HOLY ROSARY CHURCH, KUNDAPUR – 450 th JUBILEE SOUVENIR 2021

ಚಳಿಗಾಲದಲ್ಲಿ ಹೃದಯಾಘಾತ ಸಾಮನ್ಯವಾಗಿದೆ – ಸಂವಾದ ಕಾರ್ಯಕ್ರಮ ಡಿಸಿ ಸಿ.ಸತ್ಯಭಾಮ ಉದ್ಘಾಟನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

“ದುಶ್ಚಟಗಳಿಂದ ದೂರವಿದ್ದು, ಕಾಲಕಾಲಕ್ಕೆ ಹೃದಯ ತಪಾಸಣೆ ಮಾಡಿಸಿಕೊಂಡರೆ
ಹೃದಯಾಘಾತದಿಂದಾಗುವ ಜೀವ ಹಾನಿ ತಪ್ಪಿಸಬಹುದು- ಡಿಸಿ ಸಿ.ಸತ್ಯಭಾಮ”

ಕೋಲಾರ:- ಆರೋಗ್ಯಕ್ಕೆ ಮಾರಕವಾದ ಮದ್ಯ,ಧೂಮಪಾನದಂತಹ ದುಶ್ಚಟಗಳಿಂದ ದೂರವಿದ್ದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ,ಚಿಕಿತ್ಸೆ ಪಡೆಯುವುದರಿಂದ ಹೃದಯಾಘಾತದಿಂದಾಗುವ ಜೀವಹಾನಿ ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಮಣಿಪಾಲ್ ಆಸ್ಪತ್ರೆ ಬೆಂಗಳೂರು ಹಾಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ “ಚಳಿಗಾಲದಲ್ಲಿ ಹೃದಯಾಘಾತ ಸಾಮನ್ಯವಾಗಿದೆ” ಈ ಬಗ್ಗೆ ಪತ್ರಕರ್ತರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆರೋಗ್ಯದ ಮಹತ್ವವನ್ನು ಅರಿತು ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಜೀವ ರಕ್ಷಣೆ ಸಾಧ್ಯ ಎಂದ ಅವರು ಜತೆಗೆ ನಮ್ಮ ಆಹಾರ ಪದ್ದತಿಯಲ್ಲೂ ಎಚ್ಚರಿಕೆ ಅಗತ್ಯ ಎಂದು ತಿಳಿಸಿದರು.
ದೇಹದ ಪ್ರಮುಖವಾದ ಅಂಗ ಹೃದಯವಾಗಿದ್ದು, ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ಸಮಯಕ್ಕೆ ಸರಿಯಾಗಿ ವೈದ್ಯರ ಬಳಿ ತೋರಿಸಿ ಸಲಹೆ, ಸೂಚನೆಗಳನ್ನು ಪಡೆದು ಜೀವ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ದಿನದ 24ಗಂಟೆಯೂ ಸಾಮಾಜಿಕ ಒಳತಿಗಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹೃದಯಕ್ಕೆ ಆಯಾಸವಾಗುತ್ತದೆ. ಆದ್ದರಿಂದ ಜಾಗ್ರತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ನುಡಿದರು.
`ವೈದ್ಯೋನಾರಾಯಣಹರಿ’ ಎಂಬ ಲೋಕರೂಢಿ ಮಾತಿನಂತೆ ಬಡವರ, ಸರ್ವಸಮಾನ್ಯರ ಆರೋಗ್ಯವನ್ನು ಕಾಪಾಡುವ ಮೂಲಕ ವೈದ್ಯರು ಸಾಕ್ಷಾತ್ ದೇವರಾಗಿದ್ದಾರೆ, ಬೆಂಗಳೂರಿನಿಂದ ಬಂದು ಜಿಲ್ಲೆಯ ಪತ್ರಕರ್ತರ ಕುರಿತು ಕಾಳಜಿ ತೋರಿರುವ ಮಣಿಪಾಲ್ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಣಿಪಾಲ್ ಆಸ್ಪತ್ರೆಯ ಸಲಹೆಗಾರ ಹಾಗೂ ಹೃದಯರೋಗ ತಜ್ಞ ಡಾ.ಪ್ರದೀಪ್ ಹಾರನಹಳ್ಳಿ ಮಾತನಾಡಿ, ಬೇಸಿಗೆಯ ಕಾಲಕ್ಕಿಂತಲೂ ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡುಬರುತ್ತದೆ. ಈ ಮೊದಲೇ ಹೃದಯಾಘಾತದಿಂದ ಬಳಲಿದವರು, ಮಧುಮೇಹ, ಅಧಿಕ ರಕ್ತದೊತ್ತಡ ವಿರುವವವರು ಹಾಗೂ 65ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಚಳಿಗಾಲದಲ್ಲಿ ಹೃದಯಾಘಾತ ಶೇ.30ರಷ್ಟು ಹೆಚ್ಚಾಗಿ ಆಗುತ್ತದೆ ಎಂದು ತಿಳಿಸಿದರು
ಚಳಿಗಾಲಕ್ಕೆ ಹೊಂದಿಕೊಳ್ಳುವ ಕೆಲವು ಶಾರೀರಿಕ ಬದಲಾವಣೆಗಳಾಗುವುದರಿಂದ ಹೃದಯ ರೋಗವನ್ನು ಪ್ರಚೋದಿಸುವ ಸಾಧ್ಯತೆ ಇರುತ್ತದೆ. ವಾತಾವರಣ ಶೀತಮಯವಾಗಿದ್ದು ದೇಹದಲ್ಲಿ ಹೆಚ್ಚುವರಿ ರಕ್ತದ ಬೇಡಿಕೆಯನ್ನು ಪೂರೈಸಲು ಹೃದಯವು ಅಧಿಕ ಶ್ರಮವಹಿಸುವುದರಿಂದ ಹೃದಯಾಘಾತವು ಸಂಭವಿಸುತ್ತದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಾಕ್ಸ್, ಕೈ ಕವಚ, ಮಫ್ಲರ್ ಮತ್ತು ಬೆಚ್ಚಗಿನ ಉಡುಪುಗಳನ್ನು ಉಪಯೋಗಿಸುವ ಮೂಲಕ ಹೃದಯಾಘಾತವನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಎದೆನೋವು ಕಾಣಿಸಿ ಕೊಂಡರೆ ತಡ ಮಾಡದೆ ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯಕ. ವ್ಯಾಯಾಮ ಮಾಡುವುದು, ಕೊಬ್ಬಿನ ಆಹಾರ ಸೇವನೆ ಮಿತಗೊಳಿಸಿ, ಮಧ್ಯಪಾನ, ಧೂಮಪಾನದಿಂದ ದೂರವುಳಿದು ಹಾಗೂ ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸುವ ಮೂಲಕ ಹೃದ್ರೋಗ ತಡೆಯಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಕಾಣಿಸಿಕೊಂಡ ದಿನಗಳಿಂದಲೂ ಇಲ್ಲಿಯವರೆಗೆ ಮೂರು ಬಾರಿ ಆರೋಗ್ಯ ಕಾಪಾಡಿಕೊಳ್ಳುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಪತ್ರಕರ್ತರ ಸುರಕ್ಷತೆಗಾಗಿ ಮಣಿಪಾಲ್ ಆಸ್ಪತ್ರೆಯವರು ಆರೋಗ್ಯ ಕಾರ್ಡ್ ನೀಡಿ, ಶೇ. 20 ರಷ್ಟು ರಿಯಾಯಿತಿಯನ್ನು ರಾಜ್ಯದ ಯಾವುದೇ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‍ಕುಮಾರ್, ಪತ್ರಕರ್ತರು ಹಾಗೂ ಮಣಿಪಾಲ್ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು
.

ಕಥಾಪಾಠ್ – 4: ಕೊಂಕಣಿಂತಲ್ಯೊ ವಿದೇಶಿ ಕಥಾ

JANANUDI.COM NETWORK



ಆಶಾವಾದಿ ಪ್ರಕಾಶನ್ ಆನಿ ಉಜ್ವಾಡ್ ಪಂದ್ರಾಳೆಂ ಹಾಣಿಂ ಡಿಜಿಟಲ್ ಮಾಧ್ಯಮಾಚೆರ್ ಮಾಂಡುನ್ ಹಾಡ್‌ಲ್ಲ್ಯಾ ರಾಶ್ಟ್ರೀಯ್ ಮಟ್ಟಾಚ್ಯಾ ಕಥಾ-ಅಧ್ಯಯನ್ ಶಿಂಕಳೆಚಿ ಚೊವ್ತಿ ಶಿಂಕಳ್ (ವೆಬಿನಾರ್) ದಸೆಂಬ್ರ್ 6 ತಾರಿಕೆಚ್ಯಾ ಆಯ್ತಾರಾ ಸಾಂಜೆರ್ 4:30 ಥಾವ್ನ್ 6:00 ಪರ‍್ಯಾಂತ್ ಚಲ್ಲೆಂ; ಕೊಂಕಣಿಂತ್ಲ್ಯೊ ಪರ್ಗಾಂವ್ಚ್ಯೊ/ವಿದೇಶಿ ಕಥಾ. ಆಶಾವಾದಿ ಪ್ರಕಾಶನಾಚ್ಯಾ ವಲ್ಲಿ ಕ್ವಾಡ್ರಸಾನ್ ಯೆವ್ಕಾರ್ ಉಲವ್ಪ್ ಕರುನ್ ಕಾರ್ಯಾಚೆಂ ಸುಂಕಾಣ್ ಘೆತ್‌ಲ್ಲ್ಯಾ, ಗೊಂಯ್ಚ್ಯಾ ಕಾರ್ಮೆಲ್ ಕೊಲೆಜಿಂತ್ ಸಹ-ಪ್ರಾಧ್ಯಾಪಿಕಾ ಜಾವ್ನ್ ವಾವ್ರ್ ಕರ್ಚ್ಯಾ ಬಾಯ್ ಸಿಯಾಲಿನಿ ಫೆರ್ನಾಂಡಿಸಾಚಿ ಮಟ್ವಿ ವಳೊಕ್ ಕರುನ್ ದಿತಚ್ ಬಾಯ್ ಕೊನ್ಸೆಪ್ಟಾ ಫೆರ್ನಾಂಡಿಸ್ ಆಳ್ವಾನ್ ಕೊಂಕಣಿ ಕಾಣಿಯಾಂನಿ ವಿದೇಶಿ/ಪರ್ಗಾಂವ್ಚೆಂ ಜಿವಿತ್ ಪಿಂತ್ರಾಯಿಲ್ಲ್ಯಾ ಚ್ಯಾರ್-ಪಾಂಚ್ ಕಾಣಿಯೆಂಕ್ ವಿಂಚುನ್ ಅಪ್ಲೆಂ ಉಪನ್ಯಾಸ್ ದಿತಚ್ ಗೊಂಯ್ಚೊ ಕಥಾಕಾರ್ ಬಾಬ್ ವಿಲ್ಲಿ ಗೋಯೆಸಾನ್ ಗೊಂಯ್ಚ್ಯಾ ಕೊಂಕಣಿ ಸಾಹಿತ್ಯಾಂತ್ಲ್ಯೊ ಥೊಡ್ಯೊ ವಿದೇಶಿ ಚಿಂತ್ಪಾಚ್ಯಾ ಸಾಹಿತ್ಯಾಚೆರ್ ಅಪ್ಲೆಂ ಉಪನ್ಯಾಸ್ ದಿಲೆಂ.

ಬಾಬ್ ಶೈಲೇಂದ್ರ ಮೆಹ್ತಾನ್ ಕೊಂಕಣಿ ಕಥೆಂಚೆರ್ ಖೊಲಾಯೆಚೆಂ ಅಧ್ಯಯನಾಚೆಂ ’ಕಥಾಪಾಠ್ – ದುಸ್ರಿ ಶಿಂಕಳ್’ ವಿಶಿಂ ಮಾಹೆತ್ ದಿವುನ್, ಕೊಂಕಣಿಂತ್ಲ್ಯಾ ಕಥೆಂಚೆರ್ ತುಲನಾತ್ಮಕ್ ಅಭ್ಯಾಸ್ (Comparative analysis) ಚಲಂವ್ಚಿಂ ಕಥಾಪಾಠ್; ಜನೆರ್-ಫೆಬ್ರೆರ್ ಮಯ್ನ್ಯಾಂನಿ ಚಲಂವ್ಚೆವಿಶಿಂ ಸವಿಸ್ತಾರ್ ವಿವರ್ ದಿಲೊ. ಕಥಾಪಾಠಾಂತ್ ಹಾಜರ್ ಆಸ್ಲೆಲ್ಯಾಂ ಪಯ್ಕಿಂತ್ ಅಪ್ಲೆ ವಿಚಾರ್ ವೆಕ್ತ್ ಕರಿತ್ ರಿಟಾಯರ್ಡ್ ಡೀನ್ ತಶೆಂಚ್ ಗೊಂಯ್ಚ್ಯಾ ವಿಶ್ವ್’ ವಿಧ್ಯಾಲಯಾಚ್ಯಾ ಕೊಂಕಣಿ ವಿಭಾಗಾಚಿ ಆಧ್ಲಿ ಮುಖೇಸ್ತ್ ಡೊ|ಚಂದ್ರಲೇಖ ಡಿ’ಸೋಜಾನ್ ಕೊಂಕಣಿ ಸಾಹಿತ್ಯಾಕ್ ಹೆಂ ಕಥಾಪಾಠ್ ಖೂಪ್ ಮಹತ್ವಾಚೆಂ ಯೋಗ್‍ದಾನ್ ದೀಂವ್ಕ್ ಸಕ್ತಲೆಂ ಮ್ಹಣಾಲಿ.

ದಲ್ಗಾದೊ ಕೊಂಕಣಿ ಅಕಾಡೆಮಿಚೆ ಅಧ್ಯಕ್ಷ್ ಬಾಬ್ ವಿನ್ಸಿ ಕ್ವಾಡ್ರೊಸ್ ಹಾಣಿಂ ಧಿನ್ವಾಸ್ ಪಾಟಯ್ಲೆ. ಬಾಯ್ ಸಿಯಾಲಿನಿ ಫೆರ್ನಾಂಡಿಸಾನ್ ಹೆಂ ವೆಬಿನಾರ್ ಚಲವ್ನ್ ವೆಲೆಂ. ಗೊಂಯ್, ಕರ್ನಾಟಕ್, ಮುಂಬಯ್, ಕೇರಳಾ ಆನಿ ವಿದೇಶ್ ಥಾವ್ನ್ ಸಾಠ್ ವಿಧ್ಯಾರ್ಥಿಂನಿ ಹ್ಯಾ ಕಥಾಪಾಠಾಂತ್ ವಾಂಟೊ ಘೆತ್ಲೊ.

ಕುಂದಾಪುರ ಭಾರತೀಯ ರೆಡ್ ಕ್ರಾಸ್ : ವಿಶ್ವ ವಿಶೇಷ ಚೇತನರ ದಿನಾಚರಣೆ

JANANUDI.COM NETWORK

ಕುಂದಾಪುರ, 05-12-2020 ರಂದು ವಿಶ್ವ ವಿಶೇಷ ಚೇತನರ ದಿನಾಚರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ತೆಯು, ಭಾರತೀಯ ರೆಡ್ ಕ್ರಾಸ್ ಸಂಸ್ತೆಯ ರಕ್ತ ನಿಧಿ ಕೇಂದ್ರದಲ್ಲಿ ಆಚರಿಸಿದರು. ರೆಡ್ ಕ್ರಾಸ್ ಸಂಸ್ತೆಯ ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ, ಇಬ್ಬರು ಅಹ್ರ್‍ಃ ವ್ಯಕ್ತಿ ಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ರಿಕ್ಶಾ ಚಾಲಕ ರಾಜೀವ ಇವರರಿಗೆ ವೈದ್ಯಕೀಯ ವೆಚ್ಚಕ್ಕಾಗಿ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಲಾಯಿತು ಮತ್ತು ಹೋಟೆಲ್ ಕಾರ್ಮಿಕ ರಾಮ ಇವರಿಗೆ ಹತ್ತು ಸಾವಿರ ಬೆಲೆ ಬಾಳುವ ಶ್ರವಣ ಸಾಧನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಡಾ . ಸೋನಿ ಡಿಕೊಸ್ಟಾ, ಸೀತಾರಾಮ್ ನಕ್ಕತ್ತಾಯ, ಸಂತೋಷ್ ಶೆಟ್ಟಿ ವಕೀಲರು, ಗಣೇಶ್ ಆಚಾರ್ಯ, ಅಬ್ದುಲ್ ಬಶೀರ್, ನಾರಾಯಣ ದೇವಾಡಿಗ, ಸದಾನಂದ ಶೆಟ್ಟಿ ಮತ್ತು ಸತ್ಯನಾರಾಯಣ ಪುರಾಣಿಕ್ ಹಾಜರಿದ್ದರು.
ಕಾರ್ಯದರ್ಶಿಯವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.

ವಂದೇ ಮಾತರಂ ವಿವಿಧೋದ್ದೇಶ ಸೌಹಾರ್ದ ಸಂಘದ ಮಹಾಸಭೆ

JANANUDI.COM NETWORK

ಕುಂದಾಪುರ: ಸ್ಥಳೀಯ ಭಂಡಾರ ಕಾರ್ಸ್ ಕಾಲೇಜಿನ 1985-86ನೇ ಸಾಲಿನ ಸಮಾನ ಮನಸ್ಕ ಬಿಕಾಂ ಪದವಿ ವಿದ್ಯಾರ್ಥಿಗಳಿಂದ ಆರಂಭಗೊಂಡ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಂ.ರಾಜ್ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.    ಸಂಘವು ಸೇವಾ ಮನೋಭಾವ ಹಾಗೂ ಅತ್ಯಂತ ಪಾರದರ್ಶಕವಾಗಿ ವ್ಯವಹಾರ ನಡೆಸುತ್ತಿದ್ದು,ಸರ್ವ ಸದಸ್ಯರ ಸಹಕಾರದಿಂದ ಪ್ರಗತಿಯ ಪಥ ದಲ್ಲಿ ಸಾಗುತ್ತಿದೆ. ಸಿಬಂದಿಗಳ ಉತ್ತಮ ಸೇವೆಯಿಂದ ಗ್ರಾಹಕ ವಲಯದಲ್ಲೂ ಹೆಸರನ್ನು ಗಳಿಸಿರುವುದು ಹೆಮ್ಮೆಯ ವಿಚಾರ ಎಂದು ತಮ್ಮ ಅಧ್ಯಕ್ಷೀಯ ಭಾಷಣ ದಲ್ಲಿ ಹೇಳಿದರು.                      ಸಂಘದ ಕಾರ್ಯದರ್ಶಿ ಜಗನ್ನಾಥ್ ಪುತ್ರನ್ ಸಂಘದ ನಡಾವಳಿಗಳನ್ನು ಮಂಡಿಸಿದರು. ಸಂಘದ ಸ್ಥಾಪಕ ಅಧ್ಯಕ್ಷ ವಿನಯ ಪಾಯ್ಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಒಜಲಿನ್ ರೆಬೆಲ್ಲೋ, ನಿರ್ದೇಶಕರಾದ ಶಿವಮೂರ್ತಿ ಭಂಡಾರ ಕಾರ್, ನಾಗರಾಜ್ ಶೇರಿಗಾರ್,ವಸಂತ ಶೆಟ್ಟಿ ಉಪಸ್ಥಿತರಿದ್ದರು.ನಿರ್ದೇಶಕ ರಾಜೀವ ಕೋಟ್ಯಾನ್ ವಂದಿಸಿದರು.

ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮ

JANANUDI.COM NETWORK


ಕುಂದಾಪುರ: ಡಿಸೆಂಬರ್ 5ರಂದು ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶ್ರೀಕಾಂತ್, ರೀಜನಲ್ ಹೆಲ್ತ್‍ಕೇರ್‍ಗ್ರೂಪ್,ಸಿಂಗಾಪುರ ಇವರು ಮಾತನಾಡಿ“ಶ್ರೇಷ್ಠ ಮತ್ತುಉದಾತ್ತಜೀವನ” ಎಂಬ ವಿಷಯದ ನೆಲೆಯಲ್ಲಿ ಮಾತನಾಡಿ ಬದುಕು ನಮ್ಮವಿಚಾರಗಳಿಗೆ ಪೂರಕವಾಗಿರುತ್ತದೆ. ಅಮೂಲ್ಯವಾದ ಈ ಬದುಕು ಸದಾಉದಾತ್ತ ಆಲೋಚನೆಗಳೊಂದಿಗೆ ಖುಷಿಯಾಗಿರಬೇಕು. ನಮ್ಮನ್ನು ನಾವು ಚೆನ್ನಾಗಿ ಖುಷಿಯಾಗಿರಿಸಿಕೊಳ್ಳಬೇಕೆಂದರೆ ಇರುವ ಸಮಯದಲ್ಲಿ ಒಳ್ಳೆಯ ವಿಚಾರಗಳನ್ನು ಸಹ ಅಳವಡಿಸಿಕೊಳ್ಳಬೇಕು. ಯಾಕೆಂದರೆ ಸಮಯವೆಂದಿಗೂ ನಮಗಾಗಿ ಕಾಯುವುದಿಲ್ಲ’ ಎಂದು ಹೇಳಿದರು.
ಅಲ್ಲದೇನಮ್ಮ ಶ್ರೇಷ್ಠ ವಿಚಾರಗಳು ನಮ್ಮೊಳಗೆ ಪರಿಪೂರ್ಣತೆಯನ್ನುರೂಪಿಸುತ್ತದೆ. ನಿರಂತರವಾಗಿಉದಾತ್ತ ಮೌಲ್ಯಗಳ ನೆಲೆಯಲ್ಲಿ ನಮ್ಮ ಬದುಕು ನಡೆಸಬೇಕು. ನಮ್ಮ ನಿತ್ಯದ ಬದುಕಿನಲ್ಲಿಆದಷ್ಟು ಒಳ್ಳೆಯ ವಿಚಾರ ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಖುಷಿಯಾಗಿರಿಸಬೇಕು ಎಂದು ಅಭಿಪ್ರಾಯಪಟ್ಟರು.
ಭಂಡಾರ್ಕಾರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ (ರಿ) ಅಧ್ಯಕ್ಷರಾದ ಶ್ರೀಶಾಂತಾರಾಮ್ ಎ.ಭಂಡಾರ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿ ಮಾತನಾಡಿ ಜೀವನದ ಗುರಿಯನ್ನು ತಿಳಿಯಬೇಕೆಂದರೆ ಭಗವದ್ಗೀತೆಯನ್ನು ಅರ್ಥೈಸಿಕೊಳ್ಳಬೇಕು. ಅಲ್ಲದೇ ದೇವರ ಭಯವೇಜ್ಞಾನದ ಮೂಲವಾಗಿದೆ ಎಂದು ಹೇಳಿದರು.
ಭಂಡಾರ್ಕಾರ್ಸ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಹೆಚ್.ಶಾಂತಾರಾಮ್ ದಿಕ್ಸೂಚಿ ಭಾಷಣ ಮಾಡಿದರು.
ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ (ರಿ) ಸದಸ್ಯರಾದ ಶ್ರೀ. ಕೆ.ಶಾಂತಾರಾಮ್ ಪ್ರಭು ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು.
ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲಡಾ. ಜಿ.ಎಂ.ಗೊಂಡ ವಂದಸಿದರು.
ಉಪನ್ಯಾಸಕಿ ರೋಹಿಣಿ.ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು. ತಾಂತ್ರಕವಾಗಿಕಾಲೇಜಿನ ಐಟಿ ತಂಡದ ಸದಸ್ಯರಾದ ಅಮರ್ ಸಿಕ್ವೆರಾ, ಶಂಕರನಾರಾಯಣ ಉಪಾಧ್ಯಾಯ ಮತ್ತು ವಿಕ್ರಮ್‍ಅವರು ಸಹಕರಿಸಿದರು
.

ವಿಕಲಚೇತನರು ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಬಳಸಿ,ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಕಡೆಗೆ ಸಾಗಬೇಕು : ಸಿ.ಹೆಚ್ ಗಂಗಾಧರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಡಿ.3: ಜಿಲ್ಲೆಯ ವಿಕಲಚೇತನರು ಸಂಬಂಧಪಟ್ಟ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳವ ಮೂಲಕ ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಕಡೆಗೆ ಸಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಹೆಚ್ ಗಂಗಾಧರ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರ ದಿನಾಚರಣೆ-2020 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, 2016ರ ಅಧಿನಿಯಮ ಕಾನೂನು ಅನುಷ್ಟಾನಗೊಂಡಿದೆ ವಿಕಲಚೇತನರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬೇಟಿ ನೀಡಿ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಂ.ಜಿ ಪಾಲಿ ಮಾತನಾಡಿ, ವಿಕಲಚೇತನರಿಗೆ ವಿವಿಧ ರೀತಿಯ ಸಮಸ್ಯೆಗಳಿದ್ದು, ಯು.ಡಿ.ಐ.ಡಿ ಗುರುತಿನ ಚೀಟಿಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ಸಮಸ್ಯೆಗಳ ಪರಿಹಾರ ಹಾಗೂ ಇಲಾಖೆಯ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಅಂಗವಿಲಕರ ಹಕ್ಕು ಕಾಯ್ದೆಯಡಿ ವಿಕಲಚೇತನರಿಗೂ ಸಮಾನ ಅವಕಾಶ ಇದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜಾಗೃತರಾಗಿ ಇತರರಿಗೆ ತಾವೇ ಅರಿವು ಮೂಡಿಸಬೇಕೆಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಮಾತನಾಡಿ, ಇಲಾಖೆಯಿಂದ ಈಗಾಗಲೇ ವಿಕಲಚೇತನರಿಗೆ ಯಂತ್ರಚಾಲಿತ ವಾಹನಗಳನ್ನು ನೀಡಿದ್ದು, ಉಳಿದ ವಿಕಲಚೇತನರಿಗೂ ಅವರಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಇಲಾಖೆಯು ಮುಂದಾಗಬೇಕೆಂದರು.
ವಿಕಲಚೇತನರು ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಯಾವುದೇ ಅನ್ಯಾಯವಾದಲ್ಲಿ ಅದನ್ನು ಪ್ರಶ್ನಿಸುವ ಮನೋಬಾವವನ್ನು ಬೆಳೆಸಿಕೊಂಡು ಇಲಾಖೆ ವತಿಯಿಂದ ದೊರೆಯುವ ಎಲ್ಲಾ ಸೌಲತ್ತುಗಳನ್ನು ಸದುಪಯೋಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸ್ವಾವಲಂಭಿ ಜೀವನಕ್ಕೆ ಮುಂದಾಗಬೇಕೆಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ, ಅಂಗವಿಕಲರಿಗೆ ವಿಕಲಚೇತನತೆ ಎಂಬುದು ಶಾಪವಲ್ಲ. ತಮಗೆ ಅಂಗವಿಕಲತೆ ಇದೆ ಎಂಬ ಕೊರಗಿನಿಂದ ಹೊರ ಬಂದು ಸಮಾಜದಲ್ಲಿ ನಾವು ಎಲ್ಲರಲ್ಲೂ ಒಬ್ಬರಂತೆ ಜೀವನ ನಡೆಸುವುದನ್ನು ರೂಡಿಸಿಕೊಳ್ಳುವ ಮೂಲಕ ನಾವು ಸಹ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಧನೆಯ ಮೂಲಕ ಕೇಳುತ್ತಿದ್ದೇವೆ ಹಾಗೂ ನೋಡುತ್ತಿದ್ದೇವೆ ಎಂದು ಪ್ರಶಂಸಿಸಿದರು.


ಕಾರ್ಯಕ್ರಮದಲ್ಲಿ ವಕೀಲ ಕೆ.ಆರ್ ಧನರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪದಾಧಿಕಾರಿಗಳು, ಕಾನೂನು ಸೇವೆಗಳ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಎಂ.ಮುನಿರಾಜಪ್ಪ ಸ್ವಾಗತಿಸಿ, ವಂದಿಸಿದರು.

ಶ್ರೀನಿವಾಸಪುರ: ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ : ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ ಎಂದು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಹೇಳಿದರು.
  ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕನಕದಾಸ ಜಯಂತಿ ಸಮಾರಂಭದಲ್ಲಿ ಕನಕ ದಾಸರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು. ಅವರು ಯೋಧನಾಗಿ ಪರಾಕ್ರಮಕ್ಕೆ, ಕವಿಯಾಗಿ ಸಮಾಜ ಸುಧಾರಣೆಗೆ ಹೆಸರಾಗಿದ್ದಾರೆ ಎಂದು ಹೇಳಿದರು.  ಅವರ ನೆನೆಪು ಜಯಂತಿಗೆ ಸೀಮಿತವಾಗಬಾರದು. ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತ ಗೊಳಿಸಬಾರದು. ಸಮಾಜದ ಹಿತಕ್ಕೆ ಶ್ರಮಿಸಿದ ವ್ಯಕ್ತಿಗೆ ಜಾತಿ ಮತದ ಭೇದ ಇರುವುದಿಲ್ಲ. ಜಾತಿ ವ್ಯವಸ್ಥೆಯನ್ನು ತಮ್ಮ ಕೀರ್ತನೆಯಲ್ಲಿ ಪ್ರಶ್ನಿಸಿದ ಹಾಗೂ ಜಾತಿ ವ್ಯವಸ್ಥೆಯ ಟೊಳ್ಳುತನವನ್ನು ಬಯಲು ಮಾಡಿದ ಮಹಾ ಸಂತ ಕವಿ ಕನಕದಾಸರು ಎಂದು ಹೇಳಿದರು. ಉಪ ತಹಶೀಲ್ದಾರ್‌ ಮಲ್ಲೇಶ್‌, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ ಇದ್ದರು.

ಶ್ರೀನಿವಾಸಪುರ: ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕವಾಗಿದೆ : ತಾಲ್ಲೂಕು ಕುರುಬರ ಅಧ್ಯಕ್ಷ ಎಂ.ವೇಮಣ್ಣ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕವಾಗಿದೆ. ಸಮಾಜದ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಯಬೇಕು ಎಂದು ತಾಲ್ಲೂಕು ಕುರುಬರ ಅಧ್ಯಕ್ಷ ಎಂ.ವೇಮಣ್ಣ ಹೇಳಿದರು.
  ಪಟ್ಟಣದ ಕನಕ ಸಮುದಾಯ ಭವನದಲ್ಲಿ ತಾಲ್ಲೂಕು ಕುರುಬರ ಸಂಘದ ವತಿಯಿಂದ ಗುರುವಾರ ಏರ್ಪಡಿಸಿದ್ದ ಕನಕದಾಸರ ಜಯಂತಿ ಸಂಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಕುರುಬ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮುದಾಯದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.  ನಂದಗೋಕುಲ ಆಶ್ರಮದ ಸುಧೀರ ಚೈತನ್ಯ ಸ್ಮಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಕನಕದಾಸರ ಸಾಹಿತ್ಯ ಕೃತಿಗಳನ್ನು ಓದಬೇಕು. ಆ ಕೃತಿಗಳ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.  ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಏರ್ಪಿಡಿಸಲಾಗಿತ್ತು. ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಕೆ.ವಿ ಮಂಜುನಾಥ್, ಮುಖಂಡರಾದ ಎಂ.ಮೂರ್ತಿ, ವಾಸುದೇವ್‌ ಇದ್ದರು.

ಶ್ರೀನಿವಾಸಪುರ: ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ : ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ ಎಂದು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕನಕದಾಸ ಜಯಂತಿ ಸಮಾರಂಭದಲ್ಲಿ ಕನಕ ದಾಸರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು. ಅವರು ಯೋಧನಾಗಿ ಪರಾಕ್ರಮಕ್ಕೆ, ಕವಿಯಾಗಿ ಸಮಾಜ ಸುಧಾರಣೆಗೆ ಹೆಸರಾಗಿದ್ದಾರೆ ಎಂದು ಹೇಳಿದರು.
ಅವರ ನೆನೆಪು ಜಯಂತಿಗೆ ಸೀಮಿತವಾಗಬಾರದು. ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತ ಗೊಳಿಸಬಾರದು. ಸಮಾಜದ ಹಿತಕ್ಕೆ ಶ್ರಮಿಸಿದ ವ್ಯಕ್ತಿಗೆ ಜಾತಿ ಮತದ ಭೇದ ಇರುವುದಿಲ್ಲ. ಜಾತಿ ವ್ಯವಸ್ಥೆಯನ್ನು ತಮ್ಮ ಕೀರ್ತನೆಯಲ್ಲಿ ಪ್ರಶ್ನಿಸಿದ ಹಾಗೂ ಜಾತಿ ವ್ಯವಸ್ಥೆಯ ಟೊಳ್ಳುತನವನ್ನು ಬಯಲು ಮಾಡಿದ ಮಹಾ ಸಂತ ಕವಿ ಕನಕದಾಸರು ಎಂದು ಹೇಳಿದರು.
ಉಪ ತಹಶೀಲ್ದಾರ್‌ ಮಲ್ಲೇಶ್‌, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ ಇದ್ದರು.