HOLY ROSARY CHURCH, KUNDAPUR – 450 th JUBILEE SOUVENIR 2021

Beloved Bishop Camillo (Bishop of Kuwait Bahrain Qatar and Saudi Arabia) Passed away last night at 10 pm.

JANANUDI.COM NETWORK

 

Beloved Bishop Camillo (Bishop of Kuwait Bahrain Qatar and Saudi Arabia) Passed away last night at 10 pm. 

 

Fr.peter P.M.

Dear  Fathers,

With great pain I inform you the death of our beloved Bishop Camillo Bishop of Kuwait Bahrain Qatar and Saudi Arabia : Passed away last night at10 pm.

 

 

I got this information just now from Comboni Vicar General, he informed me he will inform me the details later. Please offer the special prayers for his soul , may Good Lord grant him eternal reward .With heartfelt pain and prayers.

Bishop Camillo was the Bishop of Kuwait Bahrain Qatar and Saudi Arabi

 

ಎ.ಪಿ.ಎಂ.ಸಿ ಯಲ್ಲಿ ಸೋಂಕು ನಿವಾರಣ ಯಂತ್ರ ಸ್ಥಾಪನೆ

 

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಎ.ಪಿ.ಎಂ.ಸಿ ಯಲ್ಲಿ ಸೋಂಕು ನಿವಾರಣ ಯಂತ್ರ ಸ್ಥಾಪನೆ

 

 

ಶ್ರೀನಿವಾಸಪುರ:- ಮಾವು ಸುಗ್ಗಿ ಮೇ 15 ರಿಂದ ಪ್ರಾರಂಭವಾಗಲಿದೆ ಇದಕ್ಕಾಗಿ ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ(ಎ.ಪಿ.ಎಂ.ಸಿ) ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಎ.ಪಿ.ಎಂ.ಸಿ ಅಧ್ಯಕ್ಷ ರಾಜೇಂದ್ರಪ್ರಸಾದ್ ಹೇಳಿದರು.ಅವರು ಇಂದು ಮಾರುಕಟ್ಟೆಯಲ್ಲಿ ಸೊಂಕು ನಿವಾರಕ ಸುರಂಗ ಉದ್ಘಾಟನೆ ಮಾಡಿದ ಅವರು ಈ ಸಂದರ್ಭದಲ್ಲಿ ಮಾತನಾಡಿ ಕೊರೋನಾ ಸೋಂಕು ಹರಡದಂತೆ ಅವಶ್ಯ ಕ್ರಮಗಳನ್ನು ಈಗಿನಿಂದಲೆ ತಗೆದುಕೊಳ್ಳುತ್ತಿದ್ದು ಇದಕ್ಕೆ ಸಂಬಂದಿಸಿದ ಇಲಾಖೆ ಅಧಹಿಕಾರಿಗಳೊಂದಿಗೆ ಕಾರ್ಯನಿರ್ವಹಿಸಲು ತಯಾರು ಇರುವುದಾಗಿ ಹೇಳಿದರು.ತೋಟಗಳಿಂದ ಮಾವು ತರುವಂತ ವಾಹನದ ಚಾಲಕ ಮತ್ತು ಮಾವಿನ ಮಾಲಿಕನಿಗೆ ಮಾತ್ರ ಮಾರುಕಟ್ಟೆ ಆವರಣದಲ್ಲಿ ಬರಲು ಅವಕಾಶ ಕಲ್ಪಿಸಲಾಗುವುದು ಎಂದ ಅವರು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಮಂಡಿಗೂ ನಡುವೆ ಅಂತರ ಇಡಲು ನಿರ್ಧರಿಸಲಾಗಿದೆ ಇದಕ್ಕಾಗಿ ಅವಶ್ಯ ಬಿದ್ದರೆ ಖಾಸಗಿ ಜಮೀನು ಪಡೆದು ನೋಂದಾಯಿತ ದಲ್ಲಾಲರಿಗೆ ಮಾವು ವಹಿವಾಟು ನಡೆಸಲು ಅವಕಾಶ ಕಲ್ಪಸಲಾಗಿವುದು ಎಂದರು.
ಮಾವು ರವಾಣೆಗೆ ಸಂಬಂದಪಟ್ಟಂತೆ ಹೊರರಾಜ್ಯಗಳಿಂದ ಆಗಮಿಸುವ ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲು ವಿಶೇಷ ಕ್ರಮ ತಗೆದುಕೊಂಡು ನಂತರ ಅವರಿಗೆ ಕೆಲಸ ಮಾಡಲು ಅವಕಾಶ ನೀಡಲಾಗುವುದು. ಮಾವು ಬೆಳೆಗಾರರು ತಮ್ಮ ಫಸಲನ್ನು ನೇರವಾಗಿ ಮಾರುಕಟ್ಟೆ ಮಾಡಲು ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಬೆಂಗಳೂರಿನ ಅಪಾರ್ಟಮೆಂಟ್ ಗಳ ಬಳಿ ಮಾರಾಟ ಮಾಡಲು ಅನಕೂಲ ಮಾಡಿಕೊಡಲಿದೆ ಹಾಗು ಮ್ಯಾಂಗೋ ಬೋರ್ಡ ವತಿಯಿಂದ ಬೆಳೆಗಾರರಿಗೆ ರಟ್ಟು ಪೆಟ್ಟಿಗೆಗಳನ್ನು ಮತ್ತು ಪ್ಲಾಸ್ಟಿಕ್ ಕ್ರೆಟ್ ಗಳನ್ನು ರಿಯಾತಿ ಧರದಲ್ಲಿ ನೀಡಲು ಒಪ್ಪಿಗೆ ನೀಡಿದೆ ಈ ಎಲ್ಲಾ ಸೌಲಭ್ಯಗಳನ್ನು ಮಾವು ಬೆಳೆಗಾರರು ಬಳಸಿಕೊಳ್ಳುವಂತೆ ಹೇಳಿದರು.
ಪುರಸಭೆ ಮುಖ್ಯಾಧಿüಕಾರಿ ಮೋಹನ್ ಕುಮಾರ್ ಮಾತನಾಡಿ ಹೊರರಾಜ್ಯದಿಂದ ಬರುವಂತ ಕೂಲಿಕಾರ್ಮಿಕರ ಅರೋಗ್ಯದ ಬಗ್ಗೆ ಹೆಚ್ಚು ನೀಗಾ ವಹಿಸಬೇಕು ಜೊತೆಗೆ ಹೊರರಾಜ್ಯದಿಂದ ಮಾವು ಸಾಗಿಸಲು ಬರುವಂತ ವಾಹನಗಳ ವಿಚಾರವಾಗಿ ಅಗತ್ಯ ಕ್ರಮ ತಗೆದುಕೊಂಡು ಪ್ರತಿ ವಾಹನಕ್ಕೂ ಸೊಂಕು ನಿವಾರಣೆ ಸಿಂಪಡಿಸಿ ಪಟ್ಟಣಕ್ಕೆ ಆಗಮಿಸಲು ಅವಕಾಶ ನೀಡುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ವಿಜಯ,ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಶ್ರೀನಿವಾಸ್,ಎ.ಪಿ.ಎಂ.ಸಿ ಕಾರ್ಯದರ್ಶಿ ವೇಣುಗೋಪಾಲ್, ನಿದೇಶಕರಾದ ನಾರಯಣಸ್ಡಾಮಿ, ರಾಜಣ್ಣ, ಯೋಗೇಂದ್ರಗೌಡ ಪುರಸಭೆ ಸದಸ್ಯ ಡಿಜೆಪಾಷ ಇದ್ದರು.

ಪುನರುತ್ಥಾನ ಗೊಂಡ ಯೇಸು ಸ್ವಾಮಿ ಸಂತೋಷ, ಸಮಾಧಾನ ಯಶಸ್ಸು ಹಾಗೆಯೇ ಸರ್ವ ಮನಕುಲದ ಒಳಿತಿಗಾಗಿ ಕೊರೊನಾ ವೈರಸ್ ನಿವಾರಣೆ ಮಾಡಲಿ:ಫಾ.ಸ್ಟ್ಯಾನಿ ತಾವ್ರೊ

JANANUDI.COM NETWORK

 

ಪುನರುತ್ಥಾನ ಗೊಂಡ ಯೇಸು ಸ್ವಾಮಿ ಸಂತೋಷ, ಸಮಾಧಾನ ಯಶಸ್ಸು ಹಾಗೆಯೇ ಸರ್ವ ಮನಕುಲದ ಒಳಿತಿಗಾಗಿ ಕೊರೊನಾ ವೈರಸ್ ನಿವಾರಣೆ ಮಾಡಲಿ:ಫಾ.ಸ್ಟ್ಯಾನಿ ತಾವ್ರೊ

 

ಕೊರೊನಾ ಮಾರಕ ಪೀಡೆಯಿಂದ ಸಂಪೂರ್ಣ ಲಾಕ್ ಡೌನ್ ಆದದ್ದರಿಂದ ಬಹಳ ಪವಿತ್ರವಾದ ಫಾಸಕ ಹಬ್ಬದ ಆಚರಣೆಯನ್ನು ಭಕ್ತರು ಚರ್ಚುಗಳಲ್ಲಿ ಸೇರಿ ಎರ್ಪಡಿಸಲು ಅಸಾಧ್ಯವಾಗಿ ಭಾರತಾದ್ಯಾಂತ ಕ್ರೈಸ್ತರು ಮನೆಯಲ್ಲೇ ಸಾಮಾಜಿಕ ಜಾಲಾ ತಾಣಗಳ ಮೂಲಕ ಧರ್ಮಗುರುಗಳ ಪೂಜೆಯನ್ನು ವಿಕ್ಷೀಸಿ ಅದರಂತೆ ದೇವವಾಕ್ಯಗಳಿಗೆ ಉತ್ತರಿಸುತ್ತಾ ಆಚರಿಸಿದರು.
ಅದರಂತೆ ಕುಂದಾಪುರದಲ್ಲಿ ಧರ್ಮಗುರುಗಳು ಮಾತ್ರ ವಯಕ್ತಿಕವಾಗಿ ಪಾಸ್ಕ ಹಬ್ಬದ ಬಲಿದಾನವನ್ನು ಅರ್ಪಿಸಿದರು. 450 ವರ್ಷದ ಚರಿತೆಯುಳ್ಳ ಕುಂದಾಪುರ ರೋಜರಿ ಮಾತ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮಾಧ್ಯಮದ ಮೂಲಕ ಸಂದೇಶ ನೀಡಿದ್ದಾರೆ.
‘ಪುನರುತ್ಥಾನ ಗೊಂಡ ಯೇಸು ಸ್ವಾಮಿ ನಿಮಗೆ ಸಂತೋಷ, ಸಮಾಧಾನ ಯಶಸ್ಸು ಹಾಗೆಯೇ ಸರ್ವ ಮನಕುಲದ ಒಳಿತಿಗಾಗಿ ಕೊರೊನಾ ವೈರಸ್ ನಿವಾರಣೆ ಮಾಡಲಿ. ನಾವೂ ಕೂಡ ಈ ಮಹಾಮಾರಿ ಸಾಂಕ್ರಮಿಕ ರೋಗವು ಹರಡದಂತೆ, ಇದಕ್ಕೆ ಯಾರೂ ಬಲಿಯಾಗದಂತೆ ನಾವು ಜಾಗ್ರತೆಯನ್ನು ಮಾಡೋಣ. ವೀಶೆಷವಾಗಿ ನಮ್ಮ ನೆರೆ ಹೊರೆಯವರು ಕಷ್ಟದಲ್ಲಿ, ಉಪವಾಸ ಇದ್ದರೆ ಅವರಲ್ಲಿ ನಾವು ನಾವು ದಯೆ ತೊರೋಣ’ ಎಂದು ಅವರು ಹೇಳಿದರು
‘ಪುನರುತ್ಥಾನ ಗೊಂಡ ಯೇಸು ನಮಗೆ ಆದರ್ಶ,ತಮ್ಮ ಪಿತನ ಇಚ್ಚೆಯಂತ್ತೆ ಮನುಕುಲದ ಪಾಪದ ಕತ್ತಲೆಯಿಂದ, ಸೈತಾನನ ಮತ್ತು ಮ್ರತ್ಯುವಿನ ಪಾಶದಿಂದ ಮನುಕುಲ ಬಿಡುಗಡೆ ಹೊಂದಲು ಶಿಲಿಭೆಯ ಮರಣದ ಮುಖಾಂತರ ತನ್ನನ್ನು ಬಲಿ ಅರ್ಪಿಸಿಕೊಂಡ. ಯೇಸು ವಿದೇಯನಾಗಿ ಬಾಳಿದ, ಯೇಸುವಿನ ವಾಗ್ದಾನದಂತೆ ಪಿತನು ಯೇಸುವನ್ನು ಪುನರುತ್ಥಾನ ಗೊಳಿಸಿದ, ಮತ್ತು ಇಂದು ನಮ್ಮ ನಡುವೆ ಆತ ಜೀವಂತವಾಗಿದ್ದಾನೆ’
‘ಪುನರುತ್ಥಾನ ಗೊಂಡ ಜೀವಂತ ಯೇಸು ನಮಗೆ ಹೊಸದಾಗಿ ಜೀವ ತುಂಬುತ್ತಾನೆ, ಸಮಾಧಾನ ನೀಡುತ್ತಾನೆ, ಧೈರ್ತ ತುಂಬುತ್ತಾನೆ, ಜಯವನ್ನು ನೀಡುತ್ತಾನೆ. ಆತನು ನಮಗೆ ನೀಡಿದ ಪವಿತ್ರ ಆತ್ಮದೊಂದಿಗೆ ಬೆರೆತು ನಾವು ಭಾಗ್ಯವಂತ, ಕ್ರಪಾಪೂರಿತಾ ಜೀವನವನ್ನು ಜಿವಿಸೋಣ’ ಎಂದು ಅವರು ತಮ್ಮ ಸಂಗಡಿಗರಾದ ಧರ್ಮಗುರು ವಂ|ವಿಜಯ್ ಡಿಸೋಜಾ ಮತ್ತು ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಮಾರ್ಟಿಸ್ ಭಕ್ತರಿಗೆ ಫಾಸ್ಕ ಹಬ್ಬದ ಸಂದೇಶವನ್ನು ನೀಡಿದ್ದಾರೆ

ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್‍ನಿಂದ ಮರಾಠಿ, ಕಾರ್ಮಿಕ ಸಮುದಾಯಗಳಿಗೆ ನೆರವು

JANANUDI.COM NETWORK

 

ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್‍ನಿಂದ ಮರಾಠಿ, ಕಾರ್ಮಿಕ ಸಮುದಾಯಗಳಿಗೆ ನೆರವು 

 

 

 

ಕುಂದಾಪುರ, ಎ.12 ಹಟ್ಟಿಯಂಗಡಿ, ಹೊಸಾಡು, ಮುಳ್ಳಿಕಟೆ, ಬಿದ್ಕಲ್‍ಕಟ್ಟೆ, ಅಮಾಸೆಬೈಲು ಮುಂತಾದ ಹೆದ್ದಾರಿ ಬದಿಯಲ್ಲಿ ಚಪ್ಪರ ಕಟ್ಟಿಕೊಂಡು ವಾಸಿಸುತ್ತಿರುವ ಉತ್ತರ ಕನ್ನಡ ಮೂಲದ ಮರಾಠಿ ಮಾತೃ ಭಾಷೆಯ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೆ ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್ ಮೂಲಕ ನೆರವು ನೀಡಲಾಯಿತು.
ತಹಶೀಲ್ದಾರ್ ತಿಪ್ಪೆಸ್ವಾಮಿ ಮಾರ್ಗದರ್ಶನದಲ್ಲಿ ಇವರಿಗೆ ಅಕ್ಕಿ, ಬೇಳೆ, ಎಣ್ಣೆ ಸಾಂಬಾರು, ಸಾರು ಹುಡಿಗಳು ಮುಂತಾದ ನಿತ್ಯೋಪಯೋಗಿ ಆಹಾರ ವಸ್ತುಗಳನ್ನು ಒದಗಿಸಲಾಗಿದೆ. ಕಂದಾಯ ಇಲಾಖೆಯ ಸಹಕಾರವನ್ನು ಇವರು ಮುಕ್ತಕಂಠದಿಂದ ಹೊಗಳಿದ್ದಾರೆ. ಸುಮಾರು 400 ಕಟುಂಬಗಳಿಗೆ ದಿನಸಿ ವಸ್ತುಗಳನ್ನು ಗಿಳಿಯರು ಕುಶಲಹೆಗಡೆ ಟ್ರಸ್ಟ್‍ನಿಂದ ಒದಗಿಸಲಾಗಿದೆ.

ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಕುಂದಾಪುರದಲ್ಲಿ ನಿತ್ಯ ಅನ್ನದಾನ

JANANUDI.COM NETWORK

 

ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಕುಂದಾಪುರದಲ್ಲಿ ನಿತ್ಯ ಅನ್ನದಾನ

 

ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಪ್ರತಿನಿತ್ಯ, ಅನ್ನದಾನ ಮಾಡುವ ವಿಶೇಷ ಸೇವಾ ಕಾರ್ಯಕ್ರಮ ಅನುಷ್ಟಾನಗೊಳಿಸುತ್ತಿದ್ದು, ಕುಂದಾಪುರ ಪರಿಸರದಲ್ಲಿ ಪ್ರತಿನಿತ್ಯ 120 ಜನರಿಗೆ ಮಧ್ಯಾಹ್ನ , ರಾತ್ರಿ ಊಟ ಒದಗಿಸುತ್ತಿದೆ.
ವಾಹನಗಳಲ್ಲಿ ಅನ್ನ, ಸಾಂಬಾರು, ಸಾರು, ಉಪ್ಪಿನಕಾಯಿ ಮುಂತಾದ ಪದಾರ್ಥಗಳನ್ನು ತುಂಬಿಕೊಂಡು ತಟ್ಟೆಯಲ್ಲಿ ಊಟ ವಿತರಿಸಲಾಗುತ್ತಿದೆ. ತಾಲ್ಲೂಕು ತಹಶೀಲ್ದಾರ್ ಮಾರ್ಗದರ್ಶನ ದೊಂದಿಗೆ ಈ ಕಾರ್ಯಕ್ರಮದಲ್ಲಿ ಸಿಟಿ ಜೇಸಿಸ್‍ನಅಧ್ಯಕ್ಷ ನಾಗೇಶ್ ನಾವುಡ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ ನಾವುಡ, ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್‍ನ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ. ಕೆ.ನಾರಾಯಣ, ಪಾಲ್ಗೊಂಡಿದ್ದರು.

ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಅನಾಥರಿಗೆ: ಹಿರಿಯರಾದ ಕೆ.ಜಿ.ರಮಾನಂದ ಊಟದ ವ್ಯವಸ್ಥೆ ಮಾಡಿದರು

JANANUDI.COM NETWORK

ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಅನಾಥರಿಗೆ: ಹಿರಿಯರಾದ ಕೆ.ಜಿ.ರಮಾನಂದ ಊಟದ ವ್ಯವಸ್ಥೆ ಮಾಡಿದರು

 

 

ಕುಂದಾಪುರ ಎ. 11.ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಹಲವಾರು ಜನ ವಿವಿಧ ರೀತಿಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವು ವಲಸೆ ಕೂಲಿ ಕಾರ್ಮಿಕರು ಅತಂತ್ರ ಸ್ಥಿಯಲ್ಲಿದ್ದು ಹಸಿವೆಯಿಂದ ಇದ್ದಾರೆ. ಕೆಲವರು ಯಾವುದೋ ಕೆಲಸಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಹೋಟೆಲು ತಿನ್ನುವ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದವರಿದ್ದಾರೆ , ಕೆಲಸ ಕಾರ್ಯಾಕ್ಕೆ ಹೋಗಿ ಬರುವಂತ ಜನರಿಗೆ ಊಟ ಇಲ್ಲದೆ ಇದ್ದವರಿದ್ದಾರೆ, ಹಾಗೇ ಬಸ್ ಸ್ಟ್ಯಾಂಡ್ ಮತ್ತಿತರ ಕಡೆ ಇರುವ ಅನಾಥರಿದ್ದಾರೆ. ಇಂತವರಿಗಾಗಿ ಕುಂದಾಪುರ  ಪುರಸಭಾ ವ್ಯಾಪ್ತಿಯ ಚಿಕ್ಕನಸಾಲು ರಸ್ತೆ ವಾರ್ಡಿನ ಕಾಂಗ್ರೆಸ್ ಮುಖಂಡ, ಹಿರಿಯ ನಾಗರಿಕ ವೇದಿಕೆಯ ಮಾಜಿ ಅಧ್ಯಕ್ಷರಾದ ಕೆ.ಜಿ,ರಮಾನಂದ   ನಿನ್ನೆ ದಿನ (10-4-2020) ಮಧ್ಯಾನದ ಊಟದ ವ್ಯವಸ್ಥೆಯನ್ನು  ಮಾಡಿದರು.

ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಅನಾಥರಿಗೆ: ಕೆ.ಪಿ ಅರುಣ್‌ರವರ  ಮಿತ್ರರರಾದ    ಕೆ.ಮದುಕರ ಮತ್ತು   ಆಶಾಲತಾ ದಂಪತಿ ದಂಪತಿಗಳಿಂದ ಊಟದ ವ್ಯವಸ್ಥೆ ಮಾಡಿದರು.

JANANUDI.COM NETWORK

 

ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಅನಾಥರಿಗೆ: ಕೆ.ಪಿ ಅರುಣ್‌ರವರ  ಮಿತ್ರರರಾದ    ಕೆ.ಮದುಕರ ಮತ್ತು   ಆಶಾಲತಾ ದಂಪತಿ ದಂಪತಿಗಳಿಂದ ಊಟದ ವ್ಯವಸ್ಥೆ ಮಾಡಿದರು.

 

 

ಕುಂದಾಪುರ, ಎ.8: ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಹಲವಾರು ಜನ ವಿವಿಧ ರೀತಿಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವು ವಲಸೆ ಕೂಲಿ ಕಾರ್ಮಿಕರು ಅತಂತ್ರ ಸ್ಥಿಯಲ್ಲಿದ್ದು ಹಸಿವೆಯಿಂದ ಇದ್ದಾರೆ. ಕೆಲವರು ಯಾವುದೋ ಕೆಲಸಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಹೋಟೆಲು ತಿನ್ನುವ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದವರಿದ್ದಾರ್, ಕೆಲಸ ಕಾರ್ಯಾಕ್ಕೆ ಹೋಗಿ ಬರುವಂತ ಜನರಿಗೆ ಊಟ ಇಲ್ಲದೆ ಇದ್ದವರಿದ್ದಾರೆ, ಹಾಗೇ ಬಸ್ ಸ್ಟ್ಯಾಂಡ್ ಮತ್ತಿತರ ಕಡೆ ಇರುವ ಅನಾಥರಿದ್ದಾರೆ. ಇಂತವರಿಗಾಗಿ  ಪುರಸಭಾ ವ್ಯಾಪ್ತಿಯ ಚಿಕ್ಕನಸಾಲು ರಸ್ತೆ ವಾರ್ಡಿನ ಕಾಂಗ್ರೆಸ್ ಮುಖಂಡ, ಮೈಲಾರೇಶ್ವರ ಯುವಕ ಸಂಘದ ಮಾಜಿ ಅಧ್ಯಕ್ಷ ಕೆ.ಪಿ ಅರುಣ್‌ರವರು ತಮ್ಮ ಪತ್ನಿಯ ಜೊತೆ ಊಟ ಸಿದ್ದ ಪಡಿಸಲು ಆರಂಭಿಸಿದ್ದು  ನಿನ್ನೆ ದಿನ ಮಧ್ಯಾನದ ಊಟದ ವ್ಯವಸ್ಥೆಯನ್ನು ಕಾಂಗ್ರೆಸ್ ಕಾರ್ಯಕರ್ತ  ಕೆ.ಪಿ ಅರುಣ್‌ರವರ ಮಿತ್ರರಾದ   ಕೆ.ಮದುಕರ ಮತ್ತು   ಆಶಾಲತಾ ದಂಪತಿ ದಂಪತಿಗಳು ಮಾಡಿದರು.

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಲಾಕ್‌ ಡೌನ್‌ ಇರುವುದರಿಂದ ಏ.14 ರಂದು ಅಂಬೇಡ್ಕರ್‌ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು : ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಲಾಕ್‌ ಡೌನ್‌ ಇರುವುದರಿಂದ ಏ.14 ರಂದು ಅಂಬೇಡ್ಕರ್‌ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು : ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ 
ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಲಾಕ್‌ ಡೌನ್‌ ಇರುವುದರಿಂದ ಏ.14 ರಂದು ಅಂಬೇಡ್ಕರ್‌ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಹೇಳಿದರು.
  ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಣೆ ಕುರಿತು ಚರ್ಚಿಸಲು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ 
ಮಾತನಾಡಿ, ಏ.14 ರ ಬೆಳಿಗ್ಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿಗಳಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಿ, 9.30 ಕ್ಕೆ ಮಿನಿ ವಿಧಾನ ಸೌಧದ ಮುಂದೆ ಅಂಬೇಡ್ಕರ್‌ ಉದ್ಯಾನದಲ್ಲಿ ಸೇರಬೇಕು. ಅಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು ಎಂದು ಹೇಳಿದರು.
  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘನೆಗಳ ಮುಖಂಡರು ಹಾಗೂ ಪಟ್ಟಣದ ನಾಗರಿಕರು ಸಭೆಯಲ್ಲಿ ಭಾಗವಹಿಸಿದ್ದರು.

ಬೀಜಾಡಿ: ಕುಂದಾಪುರದ ಶಾಸಕರ ದಿನಸಿ ಕಿಟ್ ವಿತರಣೆ

ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ

 

ಬೀಜಾಡಿ: ಕುಂದಾಪುರದ ಶಾಸಕರ ದಿನಸಿ ಕಿಟ್ ವಿತರಣೆ 

 

ಬೀಜಾಡಿ: ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಇಲ್ಲದವರಿಗೆ ಕೊಡಮಾಡಿದ 25 ಪಡಿತರ ಕಿಟ್‍ನ್ನು ಶುಕ್ರವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್, ಮಂಜುನಾಥ ಕುಂದರ್, ಬಸವ ಕುಂದರ್, ಮನೀಷ್ ಶಿರಿಯಾನ್, ಸತ್ಯ ತಿಂಗಳಾಯ, ನಾಗೇಶ್, ಪ್ರವೀಣ್, ಉದಯ ಕಾಂಚನ್, ಸಚಿನ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು.