರಗಳು ಯಾರಿಗೆ ಪಾಸ್ ಅಗತ್ಯವಿಲ್ಲ?

JANANUDI.COM NETWORK

ಕೆ.ಎಸ್.ಪಿ ಕ್ಲಿಯರ್ ಪಾಸ್
ಕೋವಿಡ್-19 ಪಾಸ್ ಪ್ರಶ್ನೋತ್ತರಗಳು
ಯಾರಿಗೆ ಪಾಸ್ ಅಗತ್ಯವಿಲ್ಲ?

 

 

ಅಗತ್ಯ ಕರ್ತವ್ಯದಲ್ಲಿರುವ ಸರ್ಕಾರಿ ಸಿಬ್ಬಂದಿ/ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣಿಸಲು ಅವರಿಗೆ ಅನುಮತಿ ಇದೆ. ಆದರೆ ಅವರು ತಮ್ಮ ಇಲಾಖೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು.

ವೈದ್ಯಕೀಯ ವೃತ್ತಿಪರರು ಮತ್ತು ಖಾಸಗಿ ಭದ್ರತಾ ಸಿಬ್ಬಂದಿಗಳು, ತಮ್ಮ ಸಮವಸ್ತ್ರದಲಿ ್ಲ ಪ್ರಯಾಣಿಸಬೇಕು.

ಮಾಧ್ಯಮ ಸಿಬ್ಬಂದಿ (ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ) ತಮ್ಮ ಮಾನ್ಯತೆ ಕಾರ್ಡ್ ಅಥವಾ ಸಂಬಂಧಪಟ್ಟ ಮಾಧ್ಯಮ ಕಂಪನಿ ನೀಡಿದ ಗುರುತಿನ ಚೀಟಿಯನ್ನು ಹೊಂದಿರಬೇಕು.

“ಜಿ” ನೋಂದಣಿ ಸಂಖ್ಯೆಗಳನ್ನು ಹೊಂದಿರುವ ಸರ್ಕಾರಿ ವಾಹನಗಳು.

ಅಗತ್ಯ ಕರ್ತವ್ಯದಲ್ಲಿರುವ ಬ್ಯಾಂಕ್ ನೌಕರರು. ತಮ್ಮ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣಿಸಲು ಅನುಮತಿ ಇದೆ. ಆದರೆ ಅವರು ತಮ್ಮ ಸಂಸ್ಥೆಯಲಿ ್ಲ ನೀಡಿದ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.

ಕೆ.ಎಸ್.ಪಿ ಕ್ಲಿಯರ್ ಪಾಸ್ ಕೋವಿಡ್-19 ಪಾಸ್ ಪ್ರಶ್ನೋತ್ತರಗಳು ಯಾರಿಗೆ ಪಾಸ್ ಬೇಕು?

ಅಗತ್ಯ ಸರಕುಗಳು ಮತ್ತು ಸೇವೆಗಳ ಸರಬರಾಜಿನಲಿ ್ಲ ತೊಡಗಿರುವ ಖಾಸಗಿ ವ್ಯಕ್ತಿಗಳು ಲಾಕ್‍ಡೌನ್ ಸಮಯದಲಿ ್ಲ ಮುಕ್ತವಾಗಿ ಪ್ರಯಾಣಿಸಲು ಪಾಸ್ ಅಗತ್ಯವಿರುತ್ತದೆ ಮತ್ತು ಸರಬರಾಜು ಸರಪಳಿ ನಿರ್ವಹಣೆಗೆ ಸಂಬಂಧಿಸಿದ ಕೆಲಸಕ್ಕೆ ಮಾತ್ರ ಹಾಜರಾಗುವುದು.

ಪಾಸ್‍ಗೆ ಅರ್ಹವಾದ ವಿಭಾಗಗಳು ಈ ಕೆಳಕಂಡಂತಿದೆ:

ಪಡಿತರ ಅಂಗಡಿಗಳು (ಪಿಡಿಎಸ್ ಅಡಿಯಲಿ ್ಲ) ಸೇರಿದಂತೆ ಅಂಗಡಿಗಳು, ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‍ಗಳು, ಮಾಂಸ ಮತ್ತು ಮೀನು ಅಂಗಡಿಗಳು, ಪ್ರಾಣಿಗಳಿಗೆ ಮೇವು ನೀಡುವವರು

ವಿಮಾ ಕಛೇರಿಗಳು ದೂರಸಂಪರ್ಕ, ಅಂತರ್ಜಾಲ ಸೇವೆಗಳು, ದೂರದರ್ಶನ ಪ್ರಸಾರ ಮತ್ತು ಕೇಬಲ್ ಸೇವೆಗಳು, ಮಾಹಿತಿ ತಂತ್ರಜ್ಞಾನ ಕಂಪನಿಗಳು (ಅಗತ್ಯ ಸೇವೆಗಳಿಗೆ)

ಆಹಾರ ಪದಾರ್ಥಗಳು, ಔಷಧಿಗಳು, ವೈಧ್ಯಕೀಯ ಉಪಕರಣಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಇ-ಕಾಮರ್ಸ್ ವೆಬ್‍ಸೈಟ್ ಮೂಲಕ ವಿತರಿಸುವವರು

ಪೆಟ್ರೋಲ್ ಪಂಪ್‍ಗಳು, ಎಲ್‍ಪಿಜಿ ಮತ್ತು ಅನಿಲ ಚಿಲ್ಲರೆ ಮತ್ತು ಶೇಖರಣಾ ಮಳಿಗೆಗಳು

ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ಘಟಕಗಳು ಮತ್ತು ಸೇವೆಗಳು ಸೆಕ್ಯುರಿಟಿ ಮತ್ತು ಎಕ್ಸ್‍ಚೇಂಚ್ ಬೋರ್ಡ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳು

ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳು

ಬೇಕರಿ, ಬಿಸ್ಕತ್ತು, ಕಾಂಡಿಮೆಂಟ್ಸ್ ಮತ್ತು ಸಿಹಿ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು
ಆಸ್ಪತ್ರೆಗೆ ಹೋಗಲು ನನಗೆ ಪಾಸ್ ಅಗತ್ಯವಿದೆಯೇ? ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಕುಟುಂಬ ಸದಸ್ಯರ ನಿಧನದ ಕಾರಣ ಬೆಂಗಳೂರು ವ್ಯಾಪ್ತಿಯಲಿ ್ಲ ಪ್ರಯಾಣಿಸಬೇಕಾದವರಿಗೆ ನೀಡಲು ಎಲ್ಲಾ ಪೊಲೀಸ್ ಠಾಣೆಗಳಲಿ ್ಲ ತುರ್ತು ಪಾಸ್ ಲಭ್ಯವಿದೆ. ಈ ಪಾಸ್‍ಗಳು ಬೆಂಗಳೂರು ವ್ಯಾಪ್ತಿಗೆ ಮಾತ್ರ ಬಳಕೆಗೆ ಬರುತ್ತದೆ ಮತ್ತು ಇದು ಕೇವಲ 12 ಗಂಟೆಗಳ ಅವಧಿಗೆ ಮಾತ್ರ ಮಾನ್ಯತೆ ಹೊಂದಿರುತ್ತದೆ. ಪಾಸ್ ನೀಡಿದ 12 ಗಂಟೆಗಳೊಳಗೆ ಪೊಲೀಸ್ ಠಾಣೆಗೆ ಹಿಂತಿರುಗಿಸಬೇಕು.

ಅರ್ಜಿದಾರರು ತುರ್ತು ಪಾಸ್ ಪಡೆಯಲು ವೈಧ್ಯಕೀಯ ತುರ್ತುಸ್ಥಿತಿಗೆ ಬೆಂಗಳೂರು ನಗರದ ವ್ಯಾಪಿ ಮೀರಿ ಪ್ರಯಾಣದ ಅಗತ್ಯವಿದ್ದರೆ ಸ್ಥಳೀಯ ಡಿ.ಸಿ.ಪಿ.ಯವರ ಕಛೇರಿಗೆ ತುರ್ತು ಪರಿಸ್ಥಿತಿಯ ವಿವರಿಸುವ ಲಿಖಿತ ಅರ್ಜಿಯನ್ನು ದಾಖಲೆಗಳೊಂದಿಗೆ ನೀಡಬೇಕು. ಪಾಸ್‍ನ ಅವಶ್ಯಕತೆಯು ನಿಜವೆಂದು ಕಂಡುಬಂದಲಿ ್ಲ, ಅವರ ಅಂತರ-ಜಿಲ್ಲಾ ಪ್ರಯಾಣಕ್ಕೆ ಅನುಕೂಲವಾಗುವಂತೆ ಪತ್ರವನ್ನು ನೀಡಲಾಗುವುದು. ಆದಾಗ್ಯೂ ಈ ಪತ್ರವು ಇತರ ಕಾರ್ಯ ವ್ಯಾಪ್ತಿಯ ಪೋಲೀಸರ ಸಹಕಾರವನ್ನು ಖಾತರಿಪಡಿಸುವುದಿಲ್ಲ ಮತ್ತು ಅವರ ವಿವೇಚನೆಗೆ ಒಳಪಟ್ಟಿರುತ್ತದೆ.

ಅಂತರ-ಜಿಲ್ಲೆಗೆ ಪ್ರಯಾಣಿಸಲು ನನಗೆ ಪಾಸ್ ಅಗತ್ಯವಿದೆಯೇ? ವೈದ್ಯಕೀಯ ತುರ್ತುಸ್ಥಿತಿಗೆ ಬೆಂಗಳೂರು ನಗರದ ಹೊರವಲಯಕ್ಕೆ ಸಂಚರಿಸುವ ಅಗತ್ಯವಿದ್ದರೆ ಸ್ಥಳೀಯ ಡಿ.ಸಿ.ಪಿ. ಕಛೇರಿಗೆ ತುರ್ತುಸ್ಥಿತಿಯ ಸ್ವರೂಪವನ್ನು ವಿವರಿಸುವ ದಾಖಲೆಗಳೊಂದಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಬಹುದು. ಪಾಸ್‍ನ ಅಗತ್ಯವು ನಿಜವಾದದ್ದು ಕಂಡುಬಂದಲಿ ್ಲ, ಅರ್ಜಿದಾರರಿಗೆ ಅವರ ಅಂತರಜಿಲ್ಲಾ ಪ್ರಯಾಣಕ್ಕೆ ಅನುಕೂಲವಾಗುವಂತೆ ಪತ್ರವನ್ನು ನೀಡಲಾಗುವುದು. ಆದಾಗ್ಯೂ ಈ ಪತ್ರವು ಇತರ ಕಾರ್ಯವ್ಯಾಪ್ತಿಯ ಪೋಲೀಸರ ಸಹಕಾರವನ್ನು ಖಾತರಿಪಡಿಸುವುದಿಲ್ಲ ಮತ್ತು ಅವರ ವಿವೇಚನೆಗೆ ಒಳಪಟ್ಟಿರುತ್ತದೆ.

ಔಷಧಿಗಳನ್ನು ಖರೀದಿಸಲು ನನಗೆ ಪಾಸ್ ಅಗತ್ಯವಿದೆಯೇ? ಔಷಧಾಲಯಗಳು ಮತ್ತು ವೈದ್ಯಕೀಯ ಸರಬರಾಜು ಮಳಿಗೆಗಳು ಲಾಕ್‍ಡೌನ್ ಸಮಯದಲಿ ್ಲ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಆದ್ದರಿಂದ ಮನೆಯ ಒಬ್ಬರು ನೆರೆಹೊರೆಯ ಅಂಗಡಿಯಿಂದ ಅಗತ್ಯವಾದ ಔಷಧಿಗಳನ್ನು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಮುಖ್ಯ ರಸ್ತೆಗಳನ್ನು ಮಾತ್ರ ಪೋಲೀಸರು ಸಂಚಾರಕ್ಕಾಗಿ ನಿರ್ಭಂದಿಸಿದ್ದಾರೆ ಮತ್ತು ಸಣ್ಣ ಪುಟ್ಟ ಆಂತರಿಕ ರಸ್ತೆಗಳನ್ನು ನಿರ್ಬಂಧಿಸಲಾಗಿಲ್ಲವಾದ್ದರಿಂದ ಇದಕ್ಕೆ ಪಾಸ್ ಅಗತ್ಯವಿಲ್ಲ.

ದಿನಸಿ ವಸ್ತುಗಳನ್ನು ಖರೀದಿಸಲು ನನಗೆ ಪಾಸ್ ಬೇಕೇ?
ಎಲ್ಲಾ ದಿನಸಿ ಅಂಗಡಿಗಳಿಗೆ ಲಾಕ್‍ಡೌನ್ ಸಮಯದಲಿ ಕಾರ್ಯನಿರ್ವಹಿಸಲು ಅನುಮತಿ ಇದೆ. ಆದ್ದರಿಂದ ನೆರೆಹೊರೆಯ ದಿನಸಿ ಅಂಗಡಿಯಿಂದ ಅಗತ್ಯವಾದ ದಿನಸಿ ವಸ್ತುಗಳನ್ನು ಖರೀದಿಸಲು ಒಬ್ಬರಿಗೆ ಸಾಧ್ಯವಾಗುತ್ತದೆ. ಅದು ನಡೆದು ಹೋಗುವ ಅಂತರದಲ್ಲಿದ್ದರೆ ಸಾರ್ವಜನಿಕ ಸದಸ್ಯರು ಅಗತ್ಯವಾದ ನೆರೆಹೊರೆಯ ದಿನಸಿ ಸಾಮಗ್ರಿಗಳನ್ನು ಅಂತಹ ನೆರೆಹೊರೆಯ ಅಂಗಡಿಗಳಿಂದ ಖರೀದಿಸಬಹುದಾಗಿದೆ ಎಂದು ನಿರೀಕ್ಷಸಲಾಗಿದೆ. ಮುಖ್ಯ ರಸ್ತೆಗಳನ್ನು ಮಾತ್ರ ಪೋಲೀಸರು ಸಂಚಾರಕ್ಕಾಗಿ ನಿರ್ಭಂದಿಸಿದ್ದಾರೆ ಮತ್ತು ಸಣ್ಣ ಪುಟ್ಟ ಆಂತರಿಕ ರಸ್ತೆಗಳನ್ನು ನಿರ್ಬಂಧಿಸಲಾಗಿಲ್ಲವಾದ್ದರಿಂದ ಇದಕ್ಕೆ ಪಾಸ್ ಅಗತ್ಯವಿಲ್ಲ.

ಬೆಳಿಗ್ಗೆ ವಾಕ್ ಮತ್ತು ಜಾಗ್ ಮಾಡಲು ನನಗೆ ಪಾಸ್ ಅಗತ್ಯವಿದೆಯೇ? ಲಾಕ್‍ಡೌನ್ ಸಮಯದಲ್ಲಿ ಎಲ್ಲಾ ಅನಿವಾರ್ಯ ಪ್ರಯಾಣವನ್ನು ನಿಷೇಧಿಸಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಬೆಳಿಗ್ಗೆ ವಾಕ್ ಮತ್ತು ಜಾಗ್ ಮಾಡಬಾರದು. ಎಲ್ಲರೂ ಈ ಲಾಕ್‍ಡೌನ್ ಅವಧಿಯಲ್ಲಿ ದಯವಿಟ್ಟು ನಿಮ್ಮ ಮನೆಯಲ್ಲಿಯೇ ದೈಹಿಕ ವ್ಯಾಯಾಮ ಮಾಡುವುದು.

ಬ್ಯಾಂಕಿಗೆ ಹೋಗಲು ನನಗೆ ಪಾಸ್ ಬೇಕೇ?
ಎ.ಟಿ.ಎಂ. ಗಳು ಎಂದಿನಂತೆ ತೆರೆದಿರುತ್ತದೆ ಆದ್ದರಿಂದ ನಡಿಗೆಯಲಿ ್ಲ ತೆರಳಿ ಸೌಲಭ್ಯ ಪಡೆಯಬಹುದು. ನಿಯಮಿತ ಬ್ಯಾಂಕ್ ವಹಿವಾಟಿಗೆ ಆನ್‍ಲೈನ್ ಬ್ಯಾಂಕ್ ಸೇವೆಗಳು ಲಭ್ಯವಿದೆ. ಆನ್‍ಲೈನ್ ಪಾವತಿ ವಿಧಾನಗಳನ್ನು ಸಹ ಬಳಸಿಕೊಳ್ಳಬಹುದು. ಆದಾಗ್ಯೂ ಎಲ್ಲಾ ಬ್ಯಾಂಕ್‍ಗಳಲ್ಲಿ ಎ.ಟಿ.ಎಂ. ಸೇವೆಗಳು ಮತ್ತು ಕ್ಯಾಷಿಯರ್ ಡೆಸ್ಕ್‍ಗಳು ಕಾರ್ಯನಿರ್ವಹಿಸಲಿದೆ.

ನನ್ನ ವಯಸ್ಸಾದ ಪೋಷಕರನ್ನು ಭೇಟಿ ಮಾಡಲು ನಾನು ಹೋಗಬಹುದೇ? ಲಾಕ್‍ಡೌನ್ ಸಮಯದಲ್ಲಿ ಎಲ್ಲಾ ಅನಿವಾರ್ಯ ಪ್ರಯಾಣವನ್ನು ನಿಷೇಧಿಸಲಾಗಿದೆ. ವಯಸ್ಸಾದ ಪೋಷಕರಿಗೆ ಕೆಲವು ಅಗತ್ಯ ಸಾಮಗ್ರಿಗಳು ಅಗತ್ಯವಿದ್ದರೆ, ಅದನ್ನು ಆನ್‍ಲೈನ್ ಮುಖಾಂತರ ಹೋಮ್ ಡೆಲಿವೆರಿ ಪಡೆದುಕೊಳ್ಳಬಹುದು. ಆನ್‍ಲೈನ್ ವಿತರಣೆ ಸಾಧ್ಯವಾಗದಿದ್ದರೆ ಒಬ್ಬರು ಹಿರಿಯ ಸಹಾಯವಾಣಿ (1090, 080-22943226, 9243737220, 9243737230) ಗೆ ಸಂಪರ್ಕಿಸಬಹುದು. ಅಗತ್ಯವಿರುವ ಹಿರಿಯ ನಾಗರೀಕರಿಗೆ ಸ್ಥಳೀಯ ಆಡಳಿತದ ಮೂಲಕ ಅಗತ್ಯ ಸಹಾಯ ವ್ಯವಸ್ಥೆ ಮಾಡಲಾಗುವುದು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಅಗತ್ಯವಿದ್ದರೆ, ಒಬ್ಬರು ಸಹಾಯಕ್ಕಾಗಿ 100 ಅನ್ನು ಡಯಲ್ ಮಾಡಬಹುದು. ಅಗತ್ಯವಿದ್ದರೆ ಸ್ಥಳೀಯ ಪೊಲೀಸರು ಸಹ ಹಿರಿಯ ನಾಗರೀಕರ ನೆರವಿಗೆ ಬರುತ್ತಾರೆ.

ಸಾಕುಪ್ರಾಣಿಗಳಿಗೆ ಆಹಾರವನ್ನು ಖರೀದಿಸಲು ನಾನು ಅಂಗಡಿಗೆ ಹೋಗಬಹುದೇ? ಸಾಕುಪ್ರಾಣಿಗಳ ಆಹಾರವನ್ನು ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್‍ಗಳನ್ನು ಬಳಸಬಹುದು, ಅದರಲಿ ್ಲ ಮನೆ ಬಾಗಿಲಿಗೆ ಸಾಕುಪ್ರಾಣಿಗಳಿಗೆ ಬೇಕಾಗುವ ಅವಶ್ಯಕ ವಸ್ತುಗಳು ತಲುಪಿಸಲಾಗುತ್ತದೆ.

ನನ್ನ ದಿನಸಿ ಅಂಗಡಿಯನ್ನು ನಡೆಸಲು ನನಗೆ ಪಾಸ್ ಅಗತ್ಯವಿದೆಯೇ? ದಿನಸಿ ಅಂಗಡಿಯನ್ನು ತೆರೆಯಲು ಯಾವುದೇ ಪಾಸ್ ಅಥವಾ ಪರವಾನಗಿ ಅಗತ್ಯವಿಲ್ಲ ಏಕೆಂದರೆ ದಿನಸಿ ಸಾಮಗ್ರಿಗಳು ಸಾಮಾನ್ಯ ಜನರಿಗೆ ಅಗತ್ಯವಾದ ವಸ್ತುಗಳಾಗಿವೆ. ಆದಾಗ್ಯೂ ಅಂಗಡಿಯಲಿ ್ಲ ಕೆಲಸ ಮಾಡುವ ಸಿಬ್ಬಂದಿಗೆ ಸಂಬಂಧಪಟ್ಟ ಅಂಗಡಿಗೆ ದೂರದಿಂದ ಪ್ರಯಾಣಿಸಬೇಕಾದರೆ ಮತ್ತು ಸಿಬ್ಬಂದಿ ಸರಕುಗಳ ಸಾಗಣೆಗೆ ಅಗತ್ಯವಿರುವ ವಾಹನಗಳಿಗೆ ಪಾಸ್‍ಗಳು ಬೇಕಾಗುವುದು ಅಂತಹ ಸಂದರ್ಭದಲಿ ್ಲ ದಿನಸಿ ಅಂಗಡಿ ಮಾಲೀಕರು ನೀಡಿರುವ ವೆಬ್‍ಸೈಟ್ hಣಣಠಿs://ಞsಠಿಛಿಟeಚಿಡಿಠಿಚಿss.mಥಿgಚಿಣe.ಛಿom/sigಟಿuಠಿ ನಲಿ ್ಲ ಪಾಸ್ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಪಾಸ್ ಪಡೆಯುವುದು ಹೇಗೆ? ಅಗತ್ಯ ಸರಕುಗಳು ಮತ್ತು ಸೇವೆಗಳ ಸರಬರಾಜಿನಲಿ ್ಲ ತೊಡಗಿರುವ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗೆ ಅಗತ್ಯವಾದ ಸಿಬ್ಬಂದಿಗೆ ವ್ಯಕ್ತಿ ಪಾಸ್‍ಗಳನ್ನು hಣಣಠಿs://ಞsಠಿಛಿಟeಚಿಡಿಠಿಚಿss.mಥಿgಚಿಣe.ಛಿom/sigಟಿuಠಿ ನಲಿ ್ಲ ನೊಂದಾಯಿಸಿ ಮತ್ತು ಕೆಎಸ್‍ಪಿ ಕ್ಲಿಯರ್ ಪಾಸ್‍ಗೆ ಅರ್ಜಿ ಸಲ್ಲಿಸುವ ಮೂಲಕ ಪಡೆಯಬಹುದು.

ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವಾಹನಗಳಿಗೆ ನಾನು ಪಾಸ್ ಹೇಗೆ ಪಡೆಯುವುದು? ಲಾಕ್‍ಡೌನ್ ಸಮಯದಲಿ ್ಲ ಯಾವುದೇ ಖಾಸಗಿ ವಾಹನವನ್ನು ಓಡಿಸಲು ಅನುಮತಿ ಇಲ್ಲ. ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯಲಿ ್ಲ ತೊಡಗಿರುವ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳಿಗೆ ಕಾರ್ಯನಿರ್ವಹಿಸಲು ಅಗತ್ಯವಿರುವ ವಾಹನಗಳಿಗೆ ವಾಹನ ಪಾಸ್‍ಗಳನ್ನು ನೊಂದಾಯಿಸಿಕೊಳ್ಳಬಹುದು ಮತ್ತು ಕೆಎಸ್‍ಪಿ ಕ್ಲಿಯರ್ ಪಾಸ್‍ಗಳಿಗೆ ಅರ್ಜಿ ಸಲ್ಲಿಸಬಹುದು. hಣಣಠಿs://ಞsಠಿಛಿಟeಚಿಡಿಠಿಚಿss.mಥಿgಚಿಣe.ಛಿom/sigಟಿuಠಿ

ಪಾಸ್‍ನ ಸಿಂಧುತ್ವ ಏನು? ಪಾಸ್‍ನ ಅವಧಿ ಅರ್ಜಿದಾರರು ಬಯಸಿದ ಅವದಿü ಮತ್ತು ಪಾಸ್ ನೀಡುವ ಪ್ರಾಧಿಕಾರವು ನೀಡಿದ ಅವಧಿಯನ್ನು ಅವಲಂಬಿಸಿರುತ್ತದೆ.

ಪಾರ್ಸ್ ಹಾರ್ಡ್ ಕಾಪಿ ಅಥವಾ ಸಾಫ್ಟ್ ಕಾಪಿ ಒಯ್ಯುವ ಅಗತ್ಯವಿದೆಯೇ? ಡಿಜಿಟಲ್ ವೆಬ್‍ಸೈಟ್ ಪಾಸ್‍ನ್ನು ಅಗತ್ಯವಿದ್ದರೆ ಮುದ್ರಿಸಿಕೊಂಡು ತೋರಿಸಬಹುದು.

ಆನ್ ಲೆೈನ್ ಕೆ.ಎಸ್.ಪಿ. ಕ್ಲಿಯರ್ ಪಾಸ್ ಗೆ ಸುಂಬುಂದಿಸಿದ ಯಾವುದೆೇ ಪ್ರಶ್ೆೆಗಳಿಗೆ ದಯವಿಟ್ುು ಕೆಳಗಿನ ಸಹಾಯವಾಣಿ ಸುಂಖ್ೆೆಗಳನುೆ ಸುಂಪ್ಕ್ಲಿಸಿ: 080-22942200 080-22942325 080-22942330

 

ಇನ್ನೆರೆಡು ದಿನ ಮಳೆಯಾಗುವ ಸಾಧ್ಯತೆ ಹವಾಮಾನ ಇಲಾಖೆ: ಮಳೆ ಕಾರಣ ಕೊರೊನಾ ಭೀತಿ ಹೆಚ್ಚಾಗಿದೆ

JANANUDI.COM NETWORK

 

ಇನ್ನೆರೆಡು ದಿನ ಮಳೆಯಾಗುವ ಸಾಧ್ಯತೆ ಹವಾಮಾನ ಇಲಾಖೆ: ಮಳೆ ಕಾರಣ ಕೊರೊನಾ ಭೀತಿ ಹೆಚ್ಚಾಗಿದೆ

 

 

ಕುಂದಾಪುರ:: ಎ.8:  ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಭಾಗದಲ್ಲಿ ಇನ್ನೆರೆಡು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆಯೆಂದು ಹವನಾನ ಇಲಾಖೆ ಮಾಹಿತಿ ನೀಡಿದೆ.

ಮಂಗಳವಾರ ರಾಜ್ಯದ ಹಲವೆಡೆ, ಕರಾವಳಿ ಸಮೇತ  ಗುಡುಗು ಸಹಿತ ಮಳೆಯಾಗಿದೆ. ಬುಧವಾರ ಮತ್ತು ಗುರುವಾರ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಇದ್ದು ಎಲ್ಲೊ ಅಲರ್ಟ್ ಘೋಷಿಸಲಾಗಿದೆಯೆಂದು ಹವಾಮಾನ ಇಲಾಖೆಯ ಮಾಹಿತಿ ನೀಡಿದೆ

ಮಳೆಯ ಕಾರಣದಿಂದ  ಕೊರೊನಾ ಮಹಾಮಾರಿ ಹೆಚ್ಚಾಗುವ ಭೀತಿ ಕಾಡಲಾಗಿದೆ.. ತಂಪಾದ ವಾತಾವರಣದಲ್ಲಿ ಕೊರೊನಾ ವೈರಸ್ ಬೇಗ ಹರಡುತ್ತಿರುವುದರಿಂದ. ಮನೆಯಿಂದ ಹೊರ  ಬಾರದೆ, ಮನೆಯಲ್ಲೇ ಉಳಿಯಿರು ಎನ್ನುವ ಸಲಹೆಯನ್ನು ನೀಡಲಾಗಿದೆ. 

ಶ್ರೀನಿವಾಸಪುರ: ವರ್ತಕರು ಕೊರೊನಾ ಸಂಕಷ್ಟದ ಸಮಯದಲ್ಲಿ ವಸ್ತುಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು: ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ವರ್ತಕರು ಕೊರೊನಾ ಸಂಕಷ್ಟದ ಸಮಯದಲ್ಲಿ ವಸ್ತುಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು: ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌
ಶ್ರೀನಿವಾಸಪುರ: ವರ್ತಕರು ಕೊರೊನಾ ಸಂಕಷ್ಟದ ಸಮಯದಲ್ಲಿ ವಸ್ತುಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.  ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ವರ್ತಕರ ಸಭೆಯಲ್ಲಿ ಮಾತನಾಡಿ, ಕೊರೊನಾ ಸಮಾಜದ ಎಲ್ಲ ವರ್ಗದ ಜನರಿಗೂ ಸಂಕಷ್ಟ ತಂದಿದೆ. ಅದರಲ್ಲೂ ಬಡವರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ವೈರಾಣು ಹರಡದಂತೆ ನೋಡಿಕೊಳ್ಳಬೇಕು. ಜನರು ಲಾಕ್‌ ಡೌನ್‌ ಕಡ್ಡಾಯವಾಗಿ ಪಾಲಿಸಬೇಕು. ಮನೆಯಿಂದ ಹೊರಗೆ ಬರಬಾರದು ಎಂದು ಹೇಳಿದರು.
  ಪಟ್ಟಣದಲ್ಲಿ ಪ್ರತಿ ದಿನ ಬೆಳಿಗ್ಗೆ 7 ರಿಂದ 10 ವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಈ ಅವಧಿಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಪಾಲಿಸಬೇಕು. ವರ್ತಕರು ಈ ಬಗ್ಗೆ ಗ್ರಾಹಕರಿಗೆ ತಿಳಿಹೇಳಬೇಕು. ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ನೀರಿನ ಸಮಸ್ಯೆ ಇದರು ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಹೇಳಿದರು.
  
  ಆರ್ಯ ವೈಶ್ಯ ಸಂಘಟನೆಯ ಮುಖ್ಯಸ್ಥ ವೈ.ಆರ್‌.ಶಿವಪ್ರಕಾಶ್‌ ಮಾತನಾಡಿ, ಗ್ರಾಹಕರು ವರ್ತಕರೊಂದಿಗೆ ಸಹಕರಿಸಬೇಕು. ಪದಾರ್ಥಗಳನ್ನು ಖರೀದಿಸುವಾಗ ಗುಂಪುಗೂಡದೆ, ಸಾಮಾಜಿಕ ಅಂತರ ಪಾಲಿಸಬೇಕು. ನಿಯಮಾನುಸಾರ ವ್ಯಾಪಾರ ವಹಿವಾಟು ನಡೆಸಲಾಗುವುದು ಎಂದು ಹೇಳಿದರು.
  ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್, ಸರ್ಕಲ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಘವೇಂದ್ರ ಪ್ರಕಾಶ್‌, ಸಬ್‌ ಇನ್ಸ್‌ಪೆಕ್ಟರ್‌ಗಳಾದ ವಿಠ್ಠಲ್‌ ತಳವಾರ್‌, ವರಲಕ್ಷ್ಮಿ , ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಕೆ.ವಿ.ಸೂರ್ಯನಾರಾಯಣಶೆಟ್ಟಿ, ಕಾರ್ಯದರ್ಶಿ ಆದೆಪ್ಪಶೆಟ್ಟಿ ಇದ್ದರು.

ಶ್ರೀನಿವಾಸಪುರ: ರೋಜೇನಹಳ್ಳಿ ಕ್ರಾಸ್‌ ಸಮೀಪ ಶನಿವಾರ ರಾತ್ರಿ ಬಾರೊಂದರ ಬಾಗಿಲನ್ನು ಮುರಿದು ಸುಮಾರು ರೂ.1 ಲಕ್ಷ ಮೌಲ್ಯದ ಮದ್ಯದ ಬಾಟಲ್‌ಗಳ ಕಳವು.  

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ರೋಜೇನಹಳ್ಳಿ ಕ್ರಾಸ್‌ ಸಮೀಪ ಶನಿವಾರ ರಾತ್ರಿ ಬಾರೊಂದರ ಬಾಗಿಲನ್ನು ಮುರಿದು ಸುಮಾರು ರೂ.1 ಲಕ್ಷ ಮೌಲ್ಯದ ಮದ್ಯದ ಬಾಟಲ್‌ಗಳ ಕಳವು.  
ಶ್ರೀನಿವಾಸಪುರ: ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್‌ ಸಮೀಪ ಶನಿವಾರ ರಾತ್ರಿ ಬಾರೊಂದರ ಬಾಗಿಲನ್ನು ಮೆಂಡಿ ಸುಮಾರು ರೂ.1 ಲಕ್ಷ ಮೌಲ್ಯದ ಮದ್ಯದ ಬಾಟಲ್‌ಗಳನ್ನು ಕಳವು ಮಾಡಲಾಗಿರುವ ಘಟನೆ ನಡೆದಿದೆ.
  ಲಾಕ್‌ ಡೌನ್‌ನಿಂದಾಗಿ ಬಾರ್‌ ಬಂದ್‌ ಮಾಡಲಾಗಿತ್ತು. ಶನಿವಾರ ರಾತ್ರಿ ದುಷ್ಕರ್ಮಿಗಳು ಬಾಗಿಲಿಗೆ ಹಾಕಿದದ್ದ ಕಬ್ಬಿಣದ ಸರಳು ಹಾಗೂ ಷಟರ್‌ ಅನ್ನು ಆರೆಯಿಂದ ಮೆಂಡಿ, ಒಳಗೆ ನುಸುಳಿ ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲಾಗಿದೆ ಎಂದು ಎಂದು ಲಕ್ಷ್ಮಿ ಬಾರ್‌ನ ಮಾಲೀಕ ವೀರಭದ್ರೇಗೌಡ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
  ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
  ಈ ಬಾರ್‌ನಲ್ಲಿ ಈವರೆಗೆ 5 ಬಾರಿ ಕಳವು ಮಾಡಲಾಗಿದೆ. ಪೊಲೀಸರಿಗೆ ದೂರು ನೀಡದರೂ ಪ್ರಯೋಜನವಾಗುತ್ತಿಲ್ಲ. ಒಮ್ಮೆಯೂ ಕಳ್ಳರನ್ನು ಹಿಡಿದಿಲ್ಲ. ಪೊಲೀಸರ ನಿಷ್ಕ್ರಿಯತೆಯಿಂದಾಗಿ ಕಳವು ಪ್ರಕರಣಗಳು ಹೆಚ್ಚುತ್ತಿವೆ ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿಯ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ನ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಗಜೀವನ್‍ರಾಮ್ ಜಯಂತಿ ಆಚರಣೆ

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಗಜೀವನ್‍ರಾಮ್ ಜಯಂತಿ ಆಚರಣೆ
ಕೆಜಿಎಫ್ :ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಮಾಜಿ ಉಪ ಪ್ರಧಾನಮಂತ್ರಿ ಡಾ|| ಬಾಬು ಜಗಜೀವನರಾಮ್ ರವರ 113ನೇ ಜನ್ಮದಿನಾಚರಣೆಯನ್ನು ಕೆಜಿಎಫ್‍ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಭಾನುವಾರದಂದು ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಬಿ.ಕೆ.ಉಮೇಶ್ ಅವರು ಡಾ|| ಬಾಬು ಜಗಜೀವನರಾಮ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಡಾ|| ಬಾಬು ಜಗಜೀವನರಾಮ್ ಅವರ ಆದರ್ಶ, ತತ್ವಗಳನ್ನು ಇಂದಿನ ಸಮಾಜದಲ್ಲಿ ಅಳವಡಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದರು.
ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಬಿ.ಕೆ.ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಡಾ|| ಬಾಬು ಜಗಜೀವನರಾಮ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಅಪರಾಧ ಎಎಸ್‍ಐ ಎನ್.ಜಿ.ಚೌಡಪ್ಪ, ಗಣಕ ಮೇಲ್ವಿಚಾರಕ ಎನ್.ಆನಂದ್ ಹಾಗೂ ಇಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಶಾಖಾಧೀಕ್ಷಕರಾದ ಎ.ನಜೀಮಾಬಾನು, ಪೊಲೀಸ್ ಅಧೀಕ್ಷಕರ ಆಪ್ತ ಸಹಾಯಕಿ ಜಿ.ಮಮತಾ, ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳು ವಿ.ಮಂಜುನಾಥ, ಗೋಪಾಲಕೃಷ್ಣ, ಸಂಗೀತಾ, ಸುದರ್ಶನ್, ನಾರಾಯಣಸ್ವಾಮಿ, ಚಂದ್ರಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಬಡ ರಿಕ್ಷಾ ಚಾಲಕರನ್ನು ಮರೆತೆ ಬಿಟ್ಟ ಸರಕಾರ : ಸಂಘದಿಂದಲೇ ಸಹಾಯ

JANANUDI.COM NETWORK

 

ಬಡ ರಿಕ್ಷಾ ಚಾಲಕರನ್ನು ಮರೆತೆ ಬಿಟ್ಟ ಸರಕಾರ : ಸಂಘದಿಂದಲೇ ಸಹಾಯ

 

 

ಕುಂದಾಪುರ, ಎ.6:  ಕರೋನ ವೈರಸ್ ಹಾವಳಿಯಿಂದ ಕಳೆದ 12 ದಿನಗಳಿಂದ ಮುಂಜಾಗ್ರತ ಕ್ರಮಕ್ಕಾಗಿ ಸರಕಾರವು ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ.ರಿಕ್ಷಾ ಆದಾಯವನ್ನೇ ನಂಬಿ ಬದುಕುತ್ತಿರುವ ನಮ್ಮ ಸಂಘದ ಚಾಲಕರಿಗೆ ತಮ್ಮ ಕುಟುಂಬಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ.ಸರಕಾರಕ್ಕೆ ಹಲವು ರೀತಿಯಲ್ಲಿ ತೆರಿಗೆಗಳನ್ನು ನೀಡುತ್ತಿರುವ ಸಾರಿಗೆ ಚಾಲಕರನ್ನು ಸರಕಾರ ಮರೆತೆ ಬಿಟ್ಟಿದೆ.

   ಚುನಾವಣೆ ಸಂಧರ್ಭಗಳಲ್ಲಿಯೂ ನಮ್ಮ ಚಾಲಕರಿಂದ ಬೆಂಬಲ ಪಡೆದು ಗೆಲ್ಲುವ  ಜನಪ್ರತಿನಿಧಿಗಳು ಕಷ್ಟಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ. ಇಂದು  ಇಂತಹ ವೇಳೆಯಲ್ಲಿ ಸಂಘದ ಪ್ರಮುಖ ಸದಸ್ಯರು ಇಂದು ಸಂಘದ ಗೌರವ ಅಧ್ಯಕ್ಷರಾದ ಕಾಂ.ಕರುಣಾಕರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಕಷ್ಟಕಾಲದಲ್ಲಿರುವ ನಮ್ಮ ಚಾಲಕರಿಗೆ  ಸಹಾಯ ಮಾಡಲು ಚರ್ಚೆ ನಡೆಸಿತು. ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ(ಸಿಐಟಿಯು)ವು ಚಾಲಕರಿಗಾಗಿಯೇ ಉಳಿಸಿರುವ ಉಳಿತಾಯ ಖಾತೆಯಿಂದ ಸುಮಾರು ರೂ. 500000/-ಗಳನ್ನು ವಿಥ್ ಡ್ರಾ ಮಾಡಿಸಿ ಪ್ರತಿಯೊಬ್ಬರಿಗೂ ರೂ.1000/- ದಂತೆ ಸಹಾಯ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತೆಂದು ಕುಂದಾಪುರ ತಾಲೂಕು ಆಟೋರಿಕ್ಷ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ದ ಪ್ರಧಾನ ಕಾರ್ಯದರ್ಶಿ          ರಾಜುದೇವಾಡಿಗ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬದಿಂದ ಹಿಂದುಳಿದ ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ 2 ಲಕ್ಷ ರೂ.ಮೌಲ್ಯದ ಆಹಾರ ಪದಾರ್ಥಗಳ ನೆರವು

JANANUDI.COM NETWORK

 

ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬದಿಂದ ಹಿಂದುಳಿದ ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ 2 ಲಕ್ಷ ರೂ.ಮೌಲ್ಯದ ಆಹಾರ ಪದಾರ್ಥಗಳ ನೆರವು

 

 

ಜಗತ್ತಿಗೆ ಮಹಾಮಾರಿಯಾಗಿ ಕೊರೊನಾ ಕಾಡುತ್ತಿದೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆದರೂ ಅಲ್ಲಲ್ಲಿ ಮಾನವೀಯತೆಯ ಒರತೆ ಚಿಮ್ಮುತ್ತಲೇ ಇದೆ. ಗಾವಳಿ ಹಳ್ಳಾಡಿಯ  ಆಸುಪಾಸಿನ ಪರಿಸರದ ಆರ್ಥಿಕವಾಗಿ ಹಿಂದುಳಿದ ,ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ  ಎಲೆ ಮರೆಯ ಕಾಯಿಯಂತೆ ಇರುವ ನಮ್ಮ ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬವು ಸುಮಾರು 2ಲಕ್ಷ ರೂ.ಮೌಲ್ಯದ ದೈನಂದಿನ ಆಹಾರ ಪದಾರ್ಥಗಳನ್ನು ಸಹಾಯದ ರೂಪದಲ್ಲಿ ನೀಡಿದೆ.

ಇಂತಹ ನಿಸ್ಪೃಹ ಮನಸ್ಸಿನ ವ್ಯಕ್ತಿತ್ವದವರಾಗಿ ಮನುಕುಲದ ಉದ್ಧಾರಕ್ಕಾಗಿ ಪ್ರತಿಫಲಾಪೇಕ್ಷೆ ಇಲ್ಲದೇ ಸಹಾಯಗೈದ ಸಹಾಯ ಮಾಡಿದ ಗಾವಳಿ ಕುಟುಂಬಕ್ಕೆ ಕ್ರತಜ್ಞತೆಯನ್ನು  ಸಲ್ಲಿಸಲಾಯಿತು.  

 

 

2020-21 ನೇ ಸಾಲಿನ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳಿಗೆ ನೀರು ಸರಬಾರಜು ಮಾಡುವ ಟೆಂಡರ್ ಕರೆಯಲಾಗಿದೆ

 

JANANUDI.COM NET WORK

 

 

2020-21 ನೇ ಸಾಲಿನ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳಿಗೆ ನೀರು ಸರಬಾರಜು ಮಾಡುವ ಟೆಂಡರ್ ಕರೆಯಲಾಗಿದೆ

 

ಕುಂದಾಪುರ, ಎ.6: 2020-21 ನೇ ಸಾಲಿನಲ್ಲಿ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳೆಂದು ಘೋಶಿಸಲಾಗುವ ಗ್ರಾಮೀಣ ಭಾಗದ ಅವಶ್ಯಕತೆ ಇರುವ ಗ್ರಾಮಗಳಲ್ಲಿ ವಿವಿಧ ಗ್ರಾವi ಪಂಚಾಯ್ತ್ ವಾರು ಬೇಸಿಗೆ ಅವಧಿಯಲ್ಲಿ ತುರ್ತು ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸುವ ಬಗ್ಗೆ ಕರ್ನಾಟಕ ಸರಕಾರ ಕಂದಾಯ ಇಲಾಖೆ ತಹಶೀಲ್ದಾರ್ ಕಛೇರಿ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರಿಂದ ಟೆಂಡರ್ ಕರೆಯಲಾಗಿದೆ,
ಈ ಟೆಂಡರಿನ ವಿವರಣೆಯನ್ನು ವಾರ್ತೆಯ ಜೊತೆ ಲಗತ್ತಿಸಲಾಗಿದೆ. ಆಸಕ್ತಿಯುಳ್ಳವರು ಟೆಂಟರನಲ್ಲಿ ಭಾಗವಹಿಸ ಬಹುದು, ಶರತ್ತುಗಳು ವಿಷಯವನ್ನು ಕುಂದಾಪುರ ತಶೀಲ್ದಾರ್ ನೀಡಿರುವ ನೋಟಿಸನ್ನು ನೋಡಿ.

 

ಕುಂದಾಪುರ ಮಾಸ್ಕನ್ನು 4 ರೂಪಾಯಿ ಹೆಚ್ಚಿಗೆ ಮಾರಾಟ ಮಾಡಿದಕ್ಕೆ 5000 ರೂ. ದಂಡ ವಸೂಲಿ

JANANUDI.COM NETWORK

 

 

ಕುಂದಾಪುರ ಮಾಸ್ಕನ್ನು 4 ರೂಪಾಯಿ ಹೆಚ್ಚಿಗೆ ಮಾರಾಟ ಮಾಡಿದಕ್ಕೆ 5000 ರೂ. ದಂಡ ವಸೂಲಿ

 

 

ಕುಂದಾಪುರ ಎ.5: ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಗ್ರಿಗಳನು ಹೆಚ್ಚಿಗೆ ದರ ವಸೂಲಿ ಮಾಡುತಿದ್ದಾರೆಂದು ದೂರುಗಳು ಬಂದಿರುವುದರಿಂದ ಕಾನೂನು ಮಾಪನ ಶಾಸ್ತ್ರ ಇಲಾಖೆಯು ಅನೇಕ ಅಂಗಡಿ ಶಾಪ್ ಗಳಲ್ಲಿ ದಾಳಿ ಮಾಡುತಿದೆ. ಅದರಂತೆ ಇವತ್ತು ಕುಂದಾಪುರದಲ್ಲಿ ದಾಳಿ ಮಾಡಿದ ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕರಾದ ಗಜೇಂದ್ರ, ನಿರೀಕ್ಷರಾದ ರಾಗ್ಯ ನಾಯಕ್, ಬಿ.ಎಸ್.ನಂಜಪ್ಪ, ಸ್ಮಿತಾ ಹಾಗೂ ಸಿಬ್ಬಂದಿ ಸಂತೋಷ್ ಇವರ ತಂಡವು ಕುಂದಪುರ ನಗರದ ಓಷಧಿ ಅಂಗಡಿಗಳ ತಪಾಸಣೆ ಮಾಡಿದ ಸಂದರ್ಭದಲ್ಲಿ ಒಂದು 3 ಪ್ಲೈ ಮಾಸ್ಕಿಗೆ ಕೇಂದ್ರ ಸರಕಾರವು ರೂ. 16 ನಿಗದಿ ಪಡಿಸಿದ್ದು, ಅದನ್ನು ಸದರಿ ಅಂಗಡಿಯವರು ಮಾಸ್ಕನ್ನು ರೂ. 20 ಕ್ಕೆ ಓಷಧ ಗ್ರಾಹಕರಿಗೆ ಮಾರಿರುತ್ತಾರೆ. ಸದರಿ ಓಷಧ ಅಂಗಡಿಯ ವಿರುದ್ದ ಮೊಕ್ಕದ್ದಮೆ ದಾಖಲಿಸಿ ರೂಪಾಯಿ 5000 ಯ ದಂಡವನ್ನು ವಸೂಲಿ ಮಾಡಲಾಗಿದೆ.
ಹಾಗೇ ಕುಂದಾಪುರ ತರಕಾರಿ, ದಿನಸಿ ಮತ್ತು ಮಾಂಸದ ಅಂಗಡಿಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಯವರ ಸೂಚನೆಯಂತ್ತೆ ಅನೇಕ ತರಕಾರಿ ಅಂಗಡಿಗಳಲ್ಲಿ ತರಕಾರಿಗಳ ದರ ಪಟ್ಟಿಯನ್ನು ಪ್ರದರ್ಶಿಸಿರುವುದು ಕಂಡು ಬಂದಿದೆ. ಇದೇ ರೀತಿ ಎಲ್ಲಾ ತರಕಾರಿ ಅಂಗಡಿಗಳಲ್ಲಿ ದರ ಪಟ್ಟಿ ಪ್ರದರ್ಶಿಸಲು ಸೂಚಿಸಲಾಯಿತು. ಜಿಲ್ಲಾಧಿಕಾರಿಗಳಾದ ಜಿ.ಜಗದೀಶ್ ರವರು ಇಂಥಹ ಆರೋಗ್ಯದ ತುರ್ತು ಸಂದರ್ಭದಲ್ಲಿ ಮಾಸ್ಕ್ ಹಾಗೂ ಸಾನಿಟೈಸರುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಜರಗಿಸಲು ಸೂಚಿಸಿದ್ದಾರೆಂದು, ಉಡುಪಿ ಜಿಲ್ಲೆಯ ಕಾನೂನು ಮಾಪನ ಶಾಸ್ತ್ರ ಇಲಖೆಯ ಸಹಾಯಕ ನಿಯಂತ್ರಕರಾದ ಗಜೇಂದ್ರ ಇವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅದರಂತೆ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಜಾಗ್ರಾತರಿಬೇಕು