HOLY ROSARY CHURCH, KUNDAPUR – 450 th JUBILEE SOUVENIR 2021

ಸೈಯದ್ ಜಮೀರ್ ಪಾಷ ನಿಧನಕ್ಕೆ: ವಿ.ಆರ್.ಸುದರ್ಶನ್ ಸಂತಾಪ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ನಿವೃತ್ತ ಐಎಎಸ್ ಅಧಿಕಾರಿ,ಕಾಂಗ್ರೆಸ್ ಮುಖಂಡ ಸೈಯದ್ ಜಮೀರ್ ಪಾಷ ಅವರ ನಿಧನಕ್ಕೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಈ ಹಿಂದೆ ಕೋಲಾರ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಜಮೀರ್ ಪಾಷ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸ್ನೇಹಜೀವಿಯಾಗಿದ್ದ ಜಮೀರ್ ಪಾಷ ಸೇವೆಯಿಂದ ನಿವೃತ್ತರಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಕಳೆದ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿಯೂ ಕಣಕ್ಕಿಳಿದಿದ್ದರು.
ಅವರ ನಿಧನದಿಂದ ಪಕ್ಷಕ್ಕೆ ನಷ್ಟವಾಗಿದೆ ಮತ್ತು ಓರ್ವ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಂತಾಗಿದ್ದು, ಅವರ ಕುಟುಂಬಕ್ಕೆ ಜಮೀರ್ ಪಾಷಾರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ವೇಮಗಲ್-ಕುರಗಲ್ ಪಟ್ಟಣಪಂಚಾಯಿತಿಯಾಗಿ ಘೋಷಣೆ ಡ್ರಾಪ್ಟ್ ನೋಟಿಫಿಕೇಷನ್‍ಗೆ ರಾಜ್ಯಪಾಲರ ಅಂಕಿತ-ಸುದರ್ಶನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿಯಾಗಲು ಸಚಿವ ಸಂಪುಟ ಅನುಮೋದಿಸಿ ಕಳುಹಿಸಿದ್ದ ಡ್ರಾಪ್ಟ್ ನೋಟಿಫಿಕೇಷನ್‍ಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ನಗರಾಭಿವೃದ್ದಿ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದ್ದಾರೆ.
ಜಿಲ್ಲೆಯ ಏಕೈಕ ಪಟ್ಟಣ ಪಂಚಾಯಿತಿಯಾಗಿ ವೇಮಗಲ್-ಕುರಗಲ್ ಘೋಷಣೆಯಾಗಿದ್ದು, ಈ ಭಾಗದ ಸಮಗ್ರ ಅಭಿವೃದ್ದಿಗೆ ಅವಕಾಶಗಳು ಒದಗಿ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪಂಚಾಯಿತಿಯಾಗಲು ಕಾರಣರಾದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವ ಸಂಪುಟ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಕೋಲಾರ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ ಸೇರಿದಂತೆ ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಅಗತ್ಯವಿರುವ ಸಿಬ್ಬಂದಿ ವರ್ಗದ ನೇಮಕ ಆಡಳಿತ, ಅನುದಾನವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪಟ್ಟಣ ಪಂಚಾಯಿತಿ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು, ಸಹಕಾರ ನೀಡುವಂತೆ ಮನವಿ ಮಾಡಿರುವ ಅವರು ಶೀಘ್ರ ಪಟ್ಟಣ ಪಂಚಾಯಿತಿ ಅಸ್ಥಿತ್ವಕ್ಕೆ ಬರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿ ಎಂದು ಆಶಿಸಿದ್ದಾರೆ.


ವರ್ತೂರು ಅಪಹರಣ ಘಟನೆಗೆ ತೀವ್ರ ಖಂಡನೆ

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಹಾಗೂ ಹಲ್ಲೆ ಘಟನೆ ಅಮಾನವೀಯ ಎಂದು ಖಂಡಿಸಿರುವ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಖಂಡನೀಯ, ಈ ಘಟನೆಗೆ ಯಾರೇ ಕಾರಣರಾಗಿರಲಿ ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು, ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದರು
ವರ್ತೂರು ಪ್ರಕಾಶ್ ಅವರು ಎದೆಗುಂದದೇ ತಮ್ಮ ಸಾರ್ವಜನಿಕ ಜೀವನವನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಹಾರೈಸಿದ್ದಾರೆ.


ನಿಗಮ ಘೋಷಣೆ ತಾರತಮ್ಯ ಬೇಡ


ರಾಜ್ಯ ಸರ್ಕಾರ ವಿವಿಧ ಸಮುದಾಯಗಳ ಅಭಿವೃದ್ದಿಗಾಗಿ ನಿಗಮಗಳನ್ನು ಮಾಡುವಾಗ ತಾರತಮ್ಯ ಮಾಡಬಾರದು, ಸಮಾಜ,ರಾಜ್ಯದ ಹಿತದೃಷ್ಟಿಯಿಂದ ಎಲ್ಲಾ ಸಮುದಾಯಗಳು,ವರ್ಗಗಳು, ವೃತ್ತಿಗಳಿಗೆ ಸಂಬಂಧಿಸಿದ ಅಗತ್ಯವಾದ ನಿಗಮಗಳನ್ನು ರಚಿಸಬೇಕು ಎಂದು ಸುದರ್ಶನ್ ಒತ್ತಾಯಿಸಿದ್ದಾರೆ.
ಬಡವರು,ನಿರ್ಲಕ್ಷಿತ ಸಮುದಾಯಗಳು ಸಾಮಾಜಿಕವಾಗಿ,ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಲು ಅಗತ್ಯವಾದ ನಿಗಮಗಳ ರಚನೆಗೆ ಒತ್ತಾಯಿಸಿರುವ ಅವರು, ಈ ಕಾರ್ಯದಲ್ಲಿ ತಾರತಮ್ಯಕ್ಕೆ ಅವಕಾಶ ನೀಡದಿರಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈ ಹಿಂದೆ ಜಾತಿ ಜನಗಣತಿ ನಡೆಸಿ ವರದಿ ತಯಾರಿಸಿದೆ, ಈ ವರದಿಯನ್ನು ಬರಲಿರುವ ಅಧಿವೇಶನದಲ್ಲಿ ಮತ್ತು ಸಂಪುಟದಲ್ಲಿ ಚರ್ಚಿಸಿ ಉಪಯುಕ್ತವಾಗುವ ಸಲಹೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ವರದಿ ಆಧಾರದ ಮೇಲೆ ಯಾವ್ಯಾವ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕ,ಆರ್ಥಿಕ,ರಾಜಕೀಯವಾಗಿಮತ್ತು ಜನಸಂಖ್ಯೆ ಅಂಕಿ ಅಂಶಗಳ ಆಧಾರದ ಮೇಲೆ ಬಜೆಟ್‍ನಲ್ಲಿ ಕಾಯಕ್ರಮಗಳ ಘೋಷಣೆಯ ಜತೆಗೆ ಯಾವುದೇ ತಾರತಮ್ಯ ಮತ್ತು ರಾಜಕಾರಣದ ಗೋಜಲಿಲ್ಲದೇ ನಿಗಮಗಳ ರಚಿಸುವುದು ರಾಜ್ಯದ ಹಿತದೃಷ್ಟಿಯಿಂದ ಸೂಕ್ತ ಎಂದು ಒತ್ತಾಯಿಸಿದ್ದಾರೆ.

ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ಸಹಕರಿಸಬೇಕು ಡಾ.ಶಾಂತ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ಸಹಕರಿಸಬೇಕು ಎಂದು ಡಾ.ಶಾಂತ ತಿಳಿಸಿದರು.
ನಗರದ ಕಾರಂಜಿಕಟ್ಟೆಯಲ್ಲಿರುವ ಶ್ರೀ ನಲ್ಲೂರಮ್ಮ ದೇವಿ ಅನಾಥ ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟಿನಲ್ಲಿ ಹಾಲುಮತ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ನಡೆದ 533ನೇ ಕನಕದಾಸ ಜಯಂತೋತ್ಸವ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಅನಾಥಾಶ್ರಮ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಸ್ವಂತ ಜೀವನ ಕಟ್ಟಿಕೊಳ್ಳುವಾಗೆ ಬೆಂಬಲ ನೀಡಬೇಕು ಎಂದು ನುಡಿದರು. ಕನಕದಾಸರಂತಹ ದಾರ್ಶನಿಕರ ಜೀವನಚರಿತ್ರೆಯ ಜ್ಞಾನವನ್ನು ಮಕ್ಕಳಿಗೆ ತಿಳಿ ಹೇಳಿ ಅವರ ಜೀವನಕ್ಕೆ ಮಾರ್ಗದರ್ಶನವಾಗಿಸಬೇಕು ಎಂದ ಅವರು ಮಕ್ಕಳಿಗೆ ಯಾವುದೇ ರೀತಿಯ ಸೌಲಭ್ಯ ಒದಗಿಸಲು ತಾನು ಸದಾ ಮುಂಚೂಣಿಯಲ್ಲಿರುತ್ತೇನೆ. ತನ್ನ ಸ್ವಂತ ಖರ್ಚಿನಲ್ಲಿ ಇವರ ಆರೋಗ್ಯ ಕಾಪಾಡುವುದಕ್ಕೆ ಬೇಕಾದ ಸಹಾಯ ಮಾಡುತ್ತೇನೆ ಎಂದು ಭರವಸೆನೀಡಿದರು.
ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನ್ನು ಏನಾರದೂ ಬಲ್ಲಿರಾ ಎಂದು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಜನರಲ್ಲಿದ್ದ ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ ಹರಿಕರಾರು ಎಂದು ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಉಪನ್ಯಾಸ ನೀಡಿದರು.
ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಕೆ.ಗೋವಿಂದರಾಜು ಮಾತನಾಡಿ, ಹಾಲುಮತ ಮಹಾಸಭಾ ವತಿಯಿಂದ ಜಿಲ್ಲೆಯಲ್ಲಿ ಕನಕದಾಸರ ಜಯಂತಿ ಮೊಟ್ಟಮೊದಲ ಕಾರ್ಯಕ್ರಮ ನಡೆಸುತ್ತಿದ್ದೇವೆ. ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ, ಅವರು ರಚಿಸಿರುವ ಕೃತಿಗಳ ಮೂಲಕ ಜಾತ್ಯತೀತವಾದ ಬೆಳವಣಿಗೆ ಕಾಣಬಹುದಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಸ್ವತಂತ್ರವಾಗಿ ಬಾಳಬೇಕೆನ್ನುವುದೇ ಅವರ ಆಶಯವಾಗಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಹಾಲುಮತ ಮಹಾಸಭಾ ಗೌರವಾಧ್ಯಕ್ಷ ಸೊಣ್ನೂರು ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್, ಪದಾಧಿಕಾರಿಗಳಾದ ವಕೀಲರಾದ ಶ್ರೀನಿವಾಸ್, ಲಲಿತಮ್ಮ, ನಲ್ಲಾಂಡಹಳ್ಳಿ ರಮೇಶ್, ರಾಜು, ಮಂಜುನಾಥ್, ಕಿರಣ್ ಕುಮಾರ್, ಬೆಟ್ಟಪ್ಪ, ಭುವನೇಶ್ವರ್ ಮತ್ತಿತರರು ಉಪಸ್ಥಿತರಿದ್ದರು
.

ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಅದ್ಯಕ್ಷೆ ಜಾನಕಿ ಬಿಲ್ಲವ ಮತ್ತು ಮೂವತ್ತಕ್ಕೂ ಹೆಚ್ಚು ಯುವ ಮುಖಂಡರುಗಳು ಕಾಂಗ್ರೆಸ್ ಸೇರ್ಪಡೆ

JANANUDI.COM NETWORK

ಕುಂದಾಪುರ,ಡಿ.3: 1995ರಿಂದ ಒಟ್ಟು ನಾಲ್ಕು ಅವಧಿಗೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದ, ಕೋಟೇಶ್ವರ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಜಾನಕಿ ಬಿಲ್ಲವರವರು ಮತ್ತು ಮೂವತ್ತಕ್ಕೂ ಹೆಚ್ಚು ಸ್ಥಳೀಯ ಯುವ ಮುಖಂಡರುಗಳು ಇಂದು ನಡೆದ ದಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡರು. ಜಾನಕಿ ಬಿಲ್ಲವರವರು 2ಅವಧಿಗೆ ತಾಲೂಕು ಪಂಚಾಯತ್ ಸದಸ್ಯರಾಗಿ, ಎರಡು ಅವಧಿಗೆ ಮೀನುಗಾರರ ಸಹಕಾರಿ ಸಂಘದ ಸದಸ್ಯೆಯಾಗಿ, ಎರಡು ಅವಧಿಗೆ ಗ್ರಾಮ ಪಂಚಾಯತಿ ಸದಸ್ಯರಾಗಿ, ಒಂದು ಅವಧಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜನಪರ ಸೇವೆ ಸಲ್ಲಿಸಿ, ಸ್ಥಳೀಯವಾಗಿ ಜನಪ್ರಿಯರಾಗಿದ್ದಾರೆ.


[ಸೇರ್ಪಡೆ ಕಾರ್ಯಕ್ರಮದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಾನಕಿ ಬಿಲ್ಲವರವರು ‘ಪಂಚಾಯತ್ ಅಧ್ಯಕ್ಷೆಯಾಗಿದ್ದ ವೇಳೆ ಕಾನೂನುಬಾಹಿರ ಕಾಮಗಾರಿಗಳನ್ನು ವಿರೋಧಿಸಿದ ಕಾರಣಕ್ಕಾಗಿ ಮತ್ತು ಜನವಿರೋಧಿ ಯಾಗಿರುವ ರೆಸಾರ್ಟ್ ಗೆ ಅನುಮೋದನೆ ನೀಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ ಕಾರಣಕ್ಕಾಗಿ ನನ್ನನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆದವು. ಆ ಕಾರಣಕ್ಕಾಗಿ ಬೇಸತ್ತು ಜನಪರ ಸಿದ್ದಾಂತ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳುತ್ತಿದ್ದೇನೆ’ ಎಂದವರು ತಿಳಿಸಿದರು]


ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮತ್ತು ಹಿರಿಯ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿಯವರು ಕಾಂಗ್ರೆಸ್ ಪಕ್ಷದ ಬಾವುಟವನ್ನು ಜಾನಕಿ ಬಿಲ್ಲವರವರಿಗೆ ಹಸ್ತಾಂತರ ಮಾಡುವ ಮೂಲಕ ಮತ್ತು ಕಾಂಗ್ರೆಸ್ ಮುಖಂಡ ಬೀಜಾಡಿ ಅಶೋಕ್ ಪೂಜಾರಿಯವರು ಕಾಂಗ್ರೆಸ್ ಶಾಲನ್ನು ತೊಡಿಸುವ ಮೂಲಕ ವಿದ್ಯುಕ್ತವಾಗಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡರು.


[ಇದೇ ಸಂದರ್ಭದಲ್ಲಿ ಜಾನಕಿ ಬಿಲ್ಲವ ರವರ ಜೊತೆಯಲ್ಲಿ ಯುವ ಮುಖಂಡರುಗಳಾದ ರೂಪಾ ಪೂಜಾರಿ, ಪ್ರೀತಿ ಪೂಜಾರಿ, ಆನಂದ ಪೂಜಾರಿ, ಮೇಘರಾಜ ಪೂಜಾರಿ, ರಾಜೇಶ್ ಪೂಜಾರಿ, ರೋಹಿತ್ ಪೂಜಾರಿ, ರಾಘವೇಂದ್ರ ಪೂಜಾರಿ, ಸೋಮ ಹಳೆಅಳಿವೆ, ಕರುಣಾಕರ ಪೂಜಾರಿ, ಸುರೇಶ ಪೂಜಾರಿ, ಮಹೇಶ್ ಪೂಜಾರಿ, ಸಂಜಯ ಪೂಜಾರಿ, ರಂಜಿತ್ ಪೂಜಾರಿ ಮಮತಾದವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸೇರ್ಪಡೆಯ ಸಂಪೂರ್ಣ ನೇತೃತ್ವವನ್ನು ಕಾಂಗ್ರೆಸ್ ಹಿರಿಯ ಮುಖಂಡರಾದ ಕೋಡಿ ಶಂಕರ್ ಪೂಜಾರಿ, ಬೀಜಾಡಿ ಅಶೋಕ್ ಪೂಜಾರಿ ಮತ್ತು ಯುವ ಮುಖಂಡ ಕೋಡಿ ಸುನಿಲ್ ಪೂಜಾರಿಯವರು ವಹಿಸಿದ್ದರು.]


ಕಾಂಗ್ರೆಸ್ ನಾಯಕರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಹರಿಪ್ರಸಾದ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಿಕಾಸ್ ಹೆಗ್ಡೆ, ವಿನೋದ್ ಕ್ರಾಸ್ಟೋ, ಕೋಡಿ ಸುನಿಲ್ ಪೂಜಾರಿ ಮುಂತಾದವರು ಮಾತನಾಡಿ ಜಾನಕಿ ಬಿಲ್ಲವರವರನ್ನು ಪಕ್ಷಕ್ಕೆ ಸ್ವಾಗತಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸೋಷಿಯಲ್ ಮೀಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಮುಖಂಡರಾದ ಅಶೋಕ್ ಸುವರ್ಣ, ಕೇಶವ ಭಟ್, ವಿಜಯದರ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಪ್ರತಿ ಪಂಚಾಯಿತಿಗೊಂದು ರಾಗಿ ಖರೀದಿ ಕೇಂದ್ರ ಬೇಕು,ಪ್ರತಿ ಕ್ವಿಂಟಾಲ್ ರಾಗಿಗೆಗೆ 5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ:ರೈತ ಸಂಘ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ, ನ-26, ಪ್ರತಿ ಪಂಚಾಯಿತಿಗೊಂದು ರಾಗಿ ಖರೀದಿ ಕೇಂದ್ರ ತೆರೆಯಬೇಕು ಹಾಗೂ ಪ್ರತಿ ಕ್ವಿಂಟಾಲ್ ರಾಗಿಗೆಗೆ 5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ ಬೆಳೆ ನಮೂದನೆಯಲ್ಲಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ರೈತ ಸಂಘದಿಂದ ತಾಲ್ಲೂಕು ಕಛೇರಿ ಮುಂದೆ ರಾಗಿ ಸಮೇತ ಹೋರಾಟ ಮಾಡಿ ಶಿರಸ್ತೆದಾರ್‍ರವರ ಮುಖಾಂತರ ಕೃಷಿ ಮಂತ್ರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರೈತರ ಕಷ್ಟ ದಲ್ಲಾಳರ ಪಾಲೆಂಬಂತೆ ಈ ವರ್ಷ ಉತ್ತಮವಾದ ಮುಂಗಾರು ಮಳೆಯಿಂದ ಜಿಲ್ಲಾಧ್ಯಂತ ಸಮೃದ್ದವಾದ ರಾಗಿ ಬೆಳೆ ಬಂದಿದ್ದು, ಕೊರೋನಾದಿಂದ ತತ್ತರಿಸಿದ್ದ ರೈತರ ಮೊಗದಲ್ಲಿ ಸಂತೋಷ ಕಾಣಿಸುತ್ತಿದೆ. ಅದರಂತೆ ರಾಗಿ ಕಟಾವು ಮಾಡಿ ತನ್ನ ಕಷ್ಟಗಳಿಗೆ ಮಾರಾಟ ಮಾಡಲು ರೈತರು ಮುಂದಾಗಿದ್ದು, ಸರ್ಕಾರ ಸಮಯಕ್ಕೆ ಸರಿಯಾಗಿ ರಾಗಿ ಖರೀದಿ ಕೇಂದ್ರ ತೆರೆಯದ ಕಾರಣ ರೈತರು ಖಾಸಗಿ ವ್ಯಾಪಾರಸ್ಥರನ್ನು ಅವಲಂಬಿಸಬೇಕಾಗುತ್ತದೆ. ಅದನ್ನೇ ಖಾಸಗಿ ದಲ್ಲಾಳರು ರೈತರ ಅಮಾಯಕತನವನ್ನೇ ಬಳಿಸಿಕೊಳ್ಳುವ ಖಾಸಗಿ ರಾಗಿ ಖರೀದಿ ದಲ್ಲಾಳರು ನಿಗಧಿಪಡಿಸಿರುವ 1800 ರಿಂದ 2000 ರೂಪಾಯಿಗೆ ರೈತರಿಂದ ಖರೀದಿ ಮಾಡಿರುವ ರಾಗಿಯನ್ನು ದಾಸ್ತಾನು ಮಾಡಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದಾಗ ರೈತರಿಂದ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ರೈತರ ಹೆಸರಿನಲ್ಲಿ ಸರ್ಕಾರದ ಬೆಂಬಲ ಬೆಲೆಯನ್ನು ಪಡೆಯುತ್ತಿರುವುದರಿಂದ ರೈತರಿಗೆ ಸಿಗಬೇಕಾದ ಬೆಂಬಲ ಬೆಲೆ ದಲ್ಲಾಳರ ಪಾಲಾಗುತ್ತಿದೆಂದು ಸರ್ಕಾರದ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ತಿಂಗಳಾನುಗಟ್ಟಲೆ ಕಷ್ಟಾಪಟ್ಟು ಬೆಳೆದ ಬೆಳೆ ಮೂರು ಕಾಸಿಗೆ ಮಾರಾಟ ಮಾಡುವ ಪರಿಸ್ಥಿತಿಯ ಜೊತೆಗೆ ಕೃಷಿ ಹಾಗೂ ರವಿನ್ಯೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮರ್ಪಕವಾದ ಬೆಳೆ ಸಮೀಕ್ಷೆ ಮಾಡಿ ವರದಿ ನೀಡದ ಕಾರಣ ಕೆಲವು ರೈತರ ಜಮೀನಿನಲ್ಲಿ ರಾಗಿ ಬೆಳೆದಿದ್ದರೂ ಬೀಡು, ನೀಲಗಿರಿ ಎಂದು ತೋರಿಸುತ್ತಿರುವುದರಿಂದ ಸರ್ಕಾರದ ಬೆಂಬಲೆ ಬೆಲೆ ಪಡೆಯಲು ವಂಚಿತರಾಗುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿ. ಮಾನ್ಯ ಕೃಷಿ ಸಚಿವರು ಕೂಡಲೇ ಸರ್ಕಾರದ ಜೊತೆ ಚರ್ಚೆ ಮಾಡಿ ಸಮೃದ್ದವಾಗಿ ಬೆಳೆದಿರುವ ರಾಗಿ ಬೆಳೆಗಾರರಿಗೆ ಅನುಕೂಲವಾಗಲೆಂದು ಪ್ರತಿ ಪಂಚಾಯಿತಿಗೊಂದು ರಾಗಿ ಖರೀದಿ ಕೇಂದ್ರ ತೆರೆಯುವ ಜೊತೆಗೆ ಪ್ರತಿ ಕ್ವಿಂಟಾಲ್ ರಾಗಿಗೆಗೆ 5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ ಬೆಳೆ ನಮೂದು ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಕಟ್ಟಕಡೆಯ ರೈತರಿಗೂ ಬೆಂಬಲ ಬೆಲೆ ಸಿಗುವಂತೆ ಮಾಡುವ ಜೊತೆಗೆ ಖಾಸಗಿ ದಲ್ಲಾಳರಿಗೆ ಕಡಿವಾಣ ಹಾಕಿ ರೈತರ ಹಿತ ಕಾಯಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೆದಾರ್ ಕೊಂಡಪ್ಪ ರವರು ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ರಾಗಿ ಖರೀದಿ ಕೇಂದ್ರದ ನಿಮ್ಮ ಮನವಿ ಸರ್ಕಾರಕ್ಕೆ ಕಳುಹಿಸಿ ಬೆಳೆ ನಮೂದನೆಯಲ್ಲಾಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಭರವಸೆಯನ್ನು ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ನಳಿನಿ.ವಿ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಸ್ವಸ್ತಿಕ್ ಶಿವು, ಐತಂಡಹಳ್ಳಿ ಮಂಜುನಾಥ, ಮುನ್ನ, ಸುಪ್ರಿಂ ಚಲ, ಚಾಂದ್‍ಪಾಷ, ಜಮೀರ್ ಪಾಷ, ಜಾವೀದ್, ಕಿರಣ್, ನವೀನ್, ವೇಣು, ಕೇಶವ , ವಿನೋದ್, ಸುನಿಲ್, ಮುಂತಾದವರಿದ್ದರು
.

ಕೃಷಿಕರು ಕಂದಾಯ ಇಲಾಖೆಯ ವಿಶೇಷ ಪವತಿ ವಾರಸ್ಸು ಖಾತೆ ಆಂದೋಲನದ ಪ್ರಯೋಜನ ಪಡೆದುಕೊಳ್ಳಬೇಕು: ಶಿರಸ್ತೇದಾರ್‌ ಬಿ.ಆರ್‌.ಮುನಿವೆಂಕಟಪ್ಪ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಕೃಷಿಕರು ಕಂದಾಯ ಇಲಾಖೆಯ ವಿಶೇಷ ಪವತಿ ವಾರಸ್ಸು ಖಾತೆ ಆಂದೋಲನದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಿರಸ್ತೇದಾರ್‌ ಬಿ.ಆರ್‌.ಮುನಿವೆಂಕಟಪ್ಪ ಹೇಳಿದರು.
ತಾಲ್ಲೂಕಿನ ಹೆಬ್ಬಟ ಗ್ರಾಮದದಲ್ಲಿ ಕಂದಾಯ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪವತಿ ವಾರಸ್ಸು ಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ಸೇವೆಯನ್ನು ರೈತರ ಮನೆ ಬಾಗಿಲಿಗೆ ಒದಗಿಸುವ ದೃಷ್ಟಿಯಿಂದ ಈ ಆಂದೋಲನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಮಾತನಾಡಿ, ಪವತಿ ವಾರಸ್ಸು ಖಾತೆ ಮಾಡಿಸಿಕೊಂಡಲ್ಲಿ ಹೆಚ್ಚು ಪ್ರಯೋಜನವಾಗುತ್ತದೆ. ಅದಕ್ಕೆ ಪೂರಕವಾಗಿ ಪವತಿಯಾದ ವ್ಯಕ್ತಿಯ ಮರಣ ಪತ್ರ, ಖಾತೆಗೆ ಸಂಬಂಧಿಸಿದ ಜಮೀನಿನ ಪಹಣಿ, ವಂಶವೃಕ್ಷ ಮತ್ತಿರ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಅರ್ಹ ವ್ಯಕ್ತಿಗಳು ಪವತಿ ವಾರಸ್ಸು ಖಾತೆ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಪರಿಶೀಲನೆ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೈತರ ಹಿತ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ನಿಗದಿತ ಸ್ಥಳ ಹಾಗೂ ದಿನಾಂಕಗಳಂದು ಪವತಿ ವಾರಸ್ಸು ಖಾತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಆಯಾ ದಿನಾಂಕಗಳಂದು ಸಮಯಕ್ಕೆ ಸರಿಯಾಗಿ ಹಾಜರಿದ್ದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ 16 ರೈತರು ಪವತಿ ವಾರಸ್ಸು ಖಾತೆ ಮಾಡಿಕೊಂಡುವಂತೆ ಕೋರಿ ಅರ್ಜಿ ಸಲ್ಲಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳಾದ ಸಲೀಂ, ಪವಿತ್ರ ಇದ್ದರು.

ದಿಲ್ಲಿ ಚಲೋ ನಡೆಸುತ್ತಿರುವ ರೈತರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಅಖಿಲ ಭಾ. ರೈತ ಸಂಘರ್ಷ ಸ. ಸ. ತಾ.ಘಟಕದ ಸದಸ್ಯರಿಂದ ಪ್ರತಿಭಟನೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ದಿಲ್ಲಿ ಚಲೋ ನಡೆಸುತ್ತಿರುವ ರೈತರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ  ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ತಾಲ್ಲೂಕು ಘಟಕದ ಸದಸ್ಯರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಾತಕೋಟ ನವೀನ್‌ ಕುಮಾರ್‌ ಪ್ರತಿಭಟನೆ ನಡೆಸುತ್ತಿದ್ದ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಫಲವಾಗಿ ದೇಶದ ಕೃಷಿ ಬಿಕ್ಕಟ್ಟು ಉಲ್ಬಣಗೊಂಡಿದೆ. ರೈತ ಹಾಗೂ ಕಾರ್ಮಿಕ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಲು ದೆಹಲಿ ಜಾಥಾ ಕೈಗೊಂಡಿರುವ ರೈತರನ್ನು ಸರ್ಕಾರ ಬಲಪ್ರಯೋಗದ ಮೂಲಕ ಹಿಮ್ಮೆಟ್ಟಲು ಪ್ರಯತ್ನಿಸುತ್ತಿದೆ ಎಂದು ಎಂದು ಹೇಳಿದರು.  ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್‌.ಸೂರ್ಯನಾರಾಯಣ ಮಾತನಾಡಿ, ಶಾಂತಿಯುತವಾಗಿ ದೆಹಲಿ ಜಾಥಾ ಕೈಗೊಂಡಿರುವ ರೈತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನಾರ್ಹ. ಪ್ರಧಾನಿ ಮೋದಿ ಅವರು ಇದರ ನೈತಿಕ ಹೊಣೆ ಹೊತ್ತು ದೇಶದ ರೈತರ ಕ್ಷಮೆ ಕೇಳಬೇಕು. ಕೃಷಿಗೆ ಸಂಬಂಧಿಸಿದ ಮೂರು ಕಾಯಿದೆಗಳು ಹಾಗೂ ವಿದ್ಯುತ್‌ ಕಾಯಿದೆ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.  ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅವರಿಗೆ ನೀಡಲಾಯಿತು.  ವಿವಿಧ ರೈತ ಪರ ಸಂಘಟನೆಗಳ ಮುಖಂಡರಾದ ಎನ್‌.ವೀರಪ್ಪರೆಡ್ಡಿ, ಎಸ್‌.ಎನ್‌.ನಾಗರಾಜ್‌, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಎನ್.ಜಿ.ಶ್ರೀರಾಮರೆಡ್ಡಿ, ಹೆಬ್ಬಟ ರಮೇಶ್‌, ಜಿ.ಈಶ್ವರಮ್ಮ, ಎನ್‌.ನಾಗಭೂಷಣ, ಪ್ರೇಮ್‌ ಕುಮಾರ್‌ ಇದ್ದರು.

ವಿದ್ಯಾರ್ಥಿಗಳು ಸಾಮಾಜಿಕ, ಶೈಕ್ಷಣಿಕ, ಪ್ರಗತಿಯತ್ತ ಸಾಕ್ಷರತೆ ಸಾಧನೆ ಮಾಡಿ ಉತ್ತಮ ಪ್ರಜೆಗಳು ಆಗಬೇಕು:ಪಂ. ನಿರ್ವಣಾಧಿಕಾರಿ ಎಸ್. ಆನಂದ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ,ಇಂದಿನ ಮಕ್ಕಳೇ ಮುಂದಿನ ದೇಶವನ್ನಾಳುವ ಪ್ರಭುಗಳು ಎನ್ನುವುದು ಅರಿತು ವಿದ್ಯಾರ್ಥಿಗಳು ಸಾಮಾಜಿಕ, ಶೈಕ್ಷಣಿಕ, ಪ್ರಗತಿಯತ್ತ ಸಾಕ್ಷರತೆ ಸಾಧನೆ ಮಾಡಿ ಉತ್ತಮ ಪ್ರಜೆಗಳು ಆಗಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಸ್. ಆನಂದ್ ತಿಳಿಸಿದರು.
ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅವರಣದಲ್ಲಿ ಗ್ರಾಮ ಪಂಚಾಯಿತಿಯಿಂದ ಏರ್ಪಡಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದ ಆನಂದ್ ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಸರ್ಕಾರ ವಿದ್ಯಾರ್ಥಿಗಳಿಗೆ ಲೇಖನಿ ಸಾಮಾಗ್ರಿಗಳು, ಬಿಸಿ ಊಟ, ಬಟ್ಟೆ, ಶೂ, ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ವಿದ್ಯಾರ್ಥಿಗಳು ಶಿಸ್ತುನ್ನು ರೂಡಿಸಿಕೊಂಡು ಮುಂದೆ ಬರಬೇಕು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮಿರಿಸುವಂತೆ ಆಗಬೇಕು. .
ಈಗಿನ ಕಾಲ ತಂತ್ರಜ್ಞಾನ ಅಭಿವೃದ್ದಿ ಹೊಂದುತ್ತಿರುವ ಕಾಲದಲ್ಲಿ ಶಿಕ್ಷಣ ಪಡೆದುಕೊಂಡರೆ ಪೋಷಕರು ಆಸ್ತಿಯನ್ನು ಅಶ್ರಯಸುವ ಅಗತ್ಯವಿಲ್ಲ. ಪ್ರಜಾ ಪ್ರಭುತ್ವ ವ್ಯವಸ್ಥೆ ಸಕಾರಗೊಳಿಸುವ ನಿಟ್ಟಿನಲ್ಲಿ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ನಮ್ಮ ಸಂವಿಧಾನದ ಎಲ್ಲಾ ರೀತಿಯ ಕಾನೂನು ಪರಿಪಾಲನೆ ತಿಳಿವಳಿಕೆಗಳ ಅರಿವು ಇರಬೇಕು ಎಂದ ಇವರು ಈ ಸಭೆಯಲ್ಲಿ ಮಕ್ಕಳು ಶಾಲೆಗೆ ಬೇಕಾದ ಸೌಲಭ್ಯಗಳು ತುಂಬ ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ಈ ಶಾಲೆಗೆ ಎನ್‍ಆರ್‍ಇಜಿ ಯೋಜನೆಯಲ್ಲಿ ಸೂಕ್ತವಾದ ಕಾಂಫೌಂಡ್, ಶೌಚಾಲಯ, ಹಾಗೆಯೇ ಈ ಶಾಲೆಗೆ ಡಿಜಿಟಿಲ್ ಲೈಬ್ರರಿ ಮಾಡುವುದು ನನ್ನ ಆಸೆಯಾಗಿದ್ದು ಇದಕ್ಕಾಗಿ ಒಂದು ಲಕ್ಷ ರೂಗಳ ಪಂಚಾಯಿತಿಯ ಅನುದಾನದಲ್ಲಿ ಕೊಡಿಸುತ್ತೇನೆ ಪಂಚಾಯಿತಿ ಅದಿಕಾರಿ ಕೊಡಲೇ ಈ ಶಾಲೆಗೆ ಶುದ್ದ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಸಿ ಈ ಶಾಲೆಗೆ ನೀರನ್ನು ಒದಗಿಸುವ ಕೆಲಸ ನೀವು ಮಾಡಬೇಕು ಶಿಕ್ಷಕರು ಈ ಶಾಲೆಗೆ ಬೇಕಾದ ವಾಟರ್ ಪಿಲ್ಟರ್ ಇನ್ನಿತರೆ ಸೌಲಭ್ಯಗಳ ಬಗ್ಗೆ ಮುಖ್ಯ ಶಿಕ್ಷಕರು ನಮ್ಮ ಗಮನಕ್ಕೆ ತಂದರೆ ನಾವು ಅದನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸುತ್ತಾ ಈ ಪಂಚಾಯಿತಿಗೆ ಒಳಪಡುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಿಸುವ ಕೆಲಸ ನಾನು ಮಾಡುತ್ತೇನೆ ಎಂದರು.
ನಂಬಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮಂಜುನಾಥರೆಡ್ಡಿ ಮಾತನಾಡಿ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಯು ತನ್ನದೆ ಆದ ರೀತಿಯಲ್ಲಿ ಸ್ವಾತಂತ್ರ ಜೀವನ ಮಾಡಲು ಸಾಕ್ಷರತೆ ಜ್ಞಾನ ವಿದ್ಯಾರ್ಥಿಗಳು ಬೆಳಸಕೊಳ್ಳಬೇಕು ತಪ್ಪು ನಡೆದಾಗ ಪ್ರಶ್ನಿಸುವ ದೈಯ ಈಗನ ವಿದ್ಯಾರ್ಥಿಗಳು ತೋರಬೇಕು ನಿಮ್ಮ ಊರುಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಶಾಲೆಯಲ್ಲಿ ಕೊರತೆ ಇರುವ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಿ ಪಂಚಾಯಿತಿಗೆ ತಿಳಿಸಿದರೆ ಕೂಡಲೇ ಈ ಬಗ್ಗೆ ಕ್ರಮ ಕೈಗೂಳ್ಳುತ್ತೇವೆ. ಗ್ರಾಮದಲ್ಲಿ ಸ್ವಚ್ಚತೆ, ಆರೋಗ್ಯ, ಸುರಕ್ಷತೆ, ನೈರ್ಮಲ್ಯ ಕಾಪಾಡುವ ದೃಷ್ಠಿಯಿಂದ ವಿದ್ಯಾರ್ಥಿಗಳಾದ ನೀವು ನಿಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಪಂಚಾಯಿತಿಯಿಂದ ಹಣ ಕೊಡಲಾಗುತ್ತದೆ. ಈ ಯೋಜನೆಯನ್ನು ಸದ್ಬಳಿಕೆ ಮಾಡಿಕೊಂಡು ಗ್ರಾಮದಲ್ಲಿ ನೃರ್ಮಲ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸುತ್ತಾ ಇಂತಹ ಸಭೆಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿಡಿಪಿಓ ರೂಸಲೋನಿಸತ್ಯ, ಅಂಗನವಾಡಿ ಇಲಾಖೆಯ ನಾನಮ್ಮ, ನಂಬಿಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ. ಪಂಚಾಯಿತಿಯ ಕರ ವಸೂಲಿಗಾರ ವೆಂಕಟೇಶ್, ಸಿಬ್ಬಂದಿಯಾದ ರಾಮೇಗೌಡ, ವೆಂಕಟಸ್ವಾಮಿ, ಇನ್ನೀತರರು ಹಾಜರಿದ್ದರು
.

ಕುಂಚ ಕಲಾವಿದರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತ ಪ್ರಯತ್ನ ನಡೆಸಬೇಕು:ಕುಂಚ ಕಲಾವಿದರ ಸಂಘದ ಅಧ್ಯಕ್ಷ ಮುನಿರಾಜು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕುಂಚ ಕಲಾವಿದರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತ ಪ್ರಯತ್ನ ನಡೆಸಬೇಕು. ಕುಂಚ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ರಾಜ್ಯ ಕುಂಚ ಕಲಾವಿದರ ಸಂಘದ ಅಧ್ಯಕ್ಷ ಮುನಿರಾಜು ಹೇಳಿದರು.  ತಾಲ್ಲೂಕಿನ ಎನಮರೇಪಲ್ಲಿ ಗ್ರಾಮದ ಪಂಚಮುಖಿ ಹನುಮ ದೇವಾಲಯದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲ್ಲೂಕು ಕುಂಚ ಕಲಾವಿದರ ಸಂಘದ ಸಭೆ ಉದ್ಘಾಟಿಸಿ ಮಾತನಾಡಿ, ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಜನರ ಗಮನ ಸೆಳೆದು ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ಎಂದು ಹೇಳಿದರು.  ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌ ಮಾತನಾಡಿ, ಕುಂಚ ಕಾವಿದರು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ವೃತ್ತಿಯನ್ನು ರೂಪಸಿಕೊಳ್ಳಬೇಕು ಎಂದು ಹೇಳಿದರು.  ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮುನಿಕೃಷ್ಣ, ಸಂಚಾಲಕರಾದ ವಿ.ಪಿ.ನರಸಿಂಹಯ್ಯ, ವೆಂಕಟೇಶ್‌, ತಾಲ್ಲೂಕು ಘಟಕದ ಗೌರವಾಧ್ಯಕ್ಷ ರವೀಂದ್ರ, ಅಧ್ಯಕ್ಷ ಶಿವಾನಂದ, ಮುಖಂಡರಾದ ಆನಂದ್‌, ಮಂಜುನಾಥ್‌, ಬಾಲು, ವೆಂಕಟರವಣ, ಶ್ರೀರಾಮ್‌, ಅನಿಲ್‌, ಬಿ.ಎಂ.ಗಣೇಶ್‌, ನಾರಾಯಣಸ್ವಾಮಿ, ಚಂಟಿ ಇದ್ದರು.