HOLY ROSARY CHURCH, KUNDAPUR – 450 th JUBILEE SOUVENIR 2021

ದುಕ್ರಾ ಮಾಸ್ ವಜನ್ ಸಾರ್ಕೆಂ ನಾ,  ಚರಾಬ್, ವೋಬ್, ಹಾಡಾಂ ಚಡ್: ಜಾಗೋ ಗ್ರಾಹಕ್  ಜಾಗೋ ಗ್ರಾಹಕ್

JANANUDI.COM NETWORK

 

 

 

ದುಕ್ರಾ ಮಾಸ್ ವಜನ್ ಸಾರ್ಕೆಂ ನಾ,  ಚರಾಬ್, ವೋಬ್, ಹಾಡಾಂ ಚಡ್: ಜಾಗೋ ಗ್ರಾಹಕ್  ಜಾಗೋ ಗ್ರಾಹಕ್  

 

 

 

 

 

 

  ಎಪ್ರಿಲ್ 16:  ಆಜ್ ಕಾಲ್ ದುಕ್ರಾ ಮಾಸಾಚೆಂ ಮೋಲ್ ಕಿಲೋಕ್ 240 ಮ್ಹಣ್ತಾತ್ ಮಾಗಿರ್ ಧಾ ವೀಸ್ ರೂಪಯ್ ಉಣೆ ಕರುನ್ ದಿತಾತ್. ದುಕ್ರಾಚೊಂ ಪೋಸ್ , ಖಾಣ್ , ವಾಂವ್ಟ್, ಸಾಗಾಟ್ ಕಷ್ಟ್ – ನಷ್ಟಾ ನಿಮ್ತಿಂ ವರ್ಸಾಕ್ 5-10 % ಚಡಂವ್ಚೆ ಸಹಜ್‌. ಆನಿಂ ಹೆಂ ಸಕಾಲಿಕ್. ಪುಣ್ ಥೊಡ್ಯಾ ದಿಸಾಂ ಆದಿಂ ತೀನ್ ಕೀಲೊ ಮಾಸ್ (2 ಕಿ.ಲೋ ಆನಿಂ 1 ಕಿ.ಲೋ ಪ್ಯಾಕ್)  ಏಕಾ ಬೇಕರಿ ದುಕಾನಾ ಥಾವ್ನ್ ಹಾಡ್ನ್ ಆಯಿಲ್ಲೊಂ ಆನಿ ತ್ಯಾ ದುಕಾನಾಂತ್ ವಜನ್ ತೂಕ್ ಕರ್ಚೆಂ ಸ್ಕೇಲ್ ನಾತಲ್ಲೆಂ. ಘರಾ ಪಾವ್ತಚ್ ಮ್ಹಾಕಾ ಮಾಸ್ ಉಕಲ್ನ್ ಪಳೆಯ್ತಾನಾ ಇಲ್ಲೆಂ ಉಣೆಂ  ಆಸ್ಚೆಂ  ದುಬಾವ್ ಯೇವ್ನ್ ಆಮ್ಗೆರ್ ಆಸ್ಚ್ಯಾ ಸ್ಕೇಲಾಚೆರ್ ಜೊಕ್ತಾನಾ 2 ಕಿ.ಲೊ ಚ್ಯಾ ಪ್ಯಾಕೇಟಿಂತ್ 300 ಗ್ರಾಂ ಉಣೆಂ ಆಸಲ್ಲೆಂ. ತಕ್ಷಣ್ ಪಾಟಿಂ ವೆತಾನಾ ಮ್ಹಜ್ಯಾ ವಳ್ಕಿಚ್ಯಾ ಆಂಗ್ಡಿಂತ್ ಅನ್ಯೇಕ್ ಪಾವ್ಟಿ ಜೊಕ್ತಾನಾಂಯ್ 300 ಗ್ರಾಂ ಉಣೆಂ ದಾಕಯ್ಲೆಂ.‌ ತಕ್ಷಣ್ ಪಾಟಿಂ ದುಕ್ರಾಮಾಸಾಚ್ಯಾ ದುಃಖಾನಾಕ್ ವಚೊನ್ ಕಳಯ್ಲೆಂ , ಆನಿಂ ಮ್ಹಾಲಕ್ ಒಪ್ಪೊನ್ ದುಸ್ರಿ ಪ್ಯಾಕೆಟ್ ದಿಲಿ.

     ದೆಕುನ್ ಆಮ್ಚೆ ಅಭಿಮಾನಿ ಗ್ರಾಹಕಾಂಕ್  “ಜಾಗೋ ಗ್ರಾಹಕ್  ಗ್ರಾಹಕ್ ಜಾಗೋ “ ಮ್ಹಣನ್ ತೊ ಪ್ರಬುಧ್ ಗ್ರಾಹಕ್  ಜಾಗಂವ್ಚ್ಯಾ ಖಾತಿರ್  ಗ್ರಾಹಕಾನ್  ಜನನುಡಿ. ಡಾಟ್ ಕಾಂ. ಆಮ್ಕಾಂ ಪತ್ರ ಬರಯ್ಲಾ.

    ಭರ್ಪೂರ್ ದುಕ್ರಾಮಾಸಾಂಚೆ ವ್ಯಾರ್ ಕರ್ತಾನಾಂ ದುಕಾನಾಂತ್ ಏಕ್ ಲ್ಹಾನ್ ಸ್ಕೇಲ್ ದವ್ರುನ್ ಪಾರದರ್ಶಕ್ ವ್ಯಾರ್ ಕರುಂಕ್ ಕಿತೆಂ ಆಡ್ಕಳ್..??” ತೊ ವಿಚಾರ್ತಾ.  ಪೆಕೆಟ್ ಕರ್ತಾನಾ ಫರಾಮಶೆನ್ ಚಡ್ ಉಣೆ ಜಾತಾ ಯಾ ಜಾಯ್ ಮ್ಹಣ್ ಉಣೆಂ ಘಾಲುಂಕೀ ಪುರೊ. ಯಾ ತಾಂಚೋ ಸ್ಕೇಲ್ ಸಮಾ ನಾಂ ಆಸೋಂಕೀ ಪುರೊ, ಸಪ್ಲಾಯ್ ಕರ್ತೆಲ್ಯಾನಿ ಸ್ಕೇಲ್ ಜಾಯ್ ಮ್ಹಣನ್ ಎಜೆಶ್ಟ್ ಕರುಂಕಯಿ ಪುರೊ, ಪುಣ್ ವ್ಯಾರ್ ಕರ್ತೆಲ್ಯಾನಿ ಹರ್ಯೇಕ್ ದುಕಾನ್ ದಾರಾಂನಿ ಖಡ್ಡಾಯ್ ಜಾವ್ನ್ ದುಕಾನಾಂತ್ ಸ್ಕೇಲ್ (ವಜನ್ ಮಾಪ್ಚೆ ಮೇಶಿನ್) ದವರ್ನ್ ದೊಳ್ಯಾ ಮುಕಾರ್ ತೂಕುನ್ ಪಾರದರ್ಶಕ್ ವ್ಯಾರ್ ಕರೀಜೆ” ಮ್ಹಣ್ ವಿನಂತಿ ಕರ್ತಾ ತೊ ಪ್ರಬುದ್ದ್ ಗ್ರಾಹಕ್.

    ಸಬಾರ್ ಗ್ರಾಹಕ್ ದುಕಾನ್ ದಾರಾಚ್ಯಾ ವಳ್ಕಿಚೆಂ ಜಾಲ್ಯಾನ್ ದಾಕ್ಷೆಣೆಂಕ್ ಲಾಗೊನ್ ವೊಗೆಚ್ ರಾವ್ತಾತ್, ಆನಿಂ ಸಭಾರಾಂಕ್ ಉಣೆಂ ಆಸಲ್ಲೆಂ ಕಳಿತಚ್ಚ್ ಆಸಾನಾಂ! ಘರಾಂತ್ ಸ್ಕೇಲ್ ಯೀ ಆಸಾನಾಂ, ದೆಕುನ್ ಚತ್ರಾಯ್ ಕರಿಜೆ ಮ್ಹಣ್ತಾ ತೊ,  ಅಶೆಂ ಖಾಲಿ ದುಕ್ರಾ ಮಾಸ್ ವ್ಯಾರ್ ಕರ್ತಾಲೆ ಮಾತ್ರ್ ನ್ಹಯ್, ಹೇರ್  ವಸ್ತುಂ, ಖಾಣ್, ತರಕಾರಿ,  ವ್ಯಾರ್  ಕರ್ತಾಲೆಯಿ ವಜನಾಂತ್ ಮೋಸ್ ಕರ್ತಾಲೆ ಆಸಾತ್, ದೆಕುನ್ ಜರುರ್ ಘರಾಂತ್ ಏಕ್ ಕಿಚನ್ ಸ್ಕೇಲ್ ಆಸಾಜೆ.

     ಇತ್ಲೆಂ ಮಾತ್ರ್ ನ್ಹಯ್ ದುಕ್ರಾ ಪ್ಯಾಕೆಟ್ ಮಾಸ್ ಗ್ರಾಹಕಾಂಚೆ ದುರ್ಸೊಣೆ.  ತಾಂತುನ್  ಚರಾಬ್ ಚಡ್, ವೋಬ್ ಚಡ್, ಹಾಡಾಂ ಚಡ್, ಪಿಲಾಂ ಘಾಲ್ಲಿ ಬಾಯ್ಲ್ ದುಕ್ರಾಚೆಂ ಮಾಸ್” ಮ್ಹಣನ್  ಆನ್ಯೇಕ್ಲೊ  ಗ್ರಾಹಕ್ ದುರ್ಸಾತಾ. ಅಶೆಂ ಮ್ಹಾಕಾ ಜಾಲ್ಲೊ ಅನುಭವ್ ಹೆರಾಂಕ್ ಜಾಯ್ನಾಯೆ ಮ್ಹಣನ್ ತೊ ಬರಯ್ತಾ ಮ್ಹಣ್ತಾಂ ತೊ ಗ್ರಾಹಕ್.  

    ಹೆಂ ಲೇಖನ್ ಸರ್ವ್ ದುಕ್ರಾ ಮಾಸ್ ವ್ಯಾಪರಿಸ್ತಾಂಕ್ ಲಾಗೊನ್ ಬರಯ್ಲೆ ನ್ಹಯ್. ಆನಿ ಹಿ ಸಂಗತ್ ಸರ್ವ್ ದುಕ್ರಾ ಮಾಸ್ ದಂಧೊ ಕರ್ತೆಲ್ಯಾ ವ್ಯಾಪರಿಸ್ತಾಂಕ್ ತಶೆಂ  ಸ್ಕೇಲ್ ಆಸಲ್ಲ್ಯಾ ದುಕಾನ್ ದಾರಾಂಕ್ ಲಾಗೂ ಜಾಯ್ನಾ.  ಪ್ರಮಾಣಿಕ್ ಥರಾನ್ ದುಕ್ರಾ ಮಾಸ್ ವ್ಯಾರ್ ಕರ್ತೆಲೆಂ ಸಭಾರ್ ಜಣ್ ಆಸಾತ್. ತಾಂಕಾಂ ಆಮಿ ದುರ್ಸಾನಾಂವ್ ಶಹಭಾಸ್ ಮ್ಹಣ್ತಾಂವ್ ಪುಣ್ ಆಮಿ ದುರ್ಸೊಂಚೆ ನ್ಯಾಯ್ ನ್ಹಯ್ ಆಸಲ್ಯಾ ರೀತಿನ್ ವ್ಯಾರ್ ಕರ್ತೆಲ್ಯಾಂಕ್ ಮಾತ್ರ್.

    ಆನ್ಯೇಕ್ಲೊ ಮ್ಹಣ್ತಾಂ “ಡೀಪ್ ಪ್ರಿಜ್ಜಾಂತ್ ದವರ್ಲ್ಯಾ ಪ್ಯಾಕೆಟ್ ಮಾಸಾಚೆ, ಐಸ್ ಕೊಲ್ಡ್ ಮಾಸ್ ವಜನ್ ಕರ್ತಾನಾ,  ವಜನ್ ದಾಖಯ್ತಾನಾ, 100/150 ಗ್ರಾಮ್ ಚಡಚ್ ದಾಖಯ್ಜೆ, ಕಿತ್ಯಾಕ್ ತಾಂತುನ್ ಐಸ್  ಗಟ್ ಜಾವ್ನಾಸ್ತಾಂ  

    ದುಕ್ರಾಚೆ ವಜನ್ ಚಡ್ ಜಾಯ್ಜೆ ಮ್ಹಣನ್ ಪೊಸುನಂಚ್ ಆಸ್ತಾತ್ ಆನಿ ತೊ ಚರ್ಬೆಲ್ಲೊ ದುಕೊರ್ ಕಾತರ್ನ್ ಕಿಲ್ಯಾಚಿಂ ಪ್ಯಾಕೆಟಿಂ ಕರ್ತಾನಾ, ಎಕ್ಲ್ಯಾಕ್ ವೊಬ್, ಎಕ್ಲ್ಯಾಕ್ ಚರಾಬ್, ಆನ್ಯೇಕ್ಲ್ಯಾಕ್ ಹಡಾಂ ಮೆಳ್ತಾತ್. ಅಶೆಂ ಜಾಯ್ನಾಯೆ ಮ್ಹಣ್ಚೆ ಆಮ್ಚ್ಯಾ ಗ್ರಾಹಕಾಚಿಂ  ಅಭಿಪ್ರಾಯ್.  ಪಾಂಚ್ ಪಾವ್ಟಿ ಪೆಕೆಟ್ ಮಾಸ್ ವ್ಹೆಲ್ಯಾರ್ 1 -2 ಪಾವ್ಟಿ ಮಾತ್ರ್ ಮಾಸ್ ಇಲ್ಲೆಶೆಂ ಬೊರೆಂ ಮೆಳೊಂಕ್ ಸಾಧ್ಯ್ ಆಸ್ತಾಂ ತೇಂಯ್ ಲಕ್ಕ್ ಆಸ್ಲ್ಯಾರ್” ಮ್ಹಣ್ತಾಂ ತೊ.

    ಹೆಂ ಲೇಖನ್ ಖಂಯ್ಚಾಯಿ ಏಕ್  ನಿರ್ದಿಶ್ಟ್ ದುಕಾನಾಕ್ ಲಾಗೊನ್ ಬರಯ್ಲಿ ನ್ಹಯ್. ಆಮ್ಚ್ಯಾ ಕ್ರಿಸ್ತಾಂವಾಚಿ ಬ್ರಾಂಡ್ ದುಕೊರ್ ಮಾಸ್, ದೆಕುನ್ ಇಲ್ಲೆಶೆಂ ಬರೆ, ಜೊಕ್ತೆ,ಹಡಾಂ, ಮಾಸ್, ವೋಬ್, ಚರಾಬ್ ಮಿಕ್ಸ್ ಮಾಸ್  ಆನಿ ತಶೆಂ  ಸಾರ್ಕ್ಯಾ ವಜನಾಚೆ ಮಾಸ್ ದಿಯಾ ಮ್ಹಣನ್ ಗ್ರಾಹಕಾಂಚಿಂ ವಿನಂತಿ. ಜರ್ ವ್ಯಾರ್ ಕರ್ತಾಲೊ ಅಶೆಂ ವಜನ್ ಉಣೆ ದಿಂವ್ನ್ ಚೂಕ್ ಕೆಲಿ ಆನಿ ಗ್ರಾಹಕ್ ಚಾಳ್ವೊನ್  ತೂಕ ಮಾಫನ ಅಧಿಕಾರಿಂಕ್ ದೂರ್ ದಿಲೆಂ ತರ್ ತುಮ್ಕಾಂ ಕಷ್ಟಾಂಚೆ ಜಾಂವ್ಕ್ ಪಾವ್ತಾಲೆ.

 

 

ಶ್ರೀನಿವಾಸಪುರ:  ಎಬಿಎನ್‌ ಸಂಸ್ಥೆಯ ಮುಖ್ಯಸ್ಥ ಸುಧಾಕರ್‌ ಅವರ ಕುಟುಂಬದ ವತಿಯಿಂದ ತಾಲ್ಲೂಕಿನ 135 ಬಡ ಅರ್ಚಕರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ:  ಎಬಿಎನ್‌ ಸಂಸ್ಥೆಯ ಮುಖ್ಯಸ್ಥ ಸುಧಾಕರ್‌ ಅವರ ಕುಟುಂಬದ ವತಿಯಿಂದ ತಾಲ್ಲೂಕಿನ 135 ಬಡ ಅರ್ಚಕರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ
ಶ್ರೀನಿವಾಸಪುರ: ಪಟ್ಟಣದ ನರಸಿಂಹಸ್ವಾಮಿ ದೇವಾಲಯ ಹಾಗೂ ತಾಲ್ಲೂಕಿನ ಗನಿಬಂಡದ ವೆಂಕಟರಮನಸ್ವಾಮಿ  ದೇವಾಲಯದ ಆವರಣದಲ್ಲಿ ಬುಧವಾರ ಎಬಿಎನ್‌ ಸಂಸ್ಥೆಯ ಮುಖ್ಯಸ್ಥ ಸುಧಾಕರ್‌ ಅವರ ಕುಟುಂಬದ ವತಿಯಿಂದ ತಾಲ್ಲೂಕಿನ 135 ಬಡ ಅರ್ಚಕರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಲಾಯಿತು.
    ರಾಯಲ್ಪಾಡು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ರೆಡ್ಡಿ, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ಕೆ.ರಾಘವೇಂದ್ರ ಪ್ರಕಾಶ್‌, ವಿಶ್ವನಾಥಶಾಸ್ತ್ರಿ, ಮಖಂಡರಾದ ರಾಮಕೃಷ್ಣೇಗೌಡ, ಹರೀಶ್‌ ಯಾದವ್‌, ಶಿವಕುಮಾರ್‌, ಶಿವರಾಜ್‌, ಭಾಸ್ಕರ್‌, ವೈ.ಆರ್‌.ಶ್ರೀನಾಥ್‌, ನಾರಾಯಣಸ್ವಾಮಿ, ಶ್ರಿರಂಗಾಚಾರ್ಲು, ಶಂಕರ್‌ ತನುಷ್‌ ಗೌಡ, ಸುಹಾಸ್‌, ಮಧು ಇದ್ದರು.

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ 

JANANUDI.COM NETWORK
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ 
ಕೊರೊನ ವೈರಸ್ ನ ಲಾಕ್ ಡೌನ್ ನ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ತಮ್ಮ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸುಗಳನ್ನ ನಡೆಸುತ್ತಿದೆ. ಉಪನ್ಯಾಸಕರು ಮತ್ತು ಪ್ರಾದ್ಯಾಪಕರು ಆನ್ ಲೈನ್ ಕ್ಲಾಸ್ ಗಾಗಿ ಜೂಮ್, ಗೂಗಲ್ ಕ್ಲಾಸ್ ರೂಮ್ ನಂತಹ ಅಪ್ಲಿಕೇಶನ್ ಗಳನ್ನ ಉಪಯೋಗಿಸಿ ವಿದ್ಯಾರ್ಥಿಗಳಿಗೆ ಪ್ರತಿದಿನ ಬೋಧನೆ ನೀಡುತ್ತಿದ್ದಾರೆ.  ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವ ಸಲುವಾಗಿ ಕಾಲೇಜು ಯುಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದು, ಬೋಧಿಸಿದ್ದ ಎಲ್ಲಾ ಕ್ಲಾಸ್ ನ ವಿಡಿಯೋಗಳನ್ನ  ಇಲ್ಲಿ ವೀಕ್ಸಿಸಬಹುದು. ಈ ಲಾಕ್ ಡೌನ್ ಸಮಯದಲ್ಲಿ  ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕೂಡ  ಆಧುನಿಕ ವಿಷಯಗಳ ಮೇಲೆ ಸೆಮಿನಾರ್ ಮತ್ತು ಪ್ರಬಂಧ ಗಳನ್ನ  ಮಂಡಿಸುತಲಿದ್ದು  ಇದೊಂದು ಉತ್ತಮ ಬೆಳವಣಿಗೆಯನ್ನ ತೋರಿಸುತ್ತದೆ.
ಹಾಗೆಯೇ ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿಗಳು ಮನೆಯಲ್ಲೇ ಇದ್ದು ತಮ್ಮ ಮತ್ತು ಮನೆಯವರ ಅರೋಗ್ಯ ನೋಡಿಕೊಳ್ಳಲು ಉಪನ್ಯಾಸಕರು ಸಲಹೆ ನೀಡುತ್ತಾ ಕೊರೋನಾ ವಿರುದ್ಧ ಹೊರಡಲು ಸಹಕರಿಸುತ್ತಿದ್ದಾರೆ. 
ಬೋಧನೆಯ ಜೊತೆಗೆ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ರೂಪದಲ್ಲಿ ಅಸೈನ್ಮೆಂಟ್ ಗಳನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಅದನ್ನ ಪೂರ್ತಿ ಮಾಡಿ ಉಪನ್ಯಾಸಕರಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಕೂಡ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಸಂದೇಹ ಇದ್ದಲ್ಲಿ ಉಪನ್ಯಾಸಕರಿಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.

ಶ್ರೀನಿವಾಸಪುರ: ಡಾ. ಬಿ.ಆರ್‌. ಅಬೇಡ್ಕರ್‌ ಅವರ ಆಶಯ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಡಾ. ಬಿ.ಆರ್‌. ಅಬೇಡ್ಕರ್‌ ಅವರ ಆಶಯ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. 
  ಪಟ್ಟಣದ ಅಂಬೇಡ್ಕರ್‌ ಉದ್ಯಾನದಲ್ಲಿ ಮಂಗಳವಾರ ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಅಂಬೇಡ್ಕರ್‌ ಅವರು ದೇಶ ಕಂಡ ಮಹಾನ್‌ ಮೇಧಾವಿ. ಅವರ ಕ್ರಿಯಾಶೀಲತೆ ಹಾಗೂ ಸಾಮಾಜಿಕ ಬದ್ಧತೆಯಿಂದಾಗಿ, ಸರ್ವ ಜನಾಂಗದ ಅಭಿವೃದ್ಧಿಗೆ ಪೂರಕವಾದ ಸಂವಿಧಾನ ನೀಡಲು ಸಾಧ್ಯವಾಯಿತು ಎಂದು ಹೇಳಿದರು.
  ಪ್ರತಿಯೊಬ್ಬರೂ ಸಂವಿಧಾನವನ್ನು ಸ್ವೀಕರಿಸಿ ಪಾಲಿಸಬೇಕು. ಸಂವಿಧಾನ ನಮ್ಮ ಬದುಕನ್ನು ಹಸನಾಗಿಸುವ ಸಾಧನ. ಭಾರತೀಯರ ಜೀನವ ಧರ್ಮದ ಸಂಕೇತವೂ ಆಗಿದೆ. ಸಂವಿಧಾನದ ಆಶಯದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಹೊಣೆ ಎಂದು ಹೇಳಿದರು.
  ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿ ಆರ್‌.ನಾರಾಯಣಸ್ವಾಮಿ, ಪುರಸಭಾ ಸದಸ್ಯರಾದ ಬಿ.ವೆಂಕಟರೆಡ್ಡಿ, ರಾಜು, ನಾಗರಾಜ್‌, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಆರ್‌.ಜಿ.ನರಸಿಂಹಯ್ಯ, ಮಂಜುನಾಥರೆಡ್ಡಿ, ಮುಖಂಡರಾದ ಪೂಲ ಶಿವಾರೆಡ್ಡಿ, ಕೆ.ಶಿವಪ್ಪ, ರವಿ.ಸಂತೋಷ್‌, ಕೊರ್ನಹಳ್ಳಿ ಆಂಜಿ, ಹೊಗಳಗೆರೆ ಆಂಜಿ ಇದ್ದರು.

ಶ್ರೀನಿವಾಸಪುರ: ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.
  ಪಟ್ಟಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್‌ ಜಯಂತಿ ಸಮಾರಂಭದಲ್ಲಿ, ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಪ್ರಜಾಪ್ರಭುತ್ವದ ಉಳಿವು ಹಾಗೂ ಸಮಾಜದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಪೂರಕವಾದ ಸಂವಿಧಾನ ನೀಡಿದ ಅಂಬೇಡ್ಕರ್‌ ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತಹೊಳಿದು ಸರಿಯಲ್ಲ. ಅವರು ಸಮಾಜದ ಎಲ್ಲ ವರ್ಗದ ಜನರ ಗೌರಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
   ತಾಲ್ಲೂಕಿನಲ್ಲಿ 85 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು. ನೀರಿನ ಸಮಸ್ಯೆ ಅತಿಯಾಗಿ ಕಾಡುವ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಬೇಕು. ಒಟಿಪಿ, ಹೆಬ್ಬೆಟ್ಟು ಎಂದು ಕಾಡದೆ ಪಡಿತರ ವಸ್ತುಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಹೇಳಿದರು.
  ತಹಶೀಲ್ದಾರ್ ಎಸ್‌.ಎಂ.ಶ್ರೀನಿವಾಸ್‌, ಉಪ ತಹಶೀಲ್ದಾರ್ ಮಲ್ಲೇಶ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಎನ್‌.ಕೆ.ರಾಘವೇಂದ್ರ ಪ್ರಕಾಶ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಅಪ್ಪಿರೆಡ್ಡಿ, ಶ್ರೀನಿವಾಸಮೂರ್ತಿ, ದಲಿತ ಮುಖಂಡರಾದ ರಾಮಾಜಿನಮ್ಮ, ವರ್ತನಹಳ್ಳಿ ವೆಂಕಟೇಶ್‌, ಚಲ್ದಿಗಾನಹಳ್ಳಿ ಈೀರಪ್ಪ, ನಾಯಾಯಣಸ್ವಾಮಿ, ಶ್ರೀನಿವಾಸಮೂರ್ತಿ ಇದ್ದರು. 

ಕೊಲಾರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಡಾ|| ಅಂಬೇಡ್ಕರ್ ಜಯಂತಿ ಆಚರಣೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೊಲಾರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಡಾ|| ಅಂಬೇಡ್ಕರ್ ಜಯಂತಿ ಆಚರಣೆ
ಕೆಜಿಎಫ್ :ಭಾರತರತ್ನ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ರವರ 129ನೇ ಜನ್ಮದಿನಾಚರಣೆಯನ್ನು ಕೆಜಿಎಫ್‍ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಂಗಳವಾರದಂದು ಆಚರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಡಾ|| ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಡಾ|| ಅಂಬೇಡ್ಕರ್ ಅವರ ಆದರ್ಶ, ತತ್ವಗಳನ್ನು ಇಂದಿನ ಸಮಾಜದಲ್ಲಿ ಅಳವಡಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಅವರ ಅಧ್ಯಕ್ಷತೆಯಲ್ಲಿ ನಡೆದ ಡಾ|| ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಿ.ಕೆ. ಉಮೇಶ್, ಸಹಾಯಕ ಆಡಳಿತಾಧಿಕಾರಿ ಜಿ. ವಿಶ್ವನಾಥ, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಶಿವರಾಜ್ ಮುಧೋಳ್, ಚಂದ್ರಶೇಖರ್ ಹಾಗೂ ಇಲ್ಲಿನ ಪಿಎಸ್‍ಐ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.

ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರು ರಚಿಸಿರುವ ಕೊರೊನಾ ಜಾಗೃತಿ ಗೀತೆಗಳು ವೈರಲ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರು ರಚಿಸಿರುವ ಕೊರೊನಾ ಜಾಗೃತಿ ಗೀತೆಗಳು ವೈರಲ್ 
     
ಶ್ರೀನಿವಾಸಪುರ: ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರು ರಚಿಸಿರುವ ಕೊರೊನಾ ಜಾಗೃತಿ ಗೀತೆಯ ಎರಡು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.
‘ಕಾಣದಂತೆ ಕಾಡುತಿಹುದು ಪಾಪಿ ಕೊರೊನಾ , ಮನೆಯ ಬಿಟ್ಟು ಮಾರುದೂರ ಹೋಗದಿರೋಣ’ ಎಂದು ಪ್ರಾರಂಭವಾಗುವ ಗೀತೆಯನ್ನು ಶ್ರೀನಿವಾಸಪುರದ ಗಾಯಕಿ ಮಾಯಾ ಬಾಲಚಂದ್ರ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ವೇದಾಂತ್‌ ಶಾಸ್ತ್ರಿ ವೀಡಿಯೊದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಹಾಕಿ ಸಂಕಲಿಸಿದ್ದಾರೆ. ಅದೇ ಗೀತೆಯನ್ನು ಗಾಯಕ ಅಹನ್ಯ ಜಿ.ಪ್ರಭಾಕರರೆಡ್ಡಿ ಪ್ರತ್ಯೇಕವಾಗಿ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ.
  ಈ ಇಬ್ಬರೂ ಗಾಯಕರು ಹಾಡಿರುವ ವೀಡಿಯೊಗಳು ಕೊರೊನಾ ಚಿಂತೆಯಲ್ಲಿ ಮುಳುಗಿರುವ ಜನರ ಗಮನ ಸೆಳೆದಿವೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡುತ್ತಿರುವ ಈ ಹಾಡಿನ ಸಾಲುಗಳು ಪಟ್ಟಣ ಪ್ರದೇಶದಲ್ಲಿ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದ ಜನರ ಬಾಯಲ್ಲೂ ನಲಿದಾಡುತ್ತಿವೆ. ಕೊರೊನಾ ಜಾಗೃತಿ ಕಾರ್ಯಕ್ರಮಗಲ್ಲಿ ಈ ಗೀತೆಯನ್ನು ಹಾಡಲಾಗುತ್ತಿದೆ.
  ಕೊರೊನಾ ಬಗ್ಗೆ ಜನರಲ್ಲಿ ಭಯ ಬಿತ್ತದೆ, ಮೃದು, ಮಧುರ ಗಾಯನದ ಮೂಲಕ ಜಾಗೃತಿ ಉಂಟು ಮಾಡುವುದು ಈ ಗೀತೆಯ ವಿಶೇಷ. ‘ಗೀತೆ ರಚನೆ ಸೊಗಸಾಗಿದೆ. ಪ್ರಾಸ ಲಯಬದ್ಧವಾಗಿ ಅರ್ಥಪೂರ್ಣವಾಗಿದೆ. ಇಬ್ಬರೂ ಗಾಯಕರು ಚೆನ್ನಾಗಿ ಹಾಗೂ ವಿಭಿನ್ನವಾಗಿ ಹಾಡಿದ್ದಾರೆ’ ಎಂದು ಸಾಹಿತಿ ಟಿ.ಎಸ್‌.ನಾಗರಾಜಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಆರ್‌.ಚೌಡರೆಡ್ಡಿ
ಮಾಯಾ ಬಾಲಚಂದ್ರ

                            

   ಜಿ.ಪ್ರಭಾಕರರೆಡ್ಡಿ
                      
                              

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಿ- ಡಿ.ಕೆ.ಶಿವಕುಮಾರ್., ಅಧ್ಯಕ್ಷರು., ಕೆಪಿಸಿಸಿ.

JANANUDI.COM NETWORK

 

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಿ- ಡಿ.ಕೆ.ಶಿವಕುಮಾರ್., ಅಧ್ಯಕ್ಷರು., ಕೆಪಿಸಿಸಿ.

 

 

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಹಾಗೂ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್‌ಗಳ ಎಲ್ಲಾ ಪದಾದಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ:

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಏಪ್ರಿಲ್.14 ರಂದು, ಬೆಳಿಗ್ಗೆ 10 ಗಂಟೆಗೆ ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತಮ್ಮತಮ್ಮ ವಾಸಸ್ಥಳದಿಂದ ಯಾರೂ ಹೊರಬರದೆ, ಇರುವ ಸ್ಥಳದಲ್ಲಿಯೇ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ, ಈ ನಾಡಿನ ಸರ್ವ ಜಾತಿ, ಧರ್ಮಗಳ ಜನರಲ್ಲಿ ಐಕ್ಯತೆ, ಸಮಗ್ರತೆಯನ್ನು ಬೆಸೆದ ಅಂಬೇಡ್ಕರ್ ಸಂವಿಧಾನಕ್ಕೆ ಗೌರವ ಸಮರ್ಪಿಸಬೇಕಾಗಿ ವಿನಂತಿ.

– ಡಿ.ಕೆ.ಶಿವಕುಮಾರ್., ಅಧ್ಯಕ್ಷರು., ಕೆಪಿಸಿಸಿ.

 

ಭಾರತ ಸಂವಿಧಾನದ ಪೀಠಿಕೆ

 

“ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ,
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;ವನ್ನು
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;ವನ್ನು
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ;
ಗಳನ್ನು ದೊರಕಿಸಿ,
ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ನಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ.”
ಪೀಠಿಕೆಯು ಭಾರತದ ಸಂವಿಧಾನದ ಒಂದು ಅಂಗವಲ್ಲ; ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ, ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ ಸರ್ವೋಚ್ಛ

ಪೀಠಿಕೆಯ ಕೆಲವು ಪದಗಳ ನಿರೂಪಣೆ
ಸಾರ್ವಭೌಮ
ಸಾರ್ವಭೌಮ ಎಂಬ ಪದದ ಅರ್ಥ ಪರಮಾಧಿಕಾರ ಅಥಾವ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಭಾರತ ಇಲ್ಲ ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ.

ಸಮಾಜವಾದಿ
ಸಮಾಜವಾದಿ ಪದವು ಪೀಠಿಕೆಗೆ ೧೯೭೬ರಲ್ಲಿ ೪೨ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತತ್ತ್ವಾರ್ಥ ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ.

ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತಪದ್ಧತಿ ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು ಬಾಲಕಾರ್ಮಿಕ ನಿಷೇಧ ಮಸೂದೆ ಸೇರಿವೆ.

ಜಾತ್ಯತೀತ
ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ ೧೯೭೬ರ ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ. ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ.

ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ ೧೮ ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

ಗಣತಂತ್ರ
ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಗಣತಂತ್ರ ಎಂದರೆ ” ಒಂದು ರಾಷ್ಟ್ರದ ಮುಖ್ಯಸ್ಥರನ್ನು ಪ್ರತ್ಯೇಕ್ಷ ಅಥವಾ ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡುವುದಕ್ಕೆ ಗಣತಂತ್ರ” ಎನ್ನುವರು.

ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಕುಂದಾಪುರ, ಬೈಂದೂರು ತಾಲೂಕಿನ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ಯೋಜನೆ ರೂಪಿತವಾಗುತ್ತಿದೆ

JANANUDI.COM NETWORK

 

 

ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಕುಂದಾಪುರ, ಬೈಂದೂರು ತಾಲೂಕಿನ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ಯೋಜನೆ ರೂಪಿತವಾಗುತ್ತಿದೆ

 

 

ಕುಂದಾಪುರ, ಎ.13: ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಜನರು ಮನೆಯಿಂದ ರಸ್ತೆಗೆ ಬರುವುದನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ಏಪ್ರಿಲ್ 13 ಸೋಮವಾರದಿಂದ ಕುಂದಾಪುರ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಎಂದು ನೀಡಿರುವ ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಇಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ

   ಮೊದಲು ಈ ವ್ಯವಸ್ಥೆಯ ಕುರಿತಾಗಿ ಮೂರು ದಿನಗಳ ಕಾಲ ಜನರಿಗೆ ಮಾಹಿತಿ ನೀಡಿ ಸಂಪೂರ್ಣ ಮನವರಿಕೆ ಮಾಡಲಾಗುವುದು, ಬಳಿಕ ಸಂಪೂರ್ಣವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತಂದು ಜನರು ಮನೆಗಳಿಂದ ರಸ್ತೆಗೆ ಬರುವುದನ್ನು ತಡೆಯಲಾಗುವುದು ಎಂದು ಹೇಳಿದ್ದಾರೆ.

ಕುಂದಾಪುರ, ಬೈಂದೂರು, ಗಂಗೊಳ್ಳಿ, ಶಂಕರನಾರಾಯಣ, ಕುಂದಾಪುರ ಗ್ರಾಮಾಂತರ (ಕಂಡ್ಲೂರು), ಕೊಲ್ಲೂರು, ಕೋಟ, ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಕುಂದಾಪುರ ಪುರಸಭಾ ವ್ಯಾಪ್ತಿಗೆ ಇದು ಅನ್ವಯವಾಗುವುದಿಲ್ಲ.

ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳಿಗೆ ದಿನಸಿ ಮತ್ತು ಅವಶ್ಯಕ ಸಾಮಗ್ರಿಯನ್ನು ಪೂರೈಸಲು ವಾರ್ಡ್‌ಗೆ ಇಬ್ಬರಂತೆ ನೇಮಕ ಮಾಡಲಾಗಿದ್ದು ಅವರಿಗೆ ಕರೆ ಮಾಡಿದರೆ ಅವರು ದಿನಬಳಕೆಯ ವಸ್ತುಗಳನ್ನು ಮನೆಗಳಿಗೆ ತಲುಪಿಸುತ್ತಾರೆ.

   ಈ ವ್ಯವಸ್ಥೆಯ ಕುರಿತು ಮನವರಿಕೆ ಮಾಡಿ ಅವರ ವಾರ್ಡ್‌ನಲ್ಲಿ ಮನೆಗೆ ಅವಶ್ಯಕ ವಸ್ತುಗಳನ್ನು ಪೂರೈಸಲು ನೇಮಕಗೊಂಡಿರುವವರ ದೂರವಾಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಹೋಮ್ ಡೆಲಿವರಿ ಮಾಡುವ ಇಬ್ಬರಿಗೆ ಒಂದು ವಾಹನವನ್ನೂ ನೀಡಲಾಗುತ್ತದೆ. ವೈದ್ಯಕೀಯ ಅಥವಾ ಅತ್ಯಂತ ತುರ್ತು ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಗೆ ಬರದಂತೆ ಎಲ್ಲರಿಗೂ ತಾಕೀತು ಮಾಡಲಾಗುತ್ತದೆ. ಅನಗತ್ಯವಾಗಿ ಹೊರಬರುವವರ ಪೊಲೀಸ್ ಇಲಾಖೆ ಕ್ರಮ ತೆಗೆದು ಕೊಳ್ಳುತಿದ್ದು. ಹಾಗೆಯೆ ಇದು ಮುಂದುವರಿಯಲಿದೆ.

    ಎಂದಿನಂತೆ ಬೆಳಿಗ್ಗೆ 7 ರಿಂದ 11 ಗಂಟೆಯ ತನಕ ಈ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಗಳ ಗ್ರಾಮಗಳಲ್ಲಿ ಅವಶ್ಯಕ ವಸ್ತುಗಳ ಅಂಗಡಿ ತೆರೆದೇ ಇರಲಿದೆ. ಆದರೆ ಜನರಲ್ಲಿ ಕೊರೋನಾ ಕುರಿತು ಇನಷ್ಟು ಜಾಗೃತಿ ಮೂಡಿಸಿ ಎಚ್ಚರ ವಹಿಸುವಂತೆ ಮಾಡುವ ಸಲುವಾಗಿ ಹೋಮ್ ಡೆಲಿವರಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು ಹಳ್ಳಿಗಳಲ್ಲಿ ಎಲ್ಲರೂ ಈ ಹೋಮ್ ಡೆಲಿವರಿ ವ್ಯವಸ್ಥೆಯನ್ನು ಬಳಸಿಕೊಂಡು ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕೆಂಬುದು ಎಎಸ್‌ಪಿ ಹರಿರಾಮ್ ಶಂಕರ್ ಇವರ ಕೋರಿಕೆ.

.

  ಗ್ರಾಮಂತರ ಪ್ರದೇಶಗಳ ನಿಮ್ಮೂರಿನ ನಿಮ್ಮ ವಾರ್ಡ್‌ಗಳಲ್ಲಿ ಹೋಮ್ ಡೆಲಿವರಿಗೆ ಯಾರನ್ನು ಸಂಪರ್ಕಿಸಬೇಕೆಂಬ ಹೆಸರು, ಪೋನ್ ನಂಬರ್ ಇರುವ ಪಟ್ಟಿಯನ್ನು ಕೆಳಗಡೆ ಕೊಡಲಾಗಿದೆ.