HOLY ROSARY CHURCH, KUNDAPUR – 450 th JUBILEE SOUVENIR 2021

ತೌಕ್ತೆ ಚಂಡಮಾರುತ : ಮಂಗಳೂರು ಉಡುಪಿ ಸೇರಿದಂತೆ ಹಲವೆಡೆ ಭಾರಿ ಮಳೆ ಗಾಳಿ; ಕುಂದಾಪುರ ಚರ್ಚ್ ಆವರಣದಲ್ಲೊಂದು ಮರ ಉರುಳಿತು !

JANANUDI.COM NETWORK


ಕುಂದಾಪುರ,ಮೇ.14; ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆ ಹಾಗೂ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಶನಿವಾರ ಮುಂಜಾನೆಯಿಂದಲೇ ಭಾರಿ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ನಿನ್ನೆ ರಾತ್ರಿಯಿಂದಲೇ ಮಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಬೆಳಿಗ್ಗೆಯ ಜಾವ ಉಡುಪಿ ಜಿಲ್ಲೆಯಲ್ಲಿಯೂ ಭಾರಿ ಮಳೆ ಗಾಳಿ ಆರಂಭವಾಗಿದೆ. ಈ ಮಳೆ ಮೇ 16 – ೧೭ ರವರೆಗೆ ಮಳೆ ಆಗಲಿದೆ.
ಆದರಿಂದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಹಾಸನ, ರಾಮನಗರ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ 3 ದಿನಗಳ ಕಾಲ ಮಲೆನಾಡು, ಕರಾವಳಿ, ಕೊಡಗು, ಬೆಂಗಳೂರಿನಲ್ಲಿ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ. ಮೇ 16ರಂದು ಕರ್ನಾಟಕಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
. ಕರ್ನಾಟಕದಲ್ಲದೆ ಕೇರಳ, ತಮಿಳುನಾಡು ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಂಡಮಾರುತ ಅಬ್ಬರಿಸಲಿದೆ. ಹೀಗಾಗಿ, ಮುಂದಿನ 1 ವಾರಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಮೇ 16ರಂದು ಗಂಟೆಗೆ 40ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.
ಉಡುಪಿ ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆಯಾಗಿದ್ದು, ಮರಗಳು ಉರುಳಿದ ಘಟನೆಗಳು ವರದಿಯಾಗಿವೆ. ಕುಂದಾಪುರ ಚರ್ಚಿನ ಆವರಣದಲ್ಲಿರುವ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ. ಸಮೀದಲ್ಲೇ ಮೇರಿ ಮಾತೆಯ ಗ್ರೊಟ್ಟೊ ಇದ್ದು ಎನೊಂದು ಹಾನಿ ಆಗದ ಘಟನೆ ನಡೆದಿದೆ
.

ಈಗ ಮಧ್ಯಾನ್ನ ಹೊತ್ತು ಕುಂದಾಪುರದಲ್ಲಿ ಬಹಳ ಜೋರಾದ ಮಳೆ ಬರುತ್ತಲಿದ್ದು,ಇದು ಇನ್ನೂ ಹೆಚ್ಚಾಗುವ ಸಂಬಂವ ಇದೆ.

ಶ್ರೀನಿವಾಸಪುರ ಪುರಸಭೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಸವ ಜಯಂತಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ಮೇ.15; ಇಲ್ಲಿನ ಪುರಸಭೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಸವ ಜಯಂತಿ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಡಿ.ಶೇಖರರೆಡ್ಡಿ, ಆರೋಗ್ಯ ನಿರೀಕ್ಷಕ ಪೃಥ್ವಿರಾಜ್, ಸಿಇಒ ರಾಜೇಶ್ವರಿ, ಕಂದಾಯ ನಿರೀಕ್ಷಕ ಶಂಕರ್, ನಾಗೇಶ್, ಸುರೇಶ್, ಸುರೇಶ್ ಕುಮಾರ್ ಉಪಸ್ಥಿತರಿದ್ದರು.

ಶ್ರೀನಿವಾಸಪುರ: ಕಾಯಕದಲ್ಲಿ ಕೈಲಾಸ, ಧರ್ಮದಲ್ಲಿ ದಯೆ ಕಂಡುಕೊಂಡ ಬಸವಣ್ಣ ಮಾನವ ಕುಲಕ್ಕೆ ದೊಡ್ಡ ಆದರ್ಶ; ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕಾಯಕದಲ್ಲಿ ಕೈಲಾಸ, ಧರ್ಮದಲ್ಲಿ ದಯೆ ಕಂಡುಕೊಂಡ ಬಸವಣ್ಣನವರು ಮಾನವ ಕುಲಕ್ಕೆ ದೊಡ್ಡ ಆದರ್ಶವಾಗಿ ಉಳಿದಿದ್ದಾರೆ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಬಸವಣ್ಣ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಬಸವಣ್ಣನವರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ. ವಚನಕಾರರ ವಚನಗಳಿಂದ ಕನ್ನಡ ಸಾರಸ್ವತ ಲೋಕ ಶ್ರೀಮಂತವಾಗಿದೆ ಎಂದು ಹೇಳಿದು.
ಶಿರಸ್ತೇದಾರ್ ಮನೋಹರ ಮಾನೆ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುಪ್ರಸಾದ್ ಇದ್ದರು.

ರಾಜ್ಯದಲ್ಲಿ ಇಂದು ಕೊರೋನಾಗೆ 373 ಆಹುತಿ, ಬೆಂಗಳೂರಿನಲ್ಲಿ 14,316 ಸೇರಿ 41,779 ಮಂದಿಗೆ ಪಾಸಿಟಿವ್

JANANUDI.COM NETWORK

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 41,779 ಕರೋನಾ ಸೋಂಕು ಪ್ರಕರಣಗಳು ಕಂಡು ಬಂದಿದ್ದು, 373 ಮಂದಿ ಬಲಿಯಾಗಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 14,316 ಸೋಂಕಿತರು ಪ್ರಕರಣಗಳು ಹೊಸದಾಗಿ ಕಂಡು ಬಂದರೆ, 121 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 1219 ಸೋಂಕಿತರು, 3 ಸಾವು, ದಕ್ಷಿಣಕನ್ನಡ ಜಿಲ್ಲೆಯಲ್ಲಿ 1215 ಸೋಂಕಿತರು 3 ಸಾವು.

ಶಿವಮೊಗ್ಗದಲ್ಲಿ ಐದು ಸಾವು, ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಕೊಂಚ ತಗ್ಗಿದ್ದು 720 ಮಂದಿಗೆ ಮಹಾಮಾರಿ ಸೋಂಕು ತಗುಲಿದೆ. 5 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 557 ಕ್ಕೇರಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 7277 ಆಗಿದೆ.
ಸೋಂಕಿತರ ವಿವರ: ಶಿವಮೊಗ್ಗ 209, ಭದ್ರಾವತಿ 103, ಶಿಕಾರಿಪುರ 41, ತೀರ್ಥಹಳ್ಳಿ 61, ಸೊರಬ 78, ಹೊಸನಗರ 31, ಸಾಗರ 171, ಇತರೆ ಜಿಲ್ಲೆಯಿಂದ ಬಂದ 26 ಮಂದಿಯಲ್ಲಿ ಇಂದು ವೈರಸ್ ಕಾಣಿಸಿಕೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಷ್ಟು ಕೇಸ್!: ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರ 835 ಸೋಂಕಿತರು ಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 4933 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ 191 ಜನರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ತಾಲೂಕಿನಲ್ಲಿ 223, ಕಡೂರು ತಾಲೂಕಿನಲ್ಲಿ 222, ತರೀಕೆರೆ ತಾಲೂಕಿನಲ್ಲಿ 152, ಮೂಡಿಗೆರೆ ತಾಲೂಕಿನಲ್ಲಿ 132, ಎನ್.ಆರ್ ಪುರ ತಾಲೂಕಿನಲ್ಲಿ 21, ಕೊಪ್ಪ ತಾಲೂಕಿನಲ್ಲಿ 50 ಹಾಗೂ ಶೃಂಗೇರಿ ತಾಲೂಕಿನಲ್ಲಿ 35 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಜಿಲ್ಲೆಯಲ್ಲಿ 835 ಜನರಿಗೆ ಮಹಾಮಾರಿ ಒಕ್ಕರಿಸಿದೆ.
ಸಾವಿನ ಮನೆಗೆ ಕರೋನಾ!: ಸಾವಿನ ಮನೆಗೆ ಐದಕ್ಕಿಂತ ಹೆಚ್ಚು ಜನ ಭಾಗವಹಿಸದಂತೆ ಸರ್ಕಾದ ಆದೇಶ ಇದ್ದರೂ ಸಹ ಸಾವಿನ ಮನೆಗೆ ಹೋದ ಇಪ್ಪತ್ತಕ್ಕೂ ಹೆಚ್ಚು ಜನರಲ್ಲಿ ಕರೊನಾ ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸಾವಿನ ಮನೆಗೆ ತೆರಳಿದ 30 ಜನರಲ್ಲಿ 22 ಮಂದಿಗೆ ಸೋಂಕು ತಗುಲಿದೆ. ಪ್ರೈಮರಿ ಕಾಂಟಾಕ್ಟ್ ನ 30 ಮಂದಿಯನ್ನು ಕರೊನಾ ತಪಾಸಣೆ ಒಳಪಡಿಸಲಾಗಿದೆ. ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ಈ ಘಟನೆ ನಡೆದಿದೆ. ಗ್ರಾಮದ ಜನ ಮನೆಯಿಂದ ಹೊರ ಬಾರದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕೇರಳಕ್ಕೆ ಮುಟ್ಟಿದ ತೌಕ್ತೆ ಚಂಡಮಾರುತ, ಬಿರುಗಾಳಿ ಮಳೆಗೆ ಉರುಳಿದವು ಮರಗಳು- ರಾತ್ರಿ ದಕ್ಷಿಣ ಕನ್ನಡಕ್ಕೆ ಅಪ್ಪಳಿಕೆ.

JANANUDI.COM NETWORK

ಚಿತ್ರ ಸಕಾಲಿಕ ಕ್ರಪೆಯಿಂದ


ಕೊಲ್ಲಂ:ಮೇ.13 ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿ ಎದ್ದ ಚಂಡ ಮಾರುತಕ್ಕೆ ತೌಕ್ತೆ ಚಂಡಮಾರುತ ಎಂದು ಹೆಸರಿಸಿದ್ದು, ಅದು ಕೇರಳಕ್ಕೆ ತಲುಪಿದ್ದು, ಅಬ್ಬರಿಸಲು ಆರಂಭಿಸಿದೆ.
ಈ ಚಂಡಮಾರುತದಿಂದ ಕೇರಳದ ಕೊಲ್ಲಂನ ಶಕ್ತಿಕುಂಗರದ ಬಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಬೃಹತ್ ಮರಗಳು ಗಾಳಿಯ ವೇಗಕ್ಕೆ ಉರುಳಿ ಬಿದ್ದಿವೆ, ಅದರ ಪರಿಣಾಮವಾಗಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.
ಅಲ್ಲದೆ ಕೇರಳದಲ್ಲಿ ಭಾರೀ ಮಳೆ ಆರಂಭಗೊಂಡಿದ್ದು, ನಾಳೆ ಮುಂಜಾನೆಯ ವೇಳೆಗೆ ಚಂಡಮಾರುತ ಕರ್ನಾಟಕದಲ್ಲಿಯೂ ಬೀಸಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಹೇಳಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ರಾತ್ರಿಯೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲವಾದ ಗಾಳಿ ಬೀಸಲು ಆರಂಭವಾಗಿದೆಯೆಂದು ತಿಳಿದು ಬಂದಿದೆ.

ಕೊರೊನಾ ಪ್ರತಿಬಂದಕ ರಷ್ಯದ ಸ್ಪುಟ್ನಿಕ್ ವಿ ಲಸಿಕೆ, ಮೊದಲ ಕಂತು ಹೈದರಬಾದಿಗೆ ಬಂತು.

JANANUDI.COM NETWORK


ಹೈದರಬಾದ್ ಮೇ.೧೪: ಭಾರತ ಸರಕಾರವೂ ಆಮದು ಮಾಡಿಕೊಂಡ ಕೋವಿಡ್ -19 ಪ್ರತಿಬಂದಕ ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಮೊದಲ ಕಂತು ಇಂದು ಹೈದರಬಾದನಲ್ಲಿ ವಿಮಾನದ ಮೂಲಕ ಆಗಮಿಸಿತು.


ಭಾರತದಲ್ಲಿ ಇದಕ್ಕೆ 995.40 ರೂ. ಬೆಲೆಯಾಗಲಿದೆ ಎಂದುಹೈದರಬಾದಿನ ಔಷಧ ಸಂಸ್ಥೆ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಶುಕ್ರವಾರ ತಿಳಿಸಿದೆ. ಭಾರತದಲ್ಲಿ ತಯಾರಿಸಲಾಗುವ ಸ್ಪುಟ್ನಿಕ್ ವಿ ಕೋವಿಡ್ -19 ಲಸಿಕೆಯ ಬೆಲೆ ಕಡಿಮೆಯಾಗಲಿದೆ

ವ್ಯಾಕ್ಸಿನ್ಗಾಗಿ ಕಾಂಗ್ರೆಸ್ ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.100 ಕೋಟಿ ನೀಡುತ್ತೇವೆ: ಸಿದ್ದರಾಮಯ್ಯ

JANANUDI.COM NETWORK


ಬೆಂಗಳೂರು, ಮೇ. 14; “ನಮ್ಮ ಪಕ್ಷದ ಎಲ್ಲಾ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ರೂ.1 ಕೋಟಿ ರೂ.ಗಳಂತೆ ಒಟ್ಟು ರೂ.100 ಕೋಟಿ ಹಣವನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲು ತೀರ್ಮಾನಿಸಿದ್ದೇವೆ’ ಎಂದು ಇಂದು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು ’ನಾಡಿನ ಎಲ್ಲ ಜನರಿಗೆ ಆದಷ್ಟು ಬೇಗ ವ್ಯಾಕ್ಸಿನ್ ಸಿಗಲಿ ಎಂಬುದೆ ನಮ್ಮ ಆಶಯ. ಈ ನಿಟ್ಟಿನಲ್ಲಿ ನಾವು ಹಣ ನೀಡುತ್ತಿದ್ದೇವೆ” ಎಂದರು.
“ದೇಶದ ಪ್ರತಿಯೊಬ್ಬರಿಗೂ ಕೊರೊನಾ ವ್ಯಾಕ್ಸಿನ್ ನೀಡುವುದೇ ಸೋಂಕು ತಡೆಗಟ್ಟಲು ಇರುವ ಪರಿಣಾಮಕಾರಿ ಮಾರ್ಗವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟರೊಳಗೆ ಕನಿಷ್ಠ ಅರ್ಧದಷ್ಟು ಜನರಿಗೆ ವ್ಯಾಕ್ಸಿನ್ ನೀಡಿದ್ದರೆ ಕೊರೊನಾ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ಬಂದಿರುತ್ತಿತ್ತು” ಎಂದು ಅವರು ಅಭಿಪ್ರಾಯಪಟ್ಟರು,
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ಜನ ವ್ಯಾಕ್ಸಿನ್ ಗಾಗಿ ಆಸ್ಪತ್ರೆಗಳಿಗೆ ಅಲೆಯುವ ಪರಿಸ್ಥಿತಿ ಬಂದಿದೆ. ವ್ಯಾಕ್ಸಿನ್ ಅಭಿಯಾನಕ್ಕೆ ಸಂಬಂಧ ಪಟ್ಟಂತೆ ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಸರ್ಕಾರಗಳಿಗೆ ಛೀಮಾರಿ ಹಾಕಿವೆ. ಇಷ್ಟಾದರೂ ಬಿಜೆಪಿ ನಾಯಕರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ” ತಮ್ಮ ಆಕ್ರೋಷ ವ್ಯಕ್ತಪಡಿಸಿದರು. ರಾಜ್ಯಕ್ಕೆ ವ್ಯಾಕ್ಸಿನ್ ಬರಲು ವಿಳಂಬ ಆಗಲಿದೆಯೆಂದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ, ಹೇಳಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಕೊರೊನಾ 3ನೇ ಅಲೆ ಬರಲಿದ್ದು, ಅದರ ಬಗೆಗಿನ ತಜ್ಞರ ಅಭಿಪ್ರಾಯವನ್ನು ಗಮನಿಸಿದರೆ ಮುಂದಿನ ದಿನಗಳ ಬಗ್ಗೆ ಬಹಳ ಆತಂಕವಾಗುತ್ತದೆ” ಎಂದರು.
ವ್ಯಾಕ್ಸಿನ್ ನೀಡಿಕೆ ವಿಚಾರದಲ್ಲಿ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿಕೊಳ್ಳುತ್ತಿದೆ. ಇದೊಂದು ವೈಜ್ಞಾನಿಕ ಪ್ರಕ್ರಿಯೆ, ವ್ಯಾಕ್ಸಿನ್ ತಯಾರಿಕಾ ಹಂತದಲ್ಲಿಯೇ ಎರಡು ಡೋಸ್ ಗಳ ನಡುವಿನ ದಿನಗಳ ಅಂತರವನ್ನೂ ನಿರ್ಧರಿಸಲಾಗಿರುತ್ತದೆ, ಹಾಗಿದ್ದಾಗ ಪದೇಪದೇ ಬದಲಾವಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
18 ರಿಂದ 45ರ ವಯೋಮಿತಿಯ ಜನರ ವ್ಯಾಕ್ಸಿನ್‌ಗೆ ರಾಜ್ಯ ಸರ್ಕಾರಗಳೇ ಹಣ ಹಾಕಬೇಕು ಎಂದು ಕೇಂದ್ರ ಸರ್ಕಾರ ಹೇಳಿರುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ. ಕೇಂದ್ರ ಸರ್ಕಾರವೇ ಇಡೀ ದೇಶದ ಜನತೆಗೆ ಉಚಿತವಾಗಿ ವ್ಯಾಕ್ಸಿನ್ ನೀಡಬೇಕೆಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುತ್ತೇನೆ ಎಂದರು. ಕೆ.ಪಿಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಯಲ್ಲಿದ್ದರು
.

ಕೊರೋನಾಕ್ಕೆ ರೆಮ್ಡೆಸಿವಿರ್ ಔಷಧಿಕಿಂತಲೂ ಉತ್ತಮ ಮೌಖಿಕ ಔಷಧಿಯನ್ನು ಅಭಿವೃದ್ಧಿ ಪಡಿಸಿದೆಯೆಂದು ಮೈಸೂರು ಮೂಲದ ಸಂಸ್ಥೆ ಹೇಳಿಕೊಂಡಿದೆ

JANANUDI.COM NETWORK


ಮೈಸೂರು,ಮೇ.14. ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರ ಬಹಳ ಜೋರಾಗಿದ್ದು, ಈ ಸಮ್ಯದಲ್ಲಿ ಮೈಸೂರಿನಲ್ಲೆ ಔಷಧಿ ಕಂಪನಿಯೊಂದು ಕೊರೋನಾ ಚಿಕಿತ್ಸೆಗಾಗಿ ಔಷಧಿಯೊಂದನ್ನು ಅಭಿವೃದ್ಧಿಪಡಿಸಿದೆ. ಎಂದು ಹೇಳಿಕೊಂಡಿದೆ. ಇದೊಂದು ಮೌಖಿಕ (ಓರಲ್) ಔಷಧಿಯಾಗಿದೆಯೆಂದು ತಿಳಿಸಲಾಗಿದೆ.
ಡಿಆರ್’ಎಂ ಇನ್ನೋವೇಶನ್ಸ್ ಕೃತಕ ಬುದ್ಧಿಮತ್ತೆಯನ್ನು ಬಳಸಿ ಈ ಔಷಧಿಯನ್ನು ಅಭಿವೃದ್ಧಿ ಪಡಿಸಿದೆ. ಡಿಆರ್ ಎಮ್ ಎಂಡಿ ಡಾ.ಮಂಜುನಾಥ್ ಬಿ.ಹೆಚ್ ನೇತೃತ್ವದ ತಜ್ಞರ ತಂಡ ರಾಸಾಯನಿಕ ಜೀವಶಾಸ್ತ್ರದ ಪ್ರಯೋಗಾಲಯ, ಮೈಸೂರು ವಿಶ್ವವಿದ್ಯಾಲಯದ ಸಾವಯವ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಬಸಪ್ಪ ಮತ್ತು ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರೊಫೆಸರ್ ಮಹೇಶ್ ಪಿಎ ಅವರು ಔಷಧಿಯನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಔಷಧಿಯು ಕೋಶ ಆಧಾರಿತ ವ್ಯವಸ್ಥೆಗಳಲ್ಲಿ ವೈರಸ್ ಅನ್ನು ಕೊಲ್ಲುವಲ್ಲಿ ಉತ್ತಮ ಪ್ರತಿಬಂಧಕ ಪರಿಣಾಮಗಳು ಬೀರುತ್ತವೆ ಎಂದು, ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಡಾ. ಪ್ರಿಯಾ ಅಬ್ರಹಾಂ, ಡಾ. ಅನಿತಾ ಶೇಟ್ ಮತ್ತು ಡಾ. ಪ್ರಜ್ಞಾ ಜಾಧವ್ ಇವರು ಅಧ್ಯಯನಗಳ ಮೂಲಕ ದೃಢಪಡಿಸಿದ್ದಾರೆ
ಮೈಸೂರಿನ ಜೆ.ಎಸ್.ಎಸ್. ಫಾರ್ಮಸಿ ಕಾಲೇಜಿನಲ್ಲಿ ಪ್ರಾಣಿ ಅಧ್ಯಯನದ ಪ್ರಾಂಶುಪಾಲರಾದ ಡಾ.ಪ್ರಮೋದ್ ಕುಮಾರ್ ಮತ್ತು ಸಂಶೋಧನಾ ಮುಖ್ಯಸ್ಥ ಡಾ.ಶರವಣ ಬಾಬು ಅವರು ಈ ಔಷಧವನ್ನು ಮೌಖಿಕವಾಗಿ ನೀಡಬಹುದು ಎಂದು ದೃಢಪಡಿಸಿದ್ದಾರೆ.
ಈ ಔಷಧಿ ರಕ್ತವು ಮಿದುಳಿನ ತಡೆಗೋಡೆ ದಾಟುವ ಸಾಮರ್ಥ್ಯವನ್ನು ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಕೊರೋನಾ ಸೋಂಕಿತರು ನರ ವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ರೆಮ್ಡೆಸಿವಿರ್ ಔಷಧಿ ಆ ತಡೆಗೋಡೆಯನ್ನು ದಾಟುವ ಸಾಮರ್ಥ್ಯವನ್ನು ಹೊಂದಿಲ್ಲ. ನಾವು ಅಭಿವೃದ್ಧಿಪಡಿಸಿರುವ ಈ ಔಷಧಿಯು ಮಾನವನ ಮೇಲೆ ಪ್ರಯೋಗಕ್ಕೆ ಸಿದ್ಧವಿದೆ’ ಎಂದು ಡಾ.ಮಂಜುನಾಥ್ ಬಿ.ಹೆಚ್ ತಿಳಿಸಿದ್ದಾರೆ
.

ಗೋವಾದಲ್ಲಿ ಆಕ್ಸಿಜನ್ ಕೊರತೆಯಿಂದ ಪುನ: 15 ಜನರ ಮ್ರತ್ಯು

JANANUDI.COM NETWORK

ಗೋವಾ .ಮೇ.14; : ಗುರುವಾರ ಮುಂಜಾನೆ ಆಮ್ಲಜನಕದ ಮಟ್ಟ ಕುಸಿದ ಕಾರಣ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 26 ಮಂದಿ  ಕೊರೊನಾ  ರೋಗಿಗಳು ಸಾವನ್ನಪ್ಪಿದ ಎರಡು ದಿನಗಳ ನಂತರ ಮತ್ತೆ  ಇಂತಹದೇ ಆಕ್ಸಿಜನ್ ದುಂತದ ಏರ್ಪಟ್ಟು 15 ರೋಗಿಗಳು ಮಂದಿ ಮೃತಪಟ್ಟಿದ್ದಾರೆ ಎಂದು ಹ್ರದಯ ವಿದ್ರಾವಕ ಘಟನೆ ನಡಿದಿದೆ.

      ಬಾಂಬೆ ಹೈಕೋರ್ಟ್‌ನ ಗೋವಾ ನ್ಯಾಯಪೀಠ, ಆಮ್ಲಜನಕ ಸಿಲಿಂಡರ್‌ ಗಳಿಗೆ ಸಂಬಂಧಿಸಿದ ವ್ಯವಸ್ಥಾಪನಾ ಸಮಸ್ಯೆಗಳಿಂದ ಕೆಲವು ಸಾವುನೋವುಗಳು ಸಂಭವಿಸಿದೆ ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದೆ.

     ಆಮ್ಲಜನಕ ಸಮಸ್ಯೆಗಳು ಕೋವಿಡ್ ಸಾವಿಗೆ ಕಾರಣವಾಗಿದೆ. ರೋಗಿಗಳಿಗೆ ಆಮ್ಲಜನಕವನ್ನು ಪೂರೈಸುವ ವಿಷಯದಲ್ಲಿ ಯಾವುದೇ ನ್ಯೂನತೆಗಳ ಕಾರಣದಿಂದಾಗಿ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳದಂತೆ ರಾಜ್ಯ ಸರಕಾರ ಈ ವ್ಯವಸ್ಥಾಪನಾ ಸಮಸ್ಯೆಗಳನ್ನು ನಿವಾರಿಸಲು ಮಾರ್ಗಗಳು ಕಂಡುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ನ್ಯಾಯಾಲಯ ಸೂಚನೆ ನೀಡಿದೆ.