HOLY ROSARY CHURCH, KUNDAPUR – 450 th JUBILEE SOUVENIR 2021

ಕೊಂಕಣಿ ಸಾಹಿತ್ಯಾಚೆಂ ಡಿಜಿಟಲೀಕರಣ್

16 ಜನೆರ್ 2021: ವೆಳಾಕಾಳಾಕ್ ಸರಿ ಜಾವ್ನ್ ಆಯ್ಚೊ ಕಾಳ್ ಡಿಜಿಟಲ್ ಕಾಳ್ ಜಾಲಾ ದೆಕುನ್ ಕೊಂಕಣಿ ಸಾಹಿತ್ಯಾಕ್ ಸಯ್ತ್ ಹ್ಯಾ ಡಿಜಿಟಲ್ ಕಾಳಾಕ್ ವರುನ್ ವೆಚಿ ಗರ್ಜ್ ಆಸಾ ದೆಕುನ್ ಆಮಿ ಆತಾಂಚೆಂ ಸಾಹಿತ್ಯ್ ಡಿಜಿಟಲೀಕರಣ್ ಕೆಲ್ಲೆಪರಿಂಚ್ ಪಾಟ್ಲ್ಯಾ ತೆಂಪಾಚೆಂ ಕೊಂಕಣಿಂತ್ಲೆಂ ವಿಂಚ್ಣಾರ್ ಸಾಹಿತ್ಯ್ ಸಯ್ತ್ ಡಿಜಿಟಾಯ್ಜ್ ಕರುನ್ ಕೊಂಕಣಿಕ್ ಲಿಪಿ/ಬೊಲಿಚ್ಯೊ ಮೆರೊ/ಗಡಿ ಉತ್ರುನ್ ಜಾಗತಿಕ್ ಸ್ಥರಾಕ್ ಪಾವಂವ್ಚಿ ಗರ್ಜ್ ಸಮ್ಜುನ್ ಆಶಾವಾದಿ ಪ್ರಕಾಶನಾನ್ ’ವಿಲ್ಫಿ ರೆಬಿಂಬಸಾಚ್ಯೊ ಕಥಾ’ ಡಿಜಿಟಾಯ್ಜ್ ಕರ್ಚ್ಯಾ ಮಿಸಾಂವಾಚಿ ಸುರ‍್ವಾತ್ ಜಾವ್ನ್ ಆಸಾ ಕೆಲ್ಲೆಂ ’ಅಂತರ್‌ರಾಶ್ಟ್ರ್ತೀಯ್ ವೆಬಿನಾರ್’ ಜನೆರ್ 16 ತಾರಿಕೆರ್ (ಸನ್ವಾರಾ) ಸಾಂಜೆರ್ 4:30 ಥಾವ್ನ್ 6:30 ಪರ‍್ಯಾಂತ್ ಚಲಯ್ಲೆಂ.

ಅಂತರ್-ರಾಶ್ಟ್ರೀಯ್ ಪುರಸ್ಕೃತ್ ಕಾರ‍್ಯೆಂ ನಿರ‍್ವಾಹಕ್ ಮಾನೆಸ್ತ್ ರೊನಾಲ್ಡ್ ಒಲಿವೆರಾ ಪಡುಕೋಣೆಚ್ಯಾ ಸುಂಕಾಣ್‍ಪಣಾಖಾಲ್ ಸುರು ಜಾಲ್ಲ್ಯಾ ಹ್ಯಾ ವೆಬಿನಾರಾಚ್ಯಾ ಸುರ‍್ವಾತೆರ್ ’ಡೀಜಿಟಲೀಕರಣಾಚಿ ಗರ್ಜ್ ಆನಿ ಶೆವೊಟಾವಿಶಿಂ ಉಲಯಿತ್, 1991-2 ಇಸ್ವೆಂತ್ ಅಜೆಕಾರ್ ಗಾಂವಾಂತ್ ವಿಲ್ಫಿ-ಮೀನಾ ರೆಬಿಂಬಸ್ ಹಾಂಕಾಂ ಆಸಾ ಕೆಲ್ಲ್ಯಾ ಪರ‍್ಗಟ್ ಸನ್ಮಾನಾ ವೆಳಾರ್ ’ವಿಲ್ಫಿ ರೆಬಿಂಬಸ್ ಏಕ್ ಕೊಂಕಣಿಚೊ ಪ್ರವಾದಿ’ ಮ್ಹಳ್ಳಿಂ ವಲ್ಲಿ ಕ್ವಾಡ್ರಸಾಚಿಂ ಉತ್ರಾಂ ಪರತ್ ಯಾದಿಕ್ ಹಾಡ್ಲಿಂ. ತಶೆಂಚ್ ವಿಲ್ಫಿ ರೆಬಿಂಬಸಾಚ್ಯಾ ಕಥೆಂನಿ ಕೊಂಕಣಿ ಸಮಾಜೆಕ್ ಕಶೆಂ ಪ್ರಭಾವಿತ್ ಕೆಲಾಂ ಮ್ಹಳ್ಳೆವಿಶಿಂ ಉಲ್ಲೇಕ್ ಕರ್ತಚ್, ವಲ್ಲಿ ಕ್ವಾಡ್ರಸಾನ್ ಯೆವ್ಕಾರ್ ಉಲವ್ಪಾಂತ್ ಗೊಂಯ್ ಅಸ್ಮಿತಾಯೆಚ್ಯಾ ದಿಸಾಚಿ ಪರ‍್ಬಿಂ ಪಾಟವ್ನ್, ದೇಸ್-ವಿದೇಸ್ ಥಾವ್ನ್ ಹ್ಯಾ ವೆಬಿನಾರಾಕ್ ಹಾಜರ್ ಜಾಲ್ಲ್ಯಾ ಸಮೇಸ್ತಾಂಕ್ ಯೆವ್ಕಾರ್ ಮಾಗುನ್, ಕೊಂಕಣಿ ಸಮಾಜೆಚೊ ಶಿಲ್ಪಿ – ರೆಬಿಂಬಸ್ ವಿಲ್ಫಿಚ್ಯಾ ನಾಂವಾರ್ ಅಧುರಿಂ ಆಸ್ಲಿಂ ಭಾಂದ್ಪಾಂ ಉಭಿಂ ಜಾಲಿಂ, ಕೊಸಳ್ಳೆಲಿಂ ಘರಾಂ, ಫಾಸಾಳ್ಳೆಲಿಂ ಕುಟ್ಮಾಂ ಏಕ್ ಜಾಲಿಂ, ವಿಲ್ಫಿ ರೆಬಿಂಬಸ್ ಏಕ್ ನಾಂವ್ ಕೊಂಕಣಿ ಲೊಕಾಂಚ್ಯಾ ಕಾಳ್ಜಾ-ಮನಾಂತ್ ಸ್ಥಿರ್ ಜಾವ್ನ್ ಉರ್ಲಾಂ ತರ್ ತಾಚೆಂ ಸಾದೆಂಪಣ್, ಖಾಲ್ತೆಂಪಣ್ ತಾಚಿ ಭೋವ್ ವ್ಹಡ್ ಆಸ್ತ್ ಜಾವ್ನಾಸ್ಲಿ ಮ್ಹಣುನ್, ಕೊಂಕಣಿಚ್ಯಾ ಅಮೊಲಿಕ್ ಸಾಹಿತ್ಯಾಕ್ ಲಿಪಿಯಂತರ್ ಕರುನ್ ಡಿಜಿಟಲ್ ಮಾಧ್ಯಮಾಂ ಮುಖಾಂತ್ರ್ ಪರ‍್ಗಟ್ ಕರ್ಚೆಂ ತಶೆಂಚ್ ಆಡಿಯೊ ಬುಕಾಂನಿ ಸಯ್ತ್ ತೆಂ ಫಾವೊ ಕರುನ್ ಸಂಸಾರ್‌ಭರ್ ಶಿಂಪಡ್ಲೆಲ್ಯಾ ಕೊಂಕಣಿ ಲೊಕಾಕ್ ಫಾವೊ ಜಾಂವ್ಚೆದಿಶೆನ್ ಡಿಜಿಟಲ್ (ಇ) ಲೈಬ್ರೆರಿ ಕರ್ಚೆಂ ಆಶಾವಾದಿ ಪ್ರಕಾಶನಾಚೆಂ ಮಿಸಾಂವಾಚಿ ಮಟ್ವ್ಯಾನ್ ಒಳೊಕ್ ಕೆಲಿ.

ಕಾರ‍್ಯಾಚೆಂ ಉಗ್ತಾವಣ್ ಕೆಲ್ಲ್ಯಾ ಮಾನೆಸ್ತ್ ಫೆಲಿಕ್ಸ್ ಲೋಬೊ ಖತಾರ್ ಹಾಣಿಂ ಅಪ್ಲ್ಯಾ ಸಂಧೇಶಾಂತ್ ವಿಲ್ಫಿ ರೆಬಿಂಬಸಾನ್ ಅಪ್ಲ್ಯಾ ಜಿಣ್ಯೆಕ್ ಕೊಂಕಣಿ ಸಮಾಝೆಕ್ ಸಮರ್ಪುನ್ ದಿಲ್ಲೆಂ ಆನಿ ಆತಾಂ ತಾಚ್ಯಾ ಸಾಹಿತ್ಯಾಕ್ ಡಿಜಿಟಲೀಕರಣ್ ಕರ್ಚೆಂ ಕಾಮ್ ಖರೆಂಚ್ ಜಾವ್ನ್ ಕೊಂಕಣಿಚ್ಯಾ ಫುಡಾರಾಕ್ ಭೋವ್ ಉಪ್ಕಾರಾಕ್ ಪಡ್ಚೆ ತಸಲೆಂ ಮ್ಹಣಾಲೊ. ವಿಲ್ಫಿ ರೆಬಿಂಬಸಾಪರಿಂಚ್ ಹೆರಾಂಚೆಂ ಅಮೊಲಿಕ್ ಸಾಹಿತ್ಯ್ ಸಯ್ತ್  ಡಿಜಿಟಾಯ್ಜ್ ಕರ್ಚೆ ದಿಶೆನ್ ಆಶಾವಾದಿ ಪ್ರಕಾಶನ್ ವಾವ್ರ್ ಕರುಂಕ್ ಸುಚಾವ್ ದಿಲೊ.

ವಿಲ್ಫಿ ರೆಬಿಂಬಸಾವಿಶಿಂ ತಶೆಂಚ್ ತಾಚ್ಯಾ ಕಥೆಂವಿಶಿಂ ಏಕ್ ವಾಚ್ಪಿ ಜಾವ್ನ್ ಅಪ್ಣಾಚೆರ್ ಕಸಲೊ ಪ್ರಭಾವ್ ಘಾಲ್ಲೊ ಮ್ಹಳ್ಳೆವಿಶಿಂ ಉಲಯಿಲ್ಲ್ಯಾ ದಾಯ್ಜಿವರ್ಲ್ಡ್.ಕೊಮ್‌ಚೊ ಪ್ರಧಾನ್ ಸಂಪಾದಕ್ ಮಾನೆಸ್ತ್ ವಾಲ್ಟರ್ ನಂದಳಿಕೆನ್ ವಿಲ್ಫಿಚ್ಯೊ ಕಾಣಿಯೊ ಡಿಜಿಟಾಯ್ಜ್ ಕೆಲ್ಲೆಪರಿಂಚ್ ವಿಲ್ಫಿಚಿಂ ಪದಾಂ ಆನಿ ಹೆರ್ ಸಾಹಿತ್ಯ್ ಸಯ್ತ್ ಡಿಜಿಟಾಯ್ಜ್ ಕರುಂಕ್ ಉಲೊ ದಿಲೊ.

ಮಾನೆಸ್ತ್ ಎಡ್ಡಿ ಸಿಕೇರಾನ್ ವಿಲ್ಫಿ ರೆಬಿಂಬಸಾಚ್ಯಾ ಎಕೆಕಾ ಕಥೆಂಚೆರ್ ತಶೆಂಚ್ ವಿಲ್ಫಿ ರೆಬಿಂಬಸ್ ಕಸೊ ಎಕಾ ಪದಾಕ್/ಕಾಂತಾರಾಕ್ ಬರಂವ್ಕ್ ಥೊಡೆಪಾವ್ಟಿಂ ಸಗ್ಳಿ ರಾತ್ ಖರ್ಚುನ್ ಬಸ್ತಾಲೊ ಮ್ಹಳ್ಳೊ ವಿವರ್ ದಿಲೊ. ವಿಲ್ಫಿ ರೆಬಿಂಬಸ್ ಅಪ್ಲ್ಯಾ ಜಿವಿತಾ ಆವ್ದೆಂತ್ ತಾಣೆಂ ಕೊಣಾಯ್ಕೀ ದುಕಯಿಲ್ಲೊ ನ್ಹಯ್ ಬಗರ್ ಮೋಗ್ ಆನಿ ಮಯ್ಪಾಸಾಚಾನ್ ಜಿಯೆಲ್ಲೊ ಮನಿಸ್ ಆನಿ ಕೊಂಕಣಿ ಸಮಾಜೆಕ್ ಸದಾಂಚ್ ಮೋಗ್ ದಿಲ್ಲೊ ಮಹಾನ್ ವೆಕ್ತಿ ಮ್ಹಣಾಲೊ.

ಮಾನೆಸ್ತ್ ಹೇಮಾಚಾರ್ಯನ್ ವಿಲ್ಫಿ ರೆಬಿಂಬಸಾನ್ ಬರಯಿಲ್ಲ್ಯಾ ’ಪಿಂತ್ರಾಂ’ ಕಥೆಚೊ ಉಲ್ಲೇಕ್ ಕರುನ್, ವಿಲ್ಫಿ ರೆಬಿಂಬಸ್ ಆನಿ ತಾಚ್ಯಾ ಕುಟ್ಮಾಶವೆಂ ಅಪ್ಣಾಕ್ ಆಸ್‍ಲ್ಲ್ಯಾ ಭಾಂದಾವಿಶಿಂ ಉಲಯ್ಲೊ.

ಮಾನೆಸ್ತ್ ಕ್ಲೆರೆನ್ಸ್ ಕೈಕಂಬನ್ ಅಪ್ಲ್ಯಾ ಉಲವ್ಪಾಂತ್ ವಿಲ್ಫಿ ರೆಬಿಂಬಸಾಚ್ಯಾ ಕಥೆಂಪರಿಂ ತೊ ವೆಕ್ತಿ ಸಯ್ತ್ ಮಹಾನ್ ಶೆಗುಣಾಂಚೊ ಮ್ಹಣಾಲೊ.

ವೀಜ್ ಇ-ಪತ್ರಾಚೊ ಸಂಪಾದಕ್ ದೊ|ಆಸ್ಟಿನ್ ಪ್ರಭುನ್ ವಿಲ್ಫಿ ರೆಬಿಂಬಸಾಚ್ಯಾ ಸಾಹಿತ್ಯಾಕ್ ವಿಂಚುನ್ ಕೊಂಕಣಿಚ್ಯಾ ಅಮೊಲಿಕ್ ಸಾಹಿತ್ಯಾಕ್ ಡಿಜಟಾಯ್ಜ್ ಕರ್ಚೆಂ ಮಿಸಾಂವ್ ಹಾತಿಂ ಘೆತ್ಲಲ್ಯಾ ಆಶಾವಾದಿ ಪ್ರಕಾಶನಾಕ್ ಬರೆಂ ಮಾಗುನ್ ವಿಲ್ಫಿ ರೆಬಿಂಬಸ್ ಸ್ಮಾರತ್ ಪಯ್ಣಾರಿ-ವೀಜ್ ರಾಶ್ಟ್ರೀಯ್ ಮಟ್ಟಾಚೊ ದೊಣ್ ಲಿಪಿಂತಲೊ ಕೊಂಕಣಿ ಸಾಹಿತಿಕ್ ಸ್ಪರ್ಧೊ ೨೦೧೮ ಇಸ್ವೆಂತ್ ಸುರು ಜಾವ್ನ್ ೨೦೨೦ ಇಸ್ವೆಂತ್ ತೀನ್ ಲಿಪಿಂನಿ ಹೊ ಸ್ಪರ್ಧೊ ಚಲ್ಲೊ ಆನಿ ೨೦೨೧ ಇಸ್ವೆಂತ್ ಹೊ ಸ್ಪರ್ಧೊ ಅಂತರ್-ರಾಶ್ಟ್ರೀಯ್ ಮಟ್ಟಾರ್ ಚಲಂವ್ಚೆಂ ಘೋಶಣ್ ಕರುನ್ ಕೊಂಕಣಿ ಸಾಹಿತ್ ರಚ್ಪ್ಯಾಂಕ್ ಏಕ್ ಅಪುರ್ಭಾಯೆಚಿ ಆವ್ಕಾಸ್ ರಚುನ್ ದಿತಾ ಮ್ಹಣಾಲೊ.

ತ್ಯೇ ಉಪ್ರಾಂತ್ ಮಾನೆಸ್ತಿಣ್ ವೀಣಾ ರೆಬಿಂಬಸ್ ಪಾಯ್ಸಾನ್ ವಿಲ್ಫಿ ರೆಬಿಂಬಸಾಚ್ಯಾ ಡಿಜಿಟಲೀಕರಣಾಚೊ ಏಕ್ ವಾಂಟೊ; ಲಿಪಿಯಂತರ್ ಕರುನ್ ಇ-ಪುಸ್ತಕಾರುಪಾರ್ ಡಿಜಿಟಲ್ ಪರ್ಗಟ್ಣೆಚೆಂ ಘೋಶಣ್ ಕರುನ್, ವಿಲ್ಫಿ ರೆಬಿಂಬಸಾಚ್ಯೊ ಕಥಾ ಕನ್ನಡ್, ನಾಗರಿ ತಶೆಂಚ್ ರೋಮಿ ಲಿಪಿಂನಿ ಇ-ಬುಕಾರುಪಾರ್ ಡಿಜಿಟಲ್ ಮಾಧ್ಯಮಾಂತ್ ವಾಚ್ಪ್ಯಾಂಕ್ ಫಾವೊ ಜಾಂವ್ಚ್ಯಾ ಮಿಸಾಂವಾಚೆಂ ಉಗ್ತಾವಣ್ ಕರುನ್ ಹ್ಯಾ ವಾವ್ರಾಚಿ ಸುರ‍್ವಾತ್ ಕೆಲ್ಲ್ಯಾ ಆಶಾವಾದಿ ಪ್ರಕಾಶನಾಕ್ ಬರೆಂ ಮಾಗ್ಲೆಂ.

ಮಾನೆಸ್ತ್ ವಿಶ್ವಾಸ್ ರೆಬಿಂಬಸಾನ್ ತ್ಯೇ ಉಪ್ರಾಂತ್ ಡಿಜಿಟಲ್ ಆಡಿಯೊ ಬುಕಾಚ್ಯಾ ಉಗ್ತಾವಣೆಚೆಂ ಘೋಶಣ್ ಕರುನ್ ’ಪಿಂತ್ರಾಂ’ ಕಥೆಕ್ ವಲ್ಲಿ ಕ್ವಾಡ್ರಸಾಥಾವ್ನ್, ’ಮೂಗುತಿ’ ಕಥೆಕ್ ಕ್ರಿಸ್ಟೋಫರ್ ನೀನಾಸಮ್ ಥಾವ್ನ್, ತಶೆಂಚ್ ’ಫಾತಿಮಾಚೆಂ ಕಾಜರ್’ ಕಥೆಕ್ ಎಡ್ಡಿ ಸಿಕೇರಿಥಾವ್ನ್ ಸಾದರ್‌ಪಣ್ ಜಾಂವ್ಚೆವಿಶಿಂ ಪರ್ಗಟ್ಣಿಂ ಕರುನ್ ಅಪ್ಲೆ ಸಂಧೇಶ್ ದಿಲೆ.

ಮುಖೆಲ್ ಸಯ್ರೆ ಜಾವ್ನ್ ಹಾಜರ್ ಆಸ್ಲ್ಯಾ ಮಾನೆಸ್ತ್ ಜೇಮ್ಸ್ ಮೆಂಡೊನ್ಸಾನ್ ಅಪ್ಲ್ಯಾ ಉಲವ್ಪಾಂತ್ ವಿಲ್ಫಿ ರೆಬಿಂಬಸಾಸವೆಂ ಅಪ್ಲೊ ಭಾಂದ್ ಕಸ್ಲೊ ಆಸ್ಲೊ ಆನಿ ಕೊಂಕಣಿ ಸಮಾಜೆಕ್ ತಾಣೆಂ ದಿಲ್ಲ್ಯಾ ಅಮೊಲಿಕ್ ದೇಣ್ಗೆಚೊ ಉಡಾಸ್ ಕಾಡುನ್ ತಾಚೆಂ ಸಾಹಿತ್ಯ್ ಡಿಜಿಟಾಯ್ಜ್ ಕರ್ಚೆಂ ಭೋವ್ ಗರ್ಜೆಚೆಂ ಮೇಟ್ ಕಾಡ್‌ಲ್ಲ್ಯಾ ಆಶಾವಾದಿ ಪ್ರಕಾಶಾನಾಕ್ ಕೊಂಕಣಿ ಸಮಾಜೆನ್ ಪಾಟಿಂಬೊ ದೀಂವ್ಕ್ ಉಲೊ ದಿಲೊ.

ಮುಖೆಲ್ ಸಯ್ರೊ ಮಾನೆಸ್ತ್ ಜೋಸೆಫ್ ಮಥಾಯಸಾನ್ ವಿಲ್ಫಿ ರೆಬಿಂಬಸಾಚ್ಯಾ ಎಕೆಕಾ ಪದಾಂ/ಕಾಂತಾರಾಂನಿ ಕಶೆಂಚ್ ಕೊಂಕಣಿ ಸಮಾಜೆಕ್ ಕಥಾ ಸಾಂಗುನ್ ಸಮಾಜಿಕ್ ಸುಧ್ರಾಪಾಕ್ ಪ್ರೇರಿತ್ ಕೆಲೆಂ, ದಿಶಾ ದಿಲಿ ಮ್ಹಳ್ಳೆವಿಶಿಂ ಉಲವ್ನ್, ಕೊಂಕಣಿಂತ್ಲೆಂ ಅಮೊಲಿಕ್ ಸಾಹಿತ್ಯ್ ಡಿಜಿಟಾಯ್ಜ್ ಕರ್ಚೆದಿಶೆನ್ ಹೆಂ ಮೇಟ್ ಭಳ್ವಂತ್ ಜಾಂವ್ದಿ ಆನಿ ತ್ಯಾ ಪಾಸತ್ ಮ್ಹಜೊ ಪಾಟಿಂಬೊ ಕೆದ್ನಾಂಯ್ ಆಸ್ತಲೊ ಮ್ಹಣಾಲೊ.

ಮಾನೆಸ್ತ್ ವೆಂಕಟೇಶ್ ಬಾಳಿಗಾನ್ ಅಪ್ಲೊ ಸಂಧೇಶ್ ದಿವುನ್ ವಿಲ್ಫಿ ರೆಬಿಂಬಸಾಚ್ಯಾ ’ಮೋಗ್ ತುಜೊ ಕಿತ್ಲೊ ಆಶೆಲೊಂ’ ಕಾಂತಾರಾನ್ ಕಶೆಂ ಜಾತ್-ಮತ್ ಲೆಕಿನಾಸ್ತಾಂ ಕೊಂಕಣಿ ಲೊಕಾಂಚ್ಯಾ ಜಿಬೆರ್ ಆಜ್ ಪಾಶತ್ ತೆಂ ಕಾಂತಾರ್ ಆನಿ ಎಕೆಕ್ ಸಬ್ಧ್ ಪರತ್ ಉಚ್ಚಾರ್ ಕರುಂಕ್ ಲಾಯ್ತಾ ಮ್ಹಣಾಲೊ.

ತ್ಯೇ ಉಪ್ರಾಂತ್ ಕೊಂಕಣಿಂತ್ಲೆಂ ಪಯ್ಲೆಂ ಡಿಜಿಟಲ್ ಸಾಹಿತ್ಯೀಕ್ ಜರ್ನಲ್ ’ಪಯ್ಣಾರಿ’ಚೊ ದುಸ್ರೊ ಅಂಕೊ ಉಗ್ತಾವಣ್ ಕರ‍್ಯೆಂ ಚಲ್ಲೆಂ. ಆಶಾವಾದಿ ಪ್ರಕಾಶನಾಚೊ ಸಹ-ಸಂಪಾದಕ್ ಮಾ|ಜೇಸನ್ ಪಿಂಟೊನ್ ’ಪಯ್ಣಾರಿ’ ಸಾಹಿತ್ಯೀಕ್ ಜರ್ನಲಾಚೆರ್ ಉಲವ್ನ್. ಕೊಂಕಣಿ ಸಮಾಜ್ ಆಜ್ ಸಭಾರ್ ರಿತಿಚ್ಯಾ ವಿಘ್ನಾಂಕ್ ಭಗುನ್ ಆಸಾ ಆನಿ ಹ್ಯಾ ಸಂಧರ್ಭಾರ್ ಸರ್ವ್ ಕೊಂಕಣಿ ಲೊಕಾಂನಿ ಜಾತ್-ಲಿಪಿ-ಬೊಲಿಚ್ಯೊ ಗಡಿ ಉತ್ರುನ್ ಕೊಂಕಣಿಚೊ ಫುಡಾರ್ ಮತಿಂತ್ ಧರುನ್ ತ್ಯಾ ದಿಶೆನ್ ವಾವ್ರ್ ಕರ್ಚಿ ಗರ್ಜ್ ಸಮ್ಜುನ್ ಜೊಕ್ತಿಂ ಪಾವ್ಲಾಂ ಕಾಡ್ಚ್ಯಾ ಆಶಾವಾದಿ ಪ್ರಕಾಶನಾಚ್ಯಾ ’ಯದಹಾಂ ಜೀವಮಿ, ಅಹಮಾಶಾಂಸೆ (ಜೀವ್ ಆಸ್ತಾಶರ್ ಭರ‍್ವಸ್ತಾಂ)’ ಧ್ಯೇಯಾಚೊ ಉಲ್ಲೇಕ್ ಕೆಲೊ.

ಮಾನೆಸ್ತ್ ಮೆಲ್ವಿನ್ ರೊಡ್ರಿಗಸಾನ್ ತ್ಯೇ ಉಪ್ರಾಂತ್ ಪಯ್ಣಾರಿ ಜರ್ನಲಾಕ್ ಲೋಕಾರ್ಪಣ್ ಕರುನ್ ಹೊ ಪಯ್ಣಾರಿ, ಕೊಂಕಣಿ ಲೊಕಾಂಚ್ಯಾ ಕಾಳ್ಜಾಂನಿ ಕೊಂಕಣಿ ಭಾಸೆಚಿ ಗ್ರೇಸ್ತ್-ಕಾಯ್ ಪಾಚಾರುಂಕ್ ಸಕುಂದಿ ಮ್ಹಣುನ್ ’ಕೊಂಕಣ್ ಸಮಾಜೆಚೊ ಚಮತ್ಕಾರಿಕ್ ಅತ್ಮೊ ವಿಲ್ಫಿ ರೆಬಿಂಬಸಾಚ್ಯಾ ಸಾಹಿತ್ಯಾಕ್ ಡಿಜಿಟಾಯ್ಜ್ ಕರುಂಕ್ ಮುಕಾರ್ ಸರ್‌ಲ್ಲ್ಯಾ ಆಶಾವಾದಿ ಪ್ರಕಾಶನಾಚ್ಯಾ ಕಾಮಾಕ್ ಜಾಯ್ತ್ ಮಾಗ್ಲೆಂ’

ತ್ಯೇ ಉಪ್ರಾಂತ್ ಬಾಯ್ ದೊ|ಜಯಂತಿ ನಾಯ್ಕ್ ಹಿಚ್ಯಾ ’ತಿಚಿ ಕಾಣಿ’ ಮ್ಹಳ್ಳೆಂ ಪುಸ್ತಕಾಚೆಂ ಲೋಕಾರ್ಪಣ್ ಕಾರ್ಯೆಂ ಚಲ್ಲೆಂ. ದೊ|ಪೂರ್ಣಾನಂದ ಚಾರಿಚ್ಯಾ ಸುಂಕಾಣ್‍ಪಣಾಖಾಲ್ ಚಲ್‌ಲ್ಲ್ಯಾ ಹ್ಯಾ ಕಾರ್ಯಾಂತ್ ಮಾನೆಸ್ತ್ ಶೈಲೇಂದ್ರ ಮೆಹ್ತಾನ್ ಜಯಂತಿ ಬಾಯೆಚಿ ಸವಿಸ್ತಾರ್ ಒಳೊಕ್ ಕರ್ತಚ್ ಮಾನೆಸ್ತ್ ವಸಂತ್ ಸಾವಂತಾನ್ ಜಯಂತಿ ನಾಯ್ಕಾಚ್ಯಾ ಕಥೆಂಚೆರ್ ಖೊಲಾಯೆನ್ ಉಲವ್ಪ್ ಕೆಲೆಂ. ಗೋಕುಳ್‍ದಾಸ್ ಪ್ರಭುನ್ ಪುಸ್ತಕಾಕ್ ಲೋಕಾರ್ಪಣ್ ಕರುನ್ ಅಪ್ಲೊ ಸಂಧೇಶ್ ದಿಲೊ. ದೊ|ಜಯಂತಿ ನಾಯ್ಕಾನ್ ಅಪ್ಲ್ಯಾ ಉಲವ್ಪಾಂತ್ ಸಮೇಸ್ತಾಂಕ್ ಧಿನ್ವಾಸ್ ಪಾಟವ್ನ್ ’ಜಾಗತಿಕ್ ಕೊಂಕಣಿ ಮಾನ್ ಮನ್ಶಾಂ ಸಮೊರ್, ವಿಲ್ಫಿ ರೆಬಿಂಬಸಾಚ್ಯಾ ಡಿಜಿಟಲ್ ಸಾಹಿತಿಕ್ ವಾವ್ರಾಚ್ಯಾ ಹ್ಯಾ ಸುವಾಳ್ಯಾರ್ ಅಪ್ಣಾಚೆಂ ಪುಸ್ತಕ್ ಲೋಕಾರ್ಪಣ್ ಜಾಂವ್ಚೆಂ ಅಪ್ಣಾಕ್ ಭೋವ್ ಗವ್ರವಾಚೆಂ ಮ್ಹಣಾಲಿ.

ಕೊಂಕಣಿ ಸರ್ದಾರ್ ಮಾನೆಸ್ತ್ ಬಸ್ತಿ ವಾಮನ್ ಶೆಣಯ್, ಮಾ|ಬಾ|ರೋಯ್ಸನ್ ಫೆರ್ನಾಂಡಿಸ್, ಮಾನೆಸ್ತ್ ಎಚ್ಚೆಮ್, ಮಾನೆಸ್ತ್ ವಿಲ್ಸನ್ ಕಿನ್ನಿಗೋಳಿ, ಮಾನೆಸ್ತ್ ದಿನೇಶ್ ಕೊರೆಯಾ, ಮಾನೆಸ್ತಿಣ್ ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ, ಮಾನೆಸ್ತ್ ಆರ್.ಎಸ್.ಭಾಸ್ಕರ್ ಮಾನೆಸ್ತ್ ಗೋಪಿನಾಥ್ ಆನಿ ದೇಸ್-ವಿದೇಸ್ ಥಾವ್ನ್ ಸಭಾರ್ ಕೊಂಕಣಿ ಮುಖೆಲಿ ಹಾಜರ್ ಆಸುನ್ ಅಪ್ಲೆ ಸಂಧೇಶ್ ದಿಲೆ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟಯ್ಲೆ.

ಸಮಾಜದ ಒಳಿತಿಗಾಗಿ ಮಾಡುವ ಕೆಲಸಕ್ಕೆ ಅಡ್ಡಿ ಆತಂಕಕಗಳು ಬರುವುದು, ಸಹಜ, ಇವುಗಳೆಲ್ಲವನ್ನು ಮೆಟ್ಟಿ ನಿಂತು ಮುಂದೆ ಸಾಗಿ ಶಾಸಕ ಕೆ.ಅರ್. ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸಮಾಜದ ಒಳಿತಿಗಾಗಿ ಮಡುವಎಲ್ಲಾ ಕೆಲಸಗಳಿಗೂ ಅಡ್ಡಿ ಆತಂಕಕಗಳು ಬರುವುದು, ಸಹಜ, ಇವುಗಳೆಲ್ಲವನ್ನು ಸಹಿಸಿಕೊಂಡು ಮೆಟ್ಟಿ ನಿಂತಾಗ ನಾವು ನಿಜವಾದ ಮನುಷ್ಯರಾಗುತ್ತೇವೆ. ಯಾವುದಕ್ಕೂ ಬಯಪಡದೆ ದೈರ್ಯದಿಂದ ಮುಂದೆ ಸಾಗಿ ಗಡಿಭಾಗದಲ್ಲಿಕನ್ನಡ ಉಳಿವು-ಅಳಿವಿಗಾಗಿ ಶ್ರಮಿಸಿದಾಗ ತಾಯಿ ಭುವನೇಶ್ವರಿ ಆಶೀರ್ವಾದ ಸದಾಇರುತ್ತದೆಎಂದು ಶಾಸಕ ಕೆ.ಅರ್. ರಮೇಶ್‍ಕುಮಾರ್ ತಿಳಿಸಿದರು.
ತಾಲ್ಲೂಕಿನರೋಣೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀನಿವಾಸಪುರತಾಲ್ಲೂಕು 11ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರಮೇಶ್‍ಕುಮಾರ್, ಭಾಷೆ ಮನುಕುಲದ ವಿಶಿಷ್ಟ ಕೊಡುಗೆಯಾಗಿದೆ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದೆ ನಿಜವಾದ ಭಾಷೆ, ಪ್ರಾಣಿಗಳಲ್ಲಿ ಭಾಷೆ ವ್ಯಕ್ತಪಡಿಸಲು ಆಗುವುದಿಲ್ಲ, ಭಾಷೆ ಮೂಲ ಸ್ಥಾನ ತಾಯಿ, ತಾಯಿಯಿಂದಲೆ ಭಾಷೆ ಹುಟ್ಟುತ್ತದೆ. ಈ ಗಡಿಭಾಗದಲ್ಲಿಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಷಯ. ಕನ್ನಡ ಸಾಹಿತ್ಯ ಪರಿಷತ್ತಿನತಾಲ್ಲೂಕುಅಧ್ಯಕ್ಷಜಿ.ಎನ್. ಕುಬೇರಗೌಡತಮಗಾದಅಡ್ಡಿ ಆತಂಕಗಳ ನೋವನ್ನು ವ್ಯಕ್ತಪಡಿಸಿಕೊಂಡಾಗ ಇದಕ್ಕೆ ಉತ್ತರಿಸಿದ ಶಾಸಕರು, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವಾಗಅಡ್ಡಿ ಆತಂಕಗಳು ಬರುತ್ತವೆ. ಇದನ್ನು ಮೀಟಿ ನಿಲ್ಲುವುದೆ ನಿಜವಾದಜೀವನ, ಈ ಅಡ್ಡಿ ಆತಂಕಗಳು ನಿಮಗೆ ಸೀಮಿತವಲ್ಲ, ರಾಜಕಾರಣಿಗಳಾದ ನಮಗೂ ಬಂದೇ ಬರುತ್ತದೆ. ಯಾವುದಕ್ಕೂಕಿವಿಗೊಡದೆಗ್ರಾಮೀಣ ಭಾಗದಲ್ಲಿಕನ್ನಡವನ್ನುಕಟ್ಟುವ ಕೆಲಸವನ್ನು ನಿಮ್ಮತಂಡದವರು ಮಾಡಿದ್ದೀರ, ನಮ್ಮ ಸಹಕಾರ ಸದಾಇರುತ್ತದೆಎಂದರು.
ಸಮ್ಮೇಳನದಅಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ,ಮಾವಿನ ಮಡಿಲಲ್ಲಿ ನನ್ನನ್ನು ಸರ್ವಾನುಮತದಿಂದಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಎಲ್ಲಾ ಮಹನೀಯರಿಗೆ ಧನ್ಯವಾದಗಳನ್ನು ತಿಳಿಸಿ, ತಾನು ಬೆಳೆದು ಬಂದದಾರಿಯಜೀವನವನ್ನು ಮೆಲುಕು ಹಾಕಿ ಈ ತಾಲ್ಲೂಕಿನ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಪರಿಸರ ಇವುಗಳ ಗತ ವೈಭವವನ್ನು ತಿಳಿಸಿ ಕ್ರಿ.ಶ. 780ರಲ್ಲಿ ತಾಲ್ಲೂಕಿನ ಅರಳಕುಂಟೆಯಲ್ಲಿ ಮನಸೂರ ಪ್ರಭುವಾದ ವಿದ್ಯಾದರರು, ಪಲ್ಲವರ ವಿರುದ್ದ ಹೋರಾಡಿ ವೀರ ಮರಣ ಹೊಂದಿದ ಹಿನ್ನೆಲೆ ಅನೇಕ ವರ್ಷಗಳ ಆಳ್ವಿಕೆಯ ದಿಗ್ವಿಜಯಗಳು, ಹೆಬ್ಬಟಗ್ರಾಮದಲ್ಲಿದೊರೆತಿರುವ ಶಾಸನವು ಗಂಗರ ಮನೆತನಕ್ಕೆ ಸೇರಿದ್ದು, ಗಂಗರ ಆಳ್ವಿಕೆಯ ಗತ ವೈಭವ ಮೆಲುಕು ಹಾಕಿ ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡಿರುವ ಹಿರಿಮೆಯನ್ನುಕೊಂಡಾಡಿದರು.
ತಾಲ್ಲೂಕಿನಲ್ಲಿ ಮೂಲಭೂತ ಸೌಕರ್ಯಗಳಿಗೆ ಜನಪ್ರತಿನಿದಿಗಳು ಹೆಚ್ಚು ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಪ್ರಾಥಮಿಕ ಶಿಕ್ಷಣದಿಂದ ದೂರ ಸರಿಯುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಕಡಿಮೆಯಾಗಿತ್ತಿರುವುದುಇದಕ್ಕೆ ಸಾಕ್ಷಿಯಾಗಿದೆ. ಪೋಷಕರು ಮತ್ತು ನಾವುಗಳು ಒಂದಲ್ಲಾಒಂದುರೀತಿಆಂಗ್ಲಭಾಷಾ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ಕನ್ನಡ ಮಾಧ್ಯಮದಲ್ಲಿವ್ಯಾಸಂಗ ಮಾಡಿದವರಿಗೆಕೇಂದ್ರ ಮತ್ತುರಾಜ್ಯ ಸರ್ಕಾರಗಳ ಉಧ್ಯೋಗಗಳಲ್ಲಿ ಹೆಚ್ಚು ಮೀಸಲಾಯಿತಿಯನ್ನು ನೀಡಿದರೆ ನಮ್ಮ ಮಾತೃ ಭಾಷೆಯಾದಕನ್ನಡವನ್ನು ಉಳಿಸಿ ಬೆಳೆಸಿದಂತಾಗುತ್ತದೆ. ನಾವೆಲ್ಲರೂಒಗ್ಗಟ್ಟಾಗಿಜಾತಿ ಬೇದತೊರೆದುರಾಜಕೀಯ ಭಿನಾಬಿಪ್ರಾಯಗಳನ್ನು ಬದಿಗೊತ್ತಿ, ಕನ್ನಡ ನಾಡಿನÀ ಕಲ್ಯಾಣಕ್ಕಾಗಿದುಡಿಯೋಣ, ಕನ್ನಡ ಭಾಷೆ ನೆಲ, ಜಲ, ಉಳಿಸೋಣ, ಕನ್ನಡತಾಯಿಯ ಭುವನೇಶ್ವರಿ ಈ ನಾಡಿನ ಶ್ರೇಯಸ್ಸಿಗೆ ಆಶೀರ್ವಾದ ಮಾಡಲಿ ಎಂದರು.
ತಾಲ್ಲೂಕುಅಧ್ಯಕ್ಷಜಿ.ಎನ್. ಕುಬೇರಗೌಡ ಮಾತನಾಡಿ, ಸತತ 4 ವರ್ಷಗಳಿಂದ ಸಮ್ಮೇಳನದ ಕಾರ್ಯಕ್ರಮಗಳು ಯಶಸ್ವಿಯ ಹಿಂದೆತನಗಾದ ಅನೇಕ ನೋವು ನಲಿವುಗಳು, ಅಡ್ಡಿ-ಆತಂಕಗಳ ಬಗ್ಗೆ ವೇದಿಕೆಯಲ್ಲಿ ಹಂಚಿಕೊಂಡು ಈ ಬಾರಿರೋಣೂರು ಭಾಗದಲ್ಲಿ ಸಮ್ಮೇಳನ ನಡೆಯುತ್ತಿರುವ ಬಗ್ಗೆ ಅನೇಕ ಸಮಸ್ಯೆಗಳನ್ನು ಎದುರಿಸಿಕೊಂಡು ಸಮ್ಮೇಳನ ಯಶಸ್ವಿಯಾಗಲು ಸಹಕರಿಸಿದ ತಾಲ್ಲೂಕಿನ ಶಾಸಕರು, ಕನ್ನಡ ಸಾಹಿತ್ಯ ಪರಿಷತ್ತಿನಜಿಲ್ಲಾಕಾರ್ಯಕಾರಿಣಿ ಸಮಿತಿಯ ಸಹಕಾರ, ಈ ಭಾಗದಜನ ಪ್ರತಿ ನಿದಿಗಳು, ಸಂಘ ಸಂಸ್ಥೆಗಳ ಸಹಕಾರವನ್ನು ಸ್ಮರಿಸಿ ನಿಸ್ವಾರ್ಥತೆಯಿಂದ ಸರ್ಕಾರಿ ಅಧಿಕಾರಿಗಳ ಬಳಿ ಕೈ ಚಾಚದೆ ಸಾಧಕ ಭಾಧಕಗಳ ತಮ್ಮತಂಡದಲ್ಲಿ ಚರ್ಚಿಸಿ ಕೆಲವು ದಾನಿಗಳ ಜೊತೆಗೆ ಶಿಕ್ಷಣ ಸಂಸ್ಥೆಗಳಿಂದ ಅಲ್ಪ ಸ್ವಲ್ಪ ನೆರವÀನ್ನು ಪಡೆದುಕೊಂಡು ಈ ಸಮ್ಮೇಳನವನ್ನು ಯಶಸ್ವಿ ಮಾಡುತ್ತಿದ್ದೇವೆ, ಕನ್ನಡ ಉಳಿವಿಗಾಗಿ ಗ್ರಾಮೀಣ ಪ್ರದೇಶದಲ್ಲಿಕನ್ನಡವನ್ನುಕಟ್ಟಲು ಹಗಲಿರುಳು ಶ್ರಮಿಸಿದ ತೃಪ್ತಿ ನನಗಿದೆಎಂದರು.
ಕಾರ್ಯಕ್ರಮದಲ್ಲಿ ಸಮ್ಮೇಳನದಅಧ್ಯಕ್ಷ ಕೆ.ವಿ. ನಾಗರಾಜ್ ಬರೆದಿರುವ “ಕಡಲಲ್ಲಿ” ಕವನ ಸಂಕಲನ ಬಿಡುಗಡೆ ಮಾಡಿದರು.
ಈ ಸಮಯದಲ್ಲಿಪಿ.ಇಲ್.ಡಿ. ಬ್ಯಾಂಕ್‍ಅಧ್ಯಕ್ಷಅಶೋಕ್, ಜಿಲ್ಲಾ ಪಂಚಾಯಿತಿ ಸದಸ್ಯಗೋವಿಂದಸ್ವಾಮಿ, ಕ.ಸ.ಪ. ಜಿಲ್ಲಾಅಧ್ಯಕ್ಷ ನಾಗನಂದಕೆಂಪರಾಜ್, ಬೈರವೇಶ್ವರ ವಿಧ್ಯಾನಿಕೇತನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಸಾಹಿತಿಆರ್. ಚೌಡರೆಡ್ಡಿ, ಮಾಜಿತಾ.ಪಂ ಸದಸ್ಯ ಕೆ.ಕೆ. ಮಂಜುನಾಥ್,ಮಾಜಿಗ್ರಾಮ ಪಂಚಾಯಿತಿಉಪಾಧ್ಯಕ್ಷಆರ್.ಎನ್. ಚಂದ್ರಶೇಕರ್, ರೋಣೂರು ಹೋಬಳಿ ಉಪ ತಹಸೀಲ್ದಾರ್ ಮುನಿವೆಂಕಟಪ್ಪ, ಸರ್ಕಾರಿ ನೌಕರರ ಸಂಘದಅಧ್ಯಕ್ಷ ಬಂಗವಾದಿ ನಾಗರಾಜ್, ನೌಕರರ ಸಂWದ ನಿರ್ದೇಶಕ ಬೈರೇಗೌಡ, ವೇಣು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಗೋಪಿ, ಶಿಕ್ಷಕ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಕಲಾ ಶಂಕರ್, ಮುರಳೀ ಬಾಬು,ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ವೆಂ.ಕ. ರವಿಕುಮಾರ್, ಗಾಂಡ್ಲಹಳ್ಳಿ ವೆಂಕಟಾಚಲಪತಿ, ರೈತ ಮುಖಂಡ ಬೈಚೇಗೌಡ, ಬೂರಗನಹಳ್ಳಿ ವೆಂಕಟಾಚಲಪತಿ, ತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತಿನ ಗೌ. ಕಾರ್ಯದರ್ಶಿ ಚಲಪತಿ, ಕೋಶೋಧ್ಯಕ್ಷೆ ಮಂಜುಳ, ಇತತೆ ಪದಾದಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

341 ವರ್ಷಗಳ ಹಿಂದೆ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿದ್ದ ಸಂತ ಜುಜೆ ವಾಜರ ವಾರ್ಷಿಕ ಹಬ್ಬ

JANANUDI.COM NETWORK


ಕುಂದಾಪುರ,ಜ.17: ಸುಮಾರು 341 ವರ್ಷಗಳ ಹಿಂದೆ ಗೋವಾ ಧರ್ಮಾಧ್ಯಕ್ಷರಿಂದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿ ಪ್ರಪ್ರಥಮವಾಗಿ ಒರ್ವ ಭಾರತೀಯ ಹಾಗೇ ಕೊಂಕಣಿಗನಾಗಿ ಒಂದು ಚರ್ಚಿನ ಪ್ರಧಾನ ಯಾಜಕರಾಗಿ, ಅದೂ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ದೊರಕಿಸಿಕೊಂಡರೆಂಬ ಹೆಮ್ಮೆಯುಳ್ಳ, ಸಂತ ಪದವಿಗೇರಿದವರಾದ, ಕುಂದಾಪುರ ವಲಯ ಧರ್ಮ ಸಭೆಯ ಪಾಲಕ ಸಂತ ಜೋಸೆಪ್ ವಾಜ್‍ರವರ ವಾರ್ಷಿಕ ಹಬ್ಬ ಭಾನುವಾರ (ಜ.17) ಸಂಜೆ ಜರುಗಿತು.
ಕುಂದಾಪುರಕ್ಕೆ ಆಗಮಿಸಿ, ಕುಂದಾಪುರ ಮತ್ತು ಆಸುಪಾಸಿನಲ್ಲಿ ಸೇವೆ ನೀಡಿದ ಮಹತ್ಮಾರು. ಸಂತ ಜುಜೆ ವಾಜ್ ಕುಂದಾಪುರದ ಅಂದಿನ ಚರ್ಚಿನ ತಮ್ಮ ಕೊಠಡಿಯಲ್ಲಿದ್ದು ದೇವರ ಜೊತೆ ಪ್ರಾರ್ಥನೆಯಲ್ಲಿ ತೊಡಗಿದಾಗ ಅವರು ಯಾವ ಆಧಾರವೂ ಇಲ್ಲದೆ ನೆಲದಿಂದ ಬಹಳ ಮೇಲಕ್ಕೆ ಗಾಳಿಯಲ್ಲಿ ತೂಗಾಡುತ್ತಾ ಇದದ್ದು, ಮತ್ತು ಆ ಕೊಠಡಿ ಪ್ರಕರ ಬೆಳಕಿನಲ್ಲಿ ಕೂಡಿದ್ದುದನ್ನು ಕಣ್ಣಾರೆ ಕಂಡ, ಇನ್ನೊಬ್ಬ ಅತಿಥಿ ಧರ್ಮಗುರುಗಳು ಈ ಘಟನೆ ಗೋವಾದ ಧರ್ಮಾಧ್ಯಕ್ಷರಿಗೆ ತಿಳಿಸಿದ್ದು ಒಂದು ಚಾರಿತ್ರಿಕ ವಿಷಯವಾಗಿದೆ. ಕುಂದಾಪುರ ಚರ್ಚ್ ದೇವರ ಮಹಿಮಾಭರಿತವಾದ ಪವಿತ್ರ ಸ್ಥಳವಾಗಿದೆಯೆಂಬ ಖ್ಯಾತಿ ಗಳಿಸಿದೆ. ಮುಂದೆ ಇದೆ ಸಂತ ಜುಜೆ ವಾಜರು ಶ್ರೀಲಂಕಾದಲ್ಲಿ ಯೇಸು ಕ್ರಿಸ್ತರ ಸೇವೆಯಲ್ಲಿ ತೊಡಗಿದಾಗ ಇನ್ನೂ ಹೆಚ್ಚೆಚ್ಚು ಅದ್ಬುತಗಳನ್ನು ಮಾಡಿ ಅವರು ಸಂತ ಪದವಿಯನ್ನು ಪಡೆದರು.
ಇವರ ಪುಣ್ಯ ಸ್ಮರಣೆಯ ಹಬ್ಬದ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದ ಒಮ್ಜೂರು ಚರ್ಚಿನ ಧರ್ಮಗುರುಗಳಾದ ವಂ|ಒಲ್ವಿನ್ ಡಿಕುನ್ಹಾ ‘ಸಂತ ಜುಜೆ ವಾಜರ ಜೀವನ ಚರಿತ್ರೆಯನ್ನು ವಿವರಿಸುತ್ತಾ, ಅವರು ಕುಂದಾಪುರಕ್ಕೆ ಬರುವಾಗ ಪರಿಸ್ಥಿತಿ ಬಹಳ ಕೆಟ್ಟದಿತ್ತು, ಆದರೂ ಕ್ರೈಸ್ತರ ಸಂದೇಶಗಳನ್ನು ಸಾರುತ್ತ ಕ್ರೈಸ್ತರ ಅನುಪಮ ಸೇವೆಯನ್ನು ಮಾಡಿದರು. ಯೇಸುವಿಗಾಗಿ, ಮುಂದೆ ಅವರು ಶ್ರೀಲಂಕಾದಲ್ಲಿ ತಮ್ಮ ಜೀವನವನ್ನೆ ಪಣಕಿಟ್ಟು, ಉಪವಾಸವಿದ್ದು, ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದರೂ ಅಲ್ಲಿ ತಮ್ಮ ಪ್ರವಚನಗಳಿಂದ,ಪವಾಡಗಳನ್ನು ಮಾಡಿ ಸಂತ ಪದವಿ ಗಳಿಸಿಕೊಂಡ ಜುಜೆವಾಜರು ಯೇಸುವಿನ ಸಂದೇಶದಂತೆ ಪರರಿಗೆ ಹೆಚ್ಚಾಗಿ ವಂಚೀತರಿಗೆ, ಕಷ್ಟಕ್ಕೆ ಒಳಗಾದವರಿಗೆ ದೀನ ದಲಿತರ ಧ್ವನಿಯಾಗೋಣ’ ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ಚರ್ಚ್ ಹಾಗೂ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಬಲಿದಾನದಲ್ಲಿ ಭಾಗಿಯಾಗಿ ಶುಭ ಕೋರಿದರು. ಅತಿಥಿ ಧರ್ಮಗುರುಗಳಾದ ತ್ರಾಸಿ ಡಾನ್ ಬಾಸ್ಕೊ ವಂ|ಫಾ| ಲೀಯೊ ಡಿಸೋಜಾ, ಕಟ್ಕರೆ ಬಾಲ ಯೇಸುವಿನ ಆಶ್ರಮದ ರೆಕ್ಟರ್ ವಂ| ಫಾ|ಒಲ್ವಿನ್ ಸಿಕ್ವೇರಾ, ವಂ| ಫಾ|ಚಾಲ್ರ್ಸ್ ನೊರೊನ್ಹಾ, ಕೋಟಾ ಚರ್ಚಿನ ವಂ| ಫಾ|ಆಲ್ಫೊನ್ಸ್ ಡಿಲೀಮಾ, ಪ್ರಾಂಶುಪಾಲ ವಂ| ಪ್ರವೀಣ್ ಅಮ್ರತ್ ಮಾರ್ಟಿಸ್, ಕುಂದಾಪುರ ಸಹಾಯಕ ಧರ್ಮಗುರು ವಂ|ಫಾ|ವಿಜಯ್ ಡಿಸೋಜಾ, ಈ ಉತ್ಸವದ ಬಲಿದಾನದಲ್ಲಿ ಪಾಲ್ಗೊಂಡರು. ಈ ಉತ್ಸವದಲ್ಲಿ ಹಲವಾರು ಧರ್ಮಗಿನಿಯರು, ಕುಂದಾಪುರ ವಲಯದ ಅನೇಕ ಚರ್ಚಗಳ ಭಕ್ತಾಧಿಗಳು ಪಾಲುಗೊಂಡಿದ್ದರು. ಕುಂದಾಪುರ ಚರ್ಚ್ 20 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವಂದಿಸಿದರು.

ಕಥೊಲಿಕ್ ಸಭಾದ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ, ಚಿಕಿತ್ಸೆ, ಆಯುರ್ವೇದ ಸೌಂದರ್ಯ ಮಾಹಿತಿ ಶಿಬಿರ

JANANUDI.COM NETWORK


ಕುಂದಾಪುರ,ಜ.17: ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಆಶ್ರಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ್, ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ವಿಭಾಗ ಉಡುಪಿ, ಇವರ ಸಂಯೋಕತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮತ್ತು ಆಯುರ್ವೇದ ಸೌಂದರ್ಯ ಮಾಹಿತಿ ಹಾಗೂ ತಪಾಸಣೆ ಶಿಬಿರವು ಭಾನುವಾರ (ಜ.17) ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂದಾಪುರ ವಲಯ ಪ್ರಧಾನ ಧರ್ಮಗುರು, ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ ‘ಭಾಹ್ಯ ಬೆಳಕು ಎಷ್ಟೊ ಮುಖ್ಯವೊ ಅಷ್ಟೆ ಅಂತರ್ಯದ ಬೆಳಕು ಅಷ್ಟೆ ಮುಖ್ಯ, ಸೌಂದರ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಅಂತರಾತ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ನೀವು ಸಮಾಜದ ಬೆಳಕಾಗಬೇಕು ಎಂದು ಯೇಸು ಸ್ವಾಮಿ ಹೇಳಿದ್ದು ನೆನಪಿಸಿಕೊಂಡು ನಾವು ಹಾಗೆ ನಡೆಯೋಣ, ಹಾಗೇಯೆ ಇಂತಹ ಶಿಬಿರಗಳಿಂದ ನಾವು ಆರೋಗ್ಯ ಭರಿತರಾಗಿ, ಸೌಂದರ್ಯ ಭರಿತರಾಗಿಯೂ ಇರಲು ಪ್ರಯತ್ನಿಸೋಣ. ಈ ಶಿಬಿರದಿಂದ ‘ಆರೋಗ್ಯ ದೀಪ ಎಲ್ಲರ ಮನೆಯಲ್ಲಿ ಬೆಳಗಲಿ’ಎಂದು ಅವರು ಹಾರೈಸಿದರು.
ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ಜಯಕರ ಶೆಟ್ಟಿ ‘ಕಥೊಲಿಕ್ ಸಭಾದ ಜೊತೆಗೆ ಹಲವಾರು ವರ್ಷಗಳಿಂದ ಹಲವಾರು ಜನ ಪರ ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದೆವೆ. ನಮ್ಮಿಂದ ಆಗುವ ಸಹಾಯವನ್ನು ಮಾಡುತ್ತೇವೆ. ಕನ್ನಡಕ ಅಗತ್ಯ ಇದ್ದವರಿಗೆ ರೆಡ್ ಕ್ರಾಸ್ ಸಂಸ್ಥೆ ಉಚಿತ ಕನ್ನಡಕಗಳನ್ನು ನೀಡುತ್ತದೆ’ ಎಂದು ಅವರು ಶುಭ ಹಾರೈಸಿದರು. ಪ್ರಸಾದ್ ನೇತ್ರಲಾಯದ ಡಾ|ಸುಧಾ ರಾಣಿ ಕಣ್ಣಿನ ರಕ್ಷಣೆ, ಚಿಕಿತ್ಸೆ, ಕಣ್ಣಿನ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಡಾ|ಸ್ವಾತಿ ಜಿ.ಶೇಟ್ ಆಯುರ್ವೇದದಿಂದ ಹೇಗೆ ಸೌಂದರ್ಯ ಹೆಚ್ಚಿಸಬಹುದು, ಕಣ್ಣಿನ ದ್ರಷ್ಟಿ ಹೆಚ್ಚಿಸಲು, ಕಣ್ಣು ಆರೋಗ್ಯದಿಂದಿರಲು ಅಕ್ಶಿತರ್ಪಣ, ಕೂದಲಿನ ಅಭ್ಯಂಜನದ ಬಗ್ಗೆ ವಿವರಿಸಿ ಚಿಕಿತ್ಸಾ ಪ್ರಾತ್ಯಾಕ್ಷಿಕೆ ಮೂಲಕ ಮಾಡಿತೋರಿಸಿದರು. ಪ್ರಸಾದ್ ನೇತ್ರಾಲಯದ ವೈದ್ಯಕೀಯ ತಂಡ ಕಣ್ಣುಗಳ ತಪಾಸಣೆ ಮಾಡಿತು.
ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ ಅಧ್ಯಕ್ಷಿಯ ಭಾಷಣದಲ್ಲಿ ‘ಕಥೊಲಿಕ್ ಸಭಾ 30 ವರ್ಷಗಳಿಂದ ಜನ ಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿವೆ ಈ ಶಿಬಿರದಲ್ಲಿ ಹಲವಾರು ಜನರು ಪ್ರಯೋಜನ ಪಡೆಯುವಂತಾಗಿದ್ದು, ಇದು ಮುಂದಕ್ಕೂ ಮುಂದುವರೆಯಲಿದೆ’ ಎಂದರು.
ವೇದಿಕೆಯಲ್ಲಿ ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹೇರಿಕ್ ಗೊನ್ಸಾಲ್ವಿಸ್, ನಿಯೋಜಿತ ಅಧ್ಯಕ್ಷೆ ಶಾಂತಿ ಪಿರೇರಾ, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರದ ಸಂಚಾಲಕರಾದ ಡಾ|ಸೋನಿ ಡಿಕೋಸ್ತಾ ಪ್ರಸ್ತಾವಿಸಿ ಸ್ವಾಗತಿಸಿದರು. ಕ. ಸ. ಕುಂ. ವ. ಸಮಿತಿ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು, ಸರಕಾರಿ ಸವಲತ್ತು ಸಂಚಾಲಕ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.

ಫೆಬ್ರವರಿ ಮೊದಲವಾರ ಕೋಲಾರ ಜಿಲ್ಲಾಮಟ್ಟದ ನೌಕರರ ಕ್ರೀಡಾಕೂಟ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನೌಕರರೂ ಪಾಲ್ಗೊಳ್ಳಿ-ಸತ್ಯಭಾಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಫೆಬ್ರವರಿ ಮೊದಲವಾರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನೌಕರರೂ ಭಾಗವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
2 ದಿನ ನಡೆಯುವ ಕ್ರೀಡಾ ಮತ್ತು ಸಾಂಸ್ಕøತಿಕ ಸ್ವರ್ಧೆಗಳಲ್ಲಿ ಮಹಿಳಾನೌಕರರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದ ಅವರು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನೌಕರರು, ಶಿಕ್ಷಕರಿಗೆ ಆಯಾ ಇಲಾಖೆಯ ಮೇಲಾಧಿಕಾರಿಗಳು ಅನ್ಯಕಾರ್ಯನಿಮಿತ್ತ ಒಒಡಿ ನೀಡಿ ಕಳುಹಿಸಿಕೊಡಲು ಸೂಚಿಸಿದರು.
ಡಿಸಿಅವರಿಂದಲೇ
ಬಹುಮಾನ ಕೊಡುಗೆ
ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ವರ್ಧೆಗಳಲ್ಲಿ ವಿಜೇತರಾದ ನೌಕರರಿಗೆ ನೀಡುವ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ತಾವೇ ಕೊಡುಗೆಯಾಗಿ ನೀಡುವುದಾಗಿ ಡಿಸಿಯವರು ತಿಳಿಸಿದ್ದು ವಿಶೇಷವಾಗಿತ್ತು.
ಕ್ರೀಡಾಕೂಟ ನಡೆಸಲು ಜಿಪಂನಿಂದ 5 ಲಕ್ಷ ರೂ ನೀಡಲು ಸಲಹೆ ನೀಡಿದ ಡಿಸಿಯವರು, ಕ್ರೀಡಾಳು ನೌಕರರಿಗೆ ಕ್ಯಾಪ್, ಟೀ-ಶರ್ಟ್ ನೀಡಲು ತಿಳಿಸಿದರಲ್ಲದೇ ಈ ಎರಡು ದಿನ ನೌಕರರು ಉತ್ಸಾಹದಿಂದ ಪಾಲ್ಗೊಂಡು ಆನಂದ ಅನುಭವಿಸಿರಿ ಎಂದರು.
ಕ್ರೀಡಾಕೂಟದ ಯಶಸ್ಸಿಗೆ ಎಲ್ಲಾ ಇಲಾಖೆಗಳು ಸ್ಪಂದಿಸಲು ಸೂಚಿಸಿದ ಅವರು, ನಗರಸಭೆ ವತಿಯಿಂದ ಪೆಂಡಾಲ್, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಚತಾ ಕಾರ್ಯ ನಡೆಸಿಕೊಡಲು ತಿಳಿಸಿದರು.
ಸಾಂಸ್ಕøತಿಕ ಸ್ವರ್ಧೆಗಳು ನಡೆಯುವ ರಂಗಮಂದಿರದಲ್ಲಿ ಅಗತ್ಯ ಪ್ರಮಾಣದಲ್ಲಿ ಧ್ವನಿವರ್ಧಕಗಳು, ಲೈಟಿಂಗ್ ವ್ಯವಸ್ಥೆ ಮಾಡಿಕೊಡಿ ಎಂದು ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಡಿಸಿ ಸೂಚನೆ ನೀಡಿದರು.
ಜಿಲ್ಲಾ ಯುವಜನಸೇವಾ ಮತ್ತು ಕ್ರೀಡಾಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್, ಕ್ರೀಡಾಕೂಟ ನಡೆಸಲು ಅಗತ್ಯವಾದ ಸಿದ್ದತೆಗಳನ್ನು ಇಲಾಖೆಯಿಂದ ಮಾಡುವುದಾಗಿಯೂ ಮತ್ತು ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವುದಾಗಿ ತಿಳಿಸಿದರು.

ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ನೌಕರರ ಸಂಘದಿಂದ ಎರಡು ದಿನಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ, ಶುದ್ದ ಕುಡಿಯುವ ನೀರು ಒದಗಿಸಲಾಗುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಎಲ್ಲಾ ಇಲಾಖೆಗಳ ವೃಂದ ಸಂಘಗಳ ಮೂಲಕ ಮನವಿ ಮಾಡುವುದಾಗಿ ತಿಳಿಸಿದ ಅವರು, ದೈಹಿಕ ಶಿಕ್ಷಕರನ್ನು ಕ್ರೀಡಾಕೂಟಕ್ಕೆ ನಿಯೋಜಿಸಿ ಯಶಸ್ವಿಗೊಳಿಸಲು ಡಿಡಿಪಿಐ ಅವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ನಗರಸಭೆ ಆಯುಕ್ತ ಶ್ರೀಕಾಂತ್, ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ಜಿಲ್ಲಾ ದೈಹಿಕ ಶಿಕ್ಷಕ ಅಧೀಕ್ಷಕ ಮಂಜುನಾಥ್, ನೌಕರರ ಸಂಘದ ಪದಾಧಿಕಾರಿಗಳಾದ ಎಸ್.ಚೌಡಪ್ಪ, ಕೆ.ಬಿ.ಅಶೋಕ್, ವಿಜಯ್, ನೌಕರರ ಕ್ರೀಡಾ,ಸಾಂಸ್ಕøತಿಕ ಸಂಘದ ಅಧ್ಯಕ್ಷ ಎಂ.ನಾಗರಾಜ್, ಕಾರ್ಯದರ್ಶಿ ಇಂಚರ ನಾರಾಯಣಸ್ವಾಮಿ, ಸಂಘದ ಪ್ರತಿನಿಧಿಗಳಾದ ಕವಿತಾ, ಸುನಂದಮ್ಮ, ಗೌತಮ, ಆರ್.ನಾಗರಾಜ್ ಮತ್ತಿತರರಿದ್ದರು.

ಶ್ರೀನಿವಾಸಪುರದಲ್ಲಿ ನಡೆಯಲಿರುವ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯ ಅಧ್ಯಕ್ಷರಾಗಿ : ಕನ್ನಡ ಉಪನ್ಯಾಸಕ ಅನೀಫ್ ಸಾಬ್ ಎಸ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜ.15: ಶ್ರೀನಿವಾಸಪುರದಲ್ಲಿ ನಡೆಯಲಿರುವ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯ ಅಧ್ಯಕ್ಷರಾಗಿ ಕನ್ನಡ ಉಪನ್ಯಾಸಕ ಅನೀಫ್ ಸಾಬ್ ಎಸ್ ರವರು ಆಯ್ಕೆಯಾಗಿದ್ದಾರೆ.
ಇವರು ಶ್ರೀನಿವಾಸಪುರ ತಾಲೂಕಿನ ಯಲ್ದೂರು ಹೋಬಳಿಯ ಮುತ್ತಕಪಲ್ಲಿ ಗ್ರಾಮದ ಸಾಬುಸಾಬ್ ಹಾಗೂ ಅಫ್‍ಶಾದ್ ಬೇಗಂ ರವರ ಮಗನಾಗಿ ಜನಿಸಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಹಲವಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕವಿಯಾಗಿ, ಲೇಖಕರಾಗಿ ಕನ್ನಡ ಶ್ರೀಮಂತಿಕೆಯನ್ನು ಹೆಚ್ಚಿಸಿರುತ್ತಾರೆ.
ಜೊತೆಗೆ ಕರ್ನಾಟಕದ ರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾ ಮಟ್ಟದ ಗುರು ಶ್ರೇಷ್ಠ ಪ್ರಶಸ್ತಿಯನ್ನು ಪಡೆದ್ದಿದ್ದಾರೆ. ಇವರು ಸಾಹಿತ್ಯಸಕ್ತರಾಗಿ ರಾಜ್ಯಮಟ್ಟದ ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ಇದು ತಾಲೂಕಿನ ಹೆಮ್ಮೆಯ ವಿಷಯವಾಗಿದೆ.

ನಿರಂತರ್ ಉದ್ಯಾವರ ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಪುನರಾಯ್ಕೆ

JANANUDI.COM NETWORK

ಉಡುಪಿ : ಕೊಂಕಣಿ, ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 3 ವರ್ಷಗಳ ಹಿಂದೆ ಆರಂಭವಾದ ನಿರಂತರ್ ಉದ್ಯಾವರ ಸಂಸ್ಥೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಟೀವನ್ ಕುಲಾಸೊ ವಹಿಸಿದ್ದರು.

ಕಾರ್ಯದರ್ಶಿ ಮೈಕಲ್ ಡಿಸೋಜ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ರೋಷನ್ ಕ್ರಾಸ್ತ ವಾರ್ಷಿಕ ಲೆಕ್ಕಪತ್ರ ಸಭೆಗೆ ತಿಳಿಸಿದರು.

ಬಳಿಕ ನೂತನ ಕಾರ್ಯಕಾರಿ ಸಮಿತಿಯ ಚುನಾವಣೆ ನಡೆಯಿತು. 2021ನೇ ಸಾಲಿನ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ಪುನರಾಯ್ಕೆಯಾದರೆ, ಕಾರ್ಯದರ್ಶಿಯಾಗಿ ಒಲಿವಿರಾ ಮತಾಯಸ್, ಕೋಶಾಧಿಕಾರಿಯಾಗಿ ರೋಶನ್ ಕ್ರಾಸ್ತಾ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುನೀಲ್ ಡಿಸೋಜ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜುಲಿಯಾ ಡಿಸೋಜಾ, ಮಾಧ್ಯಮ ಕಾರ್ಯದರ್ಶಿಯಾಗಿ ಅನಿಲ್ ಡಿಸೋಜಾ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೈಕಲ್ ಡಿಸೋಜ, ರೊನಾಲ್ಡ್ ಡಿಸೋಜ, ಸವಿತಾ ಡಿಸೋಜಾ, ಜುಡಿತ್ ಪಿರೇರಾ, ಸಿಂಥಿಯಾ ಮೆಂಡೋನ್ಸ, ರೋಶನ್ ಡಿಸೋಜಾ ಆಯ್ಕೆಯಾದರೆ, ಗೌರವ ಸದಸ್ಯರಾಗಿ ಆಲ್ವಿನ್ ಡಿಸೋಜಾ, ತಿಯಾದೊರ್ ಪಿರೇರಾ, ವಿಕ್ಟರ್ ಮಥಾಯಸ್ ಆಯ್ಕೆಯಾಗಿದ್ದಾರೆ.

ನೌಕರರ ಸಂಘದ ಅಧ್ಯಕ್ಷ ಸುರೇಶ್‍ಬಾಬು ಮನವಿಗೆ ಸ್ಪಂದನೆ ನೌಕರರ ಭವನಕ್ಕೆ ಜಮೀನು ಗುರ್ತಿಸಲು ತಹಸೀಲ್ದಾರ್‍ಗೆ ಡಿಸಿ ಸೂಚನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಮುದಾಯ ಭವನ, ಆಟದ ಮೈದಾನ, ಸಾಂಸ್ಕøತಿಕ ಚಟುವಟಿಕೆಗಳಿಗಾಗಿ ಜಮೀನು ಮಂಜೂರು ಮಾಡುವಂತೆ ಕೋರಿದ ನೌಕರರ ಸಂಘದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕೂಡಲೇ ಜಮೀನು ಗುರುತಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಜಿ.ಸುರೇಶ್‍ಬಾಬು ಮತ್ತಿತರರಿದ್ದ ತಂಡವನ್ನು ಅಭಿನಂದಿಸಿದ ಅವರು, ಸರ್ಕಾರದ ಯೋಜನೆಗಳ ಅನುಷ್ಟಾನದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುವಂತೆ ಕೋರಿದರು.
ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಮನವಿಮಾಡಿ, ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚುನೌಖರರರಿದ್ದು, ಒಂದು ಉತ್ತಮವಾದ ಭವನ ಇಲ್ಲವಾಗಿದೆ, ಕ್ರೀಡಾ ಚಟುವಟಿಕೆಗಳಿಗೆ ಮೈದಾನವಿಲ್ಲ ಎಂದು ತಿಳಿಸಿ ನಗರದ ಸುತ್ತ ಎಲ್ಲಾದರು 5 ಎಕರೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಡಿಸಿಯವರು ಕೂಡಲೇ ತಹಸೀಲ್ದಾರ್‍ಅವರಿಗೆ ಸೂಚನೆ ನೀಡಿ ಜಮೀನು ಗುರುತಿಸಿಕೊಡುವಂತೆ ಸೂಚಿಸಿದರು.
ರಾಜ್ಯ ನೌಕರರ ಸಂಘದ ಕೋರಿಕೆಯಂತೆ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಜಮೀನು ಗುರ್ತಿಸಿ ಭೂಮಂಜೂರಾತಿ ನಿಯಮಗಳಂತೆ ಕಡತವನ್ನು ತಯಾರಿಸಿ ವಿಭಾಗಾಧಿಕಾರಿಗಳಿಗೆ ಸಲ್ಲಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳಿಗೆ ಧನ್ಯವಾದ ತಿಳಿಸಿದ ಸುರೇಶ್‍ಬಾಬು, ಅದೇ ರೀತಿ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ನೌಕರರ ಸಮಸ್ಯೆ ಪರಿಹಾರಕ್ಕೆ ಜಂಟಿ ಸಮಾಲೋಚನಾ ಸಮಿತಿ ರಚನೆಗೆ ಒತ್ತಡ ಹಾಕುವುದಾಗಿ ತಿಳಿಸಿದ ಅವರು, ಈ ಸಮಿತಿಯಲ್ಲಿ ಡಿಸಿ,ಎಸ್ಪಿ, ಜಿಪಂ ಸಿಇಒ ಮತ್ತಿತರರಿದ್ದು, ನೌಕರರ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಸಿಗುವಂತೆ ಮಾಡುವುದಾಗಿ ನುಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ನೌಕರರು ಎದುರುಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಯಿತು.
ಈ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕಾರಿಗಳಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ರವಿಚಂದ್ರ, ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌತಮ್, ನಂದೀಶ್, ರತ್ನಪ್ಪ,ವಿಜಯ್, ಕೋರ್ಟ್ ಮುನಿಯಪ್ಪ,ಚಂದ್ರಕಲಾ, ಶ್ರೀರಾಮ್, ಅನಿಲ್‍ಕುಮಾರ್, ರವಿ, ಕೆಜಿಐಡಿ ಮುರಳಿ,ಹರೀಶ್ ಮತ್ತಿತರರು ಹಾಜರಿದ್ದರು.

ಕೃಷಿಕರು ಗಿಡ ಬೆಳೆಸುವುದರ ಮೂಲಕ ತಮ್ಮ ಆರ್ಥಿಕ ಮಟ್ಟ ಉತ್ತಮ ಪಡಿಸಿಕೊಳ್ಳಬೇಕು : ಕೆ.ಬಿ.ಬಾಲಚಂದ್ರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೃಷಿಕರು ಗಿಡ ಬೆಳೆಸುವುದರ ಮೂಲಕ ತಮ್ಮ ಆರ್ಥಿಕ ಮಟ್ಟ ಉತ್ತಮ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಕೆ.ಬಿ.ಬಾಲಚಂದ್ರ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಹಳ್ಳಿ ಹಾಡು ಸಾಂಸ್ಕøತಿಕ ಜಾನಪದ ಕಲಾ ಸಂಘದ ಕಲಾವಿದರು ರೈತರಿಗೆ ಅರಿವು ಕಾರ್ಯಕ್ರಮದಡಿ ಬುಧವಾರ ಪ್ರದರ್ಶಿಸಿದ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿ, ನರೇಗಾ ಯೋಜನೆಯಡಿ ಗಿಡ ಬೆಳೆಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಶ್ರೀಗಂಧ, ರಕ್ತಚಂದನ, ಹಲಸು, ಹೆಬ್ಬೇವು ಮತ್ತಿತರ ಮರಗಳನ್ನು ಬೆಳೆಸಲು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು. ಎಕರೆಯೊಂದರಲ್ಲಿ 160 ರಿಂದ 200 ಮರಗಳನ್ನು ಬೆಳೆಸಬಹುದಾಗಿದ್ದು, ಗಿಡಗಳನ್ನು ಅಭಿವೃದ್ಧಿ ಪಡಿಸಲು ತಲಾ ರೂ.80 ನೀಡಲಾಗುವುದು. ನರೇಗಾ ಯೋಜನೆ ಅಡಿಯಲ್ಲಿ ಜಾಬ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಮಳೆ ಕೊರತೆ ಎದುರಿಸುತ್ತಿರುವ ರೈತರು, ಮರ ಬೆಳೆಸಲು ಮುಂದಾಗಬೇಕು. ವಿವಿಧ ಜಾತಿಯ ಮರಗಳನ್ನು ಬೆಳೆಸುವುದರಿಂದ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಡಿಇಒ ರಾಜೇಶ್, ಮನೋಜ್ ಇದ್ದರು.