HOLY ROSARY CHURCH, KUNDAPUR – 450 th JUBILEE SOUVENIR 2021

ಹಳೆ ಆದರ್ಶ ಆಸ್ಪತ್ರೆ ಐಸೋಲೇಶನ್ ವಾರ್ಡ್ ಆಗಿ ಮಾರ್ಪಾಡಾಗಿದ್ದು ಇದೀಗ ಇಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರ ಉದ್ಘಾಟನೆ

JANANUDI.COM NETWORK

 

 

ಹಳೆ ಆದರ್ಶ ಆಸ್ಪತ್ರೆ ಐಸೋಲೇಶನ್ ವಾರ್ಡ್ ಆಗಿ ಮಾರ್ಪಾಡಾಗಿದ್ದು ಇದೀಗ ಇಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರ ಉದ್ಘಾಟನೆ 

 

 

ಕುಂದಾಪುರ, ಎ.19: ಸ್ಥಳಿಯ ಆದರ್ಶ ಆಸ್ಪತ್ರೆ ತನ್ನ ಸಂಗಮ್  ಸೇತುವೆ ಹತ್ತಿರ ನೂತನ  ಕಟ್ಟಡದಲ್ಲಿ  ತನ್ನ ಕಾರ್ಯವ್ಯಾಪ್ತಿಯನ್ನು ಆರಂಭಿಸಿ ಕೆಲವು ತಿಂಗಳುಗಳೇ ಆಗಿದ್ದು. ಈ ಆಸ್ಪತ್ರೆಯ ಹಳೆ ಕಟ್ಟಡವನ್ನು ಕೊರೊನಾ ಐಸೋಲೇಶನ್ ವಾರ್ಡ್ ಆಗಿ ಮಾರ್ಪಡಲು ಆಡಳಿತ ಮಂಡಳಿ ಬಿಟ್ಟು ಕೊಟ್ಟಿದ್ದು, ಇದೀಗ ಇಲ್ಲಿ ಕೊರೊನಾ ಶಂಕೆಯ ಗಂಟಲು ದ್ರವ ಪರೀಕ್ಷಾ ಕೇಂದ್ರವನ್ನು ಕುಂದಾಪುರ ಸಹಾಯಕ ಆಯುಕ್ತರಾದ ಕೆ.ರಾಜು ಉದ್ಘಾಟಿಸಿದರು.

   ಇದನ್ನು ರೋಟರಿ, ಕುಂದಾಪುರ, ಸಿದ್ದಾಪುರ   ವೆಲ್ ಫೇರ್‍  ಚಾರಿಟೇಬಲ್ ಟ್ರಸ್ಟ್ ವತಿಯಿಂದ 40 ಸಾವಿರ ವೆಚ್ಚದ ಈ ಉಪಕರಣೆಯನ್ನು ನೀಡಿದ್ದಾರೆ. ಈ ಸಂದರ್ಭ  ಕುಂದಾಪುರ ತಾಲೂಕು ಆರೋಗ್ಯಧಿಕಾರಿ ಡಾ|ನಾಗಭೂಶಣ್ ಉಡುಪ, ರೋಟರಿ ಕ್ಲಬ್ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ ಮಾತನಾಡಿದರು.

    ಈ ಸಂದರ್ಭದಲ್ಲಿ ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಡಾ|ರಾಜಾರಾಮ್ ಶೆಟ್ಟಿ , ಕುಂದಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ|ರೊಬರ್ಟ್ ರೆಬೆಲ್ಲೊ, ಫಿಜಿಶಿಯನ್  ಡಾ|ನಾಗೇಶ್ ಮತ್ತಿ ಇತರ ವೈದ್ಯರು ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

ಕೊರೊನಾ ತಡೆ ಮತ್ತು ನಿಯಂತ್ರಣ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಸಚಿವ ಶ್ರೀನಿವಾಸ ಪೂಜಾರಿಯವರಿಂದ ವಿವಿಧ ಇಲಾಖಾ ಇಲಾಖೆಗಳಿಂದ

JANANUDI.COM NETWORK

 

 

ಕೊರೊನಾ ತಡೆ ಮತ್ತು ನಿಯಂತ್ರಣ ಕೈಗೊಂಡಿರುವ ಕ್ರಮಗಳ ಪರಿಶೀಲನೆ

ಸಚಿವ ಶ್ರೀನಿವಾಸ ಪೂಜಾರಿಯವರಿಂದ ವಿವಿಧ ಇಲಾಖಾ ಇಲಾಖೆಗಳಿಂದ

 

 

 

ಕುಂದಾಪುರ,ಎ. 18: ಧಾರ್ಮಿಕ ದತ್ತಿ ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ತಡೆ ಹಾಗೂ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮ.ಗಳ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ ಬಗ್ಗೆ ಕುಂದಾಪುರ ಮತ್ತು ಬೈಂದೂರಿನ ತಾಲೂಕುಗಳ ಕೊರೊನಾ ತೊಂದರೆಗಾಗಿ ಸಹಕಾರ  ಸೇವೆ ಸಲ್ಲಿಸುವ ವಿವಿಧ  ಸರಕಾರಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು

   ಅದರಲ್ಲಿ ಪ್ರಮುಖವಾಗಿ ಆರೋಗ್ಯ ಇಲಾಖೆಯ, ಪೊಲೀಸ್ ಇಲಾಖೆಯ, ಬಂದರು ಮೀನುಗಾರಿಕೆ ಇಲಾಖೆ, ಆಹಾರ ಇಲಾಖೆ,ಕಾರ್ಮಿಕ ಇಲಾಖೆ, ತೋಟಗಾರಿಕೆ ಇಲಾಖೆ, ಹೀಗೆ ಸುಮಾರು 17 ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಸಚಿವರ ಪ್ರಶ್ನೆಗೆ ಉತ್ತರ ನೀಡಿದರು.

   ಸಚಿವರು ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮಗಳು ಕೈಗೊಳ್ಳಬೇಕು ಎನ್ನುತ್ತಾ ಆಶಾ ಕಾರ್ಯಕರ್ತರು ಎಲ್ಲಾ ಮನೆಗಳಿಗೆ ಹೋಗಿ ಪರಿಶೀಲನೆ ಮಾಡಿದ್ದಾರ ಎಂದು ಕೇಳಿದರು,  ಆಹಾರ, ತೋಟಗಾರಿಕೆ, ಪಡಿತರ, ಕಾರ್ಮಿಕ, ವಲಸೆಗಳ ಬಗ್ಗೆ ವಿಚಾರ ನಡೆಸಿದರು. ಮೀನುಗಾರಿಕೆಗೆ ಎಷ್ಟು ಬೊಟುಗಳು ಹೋಗುತ್ತಿವೆಯೆಂದು ತಿಳಿದುಕೊಂಡರು.  ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ರೈತರಿಗೆ ತೊಂದರೆಯಾದಂತೆ ನೋಡಿ ಕೊಳ್ಳಬೇಕು, ಬೀಜ ಬಿತ್ತನೆಗೆ ತೊಂದರೆಯಾಗಬಾರದು’ ಎಂದು ಎಚ್ಚರಿಸಿದರು.

     ಪರಿಶೀಲನೆ ಬಳಿಕ “ಕೊರೊನಾ ಪ್ರಪಂಚದ ಸಮಸ್ಯೆಯಾಗಿದ್ದು  ಪ್ರಪಂಚಕ್ಕೆ ಮಾಹಾ ಮಾರಿಯಾಗುತ್ತಾ ಇದೆ. ನಮ್ಮ ರಾಜ್ಯದ ನೆರೆ ರಾಜ್ಯದಲ್ಲಿ ಕೊರೊನಾದ ಪೀಡೆ ಅತಿಯಾಗಿದ್ದುದರಿಂದ ನಾವು ನಮ್ಮ ರಾಜ್ಯದ ಘಡಿಗಳನ್ನು ಮುಚ್ಚಬೇಕಾಯ್ತು. ಅಲ್ಲಿಂದ ನಮಗೆ ಒತ್ತಡ ಇದೆ, ಆದರೆ ಘಡಿ ತೆರೆವು ಮಾಡಿದರೆ ನಮಗೆ ಅಕಾಂತ ಮತ್ತು ಆಪತ್ತು ಕಾದಿದೆ.  ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಉಡುಪಿ ಜಿಲ್ಲೆಯ ಪರಿಸ್ಥಿತಿ ಉತ್ತಮವಿದೆ. ಅದಕ್ಕಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ನಾವು ಅಭಿನಂದನೆಗಳನ್ನು ಸಲ್ಲಿಸಬೇಕು’ ಹೇಳುತ್ತಾ ನಮ್ಮ ಸರಕಾರ ಎಲ್ಲಾ ಇಲಾಖೆಗಳಿಗೂ ಅಗತ್ಯ ಬೀಳುವಂತಹ ಸಮಸ್ಯೆಗಳಿಗೆ ಎಲ್ಲಾ ರೀತಿಯಿಂದ ಸ್ಪಂದಿಸುತ್ತೇವೆ’ ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ  ಸಹಾಯಕ ಜಿಲ್ಲಾಧಿಕಾರಿ ರಾಜು.ಕೆ ಹಾಜರಿದ್ದರು

ಚೆಕ್‌ ಪೊಸ್ಟ್‌ಗಳಲ್ಲಿ ಚಲನ ವಲನದ ಮೇಲೆ ತೀವ್ರ ನಿಗಾ ಇಡಬೇಕು-  ಜಿಲ್ಲಾಧಿಕಾರಿ ಸತ್ಯಭಾಮ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಚೆಕ್‌ ಪೊಸ್ಟ್‌ಗಳಲ್ಲಿ ಚಲನ ವಲನದ ಮೇಲೆ ತೀವ್ರ ನಿಗಾ ಇಡಬೇಕು-  ಜಿಲ್ಲಾಧಿಕಾರಿ ಸತ್ಯಭಾಮ.
ಶ್ರೀನಿವಾಸಪುರ:  ಚೆಕ್‌ ಪೊಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಜನರು ಹಾಗೂ ವಾಹನಗಳ ಚಲನ ವಲನದ ಮೇಲೆ ತೀವ್ರ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಸೂಚಿಸಿದರು.
ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಸಮೀಪ  ನಿರ್ಮಿಸಲಾಗಿರುವ ಅಂತರ ರಾಜ್ಯ ಚೆಕ್‌ ಪೋಸ್ಟ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಕೃಷಿ ಉತ್ಪನ್ನಗಳು ಹಾಗೂ ಕೃಷಿಗೆ ಪೂಕವಾದ ಪರಿಕರ ಸಾಗಾಣಿಕೆ ಮಾಡುವ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸಬಾರದು. ಆಸ್ಪತ್ರೆಗೆ ಹೋಗುವ ರೋಗಿಗಳು ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ಸಂಚರಿಸುವ ವ್ಯಕ್ತಿಗಳ ಬಗ್ಗೆ ಮೃದು ಧೋರಣೆ ಅನುಸರಿಸಬೇಕು ಎಂದು ಹೇಳಿದರು.
  ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುಪ್ರಸಾದ್‌ ಇದ್ದರು.

ಶ್ರೀನಿವಾಸಪುರ:ತಾಲೂಕಿನ ಚೊಕ್ಕರೆಡ್ಡಿಹಳ್ಳಿಯಲ್ಲಿ ಕಳ್ಳಬಟ್ಟಿ ಮನೆ ಮೇಲೆ ದಾಳಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಶ್ರೀನಿವಾಸಪುರ:ತಾಲೂಕಿನ ಚೊಕ್ಕರೆಡ್ಡಿಹಳ್ಳಿಯಲ್ಲಿ ಕಳ್ಳಬಟ್ಟಿ ಮನೆ ಮೇಲೆ ದಾಳಿ
ಶ್ರೀನಿವಾಸಪುರ:ತಾಲೂಕಿನ ಚೊಕ್ಕರೆಡ್ಡಿಹಳ್ಳಿಯಲ್ಲಿ ಕಳ್ಳಬಟ್ಟಿ ಮಾರುತ್ತಿದ್ದ ಯವಕರ ಮನೆ ಮೇಲೆ ದಾಳಿ ಮಾಡಿರುವ ಅಬಕಾರಿ ಇಲಾಖೆಯವರು ಒರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಉಳಿದ ಇಬ್ಬರು ತಪ್ಪಿಸಿಕೊಂಡಿರುತ್ತಾರೆ.
ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸಪುರ ತಾಲೂಕು ರೋಣೂರು ಹೋಬಳಿ ಚೊಕ್ಕರೆಡ್ಡಿ ಗ್ರಾಮದ ಮನೆಯೊಂದರ ಮೇಲೆ ಅಬಕಾರಿ ಡಿ.ವೈ.ಎಸ್.ಪಿ ಚಂದ್ರಕಲಾ ಅವರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಒರ್ವ ಆರೋಪಿ ಸುನಿಲ್ ಸಿಕ್ಕಿಬಿದ್ದಿರುತ್ತಾನೆ ಉಳಿದ ಇನ್ನಿಬ್ಬರು ಲೋಕೆಶ್ ಮತ್ತ ಗಜೇಂದ್ರ ಪರಾರಿಯಾಗಿರುತ್ತಾರೆ ಎಂದು ಅಬಕಾರಿ ವೃತ್ತ ನಿರಿಕ್ಷಕ ಅರುಣ್ ಕುಮಾರ್ ತಿಳಿಸಿರುತ್ತಾರೆ. ಅವರನ್ನು ಸಹ ಶಿಘ್ರವಾಗಿ ಬಂಧಿಸಲಾಗುವುದು ಎಂದು ಹೇಳಿರುತ್ತಾರೆ.ದಾಳಿ ವೇಳೆ ಅಬಕಾರಿ ಉಪ ನೀರಿಕ್ಚಕ ಕೃಷ್ಣಪ್ಪ ಸಿಬ್ಬಂದಿ ರಾಮಕೃಷ್ಣಪ್ಪ ಮಂಜುನಾಥ್, ರಾಘವೇಂದ್ರ ಇದ್ದರು.

ಕೊರೋನಾ ಲಾಕ್‍ಡೌನ್ ಕಟ್ಟುನಿಟ್ಟಿನ ಕ್ರಮ- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೊರೋನಾ ಲಾಕ್‍ಡೌನ್ ಕಟ್ಟುನಿಟ್ಟಿನ ಕ್ರಮ- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ.
ಕೆಜಿಎಫ್ : ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ 
ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಮೇ.3ರ ತನಕ ಲಾಕ್‍ಡೌನ್ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು, ಕೆಜಿಎಫ್ ಪೊಲೀಸ್ ಜಿಲ್ಲೆಯಾದ್ಯಂತ ಲಾಕ್‍ಡೌನ್‍ನ್ನು ವ್ಯವಸ್ಥಿತವಾಗಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿರುತ್ತದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದ್ದಾರೆ.
ಅಲ್ಲದೆ, ಕಾನೂನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ. ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಮಾರ್ಚ್ 24 ರಿಂದ ಇದುವರೆವಿಗೂ ಸರ್ಕಾರದ ಲಾಕ್‍ಡೌನ್ ನಿಷೇದಾಜ್ಞೆಯನ್ನು ಉಲ್ಲಂಘನೆ ಮಾಡಿರುವ 26 ಮಂದಿಯ ವಿರುದ್ದ ಕಲಂ 188 ಐಪಿಸಿ ಕಾಯ್ದೆಯಡಿಯಲ್ಲಿ 22 ಪ್ರಕರಣವನ್ನು ದಾಖಲಿಸಿದ್ದು, 466 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ 26 ಜನರನ್ನು ಬಂಧಿಸಲಾಗಿರುತ್ತದೆ.
ಮುಂದುವರೆದಂತೆ, ಇನ್ನು ಮುಂದೆಯೂ ಸಹ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿನ ಎಲ್ಲಾ ನಾಗರೀಕರು ಜವಾಬ್ದಾರಿಯುತವಾಗಿ ನಡೆದುಕೊಂಡು, ಅನಾವಶ್ಯಕ ಓಡಾಟಕ್ಕೆ ಆಸ್ಪದ ನೀಡಬಾರದು, ವಿನಾಕಾರಣ ವಾಹನಗಳಲ್ಲಿ ಓಡಾಡುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ಆದೇಶಕ್ಕೆ ಬದ್ದರಾಗಿ ಮನೆಯಲ್ಲಿಯೇ ಇದ್ದು ಸುರಕ್ಷಿತರಾಗಿರಲು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಕೋರಿದ್ದಾರೆ

ಕೊರೊನಾ ಲಾಕ್‍ಡೌನ್ ಹಿನ್ನೆಲೆ ಗಡಿಗಳಲ್ಲಿ ಸಿಸಿಟಿವಿ ಅಳವಡಿಕೆ

JANANUDI.COM NERWORK
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೊರೊನಾ ಲಾಕ್‍ಡೌನ್ ಹಿನ್ನೆಲೆ ಗಡಿಗಳಲ್ಲಿ ಸಿಸಿಟಿವಿ ಅಳವಡಿಕೆ

ಕೆಜಿಎಫ್: ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಮೇ.3ರ ತನಕ ಲಾಕ್‍ಡೌನ್ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು, ಈ ಸಂಬಂಧ ಕೆಜಿಎಫ್ ಪೊಲೀಸ್ ಜಿಲ್ಲೆಯ ಅಂತರರಾಜ್ಯ ಗಡಿ ಚೆಕ್‍ಪೋಸ್ಟ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಅನವಶ್ಯಕ ವಾಹನಗಳ, ಜನಸಾಮಾನ್ಯರ ಓಡಾಟವನ್ನು ಸಂಪೂರ್ಣ ತಡೆಯಲಾಗಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದ್ದಾರೆ.
ಮುಂದುವರೆದಂತೆ, ಕೆಜಿಎಫ್ ಪೊಲೀಸ್ ಜಿಲ್ಲೆಯು ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಗಡಿ ಭಾಗದಲ್ಲಿದ್ದು, ಅಂತರರಾಜ್ಯ ವಾಹನಗಳು ಯಾವುದೂ ಒಳಬರದಂತೆ, ಹೊರಹೋಗದಂತೆ ತಪಾಸಣೆ ನಡೆಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕೆಜಿಎಫ್ ಸರಹದ್ದಿನ ರಾಜ್‍ಪೇಟ್‍ರೋಡ್, ವೆಂಕಟಾಪುರ, ಕೆಂಪಾಪುರ, ಜಕ್ಕರಸಕುಪ್ಪ, ತೊಪ್ಪನಹಳ್ಳಿ, ದೊಡ್ಡಪೊನ್ನಾಂಡಹಳ್ಳಿ, ಮರಾಠಹೊಸಹಳ್ಳಿ ಸೇರಿದಂತೆ 7 ಕಡೆಗಳಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿದ್ದು, 24 ಗಂಟೆಗಳ ಕಾಲ ನಿರಂತರವಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಿವೈಎಸ್ಪಿ ಬಿ.ಕೆ.ಉಮೇಶ್ ಅವರ ನೇತೃತ್ವದಲ್ಲಿ 12 ತಂಡಗಳನ್ನು ರಚಿಸಲಾಗಿದ್ದು, ಕೆಜಿಎಫ್ ಪೊಲೀಸ್ ಜಿಲ್ಲೆಯ ಗಡಿಭಾಗವಾದ ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ ನಿರ್ಮಿಸಿರುವ ಚೆಕ್‍ಪೋಸ್ಟ್‍ಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.
ಅನಾವಶ್ಯಕ ಓಡಾಟಕ್ಕೆ ಕಡಿವಾಣ ಹಾಕಲಾಗಿದ್ದು, ವಿನಾಕಾರಣ ವಾಹನಗಳಲ್ಲಿ ಓಡಾಡುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ಆದೇಶಕ್ಕೆ ಬದ್ದರಾಗಿ ಮನೆಯಲ್ಲಿಯೇ ಇದ್ದು ಸುರಕ್ಷಿತರಾಗಿರಲು ಜಿಲ್ಲಾ ಎಸ್‍ಪಿ ಮೊಹಮ್ಮದ್ ಸುಜೀತ ಅವರು ಕರೆ ನೀಡಿದ್ದಾರೆ.

ಕೃಷಿಕರಿಗಾಗಿ ಸ್ಕ್ಯಾಡ್ಸ್ ಕಾರ್ಯಾರಂಭ

JANANUDI.COM NETWORK

 

 

ಕೃಷಿಕರಿಗಾಗಿ ಸ್ಕ್ಯಾಡ್ಸ್ ಕಾರ್ಯಾರಂಭ

 

 

ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿ. ಕುಂದಾಪುರ ಶಾಖೆ (ಸ್ಕ್ಯಾಡ್ಸ್) ತಾಲೂಕಿನ ಕೃಷಿಕರಿಗಾಗಿ ಕುಂದಾಪುರದಲ್ಲಿ ಸೇವೆ ಆರಂಭಿಸಿದೆ.
ಟಿಲ್ಲರ್, ಟ್ರಾಕ್ಟರ್, ಡೀಸೆಲ್ ಪಂಪ್‍ಸೆಟ್, ವಿಲಿಯರ್ಸ್ ಪಂಪ್‍ಸೆಟ್, ಹನಿ ನೀರಾವರಿಯ ಬಿಡಿಭಾಗಗಳು, ಸ್ಪ್ರಿಂಕ್ಲರ್ ಹಾಗೂ ಟ್ರಾಕ್ಟರ್, ಟಿಲ್ಲರ್ ಬಿಡಿಭಾಗಗಳು ಸಿಗುತ್ತವೆ.
ಶಾಖೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕುಂದಾಪುರ ಸಂತೆ ರದ್ದು ಎ.ಪಿ.ಎಮ್.ಸಿ ಯಾರ್ಡನಲ್ಲಿನಡಯೆಬೇಕಾಗಿದ್ದ ಸಂತೆ ಬದಲು  ತತ್ಕಾಲಿಕವಾಗಿ ಕಾಳವಾರ ಕಾಲೇಜು ಮೈದಾದಲ್ಲಿ ನಡೆಯುವುದು

JANANUDI.COM NETWORK

 

 

ಕುಂದಾಪುರ ಸಂತೆ ರದ್ದು ಎ.ಪಿ.ಎಮ್.ಸಿ ಯಾರ್ಡನಲ್ಲಿನಡಯೆಬೇಕಾಗಿದ್ದ ಸಂತೆ ಬದಲು

 ತತ್ಕಾಲಿಕವಾಗಿ ಕಾಳವಾರ ಕಾಲೇಜು ಮೈದಾದಲ್ಲಿ ನಡೆಯುವುದು 

 

 

 

ನಾಳೆ ಎಪಿಎಂಸಿ ಯಾರ್ಡ್ ಕುಂದಾಪುರ ಇಲ್ಲಿ ನಡೆಯಬೇಕಿದ್ದ ಕುಂದಾಪುರದ ವಾರದ ಸಂತೆಯನ್ನು ತಾತ್ಕಾಲಿಕವಾಗಿ ಕಾಳಾವರ ಶ್ರೀ ವರದರಾಜ ಶೆಟ್ಟಿ ಕಾಲೇಜು ಮೈದಾನ ಕೋಟೇಶ್ವರ ಇಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಹಾಗೂ ಕಾಳಾವಾರ ವರದರಾಜ ಶೆಟ್ಟಿ ಕಾಲೇಜು ಮೈದಾನದಲ್ಲಿ ಕೇವಲ 10 ಕೆಜಿ ಗಿಂತ ಮೇಲ್ಪಟ್ಟು ತರಕಾರಿಗಳನ್ನು ಖರೀದಿ ಮಾಡುವಂತಹ ಹೋಲ್ಸೇಲ್ ಗ್ರಾಹಕರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಸಂತೆಯ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಬೆಳಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ಸಂತೆ ನಡೆಯಲಿದೆ ಹಾಗೂ ಯಾವುದೇ ಚಿಲ್ಲರೆ ವ್ಯಾಪಾರ ಮಾಡುವವರಿಗೆ ಒಳಗೆ ಬರದಂತೆ ನಿರ್ಬಂಧಿಸಲಾಗಿದೆ.ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ

ರೆಡ್ ಕ್ರಾಸ್ ಸಂಸ್ಥೆಯಿಂದ ಆಹಾರ ಸಾಮಗ್ರಿ ಮತ್ತು ಇತರ ಸಾಮಾಗ್ರಿ ವಿತರಣೆ 

JANANUDI.COM NETWORK

 

 

ರೆಡ್ ಕ್ರಾಸ್ ಸಂಸ್ಥೆಯಿಂದ ಆಹಾರ ಸಾಮಗ್ರಿ ಮತ್ತು ಇತರ ಸಾಮಾಗ್ರಿ ವಿತರಣೆ 

 

 

ಕುಂದಾಪುರ, ಎ.15: ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಇವತ್ತು ಕುಂದಾಪುರ ಪೆÇಲೀಸ್ ಉಪ ಅಧಿಕಾರಿಗಳ ಆಫಿಸಿನಲ್ಲಿ ವಲಯದ ಗ್ರಹದಳದ (ಹೋಮ್ ಗಾಡ್ರ್ಸ್) 30 ಮಂದಿಗೆ ಉಚಿತ ಆಹಾರ ಸಾಮಾಗ್ರಿ ಹಾಗೂ 200 ಮಾಸ್ಕ್ ಗಳನ್ನು ವಿತರಣೆ ಮಾಡಿದರು. ಅಲ್ಲದೆ ಕಲ್ಕತ್ತಾ ಮತ್ತು ಆಸ್ಸಾಮ್ ಮೂಲದ ಕಾರ್ಮಿಕರಿಗೂ ಉಚಿತ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಹಾಗೂ ಕುಂದಾಪುರ ಹೋಲಿ ರೋಜರಿ ಚರ್ಚಿಗೆ 10 ಮಂದಿಗೆ ಆಗುವಸ್ಟು ಉಚಿತ ಆಹಾರ ಸಾಮಾಗ್ರಿಗಳ ಕಿಟ್ಟನ್ನು ಅಲ್ಲಿಯ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ, ಹಾಗೂ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರಿಗೆ ಹಸ್ತಾಂತರ ಮಾಡಲಾಯಿತು.
ಕಳೆದ ವಾರದಿಂದ ನಮ್ಮ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರದ ವಿವಿಧ ಭಾಗಗಳಲ್ಲಿನ ವಲಸೆ ಕಾರ್ನಿಕರಿಗೆ ಮಾಸ್ಕ್, ಸೀರೆ, ಸಾಬೂನು, ಟೆಂಟ್, ಮತ್ತು ಬೆಡ್ ಸೀಟಗಳನ್ನು ವಿತರಿಸುತ್ತಾ ಬಂದಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ್ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ ಆಚಾರ್ಯ, ಸೋನಿ ಡಿಕೋಸ್ತಾ, ಅಬ್ದುಲ್ ಬಶೀರ್, ನಾರಾಯಣ ದೇವಾಡಿಗ, ಮತ್ತು ವೀರೆಂದ್ರ ಗುತ್ತಾಲ್ ಇವರುಗಳು ಹಾಜರಿದ್ದರು.