HOLY ROSARY CHURCH, KUNDAPUR – 450 th JUBILEE SOUVENIR 2021

ಕೊರೊನಾ ಸಂಕಷ್ಟ, ಆಮ್ಲಜನಕ ಸಿಲಿಂಡರ್ ವ್ಯವಸ್ಥೆಗೊಳಿಸಿದರೂ, ಬಿಜೆಪಿ ಶಾಸಕನ ಮಗನ ಸಾವು – ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ; ಬಿಜೆಪಿ ಶಾಸಕನ ಆರೋಪ

JANANUDI.COM NETWORK

[ಬಿಜೆಪಿಯ ಶಾಸಕನಿಗೇ ಇಂತಹ ಅವಸ್ಥೆ ಆದರೆ, ಸಾಮನ್ಯ ರೋಗಿಗಳ ಅವಸ್ಥೆ ಎನು? ಅವರ ಕುಟುಂಬದ ಪರಿಸ್ಥಿತಿ ಎನು, ಚಿಕಿತ್ಸೆ ಸರಿಯಾಗಿ ದೊರಕುತ್ತದೇಯೊ, ವೈದ್ಯರು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೊ?  ಕೇವಲ ದಾದಿಯವರನ್ನು ರೋಗಿ ಬಳಿ ಕಳುಹಿಸಿಕೊಟ್ಟು ನಿರ್ದೇಶನ ಕೊಡುತ್ತಾರೊ? ಕೊರೊನಾ ರೋಗಕಿಂತ ಮೊದಲು,ಆ ರೋಗಿಗಳಿಗಿದ್ದ ರೋಗಗಳಿಗೆ, ಸಮಸ್ಯೆಗಳಿಗೆ ಸರಿಯಾದ ಮದ್ದು ದೊರಕುತ್ತದೆಯೊ? ಅಥವ ವೀಪರೀತವಾದ ಸ್ತೀರಾಯ್ಡ್ ಮದ್ದುಗಳನ್ನು ಕೊಟ್ಟು ದೇಹದ ಅಂಗ ವೈಫಲ್ಯಗಳಾಗುವಂತ್ತೆ, ತಪ್ಪು ಚಿಕಿತ್ಸಾ ಕಾರಣದಿಂದ ಸಾವುಗಳು ಸಂಭವಿಸುತ್ತವೆಯೊ? ಪ್ಲಾಸ್ಮ ಥೆರೆಪಿಯಅಡ್ಡ ಪರಿಣಾಮದಿಂದ (ಈಗ ಈ ಥೆರಪಿ ನೀಷೆಧಿಸಲಾಗಿದೆ)ಸತ್ತವರೆಷ್ಟು, ಇದರಿಂದಾಗಿ ಗುಣಮುಖರಾದರೂ, ಇತರ ಅಡ್ಡ ಪರಿಣಾಮಗಳೇನು? ಆದ ಅನಾಹುತಗಳೆಷ್ಟು? ಎಂಬಿತ್ಯಾದಿ ಅಧ್ಯನಯಗಳು ನಡೆಯಬೇಕಾಗಿದೆ]

ಉತ್ತರ ಪ್ರದೇಶ: ಕೊರೊನಾ ವೈರಸ್‌ನಿಂದ ಪುತ್ರ ಮೃತಪಟ್ಟಿರುವುದಕ್ಕೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಜ್‌ಕುಮಾರ್ ಅಗರವಾಲ್ ದೂರಿದ್ದಾರೆ. ಅಲ್ಲದೆ ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯ ವಿರುದ್ಧ ದೂರು ನೀಡಿದರೂ, ಉತ್ತರ ಪ್ರದೇಶದ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

     ಹರ್ದೊಯ್ ಜಿಲ್ಲೆಯ ಸಂಡಿಲಾದ ಬಿಜೆಪಿ ಶಾಸಕ ರಾಜ್‌ಕುಮಾರ್ ಅಗರವಾಲ್ ಅವರ ಪುತ್ರ ಆಶಿಶ್, ಕೋವಿಡ್ ಸೋಂಕು ತಗುಲಿ ಏಪ್ರಿಲ್ 26ರಂದು ಕಾಕೋರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಏಪ್ರಿಲ್ 26ರ ಬೆಳಗ್ಗೆ ಆಮ್ಲಜನಕ ಮಟ್ಟವು 94 ಆಗಿತ್ತು. ಅವರು ಆಹಾರ ಸೇವಿಸುತ್ತಿದ್ದರು ಮತ್ತು ನಮ್ಮೊಂದಿಗೆ ನಿಯಮಿತವಾಗಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಸಂಜೆಯ ವೇಳೆಗೆ ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿದೆ ಎಂದು ವೈದ್ಯರು ಹೇಳಿದರು. ನಾವು ಹೊರಗಿನಿಂದ ಆಮ್ಲಜನಕ ಸಿಲಿಂಡರ್ ಅನ್ನು ವ್ಯವಸ್ಥೆಗೊಳಿಸಿದೆವು. ಆದರೆ ವೈದ್ಯರು ಆಮ್ಲಜನಕವನ್ನು ರೋಗಿಗೆ ಒದಗಿಸಲು ಅನುಮತಿಸಲಿಲ್ಲ. ಇದರಿಂದಾಗಿ ತನ್ನ ಮಗ ನಿಧನರಾದರು ಎಂದು ಆರೋಪಿಸಿದ್ದಾರೆ.

ಆಸ್ಪತ್ರೆ ಆಡಳಿತ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗ ಮೃತಪಟ್ಟಿದ್ದಾನೆ. ಮಗನಿಗೆ ನ್ಯಾಯ ಒದಗಿಸುವುದಕ್ಕಾಗಿ ಎಫ್‌ಐಆರ್ ದಾಖಲಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಆ ದಿನ ಆಸ್ಪತ್ರೆಯಲ್ಲಿ ಏಳು ಮಂದಿ ಮತಪಟ್ಟಿದ್ದಾರೆ. ನಾನು ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದೆ. ಆದರೂ ದೂರು ದಾಖಲಿಸಲಿಲ್ಲ. ಇನ್ನು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಬೇಕು ಮತ್ತು ನನ್ನ ಮಗನ ಸಾವಿಗೆ ಯಾರು ಕಾರಣ ಎಂಬುದನ್ನು ಕಂಡುಹಿಡಿಯಬೇಕು. ತಪ್ಪಿತ್ತಸ್ಥ ವೈದ್ಯರಿಗೆ ಶಿಕ್ಷೆಯಾಗಬೇಕು ಎಂಬುದು ನನ್ನ ಬೇಡಿಕೆಯಾಗಿದೆ ಎಂದು ಆಗ್ರಹಿಸಿದ್ದಾರೆ.ಬಿಜೆಪಿಯ ಶಾಸಕನಿಗೆ ಇಂತಹ ಅವಸ್ಥೆ ಆದರೆ, ಸಾಮನ್ಯ ರೋಗಿಗಳ ಅವಸ್ಥೆ ಎನು, ಅವರ ಕುಟುಂಬದ ಪರಿಸ್ಥಿತಿ ಎನು, ಚಿಕಿತ್ಸೆ ಸರಿಯಾಗಿ ದೊರಕುತ್ತದೇಯೊ, ವೈದ್ಯರು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೋ,  ವ ಕೇವಲ ದಾದಿಯವರನ್ನು ಕಳುಹಿಸಿಕೊಟ್ಟು, ನಿರ್ದೇಶನ ನೀಡುತ್ತಾರೋ, ಕೊರೊನಾ ರೋಗಕಿಂತ ಮೊದಲು,ಆ ರೋಗಿಗಳಿಗಿದ್ದ ರೋಗಗಳಿಗೆ, ಸಮಸ್ಯೆಗಳಿಗೆ ಮದ್ದು ದೊರಕುತ್ತದೆಯೋ, ಅಥವ ವೀಪರೀತವಾದ ಸ್ತೀರಾಯ್ಡ್ ಮದ್ದುಗಳನ್ನು ಕೊಟ್ಟು ದೇಹದ ಅಂಗ ವೈಫಲ್ಯಗಳಾಗುವಂತ್ತೆ,ಚಿಕಿತ್ಸೆಯ ಕಾರಣದಿಂದ ಸಾವುಗಳು ಸಂಭವಿಸುತ್ತವೋ, ಪ್ಲಾಸ್ಮ ಥೆರೆಪಿಯಿಂದ ಅಡ್ಡ ಪರಿಣಾಮದಿಂದ (ಈಗ ಈ ಥೆರಪಿ ನೀಷೆಧಿಸಲಾಗಿದೆ)ಸತ್ತರೆವಷ್ಟು, ಇದರಿಂದಾಗಿ ಗುಣಮುಖರಾದರೂ, ಇತರ ಅಡ್ಡ ಪರಿಣಾಮಗಳಿಂದ ಅನಾಹುತಗಳೆಷ್ಟು ಎಂಬಿತ್ಯಾದಿ ಪರೀಶಿಲನೆಗಳು ನಡೆಯ ಬೇಕಿದೆ.    

ಸೇವಾ ಮನೋಭಾವನೆ ಮೂಲಕ ಗ್ರಾಮೀಣದಲ್ಲಿ ಹರಡುವ ಕೊರೊನಾವನ್ನು ನಿಯಂತ್ರಿಸಬೇಕು ವಿಧಾನ ಪರಿಷತ್ ಸದಸ್ಯ ಡಾ . ವೈ.ಎ.ನಾರಾಯಣಸ್ವಾಮಿ

ವರದಿ :ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಆರೋಗ್ಯ ಇಲಾಖೆ ಸಿಬ್ಬಂದಿ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವುದರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹರಡುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ . ವೈ.ಎ.ನಾರಾಯಣಸ್ವಾಮಿ ಹೇಳಿದರು .

ಪಟ್ಟಣದ ಕೋವಿಡ್ ಆಸ್ಪತ್ರೆ ಹಾಗೂ ಹೊರವಲಯದಲ್ಲಿನ ಕೋವಿಡ್ ಸುರಕ್ಷಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ , ಕೊರೂನಾ ಸೋಂಕು ನಿಯಂತ್ರಣ ಸರ್ಕಾರದ ಪ್ರಥಮ ಆದ್ಯತೆಯಾಗಿದೆ . ಆದ್ದರಿಂದ ಕೋವಿಡ್ ವಿರುದ್ದ ಸಲಿಕಾ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಬೇಕು ಗ್ರಾಮೀಣ ಪ್ರದೇಶದಲ್ಲಿ ಅನುಕೂಲ ಇಲ್ಲದ ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಸಮೀಪದ ಕೊವಿಡ್ ಸುರಕ್ಷಾ ಕೇಂದ್ರಕ್ಕೆ ಸೇರಿಸಬೇಕು ಎಂದು ಸಲಹೆ ಮಾಡಿದರು.

ತಾಲ್ಲೂಕಿನಲ್ಲಿ ಈವರೆಗೆ ೪೦ ಸಾವಿರ ಜನಕ್ಕೆ ಕೊರೊನಾ ನಿರೋಧಕ ಲಸಿಕೆ ನೀಡಲಾಗಿದೆ . ಇನ್ನೂ ೧.೭೦ . ಲಕ್ಷ ಜನಕ್ಕೆ ಲಸಿಕೆ ನೀಡಬೇಕಾಗಿದೆ . ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ತಾಲ್ಲೂಕಿನ ಕೊರೊನಾ ಪೀಡಿತರ ಬಳಕೆಗೆ ಅಗತ್ಯವಾದ ಸುಸಜ್ಜಿತ ಆಂಬುಲೆನ್ ಒದಗಿಸಲಾಗುವುದು ೭ ಘನೀಕೃತ ಆಮ್ಲಜನಕ ಪರಿಕರಗಳನ್ನು ನೀಡಲಾಗುವುದು ಎಂದು ಹೇಳಿದರು .

ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ , ತಾಲ್ಲೂಕು ವೈದ್ಯಾಧಿಕಾರಿ ಡಾ . ಎಂ.ಸಿ.ವಿಜಯ , ಆಸ್ಪತ್ರೆ ಆಡಳಿತಾಧಿಕಾರಿ ಡಾ . ಜಿ.ಎಸ್.ಶ್ರೀನಿವಾಸ್ , ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಅಶೋಕರೆಡ್ಡಿ , ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ , ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಪ್ರಕಾಶ್ , ಪೋಲೀಸ್ ಇನ್ಸ್‌ಪೆಕ್ಟರ್ ಸಿ.ರವಿಕುಮಾರ್‌ , ಸಮಾಜ ಕಲಾನ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ , ಡಾ . ದಿವಾಕರ್ ಹರೀಶ್ , ಫಾರ್ಮಾಸಿಸ್ಟ್ ಮಹಮದ್ ಅಲಿ , ನಾಗರಾಜ್ ಇದ್ದರು.

ವಿಕಲಕಚೇತನರ ಕುಟುಂಬಗಳಿಗೆ ತಿಂಗಳಿಗಾಗುವಷ್ಟು ದಿನಸಿ ವಿತರಣೆ ನೆರವು ನೀಡಿ ಹೃದಯವಂತಿಕೆ ಮೆರೆದ ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸೊಪ್ಪು,ತರಕಾರಿ,ಟೀ ಮಾರಿ ಸ್ವಾಭಿಮಾನಿ ಜೀವನ ಕಟ್ಟಿಕೊಂಡಿದ್ದ ವಿಕಲಚೇತನರ ಕುಟುಂಬಗಳು ಲಾಕ್‍ಡೌನ್‍ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿರುವುದು ಅತ್ಯಂತ ನೋವಿನ ಸಂಗತಿ, ಅಂತಹವರಿಗೆ ತಮ್ಮ ಕೈಲಾದಷ್ಟು ನೆರವು ಒದಗಿಸುವ ಪ್ರಯತ್ನ ಮಾಡುವುದಾಗಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೇ ಸಂಕಷ್ಟಕ್ಕೀಡಾಗಿ ಕುಟುಂಬ ಉಪವಾಸದಲ್ಲಿದೆ ಎಂದು ನೋವು ತೋಡಿಕೊಂಡ ವಿಕಲಚೇತನರಿಗೆ ಇಡೀ ತಿಂಗಳಿಗಾಗುವಷ್ಟು ಎಲ್ಲಾ ರೀತಿಯ ದಿನಸಿ ವಸ್ತುಗಳನ್ನು ವಿತರಿಸಿ ಹೃದಯವಂತಿಕೆ ಮರೆದರು.
ಲಾಕ್‍ಡೌನ್ ಇಂದು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದ ಅನೇಕ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ, ಇದು ದುರ್ದೈವ ಎಂದು ತಿಳಿಸಿ, ಇಂತಹ ಸಂದರ್ಭದಲ್ಲಿ ಉಳ್ಳವರು ಮತ್ತಷ್ಟು ನೆರವು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಭಿಕ್ಕೆ ಬೇಡುವುದು ಗೊತ್ತಿಲ್ಲ, ಕೆಲವರು ಸೊಪ್ಪು,ತರಕಾರಿ ಮಾರಿ, ಮತ್ತೆ ಕೆಲವು ವಿಶಿಷ್ಟ ಚೇತನರು ಟೀ ಮಾರಿ ಜೀವನ ನಡೆಸುತ್ತಿದ್ದೇವು ಆದರೆ ಇದೀಗ ಲಾಕ್‍ಡೌನ್‍ನಿಂದ ನಮ್ಮ ಕೆಲಸಕ್ಕೆ ಕತ್ತರಿ ಬಿದ್ದಿದೆ, ನಾವು ಬೀದಿಗೆ ಬಂದಿದ್ದೇವೆ ಎಂದು ಕಣ್ಣೀರಿಟ್ಟ ವಿಕಲಚೇತನರನ್ನು ಕಂಡ ಗೋವಿಂದಗೌಡರು ಭಾವಪರವಶರಾದರು.
ವಿಕಲಚೇತನ ಪತಿ,ಇಬ್ಬರು ಮಕ್ಕಳು,ಅತ್ತೆ,ಮಾವರನ್ನು ಪೋಷಿಸುತ್ತಿರುವ ನಗರದ ಚಾಮುಂಡೇಶ್ವರಿ ನಗರದ ಸುಮಿತ್ರಾ, ನಾವು ಆರು ಮಂದಿ ಇದ್ದೇವೆ, ಇದೀಗ ತರಕಾರಿ ಮಾರಾಟಕ್ಕೂ ಕುತ್ತು ಬಂದಿದ್ದು, ಮಕ್ಕಳಿಗೆ ರಾತ್ರಿ ಅನ್ನ ನೀಡಿ, ಹಸಿವಿಗೆ ಅಂಜಿ ನೆರವು ಬೇಡುತ್ತಿರುವುದಾಗಿ ತಿಳಿಸಿದರು.
ಅದೇ ರೀತಿ ಟೀ ಮಾರಿ ಬದುಕು ಸಾಗಿಸುತ್ತಿದ್ದ ವಿಕಲಚೇತನ ಚಾಮುಂಡೇಶ್ವರಿ ನಗರದ ಬಾಲಾಜಿ,ಕಾರಂಜಿ ಕಟ್ಟೆಯ ನಿಶಾಂತ್ ಇಡೀ ಕುಟುಂಬ ಪೋಷಣೆ ನಮ್ಮ ಹೆಗಲಿಗಿದೆ ಆದರೆ ಲಾಕ್‍ಡೌನ್ ನಮ್ಮ ಬದುಕು ಕಸಿದಕೊಂಡಿದೆ ಎಂದು ಅಳಲು ತೋಡಿಕೊಂಡರು.
ಅಮ್ಮೇರಹಳ್ಳಿಯ ವಿಕಲಚೇತನರಾದ ಶ್ರೀನಿವಾಸ್, ತರಕಾರಿ ಮಾರಿ ಜೀವನ ಕಟ್ಟಿಕೊಂಡಿದ್ದರೆ ಚಾಮುಂಡೇಶ್ವರಿ ನಗರದ ನಾಗರಾಜ್ ಪೆಂಡಾಲ್ ರಿಪೇರಿ ಮೂಲಕ ಪತ್ನಿ,ಮಕ್ಕಳು, ತಂದೆ,ತಾಯಿಯನ್ನು ಪೋಷಿಸುವ ಹೊಣೆ ಹೊತ್ತಿದ್ದು, ಮದುವೆ,ಕಾರ್ಯಕ್ರಮಗಳಿಲ್ಲದ ಕಾರಣ ಆ ಕೆಲಸವೂ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟರು.
ವಿಕಲಚೇತನರ ಸಂಕಷ್ಟಕ್ಕೆ ಸ್ಪಂದಿಸಿದ ಬ್ಯಾಲಹಳ್ಳಿ ಗೋವಿಂದಗೌಡರು ಪ್ರತಿಕುಟುಂಬಕ್ಕೂ 15 ಕೆಜಿ ಅಕ್ಕಿ, 5 ಕೆಜಿ ಗೋದಿಹಿಟ್ಟು, 2 ಕೆಜಿ ಬೇಳೆ, ಟೀ,ಕಾಫಿ,ಮಕ್ಕಳಿಗೆ ಹಾರ್ಲಿಕ್ಸ್ ಸಮೇತ ಇಡೀ ತಿಂಗಳಿಗಾಗುವಷ್ಟು ದಿನಸಿ ವಸ್ತುಗಳನ್ನು ವಿತರಿಸಿ ಮತ್ತಷ್ಟು ನೆರವಿನ ಭರವಸೆ ನೀಡಿದರು.
ಮನ್ವಂತರ ಜನಸೇವಾ ಟ್ರಸ್ಟ್‍ನ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್ ಮಾತನಾಡಿ, ಕಷ್ಟಪಟ್ಟು ಬೆಳೆದ ತರಕಾರಿಗಳಿಗೆ ಬೆಲೆಯಿಲ್ಲದೇ ತೋಟವನ್ನೇ ನಾಶಪಡಿಸುವ ಪ್ರಯತ್ನ ನಡೆಸಿರುವ ರೈತರ ನೋವಿಗೂ ಸ್ಪಂದಿಸಿರುವ ಬ್ಯಾಲಹಳ್ಳಿ ಗೋವಿಂದಗೌಡರು, ರೈತರಿಂದ ತೋಟದಲ್ಲೇ ತರಕಾರಿ ಖರೀದಿಸಿ ಹಣ ನೀಡಿ ಅದೇ ತರಕಾರಿಯನ್ನು ಬಡವರಿಗೆ ಹಂಚುವ ಕೆಲಸವನ್ನೂ ಮನ್ವಂತರ ಜನಸೇವಾ ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಣ್ಣಿಹಳ್ಳಿ ಎಸ್‍ಎಫ್‍ಸಿಎಸ್ ಅಧ್ಯಕ್ಷ ಅಣ್ಣಿಹಳ್ಳಿ ನಾಗರಾಜ್, ಟ್ರಸ್ಟ್‍ನ ಖಜಾಂಚಿ ಎಸ್.ಎನ್.ಪ್ರಕಾಶ್, ಡಿಸಿಸಿ ಬ್ಯಾಂಕಿನ ಪದ್ಮಮ್ಮ, ಖಲೀಮುಲ್ಲಾ ಮತ್ತಿತರರಿದ್ದರು
.

ಸುಗಟೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ಲಸಿಕೆ ಅಭಿಯಾನಕ್ಕೆ ಪೊಲೀಸರ ಸಹಕಾರ ಪಡೆಯಿರಿ-ಸೆಲ್ವಮಣಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಲಸಿಕೆ ಹಾಕುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಲು ಪೊಲೀಸರ ಸಹಕಾರ ಪಡೆಯುವಂತೆ ತಾಲ್ಲೂಕಿನ ಸುಗಟೂರು ಪ್ರಾಥಮಿಕ ಕೇಂದ್ರದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ನೀಡಿದರು.
ಶನಿವಾರ ಸುಗಟೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಲಸಿಕೆ ಅಭಿಯಾನ, ಕೋವಿಡ್ ಪರೀಕ್ಷೆ ಕುರಿತು ಖುದ್ದು ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಸುಗಟೂರು ಆರೋಗ್ಯ ಕೇಂದ್ರವನ್ನು ಸುವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಿರುವ ಕುರಿತು ಅಲ್ಲಿನ ವೈದ್ಯಾಧಿಕಾರಿ ಡಾ.ಕೆ.ಕಾವ್ಯ ಅವರ ಕಾರ್ಯವನ್ನು ಪ್ರಶಂಶಿಸಿದ ಅವರು, ಲಸಿಕೆ ಮತ್ತು ಕೋವಿಡ್ ಟೆಸ್ಟ್ ಬೇರೆಬೇರೆ ಕಡೆಗಳಲ್ಲಿ ನಡೆಸಲು ಸೂಚಿಸಿದರು.
ಪ್ರಾಥಮಿಕ ಕೇಂದ್ರದ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡಿಸಿಯವರು, ಲಸಿಕೆ ಹಾಕಿಸಿಕೊಳ್ಳಲು ಸಾಮಾಜಿಕ ಅಂತರ ಮರೆತು ನಿಂತಿದ್ದ ಸಾರ್ವಜನಿಕರಿಗೆ ಬುದ್ದಿಹೇಳಿ ಕೋವಿಡ್ ಮಾರಿ ತಡೆಗೆ ಎಚ್ಚರಿಕೆ ವಹಿಸಿ ಎಂದು ಕಿವಿಮಾತು ಹೇಳಿದರು.
ಲಸಿಕೆ ಹಾಕುವ ಸಂಬಂಧ ಗುರುತಿನ ಚೀಟಿ ಅಪ್‍ಡೇಟ್‍ಅನ್ನು ಖುದ್ದು ಪರಿಶೀಲಿಸಿದ ಡಿಸಿಯವರು, ಕೋವಿಡ್ ಕುರಿತು ಆಸ್ಪತ್ರೆಗೆ ಬರುವವರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಕೋವಿಡ್ ಸೋಂಕಿನ ಕುರಿತು ಅರಿವು ಮೂಡಿಸಿ, ರೋಗ ಗ್ರಾಮಗಳಿಗೂ ವ್ಯಾಪಿಸಿರುವುದರಿಂದ ಹೆಚ್ಚಿನ ಮುಂಜಾಗ್ರತೆ ಅಗತ್ಯ ಎಂದರು.
ಸೋಂಕಿತರನ್ನು ಮನೆಯಲ್ಲೇ ಐಸೋಲೇಷನ್ ಆಗುವುದು ಬೇಡ, ಅವರನ್ನು ನವೊಲಿಸಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಿ ಎಂದು ಸಲಹೆ ನೀಡಿದ ಅವರು, ಜನತೆಯೂ ಈ ವಿಷಯದಲ್ಲಿ ಸಹಕಾರ ನೀಡಬೇಕು ಎಂದರು.
ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಸಾರ್ವಜನಿಕರು ಬರುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅತ್ಯಗತ್ಯವಾಗಿದೆ ಈ ಹಿನ್ನಲೆಯಲ್ಲಿ ಪೋಲಿಸರ ನೆರವನ್ನು ಪಡೆಯಿರಿ ಎಂದರು.
ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ, ಲಸಿಕೆ ಲಭ್ಯತೆ ನೋಡಿಕೊಂಡು ಅಭಿಯಾನದ ವೇಗ ಹೆಚ್ಚಿಸಲಾಗುವುದು ಎಂದರು.
ಜಿಲ್ಲಾಧಿಕಾರಿಗಳಿಗೆ ಆಸ್ಪತ್ರೆ ಕಾರ್ಯದ ಕುರಿತು ಮಾಹಿತಿ ನೀಡಿದ ವೈದ್ಯಾಧಿಕಾರಿ ಡಾ.ಕಾವ್ಯ, ಕೋವಿಡ್ ಟೆಸ್ಟ್ ಪ್ರಮಾಣವನ್ನು ಹೆಚ್ಚಿಸಲಾಗಿದೆ, ಗ್ರಾಮ ಪಂಚಾಯಿತಿಗಳ ಸಹಕಾರ ಪಡೆದು ಸೊಂಕು ನಿವಾರಕ ಸಿಂಪಡಣೆಗೂ ಕ್ರಮ ಕೈಗೊಳ್ಳಲಾಗಿದೆ, ಸೋಂಕಿತರಿಗೆ ಅರಿವು ಮೂಡಿಸಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸುವ ಕಾರ್ಯವನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸುಗಟೂರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಕಾವ್ಯ ಕೆ., ಫಾರ್ಮಾಸಿಸ್ಟ್ ಶೋಭಾ, ಶುಶ್ರೂಷಕಿ ವರಲಕ್ಷ್ಮಿ, ಎಎನ್‍ಎಂ ನಂದಿನಿ, ಪ್ರಯೋಗಾಲಯ ತಂತ್ರಜ್ಞೆ ಹೇಮಾ ಮತ್ತಿತರರಿದ್ದರು.

ಜೂನ್‌ 2 ರ ತನಕ ರಾಜ್ಯದ ಹಲವೆಡೆ ಭಾರಿ ಮಳೆ: ಜೂನ್ 7 ರ ಹಾಗೆ ಮಳೆಗಾಲ ಆರಂಭವಾಗುವ ಸೂಚನೆ.

JANANUDI.COM NETWORK

ಬೆಂಗಳೂರು,ಮೇ.29: ರಾಜ್ಯದ ಹಲವೆಡೆ ಜೂನ್‌ ಎರಡವರೆಗೂ ಭಾರಿ ಮಳೆಯಾಗಲಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಈ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ನಿರಂತರವಾಗಿ ಮಳೆಯಾಗಲಿದೆ’ ಎಂದು ಹವಮಾನ ಇಲಾಖೆ ತಿಳಿಸಿದೆ.

     ಯಾಸ್ ಚಂಡ ಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ಮಾನ್ಸೂನ್ ಗಾಳಿಯ ತೀವ್ರತೆ ಹೆಚ್ಚಾಗಿದ್ದು.  ಕೇರಳದಲ್ಲಿ ಜುನ್ 31 ರ ಹಾಗೆ ಮಾನ್ಸೂನ್ ಪ್ರವೇಶಿಸಲಿದ್ದು, ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಕರ್ನಾಟಕ ಕರಾವಳಿಯಲ್ಲಿ ಜೂನ್ 7 ರ ಹಾಗೆ ಮಳೆಗಾಲವು ಆರಂಭವಾಗಬಹುದೆಂದು ಕೇಂದ್ರ ಹವಮಾನ  ಇಲಾಖೆ ಮಾಹಿತಿ ನೀಡಿದೆ.

      ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.

ಮುಂಗಾರು ಮಳೆ ಹೊತ್ತುತರುವ ನೈಋುತ್ಯ ಮಾನ್ಸೂನ್ ಮಾರುತಗಳು. ಇತ್ತೀಚೆಗೆ ಸೃಷ್ಟಿಯಾದ 2 ಚಂಡಮಾರುತಗಳೇ ಮಾನ್ಸೂನ್ ಮಾರುತಗಳ ಈ ಚಲನೆಗೆ ಕಾರಣ ಎನ್ನಲಾಗಿದ್ದು ಕ್ಲಪ್ತ ಸಮಯಕ್ಕೆ ಮಾನ್ಸುನ್ ಆರಂಭವಾಗುವ ಲಕ್ಷಣಗಳು ಗೋಛರಿಸುತ್ತವೆ.

ಸಾಲ ಮರುಪಾವತಿಗೆ ಒತ್ತಾಯಿಸಿದರೆ ಪ್ರಕರಣ ದಾಖಲು :ಡಿಸಿ ಜಿ.ಜಗದೀಶ್

JANANUDI.COM NETWORK


ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾಲ ತೆಗೆದುಕೊಂಡವರ ಮೇಲೆ ಯಾವುದೇ ರೀತಿಯ ಸಾಲ ವಸೂಲಾತಿಯ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಒತ್ತಡ ಹೇರುವಂತಿಲ್ಲ. ಸಾಲ ಮರುಪಾವತಿಗೆ ಒತ್ತಾಯಿಸಿದಲ್ಲಿ, ಅಂತವರ, ಅಂತಹ ಸಂಸ್ಥೆಯ ವಿರುದ್ದ ಪ್ರಕರಣ ದಾಖಲಿಸಲಾಗುವುದು, ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ವ್ಯಾಪರ ವಹಿವಾಟುಗಳು ನಿಂತು ಹೋಗಿದ್ದು. ಜನರು ಸಂಕಷ್ಟದಲ್ಲಿದ್ದಾರೆ. ಮೈಕ್ರೋ ಫೈನಾನ್ಸ್ ಗಳು, ಸಹಕಾರಿ ಸಂಘಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿದಾರರು, ಮನೆ ಮನೆಗೆ ಭೇಟಿ ನೀಡುವುದನ್ನು ಜೂನ್ 6 ರವರೆಗೆ ನೀಶೆಧಿಸಲಾಗಿದೆ.
ಹಾಗೇ ಮೈಕ್ರೋ ಫೈನಾನ್ಸ್, ಸಹಕಾರಿ ಸಂಘಗಳು/ ಇತರೆ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಸಾಲ ಮರು ಪಾವತಿ ಮಾಡಲು ಒತ್ತಡ ಹೇರುವಂತಿಲ್ಲ, ಒಂದು ವೇಳೆ ಸಾಲ ಮರುಪಾವತಿ ಮಾಡಲು ಒತ್ತಡ ಹೇರಿದ್ದಲ್ಲಿ , ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲು ನೋಡೆಲ್ ಅಧಿಕಾರಿಗಳನ್ನಾಗಿ , ರುದ್ರೇಶ್ ಡಿ.ಸಿ , ಲೀಡ್ ಡಿಸ್ಟ್ರಿಕ್ಟ್ ಮ್ಯಾನೆಜರ್ (9449860858) ಮತ್ತು ಪ್ರವೀಣ್ ಬಿ.ನಾಯಕ್, ಸಹಕಾರ ಸಂಘಗಳ ಉಪನಿಬಂಧಕರು (9448633338) ಇವರನ್ನು ನೇಮಿಸಲಾಗಿದ್ದು,ಇವರಿಗೆ ದೂರುಗಳನ್ನು ನೀಡಬಹುದಾಗಿದೆ.
ಸಾರ್ವಜನಿಕರಿಂದ ಸ್ವೀಕೃತವಾದ ಸಾಲ ಮರುಪಾವತಿ ಕುರಿತು ದೂರುಗಳಿಗೆ ತಕ್ಷಣವೇ ಈ ನೋಡೆಲ್ ಅಧಿಕಾರಿಗಳು ಸ್ಪಂದಿಸುವುದು. ಮೈಕ್ರೋ ಫೈನಾನ್ಸ್ಗಳು, ಸಹಕಾರಿ ಸಂಘಗಳು, ಇತರೆ ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರ ಮಧ್ಯೆ ಸಮನ್ವಯತೆಯಿಂದ ಯಾವುದೇ ಗೊಂದಲ ಹಾಗೂಸಂಘರ್ಷ ಉಂಟಾಗದಂತೆ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ನೀಡವುದು ಇವರ ಕರ್ತವ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ಪಡೆಯಬಹುದು; ಅರ್ಜಿ ಆಹ್ವಾನಿಸಿದ ಕೇಂದ್ರ

JANANUDI.COM NETWORK


ನವದೆಹಲಿ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ಪಡೆಯಲು ಕೇಂದ್ರವು ಶುಕ್ರವಾರ ಅರ್ಜಿಗಳನ್ನು ಆಹ್ವಾನಿಸಿದೆ. ಕಿರುಕುಳಕ್ಕೊಳಗಾದ ಗುಜರಾತ್, ರಾಜಸ್ಥಾನ, ಛತ್ತೀಸ್ಗಢ, ಹರಿಯಾಣ ಮತ್ತು ಪಂಜಾಬ್ನ 13 ಜಿಲ್ಲೆಗಳಲ್ಲಿ ನೆಲೆಸಿರುವ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್, ಅಂದರೆ ಮುಸ್ಲಿಮರಲ್ಲದ ಅಲ್ಪಸಂಖ್ಯಾತರು ಭಾರತೀಯ ಪೌರತ್ವಕ್ಕೆ ಈಗ ಅರ್ಜಿ ಸಲ್ಲಿಸಬಹುದು.
ಪೌರತ್ವ ಕಾಯ್ದೆ 1955, ಮತ್ತು 2009 ರಲ್ಲಿ ರೂಪಿಸಲಾದ ನಿಯಮಗಳ ಅಡಿಯಲ್ಲಿ ನೀಡಲಾಗಿರುವ ಈ ಆದೇಶವನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸಲು ಕೇಂದ್ರ ಗೃಹ ಸಚಿವಾಲಯ ಈ ಅಧಿಸೂಚನೆಯನ್ನು ಹೊರಡಿಸಿದೆ.
ಇದೇ ಉದ್ದೇಶದಿಂದ 2019 ರಲ್ಲಿ ಜಾರಿಗೆ ತರಲಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳನ್ನು ಇನ್ನೂ ರೂಪಿಸಬೇಕಾಗಿರುವುದರಿಂದ, ಈಗಾಗಲೇ ಜಾರಿಯಲ್ಲಿರುವ ಪೌರತ್ವ ಕಾಯ್ದೆ 1955 ಮತ್ತು 2009 ರಲ್ಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ತಕ್ಷಣ ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯ ಈ ಅಧಿಸೂಚನೆಯನ್ನು ಹೊರಡಿಸಿದೆಯೆಂದು ತಿಳಿಸಿದೆ.
2019 ರಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆಗೂ ಈ ಆದೇಶಕ್ಕೂ ಯಾವುದೇ ರೀತಿಯಲ್ಲಿ ಸಂಬಂಧ ಇಲ್ಲ ಎಂದು ಕೇಂದ್ರ ಹೇಳಿದೆ. 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗ ದೇಶದ ವಿವಿಧ ಕಡೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. 2014 ರ ಡಿಸೆಂಬರ್ 31 ರವರೆಗೆ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಕಿರುಕುಳಕ್ಕೊಳಗಾದ ಮುಸ್ಲಿಮರಲ್ಲದ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡಲು ಈ ಪೌರತ್ವ ಆದೇಶದನ್ವಯ ಅವಕಾಶ ಕಲ್ಪಿಸಿದೆಯೆಂದು ತಿಳಿಸಿದೆ
.

ಹೊಸ ಮಾರ್ಗಸೂಚಿಗಳನ್ನು ಒಪ್ಪಿಂಡ ವಾಟ್ಸ್ಯಾಪ್, ಫೇಸ್ಬುಕ್, ಗೂಗಲ್ – ಬ್ಯಾನ್ ಇಲ್ಲ, ಟ್ವಿಟರ್ ಮಾತ್ರ ಒಪ್ಪಿಲ್ಲ

JANANUDI.COM NETWORK

ನವದೆಹಲಿ,ಮೇ: ಸೋಷಿಯಲ್ ಮೀಡಿಯಾದ ದಿಗ್ಗಜರಾದ ಫೇಸ್​ಬುಕ್, ಟ್ವಿಟ್ಟರ್, ವಾಟ್ಸ್​​ಆಪ್​, ಗೂಗಲ್​ ಹೊಸ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲವೆಂದು,ಇವುಗಳು ಭಾರತದಲ್ಲಿ ಇವು ಬ್ಯಾನ್ ಆಗುವವ ಸಂದರ್ಭವಿತ್ತು, ಆದರೆ ಇದೀಗ ಗೂಗಲ್, ಫೇಸ್‌ಬುಕ್, ವಾಟ್ಸಾಪ್, ಕೂ, ಶೇರ್‌ಚಾಟ್, ಟೆಲಿಗ್ರಾಮ್ ಮತ್ತು ಲಿಂಕ್ಡ್‌ ಇನ್ ಸೇರಿದಂತೆ ಸೋಷಿಯಲ್ ಮೀಡಿಯಾದ ದಿಗ್ಗಜರಾದ  ಮಾದ್ಯಮ ಕಂಪನಿಗಳು ಹೊಸ ಡಿಜಿಟಲ್​​ ನಿಯಮಗಳನ್ನು ಒಪ್ಪಿಕೊಂಡಿದ್ದು, ಐಟಿ ಸಚಿವಾಲಯದ ಜೊತೆ ಮಾಹಿತಿ ಹಂಚಿಕೊಂಡಿವೆ.

 ಆದರೆ ಟ್ವಿಟ್ಟರ್​ ಇನ್ನೂ ಸಹ ಹೊಸ ನಿಯಮಗಳನ್ನು ಪಾಲಿಸಲು ಒಪ್ಪಿಗೆ ನೀಡಿಲ್ಲ. ಜೊತೆಗೆ ವಿವರಗಳನ್ನು ಐಟಿ ಸಚಿವಾಲಯಕ್ಕೆ ಕಳುಹಿಸಿಲ್ಲ ಎಂದು ಪಿಟಿಐ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿವೆ.  
    .

ಕೊರೊನಾ ಸೋಂಕಿನಿಂದ ರಕ್ಷಣೆಗೆ ಎಲ್ಲ ಅರ್ಹ ವ್ಯಕ್ತಿಗಳು ಲಸಿಕೆ ಹಾಕಿಸಿಕೊಳ್ಳಬೇಕು-ಡಿ.ಶೇಖರರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಎಲ್ ಅರ್ಹ ವ್ಯಕ್ತಿಗಳು ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಡಿ.ಶೇಖರರೆಡ್ಡಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಅಂಗ ವಿಕಲರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಕೊರೊನಾ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. .
ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಕೆ.ಎನ್.ರಾಜೇಶ್ವರಿ, ಆರೋಗ್ಯ ತಪಾಸಣಾಧಿಕಾರಿ ಪೃಥ್ವಿರಾಜ್, ಗೋವಿಂದಮ್ಮ, ನಾಗೇಶ್ ಇದ್ದರು.
ಲಸಿಕೆ ನೀಡಿಕೆ: ಪಟ್ಟಣದ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಬೆಸ್ಕಾಂ ಸಿಬ್ಬಂದಿಗೆ ಕೋವಿಡ್ ವಿರುದ್ಧ ಲಸಿಕೆ ನೀಡಲಾಯಿತು. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡರು.