HOLY ROSARY CHURCH, KUNDAPUR – 450 th JUBILEE SOUVENIR 2021

ಭಾರತದಲ್ಲಿ ಭಾನುವಾರ ಒಂದೇ ದಿನ 50 ವೈದ್ಯರು ಕೊರೊನಾ ಸೋಂಕಿಗೆ ಬಲಿ- ಕೊರೊನಾಗೆ ಬಲಿಯಾದ ವೈದ್ಯರ ಸಂಖ್ಯೆ 1000 ಗಡಿ ದಾಟಿದೆ

JANANUDI.COM NETWORK

ನವದೆಹಲಿ: ಕೊರೊನಾ ಎರಡನೇ ಅಲೆಯಿಂದಾಗಿ ಸಾಮಾನ್ಯ ಜನತೆಯ ಜೊತೆಯಲ್ಲೇ ಫ್ರಂಟ್ ಲೈನ್ ವರ್ಕರ್ಸ್ ಆಗಿರುವ ವೈದ್ಯರೂ ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೊಳಗಾಗಿದ್ದು, ಭಾನುವಾರ ಒಂದೇ ದಿನ ಸುಮಾರು 50 ವೈದ್ಯರು ಸೋಂಕಗೆ ಬಲಿಯಾಗಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತಿಳಿಸಿದೆ.
ಕೊರೊನಾ ಸೋಂಕಿನ ಮೊದಲ ಅಲೆಗೆ ಸಿಲುಕಿ ಸುಮಾರು 736 ವೈದ್ಯರು ಮೃತಪಟ್ಟಿದ್ದು. ಈ ಹಿನ್ನೆಲೆಯಲ್ಲಿ ಲಸಿಕೆ ದೊರೆತ ತಕ್ಷಣ ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಫ್ರಂಟ್ ಲೈನ್ ವರ್ಕರ್ಸ್ ಗೆ ಲಸಿಕೆ ಹಾಕುವ ಅಭಿಯಾನ ಜನವರಿಯಲ್ಲಿ ಪ್ರಾರಂಭವಾಗಿತ್ತು.
ಆದರೆ ಇದುವರೆಗೆ ಕೇವಲ 66% ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಎರಡೂ ಡೋಸ್ ಲಸಿಕೆಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ಅಲೆ ಕಾಣಿಸಿಕೊಂಡ ಬಳಿಕವೂ ಸುಮಾರು 244 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಕೊರೊನಾಗೆ ಬಲಿಯಾದ ವೈದ್ಯರ ಸಂಖ್ಯೆ 1000 ದ ಗಡಿ ದಾಟಿದೆ. ಮೃತಪಟ್ಟ ವೈದ್ಯರ ಪೈಕಿ ಬಿಹಾರದಲ್ಲಿ 69, ಉತ್ತರ ಪ್ರದೇಶದಲ್ಲಿ 34 ಮತ್ತು ದೆಹಲಿಯಲ್ಲಿ 27 ವೈದ್ಯರು ಮೃತಪಟ್ಟಿದ್ಧಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ತಿಳಿಸಿದೆ.
ದೇಶದಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ಲಸಿಕೆ ಅಭಿಯಾನ ಪ್ರಾರಂಭವಾದ ಬಳಿಕ ಶೇ. 66 ಫ್ರಂಟ್ ಲೈನ್ ವರ್ಕರ್ಸ್ ಮಾತ್ರ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ಲರೂ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಅದರಲ್ಲೂ ಹಲವು ವೈದ್ಯರು ಲಸಿಕೆ ಪಡೆಯದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಮೊದಲು ಲಸಿಕೆ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇದೇ ವೇಳೆ ದೇಶದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಇದೆ. ಹಾಗಾಗಿ ಹಲವರು ವೈದ್ಯರು ತಮ್ಮ ಶಿಫ್ಟ್ ಗಿಂತ ಹೆಚ್ಚಿನ ಸಮಯ ಕೆಲಸ ಮಾಡಬೇಕಾಗುತ್ತದೆ. ಇದು ಅವರಿಗೆ ಸೋಂಕು ತಗುಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ದೇಸದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ವೈದ್ಯರಿದ್ದಾರೆ. ಅವರ ಪೈಕಿ ಕೇವಲ 3.5 ಲಕ್ಷ ವೈದ್ಯರು ಮಾತ್ರ ನಮ್ಮಲ್ಲಿ ಸದಸ್ಯರಾಗಿದ್ದಾರೆ. ಹಾಗಾಗಿ ಕೊರೊನಾದಿಂದಾಗಿ ಮೃತಪಟ್ಟ ವೈದ್ಯರ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಡಾ. ಜಯೇಶ್ ಲೀಲೆ ತಿಳಿಸಿದ್ದಾರೆ
.


.

ಮೋದಿ ಬಗ್ಗೆ ಯು.ಎಸ್. ’ಮಾರ್ನಿಂಗ್ ಕನ್ಸಲ್ಟ್’ ನ ಗುಪ್ತಚರ ವರದಿ

JANANUDI.COM NETWORK

ನವದೆಹಲಿ ಮೇ.21: ಕರೋನಾ ವೈರಸ್ ಎರಡನೇ ಅಲೆಯನ್ನು ಎದುರಿಸಲು ದೇಶವು ಹೈರಾಣದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಕೆಳ ಮಟ್ಟಕ್ಕೆ ಹೋಗಿದೆಯೆಂದು ಯು.ಎಸ್. ಸಮೀಕ್ಷೆಯೊಂದು ಧ್ರಡ ಪಡಿಸಿದೆ.
ಮೂರು ದಶಕಗಳ ನಂತರ ಅತಿ ದೊಡ್ಡ ಜಯವನ್ನು ದಾಖಲಿಸಿ 2014 ರಲ್ಲಿ ಅಧಿಕಾರಕ್ಕೆ ಬಂದು ಇನ್ನೊಮ್ಮೆ 2019 ರಲ್ಲಿ ಮರು ಆಯ್ಕೆಯಾದ ನರೇಂದ್ರ ಮೋದಿಯು, ಪ್ರಬಲ ರಾಷ್ಟ್ರೀಯ ನಾಯಕ ಸ್ಥಾನವನ್ನು ಪಡೆದುಕೊಂಡಿದ್ದರು.
ಆದರೆ ಭಾರತದ ಕೋವಿಡ್ -19 ಪ್ರಕರಣವು ಈ ವಾರದಲ್ಲಿ 25 ಮಿಲಿಯನ್ ದಾಟಿದ್ದು, ಇದು ಭಾರತದಲ್ಲಿ ಕೋವಿಡ್ ಎರಡನೇಯ ಅಲೆಗೆ ಸಿದ್ಧತೆಯ ಕೊರತೆ ಮತ್ತು ನಿಭಾವಣೆಯ ಲೋಪದಿಂದ ಮೋದಿಯ ಜನಪ್ರಿಯತೆ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಜನ ಪ್ರಿಯತೆ ಗುಂದಿದೆಯೆಂದು ಗುಪ್ತಚರ ಕಂಪೆನಿ ’ಮಾರ್ನಿಂಗ್ ಕನ್ಸಲ್ಟ್’ ನ ಯುಎಸ್ ಡೇಟಾ ತಿಳಿಸಿದೆ.
ಹಲವು ಜಾಗತಿಕ ನಾಯಕರ ಪಟ್ಟಿಯಲ್ಲಿ ಈ ವಾರ ನರೇಂದ್ರ ಮೋದಿಯವರ ಒಟ್ಟಾರೆ ರೇಟಿಂಗ್ 63% ರಷ್ಟಿದ್ದು, ಇದು ಆಗಸ್ಟ್ 2019 ರಲ್ಲಿ ಯುಎಸ್ ಸಂಸ್ಥೆಯು ಅವರ ಜನಪ್ರಿಯತೆಯನ್ನು ಪತ್ತೆ ಹಚ್ಚಲು ಪ್ರಾರಂಭಿಸಿದ ನಂತರದ ಕನಿಷ್ಠ ಮಟ್ಟದು’ ಎಂದು ಮೇಲೆ ಹೇಳಿದ ಯುಎಸ್ ಗುಪ್ತಚರ ಸಂಸ್ಥೆ ಹೇಳಿದೆ.

ಇಸ್ರೇಲ್ – ಪ್ಯಾಲೇಸ್ತಿನಿನ ಹಮಾಸ್ ಸಮರ ಜ್ಯಾರಿ : 50 ಸಾವಿರ ಮಂದಿಯ ಸ್ಥಳಾಂತರ, ಇಸ್ರೇಲಿನ 10, ಪ್ಯಾಲೆಸ್ತೀನಿಯರ 212 ಸಾವು

“ಹಮಾಸ್ 3,200 ಬಾರಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಇಸ್ರೇಲ್ ಅತ್ಯಂತ ಆಧುನಿಕ ಐರೊನ್ ಡೋಮ್ ತಂತ್ರಗಾರಿಕೆಯಿಂದ, ಆಕಾಶ ಮಾರ್ಗದಲ್ಲೆ ಬರುತ್ತಿರುವ ರಾಕೆಟಗಳನ್ನು ಹೊಡೆದುರೂಳಿಸಿ ತನ್ನ ರಕ್ಷಣೆಯನ್ನು ಕಂಡುಕೊಂಡಿದೆ“

JANANUDI.COM NETWORK


ಗಾಜಾ,ಮೇ. 21: ಇಸ್ರೇಲ್ ಮತ್ತು ಪ್ಯಾಲೇಸ್ತಿನಿನ ಹಮಾಸ್ ಬಂಡುಕೋರದ ಮಧ್ಯೆ ವಾಯು ಮುಂದುವರಿದೆ ಇರುವಾಗ ಗಾಜಾದಲ್ಲಿ 450 ಕಟ್ಟಡಗಳು ಧ್ವಂಸವಾಗಿದ್ದು, 52 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರನ್ನು ಆ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.
ವಿಶ್ವಸಂಸ್ಥೆಯ ನೆರವು ತಂಡದ ಅಧಿಕಾರಿ ವಕ್ತಾರರಾದ ಜೆನ್ಸ್ ಲಾರ್ಕೆ ಈ ಕುರಿತು ಮಾಹಿತಿ ನೀಡಿ ಇಸ್ರೇಲ್ ವಾಯುದಾಳಿಯಿಂದ 50,000ಕ್ಕೂ ಅಧಿಕ ಮಂದಿ ಪ್ಯಾಲೆಸ್ತೀನಿಯರ ವಿವಿಧ ಶಾಲೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.ಎಂದು ತಿಳಿಸಿದ್ದಾರೆ.
6 ಆಸ್ಪತ್ರೆಗಳು ಮತ್ತು 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಗಾಜಾದಲ್ಲಿ ಒಟ್ಟು 132 ಕಟ್ಟಡಗಳು ಸಂಪೂರ್ಣ ನೆಲಸಮವಾಗಿದ್ದು 316 ಕಟ್ಟಡಗಳು ಭಾಗಶಃ ನೆಲಸಮವಾಗಿವೆ.
ಹಗೇ ಇಸ್ರೇಲ್ನ ವಾಯುದಾಳಿಯಿಂದ ಗಾಜಾದ 61 ಮಕ್ಕಳು, 36 ಮಹಿಳೆಯರು ಸೇರಿ 212 ಪ್ಯಾಲೆಸ್ತೀನಿಯರ್ ಮೃತಪಟ್ಟಿದ್ದಾರೆ. ಸುಮಾರು 1,400 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಇನ್ನೂ ಸಂಘರ್ಷ ಮುಂದುವರಿದಿದ್ದು ಕಳೆದ ರಾತ್ರಿ ಹಲವು ಕಡೆ ಇಸ್ರೇಲ್ ವಾಯುದಾಳಿಯನ್ನು ಮುಂದುವರೆಸಿದೆ..
ಹಾಗೇ ಹಮಾಸ್ ಬಂಡುಕೋರರು ನಡೆಸಿದ ರಾಕೆಟ್ ದಾಳಿಯಿಂದ 10ಮಂದಿ ಇಸ್ರೇಲಿಯನರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ತಿಳಿಸಿದ್ದು, ಹಮಾಸ್ 3,200, ಬಾರಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಹೆಚ್ಚಿನ ಇ ರಾಕೆಟಗಳನ್ನು ಐರೊನ್ ಡೋಮ್ (ಆಕಾಶ ಮಾರ್ಗದಲ್ಲೆ ಬರುತ್ತಿರುವ ರಾಕೆಟಗಳನ್ನು ಹೊಡೆದುರೂಳಿಸುವ ಅತ್ಯಂತ ಆಧುನಿಕ ತಂತ್ರಗಾರಿಕೆಯಿಂದ, ಇಸ್ರೇಲ್ ತನ್ನ ರಕ್ಷಣೆಯನ್ನು ಕಂಡುಕೊಂಡಿದೆ. ಅಮೇರಿಕವು ಯುದ್ದ ನಿಲ್ಲಿಸಬೇಕೆಂದು ಅಪೇಕ್ಷೆ ಪಡುತ್ತದೆ,ಆದರೆ ಇಸ್ರೇಲ್ಗೆ ತನ್ನ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ ಎಂದು ಹೇಳಿದೆ.



ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಾರಕ್ಕೆ ನಾಲ್ಕು, ಮೂರು ದಿನ ಸಂಪೂರ್ಣ ಲಾಕ್ ಡೌನ್ ನಿರ್ಧಾರ

JANANUDI.COM NETWORK

ಬೆಂಗಳೂರು:ಮೇ.19; ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ನಂತರ ೫ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಾರದಲ್ಲಿ ನಾಲ್ಕು ದಿನ ಕೊರೋನಾ ಸೋಂಕು ತಡೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಿದ್ದಾರೆ.


ಹಾಸನದ ಜಿಲ್ಲೆಯ ಲಾಖ್ಡೌನ್


ಮೇ 20 ಹಾಸನದಲ್ಲಿ ಭಾನುವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ. ಇತರ ದಿನಗಳಲ್ಲಿ ಬೆಳಿಗ್ಗೆ 6 ರಿಂದ 10 ರವರೆಗೆ ದಿನಸಿ, ತರಕಾರಿ ಮತ್ತು ಇತರ ಅಗತ್ಯ ವಸ್ತುಗಳನ್ನು ಮಾರುವ ಅಂಗಡಿಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತೆರೆದಿರುತ್ತದೆ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ಕೋವಿಡ್ ರೋಗಿಗಳಿಗೆ ಲಭ್ಯವಿರುವ ಸೌಲಭ್ಯಗಳ ಮೇಲ್ವಿಚಾರಣೆಗೆ ಜಿಲ್ಲಾಡಳಿತ ವಿಶೇಷ ತಂಡವನ್ನು ರಚಿಸಿದೆ. ರೋಗಿಗಳ ದೂರುಗಳ ಮೇರೆಗೆ ಈ ತಂಡವು ಕಾರ್ಯನಿರ್ವಹಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.


ಚಿಕ್ಕಬಳ್ಳಾಪುರ ಜಿಲ್ಲೆಯ ಲಾಖ್ಡೌನ್


ಚಿಕ್ಕಬಳ್ಳಾಪುರದಲ್ಲಿ, ಜಿಲ್ಲೆಯಾದ್ಯಂತ ಪೂರ್ಣ ಲಾಕ್ ಡೌನ್ ಮೇ 20 ರಿಂದ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಹೇಳಿದ್ದಾರೆ. ಹಾಲು ಮತ್ತು ದಿನಸಿ ಮುಂತಾದ ಅಗತ್ಯ ವಸ್ತುಗಳು ಇತರ ದಿನಗಳಲ್ಲಿ ಬೆಳಿಗ್ಗೆ 6 ರಿಂದ 10 ರವರೆಗೆ ಲಭ್ಯವಿರುತ್ತವೆ. ಆದಾಗ್ಯೂ, ರೈತರು ತಮ್ಮ ಉತ್ಪನ್ನಗಳನ್ನು ಪರ್ಯಾಯ ದಿನಗಳಲ್ಲಿ ಬೆಳಿಗ್ಗೆ ಚಿಂತಾಮಣಿ ಎಪಿಎಂಸಿಯಲ್ಲಿ ಮಾರಾಟ ಮಾಡಲು ಕೆಲವು ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಹೇಳಿದರು. ರೇಷ್ಮೆ ಬೆಳೆಗಾರರಿಗೆ ಶಿಡ್ಲಘಟ್ಟ ಮಾರುಕಟ್ಟೆಯಲ್ಲಿ ಸೀಮಿತ ಅವಧಿಗೆ ಅವಕಾಶ ನೀಡಲಾಗುವುದು. ಅಂತರ-ನಿರ್ಬಂಧ ಮತ್ತು ಅಂತರ-ರಾಜ್ಯ ಚಲನೆಗಳನ್ನು ಸಹ ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುತ್ತದೆ, ಆದರೆ ಸರಿಯಾದ ಗುರುತಿನೊಂದಿಗೆ ರೋಗಿಗಳ ಪರಿಚಾರಕರಿಗೆ ಅವಕಾಶ
ನೀಡಲಾಗುವುದು ಎಂದು ವಿವರಿಸಿದರು.ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಸಹ ಮುಚ್ಚಲಾಗುವುದು. ಜನ ಸಂಚಾರವನ್ನು ನಿಯಂತ್ರಿಸಲು ಹೆಚ್ಚುವರಿ ಪಡೆಗಳನ್ನು ಚಿಕ್ಕಬಳ್ಳಾಪುರ- ಬೆಂಗಳೂರು ಗಡಿಯಲ್ಲಿ ಮತ್ತು ಆಂಧ್ರ ಗಡಿಯಲ್ಲಿ ನಿಯೋಜಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ.


ಕಲಬುರಗಿ ಜಿಲ್ಲೆಯ ಲಾಖ್ಡೌನ್


ಕಲಬುರಗಿಯಲ್ಲಿ ಸಂಪೂರ್ಣ ಲಾಕ್ ಡೌನ್ ಗುರುವಾರ ಮತ್ತು ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.


ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಲಾಖ್ಡೌನ್


ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬುಧವಾರ ಮಧ್ಯಾಹ್ನ 12 ರಿಂದ ಶನಿವಾರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ, ಹಾಲು, ಮೊಟ್ಟೆ, ಔಷಧಿಗಳು, ಹೋಟೆಲ್‌ಗಳಿಂದ ಪಾರ್ಸೆಲ್, ಪೆಟ್ರೋಲ್ ಬಂಕ್‌ಗಳು ಮತ್ತು ಇತರ ತುರ್ತು ಸೇವೆಗಳಂತಹ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವುದನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗುತ್ತದೆ. ಗಿರಣಿಗಳಂತಹ ಸ್ಥಳಗಳಲ್ಲಿ ಒಳಾಂಗಣ ಕೆಲಸಕ್ಕೆ ಅವಕಾಶ ನೀಡಲಾಗುವುದು ಆದರೆ ಕಾರ್ಮಿಕರು ಹೊರಹೋಗಲು ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ಹೊರಡಿಸಿದ ಆದೇಶಗಳು ತಿಳಿಸಿವೆ
.

ಕೋವಿಡ್ ಲಾಕ್ ಡೌನ್ ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾದವರಿಗೆ ಕರ್ನಾಟಕದಿಂದ 1250 ಕೋಟಿ ರೂ ವಿಶೇಷ ಪ್ಯಾಕೇಜಿನ ದಯೆ

ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮೇ 23 ರಂದು ನಿರ್ಧಾರ ತೆಗೆದುಕೊಳ್ಳುತ್ತೇವೆ – ಸಿಎಂ ಬಿಎಸ್ ಯಡಿಯೂರಪ್ಪ.

JANANUDI.COM NETWORK

ಕೋವಿಡ್ ಲಾಕ್ ಡೌನ್ ನಿಂದ ತೀವ್ರ ಆರ್ಥಿಕ ಸಂಕಷ್ಟ 1250 ಕೋಟಿ ರೂ ವಿಶೇಷ ಪ್ಯಾಕೇಜಿನ ದಯೆ
ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಈ ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ 1,250 ಕೋಟಿ ರೂ.ಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ನ್ನು ವಿವಿಧ ವರ್ಗಗಳ ಹಿತರಕ್ಷಣೆಗೆ ಬಿಡುಗಡೆ ಮಾಡಿದೆ.
ಇಂದು ಹಿರಿಯ ಸಚಿವರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಿಷ್ಟು. ಕೊರೊಣಾ ನಿಯಂತ್ರಣಕ್ಕೆ ಲಾಕ್ ಡೌನ್ ಅನಿವಾರ್ಯವಾಗಿತ್ತು. ಮೇ.24ರವರೆಗೆ ನಿರ್ಬಂಧ ವಿಧಿಸಲಾಗಿತ್ತು. ಲಾಕ್ ಡೌನ್ ವೇಳೆ ಅಗತ್ಯ ಸೇವೆಗೆ ಅವಕಾಶ ಕಲ್ಪಸಿದ್ದವು. ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಿಗಾಗಿ ಸರ್ಕಾರದಿಂದ 1250 ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಣೆಯ ದಯೆ ತೋರಿದೆ


ಪ್ಯಾಕೇಜ್ ಘೋಷಣೆ ಈ ಥರಹ ಇದೆ.


ಆಟೋ ಟ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ ಪರಿಹಾರ.
ಬೀದಿ ಬದಿ ವ್ಯಾಪರಿಗಳಿಗೆ 3 ಸಾವಿರ
ಹೂವು ಹಣ್ಣು ವ್ಯಾಪರಿಗಳಿಗೆ 3 ಸಾವಿರ
ಕಲಾವಿದರು,ಕಲಾ ತಂಡಗಳಿಗೆತಲಾ 3 ಸಾವಿರ

ಹೂವು ಬೆಳೆಗಾರರಿಗೆ ಹೆಕ್ಟೇರ್ ಗೆ 10 ಸಾವಿರ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ 70 ಕೋಟಿ ಖರ್ಚಾಗಲಿದೆ.
ಅಸಂಘಟಿತ ಕಾರ್ಮಿಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ತಲ 2 ಸಾವಿರ ರೂ ಸಹಾಯ ಧನ,
ಬಿಪಿಎಲ್ ಅಂತ್ಯೋದಯ ಕಾರ್ಡುದಾರರಿಗೆ 5 ಕೆ.ಜಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿ, ನಗರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟಿನ್ ನಲ್ಲಿ ಉಚಿತ ಊಟ ನೀಡಲಾಗುತ್ತದೆ.
ಕೊರೋನಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.
ಕೋವಿಡ್ ನಿರ್ವಹಣೆಗೆ ಗ್ರಾಮಪಂಚಾಯಿತಿಗಳಿಗೆ 50 ಸಾವಿರ ರೂ ಮುಂಗಡವಾಗಿ ನೀಡಲಾಗುವುದು. ಇದರಿಂದ 6 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗಲಿದೆ.
3 ದಿನಗಳೊಳಗೆ 2150 ವೈದ್ಯರ ನೇಮಕ ಮಾಡಲಾಗುವುದು


[ಇನ್ನು ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮೇ 23 ರಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ]

ಶಾಸಕರ ನಿಧಿಯಿಂದ ಸರ್ಕಾರಿ ಆಸ್ಪತ್ರೆಗೆ 72 ಆಮ್ಲಜನಕ ಸಾಂದ್ರಕ ಖರೀದಿ ಸೋಂಕಿತ ಶಿಕ್ಷಕರಿಗೆ ಆದ್ಯತೆ ಮೇಲೆ ಬಳಸಿ-ಡಾ.ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋಲಾರ ಸೇರಿದಂತೆ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಐದು ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಿಗೆ ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿಯ ಮೂಲಕ ತಲಾ 5 ಲೀಟರ್ ಸಾಮಥ್ರ್ಯದ 72 ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಮೂಲಕ ಇವುಗಳನ್ನು ಕೋವಿಡ್ ಸೋಂಕಿಗೆ ತುತ್ತಾದ ಶಿಕ್ಷಕರು,ಉಪನ್ಯಾಸಕರಿಗೆ ಆದ್ಯತೆ ಮೇರೆಗೆ ಬಳಸುವಂತೆ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಕೋರಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ತಲಾ 2 ಕೋಟಿ ರೂ ಅನುದಾನವನ್ನು ಒದಗಿಸುತ್ತಿದ್ದು, ಅದರಲ್ಲಿ 2020-21ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸುವಾಗ ಈ ಹಣದಲ್ಲಿ ಶೇ.25 ರಷ್ಟನ್ನು ಕೋವಿಡ್ ಸಂಬಂಧಿತ ಆಸ್ಪತ್ರೆಗಳ ಸುಧಾರಣೆಗೆ ಬಳಸಿಕೊಳ್ಳಲು ಕೋರಿದ್ದಾರೆ.
ಈ ಹಣದ 50.40 ಲಕ್ಷ ವೆಚ್ಚದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಐದು ಜಿಲ್ಲೆಗಳ ತಮ್ಮ ಮತ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ,ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಿಗೆ ತಲಾ 5 ಲೀ.ಸಾಮಥ್ರ್ಯದ 70 ಸಾವಿರ ರೂ ಘಟಕ ವೆಚ್ಚದಲ್ಲಿ ಆಕ್ಸಿಜನ್ ಕಾನ್ಸರ್‍ಟ್ರೇಟರ್‍ಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅದರಂತೆ ಕೋಲಾರ ಜಿಲ್ಲೆಗೆ 14 ಕಾನ್ಸರ್‍ಟ್ರೇಟರ್‍ಗಳು, ಚಿಕ್ಕಬಳ್ಳಾಪುರ ಜಿಲ್ಲೆಗೆ 12, ತುಮಕೂರು ಜಿಲ್ಲೆಗೆ 22, ಚಿತ್ರದುರ್ಗ ಜಿಲ್ಲೆಗೆ 14 ಹಾಗೂ ದಾವಣಗೆರೆ ಜಿಲ್ಲೆಗೆ 10 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸುವಂತೆ ಅವರ ಪತ್ರದಲ್ಲಿ ಡಿಸಿಯವರಿಗೆ ವಿನಂತಿಸಿದ್ದಾರೆ.
ತಮ್ಮ ಅನುದಾನದಲ್ಲಿ ಖರೀದಿಸುತ್ತಿರುವ ಆಕ್ಸಿಜನ್ ಕಾನ್ಸರ್‍ಟ್ರೇಟರ್‍ಗಳನ್ನು ಕೋಲಾರ ಜಿಲ್ಲಾ ಎಸ್‍ಎನ್‍ಆರ್ ಆಸ್ಪತ್ರೆಗೆ 4 ಹಾಗೂ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 2 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸುವಂತೆ ಪತ್ರದಲ್ಲಿ ವೈ.ಎ.ನಾರಾಯಣಸ್ವಾಮಿ ಸೂಚಿಸಿದ್ದಾರೆ.
ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 2 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸಲು ಸೂಚಿಸಿರುವ ಅವರು, ತುಮಕೂರು ಜಿಲ್ಲೆಯ ಜಿಲ್ಲಾಸ್ಪತ್ರೆಗೆ 4 ಮತ್ತು ಉಳಿದಂತೆ ಅಲ್ಲಿನ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 2 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸಲು ಸೂಚಿಸಿದ್ದಾರೆ.
ಹಾಗೆಯೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ 4 ಹಾಗೂ ಅಲ್ಲಿನ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 2 ಕಾನ್ಸರ್‍ಟ್ರೇಟರ್‍ಗಳು, ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಗೆ 4, ಜಗಳೂರು ಮತ್ತು ಹರಿಹರದ ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ತಲಾ 3 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸಲು ಡಿಸಿಯವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿ.ಜೆ.ಎಂ.ಎಲ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದೆ ; ಲಿಂಬಾವಳಿ

ವರದಿ :ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿ.ಜೆ.ಎಂ.ಎಲ್ ಆಸ್ಪತ್ರೆಯನ್ನು ಇಂದು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದೆ . ಇದರಿಂದ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯಲು ತುಂಬಾ ಅನುಕೂಲವಾಗುತ್ತದೆ . ಡಾಕ್ಟರ್ , ಆರೋಗ್ಯ ಸಿಬ್ಬಂದಿ , ಔಷಧಿ ಯಾವುದೇ ಕೊರತೆಯಾಗದಂತೆ ನಾಳೆಯಿಂದ ಆಸ್ಪತ್ರೆಯು ಕಾರ್ಯ ನಿರ್ವಹಿಸಲಿದೆ ಎಂದು ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ್ ಲಿಂಬಾವಳಿ ಅವರು ತಿಳಿಸಿದರು , ಇಂದು ಕೆಜಿಎಫ್ ನಗರದ ಬಿ.ಜಿ.ಎಂ.ಎಲ್ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅವರು , ಆಸ್ಪತ್ರೆಯಲ್ಲಿನ ಬೆಡ್ ವ್ಯವಸ್ಥೆ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು . ಸರ್ಕಾರ ಮತ್ತು ಸ್ವಯಂಸೇವಕ ಡಾಕ್ಟರ್‌ಗಳು ಕೆಲಸ ಮಾಡುತ್ತಾರೆ . ಅವರಿಗೆ ಸರ್ಕಾರ ಗೌರವಧನವನ್ನು ನೀಡುತ್ತದೆ . ಆಸ್ಪತ್ರೆಯಲ್ಲಿ ಪ್ರಾರಂಭಿಕವಾಗಿ 250 ಹಾಸಿಗೆಗಳನ್ನು ಹಾಕಲಾಗಿದೆ . ಮುಂದಿನ ದಿನಗಳಲ್ಲಿ ಹೆಚ್ಚು ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಿ , ಆಕ್ಸಿಜನ್ ಪ್ಲಾಂಟ್‌ನ್ನು ಸಹ ನಿರ್ಮಿಸಲಾಗುತ್ತದೆ ಎಂದು ಹೇಳಿದರು . ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಆಸ್ಪತ್ರೆಯ ಮೂಲಭೂತ ಸೌಕರ್ಯಗಳು ಮತ್ತು ಸ್ವಚ್ಛತಾ ಕಾರ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಚಿವರಿಗೆ ನೀಡಿದರು . ಇದಕ್ಕೂ ಮುನ್ನಾ ಕೆ.ಜಿ.ಎಫ್ ತಾಲ್ಲೂಕು ಆಸ್ಪತ್ರೆಯಲ್ಲಿ 100 ಹಾಸಿಗೆಗಳಿಗೆ ಆಗುವಷ್ಟು ಆಮ್ಲಜನಕ ಪೂರೈಸುವ ಉನ್ನತೀಕರಿಸಿದ ಆಮ್ಲಜನಕ ಪೂರೈಕೆ ಘಟಕವನ್ನು ಸಚಿವರು ಉದ್ಘಾಟಿಸಿದರು . ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ ! ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ. ನಾಗರಾಜ್ , ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ.

ಪ್ರತಿಯೊಂದು ಜೀವವನ್ನೂ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ- ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಪ್ರತಿಯೊಂದು ಜೀವವನ್ನೂ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ . ಪ್ರತಿಯೊಂದು ಗ್ರಾಮವೂ ಕೊರೊನಾದಿಂದ ಮುಕ್ತವಾಗುವಂತೆ ಮಾಡಬೇಕು ಎಂಬ ಸಂಕಲ್ಪದಿಂದ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು . ಇದಕ್ಕಾಗಿ ಪಕ್ಷಭೇದ ಮರೆತು ಎಲ್ಲರೂ ಕೈಜೋಡಿಸಬೇಕು ಎಂದು ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳೊಂದಿಗೆ ಕೋವಿಡ್ 19 ( ಕರೋನ ವೈರಸ್ ) ವಿಡಿಯೋ ಸಂವಾದದಲ್ಲಿ ಭಾಗವಹಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ , ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿ , ತ್ವರಿತವಾಗಿ ಸೋಂಕಿತರನ್ನು ಪತ್ತೆ ಹಚ್ಚಿ , ಕೂಡಲೇ ಅವರಿಗೆ ಚಿಕಿತ್ಸೆ ಆರಂಭಿಸುವುದರ ಮೂಲಕ ಕರೋನಾ ತಡೆಗೆ ಸಹಕರಿಸಬೇಕು ಎಂದರು . ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್‌ನಲ್ಲಿರುವ ಸೋಂಕಿತರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದೇ ಇರುವವರನ್ನು ಕೋವಿಡ್ ಕೇರ್ ಸೆಂಟರ್‌ಗೆ ವರ್ಗಾಯಿಸಲಾಗುವುದು . ಕೋವಿಡ್ ದೃಢಪಟ್ಟು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಸುಧಾರಣೆಯನ್ನು ಆಶಾ ಕಾರ್ಯಕರ್ತೆಯರು , ಆರೋಗ್ಯ ಕಾರ್ಯಕರ್ತರು ಆಗಿಂದಾಗ್ಗೆ ಮನೆ ಭೇಟಿ ನೀಡಿ ಪರಿಶೀಲಿಸಬೇಕು . ಸೋಂಕಿತರು ಮನೆ ಬಿಟ್ಟು ಹೊರಗೆ ತಿರುಗಾಡದಂತೆ ನಿಗಾ ವಹಿಸಬೇಕು . ಹೋಮ್ ಐಸೊಲೇಶನ್‌ನಲ್ಲಿ ಇರುವವರನ್ನು ದೂರವಾಣಿ ಮುಖಾಂತರ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು . ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಖಾಸಗಿಯವರು ಕೋವಿಡ್ ಕೇರ್ ಸೆಂಟರ್ ತೆರೆಯಲು ಸಹಕಾರ ನೀಡುತ್ತೇವೆ . ಅಲ್ಲಿ ಕೆಲಸ ಮಾಡುವ ಆರೋಗ್ಯ ಸಹಾಯಕಿಯರಿಗೆ ಸರ್ಕಾರ ಗೌರವಧನ ನೀಡುತ್ತದೆ ಎಂದು ತಿಳಿಸಿದರು . ಅವಶ್ಯಕ ಸೇವೆ ಅಡಿಯಲ್ಲಿ ಜಿಲ್ಲೆಯಲ್ಲಿ 30 ಕಂಪನಿಗಳು ಕೆಲಸ ಮಾಡುತ್ತಿದ್ದು , ಅಲ್ಲಿನ ಕಾರ್ಮಿಕರಿಗೆ ಸೀನಿಂಗ್ ಮಾಡುವಂತೆ ಸೂಚಿಸಲಾಗಿದೆ . ಒಂದು ವೇಳೆ ಕಾರ್ಮಿಕರಿಗೆ ಕೊರೊನ ಬಂದರೆ ಕಂಪನಿಯವರೇ ಕೋವಿಡ್ ಕೇರ್ ಸೆಂಟರ್ ತೆರೆಯಬೇಕು . ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು . ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿದಿನ 1500 ಟೆಸ್ಟ್ ಮಾಡಲಾಗುತ್ತಿತ್ತು , ಇದನ್ನು 1800 ಕ್ಕೆ ಹೆಚ್ಚಿಸಲಾಗುವುದು . ಬ್ಲ್ಯಾಕ್ ಫಂಗಸ್‌ಗೆ ಜಾಲಪ್ಪ ಆಸ್ಪತ್ರೆಯಲ್ಲಿ 30 ಬೆಡ್‌ಗಳ ವಾರ್ಡ್ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ . ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ. ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ , ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ , ಅಪರ ಜಿಲ್ಲಾಧಿಕಾರಿಗಳಾದ ಡಾ.ಸ್ನೇಹ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿಜಯ್ ಕುಮಾರ್ , ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಜಗದೀಶ್ , ಸರ್ವೇಕ್ಷಣಾಧಿಕಾರಿಗಳಾದ ಚಾರಿಣಿ , ಡಾ.ವಿಜಯಕುಮಾರಿ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋಲಾರದ 24ರ ಹರೆಯದ ಶಾಮಿಲಿ ಕೋವಿಡ್‌ಗೆ ಬಲಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ .ಮೇ 18: ದ.ಕ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 24ರ ಹರೆಯದ ಶಾಮಿಲಿ ಕೋವಿಡ್‌ಗೆ ಬಲಿಯಾಗಿದ್ದಾರೆ.
ಕೋಲಾರದವರಾದ ಶಾಮಿಲಿ 7 ತಿಂಗಳ ಗರ್ಭಿಣಿಯಾಗಿದ್ದು, ಕೋಲಾರದ ಆರ್‌ಎಂ ಜಾಲಪ್ಪ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 4.30ಕ್ಕೆ ನಿಧನರಾಗಿದ್ದಾರೆ.
ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಅವರು ರಜೆಯ ಮೇಲೆ ತಮ್ಮ ಊರಿಗೆ ತೆರಳಿದ್ದರು. ಮೇ 2ರಂದು ಕೋವಿಡ್ ಪಾಸಿಟಿವ್ ಆಗಿ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಕೋಲಾರದ ಎಸ್‌ಪಿಯವರು ಶಾಮಿಲಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ಮುತುವರ್ಜಿ ವಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗರ್ಭಿಣಿಯಾಗಿದ್ದ ಕಾರಣ ಅವರು ಲಸಿಕೆಯನ್ನು ಪಡೆದುಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.
2021ರ ಜನವರಿ 11ರಂದು ದ.ಕ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಕೆ ಪ್ರೊಬೆಷನರಿ ಪಿಎಸ್‌ಐ ಆಗಿ ಕರ್ತವ್ಯ ಆರಂಭಿಸಿದ್ದರು. ಪೊಲೀಸ್ ಕುಟುಂಬದ ಯುವ ಸದಸ್ಯೆ ಕೋವಿಡ್‌ಗೆ ಬಲಿಯಾಗಿರುವ ಬಗ್ಗೆ ದು:ಖ ವ್ಯಕ್ತಪಡಿಸಿರುವ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಅವರು ಟ್ವೀಟ್ ಮಾಡಿದ್ದು, ಮನೆಯಲ್ಲಿದ್ದುಕೊಂಡು ಪೊಲೀಸರೊಂದಿಗೆ ಸಹಕರಿಸಿ ಎಂದೂ ಮನವಿ ಮಾಡಿದ್ದಾರೆ. ದ.ಕ. ಜಿಲ್ಲಾ ಪೊಲೀಸ್ ಸೊನಾವಣೆ ಋಷಿಕೇಶ್ ಕೂಡಾ ಮೃತರ ಆತ್ಮಕ್ಕೆ ಶಾಂತಿಕೋರಿದ್ದಾರೆ.