HOLY ROSARY CHURCH, KUNDAPUR – 450 th JUBILEE SOUVENIR 2021

ತುಂ ನಾಸ್ತಾಂ ಪತಿ/ Tu nastha pathi (kvitha)

ತುಂ ನಾಸ್ತಾಂ ಪತಿ

ವೇಂಗ್ ತುಜಿ
ನಾಂ ಪತಿ
ತುಂ ನಾಸ್ತಾನಾಂ
ಮೋಗ್ ತುಜೊ
ಮೆಳ್ಳೊನಾಂ
ಮ್ಹುಜೆ ಥಾವ್ನ್
ಪಯ್ಸ್ ಗೆಲ್ಲ್ಯಾ ವೆಳಾ
ಸಾಂಗಾತ್ ತುಜೊ ನಾಂ
ಹಾಂವ್ ಎಕ್ಸುರಿ ಆಸ್ಲ್ಯಾ ವೆಳಾ
ಮ್ಹುಜ್ಯಾ ದೊಳ್ಯಾಂ ಮುಕ್ಲೊ
ಪೈಸ್ ಗೆಲೊಯ್
ಅಮರ್ ತುಂ ಜಾವ್ನ್

ಭುರ್ಗಿಂ ತುಜಿಂ
ಮ್ಹುಜ್ಯಾ ಪಾಸ್ಳೆಂತ್ ರಡ್ತಾಂನಾಂ
ಡ್ಯಾಡಿ ತುಂಮ್ಚೊ….
ಅಂತ್ರಳಾರ್ ನೆಕೆತ್ರ್ ಜಾವ್ನ್ ಸೊಬ್ತಾ
ಮ್ಹುಣ್ ದಾಕಯ್ತಾನಾ….
ದುಃಖಾಂಚಾ ರಾಶಿಂತ್
ಕೊಸ್ಳೊನ್ ಪೊಡ್ತಾ ಕಾಳಿಜ್
ತರ್ನ್ಯಾ ಪ್ರಾಯೆಚಿ ಹಾಂವ್
ಭುರ್ಗ್ಯಾಂಕ್ ಹಾತಾಂತ್ ಘೆವ್ನ್
ಆತಾಂ ಅನಾಥ್ ಜಾಲಾ‌ಂ

ತ್ಯಾ ಆಸ್ಪತ್ರೆಚ್ಯಾ ಖಟ್ಲ್ಯಾರ್
ತುಂ ಎಕ್ಲೊಚ್ ಒಳ್ವೊಳ್ತಾನಾ
ತುಜಿ ಚಾಕ್ರಿ ಕರ್ಚೆಂ ….
ಭಾಗ್ ನಾಂ ಜಾಲೆಂ
ನಿಮಾಣೊ ಸ್ವಾಸ್ ವೆತಾನಾಂ
ಮ್ಹುಜ್ಯಾ ಭುರ್ಗ್ಯಾಂಚೆ
ತೊಂಡ್ ಪೊಳೊಂಕ್ ಸಕ್ಲೋನಾಯ್
ಪ್ರಾಣ್ ತುಂ ಸೊಡ್ತಾನಾಂ
ಕುಟ್ಮಾಂಚಿ ಲಾಗ್ಗಿ ನಾಂ ಜಾಲಿ

ಅಂತಿಮ್ ತುಜೆಂ ದರ್ಶನ್
ಕೊಣಾಂಕಿ ಮೆಳ್ಳೆಂನಾಂ
ಕೊರೊನಾ ವರ್ವಿಂ
ತುಜೆಂ ಜಿವಿತ್ ಮೊಟ್ವೆಂ ಜಾಲೆಂ
ವಿಧೊವ್ ಹಾಂವ್ ಜಾಲಿ
ಹ್ಯಾ ಸಂಸಾರಾಂತ್
ತುಂ ನಾಸ್ತಾಂ ಪತಿ
ಅತ್ಮ್ಯಾಕ್ ತುಜ್ಯಾ ಶಾಂತಿ ಮಾಗ್ತಾಂ.

✍️ ಜೊಸೆಫ್ ಲುವಿಸ್ ಸಾಸ್ತಾನ್.

Tu nastha pathi

veng tuji
na pathi
tu nasthana….
mog tujo
melona
muje thavn
pois gellya vela
sangath tujo na
hanv eksuri aaslya vela
mujya dolya muklo
pois geloy
amar tu jaavn

bhurgi tuji
mujya paslenth radthana
daddy tumcho..
anthralar nekethr jaavn sobhtha
mun dakaythana….
dukhancha rashinth
koslon podtha kaliz
tharnya prayechi hanv
bhurgyank hathanth ghevn
aatha anaath jala

thya aspathrecha khatlyar
tu ekloch volvolthana
tuji chakri karche…
bhaag na jale
nimano swaas vethana
mujya bhurgyanche
thond polonk saklenaay
praan tu sodthana
kutmachi lagi na jali

anthim tuje darshan
konanki melle na
corona varvi
tuje jivith motve jale
vidhov hanv jali
hya sovnsaranth
tu nastha pathi
athmyak tujya shanthi magtha..

✍️ Joseph lewis sasthan

ಅಪವಿತ್ರ್ ಗಂಗಾ/ (ಕವಿತಾ) ಜೊಸೆಫ್ ಲುವಿಸ್ ಸಾಸ್ತಾನ್.

ಅಪವಿತ್ರ್ ಗಂಗಾ

ಗಂಗಾ ಆಜ್…
ತುಜೆಂ‌ ಪವಿತ್ರ್ ಪೊಣ್
ಖಂಯ್ ಪಾವ್ಲಾಂ
ತುಜ್ಯಾ ಉದ್ಕಾಂತ್..
ಪಾತ್ಕಿ ನ್ಹಾಲ್ಲೊ ತರ್
ತೊ ಪವಿತ್ರ್ ಜಾತಾ
ತುಜೆ ಉದಾಕ್…
ವ್ಹಾಳ್ತಾ ಥಂಯ್
ತೊ ಗಾಂವ್ …..
ಅಭಿವ್ರಧ್ಧಿ ಜಾತಾ
ತುಂ ಭಾರತಾಚೆ….
ನಿತಳ್ ಆನಿ ಪವಿತ್ರ್ ಗಂಗಾ

ಆಜ್ ತುಜ್ಯಾ ಗರ್ಭಾಂತ್
ಕಿತೆಂ ಜಾಲಾ….
ಸಗ್ಳೆಂ ವಿಕಾಳ್ ಉದಾಕ್
ತುಜ್ಯಾ ಗರ್ಭಾಂತ್ ಪಾವ್ಲಾಂ
ಜಾಯಿತ್ತೊ ಕರ್ಚೊ …
ತುಜ್ಯಾ ಉದ್ಕಾಂತ್ ವ್ಹಾಳ್ತಾ
ನಾನಾ ಪಿಡೆಚಿಂ….
ಜಾಯ್ತಿಂ ಮೊಡಿಂ..
ತುಜ್ಯಾ ಉದ್ಕಾಂತ್ ಘಾಣ್ತಾತ್
ನಿತಳ್ ತುಜ್ಯಾ ಉದ್ಕಾಂತ್…..
ಕುಸಡಾಯೆಚೆಂ ಘಾಣ್ ಭೊರ್ಲಾಂ

ತುಜೆಂ ತೆಂ ಪರಿಸರ್
ವಿಕಾಳ್ ಜಾಲಾ…
ತುಜ್ಯಾ ಗರ್ಭಾಂತ್ಲೆಂ
ಮಾಸ್ಲ್ಯೋ ಜಲಚರ್
ಮೊರೊಂಕ್ ಲಾಗ್ಲಾಂತ್
ತುಜೆಂ ಉದಾಕ್…
ತಾನ್ ಭಾಗೊಂಕ್
ಯೋಗ್ಯ್ ನಾಂ ಜಾಲಾಂ
ಲೊಕಾಚ್ಯಾ ದ್ರಷ್ಟೇನ್ ತುಂ
ಪವಿತ್ರ್…..
ಪೂಣ್ ಆಜ್….
ತ್ಯಾಚ್ ಲೊಕಾನಿಂ ತುಕಾ
ಅಪವಿತ್ರ್ ಕೆಲಾ….
ತರ್ ತುಂ….
ಕೆದಾಳಾ ಪವಿತ್ರ್ ಜಾತೆಯ್……ಗಂಗಾ.

✍️ ಜೊಸೆಫ್ ಲುವಿಸ್ ಸಾಸ್ತಾನ್.

ಚಲಿಸುತ್ತಿರುವ ರೈಲಿನಲ್ಲಿ 21 ವರ್ಷದ ಯುವತಿಯ ಹತ್ಯೆ! ಅಣ್ಣ ಪೊಲೀಸರನ್ನು ಸಂಪರ್ಕಿಸಿದರೂ ಯುವತಿ ಇನ್ನಿಲ್ಲವಾದಳು

JANANUDI.COM NETWORK

ಭೋಪಾಲ್​: 21 ವರ್ಷ ಮುಸ್ಕನ್ ಹಡಾ ಎಂಬ  ಯುವತಿಯನ್ನು ಇಂದೋರ್‌ನಿಂದ ಬಿಲಾಸ್ಪುರಕ್ಕೆ ಹೋಗುವ ನರ್ಮದಾ ಎಕ್ಸ್‌ಪ್ರೆಸ್ ರೈಲಿನಲ್ಲಿ  ತೀಕ್ಷ್ಣವಾದ ಆಯುಧದಿಂದ ಕುತ್ತಿಗೆಗೆ ತಿವಿದು ಹತ್ಯೆ ಮಾಡಿದ ವಿದ್ರಾವಕ ಘಟನೆ ನಡೆದಿದೆ.  ಸ್ಲೀಪರ್​ ಕೋಚ್​ನಲ್ಲಿ ಸಾಗುತ್ತಿದ್ದ ಯುವತಿ ಸೆಹೋರ್​ ರೈಲ್ವೆ ನಿಲ್ದಾಣ ತಲುಪುವುದರೊಳಗೆ ಯುವತಿ ಹೆಣವಾಗಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

   ಯಾವುದೋ ಕಾರಣಕ್ಕೆ ಜೈಲಲ್ಲಿ ಇದ್ದ ತಂದೆಯನ್ನು ಬಿಡಿಸುವ ಒತ್ತಡದಲ್ಲಿದ್ದು,ಇದೇ ಕಾರಣಕ್ಕೆ ಬಿಹಾರನಲ್ಲಿದ್ದ ತನ್ನ ಅಣ್ಣನನ್ನು ಭೇಟಿ ಮಾಡಲು ಇಂದೋರ್ ನಿಂದ ಬೋಪಾಲ್  ಹೊರಟಿದ್ದಳು. ರೈಲು ಒಡುತ್ತೀರುವ ಮಾರ್ಗ ಮಧ್ಯೆ ಈ ಬರ್ಬರ ಕೊಲೆ ನಡೆದಿದೆ

      ಅಂದ ಹಾಗೆ ಯುವತಿ ರೈಲು ಹತ್ತಿದಾಗಿನಿಂದ ಅಣ್ಣನ ಸಂಪರ್ಕದಲ್ಲಿದ್ದಳು. ರೈಲಿನಲ್ಲಿ ಯಾರೋ ತನಗೆ ಹಿಂಸೆ ಕೊಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾಳೆ. ಈ ವಿಚಾರವನ್ನು ಆಕೆಯ ಅಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಮಂಗಳವಾರ ರಾತ್ರಿ 9 ಗಂಟೆಗೆ ಸೆಹೋರ್ ನಿಲ್ದಾಣದಲ್ಲಿ ರೈಲು ನಿಲ್ಲಿಸಿ,  ರೈಲು  ಬೋಗಿ ಹತ್ತಿ ಪರೀಕ್ಷಿಸಿದಾಗ ಅಷ್ಟರಲ್ಲೆ,ಯುವತಿ ಕೊಲೆಯಾಗಿದ್ದಾಳೆ, ಕ್ರತ್ಯ ನಡೆಸಿ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಯುವತಿಯ ಶವವನ್ನು ಇಳಿಸಿ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

      ಅಪರಿಚಿತ ಆರೋಪಿಗಳು ಚಲಿಸುವ ರೈಲಿನಲ್ಲಿ ಬಾಲಕಿಯ ಗಂಟಲನ್ನು ಕತ್ತರಿಸಿ ಪರಾರಿಯಾಗಿದ್ದಾರೆ. ಬೋಗಿಯಲ್ಲಿದ್ದ ಪ್ರಯಾಣಿಕರು,ರೈಲಿನ ಸೀಟಿಗಾಗಿ ಎನೋ ಜಗಳ ನಡೆಯುತಿತ್ತು ಮಾಹಿತಿ ನೀಡಿದ್ದಾರೆ.  ಪೊಲೀಸರು ತಲುಪಿ ತನಿಖೆ ಆರಂಭಿಸಿದ್ದಾರೆ.. ಪ್ರಕರಣದ ವಿವರಗಳನ್ನು ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಸ್.ಚೌಹಾನ್, ಇಂದೋರ್‌ನಿಂದ ಬಿಲಾಸ್ಪುರಕ್ಕೆ ನರ್ಮದಾ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದರು.

  ಸದ್ಯ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಗ್ಗೆ ಪೊಲೀಸರು ಒರ್ವನನ್ನು ಬಂದಿಸಿದ್ದಾರೆಂದು ತಿಳಿದು ಬಂದಿದೆ

ಗೋವಾದಲ್ಲಿ ವಿವಾಹಕ್ಕೆ, ವಧು-ವರರಿಗೆ ಕೌನ್ಸಿಲಿಂಗ್, 2 ಸಲ ಸಹಿಯ ಬಳಿಕವೇ ವಿವಾಹ

JANANUDI.COM NETWORK

CREATOR: gd-jpeg v1.0 (using IJG JPEG v80), quality = 90

ಪಣಜಿ, ಮೇ.02:  ವೈವಾಹಿಕ ಜೀವನ ಪಾವಿತ್ರ್ಯವನ್ನು ಪಡೆದುಕೊಂಡಿದೆ. ಇದು ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬಂದಂತಹ ಜೀವನ ಶೈಲಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ, ಎಲ್ಲವೂ ಬದಲಾಗಿದೆ, ಇದು ವೈವಾಹಿಕ ಜೀವನವನ್ನು ಹೊರತುಪಡಿಸಿಲ್ಲ.  ಹಾಗಾಗಿ  ವಿಚ್ಚೇದನ ಎಂಬುದು ಸಾಂಕ್ರಮಿಕ ರೋಗದಂತೆ ಹರಡಿದೆ. ಗೋವಾದಲ್ಲಿ ವಿಚ್ಚೇದನ ಎನ್ನುವುದು ಎಲ್ಲೆ ಮೀರಿದೆ.ಅಲ್ಲಿ ಎಷ್ಟು ಪ್ರಮಾಣದಲ್ಲಿ ವಿವಾಹ ನಡೆಯುತ್ತೊ ಅಷ್ಟೇ ಪ್ರಮೇಣದಲ್ಲಿ ವಿಚ್ಛೇದನ ಕೇಸ್ ದಾಖಲಾಗುವುದು ಸರಕಾರಕ್ಕೆ ದೊಡ್ಡ ಹೊಡೆತವಾಗಿದೆ

      ಹೀಗಾಗಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೋವಾ ಸರಕಾರವು ವಿವಾಹಕ್ಕೆ ಮೊದಲು ವಧು-ವರರಿಗೆ ಕಡ್ಡಾಯ ಕೌನ್ಸೆಲಿಂಗ್‌ ನೀಡುವ ತೀರ್ಮಾನಕ್ಕೆ ಬಂದು. ಇದೀಗ ದಿಡೀರ್ ವಿವಾಹಕ್ಕೂ ಬ್ರೇಕ್ ಬಿದ್ದಿದೆ. ಸಾಧರಣವಾಗಿ ಕ್ಯಾಥೊಲಿಕ್  ರಲ್ಲಿ, ನಿಚ್ಚಿಥಾರ್ತ ಆಗಿ ಮೂರು ತಿಂಗಳ ಬಳಿಕ ಮದುವೆಯಾಗ ಬೇಕೆಂಬ ನಿಯಮವಿದೆ, ಹಾಗೆ ಗಂಡು ಹೆಣ್ಣಿಗೆ ಕಡ್ಡಾಯವಾಗಿ ವೈವಾಹಿಕ ಶಿಕ್ಷಣವನ್ನು ಪಡೆದು ಅರದ ಪ್ರಮಾಣ ಪತ್ರವನ್ನುಪಡೆಯಬೇಕಾಗಿದೆ. ಆದರೂ ವಿವಾಹ ವಿಚ್ಚೇದನಗಳು ನಡೆಯುತ್ತಲೇ ಇವೆ.

       ಆದರೆ ಗೋವಾ ಸರಕಾರ ವಿಚ್ಚೇದನ ಆಗದಿರಲು, ಪ್ರಯತ್ನಿಸುವ ನಿಟ್ಟಿನಲ್ಲಿ ಸಾಗುತ್ತಾ, ಕಾನೂನು ಸಚಿವ ನಿಲೇಶ್‌ ಕಾಬ್ರಾಲ್‌  ಈ ಕುರಿತು ಮಾಹಿತಿಯನ್ನು ನೀಡಿದ್ದು, ಸಾರ್ವಜನಿಕ ಆಡಳಿತ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಕೌನ್ಸೆಲಿಂಗ್‌ ಯಾವ ರೀತಿ ನಡೆಯಬೇಕು ಎಂಬುದರ ರೂಪುರೇಷ ಸಿದ್ದಗೊಳಿಸುತ್ತಿದೆ. ಮದುವೆಗೆ ಮುನ್ನ ಕಡ್ಡಾಯವಾಗಿ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ವಧು-ವರರು ಒಳಗಾಗಬೇಕಾಗುತ್ತದೆ.ಎಂದು ತಿಳಿದು ಬಂದಿದೆ.

     ಯುವ ಜೋಡಿಗಳಿಗೆ ಮದುವೆ ಬಗ್ಗೆ, ಬಂಧದ ಪಾವಿತ್ರ್ಯದ ಬಗ್ಗೆ ಕೌನ್ಸೆಲಿಂಗ್‌ ನೀಡಲಾಗುತ್ತದೆ. ವಧು-ವರರ ಮನೆಯಲ್ಲಿ ಪರಸ್ಪರ ಯಾವ ರೀತಿ ಇರಬೇಕು, ಯಾವ ರೀತಿ ನಡವಳಿಕೆ ಇರಬೇಕು ಎಂದು ವಿವರಿಸಲಾಗುತ್ತದೆ.  ಧಾರ್ಮಿಕ ಸಂಸ್ಥೆಗಳು ಸರಕಾರದ ಈ ಯೋಜನೆ ಜೊತೆಗೆ ಕೈಜೋಡಿಸಬಹುದು ಎಂದು ಅವರು ಹೇಳಿದ್ದಾರೆ.

    ನೂತನ ಕಾನೂನು ಪ್ರಕಾರ ಮೊದಲು ಯುವ ಜೋಡಿ ವಿವಾಹವಾಗುವ ಬಗ್ಗೆ ಸಮ್ಮತಿ ಸೂಚಿಸಿ ವಿವಾಹ ನೋಂದಣಾಧಿಕಾರಿ ಮುಂದೆ ಸಹಿ ಹಾಕಬೇಕು. ಸಹಿ ಹಾಕಿದ ದಿನದಿಂದ 15 ದಿನಗಳ ಒಳಗಾಗಿ, ಅದೇ ಸಕ್ಷಮ ಪ್ರಾಧಿಕಾರಿಯ ಮುಂದೆ 2ನೇ ಬಾರಿಗೆ ಸಹಿ ಹಾಕಬೇಕು ಮತ್ತು ಮೂರು ತಿಂಗಳ ಬಳಿಕ ವಿವಾಹ ಆಗಿರುವ ಬಗ್ಗೆ ಅಧಿಕೃತವಾಗಿ ನೋಂದಣಿ ಮಾಡಿಸಬೇಕಾಗಿದೆ.ತಿಳಿಸಿದೆ.

ಯುವ ಕಾಂಗ್ರೆಸ್‍ನಿಂದ ಆಮ್ಲಜನಕ ಸಾಂದ್ರಕ ಕೊಡುಗೆ ಅಗತ್ಯವುಳ್ಳ ಪತ್ರಕರ್ತರು ಬಳಸಿಕೊಳ್ಳಿ-ವಿ.ಮುನಿರಾಜು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಪತ್ರಕರ್ತರ ಜೀವ ರಕ್ಷಣೆ ದೃಷ್ಟಿಯಿಂದ ಯುವ ಕಾಂಗ್ರೆಸ್ ಕೊಡುಗೆಯಾಗಿ ನೀಡಿರವ 2 ಆಮ್ಲಜನಕ ಸಾಂದ್ರಕಗಳನ್ನು ಪತ್ರಕರ್ತರು ಮತ್ತು ಅವರ ಕುಟುಂಬದವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಯುವ ಕಾಂಗ್ರೆಸ್‍ನಿಂದ ಪತ್ರಕರ್ತರ ಸಂಘಕ್ಕೆ ಕೊಡುಗೆಯಾಗಿ ನೀಡಲಾದ 2 ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಮಾರಿಯಿಂದಾಗಿ ಉಸಿರಾಟದ ತೊಂದರೆ, ಆಮ್ಲಜನಕ ಕೊರತೆಯಿಂದ ಅನೇಕ ರೋಗಿಗಳು ಜೀವ ಕಳೆದುಕೊಂಡಿದ್ದನ್ನು ಕಂಡಿದ್ದೇವೆ, ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ನಮ್ಮ ಸಹೋದ್ಯೋಗಿಗಳು ಜೀವ ಕಳೆದುಕೊಂಡಿದ್ದಾರೆ ಎಂದರು.
ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ಫ್ರಾನ್ಸಿಸ್ ಬೆನಿಟೋ ಆಮ್ಲಜನಕ ಸಾಂದ್ರಕ ಒದಗಿಸಿದ್ದು, ಅದನ್ನು ಬಳಸಿಕೊಳ್ಳುವುದಾಗಿ ತಿಳಿಸಿದರು.
ಪತ್ರಕರ್ತರ ಭವನದಲ್ಲೇ ಈ ಸಾಂದ್ರಕಗಳು ಇರಲಿದ್ದು, ಪತ್ರಕರ್ತರು ಮತ್ತು ಅವರ ಕುಟುಂಬದವರು ಉಸಿರಾಟದ ತೊಂದರೆಯಾದರೆ ಕಚೇರಿಯ ಗಂಗಾಧರ್ ಅವರನ್ನು ಸಂಪರ್ಕಿಸಿ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಾಂದ್ರಕಗಳು ವಾತಾವರಣದಲ್ಲಿನ ಆಮ್ಲಜನಕವನ್ನು 5 ಲೀಟರ್ ಪ್ರಮಾಣದಲ್ಲಿ ರೋಗಿಗೆ ಸದಾ ಒದಗಿಸಲಿದ್ದು, ಉಸಿರಾಟದ ತೊಂದರೆ ಕಂಡು ಬಂದರೆ ಪತ್ರಕರ್ತ ಬಂಧುಗಳು ಇದರ ಪ್ರಯೋಜನ ಪಡೆಯಲು ಮನವಿ ಮಾಡಿದರು.
ಯುವ ಕಾಂಗ್ರೆಸ್‍ನ
ಸಾಮಾಜಿಕ ಸೇವೆ
ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ಫ್ರಾನ್ಸಿಸ್ ಬೆನಿಟೋ ಆಮ್ಲಜನಕ ಸಾಂದ್ರಕಗಳನ್ನು ಹಸ್ತಂತರಿಸಿ, ಪತ್ರಕರ್ತರಿಗೆ ಸ್ಯಾನಿಟೈಸರ್,ಮಾಸ್ಕ್ ವಿತರಿಸಿ ಮಾತನಾಡಿ, ಮಾಧ್ಯಮ ಇಂದು ಕೋವಿಡ್ ತಡೆಗೆ ಪ್ರಮುಖ ಪಾತ್ರ ವಹಿಸಿದೆ ಜನತೆಗೆ ಜಾಗೃತಿ ಮೂಡಿಸಿದೆ ಎಂದರು.
ಕೋವಿಡ್ ಫ್ರಂಟ್‍ಲೈನ್ ವರ್ಕರ್ಸ್ ಆಗಿ ಜನರ ಕೆಲಸ ಮಾಡುತ್ತಿರುವ ಪತ್ರಕರ್ತರ ಆರೋಗ್ಯ ರಕ್ಷಣೆಯೂ ಅತಿ ಮುಖ್ಯವಾಗಿದೆ, ಸಮಾಜಕ್ಕೆ ಸರ್ಕಾರದ ತಪ್ಪುಗಳ ಅರಿವು ಮೂಡಿಸಿದ್ದಲ್ಲದೇ ಆಮ್ಲಜನಕಕ ಕೊರತೆ ನೀಗಿಸಲು ಸರ್ಕಾರದ ಮೇಲೆ ಒತ್ತಡ ತರುವಲ್ಲಿಯೂ ಪತ್ರಕರ್ತರು ಶ್ರಮಿಸಿದ್ದಾರೆ ಎಂದರು
ಪತ್ರಕರ್ತರ ನೆರವಿಗೆ ಯುವ ಕಾಂಗ್ರೆಸ್ ಬಂದಿದ್ದು, ಆಮ್ಲಜನಕ ಸಾಂದ್ರಕಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಅವರು ಮನವಿ ಮಾಡಿದರು.
ಪತ್ರಕರ್ತರ ಸಂಘದ ಸದಸ್ಯರ ಕುಟುಂಬದವರು ಕೊರೋನಾ ಸೊಂಕಿನಿಂದ ಆಕ್ಸಿಜನ್ ಕೊರತೆ ಉಂಟಾದಲ್ಲಿ ಯುವ ಕಾಂಗ್ರೇಸ್ ಸಮಿತಿ ನೀಡಿರುವ ಆಮ್ಲಜನಕ ಸಾಂದ್ರಕಗಳನ್ನು ತುರ್ತು ಅವಶ್ಯಕತೆಗೆ ಸದ್ಬಳಿಸಿಕೊಳ್ಳಿ ಎಂದರು.


ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ. ಸುರೇಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ಲತೀಫ್,ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ದಿನೇಶ್, ಪ್ರಧಾನಕಾರ್ಯದರ್ಶಿ ಭರತರೈ, ಗ್ರಾಮಾಂತರ ಅಧ್ಯಕ್ಷ ನವೀದ್ ಪಾಷ, ತಾಲ್ಲೂಕು ಪ್ರಧಾನಕಾರ್ಯದರ್ಶಿ ಅಕ್ಮಲ್ ಬೇಗ್, ನಗರಘಟಕ ಅಧಕ್ಷ ಜುಲೇಧ್ ಖಾನ್ ಮತ್ತಿತರರು ಹಾಜರಿದ್ದರು
.

ಯಲ್ದೂರು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೊರೋನ ಕಾರ್ಯಪಡೆಯಿಂದ ಪ್ರತಿ ಗ್ರಾಮದಲ್ಲಿ ಕೋವಿಡ್ ಲಸಿಕಾಕರಣ:ಆನಂದ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ :- ತಾಲೂಕಿನ ಯಲ್ದೂರು  ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚಿಸಿರುವ ಕೊರೋನ ಕಾರ್ಯಪಡೆಯನ್ನು  ಬಳಸಿಕೊಂಡು ಪ್ರತಿಯೊಂದು ಗ್ರಾಮದಲ್ಲಿ ಕೋವಿಡ್ ಲಸಿಕಾಕರಣ ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ತಿಳಿಸಿದರು.
  ಅವರು ಇಂದು ಯಲ್ದೂರು ಗ್ರಾಮ ಪಂಚಾಯ್ತಿಯಲ್ಲಿ ಹಮ್ಮಿಕೊಂಡಿದ್ದ ಕೊರೋನ ಟಾಸ್ಕ್ ಪೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ತಾಲ್ಲೂಕು ಆಡಳಿತದ ವತಿಯಿಂದ ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ವ್ಯಕ್ತಿಗೂ ಕೋವಿಡ್ ಲಸಿಕೆಯನ್ನು ಹಾಕಿಸಲು ಕ್ರಿಯಾ ಯೋಜನೆಯನ್ನು ತಯಾರಿಸಿ ತಾಲ್ಲೂಕನ್ನು ಕೋವಿಡ್ ನಿಂದ ರಕ್ಷಿಸುತ್ತೇವೆ. ಕೊರೋನ ಸೋಂಕಿತರನ್ನು ರಕ್ಷಿಸಲು 600 ಬೆಡ್ ಗಳ ವ್ಯವಸ್ಥೆಯ 05 ಕೋವಿಡ್ ಕೇರ್ ಸೆಂಟರ್ ಗಳನ್ನು ಸುಸಜ್ಜಿತವಾಗಿ ಇಡಲಾಗಿದೆ ಎಂದು ತಿಳಿಸಿದರು.
  ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ  ಟಿ. ಎ. ಶ್ರೀರಾಮಬಾಬು, ಜೆ. ಎಸ್. ವಾಣಿ, ಸಹಾಯಕ ನಿರ್ದೇಶಕ  ರಾಮಪ್ಪ, ಪಿಡಿಒ ಸಿ. ಎಲ್. ಚಿನ್ನಪ್ಪ, ವೈದ್ಯಾಧಿಕಾರಿಗಳಾದ ಅಬ್ರಾರ್ ಪಾಷ, ಬೇಬಿ ಶಾಮಿಲಿ, ಪೋಲೀಸ್ ಇಲಾಖೆಯ ಮಂಜುನಾಥ ರೆಡ್ಡಿ,  ಬಿಎಲ್ಒಗಳಾದ ಆರ್. ಅಂಬರೀಶ್, ಎಲ್. ರಾಮಚಂದ್ರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
 

ಭಾ.ರೆಡ್ ಕ್ರಾಸ್ ನಿಂದ ಕೊಡಮಾಡಲ್ಪಟ್ಟ ಹೈಪೋ ಆಕ್ಸಿಜನ್ ಸಾಧನವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಹಸ್ತಾಂತರ

JANANUDI.COM NETWORK

ಕುಂದಾಪುರ,ಜೂ.1: ಭಾರತೀಯ ರೆಡ್ ಕ್ರಾಸ್ ರಾಜ್ಯದ ಶಾಖೆಯಿಂದ ಕೊಡ ಮಾಡಲ್ಪಟ್ಟ ಹೈಪೋ ಆಕ್ಸಿಜನ್ ಯಂತ್ರವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ, ಕುಂದಾಪುರ  ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇಂದು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ  ಸಹಾಯಕ ಕಮಿಶನರ್ ರಾಜು ಕೆ.  ಕೋವಿಡ್  ಇನ್‌ಚಾರ್ಜ್ ಡಾ.ನಾಗೇಶ್, ಕುಂದಾಪುರ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಾಬರ್ಟ್ ರೆಬೆಲ್ಲೊ, ಕುಂದಾಪುರ  ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ್ ಶೆಟ್ಟಿ ಉಪಾಧ್ಯಕ್ಷ ಡಾ.ಉಮೇಶ್ ಪುತ್ರನ್, ಕಾರ್ಯದರ್ಶಿ ವೈ. ಸೀತಾರಾಮ್ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ಡಾ.ಸೋನಿ ಮತ್ತು ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ರಾಜ್ಯದ ಶಾಖೆಗೆ ಧನ್ಯವಾದಗಳನ್ನು ನೀಡಲಾಯಿತು.

ವೈದ್ಯೆಯೇ ನವಜಾತ ಶಿಶುವನ್ನು ಕದ್ದಳು, ಯಾಕೆ? ಈಗ ವೈದ್ಯೆ ಸೆರೆ: ಬೆಂಗಳೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ.

JANANUDI.COM NETWORK

[ನಂಬಿದರೆ ನಂಬಿ, ವೈದ್ಯೆಯೇ ನವಜಾತ ಶಿಶುವನ್ನು ಕದ್ದಳು, ಈಗಿನ ಕಾಲದಲ್ಲಿ ಯಾರನ್ನು ನಂಬಬಹುದು,ನಂಬಬಾರದು ಎಂಬ ಸಂದ್ಘಿದ ಪರಿಸ್ಥಿತಿಯಲ್ಲಿ ನಾವು ಬದುಕುತಿದ್ದೇವೆ,ಸಮಾಜದಲ್ಲಿ ಎಲ್ಲಾ ರೀತಿಯ ಮೋಸ ವಂಚನೆ ನಡೆಯುತ್ತದೆ , ಹಣದಾಶೆಯಿಂದ ಮನುಷ್ಯತ್ವವೇ ಮರೆಯಾಗುತಿದೆ ಅನ್ನಿಸುತ್ತದೆ]

ಬೆಂಗಳೂರು: ರಾಜಧಾನಿಯ ಚಾಮಪರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ಕಳವು,ಕಳೆದ ಒಂದು ವರ್ಷದ ಹಳೆ ಪ್ರಕರಣ ಭೇದಿಸುವಲ್ಲಿ ಬೆಂಗಳೂರು  ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಒರ್ವ ವೈದ್ಯೆಯನ್ನು ಬಂಧಿಸಿದ್ದಾರೆ.

   ಏನಿದು ಪ್ರಕರಣ

 ಜಗಜೀವನ್ರಾಮ್ ನಗರದ ಹುಸ್ನಾ ಬಾನು ಎಂಬಾಕೆ 2020ರ ಮೇ 29 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಕೆಲವೆ ಕ್ಷಣದಲ್ಲಿ ಮಗು ಕಾಣೆಯಾಗಿತ್ತು ದಂಪತಿಗಳು ದೂರು ದಾಖಲಿಸಿದ್ದರು.  ವರ್ಷ ಕಳೆದರೂ ಮಗು ಪತ್ತೆಯಾದ ಹಿನ್ನೆಲೆ ಬೇಸರಗೊಂಡ ಪೋಷಕರು ಹೈ ಕೋರ್ಟಿಗೆ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಶೀಘ್ರವೇ ಮಗು ಪತ್ತೆ ಹಚ್ಚುವಂತೆ ಸೂಚಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆದರಿಸಿ ತನಿಖೆ ನಡೆಸಿ, ಕರೆಗಳ ಪರಿಶೀಲನೆ ನಡೆಸಿದ್ದ ವೇಳೆ ಕೆಲವು ಮಾಹಿತಿ ಸಿಕ್ಕಿದೆ….

     ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಮನೋವೈದ್ಯೆ ಡಾ.ರಶ್ಮಿ (34) ಬಂಧಿತ ಆರೋಪಿ. ವಿಚಾರಣೆ ನಡೇಸಿದಾಗ  ಅಪಹರಿಸಿ ನವಜಾತ ಶಿಶುವನ್ನು 15 ಲಕ್ಷ ರೂ.ಗಳಿಗೆ ಕೊಪ್ಪಳದ ಮೂಲದ ದಂಪತಿಗೆ ಮಾರಾಟ ಮಾಡಿದೆ, ಎಂದು ಬಾಯಿ ಬಿಟ್ಟಳು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿದ್ದಾರೆ.

ಮಗುವನ್ನು ಕೊಂಡ ಕೊಪ್ಪಳ ಮೂಲದ ದಂಪತಿಗೆ ಒಂದು ಬುದ್ದಮಾಂದ್ಯ ಮಗುವಿತ್ತು. ಅದರ ಚಿಕಿತ್ಸೆಗೆ ಅವರು 2014ರಲ್ಲಿ ಹುಬ್ಬಳ್ಳಿಯ ಸುತ್ತೂರಿನಲ್ಲಿರುವ ಆಸ್ಪತ್ರೆಗೆ ತೆರಳಿದ್ದಾಗ, ಅಲ್ಲಿ ಅವರಿಗೆ ಡಾ.ರಶ್ಮಿ ಪರಿಚಯವಾಗಿ, ಆ ಮಗುವಿವ ಚಿಕಿತ್ಸೆ ಡಾ.ರಶ್ಮಿ ಮಾಡುತಿದ್ದಳು. ಹೀಗೆ ಒಡನಾಟ ಬೆಳೆದ ಬಳಿಕ ರಶ್ಮಿ, ದಂಪತಿಗೆ ನೀವು ಭಯಪಡುವ ಅಗತ್ಯವಿಲ್ಲ. ಮತ್ತೊಂದು ಮಗು ನೀವು ಪಡೆಯಬಹುದು. ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡು ಬಾಡಿಗೆ ತಾಯಿ ಹೊಟ್ಟೆಯಲ್ಲಿ ಇಟ್ಟರೆ ನಿಮ್ಮದೇ ಮಗು ಹುಟ್ಟುತ್ತದೆ, ಅದಕ್ಕಾಗಿ 15 ಲಕ್ಷ ರೂ. ಖರ್ಚಾಗುತ್ತದೆ. ಮಗು ಜನಿಸಿದ ಬಳಿಕ ನಿಮಗೆ ತಂದುಕೊಡುತ್ತೇನೆಂದು ತಿಳಸಿ,ಹಣ ಪಡೆಸಿದ್ದರು. ಇತ್ತ ಬಾಡಿಗೆ ತಾಯಿಂದ ಮಗು ಪಡೆಯದೆ, ವೈದ್ಯೆ ಶಿಶುವನ್ನೆ ಕದ್ದು ಕೊಟ್ಟಿದ್ದಳು.

ಡಾ.ವೈಎಎನ್ ಹಾಗೂ ಡಿಸಿ ನೇತೃತ್ವದಲ್ಲಿ ನೌಕರ,ಶಿಕ್ಷಕ ಮುಖಂಡರ ಸಭೆ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಅಭಿಯಾನ ಯಶಸ್ಸಿಗೆ ಸಹಕರಿಸಲು ಕರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಲಸಿಕೆ ನೀಡಿಕೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಮೊದಲಾಗಲು ಶಿಕ್ಷಕರ ಸಹಕಾರ ಅಗತ್ಯ, ಗ್ರಾಮಗಳಲ್ಲಿ ಅಭಿಯಾನ ನಡೆಸಿ,ಜನತೆಯಲ್ಲಿ ಜಾಗೃತಿ ಮೂಡಿಸಲು ಸಹಕರಿಸಿ ಎಂದು ವಿವಿಧ ಶಿಕ್ಷಕ,ನೌಕರರ ಸಂಘಟನೆಗಳ ಮುಖಂಡರಿಗೆ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಹಾಗೂ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕರೆ ನಿಡಿದರು.
ಜಿಲ್ಲಾಡಳಿತ ಭವನದಲ್ಲಿ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ವಿವಿಧ ಶಿಕ್ಷಕ,ನೌಕರರ ಸಂಘಟನೆಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಡಿಸಿ ಡಾ.ಸೆಲ್ವಮಣಿ ಮಾತನಾಡಿ, ಕೋವಿಡ್ ತಡೆಗೆ ಲಸಿಕೆಯೊಂದೇ ಅಸ್ತ್ರವಾಗಿದೆ, ಜಿಲ್ಲೆಯಲ್ಲಿ ಸುಮಾರು 17 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ 18 ನಂತರದ ವಯಸ್ಸಿನವರು ಸುಮಾರು 10-12 ಲಕ್ಷ ಇದ್ದಾರೆ, ಇವರೆಲ್ಲರಿಗೂ ಲಸಿಕೆ ನೀಡುವ ಮೂಲಕ ಕೋವಿಡ್ ತಡೆಯಬಹುದಾಗಿದೆ ಎಂದರು.
ಅಮೇರಿಕಾ,ಇಸ್ರೇಲ್ ದೇಶಗಳಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಮಾಸ್ಕ್ ಅಗತ್ಯವಿಲ್ಲ ಎಂಬ ಘೋಷಣೆ ಕುರಿತು ಪ್ರಸ್ತಾಪಿಸಿದ ಅವರು, ಲಸಿಕೆ ಹಾಕಿಸಿಕೊಂಡರೆ ಜೀವ ಹಾನಿ ಇಲ್ಲ ಎಂಬುದನ್ನು ಮನಗಂಡು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಶಿಕ್ಷಕರು ಸಹಕಾರ ನೀಡಿ ಎಂದರು.
ಮುಳಬಾಗಿಲು,ಶ್ರೀನಿವಾಸಪುರ ಲಸಿಕೆ ಹಾಕಿಸಿಕೊಂಡಿರುವುದರಲ್ಲಿ ಮೊದಲ ಸ್ಥಾನಗಳಲ್ಲಿದ್ದು, ಕೋಲಾರ,ಬಂಗಾರಪೇಟೆ, ಕೆಜಿಎಫ್‍ಗಳಲ್ಲಿ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದೆ ಎಂದರು.
ಶಿಕ್ಷಕರು ತಮ್ಮ ಗ್ರಾಮಗಳಲ್ಲಿ ಕನಿಷ್ಟ 50 ಮಂದಿಯ ಪಟ್ಟಿ ಮಾಡಿ ಲಸಿಕೆ ಹಾಕಿಸಲು ಮುಂದೆ ಬಂದರೆ ಅಲ್ಲಿಯೇ ಬಂದು ಶಿಬಿರ ನಡೆಸಿ ಲಸಿಕೆ ಹಾಕಿಸಲು ಸೂಚಿಸುವುದಾಗಿ ಭರವಸೆ ನೀಡಿ,ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಕುರಿತು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡದಿರಿ ಎಂದರು
.


ಬಿಇಒಗಳ ಮೂಲಕ ಲಸಿಕೆ ಅಭಿಯಾನ


ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಬಿಇಒಗಳ ಸಭೆ ಕರೆದು ಎಲ್ಲೆಲ್ಲಿ ಲಸಿಕೆ ಶಿಬಿರ ನಡೆಸಲು ಸಾಧ್ಯ ಎಂಬುದನ್ನು ಪಟ್ಟಿ ಮಾಡಿ ಶಿಕ್ಷಕರ ಮೂಲಕ ಈ ಕಾರ್ಯ ಯಶಸ್ವಿಗೊಳಿಸಿ, ಲಸಿಕೆ ಅಭಿಯಾಣದಲ್ಲಿ ಕೋಲಾರ ಪ್ರಥಮವಾಗಲು ಶ್ರಮಿಸಿ ಎಂದರು. ಶಿಕ್ಷಕರು ಸಮುದಾಯಕ್ಕೆ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡುಸುವುದು ಪುಣ್ಯದ ಕೆಲಸ, ಓರ್ವಶಿಕ್ಷಕ ದಿನಕ್ಕೆ ಕನಿಷ್ಟ 10 ಮಂದಿಗೆ ಲಸಿಕೆ ಹಾಕಿಸಿದರೆ 15 ದಿನಕ್ಕೆ ನಮ್ಮ ಗುರಿ ತಲುಪುವುದು ಸಾಧ್ಯ ಎಂದ ಅವರು, ಬುದ್ದಿ,ಸಮಯ ಬಳಸಿ ಜೀವದಾನದ ಈ ಮಹತ್ಕಾರ್ಯದಲ್ಲಿ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು.

ಬಿಇಒ ಕಚೇರಿ ಬಳಿ ಲಸಿಕಾ ಶಿಬಿರ


ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ, ಸರ್ಕಾರಿ,ಖಾಸಗಿ,ಅನುದಾನಿತ ಶಿಕ್ಷಕರು,ಅವರ ಕುಟಂಬದವರಿಗೆ ಲಸಿಕೆ ಅಭಿಯಾನ ನಡೆಸಲು ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಬಿಇಒ ನಾಗರಾಜಗೌಡರಿಗೆ ಅವರು ಸೂಚಿಸಿದರು.


ನೌಕರರ ಕುಟುಂಬಕ್ಕೆ ಕೋವಿಡ್‍ಕೇರ್ ಕೇಂದ್ರ


ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ, ಆದ್ಯತೆಯ ಮೇರೆಗೆ ಸರ್ಕಾರಿ ನೌಕರರಿಗೆ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಲು ಮನವಿ ಮಾಡಿದರು.
ಜನರ ಸೇವೆ ಮಾಡುತ್ತಿರುವ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಕೋವಿಡ್ ಸೊಂಕಿಗೆ ತುತ್ತಾದರೆ ಅವರ ಸೂಕ್ತ ಚಿಕಿತ್ಸೆಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಖಾಸಗಿ ಶಾಲೆ,ಕಾಲೇಜುಗಳ ವತಿಯಿಂದ ಸಭೆಯಲ್ಲಿ ಸಹ್ಯಾದ್ರಿ ಉದಯಕುಮಾರ್,ಎಸ್.ಬಿ.ಮುನಿವೆಂಕಟಪ್ಪ, ಮುನಿಯಪ್ಪ, ಶ್ರೀಕೃಷ್ಣ, ರಾಜೇಶ್‍ಸಿಂಗ್ ಮತ್ತಿತರರು ಭಾಗವಹಿಸಿದ್ದು, ಲಸಿಕೆ ಅಭಿಯಾನಕ್ಕೆ ಸಹಕಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು,ಖಜಾಂಚಿ ವಿಜಯ್, ರಾಜ್ಯಪರಿಷತ್ ಸದಸ್ಯ ಗೌತಮ್, ಕೆಜಿಎಫ್ ಅಧ್ಯಕ್ಷ ರವಿರೆಡ್ಡಿ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯಗೌಡ, ಪ್ರಧಾನ ಕಾರ್ಯದರ್ಶಿ ನಾಗರಾಜ್, ನೌಕರರ ಸಂಘ,ವೃಂದ ಸಂಘಗಳ ಮುಖಂಡರಾದ ಎಸ್.ಚೌಡಪ್ಪ,ಟಿ.ಕೆ.ನಟರಾಜ್,ರತ್ನಪ್ಪ,ಅಶ್ವಥ್ಥನಾರಾಯಣ, ಸುಬ್ರಮಣಿ,ಶ್ರೀನಿವಾಸರೆಡ್ಡಿ, ಪುರುಷೋತ್ತಮ್,ಅಜಯ್, ರವಿ,ಮುರಳಿಮೋಹನ್, ನಾಗಾನಂದ್ ಕೆಂಪರಾಜ್,ಚಂದ್ರಪ್ಪ, ಗೋಪಿಕೃಷ್ಣನ್, ಮುನಿರಾಮಯ್ಯ, ಕಾಂತರಾಜ್, ರಾಜಪ್ಪ,ಅರುಣ್ ಕುಮಾರ್, ಶಿವಕುಮಾರ್,ಮುಕುಂದ,ಶ್ರೀಧರಬಾಬು ಮತ್ತಿತರರಿದ್ದರು.