HOLY ROSARY CHURCH, KUNDAPUR – 450 th JUBILEE SOUVENIR 2021

ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಭಾಗದಲ್ಲಿ ಭಾರೀ ಮಳೆ ಬರುವ ಸಾಧ್ಯತೆ ಇದೆ

JANANUDI.COM NETWORK

ಬೆಂಗಳೂರು,ಮೇ 01: ರಾಜ್ಯದಲ್ಲಿ ಜೂನ್ ೧ರಿಂದ ಜೂನ್ ೪ ರ ತನಕ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವು ಕಡೆ ಭಾರೀ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣಕನ್ನಡ, ಉಡುಪಿ,ಉತ್ತರಕನ್ನಡ ಜಿಲ್ಲೆಯಲ್ಲಿ ಜೂನ್ 4 ರ ವರೆಗೆಗುಡುಗುಸಹಿತಭಾರೀಮಳೆಯಾಗಲಿದ್ದು, ಯೆಲ್ಲೋಅಲರ್ಟ್ಘೋಷಿಸಲಾಗಿದೆ. ಧಾರವಾಡ, ಬೆಳಗಾವಿ, ಗದಗ,ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಾಮರಾಜನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಚಿಕ್ಕಮಗಳೂರಿನಲ್ಲಿಕೂಡ ಮಳೆಯಾಗುವಸಾಧ್ಯತೆಇದೆ.

    ಕರಾವಳಿಯಜಿಲ್ಲೆಗಳಲ್ಲಿಯೆಲ್ಲೋಅಲರ್ಟ್​ಘೋಷಣೆಆಗಿರುವುದರಿಂದಮೀನುಗಾರರಿಗೆಸಮುದ್ರಕ್ಕೆಇಳಿಯದಂತೆಮುನ್ನೆಚ್ಚರಿಕೆನೀಡಲಾಗಿದೆ.ಹಾಗೇ ಕರ್ನಾಟಕಮಾತ್ರವಲ್ಲದೆಕೇರಳ, ಗುಜರಾತ್, ಮಹಾರಾಷ್ಟ್ರ, ಅರುಣಾಚಲಪ್ರದೇಶದಲ್ಲಿಕೂಡ ಮಳೆಯಅಬ್ಬರಹೆಚ್ಚುರುವುದೆಂದು.ಹವಾಮಾನಇಲಾಖೆತಿಳಿಸಿದೆ.

Sad Demise, Mr Jacky Almeida (88) kundapura,herikudru

Mr Jacky Almeida (age 88) kundapura,herikudru

 H/o Veronica Almeida

 F/O Antony/Lydia Almeida, Alice Mendonca. G/O Ancil/ Vincil, Anjali/ Anisha,

Has passed away (31-5-21)

Funeral cortege leaves residence today 1-6-21, 11.00 a.m.

There is no worship, only funeral rites are held.

funeral as per the government’s Covid-19 rule.

Corpse visits can be made at home while maintaining a social distance.

contact : 9448504381, 9880686437

14 ಆಕ್ಸಿಜನ್ ಕಾನ್ಸಂಟ್ರೇಟರ್ಸ್, 5 ಸಾವಿರ ಮೆಡಿಕಲ್ ಕಿಟ್ ವಿತರಣೆ ಕೋವಿಡ್‍ಮುಕ್ತ ಕೋಲಾರಕ್ಕೆ ಮತ್ತಷ್ಟು ನೆರವಿಗೆ ಬದ್ದ-ಡಾ.ವೈ.ಎ.ಎನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಸೋಂಕಿತರ ರಕ್ಷಣೆಗಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗೆ ಈಗಾಗಲೇ 50 ಲಕ್ಷ ನೀಡಿದ್ದು, ತಮ್ಮ ಶಾಸಕರ ನಿಧಿಯಲ್ಲಿರುವ ಇನ್ನೂ 50 ಲಕ್ಷ ರೂಗಳನ್ನು ಕೋವಿಡ್ ಮುಕ್ತ ಕೋಲಾರಕ್ಕಾಗಿ ಅಗತ್ಯ ವೈದ್ಯಕೀಯ ಸೌಲಭ್ಯಗಳಿಗೆ ಬಳಸಿಕೊಳ್ಳುವಂತೆ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ವಿಧಾನಪರಿಷತ್ ಶಾಸಕರ ನಿಧಿಯಿಂದ ಖರೀದಿಸಿದ 14 ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಂತರಿಸಿ, 5 ಸಾವಿರ ಮೆಡಿಕಲ್ ಕಿಟ್ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಮಹಾಮಾರಿ ಇಡೀ ವಿಶ್ವವನ್ನು ಕಾಡುತ್ತಿದೆ, ಇದರ ತಡೆಗೆ ರಾಜ್ಯ,ಕೇಂದ್ರ ಸರ್ಕಾರ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದ ಅವರು, ತಮ್ಮ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ 5 ಜಿಲ್ಲೆಗಳಿಗೆ 50 ಲಕ್ಷ ರೂ ವೆಚ್ಚದಲ್ಲಿ 72ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿದರು.


ಶ್ರೀನಿವಾಸಪುರಕ್ಕೆ ಸುಸಜ್ಜಿತ ಆಂಬ್ಯುಲೆನ್ಸ್


ಶ್ರೀನಿವಾಸಪುರಕ್ಕೆ ಐಸಿಯು ಒಳಗೊಂಡ ಸುಸಜ್ಜಿತ ಆಂಬ್ಯುಲೆನ್ಸ್ ನೀಡುವಂತೆ ಕೋರಿದ್ದು, ತಮ್ಮ ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯಿಂದ ಕೂಡಲೇ ಒದಗಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿರುವುದಾಗಿ ತಿಳಿಸಿದರು.
ಕೋವಿಡ್ ತಡೆಗೆ ಅಗತ್ಯವಿರುವ ವೈದ್ಯಕೀಯ ಪರಿಕರಗಳ ಅಗತ್ಯತೆಗೆ ತಕ್ಕಂತೆ ಖರೀದಿಸಲು ಇನ್ನು ಅಗತ್ಯವಿದ್ದಲ್ಲಿ ತಮ್ಮ ಶಾಸಕರ ನಿಧಿ ಬಳಸಲು ಸಿದ್ದ ಎಂದ ಅವರು, ಕೋವಿಡ್ ಓಡಿಸಲು ಜಾತ್ಯಾತೀತ,ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.
ಪ್ರತಿ ತಾಲ್ಲೂಕಿಗೆ ತಲಾ 300 ರಂತೆ ಇಡೀ ತಮ್ಮ ಕ್ಷೇತ್ರದಾದ್ಯಂತ 5 ಸಾವಿರ ಮೆಡಿಕಲ್ ಕಿಟ್ ನೀಡುತ್ತಿರುವುದಾಗಿ ತಿಳಿಸಿದ ಅವರು, ಇದರಲ್ಲಿ ಸೋಂಕಿತರಿಗೆ ಅಗತ್ಯವಿರುವ ವೈದ್ಯಕಿಯ ಔಷಧಿಗಳು, 5 ಮಾಸ್ಕ್,ಸ್ಯಾನಿಟೈಸರ್ ಒಳಗೊಂಡಿದೆ ಎಂದು ವಿವರಿಸಿದರು.
ಶಿಕ್ಷಕರಿಲ್ಲದ ಗ್ರಾಮವಿಲ್ಲ, ಲಸಿಕೆ ಅಭಿಯಾನ ಯಶಸ್ವಿಗೊಳಿಸಲು ನಿಮ್ಮ ಸಹಕಾರ ಅಗತ್ಯವಿದೆ, ಪ್ರತಿಗ್ರಾಮದಲ್ಲೂ ಲಸಿಕೆ ಹಾಕಿಸಿಕೊಳ್ಳಲು ಅರಿವು ಮೂಡಿಸಿ ಎಂದರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಒದಗಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿ, ಜಿಲ್ಲೆಗೆ ಅಗತ್ಯವಾದ ಪ್ರಮಾಣದಲ್ಲಿ ಲಸಿಕೆ ಕೊರತೆ ನೀಗಿಸಲು ನಿರಂತರವಾಗಿ ನೆರವಾಗುತ್ತಿರುವುದನ್ನು ಸ್ಮರಿಸಿದರು.
ಕೋವಿಡ್ ಮಾರಿ ಹಳ್ಳಿಗಳಿಗೆ ಹೆಚ್ಚು ವ್ಯಾಪಿಸುತ್ತಿದ್ದು, ಇದನ್ನು ತಡೆಯಲು ಲಸಿಕೆಯೊಂದೇ ಅಸ್ತ್ರ ಎಂದ ಅವರು, ಕನಿಷ್ಟ ಶೇ.80 ರಷ್ಟು ಮಂದಿಗೆ ಲಸಿಕೆ ಹಾಕಿಸಿದ್ದೇ ಆದರೆ ನಾವು ಕೊರೋನಾ ವಿರುದ್ದ ಗೆದ್ದಂತೆ ಎಂದರು.
ನಿರ್ಮಿತಿ ಕೇಂದ್ರದ ನಿರ್ದೇಶಕ ನಾರಾಯಣಗೌಡ, ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳ ಬಳಕೆ ಮತ್ತು ಅದರ ಅಗತ್ಯತೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಜಿಪಂ ಸದಸ್ಯೆ ಅಶ್ವಿನಿ, ನಗರಸಭಾ ಸದಸ್ಯ ಮುರಳಿಗೌಡ, ಸಿಂಡಿಕೇಟ್ ಸದಸ್ಯ ಉದಯಕುಮಾರ್,ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು,ಸಂಘದ ಮುಖಂಡರಾದ ಎಸ್.ಚೌಡಪ್ಪ, ಟಿ.ಕೆ.ನಟರಾಜ್,ಚಂದ್ರಪ್ಪ, ಗೋಪಿಕೃಷ್ಣನ್,ರತ್ನಪ್ಪ, ರವಿರೆಡ್ಡಿ, ಅಪ್ಪಯ್ಯಗೌಡ, ಎಂ.ನಾಗರಾಜ್,ವಿ.ಮುರಳಿಮೋಹನ್, ಖಾಸಗಿ ಶಾಲೆಗಳ ಮುನಿಯಪ್ಪ, ಶ್ರೀಕೃಷ್ಣ, ಬಿಜೆಪಿಯ ವಿಜಯಕುಮಾರ್,ತಿಮ್ಮರಾಯಪ್ಪ, ರಾಜೇಶ್‍ಸಿಂಗ್, ಕೆಂಬೋಡಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು
.

ಮೋದಿ 7 ವರ್ಷದ ಸಾಧನೆ ಶೂನ್ಯ, ಬಿಜೆಪಿ ಖಾಲಿ ಕೊಡ ಹೊತ್ತು ಸಂಭ್ರಮಿಸುತ್ತಿದೆ, ಜನ ಇವರಿಗೆ ಶಾಪ ಹಾಕುತಿದ್ದಾರೆ: ಸಿದ್ದರಾಮಯ್ಯ ಆಕ್ರೋಶ

JANANUDI.COM NETWORK

ಬೆಂಗಳೂರು,ಮೇ : ನಾನು ಕಳೆದ ಎರಡು, ಮೂರು ದಿನಗಳಿಂದ ಚಾನೆಲ್ ನೋಡ್ತಿದ್ದೇನೆ. ದಿನಪತ್ರಿಕೆ ಕೂಡ ನೋಡ್ತಿದ್ದೇನೆ. ಪ್ರಧಾನಿ ಎರಡನೇ ಭಾರಿ ಅಧಿಕಾರಕ್ಕೆ ಬಂದಿದ್ದಾರೆ.  ಎರಡು ವರ್ಷ ಪೂರೈಸಿದ್ದಾರೆ. ಒಟ್ಟು ಏಳು ವರ್ಷ ಅಧಿಕಾರ ಪೂರೈಸಿದ್ದಾರೆ.ಎಂದು ಸಂಭ್ರಮ ಪಟ್ಟುಕೊಳ್ಳುತ್ತಾರೆ, ಆದರೆ ಬಿಜೆಪಿಯವರು ಖಾಲಿ ಕೊಡ ಹೊತ್ತು ಸಂಭ್ರಮಿಸುತ್ತಿದ್ದಾರೆ. ಸಾಧನೆ ಮಾತ್ರ ಏನೂ ಇಲ್ಲ. ಇಂತಹ ಪ್ರಧಾನಿ ಸ್ವತಂತ್ರ್ಯ ಭಾರತದಲ್ಲಿ ನೋಡಿಯೇ ಇಲ್ಲ. ಮೋದಿಯ ಜನಪ್ರಿಯತೆ  ಕೆಳಗಿಳಿಯುತ್ತಿದೆ. ಇದನ್ನು ನಾನು ಹೇಳ್ತಿಲ್ಲ, ಅಮೆರಿಕ ಹೇಳ್ತಿದೆ. ನಮ್ಮ ದೇಶದ ತಜ್ಙರು ಕೂಡ ಇದನ್ನೇ ಹೇಳ್ತಿದ್ದಾರೆ.  ಇದನ್ನ ಮುಚ್ಚಿ ಹಾಕಲು ಜಾಹೀರಾತು ಕೊಡ್ತಿದ್ದಾರೆ. ಪ್ರಧಾನಿಯ ಗೌರವ ಕಡಿಮೆಯಾಗ್ತಿದೆ.. ಇದಕ್ಕೆ ತೇಪೆ ಹಾಕಲು ಪ್ರಯತ್ನ ಮಾಡ್ತಿದ್ದಾರೆ. ಆದರೆ ಜನ ಇವರಿಗೆ ಶಾಪ ಹಾಕುತಿದ್ದಾರೆ’ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.

      ಸಿದ್ದರಾಮಯ್ಯನವರು  ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ’ಕೇಂದ್ರ ಸರ್ಕಾರದ ಸಾಧನೆಗಳು ಅಂದರೆ ರೈತ ವಿರೋಧಿ ಕಾನೂನುಗಳನ್ನು ತಂದಿದ್ದು. ದೇಶದಲ್ಲಿ ಬಹಳಷ್ಟು ಕಾರ್ಖಾನೆಗಳನ್ನು ಮಾರಾಟ ಮಾಡಿದದ್ದು,. ಸಾಕಷ್ಟು ಕಾರ್ಖಾನೆಗಳನ್ನು ಖಾಸಗಿ ಅವರಿಗೆ ಮಾರಾಟ ಮಾಡಿದ್ದು, ಏರ್ಪೋರ್ಟ್, ಬಂದರು, ಕೈಗಾರಿಕೆ ಮಾರುತ್ತಿದ್ದಾರೆ. ಖಾಸಗಿಯವರಿಗೆ ಮಾರಾಟ ಮಾಡಿದ್ದು, ದೇಶ ಅಭಿವೃದ್ಧಿ ಪಥದಲ್ಲಿ ಹೋಗುತ್ತಿಲ್ಲ. ದೇಶ ಕೆಳಗೆ ಕುಸಿಯುತ್ತಿದೆ. ನಿರುದ್ಯೋಗ, ಜಿಡಿಪಿ ಬಿದ್ದಿದ್ದು, ಸಾಲ ಹೆಚ್ಚಳ ಇವೇ ಇವರ ದೊಡ್ಡ ಸಾಧನೆಗಳು.  ಏಳು ವರ್ಷದಲ್ಲಿ ದೇಶ ಮುಂದೆ ಸಾಗಬೇಕಿತ್ತು, ಅದರೆ ಹಿಂದೆ ಹೋಗಿದೆ’  ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.

ಟಾರ್ಜನ್ ಖ್ಯಾತಿಯ ಸಿನಿಮಾ ನಟ ಜೋ ಲಾರಾ, ಪತ್ನಿ ಸೇರಿ ವಿಮಾನ ದುರಂತದಲ್ಲಿ ಏಳು ಮಂದಿ ಸಾವು

JANANUDI.COM NETWORK

ವಾಷಿಂಗ್ಟನ್: ಬಾಲಿವುಡ್ ಸಿನಿಮಾದ ಸ್ಟಾರ್ ನಟ ಟಾರ್ಜನ್ ಜೋ ಲಾರಾ 58 ವರ್ಷ, ಮತ್ತು ಆತನ ಪತ್ನಿ ಗ್ವೆನ್ ಶಾಂಬ್ಲಿನ್ ಸೇರಿದಂತೆ ಒಟ್ಟು ಏಳು ಮಂದಿ ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರದ ಬಳಿ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಫ್ಲೋರಿಡಾದ ಪಾಮ್ ಬೀಚಿನ  ಸ್ಮಿರ್ನಾ, ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಸಣ್ಣ ಬ್ಯುಸಿನೆಟ್ ಜೆಟ್ ವಿಮಾನ ಪತನಗೊಂಡಿರುವುದಾಗಿ ಫ್ಲೋರಿಡಾದ ರುದರ್ ಫೋರ್ಡ್ ಕೌಂಟಿಯ ಅಗ್ನಿ ಮತ್ತು ರಕ್ಷಣಾ ತಂಡ(ಆರ್ ಸಿಎಫ್ ಆರ್) ಫೇಸ್ ಬುಕ್ ನಲ್ಲಿ ವಿವರಿಸಿದೆ.

ವಿಮಾನದಲ್ಲಿ ಬಾಲಿವುಡ್ ನಟ ಲಾರಾ ಸೇರಿದಂತೆ ಏಳು ಮಂದಿ ಇದ್ದಿರುವುದಾಗಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಖಚಿತಪಡಿಸಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ. ಶನಿವಾರ ರಾತ್ರಿಯಿಂದ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಆರ್ ಸಿಎಫ್ ಆರ್ ಕಮಾಂಡರ್ ಕ್ಯಾಪ್ಟನ್ ಜೋಶುವಾ ಸ್ಯಾಂಡರ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಮಾನವು ನ್ಯಾಶ್ವಿಲ್ಲೆಯಿಂದ ದಕ್ಷಿಣಕ್ಕೆ 12 ಮೈಲಿ (19 ಕಿಲೋಮೀಟರ್) ದೂರದಲ್ಲಿರುವ ಪರ್ಸಿ ಪ್ರೀಸ್ಟ್ ಸರೋವರಕ್ಕೆ ಭಾನುವಾರ ಮಧ್ಯಾಹ್ನ ಮೈದಾನದ ಸುಮಾರು ಅರ್ಧ ಮೈಲು ದೂರದಲ್ಲಿ ವಿಮಾನದ ಹಲವಾರು ತುಂಡುಗಳು ಮತ್ತು ಮಾನವನ ಅವಶೇಷಗಳು ರಕ್ಷಣಾ ಕಾರ್ಯಾಚರಣೆ ವೇಳೆ ಪತ್ತೆಯಾಗಿರುವುದಾಗಿ ಆರ್ ಸಿಎಫ್ ಆರ್ ತಿಳಿಸಿದೆ.

  1989ರ ಟೆಲಿವಿಷನ್ ಸಿನಿಮಾ “ಟಾರ್ಜನ್ ಇನ್ ಮ್ಯಾನಹಟ್ಟನ್” ನಲ್ಲಿ ಲಾರಾ ನಟಿಸಿದ್ದರು. ನಂತರ ಟೆಲಿವಿಷನ್ ಸರಣಿಯಾದ ಟಾರ್ಜನ್; ದ ಎಪಿಕ್ ಅಡ್ವೆಂಚರಸ್ ನಲ್ಲಿ ನಟಿಸುವ ಮೂಲಕ ಜನಪ್ರಿಯಗೊಂಡಿದ್ದರು

ವಿಮಾನದ ಅವಶೇಷಗಳು

ಎಂತಹ ಕಳ್ಳ! ಆತನ ಹೊಟ್ಟೆಯಲ್ಲಿ ಸಿಕ್ಕಿತು 35 ಗ್ರಾಂ ಚಿನ್ನಾಭರಣ

JANANUDI.COM NETWORK

ಸುಳ್ಯ .31: ಸುಳ್ಯದ ಮೋಹನ್ ಜುವೆಲ್ಲರಿ ಮಾರ್ಟ್ ನಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣದಲ್ಲಿ ಪೊಲೀಸರು, ತಂಗಚ್ಚನ್ ಮತ್ತು ಶಿಬು ಎಂಬವರನ್ನು ಬಂಧಿಸಿದ್ದರು, ಅವರಲೊಬ್ಬ ಆರೋಪಿಯಶಿಬು ಎಂಬವನ ಹೊಟ್ಟೆಯಲ್ಲಿ 35 ಗ್ರಾಂ ಚಿನ್ನ ಪತ್ತೆಯಾಗಿದೆ.

    ಸುಳ್ಯ ಮತ್ತು ಪುತ್ತೂರಿನಲ್ಲಿ ಚಿನ್ನ ಕಳವು ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು, ಆರೋಪಿಗಳನ್ನು ಬಂದಿಸಿದ್ದರು, ಇದರಲ್ಲಿ ಶಿಬು ಎಂಬಾತನಿಗೆ ಮೇ.29 ರಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಎಕ್ಸರೇ ತೆಗೆದಾಗ ಆತನ ಹೊಟ್ಟೆಯಲ್ಲಿ ಚಿನ್ನಾಭರಣ ಇರುವುದು ಕಂಡು ಬಂದಿತ್ತು.

      ವೈದ್ಯರುಗಳು ಕಾರ್ಯಾಚರಣೆ ನಡೆಸಿ ಆರೋಪಿಯ ಹೊಟ್ಟೆಯಿಂದ 35 ಗ್ರಾಂ ಚಿನ್ನಾಭರಣಗಳನ್ನು ಹೊರ ತೆಗೆದಿದ್ದಾರೆ. ಉಂಗುರ, ಓಲೆ, ಸೇರಿದಂತೆ 30 ಕ್ಕೂ ಅಧಿಕ ಆಭರಣಗಳು ಹೊರತೆಗೆದಿದ್ದಾರೆ. ಕದ್ದ ಚಿನ್ನವನ್ನು ಆತ ನುಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಚಿನ್ನಸ್ಗಬಾರದೆಂದು,ನಾನು ಐಸ್ ಕ್ರೀಮ್ ಜೊತೆ ಚಿನ್ನ ನುಂಗಿದ್ದಾಗಿ ಶಿಬು ಬಾಯಿ ಬಿಟ್ಟಿದ್ದಾನೆ.  ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿದಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಶ್ರೀನಿವಾಸಪುರ ಹೆಬ್ಬಟ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡಲಾಯಿತು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಶನಿವಾರ ಕೋವಿಡ್ ವಿರುದ್ಧ ಲಸಿಕೆ ನೀಡಲಾಯಿತು.
ಸಿಎಚ್‍ಒ ವಿಶ್ವನಾಥ್, ಆರೋಗ್ಯ ಇಲಾಖೆ ಸಿಬ್ಬಂದಿ ಶಿಲ್ಪಾ, ಶೋಭಾ, ಶಾರದಾ, ಗ್ರಾಪಂ ಸದಸ್ಯ ಎಚ್.ಎಂ.ಅನಂತಕುಮಾರ್ ಇದ್ದರು.

ಶ್ರೀನಿವಾಸಪುರ ಪಟ್ಟಣದ ಇಂದಿರಾ ಕ್ಯಾಂಟೀನ್‍ಗೆ ಶನಿವಾರ ಪುರಸಭೆಯ ಅಧಿಕಾರಿಗಳು ಭೇಟಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಇಂದಿರಾ ಕ್ಯಾಂಟೀನ್‍ಗೆ ಶನಿವಾರ ಪುರಸಭೆಯ ಅಧಿಕಾರಿಗಳು ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿ ಆಹಾರದ ಅಗತ್ಯ ಇರುವ ವ್ಯಕ್ತಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಹಸಿದವರು ಇಂದಿರಾ ಕ್ಯಾಂಟೀನ್ ಕಡೆ ನೋಡುವಂತಾಗಿದೆ. ಅದ್ದರಿಂದ ಕ್ಯಾಂಟೀನ್ ಸಿಬ್ಬಂದಿ ಆಹಾರ ತಯಾರಿಸುವಾಗ ಸ್ವಚ್ಛತೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಪುರಸಬೆಯ ಸಮುದಾಯ ಸಂಘಟನಾಧಿಕಾರಿ ಕೆ.ಎನ್.ರಾಜೇಸ್ವರಿ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಡಿ.ಶೇಖರರೆಡ್ಡಿ, ಆರೋಗ್ಯ ನಿರೀಕ್ಷಕ ಎಂ.ಪೃಥ್ವಿರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ಎಸ್.ಪ್ರತಾಪ್, ವೆಂಕಟೇಶಯ್ಯ ಇದ್ದರು.

ಆಯುಷ್ ಸಂಘಟನೆ ಕು.ತಾ.ಘಟಕವು ವಾಷಿಂಗ್ ಮೆಷಿನ್, ವ್ಯಾಕ್ಯೂಮ್ ಕ್ಲೀನರ್ ಯಂತ್ರಗಳನ್ನು ರೆಡ್ ಕ್ರಾಸ್ ಕೋವಿಡ್ ಸೆಂಟರಿಗೆ ಕೊಡುಗೆಯಾಗಿ ನೀಡಿತು

JANANUDI.COM NETWORK

ಕುಂದಾಪುರ, ಮೇ. 30: ಆಯುಷ್ ಸಂಘಟನೆ  (AFI) ಕುಂದಾಪುರ ತಾಲ್ಲೂಕು ಘಟಕವು ಸುಮಾರು 37 ಸಾವಿರ ರೂಪಾಯಿ ಬೆಲೆ ಬಾಳುವ   ವಾಷಿಂಗ್ ಮೆಷಿನ್ ಮತ್ತು ವ್ಯಾಕ್ಯೂಮ್ ಕ್ಲೀನರ್  ಅಗತ್ಯವಿರುವ ನಿತ್ಯ ಬಳಕೆಯ ಯಂತ್ರಗಳನ್ನು, ಕುಂದಾಪುರ ರೆಡ್ ಕ್ರಾಸ್ ಕೋವಿಡ್ ಸೆಂಟರಿಗೆ ದಾನವಾಗಿ ನೀಡಿತು.

   ಈ ವಸ್ತುಗಳನ್ನುಹಸ್ತಾಂತರಿಸುವಾಗ ಸಹಾಯಕ ಕಮಿಶನರ್ ರಾಜು.ಕೆ, ಪುರಸಭಾ ಮುಖ್ಯ ಮುಖ್ಯಾಧಿಕಾರಿ ಗೋಪಾಲ ಕ್ರಷ್ಣ ಶೆಟ್ಟಿ, ಕುಂದಾಪುರ ತಾಲೂಕು ವೈದ್ಯಾಧಿಕಾರಿ ನಾಗಭೂಷಣ ಉಡುಪ, ಕುಂದಾಪುರ ತಾಲೂಕು ಆಯುಷ್ ಹಿರಿಯ ವೈದ್ಯಾಧಿಕಾರಿ   ಡಾ.ಅಶೋಕ್,  ಆಯುಷ್ ಸಂಘಟನೆ  (AFI) ಕುಂದಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರವೀಂದ್ರ, ಕಾರ್ಯದರ್ಶಿ ಡಾ.ರಾಜೇಶ್ ಶೆಟ್ಟಿ ಮತ್ತು ಆಡಳಿತ ಮಂಡಳಿ ಸದಸ್ಯರಾದ  ಡಾ.ಸೋನಿ ಡಿ ಕೋಸ್ಟಾ ಕುಂದಾಪುರ, ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ್ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಮತ್ತು. ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯರಾದ  ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.