HOLY ROSARY CHURCH, KUNDAPUR – 450 th JUBILEE SOUVENIR 2021

ಮತಗಟ್ಟೆ ಅಧಿಕಾರಿಗಳು ಡಿ.13ರವರೆಗೆ ಪ್ರತಿ ಭಾನುವಾರ ವಿಶೇಷ ಅಭಿಯಾನ :18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳುತ್ತಾರೆ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌

ಶ್ರೀನಿವಾಸಪುರ: ತಾಲ್ಲೂಕಿನ ಎಲ್ಲ ಮತಗಟ್ಟೆ ಅಧಿಕಾರಿಗಳು ಡಿ.13ರವರೆಗೆ ಪ್ರತಿ ಭಾನುವಾರ ವಿಶೇಷ ಅಭಿಯಾನ ಹಮ್ಮಿಕೊಂಡು, 18 ವರ್ಷ ತುಂಬಿದ ಯುವಕ, ಯುವತಿಯನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸಿಕೊಳ್ಳುತ್ತಾರೆ. ಆ ಅವಧಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ನಮೂನೆ – 6, ತಿದ್ದುಪಡಿಗೆ ನಮೂನೆ – 8, ಹಾಗೂ ನಮೂನೆ 8 ಎ ಮತ್ತು ನಮೂನೆ 7 ರ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಅರ್ಹ ವ್ಯಕ್ತಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು ಎಂದು ಮನವಿ ಮಾಡಿದ್ದಾರೆ.

ಭಂಡಾರ್ಕಾರ್ಸ್ ಕಾಲೇಜ್ : ನಿವೃತ್ತಿ ಪಡೆದ ಶಿಕ್ಷಕೇತರರ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

JANANUDI.COM NETWORK

ಕುಂದಾಪುರ: ನವೆಂಬರ್ 28ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನಿಂದ ಅಟೆಂಡರ್ ಸೇವೆಯಿಂದ ನಿವೃತ್ತಿ ಪಡೆದ ಶ್ರೀ ದಿನಕರ ಶೆಟ್ಟೆಗಾರ್. ಯು ಮತ್ತು ಶ್ರೀ ಸುಬ್ಬಣ್ಣ ಎಸ್. ಇವರಿಗೆ ಶಿಕ್ಷಕೇತರರ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿದ ಶ್ರೀ ದಿನಕರ ಶೆಟ್ಟೆಗಾರ್.ಯು ಮಾತನಾಡಿ ನನ ಭಂಡಾರ್ಕಾರ್ಸ್ ಕಾಲೇಜು ಕಛೇರಿಯ ಕಾರ್ಯವೈಖರಿ ಕುರಿತು ಬಹಳ ಅನುಭವವನ್ನು ಕಟ್ಟಿಕೊಟ್ಟಿದೆ ಎಂದು ಹೇಳಿದರು.
ಶ್ರೀ ಸುಬ್ಬಣ್ಣ ಎಸ್ ಮಾತನಾಡಿ ಕಾಲೇಜು ನನ್ನ ಮನೆ ಇದ್ದಂತೆ. ನನಗೆ ನನ್ನ ಮನೆಗೆ ಅನ್ನ ನೀಡಿದ ಸಂಸ್ಥೆಗೆ ಸದಾ ಋಣಿಯಾಗಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಎನ್ ಪಿ. ನಾರಾಯಣ ಶೆಟ್ಟಿ ಮಾತನಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಹತ್ತು ಹಲವು ಕೊಡುಗೆ ಇರುತ್ತದೆ. ಅಲ್ಲದೆ ಸರಕಾರಿ ನಿಯಮದಂತೆ ಸೇವೆಯಿಂದ ನಿವೃತ್ತಿ ಪಡೆದರು ನಮ್ಮ ಮನಸಿನಾಳದಲಿ ಸದಾ ಇರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ರೇಖಾ ಬನ್ನಾಡಿ ಮಾತನಾಡಿ ಸಂಸ್ಥೆಯ ಬೆಳವಣಿಗೆಗೆ ಶಿಕ್ಷಕೇತರರು ತುಂಬಾ ಮುಖ್ಯ ಎಂದು ಹೇಳಿದರು. ಕಾಲೇಜಿನ ಕಛೇರಿ ಮುಖ್ಯಸ್ಥರಾದ ಗೋಪಾಲ್ ನಾಯ್ಕ್ ಮಾತನಾಡಿ ಸುಬ್ಬಣ್ಣ ಕಾಲೇಜಿನ ಯಾವುದೇ ಕೆಲಸವನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದರು. ಹಾಗೆ ದಿನಕರ ಅವರು ಕಛೇರಿ ಕಾರ್ಯದಲ್ಲಿ ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂದು ಹೇಳಿದರು.
ಕಾಲೇಜಿನ ಶಿಕ್ಷಕೇತರ ಸಿಬ್ಬಂದಿ ಹರಿಶ್ಚಂದ್ರ ಪ್ರಾರ್ಥಿಸಿದರು. ಶ್ರೀಮತಿ ಶಾಂತಿ ಸ್ವಾಗತಿಸಿದರು. ಸತೀಶ್ ಎಂ. ಮತ್ತು ರಾಘವೇಂದ್ರ ಸನ್ಮಾನಿತರ ಪರಿಚಯಿಸಿದರು. ಶ್ರೀಮತಿ ವಿದ್ಯಾ ವಂದಿಸಿದರು. ಸುರೇಶ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 23 ನೇ ಮಹಾಸಭೆ

JANANUDI.COM NETWORK


ಉಡುಪಿ,ನ.30: ಉಡುಪಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 23 ನೇ ಮಹಾಸಭೆ ಉಡುಪಿ ಡೋನ್ ಬೊಸ್ಕೊ ಸಭಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರು ವಂ|ಚಾರ್ಲ್ ಸ್ ಮಿನೇಜೆಸ್ ಭಾಗವಹಿಸಿ ಸಂದೇಶವನ್ನು ನೀಡಿದರು.
ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಫೆಲಿಕ್ಸ್ ಪಿಂಟೊ,ಇಗ್ನೇಶಿಯಸ್ ಮೋನಿಸ್, ಫ್ರಾಂಕ್ಲಿನ್ ಮಿನೇಜೆಸ್, ಪರ್ಸಿ ಜೆ.ಡಿಸೋಜಾ, ಜೆಮ್ಸ್ ಡಿಸೋಜಾ, ಆರ್ಚಿಬಾಲ್ಡ್ ಡಿಸೋಜಾ,ಕೇವಿನ್ ಪಿರೇರಾ, ಜೆಸಿಂತಾ ಡಿಸೋಜಾ,ಡಾ|ನೇರಿ ಕರ್ನೇಲಿಯೊ, ಗಿಲ್ಬರ್ಟ್ ಫೆರ್ನಾಂಡಿಸ್, ಕಾರ್ಯದರ್ಶಿ ಫ್ರಾಂಕ್ ಕಾರ್ಡೋಜ ಉಪಸ್ಥಿತರಿದ್ದರು.
ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಎಲೋಶಿಯಸ್ ಡಿಆಲ್ಮೇಡಾ ಸ್ವಾಗತಿಸಿದರು. ಆಡಳಿತ ಮಂಡಳಿಯ ನಿರ್ದೇಶಕಿ ಲೊಯ್ಸೆಟಾ ಕರ್ನೇಲಿಯೊ, ಕಾರ್ಯಕ್ರ ನಿರೂಪಿಸಿದರು. ಉಪಾಧ್ಯಾಕ್ಷ ಲುವೀಸ್ ಲೋಬೊ ವಂದಿಸಿದರು
.

ರೋಟರಿ ಸಂಸ್ಥೆ ಕೋಲಾರ, ರೋಟರಿ ಬೆಂಗಳೂರು ಲೇಕ್ ಸೈಡ್ ಸಂಯುಕ್ತ ಆಶ್ರಯದಲ್ಲಿ ವಿವಿಧ ಸೇವಾಕಾರ್ಯಗಳು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಕೋಲಾರ :ರೋಟರಿ ಸಂಸ್ಥೆ ಕೋಲಾರ ಹಾಗೂ ರೋಟರಿ ಬೆಂಗಳೂರು ಲೇಕ್ ಸೈಡ್ ಸಂಯುಕ್ತಆಶ್ರಯದಲ್ಲಿ ನಗರದಲ್ಲಿ ವಿವಿಧ ಸೇವಾಕಾರ್ಯಗಳನ್ನು ಆಯೋಜಿಸಲಾಗಿತ್ತು.ಇಲ್ಲಿನ ರೋಟರಿ ಕೋಲಾರ ಭವನದಲ್ಲಿ ತ್ರಿಲಿಂಗಿ ಸಮುದಾಯಕ್ಕೆ ಸೇರಿದ 100 ಮಂದಿಗೆ ಆಹಾರ ಸಾಮಗ್ರಿಗಳ ಪಡಿತರ ಕಿಟ್‍ಗಳನ್ನು ವಿತರಿಸಲಾಯಿತು.
ತದನಂತg Àಅಂತರ ಗಂಗಾ ವಿಶೇಷಚೇತನ ಮಕ್ಕಳ ವಸತಿ ಶಾಲೆಯಲ್ಲಿ ಪಡಿತರ ಕಿಟ್ ಸೇರಿದಂತೆ ಹೊದಿಕೆಗಳು, ಟೀ ಶರ್ಟ್‍ಗಳು, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ರೋಟರಿಕೋಲಾರ ಸಂಸ್ಥೆಯ ಅಧ್ಯಕ್ಷ ಕೆ.ಆರ್ ಸೋಮಶೇಖರ್ , ಕಾರ್ಯದರ್ಶಿ ಎಂ. ಎಸ್. ರವಿ,ಬೆಂಗಳೂರು ಲೇಕ್ ಸಂಸ್ಥೆಯ ನಿರ್ದೇಶಕ ಕಾಶಿನಾಥ್, ಹೈಗ್ರೌಂಡ್ಸ್ ರೋಟರಿ ಅಧ್ಯಕ್ಷ ಅರವಿಂದ್ ನಾಯ್ಡು, ಜಿಲ್ಲಾ ನಿರ್ದೇಶಕ ಟಿ. ಎಸ್ ರಾಮಚಂದ್ರೇಗೌಡ, ಜಿಲ್ಲಾ ಸಹಾಯಕ ಗೌರ್ನರ್ ದಳಸನೂರು ಗೋಪಾಲಕೃಷ್ಣ, ಡಾ.ಕೆ.ಎಂ.ಜೆ. ಮೌನಿ, ನಾರಾಯಣಮೂರ್ತಿ, ಶಂಕರ್, ಕೋದಂಡಪ್ಪ, ಎಂ.ವಿ.ರಾವ್, ಬೈಚಪ್ಪ,ಸುಧಾಕರ್ ಸೇರಿದಂತೆ ಹಲವಾರು ರೋಟೆರಿಯನ್‍ಗಳು ಭಾಗವಹಿಸಿದ್ದರು
.

ತಲ್ಲೂ ರಿನ ’ತಲ್ಲೂ ರು ಫ್ಯಾ ಮಿಲಿ ಟ್ರ ಸ್ಟ್ (ರಿ.) ’ಹಿಗ್ಗು – ಅರಿವಿನಮಾಲೆ” ಪುಸ್ತ ಕ ದತ್ತಿಗೆ ಪಂಜು ಗಂಗೊಳ್ಳಿಯವರ “ಕುಂದಾಪ್ರ ಕನ್ನಡ ನಿಘಂಟು” ಆಯ್ಕೆ

JANANUDI.COM NETWORK

ಕುಂದಾಪುರ: ನ.೨೮ ತಲ್ಲೂ ರಿನ ’ತಲ್ಲೂ ರು ಫ್ಯಾ ಮಿಲಿ ಟ್ರ ಸ್ಟ್ (ರಿ) ಸ್ಥಾ ಪಿಸಿರುವ ಹಿಗ್ಗು- ಅರಿವಿನಮಾಲೆ” ಪುಸ್ತಜ ದತ್ತಿಯ  ಚೊಚ್ಚಲ ಗ್ರಾಂಟನ್ನು ಹಿರಿಯ ವ್ಯಂಗ್ಯ ಚಿತ್ರಕಾರ  ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ “ಕುಂದಾಪ್ರ ಕನ್ನಡ ನಿಘಂಟು” ಬೃಹತ್ ಕುಂದಾಪ್ರ ಕನ್ನಡದ  ಪದಕೋಶಕ್ಕೆ ನೀಡಲು ತ್ತೀರ್ಮಾನಿಸಲಾಗಿದೆ ಎಂದು ಟ್ರಸ್ಟಿನ   ಆಡಳಿತ ಟ್ರ ಸ್ಟಿ ಸುರೇಶ ತಲ್ಲೂ ರು ತಿಳಿಸಿದ್ದಾರೆ.

 ಕರಾವಳಿಯ ನೆಲ, ಜಲ, ಪರಿಸರ ಮತ್ತತ ಬದುಕನ್ನು ಆರೋಗ್ಯ ಪೂಣಾವಾದ ಮನಸುಗಳೊಂದಿಗೆ ಕಟ್ಟಿ ತಲ್ಲೂ ರು ಫ್ಯಾ ಮಿಲಿ ಟ್ರ ಸ್ಟ್ ನ ಪುಟ್ಟ ಪುಟ್ಟ ಹೆಜ್ಜೆಯ ಗುರುತು ಗಳ ಸರಣಿಯೇ “ಕರಾವಳಿ ಕಟ್ಟು ” ಈ ಚಳುವಳಿಯ ಭಾಗವಾಗಿ, ಈಗಾಗಲೇ “ತಲ್ಲೂ ರು ನುಡಿಮಾಲೆ” ದತ್ತಿ  ನಿಧಿ ಉಪನ್ಯಾಸಗಳು ನಡೆದಿವೆ ಮತ್ತು ಕೊರೊನಾ ಸಮಯದಲ್ಲೂ ರಚಿಷಲಾಗಿರುವ ವೀಡಿಯೊ  ಸರಣಿಗಳು ಚಾಲ್ತಿಯಲ್ಲಿವೆ. ಈ ಚಳುವಳಿಯ ಮಾಂದುವರಿದ ಭಾಗವಾಗಿ “ಹಿಗ್ಗು- ಅರಿವಿನ ಮಾಲೆ” ಯೋಜನೆಯನ್ನೂ ರೂಪಿಸಲಾಗಿದೆ. ಎರಡು ಲಕ್ಷ ರೂ.ಗಳ ಈ ಪುಸ್ತಕ ಪ್ರಕಟಣೆಯ  ದತ್ತಿಯನ್ನು ಕರಾವಳಿಯ ಅನನ್ಯ ಅಪರೂಪದ ಮೌಲಿಕವಾದ ಪುಸ್ತಕಗಳ ಪ್ರಕಟಣೆಗಾಗಿ ಮೀಸಲಿರಿಸಲು ತಲ್ಲೂ ರು ಫ್ಯಾ ಮಿಲಿ ಟ್ರ ಸ್ಟ್ (ರಿ.) ನಿಧಾರಿಸಿದ್ದು ಕಾಲಕಾಲಕ್ಕೆ ಮಹತ್ವದ, ಆಂದರೆ ಪ್ರಕಟಣೆಯ ಬೆಳಕನ್ನು  ಕಾಣಲು ಸಾಧ್ಯವಾಗದ ಅರ್ಹ ಪುಸ್ತಕ ಕಗಳನ್ನು ಬೆಳಕಿಗೆ ತರಲು ಈ ಗ್ರಾಂಟನ್ನು ವಿನಿಯೋಗಿಸಲಾಗುತ್ತದೆ’ ಕುಂದಾಪುರದಲ್ಲಿ  ಶುಕ್ರರವಾರ ನಡೆದ  ಪತ್ರಿಕಾ ಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

    ವ್ರತ್ತಿಪರ ವ್ಯಂಗ್ಯ ಚಿತ್ರಕಾರಾರಾದ ಪಂಜು ಗಂಗೊಳ್ಳಿ ಅವರು ಎರಡು ದಶಕಗಳ ಕಾಲ ಶ್ರಮಿಸಿ, ಸಂಗ್ರಹಿಸಿ, ಸಂಪಾದಿಸಿದ “ಕುಂದಾಪುರರ ಕನ್ನಡ ನಿಘಂಟು” ಸುಮಾರು 10,000ಕ್ಕೆ ಮಿಕ್ಕಿ, ಕುಂದಾಪುರ ಕನ್ನಡ  ಪದಗಳ ಮತ್ತು 1700 ರಷ್ಟು ಕುಂದಾಪುರ ಕನ್ನಡದ ನುಡಿ ಗಟ್ಟುಗಳ ಅರ್ಥವಿವರಣೆ ನೀಡುವ. ಜೊತೆಗೆ, ಕುಂದಾಪುರ ಕನ್ನಡದ  ರೀತಿ, ರಿವಾಜು, ಕಟ್ಟುಪಾಡು, ಆಚಾರ ವಿಚಾರಗಳನ್ನು ಒಳಗೊಂಡಿರುವ  ಒಂದು ವಿಶಿಷ್ಠ ಸಾಂಸ್ಕ್ರತಿಕ  ಕೋಶವಾಗಿದ್ದು, ವಿಶ್ವವಿಧ್ಯಾನಿಲಯ ಮಾಡಬೇಕಾದ ಮಹತ್ವದ ಕೆಲಸವನ್ನು ಮಾಡಿರುವ ಪಂಜು ಗಂಗೊಳ್ಳಿ ಅವರನ್ನು ಅಭಿನಂದಿಸಿರುವ ಟ್ರಸ್ಟ್, ಸುಮಾರು ೭೦೦ ಪುಟಗಳ ಈ ಶಬ್ದಕೋಶವನ್ನು ಕರಾವಳಿ ಕಟ್ಟುವ ಮಹತ್ವದ ಕೆಲಸದಲ್ಲಿ ದಾಖಲೀಕರಣದ ಹೆಜ್ಜೆ ಎಂದು ಸುರೇಶ ತಲ್ಲೂರು’ ಹೇಳಿದ್ದಾರೆ.

 ಉಡುಪಿಯ ಪ್ರೊಡಿಜಿ ಮುದ್ರಣ ಸಂಸ್ಥೆಯ ಪ್ರೊಡಿಜಿ ಪ್ರಕಾಶನದಿಂದ ಪ್ರಕಟಗೊಳ್ಳಲಿರುವ  ಈ ನಿಘಂಟು, ಮುಂದಿನ ವರ್ಷದ ಆದಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆಯೆಂದು ಟ್ರಸ್ಟಿಗಳು ತಿಳಿಸಿದ್ದಾರೆ.

ಪಂಜು ಗಂಗೊಳ್ಳಿ ವೃತ್ತಿಪರ ಕಾರ್ಟೂನಿಸ್ಟ್ ಆಗಿ ಮಾಂಬಯಲ್ಲಿ ನೆಲೆಸಿರುವ ಅವರ ಹುಟ್ಟುರೂ ಕುಂದಾಪುರದ ಗಂಗೊಳ್ಳಿ . ಭಂಡಾಕಾರ್ಸ್ ಕಾಲೇಜಿನಲ್ಲಿ  ಬಿಎಸ್ಸಿ ಮಾಡಿ, ಮಾಂಗಾರು ದಿನ ಪತ್ರಿಕೆಯಲ್ಲಿ ಕಾರ್ಟೂನಿಷ್ಟ್ ಆಗಿ ಕಾಲಿಟ್ಟವರು,  ’ಲಂಕೇಶ್  ಪತ್ರಿಕೆಯಲ್ಲಿ ಕೆಲವು ವರ್ಷಗಳ ಕಾಲ ಕಾರ್ಟೂನಿಸ್ಟ್ ಆಗಿದ್ದರು.  ಬಳಿಕ  ಪ್ರೀತಿಶ್ ನಂದಿ ಸಂಪಾದಕತ್ವದ  ’ದಿ ಸಂಡೇ ಆಬ್ಸರ್ವರ್’’  ಪತ್ರಿಕೆಯ  ಮೂಲಕ ಇಂಗ್ಲಿಷ್ ಪತ್ರಿಕೆಗಳುಗೆ  ಕಾಲಿಟ್ಟ ಅವರು,. ಕಳೆದ  ೨೦ ವರ್ಷಗಳಿಂದ ’ಬ್ಯುಸಿನೆಸ್ಟ ಇಂಡಿಯಾ’ ಪತ್ರಿಕೆಯಲ್ಲಿ  ಕಾರ್ಟೂನಿಸ್ಟ್ ಆಗಿ ದುಡಿಯುತಿದ್ದಾರೆ

  ಪಂಜು ಗಂಗೊಳ್ಳಿ ಯವರಿಗೆ ಆನುವಂಶಕವಾಗಿ ಬಂದ ಚಿತ್ರ ಕಲೆ ವೃತ್ತಿಯಾದರೆ, ಬರವಣಿಗೆ ಪ್ರವ್ರತ್ತಿ ’ಮೂಢ ನಂಬಿಕೆಗಳ ’ವಿಶ್ವರೂಪ’  ’ರುಜು’ ಇವರ ಪ್ರಕಟಿತ ಕೃತಿಗಳು. ಸ್ನೇಹಿತರನ್ನು ಒಗ್ಗು ಡಿಸಿಕಾಂಡು ಕಳೆದ 20 ವರ್ಷಗಳಿಂದ ರಚಿಸುತ್ತಾ ಬಂದಿರುವ  ಕುಂದಾಪುರ ಕನ್ನಡ ನಿಘಂಟು ಈಗ ಬಿಡುಗಡೆಗೆ  ಸಿದ್ದವಾಗಿದ್ದು, ”ಕುಂದಾಪುರ ಕನ್ನಡ ಹಾಡುಗಳು’ ತಯಾರಿಯ ಹಂತದಲ್ಲಿ ಇದೆಯೆಂದು. ಗೋಷ್ಠಿಯಲ್ಲಿ ತಿಳಿಸಲಾಯಿತು.

     ಪತ್ರಿಕಾ ಗೋಷ್ಠಿಯಲ್ಲಿ ತಲ್ಲೂರು ಪ್ಯಾಮಿಲಿ ಟ್ರಸ್ಟನ ಮೇನೆಜಿಂಗ್ ಟ್ರಸ್ಟಿಗಳಾದ ರಾಜರಾಮ್  ತಲ್ಲೂರು,ಸದಾನಂದ ತಲ್ಲೂರು,ವಸಂತ ತಲ್ಲೂರು ಮತ್ತು ತಲ್ಲೂರು ಪ್ಯಾಮಿಲಿ ಟ್ರಸ್ಟನ ಆಡಳಿತಾಧಿಕಾರಿ ಚಂದ್ರಶೇಖರ ತಲ್ಲೂರ್ ಉಪಸ್ಥಿತರಿದ್ದರು.

ಶ್ರೀನಿವಾಸಪುರ : ವಿದ್ಯಾರ್ಥಿನಿಯರು ಅವಿರತ ಪ್ರಯತ್ನದಿಂದ ನಿಗದಿತ ಗುರಿ ತಲುಪಬೇಕು : ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಆರ್‌.ಮಾಧವಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ವಿದ್ಯಾರ್ಥಿನಿಯರು ಅವಿರತ ಪ್ರಯತ್ನದಿಂದ ನಿಗದಿತ ಗುರಿ ತಲುಪಬೇಕು ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಆರ್‌.ಮಾಧವಿ ಹೇಳಿದರು.  ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿನಿರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮಾತನಾಡಿ,  ವಿದ್ಯಾರ್ಥಿನಿಯರು ಓದುವ ಅವಧಿಯಲ್ಲಿ ಸುಖಕ್ಕೆ ಹಾತೊರೆಯದೆ ಶ್ರಮವಹಿಸಿ ಅಭ್ಯಾಸ ಮಾಡಬೇಕು ಎಂದು ಹೇಳಿದರು.  ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಎನ್‌.ಶ್ರೀಧರ್‌ ಮಾತನಾಡಿ, ಕಾಲೇಜಿನ ಹಳೆ ವಿದ್ಯಾರ್ಥಿನಿಯರು, ಶಾಲೆಯ ವಿದ್ಯಾರ್ಥಿನಿಯರ ಸಾಧನೆಯನ್ನು ಗುರುತಿಸಿ ಪುರಸ್ಕರಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.  ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ಡಾ. ಚಂದ್ರಕಲಾ ನಗದು ಬಹುಮಾನ ನೀಡಿದರು.  ಹಳೆಯ ವಿದ್ಯಾರ್ಥಿನಿಯರಾದ ಎಂಜಿನಿಯರ್‌ ಸುನಂದ, ಬ್ಯಾಂಕ್ ವ್ಯವಸ್ಥಾಪಕಿ ಮಾಧವಿ, ಪ್ರೌಢ ಶಾಲಾ ಶಿಕ್ಷಕಿಯರಾದ ಜಯಲಕ್ಷ್ಮಮ್ಮ, ಕೆ.ವಿ.ಶಾರದಮ್ಮ, ರಾಜೇಶ್ವರಿ, ಯಾಸ್ಮಿನ್‌ ತಾಜ್‌, ಆದಿಲಕ್ಷ್ಮಮ್ಮ, ಪದ್ಮಜ, ಆಶಾ ಇದ್ದರು.ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆ ಮಾಡಿ ಹೆಚ್ಚಿನ ಆರ್ಥಿಕ ಲಾಭ ಪಡೆಯಬೇಕು : ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆ ಮಾಡುವುದರ ಮೂಲಕ ಹೆಚ್ಚಿನ ಆರ್ಥಿಕ ಲಾಭ ಪಡೆಯಬೇಕು ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು.  ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘ ಬಿಎಂಸಿ ಕೇಂದ್ರವಾಗಿದ್ದು, ಪ್ರತಿ ದಿನ 2500 ಲೀಟರ್‌ ಹಾಲು ಶೇಖರಣೆ ಮಾಡುತ್ತಿದೆ ಎಂದು ಹೇಳಿದರು.  ಕೋಚಿಮುಲ್‌ ಉಪ ಕಚೇರಿಯ ಉಪ ವ್ಯವಸ್ಥಾಪಕ ಡಾ. ವಿ.ಎನ್‌.ಶ್ರೀಕಾಂತ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳು, ಹಾಲು ಉತ್ಪಾದಕರ ಹಿತ ರಕ್ಷಣೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.  ಪಶು ವೈದ್ಯಾಧಿಕಾರಿ ಡಾ. ವಿನೇಶ್‌ ಮಾತನಾಡಿ, ಕೆಚ್ಚಲು ಬಾವು ಹಾಗೂ ಕಾಲು ಬಾಯಿ ಜ್ವರ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೂಢನಂಬಿಕೆ ಬಿಟ್ಟು ಹಸುಗಳಿಗೆ ರೋಗ ನಿರೋಧಕ ಲಸಿಕೆ ಕೊಡಿಸಬೇಕು ಎಂದು ಹೇಳಿದರು.  ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ತಿಮ್ಮಯ್ಯ, ಸಹಾಯಕ ವ್ಯವಸ್ಥಾಪಕ ಕೆ.ಎಸ್‌.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್‌, ಎನ್‌.ದೇವರಾಜ್‌, ವೆಂಕಟರವಣಪ್ಪ ಇದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಭಿರ ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ

JANANUDI.COM NETWORK

ಕುಂದಾಪುರ, 27-11-2020 ರಂದು ಸಾರ್ವಜನಿಕರಿಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದಿಂದ ಆರೋಗ್ಯ ತಪಾಸಣಾ ಶಿಭಿರ ಮತ್ತು ಕುಂದಾಪುರ ಪುರ ಸಭೆಯ 50 ಜನ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಸುಮಾರು 180 ಜನರು ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ ಪಾಲ್ಗೊಂಡರು. ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ, ಅಥಿಥಿ ಗಳನ್ನು ಸ್ವಾಗತಿಸಿದರು. ಕುಂದಾಪರ ಪುರಸಭೆಯ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮವನ್ನು ಪುರಸಭೆಯ ಮುಖ್ಯಾಧಿಕಾರಿ ಶ್ರೀ ಗೋಪಾಲಕ್ರಷ್ಣ ಶೆಟ್ಟಿ ಉದ್ಗಾಟನೆ ಮಾಡಿ ಮಾತನಾಡಿದರು. ಲಯನ್ಸ್ ಸಂಸ್ತೆ ಕುಂದಾಪುರ ಇದರ ಕಾರ್ಯದರ್ಷಿ ಶ್ರೀ ರಾಜೇಂದ್ರ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದವರು ಲಯನ್ಸ್ ಸಂಸ್ತೆ ಕುಂದಾಪುರ ಮತ್ತು ಲೈಫ್ ಕೇರ್ ಇದರ ಮಾಲಕರಾದ ಸೋಮನಾಥ್. ಕುಂದಾಪುರ ಪುರ ಸಭೆಯ ಎಲ್ಲಾ 50 ಜನ ಪೌರ ಕಾರ್ಮಿಕರಿಗೆ ಉಪಹಾರ ನೀಡಿ, ಪೋಷಣ, ಪ್ರೋಟೀನ್ ಮತ್ತು ಎನರ್ಜಿ ಬಾರ್ ನೀಡಿ ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ ಲಯನ್ಸ್ ಸಂಸ್ತೆ ಕುಂದಾಪುರ ಇದರ ಅದ್ಯಕ್ಷರಾದ ಕೆ. ಚಂದ್ರಶೇಖರ್, ಲೈಫ್ ಕೇರಿನ ಸೋಮನಾಥ್, ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದಿಂದ ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ ಮತ್ತು ಖಜಾಂಚಿ ಶಿವರಾಮ ಶೆಟ್ಟಿ ಹಾಜರಿದ್ದರು. ಸಭೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದಿಂದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ, ಇತರ ಸದಸ್ಯರೂ ಲಯನ್ಸ್ ಸದಸ್ಯರೂ ಅಪಾರ ಸಂಖ್ಯ್ ಯಲ್ಲಿ ಹಾಜರಿದ್ದರು.
ಕಾರ್ಯದರ್ಶಿಯವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.

ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಸಿ.ಟಿ.ರವಿ ಕಚೇರಿ ಪೂಜಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಕಚೇರಿ ಪೂಜಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಭಾಗವಹಿಸಿದ್ದು, ಹೂಗುಚ್ಚ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಮತ್ತಿತರರು ಉಪಸ್ಥಿತರಿದ್ದರು.