HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರ :ಆರ್‌ಟಿಐ ನಿರ್ಲಕ್ಷ ಪಿಡಿಒಗೆ ರೊ.10 ಸಾವಿರ ದಂಡ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಆರ್‌ಟಿಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ತಾಲೂಕಿನ ದಳಸನೂರು ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸಂತೋಶ್ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ.ಗಳ ದಂಡ ವಿಧಿಸಿದೆ .
ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 14 ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಮಾಹಿತಿಯನ್ನು ನೀಡುವಂತೆ ಶ್ರೀನಿವಾಸಪುರದ
ಮಾಹಿತಿ ಹಕ್ಕು ಕಾರ್ಯಕರ್ತ ಶಬ್ಬೀರ್ ಅಹ್ಮದ್ ದಿನಾಂಕ 08/11/2017 ರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕಲಂ 6(1)ರ ಅಡಿಯಲ್ಲಿ ಆರ್ಜಿ ಸಲ್ಲಿಸಿದ್ದರು .
ಆದರೆ ಪಿಡಿಒ ಈ ಅರ್ಜಿಯನ್ನು ನಿರ್ಲಕ್ಷಿಸಿದ್ದರು . ಈ ಕುರಿತು ಶಬ್ಬೀರ್ ಅಹಮ್ಮದ್ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು . ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ದಳಸನೂರು ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ
ಸಂತೋಶ್ ಪಾಲಿಸಿರಲಿಲ್ಲ . ಈ ಪ್ರಕಾಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಪ್ರತಿವಾದಿಯು ಸತತವಾಗಿ ಆಯೋಗದ ವಿಚಾರಣೆಗಳಿಗೆ ಸೊಕ್ತವಾದ ಕಾರಣಗಳಿಲ್ಲದೆ ಗೈರುಹಾಜರಾಗಿರುತ್ತಾರೆ.
ಅರ್ಜಿದಾರರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 7(1)ರನ್ವಯ ನಿಗಧಿತ ಅವಧಿಯೊಳಗೆ ಮಾಹಿತಿ ನೀಡಿರುವುದಿಲ್ಲ.

ಆಯೋಗದ ಆದೇಶ ದಿನಾಂಕ 24/11/2020 ಮತ್ತು ದಿನಾಂಕ 11/12/2020 ರ ಕಂಡಿಕೆ 9 ರಲ್ಲಿ ನಿರ್ದೇಶಿಸಿದಂತೆ, ಕಾರಣ ಕೇಳಿ ನೊಟೀಸ್ ಗೆ ಯಾವುದೇ ಲಿಖಿತ ಸಮಜಾಯಿಷಿಯನ್ನು ನೀಡಿರುವುದಿಲ್ಲ ಮತ್ತು ಅರ್ಜಿದಾರರಿಗೆ ಮಾಹಿತಿ ನೀಡಿಲ್ಲವೆಂದು.
ಶ್ರೀನಿವಾಸಪುರ ತಾಲೂಕಿನ ದಳಸನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಸಂತೋಶ್ ರವರಿಗೆ ದಂಡ ವಿಧಿಸಿದೆ.
ಸಂತೋಶ್ ರವರಿಗೆ ವಿಧಿಸಿರುವ ದಂಡದ ಮೊತ್ತವನ್ನು ಸದರಿಯವರಿಗೆ 2021 ನೇ ಸಾಲಿನ ಫೆಬ್ರುವರಿ ತಿಂಗಳಿನಲ್ಲಿ ಕೊಡಲಾಗುವ ವೇತನದಿಂದ ಒಟ್ಟು ರೊ 10 ಸಾವಿರ ಕಡಿತಗೊಳಿಸಿ , ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿ, ಜಮಾ ಮಾಡಿದ ರಸೀದಿಯೊಂದಿಗೆ ಆಯೋಗಕ್ಕೆ ವರದಿ ಸಲ್ಲಿಸಲು ಆಯೋಗವು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಕೋಲಾರ ಕೋಲಾರ ಜಿಲ್ಲೆ ರವರಿಗೆ ಮಾಹಿತಿ ಹಕ್ಕು ಅಧಿನಿಯಮ 2005 ರ ಕಲಂ 19(8)(ಎ) ಅನ್ವಯ ನಿರ್ದೇಶಿಸಿದೆ .

ಪ್ರಸಿದ್ಧ ಹೋಟೆಲ್ ಉದ್ಯಮಿಯಾಗಿದ್ದ ಕೃಷ್ಣಮೂರ್ತಿ ಕಾಳಾವರ (78) -ನಿಧನ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕೋಟೇಶ್ವರ ಸಮೀಪದ ಕಾಳಾವರ ಮೂಲದವರಾಗಿದ್ದು, ಆಂಧ್ರಪ್ರದೇಶದ ಧರ್ಮಾವರಂ ನಲ್ಲಿ ಪ್ರಸಿದ್ಧ ಹೋಟೆಲ್ ಉದ್ಯಮಿಯಾಗಿದ್ದ ಕೃಷ್ಣಮೂರ್ತಿ ಕಾಳಾವರ (78) ಜ.13ರ ಬುಧವಾರ ಮುಂಜಾನೆ ಧರ್ಮಾವರಂ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

ದಾನಿಗಳೂ ಧರ್ಮಬೀರುಗಳೂ ಆಗಿದ್ದ ಇವರು ಕಾಳಾವರದ ಶ್ರೀ ಮಹಾಲಿಂಗೇಶ್ವರ ದೇವರ ರಜತ ಮುಖವಾಡ ರಚನೆ ಹಾಗೂ ವಿವಿಧೆಡೆಗಳ ಹಲವಾರು ಕಾರ್ಯಗಳಿಗೆ ದೇಣಿಗೆ ನೀಡಿ ಸಹಕರಿಸಿದ್ದರು. ಕರಾವಳಿ ಭಾಗದಿಂದ ಧರ್ಮಾವರಂಗೆ ಆಗಮಿಸುವ ಕರ್ನಾಟಕದವರಿಗೆ ತಮ್ಮ ಹೋಟೆಲ್ ಗಳಲ್ಲಿ ಆತಿಥ್ಯ ನೀಡಿ ಸತ್ಕರಿಸುತ್ತಿದ್ದರು. ಕಾಳಾವರದ ಪ್ರಸಿದ್ಧ ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಮತ್ತು ಶ್ರೀ ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಹಾಗೂ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಗಳ ಮಾಜಿ ಅಧ್ಯಕ್ಷರಾದ ಪ್ರೊ. ಶಂಕರ ರಾವ್ ಕಾಳಾವರರ ಸಹೋದರರಾದ ಇವರು, ಸುಮಾರು ಏಳು ದಶಕಗಳಿಂದಲೂ ಧರ್ಮಾವರಂ ನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಾ ಆ ಪ್ರದೇಶದಲ್ಲಿ ತಮ್ಮ ಸತ್ಕಾಯಗಳಿಂದ ಖ್ಯಾತರಾಗಿದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

ಬ್ರಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವರದಿ: ವಿಲ್ಫ್ರೆಡ್ ಮಿನೇಜೆಸ್,ಹಂಗಳೂರು


ಲಯನ್ಸ್ ಕ್ಲಬ್, ಹಂಗಳೂರು ಮತ್ತು ಶ್ರೀ ಸಾಯಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ) ನೆಂಪು ಇವರ ಜಂಟಿ ಆಶ್ರಯದಲ್ಲಿ ಶ್ರೀ ವಿನಾಯಕ ಯುವಕ ಮಂಡಲ, ನೆಂಪು, ಚಿಕ್ಕು ಯುವಕ ಸಂಘಟನೆ, ಹಿಜಾಣ, ಸರ್ಕಾರಿ ಪ್ರೌಡ ಶಾಲಾಭಿವೃದ್ಧಿ ಸಮಿತಿ, ಚಿತ್ತೂರು, ಫಿನಿಕ್ಸ್ ಅಕಾಡೆಮಿ ಇಂಡಿಯಾ, ಆರ್ಶೀವಾದ ಫ್ರೆಂಡ್ಸ್, ಅಬ್ಬಿ-ವಂಡ್ಸೆ ಮತ್ತು ಶೀ ದುರ್ಗಾ ಗಣೇಶ್ ಯುವಕ ಮಂಡಲ (ರಿ) ನೂಜಾಡಿ ಇವರ ನೇರವಿನೊಂದಿಗೆ ಇಂಡಿಯನ್ ರೆಡ್ ಕ್ರಾಸ್ ಸೊಸ್ಸೆಟಿ ಬ್ಲಡ್ ಭ್ಯಾಂಕ್ ಕುಂದಾಪುರ ಇವರಿಂದ ದಿನಾಂಕ 9/1/2021 ರಂದು ಶನಿವಾರ ಶ್ರೀ ಸಾಯಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ನೆಂಪು, ವಂಡ್ಸೆಯಲ್ಲಿ ಬ್ರಹತ್ ರಕ್ತದಾನ ಶಿಬಿರ ನಡೆಯಿತು. ಸಾಯಿ ಸ್ಪೋರ್ಟ್ಸ್ ಕ್ಲಬನ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಜಾಡ್ಕಟ್ಟು ಇವರು ಸ್ವಾಗತಿಸಿದರು ಅದೇ ದಿನ 43 ಸಲ ರಕ್ತದಾನ ಮಾಡಿದ ಶೀ ರಘವೇಂದ್ರ ನೆಂಪು ಇವರನ್ನು ಸನ್ಮಾನಿಸಲಾಯಿತು. ಇಂಡಿಯನ್ ರೆಡ್ ಕ್ರಾಸ್ ಸೊಸ್ಸೆಟಿ ಬ್ಲಡ್ ಭ್ಯಾಂಕ್ ಕುಂದಾಪುರ ಇದರ ಜಯಕರ ಶೆಟ್ಟಿಯವರು ರಕ್ತದಾನದ ಮಹತ್ವದ ಬಗ್ಗೆ ಸರಿಯಾದ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ರಮೇಶ್ ಕೆ ಕುಂದರ್ ಇವರು ಧನ್ಯವಾದ ಅರ್ಪಿಸಿದರು. ಲಯನ್ ಎಚ್ ಬಾಲಕೃಷ್ಣ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯ ಕ್ರಮದಲ್ಲಿ ಲಯನ್ ಸುಭಾಷ್ ಶೆಟ್ಟಿ, ಹೂಳದೊಗೆ, ಅಕ್ಷಯ ಹೆಮ್ಮಾಡಿ, ರವೀಂದ್ರ ಶೆಟ್ಟಿ ಚಿತ್ತೂರು, ಪ್ರವೀಣ್ ಕುಮಾರ್ ಶೆಟ್ಟಿ, ನೂಜಾಡಿ, ಜಗದೀಶ್ ನೆಂಪು, ಲಯನ್ ಸದಸ್ಯ ರಾದ ಲಯನ್ ವಿಲ್ಫ್ರೆಡ್ ಡಿಸೋಜಾ, ಲಯನ್ ವಾಲ್ಟರ್ ಡಿಸೋಜಾ, ಲಯನ್ ಥಿಯೋದರ್ ಡಿಮೆಲ್ಲೊ, ಮಾಜಿ ಲಯನ್ಸ್ಕೆ ಅಧ್ಯಕ್ಷರಾದ ಲಯನ್ ಕೆ.ವಿ. ಬಾಲಚಂದ್ರ ಶೆಟ್ಟಿ, ಕಾರ್ಯದರ್ಶಿಯಾರಾದ ಲಯನ್ ವಿಲ್ಫ್ರೆಡ್ ಮಿನೇಜಸ್, ಖಜಾಂಚಿ ಲಯನ್ ರಮೇಶ್ ಶೆಟ್ಟಿ, ಸಾಯಿ ಸ್ಪೋರ್ಟ್ಸ್ ಕ್ಲಬ್ ನ ಜಯರಜ್ ಶೆಟ್ಟಿ ವಂಡ್ಸೆ, ಸಂಜೀವ ಪೂಜಾರಿ ವಂಡ್ಸೆ, ರಮಾನಂದ ವಂಡ್ಸೆ,. ದಿವಾಕರ ವಂಡ್ಸೆ ಮತ್ತು ಇತರ ಸದಸ್ಯರು, ರೆಡ್ ಕ್ರಾಸ್ ಸೊಸೈಟಿ ಮತ್ತು ಬ್ಲಡ್ ಬ್ಯಾಂಕ್, ಕುಂದಾಪುರ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು , ಯೋಜನೆಗಳು ಫಲಾನುಭವಿಗಳಿಗೆ ದೊರಕಬೇಕು :ಕ.ರಾ.ಅ.ಅ.ನಿ. ಅಧ್ಯಕ್ಷ ಅಬ್ದುಲ್ ಅಜೀಮ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು , ಈ ಯೋಜನೆಗಳು ಅರ್ಹ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ದೊರಕಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ , ಪ್ರಧಾನ ಮಂತ್ರಿಗಳ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಸರ್ಕಾರವು ಯೋಜನೆಗಳಲ್ಲಿ ಶೇ . 15 ರಷ್ಟನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟಿದೆ . ಈ ಯೋಜನೆಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದೆ . ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಿ ಪರಿಹರಿಸಲಾಗುವುದು . ಇಂದು ಅಧಿಕಾರಿಗಳಿಂದ ಪ್ರಗತಿ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು . ಕೋಲಾರ ಜಿಲ್ಲೆಯು ಬುದ್ಧಿವಂತರಿಂದ ಕೂಡಿದ ಜಿಲ್ಲೆಯಾಗಿದೆ . ಕೆ.ಎ.ಎಸ್ ಮತ್ತು ಐ.ಎ.ಎಸ್ ಹುದ್ದೆಗಳಿಗೆ ಜಿಲ್ಲೆಯ ಜನ ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ . ಜಿಲ್ಲೆಗೆ ಮುಂದೆ ಉತ್ತಮವಾದ ಭವಿಷ್ಯವಿದೆ . ದೇಶದಲ್ಲಿ ನೀರಿನ ಅಭಾವ ಉಂಟಾದಾಗ ಸಮುದ್ರದ ನೀರನ್ನು ಸಂಸ್ಕರಿಸಿ ಬಳಸಬೇಕಾಗುತ್ತದೆ . ಕೋಲಾರ ಜಿಲ್ಲೆಯು ಸಮುದ್ರಕ್ಕೆ 250 ಕೀ.ಮೀ ದೂರದಲ್ಲಿದ್ದು , ಸಂಸ್ಕರಿಸಿದ ನೀರು ಮೊದಲು ಕೋಲಾರ ಜಿಲ್ಲೆಗೆ ದೊರೆಯುತ್ತದೆ . ಇದರಿಂದ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ . ಜಿಲ್ಲೆಯು ಕೆರೆ ಮತ್ತು ಬೆಟ್ಟಗಳಿಂದ ಕೂಡಿದ್ದು , ಬೆಟ್ಟಗಳ ಮೇಲೆ ಬಿದ್ದ ಮಳೆ ನೀರು ಕೆರೆಗೆ ಹರಿಯಲು ಸೂಕ್ತ ಅವಕಾಶವಿಲ್ಲ . ಆದ್ದರಿಂದ ಬೆಟ್ಟಗಳ ಸುತ್ತ ಟ್ರಂಚ್ ಹೊಡೆದು ನೀರು ಸರಾಗವಾಗಿ ಕೆರೆಗೆ ಹರಿಯುವಂತೆ ಮಾಡಬೇಕು . ಇದರಿಂದ ಕೆರೆಗಳು ಬೇಗ ತುಂಬುತ್ತವೆ ಎಂದು ಸಲಹೆ ನೀಡಿದರು ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ , ಜಿಲ್ಲೆಯಲ್ಲಿ 6 ಅಲ್ಪಸಂಖ್ಯಾತರ ವಸತಿ ಶಾಲೆಗಳಿದ್ದು , ಅಲ್ಲಿಗೆ ಅಗತ್ಯವಿರುವ ವಿದ್ಯಾರ್ಥಿಗಳ ದಾಖಲಾತಿಗೆ ಜಾಗೃತಿ ಮೂಡಿಸಲಾಗಿದೆ . ಕೊವಿಡ್ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕೊವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ . ಜಿಲ್ಲೆಯಲ್ಲಿ ಮೌಲಾನ ಅಚಾದ್ ಮಾದರಿ ಶಾಲೆಗಳು 4 ಇದ್ದು , ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಶೇ . 100 ರಷ್ಟು ಫಲಿತಾಂಶ ಬಂದಿದೆ . ಜಿಲ್ಲೆಯಲ್ಲಿ 162 ಅಲ್ಪಸಂಖ್ಯಾತ ಅಂಗನವಾಡಿ ಕೇಂದ್ರಗಳು , 163 ಸರ್ಕಾರಿ ಉರ್ದು ಶಾಲೆಗಳು ಹಾಗೂ 5 ಅನುದಾನಿತ ಉರ್ದು ಶಾಲೆಗಳಿವೆ ಎಂದು ಮಾಹಿತಿ ನೀಡಿದರು . ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಮೆಹಬೂಬ್ ಸಾಬ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ , ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ ಸೇರಿದಂತೆ ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು .


ಹಲ್ಲಿನ ಆರೋಗ್ಯಕ್ಕೆ ಆದ್ಯತೆ ನೀಡಬೇಕು : ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಿ.ಎಸ್.ಶ್ರೀನಿವಾಸ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜನರು ಹಲ್ಲಿನ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಿ.ಎಸ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಅಸ್ಪತ್ರೆಯಲ್ಲಿ ರಾಷ್ಟ್ರೀಯ ಓರಲ್ ಹೆಲ್ತ್ ಪಾಲಿಸಿ ಹಾಗೂ ದಂತ ಆರೋಗ್ಯ ಕಾರ್ಯಕ್ರಮದಡಿ, ಸ್ಥಳೀಯ ಸರ್ಕಾರಿ ಆಸ್ಪತ್ರೆ ಹಾಗೂ ಬೆಂಗಳೂರಿನ ವೈದೇಹಿ ಆಸ್ಪತ್ರೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ದಂತ ಜೋಡಣೆ ಮತ್ತು ದಂತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಹಲ್ಲು ಆಹಾರವನ್ನು ಅಗಿಯಲು ಮಾತ್ರವಲ್ಲದೆ ಮುಖಕ್ಕೆ ಅಂದವನ್ನೂ ಕೊಡುತ್ತದೆ ಎಂದು ಹೇಳಿದರು.
ಬೆಂಗಳೂರಿನ ವೈದೇಹಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಟಿ.ಮಯೂರರೆಡ್ಡಿ ಮಾತನಾಡಿ ರಾಷ್ಟ್ರೀಯ ಓರಲ್ ಹೆಲ್ತ್ ಪಾಲಿಸಿ ಹಾಗೂ ದಂತ ಆರೋಗ್ಯ ಕಾರ್ಯಕ್ರಮದಡಿ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಉಚಿತವಾಗಿ ದಂತ ಜೋಡಣೆ ಮಾಡಲಾಗುವುದು. ಅರ್ಹ ಫಲಾನುಭವಿಗಳು ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯೆ ಡಾ. ಎನ್.ದೀಪಾ ರೆಡ್ಡಿ ಮಾತನಾಡಿ, ದಂತ ಜೋಡಣೆ ಅಗತ್ಯವಿರು 45 ಫಲಾನುಭಿವಗಳಿಗೆ ದಂತ ಜೋಡಣೆ ಮಾಡಲಾಗುವುದು. ಹಲ್ಲಿನ ಸಮಸ್ಯೆ ಇದ್ದಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ವೈದೇಹಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಮೋಹನ್ ಥಾಮಸ್, ಡಾ. ಡಿ.ಎನ್.ನಿರುಪಮಾ, ಡಾ. ಸನಿತಾ ರಾವ್, ಡಾ.ಅಶೋಕ್, ಡಾ.ಪವಿತ್ರ, ಡಾ. ಉಮಾಶಂಕರ್, ಲೀಡಿಯಾ, ಶಿವಕುಮಾರ್, ನಾಗರಾಜ್,ಕವಿತ ಇದ್ದರು.

ಶ್ರೀರಾಮ ಸಮಾಜಕ್ಕೆ ಮಾದರಿ ಆತನ ನಡೆ ಸರ್ವಕಾಲಕ್ಕೂ ಆದರ್ಶವಾಗಿದೆ ಅವನ ಸ್ಮರಣೆಯಿಂದ ಸತ್ಯ ದರ್ಶನವಾಗುತ್ತದೆ : ಜಿ. ವಿ. ಹಿ. ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಶ್ರೀರಾಮ ಸಮಾಜಕ್ಕೆ ಮಾದರಿಯಾಗಿದ್ದಾನೆ. ರಾಮನ ನಡೆ ಸರ್ವಕಾಲಕ್ಕೂ ಆದರ್ಶವಾಗಿದೆ. ಅವನ ಸ್ಮರಣೆಯಿಂದ ಸತ್ಯ ದರ್ಶನವಾಗುತ್ತದೆ ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ ಹೇಳಿದರು.
ಪಟ್ಟಣದ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯನ ಕಚೇರಿ ಉದ್ಘಾಟಿಸಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ರಾಷ್ಟ್ರೀಯ ಸ್ಮಾರಕವಾಗಿ ನಿರ್ಮಿಸಲಾಗುತ್ತಿದೆ. ಜಗತ್ತಿನ ಎಲ್ಲ ಹಿಂದೂ ಧರ್ಮೀಯರು ಮಂದಿರ ನಿರ್ಮಾಣಕ್ಕೆ ತನು ಮನ ಧನ ಅರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರ ಸಹಕಾರದಿಂದ ಮಂದಿರ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಮುಖ್ಯಸ್ಥ ಗೋವಿಂದರಾಜು ಮಾತನಾಡಿ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಯಾವುದೇ ಜಾತಿ ಭೇದ ತೋರದೆ ಎಲ್ಲಾ ಹಿಂದೂಗಳು ತೊಡಗಿಸಿಕೊಳ್ಳಬೇಕು. ಎಲ್ಲಾ ಹಿಂದೂ ಸಮುದಾಯಗಳ ಜನರ ಶ್ರದ್ಧೆಯ ಅಮೂರ್ತ ರೂಪ ಶ್ರೀರಾಮ. ರಾಮನ ಭವ್ಯ ಮಂದಿರ ನಿರ್ಮಾಣದ ಜತೆಗೆ ರಾಮಾಯಣದ ಕುರುಹುಗಳ ಚಿತ್ರಗಳೊಂದಿಗೆ ವಸ್ತು ಸಂಗ್ರಹಾಲಯ ನಿರ್ಮಿಸಲಾಗುತ್ತಿz ಎಂದು ಹೇಳಿದರು.
ಜಿಲ್ಲಾ ಸ್ಥರದ ಮುಖ್ಯಸ್ಥ ಸಿದ್ದಲಿಂಗೇಶ್ವರ, ತಾಲೂಕು ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ದಿವಾಕರ್, ತಾಲೂಕು ಸಂಚಾಲಕ ಮಾಸ್ತೇನಹಳ್ಳಿ ಸೊಣ್ಣೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ಆವುಲಕುಪ್ಪ ನಾರಾಯಣಸ್ವಾಮಿ, ನಿವೃತ್ತ ಶಿಕ್ಷಕ ಕಲ್ಲೂರು ಎ.ವೆಂಕಟರೆಡ್ಡಿ, ರಘುನಂದನರೆಡ್ಡಿ, ಭರತ್‍ಚಂದ್ರ, ನಂದೀಶ, ಅಡಿಕೆ ರಘು ಇದ್ದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಬಿಡುಗಡೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಸೋಮವಾರ ತಾಲ್ಲೂಕು ಸರ್ಕಾರಿ ನೌಕರರ ಸಂಘ ಹೊರ ತಂದಿರುವ ಹೊಸ ವರ್ಷದ ಕ್ಯಾಲೆಂಡರನ್ನು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಬಿಡುಗಡೆ ಮಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಬಿಇಒ ವಿ.ಉಮಾದೇವಿ, ಕೋಚಿಮುಲ್ ಸದಸ್ಯ ಎನ್.ಹನುಮೇಶ್, ಶಿರಸ್ತೇದಾರ್ ಬಿ.ಆರ್.ಮುನಿವೆಂಕಟಪ್ಪ. ಸಂಘದ ಮುಖಮಡರಾದ ಎನ್.ಶ್ರೀನಿವಾಸಯ್ಯ, ಎಂ.ನಾಗರಾಜ್, ಮಂಜುನಾಥರೆಡ್ಡಿ, ಜನಾರ್ಧನ್ ಇದ್ದರು.

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕು:ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಪರ ಹಾಗೂ ಇತರ ಸಂಘ ಸಂಸ್ಥೆಗಳು ಶ್ರಮಿಸಬೇಕು ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಸಂಬಂಧ ಸೋಮವಾರ ಏರ್ಪಡಿಸಿದ್ದ ವಿವಿಧ ಸಂಘ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನ ಜ.16 ರಂದು ರೋಣೂರು ಗ್ರಾಮದಲ್ಲಿ ನಡೆದರೂ, ಅದು ಅರ್ಥಪೂರ್ಣವಾಗಿರಬೇಕು. ಯಾವುದೇ ಕುಂದು ಕೊರತೆ ಇರದಂತೆ ಸಂಘಟಕರು ನೋಡಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎನ್.ಕುಬೇರಗೌಡ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಯಾರಿಂದಲೂ ಆರ್ಥಿಕ ನೆರವು ಪಡೆಯದಿರಲು ನಿರ್ಧರಿಸಲಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಿಗದಿತ ಮೊತ್ತದ ಅನುದಾನ ಬಳಸಿಕೊಂಡು ಸಮ್ಮೇಳನ ನಡೆಸಲಾಗುವುದು. ವಿವಿಧ ಸಂಘ ಸಂಸ್ಥೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಾಗೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಗಣ್ಯರಿಂದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಚಲಪತಿ, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

“ಆಯುಷ್ ಧಾಮ ” ಆರ್ಥೋ ನ್ಯೂರೋ ಆಸ್ಪತ್ರೆ ಯಲ್ಲಿ ಉಚಿತ ಆರೋಗ್ಯ ಶಿಬಿರ

JANANUDI.COM NETWORK

ಕುಂದಾಪುರ : ಜನವರಿ 9 2021 ಹೋಟೆಲ್ ಶರೋನ್ ಬಳಿ ಇರುವ ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ, ಹಿರಿಯ ನಾಗರಿಕರ ವೇದಿಕೆ ಮತ್ತು ನಿವೃತ್ತ ಸರಕಾರಿ ನೌಕರರ ಸಂಘ ಕುಂದಾಪುರ, ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿದ್ದು, ಕುಂದಾಪುರ ಸಹಾಯಕ ಆಯುಕ್ತ ಶ್ರೀ ಕೆ. ರಾಜು ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಕೋವಿಡ್ 19 ಇದರ ನಿರ್ವಹಣೆಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಪರಿಣಾಮಕಾರಿಯಾಗಿದ್ದು ಈಗೀಗ ಹೆಚ್ಛೆಚ್ಚು ಜನರು ಅದರ ಸದುಪಯೋಗ ಮನಗಂಡಿದ್ದಾರೆ. ಹಾಗೆಯೇ ಇನ್ನಿತರ ರೋಗಗಳನ್ನು ನಿಭಾಯಿಸುವಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಪರ್ಯಾಪ್ತವಾಗಿದೆ ಎಂದರು
.

ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಬಿ ವಿನಯಚಂದ್ರ ಶೆಟ್ಟಿ ಹಿರಿಯ ನಾಗರಿಕರ ಮನೋದೈಹಿಕ ಸಮಸ್ಯೆಗಳು, ಅವುಗಳ ಪರಿಣಾಮಕಾರಿ ಚಿಕಿತ್ಸೆ, ಸಂಯೋಜನ ಚಿಕಿತ್ಸಾ ಪದ್ಧತಿಯ ಅಗತ್ಯತೆ ಹಾಗೂ ವೃದ್ದಾಪ್ಯಾದಲ್ಲಿ ಗುಣಮಟ್ಟದ ಅರೋಗ್ಯ ಕಾಪಾಡುವಲ್ಲಿ ಪರ್ಯಾಯ ಚಿಕಿತ್ಸಾ ಪದ್ಧತಿಗಳ ಮಹತ್ವದ ಬಗ್ಗೆ ವಿವರಿಸಿದರು.

ಆಯುರ್ವೇದ, ಯೋಗ, ನ್ಯಾಚುರೋಪತಿ, ಫಿಸಿಯೋಥೆರಪಿ, ಮರ್ಮ ಚಿಕಿತ್ಸೆ ಮುಂತಾದ ಚಿಕಿತ್ಸಾ ಪರಿಕ್ರಮ ಗಳ ಸಂಯೋಜನಾ ಪರಿಹಾರೋಪಾಯ,ಎಲ್ಲ ಚಿಕಿತ್ಸಾ ಪರಿಕರಗಳ ವ್ಯವಸ್ಥೆ ಗಳು, ಪ್ರಯೋಗಾಲಯ, ಔಷಧಾಲಯ, ಪಥ್ಯಾ ಆಹಾರ ವಿಭಾಗಗಳ ಸುಸಜ್ಜಿತ ವ್ಯವಸ್ಥೆ ಆಯುಷ್ ಧಾಮ ಆಸ್ಪತ್ರೆ ಯಲ್ಲಿ ಲಭ್ಯವಿದ್ದು, ಹಿರಿಯ ನಾಗರಿಕರು ವಿಶೇಷ ರಿಯಾಯಿತಿಯ ಆರೋಗ್ಯ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದರು.

ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಶ್ರೀ. ಎಂ. ಪುಂಡಲೀಕ ಗಾಣಿಗ ಸಭೆಯ ಅಧ್ಯಕ್ಷತೆ ವಹಿಸಿದ್ದು, ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಹೆಚ್. ಜಗನ್ನಾಥ ಶೆಟ್ಟಿ, ಹಿರಿಯ ನಾಗರಿಕರ ವೇದಿಕೆ ಗೌರವ ಅಧ್ಯಕ್ಷ ಕೆ. ಜಿ. ರಮಾನಂದ ಹಾಗೂ ಆಯುಷ್ ಧಾಮ ಆಸ್ಪತ್ರೆಯ ಚೇರ್ಮೆನ್ ಶ್ರೀ. ಸದಾಶಿವ ಶೆಟ್ಟಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.ಶಂಕರ್ ಬಿಲ್ಲವರ ಪ್ರಾರ್ಥನೆ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಶ್ರೀ. ರಘುವೀರ್ ಕೆ ನಡೆಸಿಕೊಟ್ಟರು. ಕೃಷ್ಣಯ್ಯ ಆಚಾರ್ಯರ ವಂದನಾರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು.

ಶಿಬಿರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಕ್ವಾಥ ವಿತರಣೆ, ಉಚಿತ ರಕ್ತಪರೀಕ್ಷೆ ಮತ್ತು ಉಚಿತ ತಪಾಸಣೆ ನಡೆಸಲಾದ ಈ ಅರೋಗ್ಯ ಶಿಬಿರದ ಪ್ರಯೋಜನವನ್ನು ಸುಮಾರು ನೂರಕ್ಕೂ ಮಿಕ್ಕಿ ಜನರು ಪಡೆದುಕೊಂಡರು.