HOLY ROSARY CHURCH, KUNDAPUR – 450 th JUBILEE SOUVENIR 2021

ಕೇಂದ್ರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ, ಹೋರಾಟಕ್ಕೆ ಬೆಂಬಲ ನೀಡಿ ಕೋಲಾರದಿಂದ ದೆಹಲಿಗೆ 300 ರೈತರು ಹೊರಡಲು ತೀರ್ಮಾನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಚಲೋ ಹೊರಟಿರುವ ಪಂಜಾಬ್, ಹರಿಯಾಣ ರೈತರ ಹೋರಾಟಕ್ಕೆ ಬೆಂಬಲಿಸಿ ಡಿಸೆಂಬರ್ 31ರಂದು ಕೋಲಾರ ಜಿಲ್ಲೆಯಿಂದ 300 ಮಂದಿ ರೈತರು ದೆಹಲಿ ಚಲೋ ಹೊರಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿ ಶನಿವಾರ ನಡೆದ ಸಭೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೇಂದ್ರ ಸರ್ಕಾರವು ಜನಾಭಿಪ್ರಾಯವಿಲ್ಲದೆ ಜಾರಿಗೆ ತಂದಿರುವ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಚಲೋ ಹೊರಟಿರುವ ಪಂಜಾಬ್, ಹರಿಯಾಣ ರೈತರು 1 ತಿಂಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ತನ್ನ ಕಾಯಿದೆಗಳನ್ನು ಸಮರ್ಥಿಸಿಕೊಳ್ಳುತ್ತಿದೆಯೇ ಹೊರತು ಇದರ ಬಗ್ಗೆ ಚರ್ಚೆ ಮಾಡಲು ಚಕಾರವೆತ್ತದೆ ಕಾರ್ಪೋರೇಟ್ ಕಂಪನಿಗಳಿಗೆ ಕೃಷಿ ಕ್ಷೇತ್ರವನ್ನು ಅಡ ಇಡಲು ಮುಂದಾಗಿರುವುದು ಸರಿಯಲ್ಲ ಎಂದು ಖಂಡಿಸಿದರು.
ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ದೇಶದ 9 ಕೋಟಿ ರೈತರಿಗೆ 18 ಸಾವಿರ ಕೋಟಿರೂಗಳನ್ನು ಪ್ರಧಾನ ಮಂತ್ರಿ ಯೋಜನೆಯಡಿ ನೀಡಿರುವುದು ಸ್ವಾಗತಾರ್ಹದ ಸಂಗತಿಯಾಗಿದೆ. ಆದರೆ ಒಂದು ಎಕರೆ ಟೊಮೆಟೊ ಬೆಳೆಯಲು ಒಂದೂವರೆ ಲಕ್ಷರೂ ಬಂಡವಾಳ ಅಗತ್ಯವಿದ್ದು, ಇಂತಹ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಬೆಲೆ ನಿಗಧಿಪಡಿಸುವುದು ಅಗತ್ಯವಾಗಿತ್ತು.
ವಿಶೇಷ ಸಂಸತ್ ಅಧಿವೇಶವನ್ನೂ ನಡೆಸದೆ ಏಕಾಏಕಿ ಕೃಷಿ ಕಾಯಿದೆಗಳನ್ನು ಜಾರಿಗೆ ತಂದಿರುವುದನ್ನು ಖಂಡಿಸಿ ಹಾಗೂ ದೆಹಲಿ ಚಲೋ ಹೊರಟಿರುವ ರೈತರ ಹೋರಾಟವನ್ನು ಬೆಂಬಲಿಸಿ ಡಿ.31ರಂದು ಕೋಲಾರ ಜಿಲ್ಲೆಯ 300 ರೈತರು ದೆಹಲಿ ಚಲೋ ಹೊರಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನಾ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಸ್ವಸ್ತಿಕ್ ಶಿವು, ಚಾಂದ್‍ಪಾಷ, ಕಿರಣ್, ಶೇಖ್ ಬಾಬಾಜಾನ್, ನವಾಜ್‍ಪಾಷ, ಘೌಸ್ ಪಾಷ, ಜಾವೀದ್, ಸುಹೇಲ್ ಪಾಷ, ಜಮೀರ್ ಪಾಷ ಮತ್ತಿತರರು ಉಪಸ್ಥಿತರಿದ್ದರು
.

ಕುಂದಾಪುರ ಕ್ರಿಸ್ಮಸ್ – ಯೇಸು ಅಂದು ಹುಟ್ಟಿದ್ದು ಮಾತ್ರವಲ್ಲ ದಿನಾಲು ಹುಟ್ಟುತ್ತಾನೆ, ಬಡ ಬಲ್ಲಿಗನ ರೂಪದಲ್ಲಿ ಅಂತವರ ಪ್ರೀತಿ ಇರಲಿ: ಫಾ|ದೀಪ್

JANANUDI.COM NETWORK


ಕುಂದಾಪುರ,ಡಿ25: ‘ಯೇಸು ಅರಮನೆಯಲ್ಲಿ, ಶ್ರೀಮಂತನಾಗಿ ಹುಟ್ಟಬಹುದಿತ್ತು ಆದರೆ ಯೇಸು ಬಡವರಲ್ಲಿ ಬಡವ, ಸಣ್ಣವರಲ್ಲಿ ಸಣ್ಣವನಾಗಿ ಹುಟ್ಟಿದ, ಕಾರಣ ಇಂತವರಿಗೆ ದೇವರ ಪ್ರೀತಿ ಬೇಕಿತ್ತು. ಇದರ ಅರ್ಥ ನಾವು ಕಷ್ಟ ಸಂಕಷ್ಟದಲ್ಲಿರುವರಿಗೆ, ಅನಾಥರಿಗೆ, ಬಡ ಬಲ್ಲಿಗರಿಗೆ ಆಸರೆ ಪ್ರೀತಿ ದಯೆ ನೀಡಬೇಕೆಂದು ದೇವರು ಬಯುಸುತ್ತಾನೆ. ಯೇಸು ಅಂದು ಮಾತ್ರ ಹುಟ್ಟಿದಲ್ಲಾ, ಆತನು ದಿನಾಲು ಹುಟ್ಟುತ್ತಾನೆ, ಬಡ ಬಲ್ಲಿಗನ ರೂಪದಲ್ಲಿ. ಅಂದ ಮೇಲೆ ನಾವು ಪ್ರೀತಿ ವಾತ್ಸಲ್ಯ ತೋರಲೆಬೇಕು’ ಎಂದು ಕಟ್ಕರೆ ಬಾಲಯೇಸುವಿನ ಆಶ್ರಮದ ಧರ್ಮಗುರು ವಂ|ದೀಪ್ ಫೆರ್ನಾಂಡಿಸ್ ಹೇಳಿದರು.


ಅವರು 451 ವರ್ಷದ ಸಂಭ್ರಮದಲ್ಲಿರುವ, ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯ ಐತಿಹಾಸಿಕ ಹಲವು ದಾಖಲೆಗಳಿರುವ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಮಹಾ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.’ ಇಂದು ಇಡೀ ವಿಶ್ವವೇ ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದೆ, ಇಡೀ ವಿಶ್ವದಲ್ಲಿ ಕ್ರಿಸ್ಮಸ್ ಪ್ರಯುಕ್ತ ಜೋರಾಗಿ ವ್ಯಾಪರ ಮಾಡಿ ಲಾಭ ಗಳಿಸುತಿದ್ದಾರೆ, ಆದರೆ ನಾವು ಕ್ರಿಸ್ಮಸ್ ಸಂದರ್ಭದಲ್ಲಿ ಅಧ್ಯಾತ್ಮಿಕ ಲಾಭ ಪಡೆಯೋಣ. ನಮಗೆ ಕ್ರಿಸ್ಮಸ್ ನ ವಸ್ತ್ರ ವಿನ್ಯಾಸ ಮೋಜು ಮಸ್ತಿ ಇಂತಹ ಆಢಬಂರ ಹೊರಗಿನ ಸಂಭ್ರಮ ಮುಖ್ಯವಲ್ಲಾ, ಒಳಗಿನ ಅಂತರಾತ್ಮದ ಸಂಭ್ರಮ ಮುಖ್ಯ. ಯೇಸುವಿನ ಜನನ ನಮಗೆ ಭರವಸೆ ಮೂಡಿಸಿದೆ. ಯೇಸುವಿನ ಜನನದ ಮೂಲಕ ದೇವನು ತಾನು ಯಾರೆಂದು ನಮಗೆ ತಿಳಿಸುತ್ತಾನೆ. ದೇವರು ಯೇಸುವಿನ ರೂಪದಲ್ಲಿ ಮನುಷ್ಯ ಕುಲಕ್ಕೆ ಪ್ರೀತಿ ನೀಡಲು ಬಂದವನೆಂದು’ ಅವರು ತಿಳಿಸಿದರು.
ಈ ಸಲದ ಕ್ರಿಸ್ಮಸ್ ಪೂಜೆಗೆ ಭಕ್ತಿಗೆ ಪ್ರಾಧಿನಿತ್ಯ ಕೊಡಲಾಗಿದ್ದು, ಬಾಲ ಯೇಸುವಿಗೆ ಮುತ್ತು ಕೊಡುವ ಪದ್ದತಿ ಇರದೆ ದೂರದಿಂದ ನಮಸ್ಕರಿಸುವ ರೀತಿಯನ್ನು ಅನುಸರಿಸಲಾಯಿತು. ಪೂಜೆಯ ನಂತರ ಯಾವುದೇ ಸಂಭ್ರಮ ಕಾರ್ಯಕ್ರಮಗಳು ಇರಲಿಲ್ಲಾ.
ಈ ಮಹಾ ಬಲಿದಾನದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಭಾಗವಹಿಸಿ ವಂದನೆ ಮತ್ತು ಶುಭಾಷಯಗಳನ್ನು ಅರ್ಪಿಸಿದರು. ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ.ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾ ಬಲಿದಾನದಲ್ಲಿ ಭಾಗವಹಿಸಿದರು.

ಬಲಿದಾನದ ಮೊದಲು ಚರ್ಚ್ ಗಾಯನ ಪಂಗಡದವರು ಕೇರೊಲ್ ಗೀತೆಗಳನ್ನು ಹಾಡಿ ಸ್ಥುತಿಸಿದರು. ಐ.ಸಿ.ವೈ.ಎಮ್. ಸಂಘಟನೇಯವರು ಚರ್ಚ್ ಮಟ್ಟದಲ್ಲಿ ಗೋದಲಿಯನ್ನು ಚರ್ಚ್ ಆವರಣದಲ್ಲಿ ನಿರ್ಮಿಸಿದ್ದರು.

ಸಾಮಾಜಿಕ ಅಂತರದ ಕಾರಣಕ್ಕಾಗಿ ಒಂದೇ ಸಲ ಹೆಚ್ಚು ಭಕ್ತರು ಸೇರಬಾರದೆಂದು ಇಂದು ಡಿಸೆಂಬರ್ 25 ರಂದು ಕೂಡ 2 ಪೂಜೆಗಳನ್ನು ನಡೆಸಲಾಗುವುದೆಂದು ಪ್ರಧಾನರು ತಿಳಿಸಿದ್ದಾರೆ.

ಬ್ರೇಕಿಂಗ್ ವಾರ್ತೆ – ಇಂದಿನಿಂದ ಜ್ಯಾರಿ ಮಾಡಲಾದ ಕಪ್ರ್ಯು ರದ್ದು

JANANUDI.COM NETWORK

ಕುಂದಾಪುರ,ಡಿ೨೪: ಇಂಗ್ಲೆಂಡ್ ಮತ್ತಿತರ ಕಡೆ ಕೋವೀಡ್ ರೂಪಾಂತರಗೊಂಡಿದೆಯೆಂದು ರಾಜ್ಯ ಸರಕಾರ ಧೀಡಿರನೆ ಕರ್ಪ್ಯು ಜ್ಯಾರಿ ಮಾಡಲು ನಿರ್ಧರಿಸಿ,
ರಾಜ್ಯದಲ್ಲಿ ಇಂದಿನಿಂದ  ಅಂದರೆ ಡಿಸೆಂಬರ್ ೨೪ ರಂದು ಕಪ್ರ್ಯೂ ಎಂದು ಬುದವಾರ ಆದೇಶವನ್ನು  ಹೊರಡಿಸಿತ್ತು.   ಆದರೆ ಕಪ್ರ್ಯೂಗೆ ತೀವ್ರವಾದ ವಿರೋಧವಾದ ಹಿನ್ನೆಯಲ್ಲಿ ಕರ್ಪ್ಯುವನ್ನು ರದ್ದು ಪಡಿಸಲಾಗಿದೆಯೆಂದು ವರದಿ ಬಂದಿದೆ.

ಭಂಡಾರ್ಕಾರ್ಸ್ -“ನನ್ನ ಕನಸಿನ ಉದ್ಯೋಗ– ವ್ಯಕ್ತಿತ್ವ ವಿಕಸನ ಮತ್ತು ಕರಕುಶಲ ತರಬೇತಿ” ವೆಬಿನಾರ್

JANANUDI.COM NETWORK

ಕುಂದಾಪುರ: ಡಿಸೆಂಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯವಹಾರ ಅಧ್ಯಯನ ವಿಭಾಗದ ಆಶ್ರಯದಲ್ಲಿ “ನನ್ನ ಕನಸಿನ ಉದ್ಯೋಗ– ವ್ಯಕ್ತಿತ್ವ ವಿಕಸನ ಮತ್ತು ಕರಕುಶಲ ತರಬೇತಿ” ಕುರಿತು ವೆಬಿನಾರ್ ನಡೆಯಿತು
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವರುಣ್ ಕಟ್ಟಿ ಮಾತನಾಡಿ ಮುಖ್ಯವಾಗಿ ಉತ್ತಮ ಉದ್ಯೊಗವನ್ನು ಪಡೆಯಬೇಕು ಎಂಬ ಆಶಯವನ್ನ ನಮ್ಮದಾಗಿಸಿಕೊಳ್ಳಬೇಕು. ಅದಕ್ಕೆ ಪೂರಲ ವಾತಾವರಣವನ್ನು ನಾವಿ ಸೃಷ್ಟಿಸಿಕೊಳ್ಳಬೇಕು. ಅಂದರೆ ಒಳ್ಳೆಯ ಉದ್ಯೋಗಕ್ಕೆ ಬೇಕಾದಂತಹ ಪರಿಪೂರ್ಣ ಕಲಿಕೆ ನಿರಂತರ ಅಧ್ಯಯನ, ತಲ್ಲೀನತೆ ಭಿನ್ನ ನೆಲೆಗಳ ಆಲೋಚನೆ ಮತ್ತು ನಿಮ್ಮ ಬಗ್ಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಮಾತುಗಾರಿಕೆ ಸಂವಹನ ಕಲೆ, ಇಂಗ್ಲೀಷ್ ವ್ಯಾಕರಣ ಜ್ಞಾನಸಾಮಾನ್ಯ ಜ್ಞಾನವನ್ನು ಆದಷ್ಟು ಹೆಚ್ಚಿಸಿಕೊಳ್ಳಬೇಕು. ದೊಡ್ಡ ಆಲೋಚನೆಯೊಂದಿಗೆ ವಿವಿಧ ಉದ್ಯೋಗಕ್ಕೆ ಬೇಕಾದ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮಾಡಿ ನಿಮ್ಮ ವಿದ್ಯಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದೆಲ್ಲದರ ಜೊತೆಗೆ ಬಹುಮುಖ್ಯವಾಗಿ ನಿರಂತರ ಕಲಿಯುವಿಕೆಯ ಮೂಲಕ ನಿಮ್ಮನ್ನು ನಿಔಉ ಯಾವುದೇ ಉತ್ತಮ ಹುದ್ದೆಗೆ ತಯಾರಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿದರು.
ಆನ್‍ಲೈನ್ ತರಗತಿಗಳ ಮಧ್ಯೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಾಹಿತಿ ನೀಡುವುದು ಈ ವೆಬಿನಾರ್‍ನ ಮುಖ್ಯ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಮತ್ತು ಕಾರ್ಯಕ್ರಮ ಸಂಯೋಜಕಿ ಅರ್ಚನಾ ಅರವಿಂದ್, ಉಪನ್ಯಾಸಕರಾದ ಪ್ರಶಾಂತ ಹೆಗ್ಡೆ, ಅಂಜನ್‍ಕುಮಾರ್ ಉಪಸ್ಥಿತರಿದ್ದರು.
ತಾತ್ರಿಕವಾಗಿ ಕಾಲೇಜಿನ ಐಟಿ.ತಂಡದ ಗುರುದಾಸ ಪ್ರಭು, ಅಮರ್ ಇಕ್ವೆರಾ ಮತ್ತು ಗಣೇಶ್ ಸಹಕರಿಸಿದರು.
ವಿದ್ಯಾರ್ಥಿನಿ ಝಿಯಾ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ವಿದ್ಯಾರ್ಥಿ ಅನ್ಫಾಲ್ ವಂದಿಸಿದರು.

ಕರ್ನಾಟಕ ಸರಕಾರದ ಕಪ್ರ್ಯೂ ಆದೇಶದಲ್ಲಿ ಬದಲಾವಣೆ-ಡಿಸೆಂಬರ್ 24ರ ರಾತ್ರಿ 11 ಗಂಟೆಯಿಂದ ಆರಂಭ.

JANANUDI.COM NET WORK

ಕರ್ನಾಟಕ ಸರಕಾರದ ಕಪ್ರ್ಯೂ ಆದೇಶದಲ್ಲಿ ಬದಲಾವಣೆ- ಡಿಸೆಂಬರ್ 24ರ ರಾತ್ರಿ 11 ಗಂಟೆಯಿಂದ ಆರಂಭ.
ರಾಜ್ಯದಲ್ಲಿ ಇಂದಿನಿಂದ ಕಪ್ರ್ಯೂ ಜಾರಿಯಾಗಲು ಹೋರಡಿಸಿದ ಆದೇಶವನ್ನು ಬದಲಾಯಿಸಿ ನಾಳೆಯಿಂದ ಡಿಸೆಂಬರ್ 24 ರಾತ್ರೆ 11 ಗಂಟೆಯಿಂದ ಕಪ್ರ್ಯೂ ಜಾರಿಯಾಗಲಿದೆ ಎಂದು ಅಧಿಕ್ರತ ಆದೇಶ ಹೊರಡಿಸಿದೆ. ಇದೇ ರೀತಿ ರಾತ್ರಿ ವೇಳೆ ಜನವರಿ 1, 2021 ರ ಬೆಳಿಗ್ಗೆ ಬೆಳಿಗ್ಗೆ 5 ರ ತನಕ ಜ್ಯಾರಿಯಲ್ಲಿರುತ್ತದೆ.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಗಳನ್ನು ಮಾಡಲು ಆಸ್ಪದ ಕೊಟ್ಟಂತ್ತೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ತಿಳಿಸಿದ್ದಾರೆ
ಇದರಿಂದಾಗಿ 24 ರ ತಡ ರಾತ್ರಿಯವರೆಗೆ ಕ್ರಿಸ್ಮಸ್ ಪೂಜೆಗಳನ್ನು ಆಚರಿಸಲು ಸ್ವಲ್ಪ ಮಟ್ಟಿಗೆ ಸಹಾಯವಾಗಿದೆ.

ವಿಶ್ವರೈತ ದಿನಾಚರಣೆ ಹಾಗೂ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನವನ್ನು ಭತ್ತ, ರಾಗಿ, ತರಕಾರಿ ಹಂಚುವ ಮುಖಾಂತರ ಆಚರಣೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ರೈತರನ್ನು ಸ್ಮರಿಸುವ ವಿಶ್ವರೈತ ದಿನಾಚರಣೆ ಹಾಗೂ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನವನ್ನು ರೈತಸಂಘದಿಂದ ನಗರದ ಹಳೆ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಪ್ರದೇಶದ ಶೈಲಿಯಲ್ಲಿ ರಾಗಿ ಒಕ್ಕಣೆ ಮಾಡುವ ಸಂಪ್ರಾದಾಯದಂತೆ ಭತ್ತ, ರಾಗಿ ಮತ್ತು ತರಕಾರಿ ಹಂಚುವ ಮುಖಾಂತರ ಆಚರಣೆ ಬುಧವಾರ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಭೂಮಿಯು ತಾಯಿ ಸಮಾನಳಾಗಿದ್ದು, ಆಕೆಯನ್ನು ನಂಬಿದವರಿಗೆ ಎಂದಿಗೂ ಮೋಸವಾಗುವುದಿಲ್ಲ. ನಾಡಗೀತೆಯಂತೆಯೇ ರೈತಗೀತೆಗೂ ಹೆಚ್ಚಿನ ಪ್ರಾಧಾನ್ಯತೆಯಿದ್ದು, ಕೇಳಿದಾಗ ರೋಮಾಂಚನವಾಗುತ್ತದೆ. ಆ ಹಾಡಿನಲ್ಲೇ ರೈತನ ಇಡೀ ಜೀವನವನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಶ್ಲಾಘಿಸಿದರು.
ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆ ತಂದ ರಾಷ್ಟ್ರದ 5ನೇ ಪ್ರಧಾನಿ ಚೌಧರಿ ಚರಣ್‍ಸಿಂಗ್ ಅವರ ಜನ್ಮದಿನದ ಸಲುವಾಗಿ ರೈತ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಅವರಂತೆಯೇ ನಮ್ಮ ಕರ್ನಾಟಕದಲ್ಲಿಯೂ ರೈತ ಚಳುವಳಿಗೆ ಸಾಕಷ್ಟು ಇತಿಹಾಸವಿರುವುದು ನಮ್ಮ ಹೆಮ್ಮೆ ಎಂದರು.
ಕೊರೊನಾ ಸಂಕಷ್ಟದ ನಡುವೆಯೂ ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವಿಗೆ ಅಭಿಯಾನವನ್ನು ಆರಂಭಿಸಿ, ಪ್ರತಿ ತಿಂಗಳು ವರದಿಯನ್ನು ನೀಡುತ್ತಿದ್ದೇವೆ.ಸರ್ವೇ ಅಧಿಕಾರಿಗಳ ಕೊರತೆಯ ನಡುವೆಯೂ ನಾವು ಕೆಲಸ ಮಾಡುತ್ತಿದ್ದೇವೆ.

ಆದರೂ ಜಿಲ್ಲಾಡಳಿತದ ವಿರುದ್ಧ ಆದರೂ ಟೀಕೆಗಳು ಕೇಳಿ ಬರುತ್ತಲೇ ಇದ್ದು, ಅವುಗಳನ್ನು ಸ್ವಾಗತಿಸುತ್ತೇವೆ. ಇದೀಗ ರೈತ ಮುಖಂಡರು ಮಾಹಿತಿ ನೀಡಿರುವಂತೆ ಒತ್ತುವರಿಗಳ ಪಟ್ಟಿಯನ್ನು ತಮಗೆ ನೀಡಿದಲ್ಲಿ ಕ್ರಿಯಾಯೋಜನೆಯನ್ನು ರೂಪಿಸಿ, ತೆರವಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು.
ಅಂತರ್ಜಲದ ಅಗತ್ಯ ಜಿಲ್ಲೆಗೆ ಸಾಕಷ್ಟು ಇದ್ದು, ಬೇಸಿಗೆಯೂ ಬಂದಿರುವ ಕಾರಣ ಕೆರೆ, ಕಟ್ಟೆ, ಕಾಲುವೆಗಳ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಇನ್ನು ಎಪಿಎಂಸಿ, ಹೂ ಮಾರುಕಟ್ಟೆ ಜಾಗದ ಸಮಸ್ಯೆಯ ಬಗ್ಗೆಯೂ ಸಾಕಷ್ಟು ಬಾರಿ ತಮ್ಮ ಗಮನಕ್ಕೆ ಬಂದಿದ್ದು, ಈಗಾಗಲೇ 2-3 ಕಡೆಗಳಲ್ಲಿ ನೋಡಿದ್ದ ಜಾಗವೂ ಸರಿಯಾಗಿಲ್ಲ. 10 ಎಕರೆ ಜಾಗವನ್ನು ಕಲ್ಪಿಸಲು ಜಿಲ್ಲಾಧಿಕಾರಿಗೆ ಅಧಿಕಾರ ಇರುವುದರಿಂದಾಗಿ ಎಲ್ಲ ತೊಡಕುಗಳನ್ನು ಮೀರಿ ಸಾಧ್ಯವಾದಷ್ಟು ಬೇಗನೆ ಜಾಗ ಹುಡುಕಿ ವ್ಯವಸ್ಥೆ ಮಾಡಲಾಗುವುದು.
ಅದರಲ್ಲೇ ಒಂದು ಭಾಗ ಹೂ ಮಾರುಕಟ್ಟೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ ಅವರು, ರೈತರು ಮಧ್ಯವರ್ತಿಗಳ ಲಾಭವಾಗುತ್ತಿರುವ ಹಣವನ್ನು ನೇರವಾಗಿ ಪಡೆದುಕೊಳ್ಳುವಂತಾಗಲಿ ಎಂದು ಆಶಿಸಿದರು.
ಇನ್ನು ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಜಾಗ ನೀಡಲು ಮಾತ್ರ ಸಾಧ್ಯವಾಗುತ್ತದೆ ಎಂದು ಆರೋಪಗಳು ಕೇಳಿ ಬಂದಿವೆ. ಕೈಗಾರಿಕೆಗಳಿಗೆ ಜಾಗ ನೀಡಬೇಕಾಗಿದ್ದು, ಅದಕ್ಕೆ ತಕ್ಕಂತೆ ಪರಿಹಾರವನ್ನೂ ಕಲ್ಪಿಸಿದ್ದೇವೆ. ರಾಮನಗರ ಜಿಲ್ಲೆಯಲ್ಲೇ 1 ಎಕರೆಗೆ 65 ಲಕ್ಷರೂ ಮಾತ್ರವೇ ನೀಡಲಾಗಿದ್ದು, ನಮ್ಮ ಜಿಲ್ಲೆಯ ಮಿಂಡಹಳ್ಳಿ ಬಳಿ ಎಕರೆಗೆ 1.30 ಕೋಟಿ ನೀಡಲು ಪ್ರಸ್ತಾವನೆ ಸಲ್ಲಿಸಿದ್ದೆವು, 1.10 ಕೋಟಿ ನೀಡಲು ಒಪ್ಪಿಗೆ ದೊರೆತಿದೆ. ಇವೆಲ್ಲವೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮಾಡುತ್ತಿರುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಜಿಲ್ಲೆಯಲ್ಲಿ ಮಿಶ್ರಬೇಸಾಯವಿರುವುದರಿಂದಾಗಿ ಅದಕ್ಕೆ ರೈತರು ಹೊಂದಾಣಿಕೆ ನಡೆಸಿಕೊಂಡು ಜೀವನ ನಡೆಸಿ ಆ ಮೂಲಕ ಬೇರೆ ಜಿಲ್ಲೆಯವರಿಗೆ ಮಾದರಿಯಾಗಿದ್ದಾರೆ. ಬಂಗಾರಪೇಟೆಯ ರೈತ ಚಂದ್ರಪ್ಪರೊಡನೆ ಡಿ.25ರಂದು ಪ್ರಧಾನಮಂತ್ರಿಗಳು ನೇರ ಸಂವಾದ ನಡೆಸಲಿದ್ದು, ಜಿಲ್ಲೆಯ ರೈತ ಆಯ್ಕೆಯಾಗಿರುವುದು ನಮ್ಮ ಭಾಗ್ಯವಾಗಿದೆ. ಇನ್ನೂ ಹೆಚ್ಚಿನ ರೈತರು ಇದೇ ರೀತಿ ಆಯ್ಕೆಯಾಗಬೇಕಾಗಿದೆ ಎಂದರು.

ಉಪವಿಭಾಗಾಧಿಕಾರಿಗಳಾದ ಸೋಮಶೇಖರ್ ಮಾತನಾಡಿ, ರೈತರ ಬದುಕು ಸಾಕಷ್ಟು ದುಸ್ಥರವಾಗಿದ್ದು, ಪ್ರತಿಯೊಬ್ಬರೂ ರೈತ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ನಮ್ಮ ಜಿಲ್ಲೆಯ ರೈತರಲ್ಲಿ ಧೈರ್ಯವಿರುವುದರಿಂದ ಎಷ್ಟೇ ಸಮಸ್ಯೆಯಾದರೂ ಎದುರಿಸುತ್ತಾರೆ. ಆದರೆ ಬೇರೆ ಜಿಲ್ಲೆಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದ ಅವರು, ನಮ್ಮ ಜಿಲ್ಲೆಗೆ ಕೆಸಿವ್ಯಾಲಿ ನೀರು ಬಂದಿರುವುದರಿಂದಾಗಿ ರೈತರ ಬದುಕು ಹಸನಾಗಲಿರುವುದಾಗಿ ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪಾದೇವಿ ಮಾತನಾಡಿ, ರೈತರು ಪ್ರತಿಯೊಂದಕ್ಕೂ ಬೇರೆಯವರ ಮೇಲೆ ಅವಲಂಭನೆಯಾಗುವುದು ಬೇಡ. ಸಾಕಷ್ಟು ಬಿತ್ತನೆ ಬೀಜಗಳನ್ನು ನಾವೇ ತಯಾರಿಸಿಕೊಳ್ಳಲು ಅವಕಾಶವಿರುವುದರಿಂದಾಗಿ ಅಂತಹ ಪ್ರಯತ್ನಗಳಿಗೆ ಮುಂದಾಗಿ, ಸುಸ್ಥಿತರರಾಗಬೇಕು ಎಂದು ಮನವಿ ಮಾಡಿದರು.
ಕೃಷಿಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿಗೆ. ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗಧಿಪಡಿಸಿಕೊಳ್ಳಲು ಸಬಲೀಕರಣ ಅಗತ್ಯವಿದ್ದು, ಇಲಾಖೆಯಿಂದಲೂ ನಾನಾ ಯೋಜನೆಗಳನ್ನು ರೂಪಿಸುತ್ತಿರುವುದಾಗಿ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮುನಿರಾಜು ಅವರು ಮಾತನಾಡಿ, ದೇಶದಲ್ಲಿ ಶೇ.80ರಷ್ಟು ರೈತರು ಇದ್ದರೂ ಅವರು ಬೆಳೆದ ಬೆಳೆಗಳಿಗೆ ಬೆಲೆ ನಿಗಧಿಪಡಿಸಿಕೊಳ್ಳಲು ಸಾಧ್ಯವಾಗದಿರುವುದು ವಿಷಾಧಕರ ಸಂಗತಿಯಾಗಿದೆ.

ಆದರೆ ರೈತನ ಕೈಯಿಂದ ಮುಂದೆ ಹೋದ ಬೆಳೆ ಆತನ ಕಣ್ಣೆದುರಲ್ಲೇ ದುಪ್ಪಟ್ಟು, ಮೂರು ಪಟ್ಟು ಬೆಲೆಗೆ ಮಾರಾಟವಾಗುತ್ತಿರುತ್ತದೆ. ಇಷ್ಟು ಸಮಸ್ಯೆಗಳಿದ್ದರೂ ರೈತರು ಮಾತ್ರ ಈವರೆಗೂ ಹೋರಾಟಕ್ಕೆ ಬಂದಿಲ್ಲ ಎಂದ ಅವರು, ರೈತರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯಪುಸ್ತಕದಲ್ಲಿ ಪಾಠ ಅವಶ್ಯಕವಿರುವುದಾಗಿ ಹೇಳಿದರು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಎಸ್.ಗಣೇಶ್ ಮಾತನಾಡಿ, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಕ್ಷೇತ್ರಗಳು ಉತ್ತಮವಾಗಿದ್ದರೆ ಸಮಾಜ ಉತ್ತಮವಾಗಿರುತ್ತದೆ. ಆದರೆ, ಕೃಷಿ ಕ್ಷೇತ್ರ ಮಾತ್ರ ಸಾಕಷ್ಟು ಹಿಂದೆ ಉಳಿದಿದ್ದು, ಸ್ವಾತಂತ್ರ್ಯ ಬಂದಾಗಿಂದಲೂ ಈ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿಕೊಂಡು ಬಂದಿರುವುದೇ ಈ ಸ್ಥಿತಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ, ಇನ್ನಾದರೂ ಬದಲಾಗಬೇಕೆಂದು ಆಗ್ರಹಿಸಿದರು.
ದಲಿತ ಮುಖಂಡ ವಕ್ಕಲೇರಿ ರಾಜಪ್ಪ ಮಾತನಾಡಿ, ಜಿಲ್ಲೆಯಲ್ಲಿ ತರಕಾರಿ-ಹೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರೂ ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆ ಎಂದು ಖ್ಯಾತಿ ಪಡೆದಿದ್ದರೂ ಟ್ರಾಫಿಕ್ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ.

ಕೈಗಾರಿಕೆಗಳಿಗೆ ಸಾವಿರಾರು ಎಕರೆ ಜಮೀನು ಕೊಟ್ಟಿರುವುದು ಸ್ವಾಗತಾರ್ಹವಾಗಿದ್ದು, ಅದರಂತೆಯೇ ಎಪಿಎಂಸಿ-ಹೂ ಮಾರುಕಟ್ಟೆಗೆ ಜಾಗ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ರೈತಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರೂ ತಮ್ಮ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿದ್ದಾರೆಯೇ ಹೊರತು ಒತ್ತುವರಿ ತೆರವಿಗೆ ಮುಂದಾಗಿಲ್ಲ. ನಿಮಗೂ ದಾಖಲೆಗಳನ್ನು ಸಲ್ಲಿಸುತ್ತೇವೆ ಕ್ರಮಕೈಗೊಂಡು ಒತ್ತುವರಿ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಯವರನ್ನು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರೈತರು, ಯೋಧರು ಹಾಗೂ ಕೊರೊನಾ ವಾರಿಯರ್ಸ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೆಜಿಎಫ್ ಅಧ್ಯಕ್ಷ ಅಲ್ತಾಫ್ ಸೇರಿದಂತೆ ಜಿಲ್ಲಾ, ತಾಲೂಕು ಮುಖಂಡರು ಭಾಗವಹಿಸಿದ್ದರು.

ಶ್ರೀನಿವಾಸಪುರ : ತಾಲ್ಲೂಕಿನಲ್ಲಿ ಬೆಳಿಗ್ಗೆ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆದುಕೊಂಡಿತು

ವರದಿ:ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ತಾಲ್ಲೂಕಿನಲ್ಲಿ ಬೆಳಿಗ್ಗೆ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆದುಕೊಂಡಿತು. ಪುರುಷ ಹಾಗೂ ಮಹಿಳಾ ಮತದಾರರು ಮತಗಟ್ಟೆಗಳ ಮುಂದೆ ಅಂತರ ಪಾಲನೆಯೊಂದಿಗೆ ಪ್ರತ್ಯೇಕ ಸಾಲುಗಳಲ್ಲಿ ನಿಂತು ಮತದಾನ ಮಾಡಿದರು.   ಒಟ್ಟು 1,42,229 ಮತದಾರ ಪೈಕಿ, 123095 ಮತದಾರರು ಮತದಾನ ಮಾಡಿದ್ದಾರೆ. ಅದರಲ್ಲಿ ಮತದಾನ ಮಾಡಿರುವ 62803 ಪುರುಷ ಹಾಗೂ 60767 ಮಹಿಳಾ ಸೇರಿದ್ದಾರೆ. ತಾಲ್ಲೂಕಿನಲ್ಲಿ ಶೇ.88.68ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ತಿಳಿಸಿದರು.  ಮತಾದಾರರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಸರತಿ ಸಾಲಿನಲ್ಲಿ ಕಡ್ಡಾಯವಾಗಿ ಅಂತರ ಪಾಲನೆ ಮಾಡುವಂತೆ ಸೂಚಿಸಲಾಗಿತ್ತು. ಪ್ರತಿ ಮತದಾನ ಕೇಂದ್ರದಲ್ಲೂ ಆರೋಗ್ಯ ಇಲಾಖೆ ವತಿಯಿಂದ ಮತದಾರರ ಕೈಗೆ ಸ್ಯಾನಿಟೈಸರ್‌ ಹಾಕಲಾಯಿತು.  ತಾಲ್ಲೂಕಿಲ್ಲಿ ಚುನಾವಣೆ ನಡೆದ 25 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ 253 ಮತಗಟ್ಟೆಗಳಲ್ಲಿ ಚುನಾವಣಾ ಕಾರ್ಯ ನಿರ್ವಹಿಸಲು1265 ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಮತಗಟ್ಟೆಗಳ ರಕ್ಷಣೆ ಹಾಗೂ ಸುವ್ಯವಸ್ಥೆ ಪಾಲನೆಗೆ 350 ಪೊಲೀಸ್‌ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು. ಮತದಾನ ಮುಗಿದ ಬಳಿಕ ಮತ ಪೆಟ್ಟಿಗೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸೀಲ್‌ ಮಾಡಿ, ಪಟ್ಟಣದ ಕಾಲೇಜು ಮೈದಾನದಲ್ಲಿ ಸ್ಥಾಪಿಸಲಾಗಿದ್ದ ಸ್ವೀಕರಣ ಕೇಂದ್ರದಲ್ಲಿ ನೀಡಲಾಯಿತು. 

ಪತ್ರಿಕಾ ವಿತರಕರಿಗೆ ಪತ್ರಕರ್ತರ ಭವನದಲ್ಲಿ ಜರ್ಕಿನ್‍ಗಳನ್ನು ವಿತರಣೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಡಿ.22: ನಗರದ ಪತ್ರಿಕಾ ವಿತರಕರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ ಗೋಪಿನಾಥ್ ರವರು ಇಂದು ಪತ್ರಕರ್ತರ ಭವನದಲ್ಲಿ ಜರ್ಕಿನ್‍ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಸಾಗರ್, ಸದಸ್ಯರಾದ ಶ್ರೀನಿವಾಸಶೆಟ್ಟಿ, ಶ್ರೀನಿವಾಸಮೂರ್ತಿ, ಹರೀಶ್, ರಮೇಶ್, ಮಂಜುನಾಥ್, ಲಾಯರ್ ಮಂಜುನಾಥ್ ಇನ್ನಿತರರು
ಉಪಸ್ಥಿತರಿದ್ದರು.

ಆಶಾವಾದಿ ಪ್ರಕಾಶನಾಚ್ಯಾ 20 ವರ್ಸುಗೆಚೊ ಸಂಭ್ರಮ್ – ಡಿಜಿಟಲ್ ಮಾಧ್ಯಮಾಚೆರ್ ಚಲಯ್ಲೊ.

JANANUDI.COM NETWORK

ದಸೆಂಬ್ರ್ 20: 2000 ಇಸ್ವೆಂತ್ ಕುವೆಯ್ಟಾಂತ್ ಸುರು ಜಾಲ್ಲ್ಯಾ ಆಶಾವಾದಿ ಪ್ರಕಾಶನಾಚ್ಯಾ 20 ವರ್ಸುಗೆಚೊ ಸಂಭ್ರಮ್ ದಸೆಂಬ್ರ್ 20 ತಾರಿಕೆಚ್ಯಾ ಆಯ್ತಾರಾ ಸಾಂಜೆರ್ 4 ಥಾವ್ನ್ 7 ಪರ್ಯಾಂತ್ ಡಿಜಿಟಲ್ ಮಾಧ್ಯಮಾಚೆರ್ ಚಲಯ್ಲೊ.

ಉಗ್ತಾವಣ್ ಕಾರ್ಯಾಚೆಂ ಸುಂಕಾಣ್ ಘೆತ್‌ಲ್ಲ್ಯಾ ಗೊಂಯ್ಚ್ಯಾ ಶ್ರೀ ಮಲ್ಲಿಕಾರ್ಜುನ ಕೊಲೆಜಿಚ್ಯಾ ಹಿಂದಿ ವಿಭಾಗಾಚಿ ಮುಖೆಸ್ತ್ ದೊ|ರೂಪಾ ಚಾರಿನ್ ಯೆವ್ಕಾರ್ ಮಾಗ್ತಚ್ ವಲ್ಲಿ ಕ್ವಾಡ್ರಸಾನ್ ಅಪ್ಲ್ಯಾ ಸ್ವಾಗತ್ ಉಲವ್ಪಾಂತ್ “ಆಶಾವಾದಿ ಆನಿ ಪಿಸೊ – ಹ್ಯಾ ದೊನಾಂ ಮಧ್ಲೊ ಅಂತರ್ ಎಕಾ ಸುತಾಚೊ, ಆನಿ ಹಿ ಕೊಂಕಣಿ ಪಿಸಾಯ್ ಅಪ್ಣಾಕ್ ಕಶಿ ಲಾಗ್ಲಿ ಆನಿ ಸುರ್ವಿಲ್ಯಾ ದಿಸಾಂನಿ ಅಪ್ಲ್ಯಾ ಸಮಕಾಳಿನ್ ಬರವ್ಪಿ ಮಿತ್ರಾಂ ಥಾವ್ನ್ ಮೆಳ್‌ಲ್ಲ್ಯಾ ಪ್ರೇರಣ್ ತಶೆಂಚ್ ಪಾಟಿಂಬೊವಿಶಿಂ ಉಲಯಿತ್, ಮೆಲ್ವಿನ್ ರೊಡ್ರಿಗಸಾಚ್ಯಾ ಕಾಮಾಚೊ ತಶೆಂಚ್ ಪ್ರಗತಿ ಪ್ರಕಾಶನಾನ್ ಘಾಲ್ಲ್ಯಾ ಪ್ರಭಾವಾಚೊ ಉಲ್ಲೇಕ್ ಕೆಲೊ. ಹ್ಯಾ ವೀಸ್ ವರ್ಸಾಂಚ್ಯಾ ಪಯ್ಣಾಂತ್ ಚಡ್ಣಿ ಆನಿ ಪಡ್ಣೆಂತ್ ಆಧಾರ್, ಪಾಟಿಂಬೊ ತಶೆಂಚ್ ಭರ್ವಸೊ ದಿಲ್ಲ್ಯಾಂಚೊ ಉಡಾಸ್ ಕಾಡುನ್, ಹೊ ಸಂಭ್ರಮ್ ಫಕತ್ ಎಕ್ಲ್ಯಾಚೊ ನ್ಹಯ್, ಬಗಾರ್ ಸಮೇಸ್ತಾಂಚೊ ಮ್ಹಣಾಲೊ.
ಕೊಂಕಣಿ ಸರ್ದಾರ್, ವಿಶ್ವ್ ಕೊಂಕಣಿ ಕೇಂದ್ರಾಚೊ ಮುಖೇಸ್ತ್ ಬಸ್ತಿ ವಾಮನ್ ಶೆಣಯ್ ಹಾಣಿಂ ಕಾರ್ಯಾಚೆಂ ಉಗ್ತಾವಣ್ ಕರುನ್ ದಿಲ್ಲ್ಯಾ ಅಪ್ಲ್ಯಾ ಸಂದೇಶಾಂತ್ “ಆಶಾವಾದಿ ಪ್ರಕಾಶಾನ್ ಅಶೆಂಚ್ ಅಪ್ಲೊ ಖಳ್ಮಿತ್ ನಾತ್ಲೊ ಕೊಂಕಣಿ ವಾವ್ರ್ ಮುಖಾರುನ್ ವರುನ್ ರುಪ್ಯೋತ್ಸವಾಚೊ ಸುವಾಳೊ ಕಾರ್ಯೆಂ ಸಯ್ತ್ ಸಂಭ್ರಮುಂಕ್ ತಶೆಂಚ್ ಅಪ್ಣಾಕ್ ತಾಂತುಂ ಮೆತೆರ್ ಕರುಂಕ್ ಉಲೊ ದಿಲೊ”.
ಆಂಡ್ರ್ಯೂ ಎಲ್. ಡಿ’ಕುನ್ಹಾನ್ ಆಶಾವಾದಿ ಪ್ರಕಾಶನಾಚ್ಯಾ ವೀಸ್ ವರ್ಸಾಂಚ್ಯಾ ಪಯ್ಣಾಚೆರ್ ಖೊಲಾಯೆನ್ ಉಲವ್ನ್ ’ಆಶಾವಾದಿ ಪ್ರಕಾಶನ್ ಮ್ಹಳ್ಯಾರ್ ವಲ್ಲಿ ಕ್ವಾಡ್ರಸ್, ಆನಿ ವಲ್ಲಿಚ್ಯಾ ಬರ್ಪಾಂತ್ ತಶೆಂಚ್ ಚಿಂತ್ಪಾಂತ್ ತೊ ಆಶಾವಾದಿ. ಹೊ ವಾವ್ರ್ ಎಕಾ ಪ್ರತಿಶ್ಟಿತ್ ಸಂಸ್ಥ್ಯಾಚ್ಯಾ ವಾವ್ರಾಚ್ಯಾಕೀ ಕಾಂಯ್ ಉಣೊ ನಾ, ಹೊಚ್ ವಾವ್ನ್ ಜರ್ ಎಕಾ ಸಂಸ್ಥ್ಯಾನ್ ಕೆಲ್ಲೊ ತರ್ ತ್ಯಾ ಸಂಸ್ಥ್ಯಾಕ್ ಮೆಳ್ಚೊ ಮಾನ್ ವೆಗ್ಳೊಚ್ ಆಸ್ತೊ ಜೊ ವಲ್ಲಿ ಕ್ವಾಡ್ರಸಾಕ್ ಮೆಳುಂಕ್ ನಾ’ ಮ್ಹಣಾಲೊ. ಆಶಾವಾದಿ ಪ್ರಕಾಶನ್ ಮುಖಾರುನ್ ವ್ಹರುಂಕ್ ವಲ್ಲಿಕ್ ಜೊಕ್ತೊ ಪಾಟಿಂಬೊ ದಿಂವ್ಚ್ಯಾಕ್ ಕೊಂಕಣಿ ಮುಖೆಲ್ಯಾಂನಿ ತಶೆಂಚ್ ಸಂಸ್ಥ್ಯಾಂನಿ ಮುಕಾರ್ ಆಯ್ಲ್ಯಾರ್ ತಾಚೊ ಪ್ರತಿಫಳ್ ಖಂಡಿತ್ ಜಾವ್ನ್ ಕೊಂಕಣಿಕ್ ಲಾಭ್ಚ್ಯಾಂತ್ ದುಭಾವ್ ನಾ ಮ್ಹಣಾಲೊ.
ಎಚ್ಚೆಮ್ ಪೆರ್ನಾಲಾನ್ ’ದಾಯ್ಜ್ ಥಾವ್ನ್ ಪಯ್ಣಾರಿ’ ಅಶೆಂ ಅಪ್ಲ್ಯಾ ಉಲವ್ಪಾಂತ್ 1990 ಇಸ್ವೆಥಾವ್ನ್ ಕಶಿ ಅಪ್ಣಾಚಿ ಒಳೊಕ್ ವಲ್ಲಿಸವೆಂ ಜಾಲ್ಲಿ ಆನಿ ಆಜ್ ಪಾಸೊನ್ ಎಕಾ ಕುಟ್ಮಾಂತ್ಲ್ಯಾ ಭಾಭಾವಾಂಪರಿಂ ಎಕಾಮೆಕಾ ಮನ್‌ಭೇದ್ ಆಸುನ್‍ಯೀ ಎಕಾಮೆಕಾಕ್ ಆಧಾರ್ ದಿವುನ್ ಆಯ್ಲ್ಯಾಂವ್ ಮ್ಹಣಾಲೊ. ದಾಯ್ಜ್ ಆನಿ ಪಯ್ಣಾಚಿ ಮಧೆಂ URL ಮಾತ್ರ್ ಬದಲ್ಲಾಂ ಶಿವಾಯ್ ವಲ್ಲಿಕ್ ಬರವ್ಪಿ ಆನಿ ಕೊಂಕಣಿ ಸಾಹಿತ್ಯಾಚೆರ್ ಆಸ್ಚೊ ಮೋಗ್
ಕುಸ್ಕುಟಾಚೊಯ್ ಬದ್ಲುಂಕ್ ನಾ. ಬದ್ಲಾಕ್ ದಾಯ್ಜ್ ಫಕತ್ ಎಕಾ ಲಿಪಿಕ್ ಸೀಮಿತ್ ಜಾವ್ನಾಸ್ಲೆಂ ತರ್ ಪಯ್ಣಾರಿಂತ್ ತಾಣೆಂ ವಿಶ್ವ್ ವ್ಯಾಪಿ ಜಾವ್ನ್ ಬದ್ಲುನ್ ತೀನ್ ಲಿಪಿಂತ್ ಸಾಹಿತ್ಯ್ ಪರ್ಗಟ್ಚೆಂ ಮಾತ್ರ್ ನ್ಹಯ್, ಪಯ್ಲೆಂ ಫಕತ್ ಬರ್ಪಾರುಪಾರ್ ಆಸ್ಲೆಂ ಸಾಹಿತ್ಯ್ ಆತಾಂ ಆಡಿಯೊ ರುಪಾರ್ ಆಯ್ಕುಂಕ್ ಸಯ್ತ್ ಮೆಳ್ತಾ ಮ್ಹಣಾಲೊ. ಹೆಚ್ ವೆಳಾರ್ ಸಮಕಾಳಿನ್ ಬರವ್ಪಿ; ಮೆಲ್ವಿನ್ ರೊಡ್ರಿಗಸ್, ಆಂಡ್ರ್ಯೂ ಡಿ’ಕುನ್ಹಾ, ಕಿಶೂ ಬಾರ್ಕುರ್, ಪಂಚು ಬಂಟ್ವಾಳ್, ಮಾವ್ರಿಸ್ ಶಾಂತಿಪುರ್ ಕಶೆಂ ಫಕತ್ ಬರವ್ಪಿ/ಕವಿ ಜಾವ್ನ್ ಉರುಂಕ್ ನಾಸ್ತಾನಾ ಪ್ರಕಾಶಕ್, ಸಂಪಾದಕ್ ಜಾವ್ನ್ ಹೆರ್ ಬರವ್ಪ್ಯಾಂಕ್ ಸಾಂಗಾತಾ ಘೆವುನ್ ಮುಕಾರ್ ಚಲ್ಲೆ ಪುಣ್ ವಲ್ಲಿ ಕ್ವಾಡ್ರಸಾನ್ ಹೆಂ ಕಾಮ್ 2003 ಇಸ್ವೆಥಾವ್ನ್‍ಚ್ ಸುರು ಕೆಲ್ಲೆಂ ಮ್ಹಣಾಲೊ.
ಮುಖೆಲ್ ಸಯ್ರೊ ಜಾವ್ನ್ ಹಾಜರ್ ಆಸ್‌ಲ್ಲ್ಯಾ ಗೋವಾ-ನ್ಯೂಸ್.ಕೊಮ್‌ಚೊ ಸಂಪಾದಕ್ ಬಾಬ್ ಸಂಧೇಶ್ ಪ್ರಭುದೇಸಾಯ್ ಹಾಣಿಂ ಅಪ್ಲ್ಯಾ ಉಲವ್ಪಾಂತ್; ಕೋವಿಡ್ ಮಾ-ಪಿಡೆನ್ ಮನ್ಶಾಂಕ್ ಧೊಸ್ಲೆಂ ಆನಿ ಭೆಶ್ಟಾಯ್ಲೆಂ ಪುಣ್ ಹ್ಯಾಚ್ ಕಾಳಾರ್ ಡಿಜಿಟಲ್ ಮಾಧ್ಯಮ್ ಏಕ್ ವರದಾನ್ ಕಶೆಂ ಜಾಲೆಂ, ಆನಿ ಆಜ್ ಆಶಾವಾದಿ ಪ್ರಕಾಶನಾಚ್ಯಾ ವೀಸ್ ವರ್ಸಾಂಚ್ಯಾ ವಾವ್ರಾವಿಶಿಂ ಆಯ್ಕುನ್ ಖರೆಂಚ್ ಅಶೆಂ ಭಗ್ಲೆಂ, ಹೆಂ ಕಾಮ್ ಗೊಂಯಾಂತ್ ಜಾವ್ಪಾಕ್ ಜಾಯ್ ಆಸ್ಲೆಂ ಪುಣ್ ಗೊಂಯಾಂ ಭಾಯ್ರ್ ಜಾಲ್ಲೆಂ ಆಮ್ಕಾಂ ಖೂಪ್ ಅಭಿಮಾನಾಚೆಂ ಕಾಮ್. ಆನಿ ಆಮಿ ೩೫೦ ವರ್ಸಾಂ ಪಾಟಿಂ ವಚುಂಕ್ ಸಕಾನಾಂವ್ ಪುಣ್ ಡಿಜಿಟಲ್ ಮಾಧ್ಯಮಾಚೊ ಥೆಂಕೊ ಘೆವುನ್ ಆಮಿ ೩೫೦ ವರ್ಸಾಂ ಪಾಟಿಂ ವಚುಂಕ್ ಸಕ್ತಾಂವ್ ಆನಿ ಏಕ್ ಕೊಂಕಣಿ ಕುಟಮ್ ಜಾವ್ನ್ ಕೊಂಕಣಿಚ್ಯಾ ವಾಡಾವಳೆಖಾತಿರ್ ಸಾಂಗಾತಾ ವಾವ್ರ್ ಕರುಂಕ್ ಸಕ್ತಾಂವ್ ಆನಿ ಹ್ಯಾ ದಿಶೆನ್ ಬಾಬ್ ವಲ್ಲಿ ಕ್ವಾಡ್ರಸಾನ್ ಅಪ್ಲ್ಯಾ ತಾಂತ್ರಿಕ್ ಗಿನ್ಯಾನಾಕ್ ಹಾತೆರ್ ಕರುನ್ ಮುಖೇಲ್‌ಪಣ್ ಘೆಂವ್ಕ್ ಆಶಾವಾದಿ ಪ್ರಕಾಶನಾಕ್ ಉಲೊ ದಿಲೊ.
ಅಖಿಲ್ ಭಾರತೀಯ್ ಕೊಂಕಣಿ ಪರಿಶದೆಚಿ ಅಧ್ಯಕ್ಷ್ ಬಾಯ್ ಉಷಾ ರಾಣೆನ್ ಅಪ್ಲ್ಯಾ ಉಲವ್ಪಾಂತ್ ಆಶಾವಾದಿ ಪ್ರಕಾಶನಾಚ್ಯಾ ವಾವ್ರಾವಿ ಸವಿಸ್ತಾರ್ ವಳೊಕ್ ಆಯ್ಕುನ್ ಅಪ್ಣಾಕ್ ಅಶೆಂ ಭಗ್ಲೆಂ ಅಮಿ ಕೊಂಕಣಿ ಪಾಸತ್ ಕೆಲ್ಲೆಂ ಭೋವ್ ಥೊಡೆಂ. ಆನಿ ಹ್ಯಾ ಪಾಸತ್ ಆಶಾವಾದಿ ಪ್ರಕಾಶನಾಚ್ಯಾ ವಲ್ಲಿ ಕ್ವಾಡ್ರಸಾಚಿ ಥೊಕ್ಣಾಯ್ ಕೆಲಿ.
ಗೊಂಯ್ ಕೊಂಕಣಿ ಅಕಾಡೆಮಿಚ್ಯಾ ’ಅನನ್ಯ’ ಜರ್ನಲಾಚಿ ಸಂಪಾದಕ್ ಬಾಯ್ ದೊ|ಜಯಂತಿ ನಾಯ್ಕಾನ್ ಅಪ್ಲ್ಯಾ ಉಲವ್ಪಾಂತ್; ’ಬಾಬ್ ವಲ್ಲಿಚಿ ಆನಿ ಮ್ಹಜಿ ಒಳೊಕ್ ಸ ವರ್ಸಾಧಿಂ ಜಾಲ್ಲಿ, ಜೆದ್ನಾಂ ತಾಚಿ ಏಕ್ ಕಥಾ ಮ್ಹಾಕಾ ಪಾವ್ಲಿ ಆನಿ ತಿ ಕಥಾ ಮ್ಹಾಕಾ ಇತ್ಲಿ ಆವಡ್ಲಿ ಮ್ಹಳ್ಯಾರ್ ಹಾಂವೆಂ ಫೋನ್ ಕರುನ್ ಪರ್ಬಿಂ ಪಾಟಯ್ಲಿ. ಥೊಡ್ಯಾಚ್ ತೆಂಪಾನ್ ಹಾಂವ್ ಕೊಂಕಣಿ ಪರಿಶದೆಕ್ ಲಾಗುನ್ ಮುಂಬಯ್ ಪಾವ್ಲಿಂ ಆನಿ ತೆದ್ನಾಂ ವಲ್ಲಿ ಕ್ವಾಡ್ರಸ್ ಮ್ಹಾಕಾ ಮೆಳ್ಳೊ ಪುಣ್ ಜೆದ್ನಾಂ ತೊ ಗೊಂಯಾಂ ಆಯ್ಲೊ ತೊ ಪಯ್ಲೊ ಯೆತಾಲೊ ಗೊಂಯ್ ಕೊಂಕಣಿ ಅಕಾಡೆಮಿಕ್ ಆನಿ ಆಮಿ ವೊರಾಂಗಟ್ಲೆಂ ಕಥೆವಿಶಿಂ ಉಲಯ್ತಲ್ಯಾಂವ್ ಆನಿ ತಾಚೆಥಾವ್ನ್ ಹಾಂವೆಂ ಪಾರ್ಕಿಲ್ಲಿ ಏಕ್ ದೂಕ್ ಜಾವ್ನಾಸಾ; ’ಆಮ್ಚೆಂ ಕೊಂಕಣಿ ಸಾಹಿತ್ಯ್ ಗ್ರೇಸ್ತ್ ಆಸಾ, ಪುಣ್ ತೆಂ ಲಿಪಿಚ್ಯಾ ಬಂದಡೆಂತ್ ಭಾಂದುನ್ ಆಸಾ, ಆಮಿ ತ್ಯಾ ಬಂಧಡೆಥಾವ್ನ್ ಸುಟ್ಕಾ ಘೆಂವ್ಚ್ಯೊ ವಾಟೊ ತಯಾರ್ ಕರಿಜಯ್’ ಮ್ಹಣುನ್. ಆಶಾವಾದಿ ಪ್ರಕಾಶನಾಚ್ಯಾ ವಾವ್ರಾಕ್ ಬರೆಂ ಮಾಗುನ್ ಹೆಂ ಆಶಾವಾದಿ ಪ್ರಕಾಶನ್ ಖರೆಂಚ್ ಕೊಂಕಣಿ ಸಾಹಿತಿಕ್ ಇತಿಹಾಸಾಂತ್ ಏಕ್ ಮಯ್ಲಾಫಾತರ್ ಮ್ಹಣಾಲಿ.
ಬಾಯ್ ರೂಪಾ ಚಾರಿನ್ ’ಪುಸ್ತಕ್ ವಿಮೋಚನ್’ ಕಾರ್ಯಾಚೆಂ ಸುಂಕಾಣ್ ಘೆತ್‌ಲ್ಲ್ಯಾ ಬಾಯ್ ಮಂಗ್ಳುರ್‌ಚ್ಯಾ ಬೆಸೆಂಟ್ ಕೊಲೆಜಿಚ್ಯಾ ಪತ್ರಿಕೋಧ್ಯಮ್ ವಿಭಾಗಾಚ್ಯಾ ಮುಖೆಸ್ತ್ ಬಾಯ್ ಸ್ಮಿತಾ ಶೆಣಯ್ ಹಿಚಿ ಒಳೊಕ್ ಕರುನ್ ದಿತಚ್ ಬಾಯ್ ಸ್ಮಿತಾ ಶೆಣಯ್ ಹಿಣೆಂ ಆಶಾವಾದಿ ಪ್ರಕಾಶನಾಚ್ಯಾ ವಿಮೋಚನ್ ಜಾಂವ್ಕ್ ಆಸ್ಚ್ಯಾ ತೀನ್ ಬುಕಾಂಚಿ ತಶೆಂಚ್ ಬರವ್ಪ್ಯಾಂಚೊ ಒಳೊಕ್ ಕರುನ್ ದಿಂವ್ಕ್ ಮ್ಯಾಂಚೆಸ್ಟರ್ (ಯುಕೆ) ಥಾವ್ನ್ ಲಾರೆನ್ಸ್ ವಿನೋದ್ ಬಾರ್ಬೋಜಾಕ್ ಉಲೊ ದಿಲೊ.
ಲಾರೆನ್ಸ್ ವಿನೋದ್ ಬಾರ್ಬೋಜಾನ್ ಮೊನಿಕಾ ಡೆ’ಸಾಚಿ ತಶೆಂಚ್ ತಿಚ್ಯಾ ’ನವಿ ದಿಶಾ’ ಪುಸ್ತಕಾಚಿ, ವಾಲ್ಟರ್ ನಂದಳಿಕೆ ತಶೆಂಚ್ ತಾಚ್ಯಾ ’ಫಾಂತ್ಯಾಪಾರಾಚೆಂ ಸಪಣ್’ ಪುಸ್ತಕಾಚಿ, ಆನಿ ಸ್ಟೀಫನ್ ಪಿಂಟೊ ಕುಂಟಲ್ಪಾಡಿ ತಶೆಂಚ್ ತಾಚ್ಯಾ ’ಕೊಂಬೊ ಆನಿ ಝುಜ್’ ಪುಸ್ತಕಾಚಿ ವಳೊಕ್ ಕರುನ್ ದಿಲಿ.

ಮಾನೆಸ್ತ್ ಜೋಸೆಫ್ ಮಥಾಯಸಾನ್ ’ನವಿ ದಿಶಾ’ ಪುಸ್ತಕಾಚೆಂ ವಿಮೋಚನ್ ಕರುನ್ ಅಪ್ಲೊ ಸಂಧೇಶ್ ದಿವುನ್ ’ಆಶಾವಾದಿ ಪ್ರಕಾಶನಾನ್ ಪಾಟ್ಲ್ಯಾ ವೀಸ್ ವರ್ಸಾಂನಿ ಕೆಲ್ಲೊ ವಾವ್ರ್ ಪಳೆವ್ನ್ ಹಾಂವ್ ಖರೊಂಚ್ ವಿಜ್ಮಿತ್ ಪಾವ್ಲೊಂ, ಆನಿ ಖಂಡಿತ್ ಜಾವ್ನ್ ಹ್ಯಾ ವಾವ್ರಾಕ್ ಅಪ್ಲೊ ಪಾಟಿಂಬೊ ಫುಡೆಂಯ್ ಆಸ್ತಲೊ ಮ್ಹಣಾಲೊ’, ಮೊನಿಕಾ ಮಥಾಯಸಾನ್ ಅಪ್ಲ್ಯಾ ಉಲವ್ಪಾಂತ್ ’ಮನಿಸ್ ಜರ್ ಅಪ್ಲ್ಯಾ ಕಾಳ್ಜಾಂತ್ ಸಿಂತಿಮೆಂತಾಂ ನಾಸ್ತಾನಾ ಆಸ್ತೊ ತರ್ ತೊ ಎಕಾ ಫಾತ್ರಾಪರಿಂ ದಿಸ್ತೊ, ದೆಕುನ್ ಹ್ಯಾ ಸಿಂತಿಮೆಂತಾಂಕ್ ಸಾಹಿತ್ಯಾಚೆಂ ರೂಪ್ ದಿಲ್ಲ್ಯಾ ಮ್ಹಲ್ಯಾ ಕಾಣಿಯಾಂಕ್ ಎಕ್ಟಾಂವ್ಕ್ ಪರ್ಗಟ್ ಕೆಲ್ಲ್ಯಾ ಆಶಾವಾದಿ ಪ್ರಕಾಶನಾಚೊ, ಆನಿ ಹ್ಯಾ ಪಾಸತ್ ಪಾಟಿಂಬೊ ದಿಲ್ಲ್ಯಾ ಕುಟ್ಮಾಚೊ ಧಿನ್ವಾಸ್ ಕೆಲೊ’.

ಮಾನೆಸ್ತ್ ದಾಮೋದರ್ ಮಾವ್ಜೊನ್ ’ಫಾಂತ್ಯಾಪಾರಾಚೆಂ ಸಪಣ್’ ಪುಸ್ತಕಾಚೆಂ ವಿಮೋಚನ್ ಕರುನ್ ಅಪ್ಲ್ಯಾ ಸಂಧೇಶಾಂತ್ ’ಕೊಂಕಣಿ ಸಾಹಿತ್ಯಾಂತ್ ಜೆದ್ನಾಂ ವೆಗ್-ವೆಗಳ್ಯಾ ಪ್ರಾಂತ್ಯಾಚೆಂ ಸಾಹಿತ್ಯ್ ಲಾಗಿಂ ಯೆತಾ, ತೆದ್ನಾಂಚ್ ಕೊಂಕಣಿ ಸಾಹಿತ್ಯಾಚಿ ಖರಿ ತಾಂಕ್ ಕಳ್ತಾ’ ಮ್ಹಣಾಲೊ.

ಮಾನೆಸ್ತ್ ಹಿಲರಿ ಟೆಲ್ಲಿಸ್ ಬಾಹ್ರೇಯ್ನ್ ಹಾಣೆಂ ಅಪ್ಲ್ಯಾ ಉಲವ್ಪಾಂತ್ ಸ್ಟೀಫನ್ ಪಿಂಟೊಚ್ಯಾ ವೆಕ್ತಿತ್ವಾವಿಶಿಂ ತಶೆಂಚ್ ತಾಚ್ಯಾ ಕಾಣಿಯಾಂವಿಶಿಂ ಉಲವ್ನ್, ಹ್ಯೊ ಕಾಣಿಯೊ ಬುಕಾರುಪಾರ್ ಪ್ರಕಾಶಿತ್ ಕೆಲ್ಲ್ಯಾ ಆಶಾವಾದಿ ಪ್ರಕಾಶನಾಕ್ ಧಿನ್ವಾಸ್ಲೆಂ.

ಬಾಯ್ ಸ್ಮಿತಾ ಶೆಣಯ್ ಹಿಣೆಂ ಮುಕ್ಲ್ಯಾ ಭಾಗಾಚೆಂ ಸುಂಕಾಣ್ ಘೆತ್‌ಲ್ಲ್ಯಾ ಗೊಂಯ್ಚ್ಯಾ ಶ್ರೀ ಮಲ್ಲಿಕಾರ್ಜುನ ಕೊಲೆಜಿಚ್ಯಾ ಕೊಂಕಣಿ ವಿಭಾಗಾಚೊ ಮುಖೆಸ್ತ್ ದೊ|ಪೂರ್ಣಾನಂದ ಚ್ಯಾರಿಚಿ ಒಳೊಕ್ ಕರುನ್ ದಿಲಿ.

ಪುರಸ್ಕಾರ್ ಆನಿ ಇನಾಮಾಂಚ್ಯಾ ಹ್ಯಾ ವಿಭಾಗಾಂತ್ ಪಯ್ಲೆಂ ’ಪಯ್ಣಾರಿ-ವೀಜ್ ಸಾಹಿತಿಕ್ ಸ್ಪರ್ಧೊ’ ವಿಶಿಂ ಉಲಯಿತ್ತ್ ದೊ|ಆಸ್ಟಿನ್ ಡಿ’ಸೋಜ್ ಪ್ರಭುನ್ ಕಶೆಂ ಪಯ್ಣಾರಿ-ವೀಜ್ ರಾಶ್ಟ್ರೀಯ್ ಅಮ್ಟ್ಟಾಚ್ಯಾ ಸಾಹಿತ್ಯಿಕ್ ಸ್ಪರ್ಧ್ಯಾಚಿ ಸುರ್ವಾತ್ ಕರುನ್ ಆತಾಂ ತೀನ್ ವರ್ಸಾಂ ಸಂಪಯ್ಲಿಂ, ಆನಿ ಫುಡೆಂ ಸಯ್ತ್ ಕೊಂಕಣಿಚ್ಯಾ ಉತ್ತೀಮ್ ಸಾಹಿತಿಂಕ್ ಹ್ಯಾ ಸ್ಪರ್ಧ್ಯಾಂತ್ ವಾಂಟೊ ಘೆಂವ್ಕ್ ಉಲೊ ದಿಲೊ.
ಮಾನೆಸ್ತ್ ಜೇಮ್ಸ್ ಮೆಂಡೊನ್ಸಾ ದುಭಯ್ ಹಾಣಿಂ ವಿಲ್ಫಿ ರೆಬಿಂಬಸ್ ಸ್ಮಾರಕ್ ಪಯ್ಣಾರಿ-ವೀಜ್ ರಾಶ್ಟ್ರೀಯ್ ಮಟ್ಟಾಚ್ಯಾ ತಿಸ್ರ್ಯಾ ಸಾಹಿತಿಕ್ ಸ್ಪರ್ಧ್ಯಾಂತ್ ಇನಾಮಾಂ ಆಪ್ಣಾಯಿಲ್ಲ್ಯಾಂಚಿಂ ನಾಂವಾಂ ಘೋಶಿತ್ ಕೆಲಿಂ;

ಲೇಖನಾಂ ಬರಂವ್ಚೊ ವಿಭಾಗ್: ಲಾರೆನ್ಸ್ ವಿನೋದ್ ಬಾರ್ಬೋಜ್ ಮ್ಯಾಂಚೆಸ್ಟರ್ ಯುಕೆ
ಆಶಾವಾದಿ ಪ್ರಕಾಶನಾಚ್ಯಾ ಬುಕಾಂಚೆರ್ ವಿಮರ್ಸೊ ಬರಂವ್ಚೊ ವಿಭಾಗ್: ದೊ|ಅರವಿಂದ ಶ್ಯಾನ್‌ಭಾಗ್ ಕುಮಟಾ ಆನಿ ಪ್ರಸನ್ನ್ ನಿಡ್ಡೋಡಿ