HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರದಲ್ಲಿ ದಲಿತ ಹಕ್ಕುಗಳ ಹೋರಾಟ ಸಮಿತಿ ; ಕೋವಿಡ್ ಪರಿಹಾರಕ್ಕಾಗಿ ಪತ್ರ ಚಳುವಳಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಶನಿವಾರ ತಾಲ್ಲೂಕು ದಲಿತ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಕೋವಿಡ್ ಪರಿಹಾರಕ್ಕಾಗಿ ಪತ್ರ ಚಳುವಳಿ ಆರಂಭಿಸಲಾಯಿತು. ಮುಖಂಡರಾದ ವೆಂಕಟೇಶ್, ಮಂಜುನಾಥ್, ಮಂಜುಳ, ಆಂಜಿಲಪ್ಪ ಇದ್ದರು.

ಮಾವಿನ ವರ್ತಕರು ಹಾಗೂ ಮಂಡಿ ಮಾಲೀಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ; ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಾವಿನ ವಹಿವಾಟು ಮಾಡುವ ವರ್ತಕರು ಹಾಗೂ ಮಂಡಿ ಮಾಲೀಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ಪಟ್ಟಣದ ಎಪಿಎಂಸಿ ಮಾರುಟ್ಟೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾವು ವರ್ತಕರ ಸಭೆಯಲ್ಲಿ ಮಾತನಾಡಿದ ಅವರು, ವರ್ತಕರು ಕಡ್ಡಾಯವಾಗಿ ಪರವಾನಗಿ ನವೀಕರಿಸಿಕೊಳ್ಳಬೇಕು. ಪ್ರಾಂಗಣದಲ್ಲಿ ಸ್ವಚ್ಛತೆ ಕಾಪಾಡಬೇಕು. ವರ್ತಕರು ಹಾಗೂ ಮಂಡಿ ಕಾರ್ಮಿಕರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಸದೃಢ ಕೂಲಿಕಾರರನ್ನು ಮಾತ್ರ ಮಾವಿನ ಮಂಡಿಗಳಲ್ಲಿ ನೇಮಿಸಿಕೊಳ್ಳಬೇಕು. 18 ವರ್ಷಕ್ಕಿಂತ ಕೆಳಗಿನ ಹಾಗೂ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳನ್ನು ನೇಮಿಸಿಕೊಳ್ಳಬಾರದು. ವರ್ತಕರು ಮತ್ತು ಕೂಲಿಕಾರರ ಪೂರ್ಣ ಮಾಹಿತಿಯನ್ನು ಹಾಜರಾತಿ ಪುಸ್ತಕದಲ್ಲಿ ನಮೂದಿಸಬೇಕು. ಅವರಿಗೆ ದಿನಕ್ಕೆ ಎರಡು ಬಾರಿ ಆಮ್ಲಜನಕದ ಮಟ್ಟ ಹಾಗೂ ದೇಹದ ಉಷ್ಣಾಂಶ ಪರೀಕ್ಷೆ ಮಾಡಿ ನಮೂದಿಸಬೇಕು ಎಂದು ಸೂಚಿಸಿದರು.
ಮಾವಿನ ಮಂಡಿಗಳಲ್ಲಿ ಆದಷ್ಟೂ ಕಡಿಮೆ ಸಿಬ್ಬಂದಿ ಇರಬೇಕು ಹಾಗೂ ಅವರು ಆರೋಗ್ಯವಂತರಾಗಿರಬೇಕು. ಅವರಿಗೆ ಪೊಲೀಸ್ ಇಲಾಖೆ ವತಿಯಿಂದ ಭಾವ ಚಿತ್ರವಿರುವ ದೃಢೀಕೃತ ಗುರುತಿನ ಚೀಟಿ ಪಡೆದು ವಿತರಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಜಿಲ್ಲಾ ತೊಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಗಾಯತ್ರಿ, ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಡಿ.ಶೇಖರರೆಡ್ಡಿ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪೊಲೀಸ್ ಇನ್ಸ್‍ಪೆಕ್ಟರ್ ಸಿ.ರವಿಕುಮಾರ್, ಎಪಿಎಂಸಿ ಅಧ್ಯಕ್ಷ ಜಿ.ಕೆ.ರಾಜಣ್ಣ, ಕಾರ್ಯದರ್ಶಿ ವೇಣು, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ನಾಗೇಶ್ ಇದ್ದರು.
ಭೇಟಿ: ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ವ್ಯವಸ್ಥೆಯನ್ನು ಪರಿಶೀಲಿಸಿದರು
.

ಶೇ.343 ಅಕ್ರಮ ಆಸ್ತಿ ಮೇಲ್ನೋಟಕ್ಕೆ ಸಾಬೀತು ;ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಅಮಾನತು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎನ್.ವಿಜಯಕುಮಾರ್ ಆದಾಯಕ್ಕಿಂತಲೂ 343 ಪಟ್ಟು ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿದೆ.
ಡಾ.ವಿಜಯಕುಮಾರ್ ಆದಾಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಆಕ್ರಮ ಆಸ್ತಿಯನ್ನು ಹೊಂದಿದ್ದಾರೆಂಬ ಬಗ್ಗೆ ಭ್ರಷ್ಟಾಚಾರ ನಿಗ್ರಹದಳದಲ್ಲಿ, ದೂರು ದಾಖಲಾಗಿತ್ತು. ತನಿಖೆಯಲ್ಲಿ ವೈದ್ಯಾ„ಕಾರಿಯು 1.79 ಕೋಟಿ ಆದಾಯವನ್ನು ಹೊಂದಿದ್ದು, 1.26 ಕೋಟಿ ಖರ್ಚನ್ನು ತೋರಿಸಿದ್ದರು. ಆದರೆ, ಒಟ್ಟು ಆಸ್ತಿಯಮೌಲ್ಯ 6.69 ಕೋಟಿ ರೂಗಳಾಗಿತ್ತು. ಇದು ಆದಾಯಕ್ಕಿಂತಲೂ ಶೇ.343 ರಷ್ಟು ಹೆಚ್ಚಿನ ಅಕ್ರಮ ಆಸ್ತಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.
ಇವರನ್ನು ಈಗಿರುವ ಹುದ್ದೆಯಲ್ಲೇ ಮುಂದುವರೆಸಿದರೆ ಸಾಕ್ಷ್ಯಾಧಾರಗಳನ್ನುನಾಶಪಡಿಸುವ, ತಿರುಚುವ ಸಾಧ್ಯತೆಗಳು ಇರುವುದರಿಂದ ಇವರ ಸೇವೆಯನ್ನು ಅಮಾನತ್ತುಪಡಿಸಿ ಲೀನ್ ಬದಲಾವಣೆ ಮಾಡಿ ಇಲಾಖಾ ವಿಚಾರಣೆ ಕೈಗೊಳ್ಳುವಂತೆ ಸರಕಾರ ತೀರ್ಮಾನಿಸಿ ಆದೇಶಿಸಿದೆ.
ಅಮಾನತ್ತು ಅವ„ಯಲ್ಲಿ ಡಾ.ವಿಜಯಕುಮಾರ್ ವಿರುದ್ಧ ಶಿಸ್ತುಕ್ರಮ, ಕ್ರಿಮಿನಲ್ ಪ್ರಕರಣ ಬಾಕಿ ಇರಿಸಿದ್ದು, ಇವರಿಗೆ ರಾಮನಗರ ಜಿಲ್ಲಾಸ್ಪತ್ರೆ ಇಲ್ಲಿ ಖಾಲಿ ಇರುವ ವೈದ್ಯಾ„ಕಾರಿ ಹುದ್ದೆಯಲ್ಲಿ ಲೀನ್ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅ„ೀನ ಕಾರ್ಯದರ್ಶಿ ಎಂ.ಕುಮಾರಸ್ವಾಮಿ ರಾಜ್ಯಪಾಲರ ಆದೇಶಾನುಸಾರ ಆದೇಶ ಹೊರಡಿಸಿದ್ದಾರೆ
.

ವಿಲ್ಫಿ ರೆಬಿಂಬಸಾಚ್ಯಾ ’ಮೂಗುತಿ’ ಕಥೆಚೆರ್ ಅಧ್ಯಯನ್ – विलफी रेबिंबसाच्या ’मूगुती’ कथेचेर अध्ययन

JANANUDI.COM NETWORK

ವಿಲ್ಫಿ ರೆಬಿಂಬಸಾಚ್ಯಾ ’ಮೂಗುತಿ’ ಕಥೆಚೆರ್ ಅಧ್ಯಯನ್

15 ಮಾಯ್ 2021: ಆಶಾವಾದಿ ಪ್ರಕಾಶನ್, ಅಖಿಲ್ ಭಾರತೀಯ್ ಕೊಂಕಣಿ ಪರಿಶದ್ ಆನಿ ಉಜ್ವಾಡ್ ಪಂದ್ರಾಳೆ ಹಾಂಚ್ಯಾ ಜೋಡ್ ಪಾಲವಾಂತ್ ಚಲ್‌ಲ್ಲ್ಯಾ ಕಥಾಪಾಠ್ ದುಸ್ರ್ಯಾ ಶಿಂಕಳೆಂತ್, ವಿಲ್ಫಿ ರೆಬಿಂಬಸಾನ್ 1970-ವ್ಯಾ ದಾಕ್ಡ್ಯಾಂತ್ ಬರಯಿಲ್ಲ್ಯಾ ’ಮೂಗುತಿ’ ಕಥೆಚೆರ್ ಅಧ್ಯಯನ್, ಪಯ್ಣಾರಿ ಸಂಪಾದಕ್ ವಲ್ಲಿ ಕ್ವಾಡ್ರಸಾನ್ ಚಲವ್ನ್ ವೆಲೆಂ. ಮಂಗ್ಳುರ್, ಗೊಂಯ್ ಕೊಲೆಜಿಂನಿ ಶಿಕ್ಚಿಂ ವಿಧ್ಯಾರ್ಥಿಂ, ಪ್ರಾಧ್ಯಾಪಕ್, ತಶೆಂಚ್ ಹೆರ್ ಪ್ರಾಂತ್ಯಾಥಾವ್ನ್ ಸಾಹಿತಿಕ್ ಅಭಿರುಚ್ ಆಸ್ಚ್ಯಾಂನಿ ಹಾಜರ್ ಆಸ್‌ಲ್ಲ್ಯಾ ಹ್ಯಾ ವೆಬಿನಾರಾಚಿ ಸುರ‍್ವಾತ್ ಬಾಯ್ ಸಿಯಾಲಿನಿ ಫೆರ್ನಾಂಡಿಸ್ ಗೊಂಯ್ ಹಿಣೆಂ ಜೆರಾಲ್ ಯೆವ್ಕಾರ್ ಮಾಗುನ್, ಹ್ಯಾ ಕಥಾಪಾಠಾಚ್ಯಾ ಮಿಸಾಂವಾವಿಶಿಂ ಮಟ್ವೊ ವಿವರ್ ದಿಲೊ. ಉಜ್ವಾಡ್ ಪಂದ್ರಾಳ್ಯಾಚೊ ಸಂಪಾದಕ್ ಮಾ|ರೋಯ್ಸನ್ ಫೆರ್ನಾಂಡಿಸಾನ್ ಯೆವ್ಕಾರ್ ಕೆಲೊ.

ವಲ್ಲಿ ಕ್ವಾಡ್ರಸಾನ್ 1970ವ್ಯಾ ಕಾಳಾರ್ ಕಥೆಚಿ ಪಾಠ್‌ಭುಂಯ್‌ಚೆರ್ ವಿವರ್ ದಿವುನ್ ಮುಂಬಯ್ ಅಂಡರ್‌ವರ್ಲ್ಡ್ ಮಾಫಿಯಾ, ಆನಿ ತವಳ್ಚಿ ದೇಶಾಚಿ, ರಾಜ್ಯಾಚಿ ತಶೆಂಚ್ ಮಂಗ್ಳುರ‍್ಚಿ ಆರ್ಥಿಕ್, ಸಾಮಾಜಿಕ್ ಪರಿಗತ್ ಕಸಲಿ ಆಸ್ಲಿ ಮ್ಹಳ್ಳ್ಯಾಚೆರ್ ಮಟ್ವೊ ವಿವರ್ ದಿತಚ್, ಕಥೆಚ್ಯಾ ಪಾಂಚ್ ಅಂಶಾಂಚೊ ಉಲ್ಲೇಕ್ ಕರುನ್, ’ಮೂಗುತಿ’ ಕಥೆಚೆರ್ ಖೊಲಾಯೆನ್ ವಿಶ್ಲೇಷಣ್ ಕೆಲೆಂ.

ಬಾಯ್ ಯೋಗಿತಾ ವೆರ್ಣೇಕರ್ ಹಿಣೆಂ ಅಪ್ಲ್ಯಾ ಸಮೀಕ್ಶೆಂತ್ ’ಮೂಗುತಿ’ ಕಥಾ ತಶೆಂಚ್ ತ್ಯಾ ಕಥೆಚ್ಯಾ ಪಾಠ್‌ಭುಂಯ್‌ಚ್ಯಾ ಸವಿಸ್ತಾರ್ ವಿವರಣಾಚಿ ಥೊಕ್ಣಾಯ್ ಕರುನ್ ಮಂಗ್ಳುರಾಂತ್ ಕಥಾಕಾರ್ ಫಕತ್ ದಾದ್ಲೊ/ಬಾಯ್ಲ್ ವಿಶ್ಯಾಂಚೆರ್ ಉರಾನಾಸ್ತಾಂ ವೆಗ್-ವೆಗಳ್ಯಾ ವಿಶ್ಯಾಂಚೆರ್ ಕಥಾ ಬರಯ್ತಾತ್ ಮ್ಹಣಾಲಿ. ದುಸ್ರಿ ಸಮೀಕ್ಶಕಿ ಬಾಯ್ ಕೊನ್ಸೆಪ್ಟಾ ಫೆರ್ನಾಂಡಿಸ್ ಆಳ್ವಾನ್ ಏಕ್ ವಾಚ್ಪಿ ಜಾವ್ನ್ ಅಪ್ಣಾಕ್ ಮೂಗುತಿ ಕಥಾ ಕಶಿ ಲಾಗ್ತಾ ಆನಿ ಸಾಮಾಜಿಕ್ ನದ್ರೆನ್ ಹಿ ಕಥಾ ತ್ಯಾ ಕಾಳಾರ್ ತಶೆಂಚ್ ಆಯ್ಚ್ಯಾ ಕಾಳಾರ್ ಸಮ್ಜುಂಕ್ ಕಿತ್ಲಿ ಮಹತ್ವಾಚಿ ಮ್ಹಣಾಲಿ.

ದೊ|ಆಸ್ಟಿನ್ ಡಿ’ಸೋಜ್ ಪ್ರಭು, ಬಾಯ್ ಫ್ಲೋರಿನ್ ಕ್ಯಾಸ್ತಲಿನೊನ್ ಕಥಾಪಾಠಾಂತ್ ಚಲ್‌ಲ್ಲ್ಯಾ ವಿಶ್ಲೇಷಣಾವಿಶಿಂ ದಾಧೊಸ್ಕಾಯ್ ಉತ್ರಾಯ್ಲಿ. ಬಾಬ್ ಶೈಲೇಂದ್ರ ಮೆಹ್ತಾನ್ ಧಿನ್ವಾಸ್ ಆಟಯ್ಲೆ. ಬಾಯ್ ಸಿಯಾಲಿನಿ ಫೆರ್ನಾಂಡಿಸಾನ್ ಹೆಂ ವೆಬಿಬಾರ್ ಚಲವ್ನ್ ವ್ಹೆಲೆಂ.

विलफी रेबिंबसाच्या ’मूगुती’ कथेचेर अध्ययन

१५ माय २०२१: आशावादी प्रकाशन, अखील भारतीय कोंकणी परिशद आनी उज्वाड पंद्राळे हांच्या जोड पालवांत चल‌ल्ल्या कथापाठ दूसऱ्या शिंकळेंत, विलफी रेबिंबसान १९७०-व्या दाकड्यांत बरयिल्ल्या ’मूगुती’ कथेचेर अध्ययन, पयणारी संपादक वल्ली क्वाड्रसान चलवन वेलें. मंगळूर, गोंय कोलेजिंनी शिकचीं विध्यार्थीं, प्राध्यापक, तशेंच हेर प्रांत्याथावन साहितीक अभिरूच आसच्यांनी हाजर आस‌ल्ल्या ह्या वेबिनाराची सूर‍्वात बाय सियालिनी फेर्नांडीस गोंय हिणें जेराल येवकार मागून, ह्या कथापाठाच्या मिसांवाविशीं मटवो विवर दिलो. उज्वाड पंद्राळ्याचो संपादक मा|रोयसन फेर्नांडिसान येवकार केलो.

वल्ली क्वाड्रसान १९७०व्या काळार कथेची पाठ‌भुंय‌चेर विवर दिवून मुंबय अंडर‌वरल्ड माफिया, आनी तवळची देशाची, राज्याची तशेंच मंगळूर‍्ची आर्थीक, सामाजीक परिगत कसली आसली म्हळ्ळ्याचेर मटवो विवर दितच, कथेच्या पांच अंशांचो उल्लेक करून, ’मूगुती’ कथेचेर खोलायेन विशलेषण केलें.

बाय योगिता वेर्णेकर हिणें अपल्या समीक्षेंत ’मूगुती’ कथा तशेंच त्या कथेच्या पाठ‌भुंय‌च्या सविसतार विवरणाची थोकणाय करून मंगळुरांत कथाकार फकत दादलो/बायल विश्यांचेर उरानासतां वेग-वेगळ्या विश्यांचेर कथा बरयतात म्हणाली. दुस्री समीक्षकी बाय कोन्सेपटा फेर्नांडीस आळवान एक वाचपी जावन अपणाक मूगुती कथा कशी लाग्ता आनी सामाजीक नद्रेन ही कथा त्या काळार तशेंच आयच्या काळार समजुंक कितली महत्वाची म्हणाली.

दो|आसटीन डी’सोज प्रभू, बाय फ्लोरीन क्यासतलिनोन कथापाठांत चल‌ल्ल्या विशलेषणाविशीं दाधोसकाय उत्रायली. बाब शैलेंद्र मेहतान धिन्वास आटयले. बाय सियालिनी फेर्नांडिसान हें वेबिबार चलवन व्हेलें.

ಡೆಂಗ್ಯೂ ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂಭವಾಗಲಿ-ಡಾ.ಕಮಲ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಡೆಂಗ್ಯೂ ಜ್ವರ ಒಂದು ಸಾಂಕ್ರಾಮಿಕ ರೋಗವಾಗಿದ್ದು ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು. ವಿಶೇಷವಾಗಿ ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವ ವೃದ್ದರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಕಡ್ಡಾಯವಾಗಿ ಬಳಸಬೇಕು. ಸೊಳ್ಳೆಗಳು ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಿ, ಸೊಳ್ಳೆ ಬತ್ತಿ, ಮುಲಾಮು ದ್ರಾವಣ ಇವುಗಳನ್ನು ಉಪಯೋಗಿಸಿ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ|| ಕಮಲ.ಎಂ ಅವರು ತಿಳಿಸಿದ್ದಾರೆ.
ಮೇ 16, 2021 ರಂದು ರಾಷ್ಟ್ರೀಯ ಡೆಂಗೀ ದಿನಾಚರಣೆ ಪ್ರಯುಕ್ತ `ಡೆಂಗ್ಯೂ ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂಭ’ ಎಂಬ ಘೋಷ ವಾಕ್ಯದೊಂದಿಗೆ ಮೇ 18 ರಂದು ಮಧ್ಯಾಹ್ನ 12-00 ಗಂಟೆಗೆ ನಮ್ಮ ಧ್ವನಿ ಸಮುದಾಯ ರೇಡಿಯೋ ಕೇಂದ್ರ 90.4 ತರಂಗ ಬೂದಿಕೋಟೆ, ಬಂಗಾರಪೇಟೆ ತಾಲ್ಲೂಕು ಕೋಲಾರ ಜಿಲ್ಲೆ ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ.
ನಮ್ಮ ರೇಡಿಯೋ ಕೇಂದ್ರದಿಂದ ನೇರ ಪೋನ್ ಇನ್ ಕಾಂiÀರ್iಕ್ರಮಗಳನ್ನು ವಿಶೇಷ ವಿಷಯದ ಕುರಿತು ನಡೆಸುವ ಕಾರ್ಯಕ್ರಮಗಳನ್ನು ಮನೆಯಲ್ಲಿಯೇ ತಾವು ಸಹ ಕುಳಿತು ಆಲಿಸಬಹುದು. ನೀವು ಮೊಬೈಲ್‍ನಲ್ಲಿ ಕೇಳಬಹುದು. ದೂರವಾಣಿ ಸಂ: 7026220055ಗೆ ನೀವು ಕರೆ ಮಾಡಬಹುದು.
ಡೆಂಗ್ಯೂ ಜ್ವರವು ವೈರಸ್ ಸೋಂಕು ಹೊಂದಿದ ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸ್ವಚ್ಚ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತದೆ. ಈಡೀಸ್ ಈಜಿಪ್ಟೈ ಸೊಳ್ಳೆಯು ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸಲು ಸುಮಾರು 8 ರಿಂದ 10 ದಿನಗಳು ತೆಗೆದುಕೊಳ್ಳುತ್ತದೆ. 7 ದಿನಗಳ ಮೊದಲ 3 ಹಂತಗಳಾದ ಮೊಟ್ಟೆ, ಲಾರ್ವ ಮತ್ತು ಪ್ಯೂಪ ಈ ಪ್ರಕ್ರಿಯೆಯು ನಿಂತ ನೀರಿನಲ್ಲಿ ನಡೆಯುತ್ತದೆ.
ಇದರ ಲಕ್ಷಣಗಳು ಇದ್ದಕ್ಕಿದ್ದಂತೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರವಾದ ನೋವು, ಮೈಕೈ ನೋವು, ವಾಕರಿಕೆ, ಮತ್ತು ವಾಂತಿ. ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಉಚಿತ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಈಡೀಸ್ ಈಜಿಪ್ಟೈ ಸೊಳ್ಳೆಯ ಉತ್ಪತ್ತಿ ತಾಣಗಳು ಒಳಾಂಗಣ ಮತ್ತು ಹೊರಾಂಗಣದ ಸಿಮೆಂಟ್ ತೊಟ್ಟಿಗಳು, ಪ್ಲಾಸ್ಟಿಕ್ ಡ್ರಂಮ್‍ಗಳು, ಬಕೆಟ್‍ಗಳು, ಬ್ಯಾರೆಲ್‍ಗಳು, ಹೂವಿನ ಕುಂಡಗಳು, ಏರ್‍ಕೂಲರ್, ಮಡಿಕೆ ಕುಡಿಕೆಗಳು, ಒರಳುಕಲ್ಲು, ಒಡೆದ ಸೀಸೆ, ತೆಂಗಿನ ಚಿಪ್ಪು, ಹೂವಿನ ಕುಂಡಗಳಲ್ಲಿ ಮಳೆ ನೀರು ಶೇಖರಣೆಯಾಗಿ ಈಡಿಸ್ ಲಾರ್ವಾ ಉತ್ಪತ್ತಿಯಾಗುತ್ತವೆ.
ನೀರು ಶೇಖರಣೆಯಾಗಿರುವ ಎಲ್ಲಾ ನೀರಿನ ತೊಟ್ಟಿ, ಡ್ರಂ, ಏರ್‍ಕೂಲರ್‍ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿಸಿ ಸ್ವಚ್ಚ ಮಾಡಿ ಮತ್ತೆ ಭರ್ತಿ ಮಾಡಿಕೊಳ್ಳುವುದು ಮತ್ತು ಮುಚ್ಚಳದಿಂದ ಮುಚ್ಚುವುದು ಹಾಗೂ ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಒಡೆದ ಬಾಟಲ್‍ಗಳು, ಪ್ಲಾಸ್ಟಿಕ್ ಲೋಟಗಳು, ಒರಳು ಕಲ್ಲು ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು ಅತ್ಯಗತ್ಯ.
ಡೆಂಗ್ಯೂ,ಜ್ವರ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ತೀವ್ರಗೊಳಿಸುವ ಸಲುವಾಗಿ ಡೆಂಗ್ಯೂ ಸಂಶಯಾಸ್ಪದ ಪ್ರಕರಣಗಳ ಕುರಿತು ಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಇಲಾಖೆಯಿಂದ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಈಡಿಸ್ ಲಾರ್ವಾ ಸಮೀಕ್ಷೆಯನ್ನು ಮಾಡಿಸಲಾಗುತ್ತಿದೆ. ಆದರೂ ಸಹ ಮಳೆಗಾಲದಲ್ಲಿ ನೀರು ಶೇಖರಣೆಯಾಗುತ್ತದೆ ಈ ಹಿನ್ನೆಲೆಯಲ್ಲಿ ವೈರಾಣು ಜ್ವರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಕೋಲಾರದಲ್ಲಿ ಸಾರ್ವಜನಿಕರು ಹಾಗೂ ಸರಕಾರದ ಸಹಭಾಗಿತ್ವದಲ್ಲಿ ಸುಮಾರು 200 ಹಾಸಿಗೆಗಳ ಕೋವಿಡ್ ಆಸ್ಪತ್ರೆ – ಸರಕಾರದ ಸಹಕಾರಕ್ಕೆ ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಮೇ.15: ಕೋಲಾರದಲ್ಲಿ ಸಾರ್ವಜನಿಕರು ಹಾಗೂ ಸರಕಾರದ ಸಹಭಾಗಿತ್ವದಲ್ಲಿ ಸುಮಾರು 200 ಹಾಸಿಗೆಗಳ ಕೋವಿಡ್ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಿದ್ದು, ಸಹಕಾರ ನೀಡಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಇಂಚರ ಗೋವಿಂದರಾಜು, ಕೋವಿಡ್-19 2ನೇ ಅಲೆಯಲ್ಲಿ ಸಾರ್ವಜನಿಕರು ಆರೋಗ್ಯ, ಸೌಲಭ್ಯಕ್ಕೆ ಪರಿತಪಿಸಿದ ರೀತಿಯು
ಎಂತಹವರ ಮನಸ್ಸನ್ನೂ ಸಹ ಕಲಕುವಂತಾಗಿದ್ದು, ನಾನೊಬ್ಬ ಸರಕಾರದ ಪ್ರತಿನಿಧಿಯಾಗಿ ಒಬ್ಬ ಕೊರೊನಾ ಸೋಂಕಿತನಿಗೂ ಕನಿಷ್ಟಪಕ್ಷ ಒಂದು ಆಕ್ಸಿಜನ್ ಬೆಡ್,
ವೆಂಟಿಲೇಟರ್‍ಅನ್ನು ಕೊಡಿಸಲು ಸಾಧ್ಯವಾಗಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ನನ್ನ ಕಣ್ಣ ಮುಂದೆಯೇ ರೋಗಿಗಳು ಆಕ್ಸಿಜನ್ ಇಲ್ಲದೇ ಸಾಯುವುದು ಹಾಗೂ
ಅವರ ಸಂಬಂಧಿಕರ ಅಳಲನ್ನು ನೋಡಿ ನನಗೆ ಅಪಾರ ನೋವುಂಟಾಗಿದೆ. ಇದರಿಂದಾಗಿ ಅನೇಕ ನನ್ನ ಸ್ನೇಹಿತರು ಕರೆ ಮಾಡಿ ನಾವು ನಿಮ್ಮೊಂದಿಗೆ ಇರುತ್ತೇವೆ ಆರೋಗ್ಯ
ಸಂಕಷ್ಟದಲ್ಲಿ ಕೋಲಾರದ ಜನತೆಗೆ ಒಂದು ಸುಸಜ್ಜಿತವಾಗಿ 175 ಆಕ್ಸಿಜನ್ ಹಾಸಿಗೆಗಳ ಸಾಮಾನ್ಯ ವಾರ್ಡ್‍ಗಳು, 25 ಹಾಸಿಗೆಗಳ ಐಸಿಯು ವೆಂಟಿಲೇಟರ್ ಸಹತ
ವಾರ್ಡ್ ಹಾಗೂ 25 ವಿಶೇಷ ವಾರ್ಡ್‍ಗಳನ್ನು ನಿರ್ಮಿಸಲು ಟ್ರಸ್ಟ್ ಸ್ಥಾಪಿಸಿ, ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಿಸಿ ಕೊಡಲು ಸಲಹೆ ನೀಡಿದ್ದು, ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಆಸ್ಪತ್ರೆ ನಿರ್ಮಿಸುವುದರಿಂದ ಮುಂದಿನ ದಿನಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿದಾಗ ಸೇರಿದಂತೆ ಕೋಲಾರಕ್ಕೆ ಸರ್ವ ರೀತಿಯಲ್ಲಿಯೂ ಇದರಿಂದ
ಅನುಕೂಲಕರವಾಗಲಿದೆ. ಹಾಗಾಗಿ ಸೂಕ್ತ ಸ್ಥಳವನ್ನು ನೀಡಿ ಕಟ್ಟಡ ಕಾಮಗಾರಿಯನ್ನು ಆರಂಭಿಸಬೇಕಿದೆ. ಆ ಬಳಿಕ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀತ ಸಿಬ್ಬದಿ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಬೇಕಿದ್ದು, ಇದಕ್ಕಾಗಿ ಎಂಎಲ್‍ಸಿ ಅನುದಾನದಲ್ಲಿ 2 ಕೋಟಿರೂ, ನಾನು ವೈಯಕ್ತಿಕವಾಗಿ 3 ಕೋಟಿರೂ ನೀಡುವ ಜತೆಗೆ ಗೆಳೆಯರ ಸಹಕಾರವನ್ನು ಪಡೆದುಕೊಳ್ಳುವುದಾಗಿ ತಿಳಿಸಿ, ಮುಖ್ಯಮಂತ್ರಿಗಳು ಕೂಡಲೇ ಇದಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿದರು
.

ಕೊರೋನಾಗೆ ರಾಜ್ಯದಲ್ಲಿ ಇಂದು 349 ಬಲಿ, ಒಟ್ಟು 41,664 ಮಂದಿಗೆ ಪಾಸಿಟಿವ್ 34425 ಗುಣಮುಖರಾಗಿದ್ದಾರೆ

JANANUDI.COM NETWORK


ಬೆಂಗಳೂರು,ಮೇ.15; ಇಂದು (15-5-21) ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಶನಿವಾರ ಒಂದೇ ದಿನ ಬರೋಬ್ಬರಿ 349 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 21434ಕ್ಕೆ ಏರಿಕೆಯಾಗಿದೆ. ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಶನಿವಾರ ಒಂದೇ ದಿನ ಬರೋಬ್ಬರಿ 349 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 21434ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 41,664 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 34425 ಗುಣಮುಖರಾಗಿದ್ದಾರೆ,ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು 13,402 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 10,42,714ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 94 ಮಂದಿ ಬಲಿಯಾಗಿದ್ದಾರೆ, ಉಡುಪಿ ಜಿಲ್ಲೆಯಲ್ಲಿ 1146 ಸೋಂಕಿತರು, 7ಜನರ ಸಾವು, 1496 ಜನ ಬಿಡುಗಡೆ ಹೊಂದಿದ್ದಾರೆ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ,1787 ಸೋಂಕಿತರು,3 ಜನರ ಸಾವು,ಮತ್ತು 1490 ಜನ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹಾಗೇ ರಾಜ್ಯದಲ್ಲಿ ಇಂದು 34425 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 15,44,982ಕ್ಕೆ ಏರಿಕೆಯಾಗಿದೆ. ಇನ್ನು 6,05494 ಸಕ್ರೀಯ ಪ್ರಕರಣಗಳಿವೆ. ಈವರೆಗೆ ರಾಜ್ಯದಲ್ಲಿ ಕೊರೊನಾದಿಂದ 21434 ಜನ ಸಾವನ್ನಪ್ಪಿದ್ದಾರೆ.

ಕುಂದಾಪುರ,ತ್ರಾಸಿ, ಉಡುಪಿ, ಮಂಗಳೂರಿನಲ್ಲಿ ತೌಕ್ತೆ ಚಂಡಮಾರುತದ ಅವತಾರ ಸಾಗುತ್ತಾ ಇದೆ

JANANUDI.COM NETWORK


ಕುಂದಾಪುರ,ಮೇ.15; ತೌಕ್ತೆ ಚಂಡಮಾರುತವು ದಕ್ಷಿಣ ಭಾರತಲ್ಲಿ ತನ್ನರೌಧ್ತವತಾರ ತಾಳುವ ಮುನ್ಸುಚನೆ ಕಂಡು ಬರುತ್ತಿರುವಾಗ ವೀಪರಿತ ಗಾಳಿ ಮಳೆಯಿಂದ ಮರ ಗೀಡಗಳು ಉರುಳುತ್ತಿವೆ. ಕುಂದಾಪುರ ರೋಜರಿ ಚರ್ಚಿನ ಆವರಣದಲ್ಲಿನ ಮರವೊಂದು ಬುಡ ಸಮೇತ ಉರುಳಿ ಬಿದ್ದಿತು. ಸಮೀಪವೆ ಮೇರಿ ಮಾತೆಯ ಗ್ರೋಟ್ಟೊ ಇದ್ದ್ದು ಭಕ್ತಾಧಿಗಳು ಅತ್ಯಂತ ಭಕ್ತಿಯಿಂದ ಅದಕ್ಕೆ ನಮೀಸುತಿದ್ದರು, ಈ ಗ್ರೊಟ್ಟೊಗೆ ಎನೊಂದು ಹಾನಿಯಾಗದೆ ಮರ ಉರುಳಿದೆ.
ಹಾಗೇ ಕುಂದಾಪುರ ಕೋಡಿಯಲ್ಲಿ ಸಮುದ್ರದ ಅಲೆಗಳು ರೌಧ್ರಾವತಾರವನ್ನು ತಾಳಿ ಸಮುದ್ರ ಕೊರೆತ ಉಂಟಾಗಿದೆ. ಸಮುದ್ರ ಸಮೀಪದಲ್ಲಿರುವರು ಭೀತರಾಗಿದ್ದಾರೆ
.

ಊಡುಪಿಯಾ ಬಾರ್ಕುರಿನ ಹಾಲೇ ಕೋಡಿ ಮುಂತಾದ ಕಡೆ ಮರಗಳು ಉರುಳಿದ್ದು ನೆರೆಯುಂಟಾಗಿದೆ.

ಮಂಗಳೂರಿನಲ್ಲಿ ಅಪಾರ ಪ್ರಮಾಣದ ಬೀರು ಗಾಳಿಯ ಜೊತೆ ಮಳೆಯಾಗುತ್ತಿದೆ

ಕುಂದಾಪುರ,ತ್ರಾಸಿ


ಕೇರಳದ ಕಾಸರಗೋಡುವಿನಲ್ಲಿ ಬ್ರಹತ್ ಬಂಗಲೆಯೊಂದು ಕಡಾಲು ಕೊರೆತದಿಂದ ಸಮುದ್ರಕ್ಕೆ ಉರುಳಿದೆ.

ತೌಕ್ತೆ ಚಂಡಮಾರುತ ತನ್ನ ರೌಧ್ರ ಅವತಾರದತ್ತ ಸಾಗುತ್ತಾ ಇದೆ – ಕುಂದಾಪುರ ಚರ್ಚ್ ಅವಾರಣದಲ್ಲಿ ಮರ ಉರುಳಿತು

JANANUDI.COM NETWORK

ಕುಂದಾಪುರ,ಮೇ.15; ತೌಕ್ತೆ ಚಂಡಮಾರುತವು ದಕ್ಷಿಣ ಭಾರತಲ್ಲಿ ತನ್ನರೌಧ್ತವತಾರ ತಾಳುವ ಮುನ್ಸುಚನೆ ಕಂಡು ಬರುತ್ತಿರುವಾಗ ವೀಪರಿತ ಗಾಳಿ ಮಳೆಯಿಂದ ಮರ ಗೀಡಗಳು ಉರುಳುತ್ತಿವೆ. ಹೀಗೆ ಬೆಳಿಗೆ ೧೧.೧೫ ಕ್ಕೆ  ಕುಂದಾಪುರ ರೋಜರಿ ಚರ್ಚಿನ ಆವರಣದಲ್ಲಿನ ಮರವೊಂದು 11.15 ಕ್ಕೆ  ಬುಡ ಸಮೇತ ಉರುಳಿ ಬಿದ್ದಿತು. ಸಮೀಪವೆ ಮೇರಿ ಮಾತೆಯ ಗ್ರೋಟ್ಟೊ ಇದ್ದ್ದು ಭಕ್ತಾಧಿಗಳು ಅತ್ಯಂತ ಭಕ್ತಿಯಿಂದ ಅದಕ್ಕೆ ನಮೀಸುತಿದ್ದರು, ಈ ಗ್ರೊಟ್ಟೊಗೆ ಎನೊಂದು ಹಾನಿಯಾಗದೆ ಮರ ಉರುಳಿದೆ.