HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರ: ತಾಲ್ಲೂಕಿನ ತಾಡಿಗೋಳ್ ಕಮತಂಪಲ್ಲಿ ಗ್ರಾಮ ಕೋವಿಡ್ ಹಿನ್ನೆಲೆಯಲ್ಲಿ ಸೀಲ್ ಡೌನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ:ಮೇ.28: ತಾಲ್ಲೂಕಿನ ತಾಡಿಗೋಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಮತಂಪಲ್ಲಿ ಗ್ರಾಮದಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮವನ್ನು ಇಂದು ಶುಕ್ರವಾರ ಸೀಲ್ ಡೌನ್ ಮಾಡಲಾಯಿತು.
ಲಾಡ್ ಡೌನ್ ಮಾಡುವ ಮುನ್ನ ಗ್ರಾಮದಲ್ಲಿನ ಕೋವಿಡ್ ರೋಗಿಗಳನ್ನು ಆಂಬ್ಯುಲೆನ್ಸ್‍ಲ್ಲಿ ಶ್ರೀನಿವಾಸಪುರದ ಕೋವಿಡ್ ಕೇಂದ್ರಕ್ಕೆ ಸೇರಿಸಲಾಯಿತು. ಅನಂತರ ಗ್ರಾಮಕ್ಕೆ ಬರುವ ಮುಖ್ಯೆ ರಸ್ತೆ ಸೆರಿದಂತೆ, ಉಳಿದ ಎಲ್ಲಾ ರಸ್ತೆಗಳನ್ನೂ ಮುಚ್ಚಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಕಾಶಿ ವಿಶ್ವನಾಥ, ಕೃಷ್ಣವೇಣಿ, ಗೋವಿಂದಪ್ಪ, ಸೀನಪ್ಪ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಕೋವಿಡ್ ತಡೆಗೆ ಅನಗತ್ಯ ಓಡಾಟಕ್ಕೆ ಜನತೆ ಬ್ರೇಕ್ ಹಾಕಿ ಸೋಂಕು ತಡೆಗೆ ಮಾರ್ಗಸೂಚಿ ಅನುಸರಿಸಿ-ನಾಗರಾಜಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಕಠಿಣ ಲಾಕ್‍ಡೌನ್ ಹಿನ್ನಲೆಯಲ್ಲಿ ನಗರದಲ್ಲಿ ವಾಹನ,ಜನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು, ಸೋಂಕು ತಡೆಯುವ ದೃಷ್ಟಿಯಿಂದ ಜನತೆ ಸಹಕಾರ ನೀಡಬೇಕು ಎಂದು ವಾರ್ಡ್ ನೋಡಲ್ ಅಧಿಕಾರಿ ಹಾಗೂ ಬಿಇಒ ಕೆ.ಎಸ್.ನಾಗರಾಜಗೌಡ ಮನವಿ ಮಾಡಿದರು.
ಶುಕ್ರವಾರ ಲಾಕ್‍ಡೌನ್ ಹಿನ್ನಲೆಯಲ್ಲಿ ನಗರದ ಟೇಕಲ್ ರಸ್ತೆಯಲ್ಲಿ ಅನಗತ್ಯ ಓಡಾಟ ನಡೆಸಿದ ವಾಹನಗಳನ್ನು ತಡೆದು ಪರಿಶೀಲಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರ ಕೋವಿಡ್ ಸೋಂಕು ತಡೆಗೆ ಲಾಕ್‍ಡೌನ್ ಅಸ್ತ್ರ ಉಪಯೋಗಿಸಿದೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಲ್ಲೂ ಲಾಕ್‍ಡೌನ್ ಯಶಸ್ವಿಗೊಳಿಸಿ ಸೋಂಕು ತಡೆಯಲು ಎಲ್ಲಾ ನಾಗರೀಕರು ನೆರವಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದ ಅನೇಕ ಸಮಸ್ಯೆಗಳಾಗಿವೆ, ಇದೀಗ ಲಾಕ್‍ಡೌನ್ ಮೂಲಕ ಸೋಂಕು ಕಡಿಮೆಯಾಗಿ ಕೋಲಾರ ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಮನೆಯಲ್ಲೇ ಉಳಿದುಕೊಳ್ಳಿ, ಅನಗತ್ಯ ಓಡಾಟ ಬೇಡ ಎಂದರು.
ನಗರದಲ್ಲಿ ಜಿಲ್ಲಾಡಳಿತ ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಅವಕಾಶ ಕಲ್ಪಿಸಿದೆ, ಆದರೆ ಜನ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಅಲ್ಲಿಯೂ ಗುಂಪು ಸೇರಿ ತಿಂಡಿ ಖರೀದಿಸುತ್ತಿರುವುದು ಕಂಡು ಬರುತ್ತಿದೆ, ಇದು ಸರಿಯಲ್ಲ ಎಂದ ಅವರು, ಹೋಟೆಲ್‍ಗಳವರೂ ಸಾಮಾಜಿಕ ಅಂತರ,ಮಾಸ್ಕ್ ಇಲ್ಲವಾದರೆ ಅಂತಹವರಿಗೆ ತಿಂಡಿ ಪಾರ್ಸಲ್ ನೀಡಬಾರದು ಎಂದು ಸೂಚಿಸಿದರು.
ಆಸ್ಪತ್ರೆ, ಮೆಡಿಕಲ್‍ಸ್ಟೋರ್, ಹಾಲಿನ ನೆಪ ಹೇಳಿಕೊಂಡು ನಗರದಲ್ಲಿ ಸುತ್ತಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಪೊಲೀಸರು ಕಠಿಣ ನಿಯಮಗಳ ಮೂಲಕ ತಡೆಯುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಶಿಕ್ಷಕರಿಗೂ ಲಸಿಕೆ
ವಾರದಲ್ಲಿ ಅಭಿಯಾನ
ತಾಲ್ಲೂಕಿನ ಎಲ್ಲಾ ಸರ್ಕಾರಿ,ಅನುದಾನಿತ,ಖಾಸಗಿ ಶಾಲೆಗಳ ಶಿಕ್ಷಕರಿಗೆ ಲಸಿಕೆ ನೀಡಲಿ ಬೃಹತ್ ಅಭಿಯಾನವನ್ನು ಈ ವಾರವೇ ನಗರದ ಬಿಇಒ ಕಚೇರಿಯ ಮೈದಾನದಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಲಸಿಕೆ ಲಭ್ಯತೆ ಕುರಿತು ಮಾಹಿತಿ ಪಡೆದು ಎಲ್ಲಾ ಶಿಕ್ಷಕರಿಗೂ ಲಸಿಕೆ ಹಾಕಿಸುವ ಕಾರ್ಯವನ್ನು ಮಾಡಲು ನಿರ್ಧರಿಸಿದ್ದು, ಶಿಕ್ಷಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು
.

ಪೌರ ಕಾರ್ಮಿಕರಿಗೆ ಸರ್ಕಾರ ವಿಶೇಷ ಸೌಲಭ್ಯ ಒದಗಿಸಬೇಕು- ಶಾಂತಮ್ಮ ಕೃಷ್ಣೇಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪೌರ ಕಾರ್ಮಿಕರಿಗೆ ಸರ್ಕಾರ ವಿಶೇಷ ಸೌಲಭ್ಯ ಒದಗಿಸಬೇಕು. ಅವರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪುರಸಭಾ ಸದಸ್ಯೆ ಶಾಂತಮ್ಮ ಕೃಷ್ಣೇಗೌಡ ಹೇಳಿದರು. ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಗುರುವಾರ 90 ಮಂದಿ ಪೌರ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿ, ‘ಪೌರ ಕಾರ್ಮಿಕರು ಕಷ್ಟದ ಜೀವನ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ನೆರವಾಗಲೆಂದು ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ. ಈಚೆಗೆ ಕೋವಿಡ್‍ನಿಂದ ಮೃತಪಟ್ಟ ಪೌರ ಕಾರ್ಮಿಕ ನಾರಾಯಣಸ್ವಾಮಿ ಅವರ ಕುಟುಂಬಕ್ಕೆ ನನ್ನ ಅವಧಿಯ ಗೌರವ ಧನವನ್ನು ನೀಡುತ್ತೇನೆ. ಅವರ ಮಗಳ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸುತ್ತೇನೆ’ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಶೇಖರರೆಡ್ಡಿ ಮಾತನಾಡಿ, ಪೌರ ಕಾರ್ಮಿಕರು ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವಾಗ ಸುರಕ್ಷತಾ ಕ್ರಮ ಅನುಸರಿಸಬೇಕು. ಪುರಸಭೆ ವತಿಯಿಂದ ನಿಡಲಾಗಿರುವ ಸ್ಯಾನಿಟೈಸರ್, ಕೈಗವಸು ಮತ್ತಿತರ ಪರಿಕರಗಳನ್ನು ಬಳಸಿಕೊಳ್ಳಬೇಕು. ದಾನಿಗಳು ನಿಡುವ ನೆರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆಯ ಉಪಾಧ್ಯಕ್ಷೆ ಆಯಿಷಾ ನವಾಜ್, ಸಿಇಒ ರಾಜೇಶ್ವರಿ, ಆರೋಗ್ಯ ನಿರೀಕ್ಷಕ ಪೃಥ್ವಿರಾಜ್, ಸುರೇಶ್, ನಾಗೇಶ್, ಶ್ರೀನಾಥ್, ಬಾಬು, ಮಂಜುನಾಥ್, ಶ್ರೀಧರರಾಜ್, ಸತೀಶ್, ಸಂತೋಷ್, ಚೆಂದು ಇದ್ದರು.

ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ ಗ್ರಾಮದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಸದಸ್ಯ ಅನಂತಕುಮಾರ್ ಗ್ರಾಮಸ್ಥರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.

ದ್ವಿತಳಿ ರೇಷ್ಮೆ ಕೃಷಿ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ- ಡಾ. ನೊಬೆಲೆ ಮೊರಿಸನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

“ರೈತರಆದಾಯ ವೃದ್ಧಿಗೆ ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಸುಧಾರಿತತಾಂತ್ರಿಕತೆಗಳು” ಆನ್‍ಲೈನ್‍ತರಬೇತಿಕಾರ್ಯಕ್ರಮವನ್ನು ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕೋಲಾರ ಮತ್ತುರೇಷ್ಮೆ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 27.05.2021ರಂದು ಕೃಷಿ ವಿಜ್ಞಾನಕೇಂದ್ರದಲ್ಲಿಆಯೋಜಿಸಲಾಗಿತ್ತು.
ಶ್ರೀ. ಎಂ. ಮಂಜುನಾಥ, ರೇಷ್ಮೆ ಸಹಾಯಕ ನಿರ್ದೇಶಕರು, ಕೋಲಾರರವರುತಮ್ಮ ಪ್ರಸ್ತಾವಿಕ ಬಾಷಣದಲ್ಲಿಕಳೆದ ಬಾರಿಗೆ ಹೊಲಿಸಿದರೆ ಈ ಬಾರಿಯ ಲಾಕ್‍ಡೌನ್ ಸಮಯದಲ್ಲಿರೇಷ್ಮೆಗೂಡು ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿದ್ದು, ರೈತಬಾಂಧವರುಯಾವುದೇಕಾರಣಕ್ಕೂಹಿಪ್ಪುನೇರಳೆ ತೋಟವನ್ನುಕಿತ್ತುಹಾಕದೇರೇಷ್ಮೆಕೃಷಿಯನ್ನು ಮುಂದುವರೆಸಿಕೊಂಡು ಹೋಗಲುಬೇಕು, ಪ್ರಸ್ತುತಎಲ್ಲಾ ಬೆಳೆಗಳಿಗೂ ಸೂಕ್ತ ಬೆಲೆಯಿಲ್ಲದಂತಾಗಿದ್ದುರೇಷ್ಮೆಕೃಷಿಯಿಂದ ಮಾತ್ರ ಸುಸ್ಥಿರ ಜೀವನನಡೆಸಬಹುದಾಗಿದೆಹಾಗೂ ಹಿಪ್ಪುನೇರಳೆ ಸೊಪ್ಪನ್ನು ಪರ್ಯಾಯಜೀವನೋಪಯ ಮಾರ್ಗವಾಗಿಕುರಿ, ಮೇಕೆ ಸಾಕಾಣಿಕೆಯನ್ನು ಮಾಡಿಕೊಳ್ಳಬಹುದುಎಂದುರೈತಬಾಂಧವರಿಗೆ ಸಲಹೆಯನ್ನು ನೀಡಿದರು.
ಸದರಿಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ನೊಬೆಲೆ ಮೊರಿಸನ್, ವಿಜ್ಞಾನಿಗಳು ‘ಡಿ’ (ನಿವೃತ್ತ), ಕೇಂದ್ರರೇಷ್ಮೆ ಮಂಡಳಿ, ಬೆಂಗಳೂರು ಭಾಗವಹಿಸಿ ಗುಣಮಟ್ಟದಗೂಡುಉತ್ಪಾದನೆಗೆಅತ್ಯವಶ್ಯ ಅಂಶಗಳು ಹಾಗೂ ಅಧುನಿಕದ್ವಿತಳಿ ರೇಷ್ಮೆಕೃಷಿಯ ತಾಂತ್ರಿಕತೆಗಳ ಬಗ್ಗೆ ತಿಳಿಸುತ್ತ ಮಣ್ಣಿನ ಫಲವತ್ತತೆ ನಿರ್ವಹಣೆಗಾಗಿ ಪ್ರತಿಯೊಬ್ಬರೇಷ್ಮೆ ಬೆಳೆಗಾರರು 2 ವರ್ಷಕ್ಕೊಮ್ಮೆಕಡ್ಡಾಯವಾಗಿ ಮಣ್ಣು ಪರೀಕ್ಷೆಯನ್ನು ಮಾಡಿಸಿ ಶಿಫಾರಿತ ಪ್ರಮಾಣದರಸಗೊಬ್ಬರ ಮತ್ತು ಸಾವಯವಗೊಬ್ಬರ ಬಳಸಬೇಕೆಂದು ತಿಳಿಸಿದರು. ಹಿಪ್ಪುನೇರಳೆ ತೋಟದಲ್ಲಿಟ್ರಂಚಿಂಗ್ ಮತ್ತು ಮಲ್ಚಿಂಗ್‍ತಾಂತ್ರಿಕತೆಯನ್ನು ಅಳವಡಿಸಿಕೊಂಡು ಮಣ್ಣಿನಲ್ಲಿ ನಿರಂತರವಾಗಿ ಸಾವಯವ ಇಂಗಾಲವನ್ನುಅಭಿವೃದ್ಧಿಪಡಿಸುವುದು, ಹಿಪ್ಪುನೇರಳೆ ಗಿಡಗಳಿಗೆ ಸೂಕ್ತ ಸ್ಥಳಾವಕಾಶ,ನಾಟಿ ವಿಧಾನ, ಕಾಂಡದ ನಿರ್ವಹಣೆ, ಪ್ರದಾನ ಮತ್ತು ಲಘು ಪೋಷಕಾಂಶಗಳ ನಿರ್ವಹಣೆ ಬಳಕೆ ಬಗ್ಗೆ ಸವಿವರವಾಗಿತಿಳಿಸಿದರು. ನಂತರ ಹುಳು ಸಾಕು ಮನೆ ಸೋಂಕು ನಿವಾರಣೆಯಲ್ಲಿದ್ರಾವಣತಯಾರಿಕೆ ವಿಧಾನ, ಪ್ರಸ್ತುತ ಸನ್ನಿವೇಶದಲ್ಲಿದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿಕಂಡುಬರುವ ಹಾಲುರೋಗ, ಸಪ್ಪೆರೋಗÀದವೈಜ್ಞಾನಿಕನಿರ್ವಹಣೆ ಬಗ್ಗೆ ತಿಳಿಸಿದರು. ಸೋಂಕು ನಿವಾರಕದ್ರಾವಣವನ್ನು ಸರಿಯಾದ ಪ್ರಮಾಣದಲ್ಲಿ ಹೇಗೆ ಅಂದಾಜು ಮಾಡುವುದು, ಸೋಂಕು ನಿವಾರಕದತಯಾರಿ ಹೇಗೆ, ಪವರ್ ಸ್ಪ್ರೇಯರ್ ಬಳಸಿ ಸೋಕು ನಿವಾರಣೆ ಕೈಗೋಳ್ಳುವುದು,ಹುಳು ಮೇಯಿಸುವಾಗ ಅಂತರವೆಷ್ಟುಇರಬೇಕು, ಪ್ರೌಢ ಹುಳು ಸಾಕಾಣಿಕೆಗೆ ಸಂಬಂದಿಸಿದಂತೆ ಸೂಕ್ತ ಸ್ಥಳಾವಕಾಶ, ಜ್ವರದಲ್ಲಿ ಹುಳುಗಳ ನಿರ್ವಹಣೆ, ಹಣ್ಣು ಹುಳು ನಿರ್ವಹಣೆ ಮತ್ತು ಪ್ರತ್ಯೇಕ ಹುಳು ಸಾಕು ಮನೆಯಅನುಕೂಲತೆಬಗ್ಗೆ ತಿಳಿಸುವುದರ ಮೂಲಕ ರೈತರಆದಾಯವನ್ನು ವೃದ್ದಿಗೊಳಿಸಬೇಕೆಂದು ತಿಳಿಸಿದರು.
ಉಪನ್ಯಾಸದ ನಂತರಸಂವಾದಕಾರ್ಯಕ್ರಮದಲ್ಲಿದ್ವಿತಳಿ ರೇಷ್ಮೆ ಬೆಳೆಗಾರರು, ಚಾಕಿ ಸಾಕಾಣಿಕಾಕೇಂದ್ರದ ಮಾಲಿಕರು ಹಾಗೂ ರಾಜ್ಯದಇತರೇ ಜಿಲ್ಲೆಗಳಿಂದ ರೈತರು ಭಾಗವಹಿಸಿ ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳ ಬಗ್ಗೆ ಚರ್ಚಿಸಿದರು ಹಾಗೂ ಸೂಕ್ತ ಸಲಹೆಗಳನ್ನು ಪಡೆದುಕೊಂಡರು.
ಕೃಷಿ ವಿಜ್ಞಾನಕೇಂದ್ರ, ಕೋಲಾರದಲ್ಲಿ ನಡೆದ“ರೈತರಆದಾಯ ವೃದ್ಧಿಗೆ ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಸುಧಾರಿತ ತಾಂತ್ರಿಕತೆಗಳು” ಆನ್‍ಲೈನ್‍ಕಾರ್ಯಾಗಾರವನ್ನುರೇಷ್ಮೆ ಕೃಷಿ ವಿಜ್ಞಾನಿಗಳಾದ ಡಾ. ಶಶಿಧರ್ ಕೆ.ಆರ್‍ಯಶಸ್ವಿಯಾಗಿ ನಡೆಸಿಕೊಟ್ಟರು.ಸದರಿಕಾರ್ಯಕ್ರಮದಲ್ಲಿಸುಮಾರು80 ರೇಷ್ಮೆ ಬೆಳೆಗಾರರು ಆನ್‍ಲೈನ್‍ತರಬೇತಿಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಉಪಯೋಗವನ್ನು ಪಡೆದುಕೊಡರು.

ಉದ್ಕಾಚೊ ಕಾಟ್ / Udkacho kaat (ಕವಿತಾ) – ಜೊಸೆಫ್ ಲುವಿಸ್ ಸಾಸ್ತಾನ್.

JANANUDI.COM NETWORK

ಉದ್ಕಾಚೊ ಕಾಟ್ 

ಜಿವಿತ್ ತುಜೆಂ
ವಾಳ್ಚಾ ಉದ್ಕಾ ಸಾರ್ಕೆಂ
ತ್ಯಾ ಉದ್ಕಾಕ್ ಕಾಟ್ ತುಂವೆ ಬಾಂದ್ಲೊಯ್ ತರ್,
ಜಿವಿತಾಚಾ ಅಕೇರ್ ಫರ್ಯಾಂತ್
ಸುಖಿ ಆಸ್ತಲೊಯ್

ಬರೆಂ ಕರ‍್ಚೊ ಆವ್ಕಾಸ್ ಚುಕಯ್ನಾಕಾ
ಹೆರಾಂಕ್ ಉಜ್ವಾಡ್ ದಿಂವ್ಚಿ ವಾತ್ ಜಾ
ಸಮಾಧಾನೆಚೆ ವಾಟ್ ತುಂ ಧರ್
ಜಿಣ್ಯೆಂತ್ಲಿ ಪಾಟ್ಲಿ ಮೆಟಾಂ ಪಳೆಂನಾಕಾ
ತುಜ್ಯಾ ಭರ‍್ವಸ್ಯಾಚೆರ್ ತುಜೊ ಫುಢಾರ್ ಬಾಂದ್

ಕಷ್ಟಾ ವೆಳಾರ್ ದೆವಾಚಿ ಕಾಕುಳ್ತ್ ಮಾಗ್
ನಿರಾಶಿ ಜಾಯ್ನಾಕಾ
ವಾಳ್ಚಾ ಉದ್ಕಾಕ್ ಕಾಟ್ ಬಾಂದ್ಲಾ ವರ್ವಿ
ಹಜಾರೊಂ ಲೊಕಾಕ್ ರ‍್ಜೆಚೆಂ ಅಮ್ರತ್ ಜಾತಾ

ತುಜ್ಯಾ ಜಿವಿತಾಂತ್ಲೆ ಬರೆಂಪಣ್
ಜಾಯ್ತ್ಯಾ ಲೊಕಾಕ್ ಸಂತೊಸ್ ಹಾಡ್ತಾ
ತುಜೆಂ ಜಿವಿತ್ ಯಿ ಸಾರ್ಥಕ್ ಜಾತಾ.

✍️ ಜೊಸೆಫ್ ಲುವಿಸ್ ಸಾಸ್ತಾನ್.

Udkacho kaat

jivith tuje
Vaalchya udka sarkem
thya udkak kaat tuve bandlo thar
jivithacha aker paryanth
sukhi aasthaloy

Borem karcho aavkas chukaynaka
herank ujwad divnchi vaath jaa
samadhaneche vaat tu dhar
jineyenthli patli meta palenaka
tujya bharvasyacher tujo Fudaar baandh

kashta velar devachi kakulth maag
nirashi jaynaka
valcha udkak kaat bandhlya vorvim
hajaaro lokaank garjeche amrath jatha

tujya jivithanthle barepon
jaythya lokak santhos hadtha.
tuje jivith gi Saarthak jatha…..

✍️ Joseph Lewis, Sastan.

ಆಸ್ಪತ್ರೆಯೆಂದರೆ ಶತ್ರುವುನಂತೆ ಕಾಣುವ ಹಳ್ಳಿ ಜನ, ಉತ್ತಮ ಚಿಕಿತ್ಸೆಯಿಂದ ರಾಯಲ್ಪಾಡು ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮನೆಮಾತಾಗಿದೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು 1 : ಜೀವನವೆಂದ ಮೇಲೆ ಸುಖ, ಕಷ್ಟ, ಸ್ವಾಸ್ಥ್ಯ , ರೋಗರುಜಿನಗಳು ಇದ್ದೇ ಇರುತ್ತವೆ . ರೋಗಗಳು ಬಾಧಿಸಲು ಆರಂಭಿಸಿದಾಗ ಔಷಧವನ್ನು ಪರಮಶತ್ರುವಿನಂತೆ ಕಾಣುವ ಅದೆಷ್ಟೋ ಜನರಿರುತ್ತಾರೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಕೆಲವರು ಆಸ್ಪತ್ರೆಯನ್ನು ಸಹ ಪರಮಶತ್ರುವಿನಂತೆ ಕಾಣುವಂತವರು ಇದ್ದಾರೆ.
ಗ್ರಾಮೀಣ ಭಾಗದ ನಾಗರೀಕರಲ್ಲಿ ಆಸ್ಪತ್ರೆ ಎಂದರೆ ಇಂಜಕ್ಷನ್ ಕೊಡುವಂತಹ, ಆಪರೇಷನ್ ಮಾಡುವಂತಹ ಸ್ಥಳ ಎಂಬ ಭಯದ ವಾತವರಣ ಹಾಗು ಆಸ್ಪತ್ರೆಗೆ ಹೋದರೆ ಇಲ್ಲಸಲ್ಲದ ಪರೀಕ್ಷೆಗಳನ್ನು ಮಾಡಿ ಮಾನಸಿಕವಾಗಿ ಹಿಂಸೆಯಾಗುತ್ತದೆ ಹಾಗು ಜೇಬು ಖಾಲಿಯಾಗುತ್ತದೆ ಎನ್ನುವಂತಹ ಜನರು ಗ್ರಾಮೀಣ ಭಾಗದಲ್ಲಿದ್ದು, ಇನ್ನು ಕೆಲವರು ಆಕಸ್ಮಿಕವಾಗಿ ಖಾಯಿಲೆ ಬಂದರೆ ಹಳ್ಳಿಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ , ನಗರ ಪ್ರದೇಶಕ್ಕೆ ಹೋಗಲು ಸಾಧ್ಯವಾಗದೆ ಖಾಯಿಲೆಯಿಂದ ಬಳಲುವ ಜನರಿದ್ದಾರೆ.
ಇಂತಹ ಸಮಯದಲ್ಲಿ ರಾಯಲ್ಪಾಡು ಹೋಬಳಿಯ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ಜನ ಬಂದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರೋಗಿಗೆ ಚಿಕಿತ್ಸೆಯ ಜೊತೆಗೆ ಮಾನಸ್ಸಿಗೆ ನೆಮ್ಮದಿ ನೀಡುವಂತಹ ಅತ್ಯುತ್ತಮ ಪರಿಸರವು ಆವರಣದಲ್ಲಿ ಸೃಷ್ಟಿಯಾಗಿದೆ. ಉತ್ತಮ ವಾತವರಣವು ಸೃಷ್ಟಿಯಾಗಲು ಸ್ಥಳೀಯ ಆರೋಗ್ಯಕೇಂದ್ರ ಸಿಬ್ಬಂದಿಯು ಮನಸವಾಚ ಕಾರ್ಯನಿರ್ವಹಿಸುತ್ತಿದೆ.
ಇನ್ನು ವೈದ್ಯರು “ವೈದ್ಯೋ ನಾರಾಯಣ ಹರಿಃ” ಎಂಬಂತೆ ವೈದ್ಯರು ಆರೋಗ್ಯ ಕೇಂದ್ರಕ್ಕೆ ಬರುವ ಅನಾರೋಗ್ಯವಂತರಿಗೆ ಅಕ್ಕರೆಯಿಂದ ಉತ್ತಮ ಚಿಕಿತ್ಸೆಯನ್ನು ನೀಡುತ್ತಾ , ರೋಗಿಯ ಸಮಸ್ಯೆಯನ್ನು ಆಲಿಸಿ , ಪರಿಶೀಲಿಸಿ ಸಮಸ್ಯೆಗೆ ತಕ್ಕಂತೆ ಕಡಿಮೆ ವೆಚ್ಚದ ಪರಿಹಾರದ ಚಿಕಿತ್ಸೆಯನ್ನು ನೀಡುತ್ತಾ , ಈ ಭಾಗದ ನಾಗರೀಕರೆಲ್ಲರ ಮನೆಮಾತಾಗಿದ್ದಾರೆ.
ಸಾಮಾನ್ಯವಾಗಿ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೊರತೆ ಎದ್ದು ಕಾಣುತ್ತದೆ ಆದರೆ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ವೈದ್ಯರು ಸಾದಾ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿರುತ್ತಾರೆ ಎಂಬ ಮಾತು ಈ ಭಾಗದ ನಾಗರೀಕರಲ್ಲಿ ಕೇಳಿಬುರುತ್ತದೆ.
ಪೋಟು 1 : ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾದ ಕೆ.ಆರ್.ಕವಿತರವರು ಚಿಕಿತ್ಸೆಯಲ್ಲಿ ನೀಡುವದರಲ್ಲಿ ನಿರತರಾಗಿರುವದು .
ಪೋಟು 2 : ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯಲು ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಸಾಲು ನಿಂತಿರುವುದು.
ನೋಟ್ : ಕರೋನಾ ರೋಗದ ಬಗ್ಗೆ ಭಯ ಬೇಡ ಎಚ್ಚರದೊಂದಿಗೆ ಇದ್ದರೆ ಸಾಕು. ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡುವಂತೆ ಸಲಹೆ ನೀಡಿದರು
.

ಸಹಕಾರಿ ಬ್ಯಾಂಕ್ ಸಾಲದ 3 ತಿಂಗಳ ಕಂತು ಒಮ್ಮೆಲೆ ಪಾವತಿಗೆ ಸೂಚನೆ ಸರ್ಕಾರದ ಆದೇಶ ಧಿಕ್ಕರಿಸಿ ಸಹಕಾರ ಇಲಾಖೆ ಸುತ್ತೋಲೆ-ವ್ಯಾಪಕ ಟೀಕೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದ ಮಹಿಳೆಯರ ಸಂಕಷ್ಟಕ್ಕೆ ಮುಖ್ಯಮಂತ್ರಿ ಸ್ಪಂದಿಸಿ ಸಾಲದ ಕಂತು ಮರುಪಾವತಿ ಅವಧಿಯನ್ನು 3 ತಿಂಗಳು ವಿಸ್ತರಿಸಿದ್ದರೂ, ಸಹಕಾರ ಇಲಾಖೆ ಅದಕ್ಕೆ ಸಿಎಂ ಆದೇಶವನ್ನೇ ಧಿಕ್ಕರಿಸಿ ಜೂನ್ ಕೊನೆಗೆ ಪೂರ್ಣ 3 ಕಂತು ಒಂದೇ ಬಾರಿ ಪಾವತಿಗೆ ಆದೇಶ ಹೊರಡಿಸಿರುವುದು ತಾಯಂದಿರ ತೀವ್ರ ಟೀಕೆಗೆ ಗುರಿಯಾಗಿದೆ.
ಸಾಲ ಮರುಪಾವತಿ ಸಂಬಂಧ ಸಹಕಾರ ಇಲಾಖೆಯ ಆದೇಶದಿಂದ ಆಕ್ರೋಶಗೊಂಡ ವಿವಿಧ ಮಹಿಳಾ ಸಂಘಗಳ ಪ್ರತಿನಿಧಿಗಳು ನಗರದ ಕೇಂದ್ರ ಸಹಕಾರಿ ಬ್ಯಾಂಕಿಗೆ ಧಾವಿಸಿ, ಮಾಧ್ಯಮದೊಂದಿಗೆ ಮಾತನಾಡಿದರು.
ಕೋವಿಡ್ ಲಾಕ್‍ಡೌನ್ ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲದ ಕಂತು ಪಾವತಿಯನ್ನು 3 ತಿಂಗಳು ವಿಸ್ತರಿಸಿ ಘೋಷಿಸುವ ಮೂಲಕ ರೈತರು,ಸ್ತ್ರೀಶಕ್ತಿ ಸಂಘಗಳ ಲಕ್ಷಾಂತರ ಮಹಿಳೆಯರ ಪ್ರಶಂಸೆಗೆ ಪಾತ್ರರಾಗಿದ್ದರು.
ಆದರೆ ಮೇ.21 ರಂದು ಸಹಕಾರ ಸಂಘಗಳ ನಿಬಂಧಕರು ಹೊರಡಿಸಿರುವ ಅವೈಜ್ಞಾನಿಕ ಆದೇಶದಲ್ಲಿ ಸಾಲ ಪಾವತಿಗೆ ಮಾತ್ರ 3 ತಿಂಗಳು ಅವಕಾಶ ನೀಡಿ, ಒಂದೇ ಬಾರಿ ಮೂರು ಕಂತನ್ನು ಪಾವತಿಸುವಂತೆ ತಿಳಿಸಿರುವ ಮೂಲಕ ಮುಖ್ಯಮಂತ್ರಿಗಳ ಘೋಷಣೆಯನ್ನೇ ತಿರುಚಿ ಸುತ್ತೋಲೆ ಕಳುಹಿಸಿ ಸರ್ಕಾರದ ವಿರುದ್ದ ರೈತರು,ಮಹಿಳೆಯರು ತಿರುಗಿ ಬೀಳುವಂತೆ ಮಾಡಿದ್ದಾರೆ ಎಂದರು.
ಕಳೆದ ವರ್ಷದ ಲಾಕ್‍ಡೌನ್ ಸಂದರ್ಭದಲ್ಲಿಯೂ ಕಂತು ಪಾವತಿಯನ್ನು 3 ತಿಂಗಳು ಮುಂದೂಡಲಾಗಿತ್ತು. ಅದೇ ಮಾದರಿಯಲ್ಲಿ ರೈತರು, ಮಹಿಳಾ ಸಂಘಗಳ ಲಕ್ಷಾಂತರ ತಾಯಂದಿರ ನೋವಿಗೆ ಸ್ಪಂದಿಸಿದ ಯಡಿಯೂರಪ್ಪ ಈ ಬಾರಿಯೂ ಕಂತು ಪಾವತಿಯನ್ನು 3 ತಿಂಗಳು ವಿಸ್ತರಿಸಿ ಘೋಷಣೆ ಮಾಡಿದ್ದಾರೆ
.


ಹಳ್ಳಿಗೂ ಹಬ್ಬಿದ ಮಹಾ ಮಾರಿ


ಮಹಿಳಾ ಸ್ವಸಹಾಯ ಸಂಘಗಳಿಗೆ ಸಹಕಾರ ಬ್ಯಾಂಕುಗಳ ಮೂಲಕ ಬಡ್ಡಿರಹಿತ ಸಾಲ ಒದಗಿಸುವ ಮೂಲಕ ಸರ್ಕಾರ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ನೆರವಾಗಿರುವುದು ಶ್ಲಾಘನೀಯ ಎಂದರು.
ಸಹಕಾರ ಬ್ಯಾಂಕುಗಳು ಒದಗಿಸಿರುವ ಬಡ್ಡಿರಹಿತ ಸಾಲ ಸೌಲಭ್ಯದಿಂದ ಅನೇಕ ಕುಟುಂಬಗಳು ಇಂದು ಬದುಕು ಕಟ್ಟಿಕೊಂಡಿವೆ, ಸ್ವಂತ ಉದ್ಯೊಗ ನಡೆಸುವ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಸದೃಢಗೊಳ್ಳುವತ್ತ ಸಾಗಿದ್ದು, ಮೀಟರ್ ಬಡ್ಡಿ ದಂಧೆಯಿಂದ ರಕ್ಷಣೆಯೂ ಸಿಕ್ಕಿದೆ ಎಂದು ತಿಳಿಸಿದರು.
ಆದರೆ ಕೋವಿಡ್ ಮಹಾಮಾರಿ ಇಂದು ಹಳ್ಳಿಹಳ್ಳಿಗೂ ಹರಡುವ ಮೂಲಕ ರೈತರು,ಮಹಿಳೆಯರು ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಿಸಿದೆ. ಇಂತಹ ಸಂದರ್ಭದಲ್ಲಿ ನಮಗೆ ಸಾಲ ಮನ್ನಾ ಬೇಡ ಆದರೆ ನಮ್ಮ ಸಾಲದ ಕಂತು ಪಾವತಿ ಅವಧಿಯನ್ನು ಮುಂದೂಡಿ ಎಂಬ ಮಹಿಳೆಯರ ಕೂಗು ಮುಖ್ಯಮಂತ್ರಿಗಳಿಗೆ ತಲುಪಿದ್ದರಿಂದಲೇ ಅವರು ಪ್ಯಾಕೇಜ್ ಘೋಷಿಸಿ ಕಂತು ಪಾವತಿ ವಿಸ್ತರಿಸಿದ್ದರು.
ಕೋವಿಡ್ ಸಂಕಷ್ಟದಲ್ಲಿ ಬದುಕು ನಡೆಸುವುದೇ ದುಸ್ತರವಾಗಿದೆ, ಸಾವು,ಬದುಕಿನ ನಡುವೆ ಹೋರಾಟ ನಡೆಸುವ ಸಂದರ್ಭದಲ್ಲಿ ಮಹಿಳಾ ಸಂಘಗಳ ಪ್ರತಿನಿಧಿಗಳು ವಾರದ ಸಭೆ ನಡೆಸಿ ಒಂದೆಡೆ ಸೇರಿ ತಿಂಗಳ ಕಂತು ಸಂಗ್ರಹಿಸುವುದು ಸಾಧ್ಯವಿಲ್ಲ ಎಂದ ಮಹಿಳೆಯರು, ಒಂದೇ ಬಾರಿ ಮೂರು ತಿಂಗಳ ಕಂತು ಹೇಗೆ ಪಾವತಿಸುವುದು ಎಂದು ಪ್ರಶ್ನಿಸಿದರು.
ಕೂಲಿ ಇಲ್ಲ, ಲಾಕ್‍ಡೌನ್‍ನಿಂದ ಮನೆಯಿಂದ ಹೊರ ಹೋಗುವಂತೆಯೂ ಇಲ್ಲ, ಕಣ್ಣ ಮುಂದೆಯೇ ಅನೇಕ ತಮ್ಮ ಸಂಬಂಧಿಕರು,ನೆರೆಹೊರೆಯವರ ಶವಯಾತ್ರೆ ಸಾಗಿದೆ ಇಂತಹ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿ ಹೇಗೆ ಎಂಬುದು ಮಹಿಳೆಯರ ಪ್ರಶ್ನೆಯಾಗಿತ್ತು.
ಮುಖ್ಯಮಂತ್ರಿಗಳೇ ಸಾಲದ ಕಂತು 3 ತಿಂಗಳು ವಿಸ್ತರಿಸಿರುವಾಗ ಸಹಕಾರ ಇಲಾಖೆಯ ಈ ಧೋರಣೆ ಏಕೆ? ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಆದೇಶ ಪಾಲಿಸಬೇಕೆಂಬ ಹೊಣೆಗಾರಿಕೆ ಇಲ್ಲವೇ? ಅಥವಾ ಮುಖ್ಯಮಂತ್ರಿಗಳು ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಅಡಗಿದೆಯೇ ಎಂದು ಕಿಡಿಕಾರಿದರು.
ಸಹಕಾರ ಇಲಾಖೆಯ ಬೇಜವಾಬ್ದಾರಿ ಧೋರಣೆಯಿಂದಾಗಿ ಸಹಕಾರಿ ಬ್ಯಾಂಕುಗಳ ಸಾಲದಿಂದ ಬದುಕು ಕಟ್ಟಿಕೊಂಡಿರುವ ಮಹಿಳೆಯರು ಮತ್ತೆ ಮೀಟರ್ ಬಡ್ಡಿ ದಂಧೆಗೆ ಬಲಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಿ ಅಗತ್ಯ ನಿರ್ದೇಶನ ನೀಡಬೇಕಾಗಿದೆ.
ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದಿರುವ ಲಕ್ಷಾಂತರ ಮಹಿಳೆಯರು,ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸಹಕಾರ ಇಲಾಖೆ ನಿಬಂಧಕರಿಗೆ ಸರ್ಕಾರ ಸ್ವಷ್ಟ ನಿರ್ದೇಶನ ನೀಡುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಡೆದಿರುವ ಪ್ರಯತ್ನಕ್ಕೆ ಕೊನೆಯಾಡಬೇಕಾಗಿದೆ.
ಇಲ್ಲವಾದಲ್ಲಿ ರಾಜ್ಯದ ಲಕ್ಷಾಂತರ ಮಹಿಳೆಯರು,ರೈತರು ಸರ್ಕಾರದ ವಿರುದ್ದ ಸಿಡಿದೇಳುವ ಸಾಧ್ಯತೆ ಇದ್ದು, ಮುಖ್ಯಮಂತ್ರಿಗಳು ಕೂಡಲೇ ಸಹಕಾರ ಇಲಾಖೆಗೆ ಚುರುಕು ಮುಟ್ಟಿಸಬೇಕು, ಒಮ್ಮೆಲೆ 3 ಕಂತು ಪಾವತಿಯ ಸುತ್ತೋಲೆ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.

2.5 ಲಕ್ಷ ಖಾಸಗಿಶಾಲಾ ಶಿಕ್ಷಕರಿಗೆ ತಲಾ 10ಸಾವಿರ ಪ್ಯಾಕೇಜ್ ಸಾಧ್ಯತೆ ! ಎಂಎಲ್‍ಸಿಗಳ ನಿಯೋಗಕ್ಕೆ ಸಿಎಂ ಭರವಸೆ-ಡಾ.ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳ ಬೋಧಕ,ಬೋಧಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸುರೇಶ್‍ಕುಮಾರ್ ನೇತೃತ್ವದ ಎಂಎಲ್‍ಸಿಗಳ ನಿಯೋಗಕ್ಕೆ ಭರವಸೆ ನೀಡಿದ್ದು, ತಲಾ 10 ಸಾವಿರ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‍ಕುಮಾರ್ ನೇತೃತ್ವದಲ್ಲಿ ಶಿಕ್ಷಕ,ಪದವೀಧರ ಕ್ಷೇತ್ರಗಳ ಎಂಎಲ್‍ಸಿಗಳು ಸಂಕಷ್ಟದಲ್ಲಿರುವ ಶಿಕ್ಷಕರ,ಸಿಬ್ಬಂದಿ ನೆರವಿಗೆ ಬರಲು ಮಾಡಿದ ಮನವಿಗೆ ಸಿಎಂ ಸ್ಪಂದಿಸಿದ್ದು ಪ್ಯಾಕೇಜ್ ಘೋಷಿಸಲು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಕ್ಷೇತ್ರ ಶಿಕ್ಷಣ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದೆ, ಕೋವಿಡ್‍ನಿಂದಾಗಿ ಬಹುತೇಕ ಶಾಲಾ ಕಾಲೇಜುಗಳು ಸಂಕಷ್ಟಕ್ಕೆ ಒಳಗಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಬೋಧಕ,ಬೋಧಕೇತರ ಸಿಬ್ಬಂದಿ ಜೀವನ ನಡೆಸುವುದು ದುಸ್ತರವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಿಎಂ ಗಮನಕ್ಕೆ ತಂದಿದ್ದಾಗಿ ತಿಳಿಸಿದ್ದಾರೆ.
ಏಪ್ರಿಲ್ 9 ರಿಂದ ತೆಲಂಗಾಣ ರಾಜ್ಯದಲ್ಲಿ ಅಲ್ಲಿನ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಪ್ರತಿ ತಿಂಗಳು 2 ಸಾವಿರ ರೂ ಹಾಗೂ 25 ಕೆಜಿ ಅಕ್ಕಿ ನೀಡುತ್ತಿದೆ. ಅಲ್ಲಿ ಈಗಾಗಲೇ 1.45 ಲಕ್ಷ ಶಿಕ್ಷಕರು ಈ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಸಚಿವ ಸುರೇಶ್‍ಕುಮಾರ್ ಸಿಎಂ ಗಮನಕ್ಕೆ ತಂದರು ಎಂದು ತಿಳಿಸಿದ್ದಾರೆ.
ಆದ್ದರಿಂದ ರಾಜ್ಯದಲ್ಲೂ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೂ ಕೊರೋನಾ ಸಂಕಷ್ಟಕ್ಕೀಡಾಗಿದ್ದು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪೋಷಕರು ಶುಲ್ಕ ಭರಿಸದ ಕಾರಣ ಶಾಲೆಗಳ ಆಡಳಿತ ಮಂಡಳಿಗಳು ಈ ಶಿಕ್ಷಕರಿಗೆ ವೇತನ ನೀಡುತ್ತಿಲ್ಲ ಎಂದು ತಿಳಿಸಿದರು.
ಶಿಕ್ಷಕ ಸಂಘಗಳ
ಸಹಕಾರದ ಭರವಸೆ
ಸಿಎಂ ಭೇಟಿ ನಂತರ ಸುರೇಶ್‍ಕುಮಾರ್ ಅಧ್ಯಕ್ಷತೆಯಲ್ಲಿ ಎಲ್ಲಾ ಎಂಎಲ್‍ಸಿಗಳು ಸರ್ಕಾರಿ ಪ್ರಾಥಮಿಕ ಶಿಕ್ಷಕರ, ಪ್ರೌಢಶಾಲಾ ಶಿಕ್ಷಕರ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘಗಳ ರಾಜ್ಯ ಪದಾಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿ ಈ ಸಂಬಂಧ ಸರ್ಕಾರದ ಜತೆ ಸಹಕರಿಸಲು ಮನವಿ ಮಾಡಲಾಯಿತು.
ಸಂಘಗಳ ಪದಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಸಹಕರಿಸುವ ಭರವಸೆ ನೀಡಿದ್ದಾರೆ. ಒಟ್ಟಾರೆ 15 ತಿಂಗಳಿಂದ ಜಾತಕ ಪಕ್ಷಿಗಳಂತೆ ಕಾದಿದ್ದ ಸುಮಾರು 2.5 ಲಕ್ಷ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ,ಸಿಬ್ಬಂದಿಗೆ ಕನಿಷ್ಟ 10 ಸಾವಿರ ರೂ ಪ್ಯಾಕೇಜ್ ಘೋಷಿಸುವ ಕಾಲ ಸನ್ನಿಹಿತವಾಗಿದೆ ಎಂಬ ಶುಭ ಸೂಚನೆಯನ್ನು ಸಿಎಂ ನೀಡಿದ್ದಾರೆ ಎಂದ ವೈ.ಎ.ಎನ್ ತಿಳಿಸಿದ್ದಾರೆ.
ಸಿಎಂ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಚಿವ ಸುರೇಶ್‍ಕುಮಾರ್ ಅವರೊಂದಿಗೆ ಎಂಎಲ್‍ಸಿಗಳಾದ ಪುಟ್ಟಣ್ಣ, ಸುಶೀಲ್‍ನಮೋಶಿ, ಚಿದಾನಂದ ಎಂ.ಗೌಡ, ಅರುಣಷಹಪುರ ಮತ್ತಿತರರು ಉಪಸ್ಥಿತರಿದ್ದರು
.

ಕೊರಳಿಗೆ ತಾಳಿ ಕಟ್ಟುತಿದ್ದಾಗಲೇ ಪ್ರಾಣ ಬಿಟ್ಟ ವಧು!ಆದರೂ ಮತ್ತೊಂದು ಮಗಳನ್ನು ವರನಿಗೆ ಕೊಟ್ಟು ಮದುವೆ ಮಾಡಿಸಿದರು..!

JANANUDI.COM NETWORK


ಉತ್ತರಪ್ರದೇಶ: ಮದುವೆಯಾ ಎಲ್ಲಾ ಶಾಸ್ತ್ರಗಳು ಮುಗಿದಿದ್ದವು,ಹಾರವನ್ನು ಬದಲಾಯಿಸಿದ್ದರು, ಇನ್ನೇನು ತಾಳಿ ಕಟ್ಟೋದಷ್ಟೇ ಬಾಕಿ ಇತ್ತು. ಅಷ್ಟರಲ್ಲೆ ಹೃದಯಾಘಾತವಾಗಿ ನವ ವಧು ಸಾವನ್ನಪ್ಪಿರುವ ಹ್ರದಯ ವಿದ್ರಾವಹಕ ಘಟನೆ ಉತ್ತರಪ್ರದೇಶದ ಲಖ್ನೊನಲ್ಲಿ ಈ ಘಟನೆ ನಡೆದಿದೆ.
ಆದರೆ ಮದುವೆ ಮಾತ್ರ ನಿಂತಿಲ್ಲ. ಅಕ್ಕನ ಬದಲಿಗೆ ತಂಗಿಯನ್ನೆ ವರನಿಗೆ ಕೊಟ್ಟು ವದುವಿನ ಕಡೆಯವರು ಮದುವೆ ನೆಡೆಸೀಯೆ ಬಿಟ್ಟಿದ್ದಾರೆ. ಸುರಭಿ ಎಂಬ ಹುಡುಗಿಗೂ ಮತ್ತು ಮಂಜೇಶ ಎಂಬ ಹುಡುಗನಿಗೂ ಮದುವೆ ನಿಶ್ಚಯವಾಗಿತ್ತು. ಅದರಂತೆ ಮದುವೆಯ ಹಿಂದಿನ ರಾತ್ರಿಯೇ ವರನ ದಿಬ್ಬಣ ವಧುವಿನ ಮನೆಗೆ ತೆರಳಿದ್ದಾರೆ. ಶಾಸ್ತ್ರಗಳನ್ನೆಲ್ಲಾ ಮಾಡಲಾಗಿತ್ತು.
ಗಂಡು-ಹೆಣ್ಣು ಹಾರವನ್ನು ಬದಲಾಯಿಸಿಕೊಂಡಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಕುಸಿದು ಬಿದ್ದಿದ್ದಾಳೆ. ತಕ್ಷಣ ಮನೆಯವರು ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನತದೃಷ್ಟ ಹುಡುಗಿ ಹೃದಯಾಘಾತದಿಂದ ವಿಧಿವಶಗಳಾಗಿದ್ದಾಳೆ.
ಶವವನ್ನ ಮನೆಗೆ ತಂದ ಕುಟುಂಬಸ್ಥರು, ನಂತರ ಮನೆಮಂದಿ,ಮಾತುಕತೆ ನಡೆಸಿ ವರ ಎಲ್ಲರು ಒಪ್ಪಿದ ಬಳಕ ಆ ವರನಿಗೆ ಮೃತ ಹುಡುಗಿಯ ತಂಗಿಯನ್ನೇ ಕೊಟ್ಟು ಮದುವೆ ಮಾಡಿದ್ದಾರೆ
.