HOLY ROSARY CHURCH, KUNDAPUR – 450 th JUBILEE SOUVENIR 2021

ರಾಜಕೀಯ, ಸಹಕಾರಿ ಕ್ಷೇತ್ರದ ಧುರೀಣ, ಕೃಷಿಕ,ದಿನಕರ ಶೆಟ್ಟಿ ಇನ್ನಿಲ್ಲಾ

JANANUDI.COM NETWORK

ಕುಂದಾಪುರ, ಮಾಜಿ ತಾ.ಪ.ಅಧ್ಯಕ್ಷ, ಕುಂದಾಪುರ ಪಿ. ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ,ದಿನಕರ ಶೆಟ್ಟಿ ಕಾಳಾವರ ದಿನಾಂಕ 29ರಂದು ನಿಧನರಾದರು. ಇವರು ಪತ್ನಿ, ಓರ್ವ ಪುತ್ರ,ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಬಾಗಲಕೋಟೆ ತೋಟಗಾರಿಕೆ ಮೇಳ :ಪತ್ರಿಕಾಗೋಷ್ಟಿಗೆ ಆಹ್ವಾನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಬಾಗಲಕೋಟೆಯಲ್ಲಿ ನಡೆಯುವ ತೋಟಗಾರಿಕೆ ಮೇಳ 2021ರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಲು ತೋಟಗಾರಿಕೆ ಇಲಾಖೆಯ ಡೀನ್ ಬಿ.ಜಿ ಪ್ರಕಾಶ್ ರವರು ದಿನಾಂಕ: 30-12-2020ರ ಬುಧವಾರ ಬೆಳಗ್ಗೆ 10-00 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿಯನ್ನು ಕರೆದಿದ್ದಾರೆ.

ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ಮಿತ್ರರಾದ ತಾವುಗಳು ಈ ಸುದ್ಧಿಗೋಷ್ಟಿಗೆ ಆಗಮಿಸುವಂತೆ ಕೋರಿದೆ.

ಕೋವಿಡ್-19: ಸರ್ಕಾರ ಮತ್ತು ಮಾಧ್ಯಮ ವಿಚಾರ ಸಂಕಿರಣಕ್ಕೆ ಚಾಲನೆ ಅಪಾಯ ಲೆಕ್ಕಿಸದೇ ಜನರಲ್ಲಿ ಜಾಗೃತಿ ತಂದ ಪತ್ರಕರ್ತರು-ಎನ್.ಭೃಂಗೀಶ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಪತ್ರಕರ್ತರು ಅಪಾಯ ಲೆಕ್ಕಿಸದೇ ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ, ಸಂಕಷ್ಟದಲ್ಲಿದ್ದ ವಿವಿಧ ವರ್ಗಗಳ ನೆರವಿಗೆ ಸರ್ಕಾರ ನಿಲ್ಲುವಂತೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಎನ್.ಭೃಂಗೀಶ್ ಶ್ಲಾಘಿಸಿದರು.
ಮಂಗಳವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೋಲಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಕೋವಿಡ್-19: ಸರ್ಕಾರ ಮತ್ತು ಮಾಧ್ಯಮ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾನು ಕೋಲಾರ ಜಿಲ್ಲೆಯ ಅಳಿಯ ಮಾತ್ರವಲ್ಲ, ಗೆಳೆಯನೂ ಆಗಿದ್ದೇನೆ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ನೂರಾರು ಪತ್ರಕರ್ತರು ಕೆಲಸ ಕಳೆದಕೊಂಡಿದ್ದಾರೆ, ಇಡೀ ಪ್ರಪಂಚವನ್ನೇ ಕೋವಿಡ್ ತಲ್ಲಣಗೊಳಿಸಿದೆ ಎಂದರು.
ಸಿದ್ದಸೂತ್ರವೂ ಇಲ್ಲ, ಸಿದ್ದೌಷಧಿಯೂ ಇಲ್ಲದೇ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ, ರೈತರು, ಹೂ ಬೆಳೆಗಾರರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳ ನೆರವಿಗೆ ಬಂದು ಜನರ ನೋವಿಗೆ ಮಾನವೀಯ ನೆಲಗಟ್ಟಿಯಲ್ಲಿ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಿಸಿ
ಮಾಧ್ಯಮವನ್ನಲ್ಲ
ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಮಾಧ್ಯಮವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ, ಆದ್ದರಿಂದಲೇ ನಾವು ನಿಷ್ಟೂರವಾಗಿ ಕೋವಿಡ್ ನಿಯಂತ್ರಿಸಿ ಮಾಧ್ಯಮವನ್ನಲ್ಲ ಎಂದು ನಿಷ್ಠೂರವಾಗಿ ಹೇಳಬೇಕಾಯಿತು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿದ್ದ ಮಾಧ್ಯಮಗಳ ಬದ್ದತೆ ಇಂದು ಇಲ್ಲವಾಗಿದೆ ಎಂದು ವಿಷಾದಿಸಿ, ಮಾಧ್ಯಮ ಮತ್ತು ಸರ್ಕಾರ ಎರಡು ರೈಲು ಹಳಿಗಳಿದ್ದಂತೆ ಅದರ ಮೇಲೆ ಪ್ರಜಾಪ್ರಭುತ್ವದ ಸತ್ಪ್ರಜೆಗಳನ್ನು ತುಂಬಿದ ರೈಲು ಚಲಿಸುತ್ತದೆ ಹಳಿಗಳು ಅಲುಗಾಡಿದರೆ ಪ್ರಜಾಪ್ರಭುತ್ವವೇ ಅಲುಗಾಡುತ್ತದೆ ಎಂದರು.
ಮಾಧ್ಯಮಗಳು ಜನರ ಧ್ವನಿಯಾಗಿ ವಿಶ್ವಾರ್ಹತೆ ಉಳಿಸಿಕೊಳ್ಳಬೇಕು, ಸರ್ಕಾರ ಮತ್ತು ಆಡಳಿತ ಯಂತ್ರದ ಜತೆ ನಾವು ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಮುದ್ರಣ ಮಾಧ್ಯಮದ ವಿಶ್ವಾಸ ಶೇ.62ಕ್ಕೆ ಕುಸಿದಿದೆ, ರೇಡಿಯೋಗೆ 57ಕ್ಕೆ, ವಿದ್ಯುನ್ಮಾನ ಮಾಧ್ಯಮ ಇತ್ತೀಚೆಗೆ ಆರಂಭಗೊಂಡಿದ್ದರೂ ಆಗಲೇ ವಿಶ್ವಾಸರ್ಹತೆ 56ಕ್ಕೆ ಕುಸಿದಿದೆ ಇದು ಆತಂಕಕಾರಿ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ಮಾಧ್ಯಮದ ಆದಾಯ ಶೇ.16 ಕುಸಿದಿದೆ, ವೇತನ ನೀಡಲಾಗದ ಸ್ಥಿತಿಗೂ ತಲುಪಿದೆ ಎಂದ ಅವರು, ವಿದ್ಯುನ್ಮಾನ ಮಾಧ್ಯಮಗಳು ಸಂಯಮದ ಭಾಷೆ ಬಳಸಬೇಕು, ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ಬೇಸರ ವ್ಯಕ್ತಪಡಿಸಿ, ಜನರನ್ನು ಹೆದರಿಸಬೇಡಿ ಅರಿವು ಮೂಡಿಸಿ ಎಂದಿದ್ದನ್ನು ಸ್ಮರಿಸಿ ಆದ್ದರಿಂದ ವೃತ್ತಿ ಪಾವಿತ್ರ್ಯತೆಗೆ ಆತ್ಮಾವಲೋಕನ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕೋವಿಡ್ 1 ಮತ್ತು ರೂಪಾಂತರ ಕೋವಿಡ್ ಕುರಿತು ಭಯಾನಕ ಅವಲೋಕನ ನಡೆಯುತ್ತಿದೆ, ಇದು ಜನರಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿದ್ದು, ಮಾಧ್ಯಮಗಳು ವಸ್ತುನಿಷ್ಟ ವರದಿ ಮಾಡಿ ಜನರಿಗೆ ತಲುಪಿಸೋಣ ಎಂದರು.
ಕೋವಿಡ್ ಸಂದರ್ಭದಲ್ಲಿ ಸಿಎಂ ನಮಗೆ ಸ್ಪಂದನೆ ನೀಡಿದ್ದಾರೆ, ಸಣ್ಣಪತ್ರಿಕೆಗಳ ಉಳಿವಿಗಾಗಿ ಬಾಕಿ ಇದ್ದ ಜಾಹಿರಾತು ಮೊತ್ತ 56 ಕೋಟಿಯನ್ನು ಬಿಡುಗೆ ಮಾಡಿದರು ಎಂದು ಕೃತಜ್ಞತೆ ಸಲ್ಲಿಸಿದರು.
ಸಿದ್ದರಾಮಯ್ಯ ಇದ್ದಾಗ ಹೆಲ್ತ್ ಕಾರ್ಡ್‍ಗೆ ಬಜೆಟ್‍ನಲ್ಲಿ ತೋರಿಸಿದರೆ ಆದರೆ ಯಡಿಯೂರಪ್ಪ ನಮ್ಮ ಮನವಿಗೆ ಸ್ಪಂದಿಸಿ ಯೋಜನೆ ಜಾರಿ ಮಾಡಿದರು ಎಂದು ತಿಳಿಸಿ, ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಸಂಘ ಬದ್ದವಾಗಿದ್ದು, ಗ್ರಾಮೀಣ ಪತ್ರಕರ್ತರ ಸಮಸ್ಯೆಗಳಿಗೂ ಸ್ಪಂದಿಸುವಪ್ರಯತ್ನ ಮಾಡುತ್ತಿದೆ ಎಂದರು.
ಬಿ.ಟಿವಿ ಸುದ್ಧಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಧಾನ ಸಂಪಾದಕ ಜಿ.ಎಂ ಕುಮಾರ್, ಭೃಂಗೇಶ್ ಮನಸ್ಸುಮಾಡಿ ಕೋಲಾರ ಪತ್ರಕರ್ತರಿಗೆ 10 ಎಕರೆ ಸರ್ಕಾರದ ಕಡೆಯಿಂದ ಮಂಜೂರು ಮಾಡಿಸಿ ಎಲ್ಲರಿಗೂ ನಿವೇಶನ ಸಿಗುವಂತೆ ಮಾಡಲಿ ಎಂದು ಆಶಿಸಿದರು.


ಉದಯವಾಣಿ ಮುಖ್ಯ ವರದಿಗಾರ ಎಸ್.ಲಕ್ಷ್ಮೀನಾರಾಯಣ,ಕೋವಿಡ್ ಸಂದರ್ಭದಲ್ಲೂ ಸುದ್ದಿಗಾಗಿ ಸವಾಲು ಸ್ವೀಕರಿಸಿ ಕೆಲಸ ಮಾಡಿದ್ದೇವೆ, ಲಾಕ್‍ಡೌನ್ ಪಾಠ ಕಲಿಸಿದೆ, ಪತ್ರಕರ್ತರು ತಮ್ಮ ಕೆಲಸದ ಜತೆಗೆ ಕುಟುಂಬ ಮತ್ತು ತಮ್ಮ ಆರೋಗ್ಯಕ್ಕೂ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ವೃತ್ತಿ ಧರ್ಮ ಪಾಲಿಸಬೇಕು, ಈ ಸಂಘದಲ್ಲಿ ಹಿಂದೆ ಹಲವಾರು ಹಿರಿಯರು ದಾರಿ ತೋರಿದ್ದಾರೆ, ಸಂಘದ ನಿವೇಶನ ಮಾಡಿಕೊಟ್ಟು ಬೆಳೆಸಿದ್ದಾರೆ ಎಂದು ತಿಳಿಸಿ ಇದೀಗ ತಮ್ಮ ಅವಧಿಯಲ್ಲಿ ಮತ್ತಷ್ಟು ಅಭಿವೃದ್ದಿಯಾಗಿರುವ ಕುರಿತು ಮಾಹಿತಿ ನೀಡಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಶೇ.80 ಪತ್ರಕರ್ತರಿಗೆ ಸಂಬಳವಿಲ್ಲ, ನಾವು ಯಾರ ಬಳಿಯೂ ಕೈಚಾಚದೇ ಶಾಸಕ,ಸಂಸದರ ಅನುದಾನದಿಂದ ಕಟ್ಟಡ ಕಟ್ಟಿದ್ದೇವೆ, ಬಜೆಟ್‍ನಲ್ಲಿ ಎಲ್ಲಾ ಪತ್ರಕರ್ತರಿಗೂ ಆಂಧ್ರದ ಮಾದರಿಯಲ್ಲಿ ಹೆಲ್ತ್ ಕಾರ್ಡ್, ಬಸ್ ಪಾಸ್ ಒದಗಿಸಲು ರಾಜ್ಯ ಸಂಘ ಮತ್ತು ಭೃಂಗೀಶ್ ಅವರು ಸಹಕರಿಸಲಿ ಎಂದು ಆಶಿಸಿದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಪತ್ರಕರ್ತರ ನೆರವಿಗೆ ಸಂಘ ಬರಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಅತಿಥಿಗಳನ್ನು ಕೋಲಾರ ಜಿಲ್ಲಾ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ.ರೂಪ ಸ್ವಾಗತಿಸಿ, ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಾರ್ತಾಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ರಾಜ್ಯ ಸಂಘದ ಕಾರ್ಯಕಾರಿ ಸದಸ್ಯ ಮಹಮದ್ ಯೂನೂಸ್ ಸೇರಿದಂತೆ ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಜರಿದ್ದರು. ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ ನಾಡಗೀತೆ ಹಾಡಿದರು.

ಶಿಕ್ಷಕರು ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಸ್ವಚ್ಚತೆ,ಸಾಮಾಜಿಕ ಅಂತರ,ಮಾಸ್ಕ್ ಧರಿಸಿ-ವಾಣಿ ಕಿವಿಮಾತು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸ್ವಚ್ಚತೆ, ಸಾಮಾಜಿಕ ಅಂತರ,ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಅನುಸರಿಸಿದರೆ ಕೊರೋನಾ ತಡೆ ಸಾಧ್ಯ ಎಂದು ತಾಲ್ಲೂಕಿನ ನರಸಾಪುರ ಪ್ರಾಥಮಿಕ ಆರೋಗ್ಯಸ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹೆಚ್.ವಿ.ವಾಣಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲೆಗಳು ಜ.1 ರಿಂದ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಾಲೆಯ ಆವರಣದಲ್ಲೇ ನರಸಾಪುರ ಪಿಹೆಚ್‍ಸಿಯಿಂದಕೋವಿಡ್ ಟೆಸ್ಟ್ ನಡೆಸಿ ಅವರು ಮಾತನಾಡುತ್ತಿದ್ದರು.
ಶಾಲೆಗಳು ನಡೆಯದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ, ಅದಕ್ಕಾಗಿ ಶಿಕ್ಷಕರು ಆನ್‍ಲೈನ್ ತರಗತಿ ನಡೆಸುತ್ತಿದ್ದರೂ, ಗ್ರಾಮೀಣ ಮಕ್ಕಳು,ಪೋಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರುತ್ತಿಲ್ಲ ಎಂದರು.
ಕೋವಿಡ್ ಟೆಸ್ಟ್‍ಗೆ ಅಂಜಿ ಹಲವಾರು ವಿದ್ಯಾರ್ಥಿಗಳು ಶಾಲೆಯತ್ತ ಬಂದಿಲ್ಲ ಎಂಬ ಶಿಕ್ಷಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಟೆಸ್ಟ್‍ನಿಂದ ಯಾವುದೇ ಸಮಸ್ಯೆ ಇಲ್ಲ, ನೀವು,ನಿಮ್ಮ ಕುಟುಂಬ ಹಾಗೂ ಸಮಾಜವನ್ನು ಕೋವಿಡ್‍ನಿಂದ ರಕ್ಷಿಸಲು ಪ್ರತಿಯೊಬ್ಬರೂ ಪರೀಕ್ಷೆಗೆ ಒಳಗಾಗಿ, ಸೋಂಕಿದ್ದರೆ ಹೆದರುವ ಅಗತ್ಯವಿಲ್ಲ,ಮನೆಯಲ್ಲೇ ಪ್ರತ್ಯೇಕವಾಗಿ ಇದ್ದು ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು.
ಸರ್ಕಾರವೂ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸಾಸೌಲಭ್ಯ ಒದಗಿಸಿದೆ, ಯಾವುದೇ ಆತಂಕದ ಅಗತ್ಯವಿಲ್ಲ, ಅದರಲ್ಲೂ ಯುವಕರಾದ ನಿಮಗೆ ವೈರಸ್ ಏನೂ ಮಾಡದು ಆದರೆ ನಿಮ್ಮೊಂದಿಗೆ ನಿಮ್ಮ ಮನೆಯಲ್ಲಿ ತಂದೆತಾಯಿ, ವಯಸ್ಸಾದ ಅಜ್ಜ,ಅಜ್ಜಿ ಇರುವುದರಿಂದ ಅವರ ಜೀವ ರಕ್ಷಣೆಗೆ ನೀವು ಒತ್ತು ನೀಡಬೇಕು ಎಂದರು.
ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಎಲ್ಲರೊಂದಿಗೂ ಕೂಡಿ ಊಟ ಮಾಡುವುದು ಬೇಡ, ನಿಮ್ಮ ಸ್ನೇಹಿತರೊಂದಿಗೆ ಕಾಲ ಕಳೆಯುವಾಗ ದೂರದಿಂದಲೇ ಮಾತನಾಡಿಸಿ, ಅಂತರ ಕಾಪಾಡಿದರೆ ಅದು ನಿಮಗೆ ಒಳ್ಳೆಯದು ಎಂದರು.


ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಸಚ್ಚಿದಾನಂದಮೂರ್ತಿ ಮಾತನಾಡಿ, ಗ್ರಾಮೀಣ ಬಡ ಮಕ್ಕಳು ಕೋವಿಡ್ ಟೆಸ್ಟ್‍ಗಾಗಿ ಕೋಲಾರದ ಜಿಲ್ಲಾಸ್ಪತ್ರೆಗೆ ಹೋಗಬೇಕಾಗಿತ್ತು ಮತ್ತು ಅನೇಕ ಪೋಷಕರು ಟೆಸ್ಟ್‍ಗೆ ಹೆದರಿ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಧೈರ್ಯ ಮಾಡಿರಲಿಲ್ಲ ಎಂದರು.
ಇದೀಗ ಶಾಲೆಯ ಆವರಣದಲ್ಲೇ ಟೆಸ್ಟ್ ಸೌಲಭ್ಯ ಒದಗಿಸಿದ್ದಕ್ಕಾಗಿ ಎಲ್ಲಾ ಮಕ್ಕಳು ಪರೀಕ್ಷೆಗೆ ಒಳಗಾಗಲು ಅನುಕೂಲವಾಗಿದೆ, ಇದಕ್ಕಾಗಿ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ,ಸಿಬ್ಬಂದಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಕೋವಿಡ್ ಪರೀಕ್ಷೆಗೆ ಹೆದರಿ ಮಾಹಿತಿ ನೀಡಿದ್ದರೂ ಶಾಲೆಗೆ ಬಾರದ 12ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಿಕ್ಷಕರೇ ಹೋಗಿ ಪೋಷಕರ ಮನವೊಲಿಸಿ ಶಾಲೆಗೆ ಕರೆತಂದರು.
ಶಿಕ್ಷಕರು ಹಾಗೂ ಹಲವು ವಿದ್ಯಾರ್ಥಿಗಳು ಮೊದಲಿಗೆ ಟೆಸ್ಟ್‍ಗೆ ಒಳಗಾಗಿ ಧೈರ್ಯ ತುಂಬಿದ್ದರಿಂದಾಗಿ ಇತರೆಲ್ಲಾ ವಿದ್ಯಾರ್ಥಿಗಳು ನಿರಾತಂಕದಿಂದ ಪರೀಕ್ಷೆಗೆ ಒಳಗಾದರು.
ಈ ಸಂದರ್ಭದಲ್ಲಿ ನರಸಾಪುರ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಾಂತ್ರಿಕರಾದ ಮನೋಹರ್ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕೋವಿಡ್ ಟೆಸ್ಟ್ ನಡೆಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಅರುಣಮ್ಮ, ಚಂದ್ರಮ್ಮ, ಶಿಕ್ಷಕರಾದ ಲೀಲಾ, ಶ್ರೀನಿವಾಸಲು, ಫರೀದಾ, ರಾಮಸಂದ್ರ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್,ಅರಾಭಿಕೊತ್ತನೂರು ಪ್ರಾಥಮಿಕ ಶಾಲಾ ಶಿಕ್ಷಕರಾದ ಸುಮ, ಹೇಮಲತಾ, ವಸಂತಮ್ಮ ಮತ್ತಿತರರು ಉಪಸ್ಥಿತರಿದ್ದರು
.

ಕೆಸಿ,ಹೆಚ್‍ಎನ್‍ವ್ಯಾಲಿಗಳಿಗೆ ಕರಾರಿನಂತೆ ಪೂರ್ಣ ನೀರು ಹರಿಸಲು ಆಗ್ರಹ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತುರ್ತು ಸಭೆಗೆ ಡಾ.ವೈ.ಎ.ಎನ್ ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಕರಾರಿನಂತೆ ನೀರನ್ನು ಪೂರ್ಣ ಪ್ರಮಾಣದಲ್ಲಿ ಕೆಸಿ ವ್ಯಾಲಿ,ಹೆಚ್‍ಎನ್ ವ್ಯಾಲಿ ಮೂಲಕ ಹರಿಸಲು ವಿಳಂಬವಾಗಿರುವುದರಿಂದ ಕೂಡಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಯೋಜನೆಯ ವೇಗ ಹೆಚ್ಚಿಸುವಂತೆ ವಿಧಾನಪರಿಷತ್ ಸದಸ್ಯ ಡಾ.ವೈಎ.ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.
ಈ ಸಂಬಂಧ ರಾಜ್ಯ ಕಾನೂನು,ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರಿಗೆ ಲಿಖಿತ ಮನವಿ ಸಲ್ಲಿಸಿರುವ ಅವರು, ಸೆಪ್ಟೆಂಬರ್ 2020ರೊಳಗೆ 400 ಎಂಎಲ್‍ಡಿ ಕೆಸಿ ವ್ಯಾಲಿಯ ಮೂಲಕ ನೀರನ್ನು ಹರಿಸಲು ಯೋಜನೆ ರೂಪಿಸಿದ್ದರೂ ಸಹ ಈವರೆಗೂ ಬೆಂಗಳೂರು ನೀರು ಸರಬರಾಜು ಮ್ತು ಒಳಚರಂಡಿ ಮಂಡಳಿ ನೀರನ್ನು ಪೂರೈಸಲು ಸಹಕರಿಸಿಲ್ಲ ಎಂದು ತಿಳಿಸಿದ್ದಾರೆ.
ಕೆಸಿ ವ್ಯಾಲಿ ಯೋಜನೆಯಡಿ ಹಂಚಿಕೆಯಾಗಿರುವ 400 ಎಂಎಲ್‍ಡಿ ಪೈಕಿ 300ರಿಂದ 310 ಎಂಎಲ್‍ಡಿ ನೀರು ಮಾತ್ರ ಪಂಪ್ ಮಾಡಲಾಗುತ್ತಿದೆ,ಈ ನೀರಿನಿಂದ ಈಗಾಗಲೇ ಕೋಲಾರ ಜಿಲ್ಲೆಯಲ್ಲಿ 79 ಕೆರೆಗಳು ಮತ್ತು 98 ಚೆಕ್‍ಡ್ಯಾಂಗಳು ಭರ್ತಿಯಾಗಿವೆ ಎಂದು ತಿಳಿಸಿದ್ದಾರೆ.
ಉಳಿದಂತೆ ಕರಾರಿನ ಪ್ರಕಾರ ಒಳಚರಂಡಿ ಮಂಡಳಿಯವರು ಇನ್ನೂ 90 ಎಂಎಲ್‍ಡಿ ನೀರನ್ನು ಸಣ್ಣನೀರಾವರಿ ಇಲಾಖೆಗೆ ಒದಗಿಸಬೇಕಾಗಿದೆ ಮತ್ತು 2ನೇ ಹಂತದಲ್ಲಿ ಹೆಚ್.ಎನ್. ವ್ಯಾಲಿ ಯೋಜನೆಗೆ 210 ಎಂಎಲ್‍ಡಿ ನೀರು ಹಂಚಿಕೆಯಾಗಿದ್ದರೂ, ಈಗ ದಿನಂಪ್ರತಿ 100 ಎಂಎಲ್‍ಡಿ ಮಾತ್ರ ಪಂಪ್ ಮಾಡುತ್ತಿದ್ದು, ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಗಲೂರು ಕೆರೆಯನ್ನು ತುಂಬಿಸಲಾಗಿದೆ ಎಂದರು.
ಆದರೆ ಹೆಚ್‍ಎನ್ ವ್ಯಾಲಿ ಯೋಜನೆಯಡಿ ಇನ್ನೂ 110 ಎಂಎಲ್‍ಡಿ ನೀರು ಸಣ್ಣ ನೀರಾವರಿ ಇಲಾಖೆಗೆ ಹಂಚಿಕೆಯಾಗಬೇಕಾಗಿದ್ದು, ಇದನ್ನೂ ಶೀಘ್ರ ಹರಿಸಲು ಕ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.
ಕಳೆದ 29-12-2019 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, 20204ರ ಏಪ್ರಿಲ್ 23 ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2020ರ ಜುಲೈ ಅಂತ್ಯದೊಳಗೆ ಕೆಸಿ ವ್ಯಾಲಿಗೆ ಕೆಸಿ ವ್ಯಾಲಿಗೆ ಉಳಿಕೆ 100 ಎಂಎಲ್‍ಡಿ ನೀರು ಹರಿಸುವುದು ಮತ್ತು ಹೆಚ್‍ಎನ್‍ವ್ಯಾಲಿಗೆ 210 ಎಂಎಲ್‍ಡಿ ನೀರನ್ನು ಹರಿಸಲು ತಿಳಿಸಲಾಗಿತ್ತು ಎಂಬುದನ್ನು ಸಚಿವ ಮಾಧುಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ.
ಆದರೆ ಇಲ್ಲಿಯವರೆಗೂ ಸಿಎಂ ಅಧ್ಯಕ್ಷತೆಯಲ್ಲಿನ ಸಭೆ, ಸಣ್ಣನೀರಾವರಿ ಸಚಿವರಾದ ತಮ್ಮ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಗಳಲ್ಲಿ ನೀಡಿದ್ದ ಭರವಸೆ ಈಡೇರಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂದ ಸಿಎಂ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಭೆ ಕರೆದು ಕರಾರಿನಂತೆ ಪೂರ್ಣ ಪ್ರಮಾಣದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆಸಿ ವ್ಯಾಲಿ ಮತ್ತು ಹೆಚ್‍ಎನ್.ವ್ಯಾಲಿಗಳಿಗೆ ಪೂರೈಸಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸಿ ಇಲ್ಲಿನ ರೈತರ ಬದುಕು ಹಸನಾಗಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕುಂದಾಪುರದ ಜನಪ್ರಿಯ ಜನನುಡಿ.ಕಾಮ್ ಸುದ್ದಿ ಸಂಸ್ಥೆಯಿಂದ ‘ಮುದ್ದು ಏಸು’ ಸ್ಫರ್ಧೆ

JANANUDI.COM NETWORK

ಕ್ರಿಸ್ಮಸ್ ಶುಭ ಸಂದರ್ಭದಲ್ಲಿ
ಜನನುಡಿ.ಕಾಮ್ ಸುದ್ದಿ ಸಂಸ್ಥೆ ಏರ್ಪಡಿಸಿದೆ ಮುದ್ದು ಏಸು’ ಸ್ಫರ್ಧೆ
2020 ರ ಕ್ರಿಸ್ಮಸ್ ಶುಭ ಸಂದರ್ಭದಲ್ಲಿ ಜನನುಡಿ.ಕಾಮ್ ಸುದ್ದಿ ಸಂಸ್ಥೆ ವಿನೂತನವಾದ ಬಾ¯ ಏಸುವಿನ ಫೋಟೊ ಸ್ಫರ್ಧೆಯನ್ನು ಏರ್ಪಡಿಸುತ್ತಿದೆ
ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ.
ಸ್ಫರ್ಧೆ ವಿಭಾಗ 2 – ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿಗಾಗಿ
ವಿ.ಸೂ:- ಸ್ಫರ್ಧೆ ವಿಭಾಗ 1 ರ ಕಂದಮ್ಮಗಳಿಗೆ ಕಿರು ವಸ್ತ್ರ ಸುತ್ತಿದ ಬಾಲ ಏಸುವಿನಂತೆ ಅಥವ ಮೈ ತುಂಬ ಆಕರ್ಷಕ ಬಟ್ಟೆ ತೊಟ್ಟು ಮುದ್ದು ಭಂಗಿಯಲ್ಲಿರುವ ಫೋಟೊಗಳಾಗಿರಬೇಕು.
ಸ್ಫರ್ಧೆ ವಿಭಾಗ 2 ರ ಮಕ್ಕಳನ್ನು ಬಾಲ ಏಸುವಿನಂತೆ ವಸ್ತ್ರ, ಭೂಷಣ ದರಿಸಿದ ಆಕರ್ಷಕ ಫೋಟೊಗಳಾಗಿರಬೇಕು.

  • ಸ್ಫರ್ಧೆಯಲ್ಲ್ಲಿ ಭಾಗವಹಿಸಲು ಹುಡುಗ-ಹುಡುಗಿ,ಧರ್ಮಕ್ಕೆ ವ್ಯಾಪ್ತಿಗೆ ಮಿತಿ ಇಲ್ಲ
  • 1 ಮಗುವಿನ 1 ಫೋಟೊ ಮಾತ್ರ ಕಳುಹಿಸಹುದು. ಫೋಟೊ ಕಳುಹಿಸುವಾಗ ಮಗುವಿನ ಹೆಸರು, ತಂದೆ ತಾಯಿ ಹೆಸರು ವಿಳಾಸ, ಫೋನ್ ನಂಬರ್, ಮಗುವಿನ ಪ್ರಾಯ ತಿಳಿಸಬೇಕು.
    *ಫೋಟೊ ಗಳನ್ನು 2021 ಜನವರಿ 7 ರ ಒಳಗೆ ಫೋಸ್ಟ್ ಅಥವ ಇ ಮೈಲ್ ಮೂಲಕ ತಲುಪಬೇಕು.
    *ಪ್ರತಿ ವಿಭಾಗದಲ್ಲಿ ಪ್ರಥಮ,ದ್ವೀತಿಯ,ತ್ರತೀಯ ಬಹುಮಾವಿದೆ!! ಅಲ್ಲದೆ ಮೆಚ್ಚುಗೆ ಪಡೆದ 10 ಮಕ್ಕಳ ಫೋಟೊಗಳನ್ನು ಜನನುಡಿಯಲ್ಲಿ ಪ್ರಕಟಿಸಲಾಗುವುದು.
    *ಸಂಘಟರ ತೀರ್ಮಾನವೆ ಅಂತಿಮವಾದುದು, ಯಾವುದೇ ತರ್ಕಕ್ಕೆ ಆಸ್ಪದ ಇಲ್ಲ
    .ಸಂಪರ್ಕಕ್ಕೆ:9964620998 – ( ವಾಟ್ಸಪ್ 9008308190)
  • gmail: bjdcosta@gmail.com  
  • ವಿಳಾಸ
  • jananudi.com ‘maria’ costa sadan                          
  • Costa compound,   chikkanasal road,
  • kundapura,576201  
  • ವಿ.ಸೂ |ನಿಮ್ಮ ತಿಳುವಳಿಕೆಗಾಗಿ, ಬಾಲ ಏಸುವಿನ ಕೆ¯ ವು ಶ್ಯಾಂಪಲ್ ಫೆÇೀಟೊಗಳನ್ನು ಮೇಲ್ಗಡೆ ಲಗತ್ತಿಸಿದ್ದೇವೆ

ಕಥಾಪಾಠ್ – ೫: ಕೊಂಕಣಿಂತಲ್ಯೊ ಗ್ರಾಮೀಣ್ ಕಥಾ

JANANUDI.COM NETWORK

ಆಶಾವಾದಿ ಪ್ರಕಾಶನ್ ಆನಿ ಉಜ್ವಾಡ್ ಪಂದ್ರಾಳೆಂ ಹಾಣಿಂ ಡಿಜಿಟಲ್ ಮಾಧ್ಯಮಾಚೆರ್ ಮಾಂಡುನ್ ಹಾಡ್‌ಲ್ಲ್ಯಾ ರಾಶ್ಟ್ರೀಯ್ ಮಟ್ಟಾಚ್ಯಾ ಕಥಾ-ಅಧ್ಯಯನ್ ’ಕಥಾಪಾಠ್’ ಶಿಂಕಳೆಚಿ ಪಾಂಚ್ವಿ ಶಿಂಕಳ್ (ವೆಬಿನಾರ್) ದಸೆಂಬ್ರ್ ೨೭ ತಾರಿಕೆಚ್ಯಾ ಆಯ್ತಾರಾ ಸಾಂಜೆರ್ ೪:೩೦ ಥಾವ್ನ್ ೬:೦೦ ಪರ‍್ಯಾಂತ್ ಚಲ್ಲೆಂ; ಉಜ್ವಾಡ್ ಪಂದ್ರಾಳ್ಯಾಚೊ ಸಂಪಾದಕ್ ಮಾ|ಬಾ|ರೋಯ್ಸನ್ ಫೆರ್ನಾಂಡಿಸಾನ್ ಯೆವ್ಕಾರ್ ಉಲವ್ಪ್ ಕರುನ್ ಕಾರ್ಯಾಚೆಂ ಸುಂಕಾಣ್ ಘೆತ್‌ಲ್ಲ್ಯಾ, ನವಯುಗ್ ನಿಕೇತನ್ ಇಸ್ಕೊಲಾಂತ್ ಶಿಕ್ಷಕಿ ಜಾವ್ನ್ ವಾವ್ರ್ ಕರ್ಚ್ಯಾ ಬಾಯ್ ಆತಿಶಾ ಸುರ್ಲೀಕರಾಚಿ ಮಟ್ವಿ ವಳೊಕ್ ಕರುನ್ ದಿತಚ್ ಗೊಂಯ್ ಯುನಿವರ್ಸಿಟಿಚ್ಯಾ ಕೊಂಕಣಿ ವಿಭಾಗಾಚೆ ಆಧ್ಲೆ ಮುಖೆಸ್ತ್ ದೊ|ಪ್ರಕಾಶ್ ಪೆರಿಯಂಕರ್ ಹಾಣಿಂ ಕೊಂಕಣಿಂತ್ಲ್ಯೊ ’ಗ್ರಾಮೀಣ್ ಪರಿಸರಾಚ್ಯೊ ಕಾಣಿಯೊ’ ವಿಶ್ಯಾಚೆರ್ ಅಪ್ಲೆಂ ಉಪನ್ಯಾಸ್ ದಿವುನ್, ಎಕಾ ಸಮಾಜೆಂತ್ ಭಾಸ್ ಆನಿ ಸಾಹಿತ್ಯಾಚೆಂ ವಿಕಾಸನ್ ಜಾಂವ್ಚೆ ದಿಶೆನ್ ಗ್ರಾಮೀಣ್ ಪರಿಸರ್ ಪ್ರಮುಕ್ ಪಾತ್ರ್ ಘೆತಾ ಜಾಲ್ಲ್ಯಾನ್ ಫುಡಾರಾಂತ್ ಗ್ರಾಮೀಣ್ ಪರಿಸರಾಚೆರ್ ಚಡಿತ್ ಸಾಹಿತ್ಯ್ ಉಭ್ಜುಂಕ್ ಜಾಯ್ ಆನಿ ಹ್ಯಾ ದಿಶೆನ್ ಸಾಹಿತ್ಯಿಕ್ ಸಂಸ್ಥ್ಯಾಂನಿ ವಾವ್ರ್ ಕರುಂಕ್ ಜಾಯ್ ಮ್ಹಣಾಲೊ. ಕನ್ನಡ್ ಲಿಪಿಯೆಂತ್ಲ್ಯಾ ಕಾಣಿಯಾಂನಿ ’ಗ್ರಾಮೀಣ್ ಪರಿಸರಾಚೆಂ ಸಾಹಿತ್ಯ್’ ವಿಶ್ಯಾಚೆರ್ ವಲ್ಲಿ ಕ್ವಾಡ್ರಸಾನ್ ಅಪ್ಲೆಂ ಉಲವ್ಪ್ ಕರುನ್ ’ಬಂಗಾರದ ಮನುಶ್ಯ’ ಮ್ಹಳ್ಳೆಂ ೧೯೭೨ ಇಸ್ವೆಚ್ಯಾ ಕನ್ನಡ್ ಫಿಲ್ಮಾನ್ ಸಮಾಜಿಕ್ ಬದ್ಲಾವಣೆಚೆಂ ಭಿಂ ವೊಂಪ್ಲೆಂ ಆನಿ ತ್ಯಾ ಫಿಲ್ಮಾಕ್ ಪಳೆಲ್ಲ್ಯಾ ಕಾಂಯ್ ಸಭಾರ್ ಲೊಕಾಂನಿ ಪರ್ಗಾಂವ್ ಸೊಡುನ್ ಗಾಂವಾಕ್ ಯೆವುನ್ ಶೆತಾಂ, ಭಾಟಾಂ, ತೊಟಾಂ ಕೆಲಿಂ ಆನಿ ಅಸಲ್ಯಾ ಎಕಾ ಪರಿಸರಾಕ್ ಲ್ಹಾನ್ ಪ್ರಾಯೆರ್ ಥಾವ್ನ್ ಪಳೆವ್ನ್, ಪಾರ್ಕುನ್, ತಶೆಂಚ್ ಭಗುನ್ ಆಯಿಲ್ಲ್ಯಾ ಅಪ್ಣಾಚ್ಯಾ ಕಥೆಂನಿ ಸಯ್ತ್ ಹೆಂ ಸನ್ನಿವೇಶಾಂ, ಪಾತ್ರ್, ಭಾಸ್ ತಶೆಂಚ್ ಚಿಂತಪ್ ತವಳ್ ತವಳ್ ಪಳೆವ್ಯೆತ್ ಮ್ಹಣುನ್; ವಲ್ಲಿ ವಗ್ಗ (ರಾನ್ವಟಿ, ಪರ್ನೆಂ ತಳೆಂ, ಖಾಂದಿ ಖುರಿಸ್)’,  ಡೊ|ಎಡ್ವರ್ಡ್ ನಜ್ರೆತ್ (ವ್ಹಡ್ಲೆಂ ಫೆಸ್ತ್), ವಲ್ಲಿ ಕ್ವಾಡ್ರಸ್ (ಕಂಗಾಲ್ ಆನಿ ತಾಚಿ ಕುಕ್ಕೆಹಳ್ಳಿ), ಸ್ಟೀವನ್ ಪಿಂಟೊ ಕುಂಟಲಪಾಡಿ (ಕೊಂಬೊ ಆನಿ ಝುಜ್), ಕೆವಿನ್ ಡಿ’ಮೆಲ್ಲೊ (ಕೊಂಬೊ ಆನಿ ಭಿಂ), ಕ್ಯಾಥರಿನ್ ರೊಡ್ರಿಗಸ್ (ಕೇಲ್ ಅಮ್ಮಾ), ಸ್ಯಾಮ್ ಬೊಳಿಯೆ (ರೆಡೆ) ಅಶೆಂ ಥೊಡ್ಯಾ ಕಥೆಂಚೆರ್ ಕಶೆಂ ಗ್ರಾಮೀಣ್ ಪರಿಸರಾಚೆಂ ಚಿತ್ರಣ್ ಜಾಲಾಂ ಮ್ಹಳ್ಳ್ಯಾಚೆರ್ ಅಪ್ಲೆಂ ಉಪನ್ಯಾಸ್ ಕರುನ್. ಕೊಂಕಣಿಚ್ಯಾ ಕಥೆಂಚೆರ್ ಉಜ್ವಾಡ್ ಫಾಂಕಂವ್ಚ್ಯಾ ದಿಶೆನ್ ಕಥಾಪಾಠ್ ಏಕ್ ಸುರ್ವಿಲೆಂ ಮೇಟ್ ಮಾತ್ರ್, ಫುಡ್ಲ್ಯಾ ಮಯ್ನ್ಯಾಂನಿ ಕಥೆಂಚೆರ್ ಖೊಲಾಯೆನ್ ಅಧ್ಯಯನ್ ಚಲಂವ್ಚ್ಯಾ ದಿಶೆನ್ ಆಶಾವಾದಿ ಪ್ರಕಾಶನ್ ತಶೆಂಚ್ ಉಜ್ವಾಡ್ ಪಂದ್ರಾಳೆಂ ವೆವೆಗಳಿಂ ವೆಬಿನಾರಾಂ ಮಾಂಡುನ್ ಹಾಡ್ಚೆವಿಶಿಂ ಮಾಹೆತ್ ದಿಲಿ ತಶೆಂಚ್ ಹ್ಯಾ ಪಾಂಚ್  ಕಥಾಪಾಠಾಂನಿ ಸಂಪನ್ಮೂಳ್ ವೆಕ್ತಿ ಜಾವ್ನ್ ಉಪನ್ಯಾಸಾಂ ದಿಲ್ಲ್ಯಾ ತಶೆಂಚ್ ಹ್ಯಾ ಕಥಾಪಾಠಾಂಕ್ ಅಪುರ್ಭಾಯೆನ್ ಚಲಯಿಲ್ಲ್ಯಾ ಆನಿ ಭಾಗ್ ಘೆತ್ಲೆಲ್ಯಾ ಗೊಂಯ್ಚ್ಯಾ ತಶೆಂಚ್ ಮಂಗ್ಳುರ್‌ಚ್ಯಾ ಕೊಲೆಜಿಂತ್ಲ್ಯಾ ಶಿಕ್ಷಕಾಂಚೊ ತಶೆಂಚ್ ವಿಧ್ಯಾರ್ಥಿಂಚೊ ಉಪ್ಕಾರ್ ಆಟಯ್ಲೊ.

ಗೊಂಯ್, ಕರ್ನಾಟಕ್, ಮುಂಬಯ್, ಕೇರಳಾ ಆನಿ ವಿದೇಶ್ ಥಾವ್ನ್ ಪನ್ನಾಸ್ ವಿಧ್ಯಾರ್ಥಿಂನಿ ಹ್ಯಾ ಕಥಾಪಾಠಾಂತ್ ವಾಂಟೊ ಘೆತ್ಲೊ.

ಮನೆಗಳಲ್ಲಿ ಬೀಳುವ ಹಸಿ ಕಸದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಸಿ ಬಳಸಿಕೊಳ್ಳಬೇಕು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಮನೆಗಳಲ್ಲಿ ಬೀಳುವ ಹಸಿ ಕಸದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಸಿ ಬಳಸಿಕೊಳ್ಳಬೇಕು ಎಂದು ಪುರಸಭೆಯ ಸ್ವಚ್ಛತಾ ರಾಯಭಾರಿ ಟಿ.ಎಸ್‌.ಮಾಯಾ ಬಾಲಚಂದ್ರ ಹೇಳಿದರು.
  ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಕಾಂಪೋಸ್ಟ್‌ ತಯಾರಿಕಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಪುರಸಭಾ ನಿಯಮದಂತೆ ಪ್ರತಿ ಮನೆಯಲ್ಲೂ ಹಸಿ ಕಸ ಹಾಗೂ ಒಣ ಕಸ ಎಂದು ವಿಭಾಗಿಸಲಾಗುತ್ತದೆ. ಹಸಿ ಕಸವನ್ನು ಕಡಿಮೆ ಖರ್ಚಿನಲ್ಲಿ, ಸರಳ ವಿಧಾನದ ಮೂಲಕ ಕಾಂಪೋಸ್ಟ್‌ ಗೊಬ್ಬರ ತಯಾಸಿ ಹಿತ್ತಲ ತೋಟದ ಗಿಡಗಳಿಗೆ ಬಳಸಿಕೊಳ್ಳಬಹುದಾಗಿದೆ. ಬೇಡವಾದಲ್ಲಿ ಮಾರಾಟಮಾಡಿ ಹಣ ಗಳಿಸಬಹುದಾಗಿದೆ ಎಂದು ಹೇಳಿದರು.    ಈ ಸಂದರ್ಭದಲ್ಲಿ ಪಟ್ಟಣದ ನಾಗರಿಕರಿಗೆ ಪೈಪ್‌ ಬಳಸಿ ಕಾಂಪೋಸ್ಟ್‌ ತಯಾರಿಸುವ ಬಗ್ಗೆ ಪ್ರಾತ್ಯಕ್ಷತೆ ಏರ್ಪಡಿಸಲಾಗಿತ್ತು.   ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ರೆಡ್ಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಘಟಕದ ಯೋಜನಾಧಿಕಾರಿ ಸುರೇಶ್‌ ಗೌಡ, ಕೃಷಿ ಅಧಿಕಾರಿ ಅರುಣ್‌ ಕುಮಾರ್‌, ಮೇಲ್ವಿಚಾರಕಿ ಜ್ಯೋತಿ, ಸೇವಾ ಪ್ರತಿನಿಧಿಗಳಾದ ಜಗದಾಂಬ ಇದ್ದರು.

ಕಾಂಗ್ರೆಸ್ ಎಸ್ಸಿಘಟಕದ ಜಿಲ್ಲಾಧ್ಯಕ್ಷ ಜಯದೇವ್ ಹುಟ್ಟುಹಬ್ಬ-ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಆಟೋ ಚಾಲಕರು ಸಮವಸ್ತ್ರ ಧರಿಸಿ ಶಿಸ್ತು ಕಾಪಾಡಬೇಕು, ಕಾನೂನನ್ನು ಗೌರವಿಸಬೇಕು, ಕೊರೊನಾದಿಂದ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದ ಶ್ರೀಸತ್ಯಸಾಯಿ ಮಂದಿರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಕೆ.ಜಯದೇವ್‍ರ 53 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂರು ಆಟೋ ಚಾಲಕರಿಗೆ ಸಮವಸ್ತ್ರವಿತರಣೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕೊರೊನಾ ಕಾಲದಲ್ಲಿ ಆಟೋ ಚಾಲಕರು ಸೇರಿದಂತೆ ಸಾರ್ವಜನಿಕವಾಗಿ ಕೆಲಸ ಮಾಡುತ್ತಿರುವ ಕೃಷಿ ಕೂಲಿ ಕಾರ್ಮಿಕರು ಹಾಗೂ ಚಾಲಕರು ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಕೊರೊನಾ ಎರಡನೇ ಹಂತದ ಅಲೆ ಬರುವ ಸೂಚನೆಗಳಿದ್ದು, ಇದನ್ನು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸಮರ್ಥವಾಗಿ ಹಿಮ್ಮೆಟ್ಟಿಸಬೇಕೆಂದರು.
ಬಹಳಷ್ಟು ಆಟೋಚಾಲಕರು ಶಾಲಾ ಮಕ್ಕಳನ್ನು ಬೆಳಿಗ್ಗೆ ಸಂಜೆ ಶಾಲೆಗೆ ಕರೆದೊಯ್ಡು ಮನೆಗೆ ಸೇರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾರೆ, ಪ್ರತಿ ಮಗುವು ತನ್ನ ಆಟೋ ಚಾಲಕ ಹೇಗೆ ರಸ್ತೆ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಿರುತ್ತಾರೆ. ಅದ್ದರಿಂದ ಆಟೋ ಚಾಲಕರು ರಸ್ತೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕೆಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಸತ್ಯಸಾಯಿ ಮಂದಿರದಲ್ಲಿ ಕೆ.ಜಯದೇವ್‍ರ ಹುಟ್ಟುಹಬ್ಬರ ಪ್ರಯುಕ್ತ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು.
ನಂತರ ನಡೆದ ಸಮಾರಂಭದಲ್ಲಿ ಬೃಹತ್ ಗಾತ್ರದ ಕೇಕು ಕತ್ತರಿಸುವ ಮೂಲಕ ಕೆ.ಜಯದೇವ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಸಾಯಿಮಂದಿರದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರು ಮಂದಿ ಆಟೋ ಚಾಲಕರಿಗೆ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಸಮವಸಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕುಮಾರ್, ನಾಗರಾಜ್, ಗುಪ್ತ, ಕೆಜಿಎಫ್‍ನ ಜಾನ್, ವಿ.ಕೆ.ರಾಜೇಶ್, ಸಂತೋಷ್, ಕನ್ನಡ ಮಿತ್ರ ವೆಂಕಟಪ್ಪ, ಮಹಾನ್ ನಾರಾಯಣಸ್ವಾಮಿ, ಚೇತನ್‍ಬಾಬು, ಖಾದ್ರಿಪುರ ಬಾಬು, ಪ್ಯಾರೇಜಾನ್, ಇಕ್ಬಾಲ್, ಗೋಕುಲ ಮಿತ್ರಬಳಗದ ಆರ್.ಗೋಪಾಲ್, ಮುನಿವೆಂಕಟಯಾದವ್, ಮಣಿ, ಜ್ಯೂಸ್ ನಾರಾಯಣಸ್ವಾಮಿ, ಕೋಡಿಕಣ್ಣೂರು ಯಲ್ಲಪ್ಪ ಮತ್ತು ಜಯದೇವ್ ಕುಟುಂಬದವರು ಹಾಜರಿದ್ದರು.
ಕೋಲಾರ ನಗರದ ಶ್ರೀಸತ್ಯಸಾಯಿ ಮಂದಿರದಲ್ಲಿ ಗುರುವಾರ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ 53 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ನೂರು ಮಂದಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು
.