HOLY ROSARY CHURCH, KUNDAPUR – 450 th JUBILEE SOUVENIR 2021

ಸಾವಿನಲ್ಲೂ ದುಡ್ಡು ಮಾಡುವ ಅಮಾನವೀಯ ಕ್ರತ್ಯ; ರೆಮಿಡಿಸಿವರ್ ಇಂಜೆಕ್ಷನ್ ಕಾಳ ಸ೦ತೆಯಲ್ಲಿ ಮಾರಾಟ, ಕೋಲಾರದಲ್ಲಿ 6 ಮಂದಿ ಪೊಲೀಸರ ವಶ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಸಾವಿನಲ್ಲೂ ದುಡ್ಡು ಮಾಡುವ ಅಮಾನವೀಯ ರೆಮಿಡಿಸಿವರ್ ಇಂಜೆಕ್ಷನ್ ಕಾಳ ಸ೦ತೆ೦ರಲ್ಲಿ ಮಾರಾಟ ದಂಧ ನಗರದಲ್ಲಿಯೂ ನಡೆದಿದ್ದು , ಕಳೆದ ರಾತ್ರಿ 6 ಮಂದಿಂರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ . ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ರೆ ಮಿಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಕಾಟ ಮಾಡುತ್ತಿದ್ದ ಜಾಲದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಸದ್ಯಕ್ಕೆ ಯಾವುದೇ ಮಾಹಿತಿ ನೀಡುತ್ತಿಲ್ಲ . ಕಳೆದ ಒಂದು ತಿಂಗಳಿಂದ ಕಾಳಸಂತೆ ಯಲ್ಲಿ ಇಂಜೆಕ್ಷನ್ ಮಾರಾಟವನ್ನು ಇವರು ನಡೆಸುತ್ತಿದ್ದರೆನ್ನಲಾಗಿದ್ದು , ಒಂದು ಇಂಜೆಕ್ಷನ್ ಸುಮಾರು 30 ಸಾವಿರ ರೂಪಾಯಿಗೆ ಮಾರಾಟ ಮಾಡುವ ಮೂಲಕ ಸಾವಿನಲ್ಲೂ ದುಡ್ಡು ಮಾಡುವ ಅಮಾನ ವೀಯ ದಂಧೆ ನಡೆಸುತ್ತಿದ್ದರೆನ್ನಲಾಗಿದೆ .ಜಾಲದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ವೈದ್ಯರು ಇರುವ ಶಂಕೆ ಇದ್ದು , ವಿಚಾರಣೆಗೆ ಕರೆತಂದವರನ್ನು ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ಪೊಲೀಸರು ಕೂಲಂಕುಷ ವಿಚಾರಣೆ ನಡೆಸುತಿ ದ್ದಾರೆ . ಆದರೆ , ರಾಜಕೀಯ ಪ್ರಭಾವ ಬಳಸಿಕ ಕೊಂಡು ಬಂಧಿತ ಆರೋಪಿಗಳನ್ನು ರಕ್ಷಿಸಿ ಪ್ರಕರಣ ವನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಯು ತ್ತಿದೆಯೆಂಬ ದೂರುಗಳು ಕೇಳಿ ಬರುತ್ತಿವೆ .

ಕೋವಿಡ್ ಚಿಕಿತ್ಸಾ ಪ್ಲಾಸ್ಮಾ ವಿಧಾನವನ್ನು ಥೆರಪಿ ಕೈ ಬಿಟ್ಟ ಸರ್ಕಾರ: ವೈದ್ಯ ತಜ್ಞರಿಂದ ಸ್ವಾಗತ

ಪ್ಲಾಸ್ಮಾ ಥೆರಪಿಯಿಂದ ರೂಪಾಂತರಿ ವೈರಸ್ ಗಳ ಜನ್ಮ!!

JANANUDI.COM NETWORK


ನವದೆಹಲಿ:ಮೇ. ದೇಶದಲ್ಲಿ ಕೋವಿಡ್ 19 ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯೆಂದು ನಂಬಿ ವೈದ್ಯರು ಸೋಂಕಿತರ ಮೇಲೆ ಪ್ಲಾಸ್ಮಾ ಥೆರೆಪಿ ಚಿಕಿತ್ಸೆಯನ್ನು ನೀಡುತಿದ್ದರು ಅದರೀಗ ದೇಶಾದ್ಯಂತ ಕೋವಿಡ್-19 ಪ್ರಕರಣಗಳಲ್ಲಿ ಈ ಪ್ಲಾಸ್ಮಾ ಬಳಕೆಯಿಂದಾಗಿ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿ ಸಂಭವಿಸುತ್ತಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈವಿಧಾನವನ್ನು ಕೈ ಬಿಡ ಬೇಕೆಂದು ಆಶಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ವೈದ್ಯಕೀಯ ತಜ್ಞರು ಸ್ವಾಗತಿಸಿದ್ದಾರೆ.
ದೇಶದಲ್ಲಿ ಕೋವಿಡ್ 19 ಚಿಕಿತ್ಸೆಗೆ ಸಂಬಂಧಿಸಿ ನಿಯಮಾವಳಿಗಳನ್ನು ಸರ್ಕಾರ ಸೋಮವಾರ ಪರಿಷ್ಕರಿಸಿದ್ದು, ಪ್ರಸ್ತುತ ಬಳಕೆಯಲ್ಲಿದ್ದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದೆ. ಇದು ಅನಿವಾರ್ಯದ ನಡೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ.ಡಿಎಸ್ ರಾಣಾ ಅವರು, ಪ್ಲಾಸ್ಮಾ ಚಿಕಿತ್ಸೆಯು ಕೋವಿಡ್ ಸೋಂಕಿತರ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಈ ಚಿಕಿತ್ಸಾ ವಿಧಾನ ಫಲಪ್ರದವಲ್ಲ ಎಂಬುದು ಸಾಬೀತಾಗಿತ್ತು ಎಂದು ತಿಳಿಸಿದ್ದಾರೆ.


ಪ್ಲಾಸ್ಮಾ ಥೆರಪಿಯಿಂದ ರೂಪಾಂತರಿ ವೈರಸ್ ಗಳ ಜನ್ಮ!!


ಇದೇ ವೇಳೆ ಪ್ಲಾಸ್ಮಾ ಥೆರಪಿಯಿಂದ ರೂಪಾಂತರಿ ವೈರಸ್ ಗಳ ಜನ್ಮತಾಳುತ್ತಿವೆ ಎಂಬ ವಾದದ ಕುರಿತು ಮಾತನಾಡಿದ ಅವರು, ‘ಕೆಲವು ವಿಜ್ಞಾನಿಗಳು ಕೋವಿಡ್ ವೈರಸ್ ರೂಪಾಂತರಗಳು ಮತ್ತು ರೂಪಾಂತರಗಳನ್ನು ಹೊಂದಲು ಮತ್ತು ಉತ್ತೇಜಿಸಲು ಈ ಪ್ಲಾಸ್ಮಾ ಚಿಕಿತ್ಸೆ ಸಹಾಯ ಮಾಡುತ್ತಿದೆ’ ಎಂದು ಅಭಿಪ್ರಾಯ ಪಡಲಾಗಿದೆ
ಒಂದು ವರ್ಷದ ಅವಧಿಯಲ್ಲಿ ಮರಣದ ಪ್ರಮಾಣವನ್ನು ಈ ಪ್ಲಾಸ್ಮಾ ಚಿಕಿತ್ಸೆ ತಗ್ಗಿಸುವಲ್ಲಿ ವಿಫಲವಾಗಿದೆ. ಪ್ಲಾಸ್ಮಾ ಚಿಕಿತ್ಸೆ ವಿಧಾನದಿಂದ ಕೋವಿಡ್ ರೋಗ ಗುಣಪಡಿಸುವುದರಲ್ಲಿ ಹೆಚ್ಚಿನ ಪ್ರಯೋಜನ ಇಲ್ಲದೇ ಇರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ಕೋವಿಡ್ 19 ಸಂಬಂಧ ಐಸಿಎಂಆರ್ ನ್ಯಾಶನಲ್ ಟಾಸ್ಕ್ ಫೋರ್ಸ್ ಕಳೆದ ವಾರ ಸಭೆ ಸೇರಿ ಚರ್ಚಿಸಿದ್ದು, ಈ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿಯನ್ನು ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದ್ದು ಹಲವಾರು ಪ್ರಕರಣಗಳಲ್ಲಿ ಪ್ಲಾಸ್ಮಾ ಬಳಕೆಯಿಂದ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲದೆ ಸಮರ್ಪಕ ವಿಧಾನದಲ್ಲಿ ಬಳಕೆಯಾಗದ ಕಾರಣ ಅದನ್ನು ಕೈಬಿಟ್ಟಿದ್ದು, ಪರಿಷ್ಕೃತ ನಿಯಮಾವಳಿಯನ್ನು ಸರ್ಕಾರ ಪ್ರಕಟಿಸಿದೆ.
‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)’ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ವಯಸ್ಕ ಕೋವಿಡ್ 19 ರೋಗಿಗಳ ಚಿಕಿತ್ಸೆ ವಿಧಾನದ ಮಾರ್ಗಸೂಚಿ ಪರಿಷ್ಕರಿಸಲಾಗಿದೆ, ದೇಶದಲ್ಲಿ ಇನ್ನು ಪ್ಲಾಸ್ಮಾ ಚಿಕಿತ್ಸೆ ಬಳಸುವಂತಿಲ್ಲ. ಈ ಮೊದಲ ನಿಯಮಾವಳಿಯಲ್ಲಿ ಕೋವಿಡ್ 19 ಚಿಕಿತ್ಸೆಯಲ್ಲಿ ದಾನಿಗಳ ನೆರವಿನಿಂದ ಪಡೆದ ಪ್ಲಾಸ್ಮಾವನ್ನು ವೈದ್ಯರು ಬಳಸಿಕೊಳ್ಳಲು ಅವಕಾಶವಿತ್ತು ಈಗ ಸಾಧ್ಯವಿಲ್ಲ. ವೈದ್ಯರ ಈ ಚಿಕಿತ್ಸಾ ಪ್ರಯತ್ನದಿಂದ ಅಡ್ಡ ಪರಿಣಾಮಗಳಿಂದ ಹಲವು ಸಾವು ಕೂಡ ಸಂಭಸಿವೆ ಎಂದು ಹೇಳಲಾಗುತಿತ್ತು.

ಬೀದರ್: ಚುನಾವಣಾ ಕರ್ತವ್ಯ ನಿರ್ವಹಿಸಿದ್ದ 52 ಶಿಕ್ಷಕರ ಪ್ರಾಣ ಕೊರೊನಾಕ್ಕೆಬಲಿ

JANANUDI.COM NETWORK

ಬೀದರ್: ಏಪ್ರಿಲ್ 1 ರಿಂದ ಮೇ 14 ವರೆಗೆ ಬಸವಕಲ್ಯಾಣ ಉಪಚುನಾವಣೆ ಹಾಗು ಬೀದರ್ ನಗರಸಭೆ ಚುನಾವಣಾ ಕರ್ತವ್ಯ ನಿರ್ವಹಿಸಿದ್ದ 52 ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.ಎಂದು ಸ್ಫೋಟಕ ಸುದ್ದಿ ವರದಿಯಾಗಿದೆ.
ಚುನಾವಣೆಯ ಕರ್ತವ್ಯಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕಿನ ಒಟ್ಟು 1,434 ಬೋಧಕ ಮತ್ತು ಬೋಧಕೇತರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಚುನಾವಣಾ ಕರ್ತವ್ಯಕ್ಕೂ ಮುನ್ನ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ 67 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇವರನ್ನು ಬಿಟ್ಟು ಉಳಿದವರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಚುನಾವಣಾ ಕರ್ತವ್ಯ ಮುಗಿದ ನಂತರ ಹಲವರಲ್ಲಿ ಸೋಂಕು ಕಾಣಿಸಿಕೊಂಡಿತ್ತು.
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ 27 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಪೈಕಿ 16 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬೀದರ್ ನಗರ ಸಭೆಯ ಚುನಾವಣಾ ಕಾರ್ಯನಿರ್ವಹಿಸಿದ್ದ 32 ಶಿಕ್ಷಕರಿಗೆ ಸೋಂಕು ತಗುಲಿದ್ದು, ಈ ಪೈಕಿ 18 ಜನ ಮೃತಪಟ್ಟಿದ್ದಾರೆ. ಹುಮ್ನಾಬಾದ್ನಲ್ಲಿ 4, ಭಾಲ್ಕಿ ಹಾಗು ಔರಾದ್ನಲ್ಲಿ ತಲಾ 7 ಮಂದಿ ಸೇರಿ ಒಟ್ಟು 52 ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ 26 ಸೋಂಕಿತ ಶಿಕ್ಷಕರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಕೆಲವರು ಹೋಮ್ ಐಸೋಲೇಷನ್ನಲ್ಲಿದ್ದಾರೆ.ಇದರಿಂದಾಗಿ ಚುನಾವಣೆಗಾಗಿ ಶಿಕ್ಷಕರು ಪ್ರಾಣವನ್ನು ತೆರ ಬೇಕಾದದ್ದು ಘೋರ ದುರಂತ ಎಂದೇ ಹೇಳ ಬೇಕಾಗುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ಬೀದರ್ ಡಿಡಿಪಿಐ ಟಿ.ಆರ್.ದೊಡ್ಡೆ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಚುನಾವಣೆ ನಡೆಸಲಾಗಿತ್ತು. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಸರ್ ಸಿಂಪಡಿಸಿಕೊಂಡು ಮತದಾನ ಮಾಡಿದ್ದಾರೆ. ಆದರೂ ಚುನಾವಣೆ ಕೆಲಸ ಮಾಡುವ ಸಿಬ್ಬಂದಿಗೆ ಕೊರೊನಾ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆ ಕಾಡುತ್ತಿದೆ ಎನ್ನುತ್ತಾರೆ
.

ಕೊರೋನಾಕ್ಕೆ ಮದ್ದು ಒ2 ಡಿಜೆ ಇಂದು ಲೋಕಾರ್ಪಣೆ

JANANUDI.COM NETWORK


ನವದೆಹಲಿ ಮೇ.17;:ಕೊರೊನಾ ಸಾಂಕ್ರಮಿಕ ರೋಗದಿಂದ ಜಗತ್ತೆ ತತ್ತರಿಸುತ್ತಾ ಇರುವಾಗ ಔಷಧೀಯೇ ಇಲ್ಲದ ರೋಗ ಎಂದು ಹೈರನಾದ ಈ ಹೊತ್ತಲ್ಲಿ ಕೊರೋನಾಗೆ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಒ2 ಡಿಜೆ ಎಂಬ ಮದ್ದು ಕಂಡು ಹಿಡಿದಿದ್ದು, ಇಂದು ಲೋಕಾರ್ಪಣೆ ಆಗಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಈ ಔಷಧದ ಹತ್ತು ಸಾವಿರ ಪ್ಯಾಕೆಟ್ಗಳನ್ನು ಕೆಲವು ಆಸ್ಪತ್ರೆಗಳಿಗೆ ವಿತರಿಸಿಲಿದ್ದಾರೆ.
ಒ2 ಡಿಜೆ ಎಂಬ ಹೆಸರಿನ ಈ ಔಷಧವು ಮಾನವನ ದೇಹವನ್ನು ಸೇರಿಕೊಂಡಾಗ ವೈರಾಣುಗಳ ಬಲವನ್ನು ಕುಂದಿಸಿ, ಸೋಂಕು ಇತರ ಭಾಗಗಳಿಗೆ ಹರಡದಂತೆ ರಕ್ಷಾಕವಚ ನಿರ್ವಿುಸುತ್ತದೆ ಎಂದು ಹೇಳಲಾಗುತ್ತದೆ. ಈ ಔಷಧ ಬಳಸಿದ ಮೂರೇ ದಿನಗಳಲ್ಲಿ ಸೋಂಕಿತರು ಚೇತರಿಸಿಕೊಳ್ಳುವಂತೆ ಮಾಡುವ ಸಾಮರ್ಥ್ಯ ಇದಕ್ಕಿರುವುದು ಕ್ಲಿನಿಕಲ್ ಟ್ರಯಲ್ನಲ್ಲಿ ಇದು ಸಾಬೀತಾಗಿದೆ ಎಂದು ಡಿ.ಆರ್.ಡಿ.ಒ ತಿಳಿಸಿದೆ.
ಪುಡಿಯ ರೂಪದಲ್ಲಿರುವ ಈ ಔಷಧವನ್ನು ಸೋಂಕಿತರು ಯಾವುದೇ ಭಯವಿಲ್ಲದೆ ನೀರಿನಲ್ಲಿ ಬೆರೆಸಿ ಕುಡಿಯುವುದು, ಇದು ಕೋವಿಡ್ ರೋಗಿಗಳು ಶೀಘ್ರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗ ಬಹುದು ಎಂದು ಹೇಳಲಾಗುತ್ತದೆ. ಈ ಔಷಧದಿಂದ ಪ್ರಾಣಹಾನಿ ಕಡಿಮೆಯಾಗಲಿದೆ ಎಂದು ನಂಬಲಾಗುತ್ತದೆ
.

ಕೋವಿಡ್ ಸೋಂಕಿತರನ್ನು ಅಸ್ಪ್ರಶ್ಯರಂತೆ ಕಾಣದೇ ಧೈರ್ಯ ತುಂಬೋಣ ಸಮುದಾಯವೇ ನೆರವಿಗೆ ನಿಲ್ಲುವಂತಾಗಲಿ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಸೋಂಕಿತರನ್ನು ಅಸ್ಪ್ರಶ್ಯರಂತೆ ಕಾಣದೇ ಸಮುದಾಯವೇ ಅವರ ನೆರವಿಗೆ ನಿಂತು ಆತ್ಮಸ್ಥೈರ್ಯ ತುಂಬುವ ಮೂಲಕ ಈ ಮಹಾಮಾರಿಯಿಂದಾಗುತ್ತಿರುವ ಸಾವಿನ ಪ್ರಮಾಣ ತಗ್ಗಿಸಬಹುದು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಹಾಗೂ ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ಮನ್ವಂತರ ಜನಸೇವಾ ಟ್ರಸ್ಟ್ ಹಾಗೂ ಮನ್ವಂತರ ಪ್ರಕಾಶನದ ಆಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಿಧಿವಶರಾದ ತಮ್ಮ ಮಾತೃಶ್ರೀ ಅಕ್ಕೆಮ್ಮ ಅವರ ಸ್ಮರಣಾರ್ಥ ಪತ್ರಕರ್ತರು ಮತ್ತು ಹಲವು ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸಂಬಂಧ ಸರ್ಕಾರವನ್ನು ನಿಂದಿಸುವುದರಿಂದ ಪ್ರಯೋಜನವಿಲ್ಲ, ಸಮುದಾಯವೇ ಸೋಂಕಿತರ ಸೇವೆಗೆ ನಿಲ್ಲಬೇಕು, ಭಯದಿಂದಲೇ ಹೆಚ್ಚಿನ ಸಾವು ಸಂಭವಿಸುತ್ತಿರುವುದರಿಂದ ಸೋಂಕಿತರಿಗೆ ಧೈರ್ಯ ತುಂಬಬೇಕು, ಆತಂಕ ದೂರ ಮಾಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಸಾವಿನಿಂದ ತಪ್ಪಿಸಬಹುದು ಎಂದರು.
ಕೋವಿಡ್ ಬರುತ್ತೆ ಹೋಗುತ್ತೆ ಆದರಿಂದ ಏನೂ ಆಗದು ಎಂಬ ಧೈರ್ಯ ಜನರಲ್ಲಿ ಬರಬೇಕಾಗಿದೆ, ಕೊರೋನಾ ಪೀಡಿತರಾಗಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಅರ್ಪಿಸುವ ಕೊನೆಯ ಕಾರ್ಯಕ್ರಮ ಇದಾಗಲಿ, ಜನರ ಪ್ರಾಣ ಉಳಿಸುವ ಕಾರ್ಯದಲ್ಲಿ ಪತ್ರಕರ್ತರು ಸೇರಿದಂತೆ ಪ್ರತಿಯೊಬ್ಬರೂ ಕೈಜೋಡಿಸೋಣ ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, ಗೋವಿಂದಗೌಡರ ತಾಯಿ ಅಕ್ಕೆಮ್ಮ ಆತ್ಮವಿಶ್ವಾಸದ ಪರ್ವತವಿದ್ದಂತೆ, ನಯ-ನಾಜೂಕಿನ ನಾಟಕೀಯ ಮಾತುಗಳು ಅವರದಲ್ಲ, ನೇರ ಹಾಗೂ ನಿಷ್ಠೂರದಿಂದ ಮಾತನಾಡುವ ಅವರ ಹೃದಯವಂತಿಕೆಯೇ ಇಂತಹ ಸಾಮಾಜಿಕ ಕಾರ್ಯಗಳಿಗೆ ಗೋವಿಂದಗೌಡರಿಗೆ ಪ್ರೇರಣೆಯಾಗಿದೆ ಎಂದರು.
ನೋವಿನಲ್ಲಿರುವವರಿಗೆ ಗೋವಿಂದಗೌಡರು ಆಪದ್ಬಾಂದವರಿದ್ದಂತೆ ಎಂದು ತಿಳಿಸಿ ತಾಯಿ ಅಕ್ಕೆಮ್ಮ ಅವರ ಆತ್ಮವಿಶ್ವಾಸದ ಮಾತುಗಳು ಹಾಗೂ ಗೋವಿಂದಗೌಡರ ನೆರವಿನ ಹೃದಯವಂತಿಕೆ ಕುರಿತು ಮಾತನಾಡುತ್ತಾ ಭಾವಪರವಶರಾದರು.
ನಾನು,ನನ್ನದು, ನನ್ನಿಂದಲೇ ಎಂಬ ಅಹಂಕಾರಕ್ಕೆ ಕೋವಿಡ್ ಪಾಠ ಕಲಿಸಿದೆ, ನಾವೆಲ್ಲಾ ನೇರವಾಗಿ ಮಾತನಾಡುವುದನ್ನು ಕಲಿಯೋಣ ಮನುಷ್ಯರಾಗಿ ಬಾಳೋಣ ಎಂದು ಕಿವಿಮಾತು ಹೇಳಿ, ಅಕ್ಕೆಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಕಷ್ಟದಲ್ಲಿರುವವರ ಕೈಹಿಡಿಯುವ ಗೋವಿಂದಗೌಡರ ಗುಣಕ್ಕೆ ತಾಯಿ ಅಕ್ಕೆಮ್ಮ ಅವರೇ ಪ್ರೇರಣೆ, ನಿರಂತರವಾಗಿ ಸಮಾಜಸೇವೆ ಮಾಡುವ ಅವರ ಹೃದಯವಂತಿಕೆ ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, 25 ವರ್ಷಗಳಿಂದ ಗೋವಿಂದಗೌಡರ ಜತೆಗಿದ್ದೇವೆ, ಜಾತಿ,ಧರ್ಮದ ಎಲ್ಲೆ ಮೀರಿ ಕಷ್ಟದಲ್ಲಿ ಇರುವವರಿಗೆ ನೆರವಾಗುವ ಗುಣ ಅವರ ತಾಯಿ ಅಕ್ಕೆಮ್ಮ ಅವರಿಂದಲೇ ಬಳುವಳಿಯಾಗಿ ಅವರಿಗೆ ಬಂದಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡೋಣ, ಗೋವಿಂದಗೌಡರ ಮಾತೃಶ್ರೀ ಅಕ್ಕೆಮ್ಮ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಕ್ಕೆಮ್ಮ ಹಾಗೂ ಈವರೆಗೂ ಕೋವಿಡ್‍ನಿಂದ ಮೃತಪಟ್ಟವರಿಗೆ 2 ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮನ್ವಂತರ ಪ್ರಕಾಶನದ ಆಧ್ಯಾತ್ಮಿಕ ವಿಭಾಗದ ಸಂಚಾಲಕ ಎಸ್.ಮಂಜುನಾಥ್ ಉಪಸ್ಥಿತರಿದ್ದು, ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆ ಖಜಾಂಚಿ ಎಸ್.ಎನ್.ಪ್ರಕಾಶ್ ಸೇರಿದಂತೆ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು
.

ಚಂಡಮಾರುತದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲೂ ಆನಾಹುತಗಳು – ಚಿಕ್ಕನಸಾಲು ಪಿಯುಸ್ ಕರ್ವಾಲ್ಲೊರ ಮನೆ ಮೇಲೆಉರುಳಿತು ಬ್ರಹತ್ ತೆಂಗಿನಮರ

JANANUDI.COM NETWORK

ಕುಂದಾಪುರ,ಮೇ.15: ತೌಕ್ತೆ ಚಂಡಮಾರುತದಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿಯೂ ಅನಾಹುತಗಳಾಗಿವೆ.  ರಭಸವಾದ ಗಾಳಿ ಮಳೆಗೆ ಹಲವಾರು  ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ. ನಿನ್ನೆ ಕುಂದಾಪುರ ಚರ್ಚಿನ ವಠಾರದಲ್ಲಿ ಮರಬಿದ್ದರೆ, ಇಂದು ಮುಂಜಾನೆ 3.30 ಕ್ಕೆ ಕುಂದಾಪುರದಲ್ಲಿ ಚಿಕ್ಕನಸಾಲು ರಸ್ತೆಯಲ್ಲಿನ ಪಿಯುಸ್ ಕರ್ವಾಲ್ಲೊ ಎಂಬವರ ಮನೆ ಮೇಲೆ ಬ್ರಹತ್ ಮರ ಮನೆಯ ಮೇಲೆ ಉರುಳಿದೆ, ಬೆಳಗ್ಗಿನ ಜಾವ ಮನೆಯವರು ನಿದ್ರೆ ಮಾಡುವ ಹೊತ್ತಿನಲ್ಲಿ ಮರ ಮನೆ ಮೇಲೆ ಎರಗಿ, ಮನೆಗೆ ತುಂಬ ಹಾನಿಯಾಗಿದೆ.ಇತ್ತೀಗಷ್ಟೆ ಮನೆ ಮಾಡು ಹೊಸತಾಗಿ ನಿರ್ಮಿಸಿದ್ದು, ಹಾನಿಯಾಗಿ ನಷ್ಟ ಉಂಟಾಗಿದೆ. ಮನೆ ಸಮೀಪವಿದ್ದ ಹಲಸಿನ ಮರ ಕೂಡ ಗಾಳಿ ಮಳೆಗೆ ವಾಲಿದ್ದು, ಬೀಳುವ ಸ್ಥಿತಿಯಲ್ಲಿದೆ ಪುರಸಭಾ ಸದಸ್ಯ ಸಂತೋಷ್ ಮತ್ತು ಪುರಸಭಾ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಬರೆಕಟ್ಟು ಬೈಲು ಪರಿಸರದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್  ಕಂಬಕ್ಕೆ ಹಾನಿಯುಂಟಾಗಿದೆಯೆಂದು ವರದಿಯಾಗಿದೆ.

ಆಘಾತಕಾರಿ ಸುದ್ದಿ – ರೋಜರಿ ಸೊಸೈಟಿಯ ಮುಖ್ಯ ನಿರ್ವಹಣ ಅಧಿಕಾರಿ,ಸಂಗೀತಗಾರ ಪಾಸ್ಕಲ್ ಡಿಸೋಜಾ (52) ವಿಧಿವಶ

JANANUDI.COM NETWORK


ಕುಂದಾಪುರ,ಮೇ.16; ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ,ಸಂಗೀತಗಾರ ಪಾಸ್ಕಲ್ ಡಿಸೋಜಾ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು16-5-21ರಂದು (52) ವರ್ಷ ಪ್ರಾಯದಲ್ಲಿ ವಿಧಿ ವಶರಾದ ಅಘಾತಕಾರಿ ಘಟನೆ ನಡೆದಿದೆ. ಶ್ರೀಯುತರು ಪತ್ನಿ ವಿನೀತಾ,ಪುತ್ರಿ ಪ್ರಮೀತಾ ಹಾಗೂ ಕುಟುಂಬ ಮತ್ತು ಅವರ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ. ಪಾಸ್ಕಲ್ ರವರು ಹಲವಾರು ವರ್ಷಗಳಿಂದ ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಯಾಗಿ ಸೇವೆ ಸಲ್ಲಿಸುತಿದ್ದರು. ಹಾಗೇ ಸಂಗೀತಗಾರನಾಗಿ ಗುರುತಿಸಿ ಕೊಂಡಿದ್ದರು, ಹಲವಾರು ಗೀತೆಗಳನ್ನು ರಚಿಸಿ ಸಂಗೀತ ಸಿ.ಡಿ.ಗಳನ್ನು ಹೊರ ತೆಗಿದ್ದರು,ಹಾಗೇ ಕೊಂಕಣಿ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದ್ದರು. ಅಲ್ಲದೆ ಕಲಾಮ್ರತ ಸಾಂಸ್ಕ್ರತಿಕ ತಂಡದ ನಾಟಕಗಳಿಗೆ ಸಂಗೀತ ನಿರ್ದೇಶನ ನೀಡಿದ್ದರು.

ಬಹಳ ಹಿಂದಿನಿಂದ ಇವತ್ತಿನ ವರೆಗೆ ದಿರ್ಘ ಕಾಲ ಕುಂದಾಪುರ ಚ ರ್ಚಿನಲ್ಲಿ ಭಕ್ತಿಗಾಯನಗಳಿಗೆ ಸಂಗೀತ ನೀಡಿ ಅಮೂಲ್ಯ ಸೇವೆ ನೀಡಿದವರಾಗಿದ್ದು ಇವರ ನಿಧನದಿಂದ ಕುಂದಾಪುರ ಚರ್ಚಿಗೆ ಹೇಳಲಾರದ ನಷ್ಟ ಉಂಟಾಗಿದೆ. ಇವರ ಮ್ರತ್ಯು ಕುಂದಾಪುರ ಚರ್ಚಿನ ಭಕ್ತಾಧಿಗಳಿಗೆ ಅಘಾತವನ್ನು ತಂದಿದೆ.


ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲರಾದ ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಕುಂದಾಪುರ ಚರ್ಚ್ ಸಂಗೀತ ತಂಡದ ಅಧ್ಯಕ್ಷೆ,ವಿನಯಾ ಡಿಕೋಸ್ತಾ, ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ,ಉಪಾಧ್ಯಕ್ಷರು ಮತ್ತು ನಿರ್ದೇಶಕರು, ಸಿಬಂದಿ ವರ್ಗ ಹಾಗೇ ಕುಂದಾಪುರ ಕಥೊಲಿಕ್ ಸಭಾದ ಹಾಗೂ ಕಲಾಮ್ರತ್ ಸಾಂಸ್ಕ್ರತಿಕ ತಂಡದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಮುಂತಾದವರು ಕಂಬನಿ ಮಿಡಿದಿದ್ದಾರೆ.


ಪಾಸ್ಕಲ್ ಡಿಸೋಜಾರವರು ಜನನುಡಿ.ಕಾಮ್ ನ ಅಭಿಮಾನಿಗಳಾಗಿದ್ದು,ಅವರ ನಿಧನವು ಸಹಿಸಲಾರದ ದುಖವನ್ನುಂಟು ಮಾಡಿದೆ. ಜನನುಡಿ.ಕಾಮ್ ಅವರ ಅವರ ಕುಟುಂಬಕ್ಕೆ, ಸಾಂತ್ವಾನ ಬಯಸುತ್ತದೆ, ಮತ್ತು ಈ ದುಖವನ್ನು ಸಹಿಸಲು ದೇವರಿಂದ ಶಕ್ತಿ ಸಿಗಲೆಂದು ಪ್ರಾಥಿಸುತ್ತಾ,ಅತ್ಯಂತ ದುಖದಿಂದ ಶ್ರದ್ದಾಂಜಲಿಯನ್ನು ಅರ್ಪಿಸುತ್ತಿದೆ

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ; ಸಂಸದ ಎಸ್.ಮುನಿಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ , ಕೋವಿಡ್ ನಿಯಂತ್ರಣದಲ್ಲಿ ಪತ್ರಕರ್ತರು ಪ್ರಮುಖ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ . ಅವರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು . ಇಂದು ಪತ್ರಕರ್ತರ ಭವನದಲ್ಲಿ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ , ಪತ್ರಕರ್ತರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು . ಸರ್ಕಾರ ಪತ್ರಕರ್ತರನ್ನು ಪ್ರಂಟ್‌ಲೈನ್ ವರ್ಕರ್ ಎಂದು ಘೋಷಿಸಿರುವುದು ಸಂತೋಷದ ವಿಷಯವಾಗಿದೆ . ಎಲ್ಲಾ ಪತ್ರಕರ್ತರು ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಇದರ ಸದುಪಯೋಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು . ಇದುವರೆಗೆ 140 ಪತ್ರಕರ್ತರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದರು . ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ಪತ್ರಕರ್ತರ ಭವನದಲ್ಲಿ ಕೋವಿಡ್ ಲಸಿಕೆ ನೀಡುವುದರ ಬಗ್ಗೆ ಪರಿಶೀಲನೆ ನಡೆಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು , ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ , ಖಜಾಂಚಿ ಎ.ಜಿ.ಸುರೇಶ್ ಕುಮಾರ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ