HOLY ROSARY CHURCH, KUNDAPUR – 450 th JUBILEE SOUVENIR 2021

ಬಿಸ್ಮಿಲ್ಲಾ ಸೀ ಫುಡ್ ಇವರಿಂದ ಕುಂದಾಪುರ ತಾಲೂಕಿನಾಧ್ಯಂತ ಜಾತಿ ಮತ ಭೇದವಿಲ್ಲದೆ ಮನೆಯ ಸಾಮಾಗ್ರಿಗಳ ಕಿಟ್ ವಿತರಣೆ

JANANUDI.COM NETWORK

 

ಬಿಸ್ಮಿಲ್ಲಾ ಸೀ ಫುಡ್ ಇವರಿಂದ ಕುಂದಾಪುರ ತಾಲೂಕಿನಾಧ್ಯಂತ ಜಾತಿ ಮತ ಭೇದವಿಲ್ಲದೆ ಮನೆಯ ಸಾಮಾಗ್ರಿಗಳ ಕಿಟ್ ವಿತರಣೆ

 

 

ತಮಗೆಲ್ಲರಿಗೂ ತಿಳಿದ ಆಗೆ ಇಡೀ ಪ್ರಪಂಚದಲ್ಲಿ ಕೊವೀಡ್ 19 ವ್ಯಾಪಕವಾಗಿ ಹರಡಿಕೊಂಡು ಸಾವುಗಳು ಸಂಭವಿಸುತ್ತಾ ಇದೆ. ದೇಶಾದ್ಯಂತ  ಲಾಕ್ ಡೌನ್ ನಿಂದ ಸಹಸ್ರಾರು ನಿರಾಶ್ರಿತರು, ದಿನಕೂಲಿ ಕಾರ್ಮಿಕರು ತುಂಬಾ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ ಇದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರಿಗೆ ದಿನಗಳನ್ನು ಮುಂದೂಡಲು ತುಂಬಾ ಕಷ್ಟಕರವಾದ ಸಮಯದಲ್ಲಿ.. ಕುಂದಾಪುರ ತಾಲೂಕಿನಾಧ್ಯಂತ ಜಾತಿ ಮತ ಭೇದವಿಲ್ಲದೆ ಸುಮಾರು 300 ಕ್ಕೂ ಅಧಿಕ (ಕಿಟ್) ತಿಂಗಳ ಮನೆಯ ಸಾಮಾಗ್ರಿಗಳನ್ನು ಅರ್ಹ ಕುಟುಂಬಗಳಿಗೆ ತಲುಪಿಸುವ ಸಾಮಾಜಿಕ ಕಳಕಳಿಯ ಕಾರ್ಯವನ್ನು  ಬಿಸ್ಮಿಲ್ಲಾ ಸೀ ಫುಡ್ ” ಇದರ ಮಾಲಿಕರಾದ  ಶ್ರೀ ರಫಿಕ್ ಗಂಗೊಳ್ಳಿ ಮಾಡಿದ್ದಾರೆ

    ಇತ್ತೀಚೆಗೆ ಸೌಧಿ ಅರೇಬಿಯಾದಲ್ಲಿ ಬಂದನಕ್ಕೊಳಗಾಗಿದ್ದ ಕೋಟೇಶ್ವರ ಬೀಜಾಡಿ ಗ್ರಾಮದ ” ಹರೀಶ ಬಂಗೇರ ” ಇವರ ಮನೆಗೆ ಶ್ರೀ ರಫಿಕ್ ಗಂಗೊಳ್ಳಿ ಇವರು ಕುಂದಾಪುರ ಕೋಡಿಯ 14 ನೇ ಬ್ಲಾಕ್ ಇದರ ಪುರಸಭೆ ಸದಸ್ಯರಾದ ಶ್ರೀ  ಹಾಗೂ ಅಷ್ಪಕ್ ಮಹಮ್ಹದ ಮುನಾಫ್  (ಕಾಂಗ್ರೆಸ್ ಕಾರ್ಯಕರ್ತ) ಇವರ ಸಹಾಯದೊಂದಿಗೆ ಕಿಟ್ ವಿತರಣೆ ಜೊತೆಗೆನೇ  ಕೋಡಿಯ ” ಮುಸ್ಲಿಂ ಯಂಗ್ ಮೆನ್ಸ್” ವತಿಯಿಂದ ಮೊತ್ತ ರೂಪಾಯಿ 6,000 ವನ್ನು ಕುಟುಂಬಕ್ಕೆ ನೀಡಿರುತ್ತೇವೆ.

ಸಂಪ್ರದಾಯದಂತೆ ಗರಿಗಳ ಭಾನುವಾರ ಆಚರಣೆಯಿಲ್ಲಾ, ಧರ್ಮಗುರುಗಳು ಮಾತ್ರ ವಯಕ್ತಿಕವಾಗಿ ಬಲಿದಾನ ಅರ್ಪಿಸಿದೆವು : ಫಾ||ಸ್ಟ್ಯಾನಿ ತಾವ್ರೊ

JANANUDI.COM NET WORK

 

ಸಂಪ್ರದಾಯದಂತೆ ಗರಿಗಳ ಭಾನುವಾರ ಆಚರಣೆಯಿಲ್ಲಾ, ಧರ್ಮಗುರುಗಳು ಮಾತ್ರ ವಯಕ್ತಿಕವಾಗಿ ಬಲಿದಾನ ಅರ್ಪಿಸಿದೆವು : ಫಾ|ಸ್ಟ್ಯಾನಿ ತಾವ್ರೊ

 

 

ಕುಂದಾಪುರ,ಎ.5: ಯೇಸು ಸ್ವಾಮಿಯು ತನ್ನ ಪಿತನ ಯೋಜನೆಯಂತೆ, ಲೋಕ ಕಲ್ಯಾಣಕ್ಕಾಗಿ,ಇಹಲೋಕದ ಜನರ ಉಳಿವಿಗಾಗಿ, ಜನರನ್ನು ಪಾಪಗಳಿಂದ ವಿಮೋಚಿಸಲಿಕ್ಕಾಗಿ ಶಿಲುಭೆಯ ಮೇಲೆ ತನ್ನ ಜೀವವದ ಬಲಿದಾನವನ್ನೆ ನೀಡುವ ಉದ್ದೇಶದಿಂದ ಜೆರುಸಾಲೆಮ್ ನಗರದೊಳಗೆ ಪ್ರವೇಶಿಸುತ್ತಾರೆ, ಅವಾಗ ಜನರು ಅವರನ್ನು ಒಲೀವ್ ಮರದ ಗರಿಗಳನ್ನು ಹಿಡಿದುಕೊಂಡು “ಹೊಸನ್ನಾ ದಾವಿದನ ಪುತ್ರನೇ ಜಯವಾಗಲಿ, ದೇವರ ನಾಮದಲ್ಲಿ ಬರುವಂತವನೇ, ಹೊಸಾನ್ನಾ ಸರ್ವ ಶ್ರೇಶ್ಠ ದೇವನಿಗೆ ಹೊಸಾನ್ನಾ” ಎಂದು ಯೇಸುವನ್ನು ಸ್ವಾಗತಿಸಿದ ಹಬ್ಬವೇ ಕ್ರೈಸ್ತರು ಆಚರಿಸುವ ಗರಿಗಳ ಭಾನುವಾರ
ಕ್ರೈಸ್ತರಿಗೆ ಇವತ್ತಿನಿಂದ ಪವಿತ್ರ ವಾರವಾಗಿದ್ದು, ಇವತ್ತು ಎಲ್ಲಾ ಕ್ರೈಸ್ತ ಚರ್ಚುಗಳಲ್ಲಿ ಭಕ್ತಿಯ ಪೂಜೆ ಪಾಠ, ಕರಾವಳಿಯಲ್ಲಿ ಒಲಿವ್ ಎಲೆಯ ಬದಲು ತೆಂಗಿನ ಗರಿಗಳನ್ನು ಹಿಡಿದು ಅದನ್ನು ಆಶಿರ್ವದಿಸಿ ವಿಧಿ ವಿಧಾನಗಳನ್ನು ಆಚರಿಸ ಬೇಕಿತ್ತು. ಆದರೆ ಕೊರೊನಾ ಸಾಂಕ್ರಮಿಕ ಪೀಡೆಯ ದೆಶೆಯಿಂದ ಭಾರತ ದೇಶದ್ಯಾಂತ ಲಾಕ್ ಡೌನ್ ಇದ್ದುದರಿಂದ ಚರ್ಚುಗಳಲ್ಲಿ ಯಾವುದೇ ಥರಹದ ಪೂಜೆ ಪಾಠಗಳು ನಡೆಯಲಿಲ್ಲಾ.

ಈ ಸಂದರ್ಭದಲ್ಲಿ 450 ವರ್ಷದ ಸುಧೀರ್ಘ ಚರಿತ್ರೆಯುಳ್ಳ ಕುಂದಾಪುರ ಹೋಲಿ ರೊಜಾರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರಿಗೆ ಮಾಧ್ಯಮದವ್ರು ಭೇಟಿಯಾದಗ ‘ನಾವು ಸರಕಾರದ ಆಜ್ಞೆಯನ್ನು ಪಾಲಿಸುತ್ತಾ ಸಾರ್ವಜನಿಕವಾಗಿ ಗರಿಗಳ ಭಾನುವಾರದ ಆಚರಣೆಯನ್ನು ಮಾಡಲಿಲ್ಲಾ, ವಯಕ್ತಿಕವಾಗಿ ತುಂಬ ಸರಳ ರೀತಿಯಲ್ಲಿ ಬಲಿದಾನ ಅರ್ಪಿಸಿದೆವು, ಗರಿಗಳನ್ನು ಕೂಡ ಪವಿತ್ರಿಕರಿಸಲಿಲ್ಲಾ, ಭಕ್ತರು ಮನೆಯಲ್ಲೆ ಟಿ.ವಿ., ಯು ಟ್ಯೂಬ್‍ಗಳಲ್ಲಿ ಬರುವಂತಹ ಬಲಿ ಪೂಜೆಯನ್ನು ಆಲಿಸಿ ತಮ್ಮ ಪ್ರಾರ್ಥನೆಯನ್ನು ದೇವರಿಗೆ ಸಲ್ಲಿಸಿದರು’ ಎಂದು ಸುದ್ದಿ ಮಾಧ್ಯಮಕ್ಕೆ ತಿಳಿಸುತ್ತಾ “ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಮನವಿಯಂತೆ, ಕೊರೊನಾ ಪೀಡೆಯಿಂದ ಮುಕ್ತಿ ಪಡೆಯಲು, ಜನರ ಒಳಿತಿಗಾಗಿ ದೇವರ ಕ್ರಪೆ ಜನರಿಗೆ ದೊರಕುವಂತಾಗಲು, ಸರಿಯಾಗಿ ಮಧ್ಯಾನ್ಹ 3 ಗಂಟೆಗೆ ಒಂದೆ ಸಮಯದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಎಲ್ಲಾ ಕ್ರೈಸ್ತರು ದೈವಿಕ ಕ್ರಪೆಯ ಮಾಲಾಜಪವನ್ನು, ಜಪಿಸಲಾಯಿತು. ಅದರಂತೆಯೇ ನಮ್ಮ ಕುಂದಾಪುರದ ಕ್ರೈಸ್ತರು ದೈವಿಕ ಕ್ರಪೆಯ ಮಾಲಾಜಪವನ್ನು ಜಪಿಸಿದರು’ ಎಂದು ತಿಳಿಸಿದರು.

ಬಸ್ರೂರು ಕೃಷ್ಣರಾಯ ಕೇಶವ ಶೆಣೈ (91) ನಿಧನ

JANANUDI.COM NETWORK

 

 

ಬಸ್ರೂರು ಕೃಷ್ಣರಾಯ ಕೇಶವ ಶೆಣೈ (91) ನಿಧನ 

 

 

ಬಸ್ರೂರು ಕೃಷ್ಣರಾಯ ಕೇಶವ ಶೆಣೈ (91) ವಯೋಸಹಜ ದೌರ್ಬಲ್ಯದಿಂದ ಮಂಗಳೂರಿನಲ್ಲಿರುವ ತಮ್ಮ ಹಿರಿಯ ಪುತ್ರನ ಮನೆಯಲ್ಲಿ ಎ.4 ರಂದು ನಿಧನ ಹೊಂದಿದರು. ಅವರು ಇಬ್ಬರು ಪುತ್ರರು ಮತ್ತು ನಾಲ್ಕು ಪೂತ್ರೀಯರನ್ನು ಅಗಲಿದ್ದಾರೆ. ಬಸ್ರೂರು, ಗಂಗೋಳ್ಳಿ ಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಶಿವಮೊಗ್ಗ ಜಿಲ್ಲೆಯ ನಗರ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದರು. ನಿವೃತ್ತರಾದ ನಂತರ ಕೆಲ ವರ್ಷಗಳ ಕಾಲ ಕುಂದಾಪುರದ ಹೆಚ ಎಮ ಎಮ ಮತ್ತು ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇವೆ ಸಲ್ಲಿಸಿದರು.

ಡಾ|ಎನ್.ಸುಧಾಕರ ಶೆಟ್ಟಿಯವರಿಂದ ರೂ 50 ಸಾವಿರ ಕೊಡುಗೆ

JANANUDI.COM NETWORK

 

ಡಾ|ಎನ್.ಸುಧಾಕರ ಶೆಟ್ಟಿಯವರಿಂದ ರೂ 50 ಸಾವಿರ ಕೊಡುಗೆ

 

 

ಹಿರಿಯ ವೈದ್ಯ, ದಾನಿ ಕುಂದಾಪುರದ ಡಾ|ಎನ್.ಸುಧಾಕರ ಶೆಟ್ಟಿಯವರು ರೂ 50,000 ಕೊರೊನಾ ವಿರುದ್ಧ ಹೋರಾಟಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಾರೆ.
ಉಪವಿಭಾಗಾಧಿಕಾರಿ ಕೆ.ರಾಜು ಅವರು ಕುಂದಪ್ರಭದ ಯು.ಎಸ್.ಶೆಣೈ ಯವರೊಂದಿಗೆ ಕುಂದಾಪುರ ಖಾರ್ವಿಕೇರಿಯಲ್ಲಿರುವ 80 ರ ಹರೆಯದ ಡಾ|ಸುಧಾಕರ ಶೆಟ್ಟಿಯವರ ಮನೆಗೆ ತೆರಳಿ ಅವರ ದೇಣಿಗೆ ಸ್ವೀಕರಿಸಿದರು.

ಕುಂದಾಪುರ:ಮಾರುಕಟ್ಟೆಯಲ್ಲಿ ಮಾಸ್ಕ್‌ಗಳ ಕೊರತೆಯ ಹಿನ್ನಲೆಯಲ್ಲಿ ಮಾಸ್ಕ್‌ಗಳನ್ನು ಸಿದ್ದಗೊಳಿಸಿ  ಉಚಿತವಾಗಿ ವಿತರಣೆ.

ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ
ಕುಂದಾಪುರ:ಮಾರುಕಟ್ಟೆಯಲ್ಲಿ ಮಾಸ್ಕ್‌ಗಳ ಕೊರತೆಯ ಹಿನ್ನಲೆಯಲ್ಲಿ ಮಾಸ್ಕ್‌ಗಳನ್ನು ಸಿದ್ದಗೊಳಿಸಿ  ಉಚಿತವಾಗಿ ವಿತರಣೆ.
ಕುಂದಾಪುರ, ಎ.4: ಕೊರೊನಾ ಸೋಂಕು ಕಾರಣಕ್ಕೆ ಮಾರುಕಟ್ಟೆಯಲ್ಲಿ ಮಾಸ್ಕ್‌ಗಳ ಕೊರತೆಯ ಹಿನ್ನಲೆಯಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯ ಚಿಕ್ಕನಸಾಲು ರಸ್ತೆ ವಾರ್ಡಿನ ಕಾಂಗ್ರೆಸ್ ಮುಖಂಡ, ಮೈಲಾರೇಶ್ವರ ಯುವಕ ಸಂಘದ ಮಾಜಿ ಅಧ್ಯಕ್ಷ ಕೆ.ಪಿ ಅರುಣ್‌ರವರ ನೇತೃತ್ವದಲ್ಲಿ  ಬಟ್ಟೆಯ ಮಾಸ್ಕ್‌ಗಳನ್ನು ಸಿದ್ದಗೊಳಿಸಿ ವಾರ್ಡಿನಾದ್ಯಂತ ಉಚಿತವಾಗಿ ಹಂಚಲಾಯಿತು. ಈ ಸಂಧರ್ಭದಲ್ಲಿ  ಕೆ.ಜಿ.ಸಚ್ಚಿದಾನಂದ. ಕೆ.ಪಿ.ಸುದೀರ್. ಕೆ.ಪಿ.ಚಂದ್ರಶೆಖರ್. ಲಕ್ಷ್ಮಿನಾರಾಯಣ. ಸುನಿಲ್ ಮುಂತಾದವರು ಉಪಸ್ಥಿತರಿದ್ದರು ಮಾಸ್ಕ್‌ಗಳನ್ನು ಲಾಕ್‌ಡೌನ್ ಅವಧಿಯಲ್ಲಿ ತುರ್ತು ಸಿದ್ದಗೊಳಿಸುವಲ್ಲಿ ಸಹಕರಿಸಿದ ಟೈಲರ್ ಗೋಪಾಲ ಹಾಗೂ ಚಂದ್ರ .ವಿ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಬೈಂದೂರು ಒತ್ತಿನಾಣೆ ಘಾಟಿಯಲ್ಲಿ ಲಾರಿ ಪಲ್ಟಿ: ಕುಂದಾಪುರ ಕೋಡಿಯ ಚಾಲಕ ಮ್ರತ್ಯು

ಬೈಂದೂರು ಒತ್ತಿನಾಣೆ ಘಾಟಿಯಲ್ಲಿ ಲಾರಿ ಪಲ್ಟಿ: ಕುಂದಾಪುರ ಕೋಡಿಯ ಚಾಲಕ ಮ್ರತ್ಯು 

 

 

ಕುಂದಾಪುರ, ಎ. ಬೈಂದೂರು ಠಾಣಾ ವ್ಯಾಪ್ತಿಯ ಒತ್ತಿನಾಣೆ ಘಾಟಿಯಲ್ಲಿ ಮೀನು ಸಾಗಣೆಯ ಲಾರಿ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ನಡೆದಿದೆ.

    ಮ್ರತರು  ಕುಂದಾಪುರ ಕೋಡಿ ನಿವಾಸಿ  ಅಹ್ಮದ್ ಹಾಜಿಯೆಂಬರ ಮಗ ಇರ್ಫಾನ್ (28) ಎಂದು ತಿಳಿದು ಬಂದಿದೆ. ಇರ್ಫಾನ್ ಉಡುಪಿಯಿಂದ ಗೋವಾಕ್ಕೆ ಮೀನು  ಸಾಗಣೆ ಮಾಡುತಿದ್ದರು. ದಾರಿಯಲ್ಲಿ ಬೈಂದೂರು ಒತ್ತಿನಾಣೆ ಘಾಟಿಯಲ್ಲಿ ಲಾರಿ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಪಲ್ಟಿಯಾಯಿತು. ಗಂಭೀರ ಘಾಯಗೊಂಡ ಅವರು  ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಯಲ್ಲಿ ಮ್ರತ್ಯು ವಶವಾಗಿದ್ದಾರೆ.  ಸ್ಥಳಕ್ಕೆ ಐ ಆರ್ ಬಿ ತುರ್ತು ಸ್ಪಂದನ ತಂಡ ಭೇಟಿ ಮಾಡಿದೆ. ಬೈಂದೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ನಿಧನ ರೊನಾಲ್ಡ್ ಡಿ’ಸೋಜಾ, ಕುಂದಾಪುರ (59)

ನಿಧನ

ರೊನಾಲ್ಡ್ ಡಿ’ಸೋಜಾ, ಕುಂದಾಪುರ (59)ನಿ

ನಿಧನ:02-04-2020           ಜನನ:26-08-1961

 

 

ಮಗ: ದಿವಂಗತ ಪಾಸ್ಕಲ್ ಡಿಸೋಜಾ ಮತ್ತು ದಿವಂಗತ ವೆರೋನಿಕಾ ಡಿಸೋಜಾ

ತಮ್ಮ: ಆಲ್ಫೊನ್ಸ್ ಡಿಸೋಜಾ

ಚಿಕ್ಕಪ್ಪ: ರಾಜೇಶ್ ಡಿಸೋಜಾ (ಕಾನಸ್ಟೇಬಲ್) ಮತ್ತು ಪ್ರವೀಣ್ ಡಿಸೋಜಾ

 

ಕುಂದಾಪುರ ಮೀನು ಮಾರ್ಕೆಟ್ ಸಮೀಪದ ರೊನಾಲ್ಡ್ ಡಿ ಸೋಜಾ (59) ಇವರು ಮಂಗಳವಾರ (26-08-1961) ರಂದು ಹ್ರದಯಘಾತದಿಂದ ನಿಧನ ಹೊಂದಿದ್ದಾರೆ. ಇವರು 1980 ರ ದಶಕದಲ್ಲಿ ಉತ್ತಮ ಕ್ರಿಕೆಟ್ ಪಟುವಾಗಿ ಹೆಸರು ಗಳಿಸಿದ್ದರು. ವೇಗದ ಬೌಲರ್ ಆಗಿದ್ದ ಅವರು ಆರಂಭದಲ್ಲಿ ಭಂಡಾರ್ಕಾರ್ಸ್ ಕಾಲೇಜು ತಂಡದ ಹಾರ್ಡ್ ಬಾಲ್ ಆಟಗಾರರಾಗಿದ್ದ ಅವರು ನಂತರ ಚಕ್ರವರ್ತಿ, ಉಡುಪಿಯ ಕಲಾಕಿರಣ್ ತಂಡದ ಪರವಾಗಿ ಆಡಿದ್ದರು. ಅಂಚೆ ಇಲಾಖೆಯ ಅರೆಕಾಲಿಕ ಉದ್ಯೋಗಿ ಆಗಿದ್ದ ಅವರು ಅವಿವಾಹಿತ , ಸರಳ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು.

[ವಿ.ಸೂ]

(ಶವ ಸಂಸ್ಕಾರವು ಇವತ್ತು ಮಧ್ಯಾನ ನಡೆಯಲಿದ್ದು, ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಶ್ರೀಯುತರ ಅಂತ್ಯ ಸಂಸ್ಕಾರವು ಸರಳ ರೀತಿಯಿಂದ, ಕುಟುಂಬದ ಸದಸ್ಯರೊಂದಿಗೆ ಮಾತ್ರ ನೇರವೆರುವುದರಿಂದ, ನೋಡಲು ಇಚ್ಚಿಸುವರು ಮ್ರತರ ಮನೆಗೆ ಭೇಟಿ ಮಾಡಿ ಸರತಿಯಂತ್ತೆ ಶವ ದರ್ಶನ ಮಾಡುವುದು ಒಳಿತು, ಈ ಮಧ್ಯೆ ಶವದ ಪೋಸ್ಟ್ ಮಾರ್ಟಮ್ ಇರುವುದರಿಂದ  ಕುಟುಂಬಸ್ಥರನ್ನು ಸಂಪರ್ಕಿಸಿ ದರ್ಶನಕ್ಕೆ ತೆರಳುವುದು ಒಳಿತು)

ಸಂಪರ್ಕಿಸಲು: 82777 99458

ಕೋವಿಡ್-19 ವೈರಾಣು ಭೀತಿ  ಅಂತ್ಯಸಂಸ್ಕಾರ ನಡೆಸಲು ಹಿಂದೆ ಸರಿದ ಕುಟುಂಬ ಕೊನೆಗೆ ನಾಗರಿಕ ಸಮಿತಿಯಿಂದ ಶವದ ಅಂತ್ಯಸಂಸ್ಕಾರ

JANANUDI.COM NETWORK

 

 

ಕೋವಿಡ್-19 ವೈರಾಣು ಭೀತಿ  ಅಂತ್ಯಸಂಸ್ಕಾರ ನಡೆಸಲು ಹಿಂದೆ ಸರಿದ ಕುಟುಂಬ ಕೊನೆಗೆ ನಾಗರಿಕ ಸಮಿತಿಯಿಂದ ಶವದ ಅಂತ್ಯಸಂಸ್ಕಾರ 

 

 

ಉಡುಪಿ, ಕೋವಿಡ್-19 ರ ವ್ಯಾಧಿಯ ಭಯದಿಂದ ವೃದ್ಧನ ಅಂತ್ಯಸಂಸ್ಕಾರ ನಡೆಸಲು ಮ್ರತ ಹೊಂದಿದ ಕುಟುಂಬದವರು ಭಯಭೀತರಾಗಿ ಅಂತ್ಯಸಂಸ್ಕಾರ ಮಾಡಲು  ಹಿಂದೇಟು ಹಾಕಿದರು. ಕೊನೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಮ್ರತ ಹೊಂದಿದ ವೃದ್ಧನ ಅಂತ್ಯಸಂಸ್ಕಾರವನ್ನು ನೆರವೆರಿಸಿತು. ಇಂತಹದೊಂದು ಕ್ರತ್ಯ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಒಳರೋಗಿಯಾಗಿ ದಾಖಲಾಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು  ಸಿದ್ಧಾಪುರ – ಕಮಲಶಿಲೆಯ ನಿವಾಸಿ ಮಂಜುವೀರ (80ವ) ಮರಣ ಹೊಂದಿದರು. ಹೀಗಿರುವಾಗ  ಉಡುಪಿ, ಕೋವಿಡ್-19 ಸೋಂಕಿತ ಮತ್ತು ಶಂಕಿತ ರೋಗಿಗಳಿಗೆ. ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಳು ನಡೆಯಲು ಪ್ರಾರಂಭವಾದವು ಈ ಮೊದಲು ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಆರೋಗ್ಯದ ಸುರಕ್ಷತೆಯ  ಕಾರಣದಿಂದ ಔಷಧಿಗಳ ನೀಡಿ, ದಾಖಲಾಗಿದ್ದ ರೋಗಿಗಳ ಬಿಡುಗಡೆ ಮಾಡಲಾಗಿತ್ತು. ವೃದ್ಧ ಮಂಜವೀರನಿಗೆ ಬಳಿ ಯಾರಿಲ್ಲದೆ ಅತಂತ್ರ ಪರಿಸ್ಥಿತಿ ಎದುರಾಯಿತು. ಸರಕಾರದ ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ಏಲ್ಲಿಗೂ ಹೋಗಲು ಅವರಿಗೆ ದಿಕ್ಕುತೋರದಾಯಿತು. ನಗರದ ಸಾರ್ವಜನಿಕ ಸ್ಥಳದಲ್ಲಿ ವೃದ್ಧರು ಅಸಹಾಯಕರಾಗಿ ಕಂಡು ಬಂದಾಗ, ಅವರನ್ನು ರಕ್ಷಿಸಿ, ಹೂಡೆ- ಗುಜ್ಜರಬೆಟ್ಟು ಇಲ್ಲಿಯ ವಯೋವೃದ್ಧರ ಆಶ್ರಮದಲ್ಲಿ ನೆಲೆ ಕಲ್ಪಿಸಲಾಯಿತು. ನಾಲ್ಕು ದಿನಗಳ ಕಾಲ ಅಲ್ಲಿದ್ದ ಅವರು ಮೃತಪಟ್ಟರು. ವೃದ್ಧರ ಶವವನ್ನು ಆಶ್ರಮದ ವ್ಯವಸ್ಥಾಪಕರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ರಕ್ಷಿಸಿಟ್ಟಿದ್ದರು.

ಕೊನೆಗೆ ಮೃತನ ಕುಟುಂಬಿಕರಿಗೆ ವಿಷಯ ಮುಟ್ಟಿಸಲಾಯಿತು. ಕೋವಿಡ್-19 ರ ಶಂಕಿತ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಅದೇ ಆಸ್ಪತ್ರೆಯಲ್ಲಿ ವೃದ್ಧರು  ಕೂಡ ಚಿಕಿತ್ಸೆ ಪಡೆಯುತ್ತಿದ್ದರಿಂದ ಕುಟುಂಬಿಕರು, ಕೋವಿಡ್ – 19 ಕಾಯಿಲೆ ತಮಗೂ ಬರಬಹುದು ಎನ್ನುವ ಭಯದಿಂದ ಅಂತ್ಯಸಂಸ್ಕಾರ ನಡೆಸಲು ಹಿಂದೆ ಸರಿದರು. ಅವರ ಮನವೊಲಿಸವ ಪ್ರಯತ್ನಗಳು ವಿಫಲವಾದವು. ಕೊನೆಗೆ ಆಶ್ರಮ ವ್ಯವಸ್ಥಾಪಕರು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಲ್ಲಿ ನೆರವು ಕೊರಲಾಯಿತು. ಅದೇ ಸಮಯದಲ್ಲಿ ಉಡುಪಿಯಲ್ಲಿ ವೃದ್ಧರ ಮಗ ಜಗದೀಶನನ್ನು ಪತ್ತೆಗೊಳಿಸಲಾಯಿತು.

ಕೊನೆಗೆ ಮಗನ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ವೃದ್ಧನ ಅಂತ್ಯಸಂಸ್ಕಾರವನ್ನು ಇಂದ್ರಾಳಿ ಹಿಂದು ರುದ್ರಭೂಮಿಯಲ್ಲಿ ಮಾ.30 ರಂದು ನಡೆಸಲಾಯಿತು. ಶವ ಸಂಸ್ಕಾರದ ಖರ್ಚು ವೆಚ್ಚಗಳನ್ನು ನಾಗರಿಕ ಸಮಿತಿ ಭರಿಸಿತು. ಶವಸಾಗಟ ನಡೆಸಲು ಪಂಚರತ್ನ ಸೇವಾ ಟ್ರಸ್ಟ್ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿತು. ಅಂತ್ಯಸಂಸ್ಕಾರ ಕಾರ್ಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ರಾಜೇಶ್ ಕಾಪು, ಪಡುಬಿದ್ರೆ ಚೇತನ್ ಭಾಗಿಗಳಾದರು. ನಂತರ ಮೃತನ ಮಗನಿಗೆ ಕಮಲಶಿಲೆಗೆ ತೆರಳಲು ವಾಹನ ವ್ಯವಸ್ಥೆ ಇಲ್ಲದ ಕಾರಣದಿಂದ ಬೊರ್ಡ್ ಹೈಸ್ಕೂಲು ಇಲ್ಲಿಯ ವಲಸೆ ಕಾರ್ಮಿಕರ ಪುರ್ನವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸುವ ವ್ಯವಸ್ಥೆಯನ್ನು ಸಮಿತಿಯವರು ಮಾಡಿದರು.

 

ಶ್ರೀನಿವಾಸಪುರ: ಕೊರೊನಾ ತಡೆಯಲು ಗಡಿ ಭಾಗದಲ್ಲಿ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು – ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ 

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 
 
ಶ್ರೀನಿವಾಸಪುರ: ಕೊರೊನಾ ತಡೆಯಲು ಗಡಿ ಭಾಗದಲ್ಲಿ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು – ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ 
ಶ್ರೀನಿವಾಸಪುರ: ಕೊರೊನಾ ತಡೆಯಲು ಗಡಿ ಭಾಗದಲ್ಲಿ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಏರ್ಪಡಿಸಿದ್ದ ವಿವಿಧ ಇಲಾಖೆಗಳ ಸಭೆಯಲ್ಲಿ ಮಾತನಾಡಿ, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವೈರಾಣು ನಿರೋಧಕ ಔಷಧ ಸಿಂಪಡಣೆ ಮಾಡಬೇಕು ಹಾಗೂ ಚರಂಡಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್‌ ಸಿಂಪಡಿಸಬೇಕು ಎಂದು ಹೇಳಿದರು.
  ಗ್ರಾಮೀಣ ಪ್ರದೇಶದಲ್ಲಿ ಕಸ ವಿಲೇವಾರಿಗೆ ಸ್ಥಳ ನಿಗದಿಪಡಿಸುವುದು ತಡವಾಗುತ್ತಿದೆ. ಆದರೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ ಮನೆಗೆ ಹೋಗಿ ಕಸ ಪಡೆದು ವಿಲೇವಾರಿಮಾಡಬೇಕು ಎಂದು ಹೇಳಿದರು.
  ನ್ಯಾಯಬೆಲೆ ಅಂಗಡಿ ಮಾಲೀಕರು ಹೆಬ್ಬೆಟ್ಟಿನ ಗುರುತು ಪಡೆಯದೆ, ಮನೆ ಮನೆಗೆ ತೆರಳಿ ಆಹಾರ ಪದಾರ್ಥ ವಿತರಿಸಬೇಕು. ಈ ಸೇವೆಗೆ ಹಣ ಪಡೆಯಬಾರದು. ಪೌರ ಕಾರ್ಮಿಕರು, ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ವಿಮೆ ಮಾಡಿಸಲು ಸರ್ಕಾರ ಮೇಲೆ ಒತ್ತಡ ತರಲಾಗುವುದು  ಎಂದು ಹೇಳಿದರು.
  ಪ್ರತಿ ವರ್ಷ ಪಟ್ಟಣದಲ್ಲಿ ಜನ್ಮಭೂಮಿ ವೇದಿಕೆ ವತಿಯಿಂದ ನಡೆಸಲಾಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಈ ವರ್ಷ ರದ್ದುಪಡಿಸಲಾಗಿದೆ ಎಂದು ಹೇಳಿದರು.
  ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌, ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜಿ.ಎಸ್‌.ಶ್ರೀನಿವಾಸ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಅಪ್ಪಿರೆಡ್ಡಿ, ರಾಮಚಂದ್ರಪ್ಪ, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್ ರಾಘವೇಂದ್ರ ಪ್ರಕಾಶ್‌ ಇದ್ದರು.