HOLY ROSARY CHURCH, KUNDAPUR – 450 th JUBILEE SOUVENIR 2021

ರಾಜ್ಯದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

JANANUD.COM NET WORK

ಬೆಂಗಳೂರು,ಜೂ.8: ಜೂನ್ 3ರಂದುಮುಂಗಾರುಕೇರಳಪ್ರವೇಶಿಸಿದ್ದು, ಜೂನ್ 5ರಂದುಕರ್ನಾಟಕಪ್ರವೇಶಿಸಿದೆ.

ಇದೀಗ ರಾಜ್ಯದಲ್ಲಿ ಜೂನ್ 10 ಹಾಗೂ 11 ರಂದು ಗುಡುಗುಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

. ಕರಾವಳಿಜಿಲ್ಲೆಗಳಾದದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡಹಾಗೂಮಲೆನಾಡುಪ್ರದೇಶಗಳಲ್ಲಿಅಧಿಕಮಟ್ಟದಲ್ಲಿಮಳೆಯಾಗಲಿದೆಎಂದುಹವಾಮಾನಇಲಾಖೆಮುನ್ನಚೇರಿಕೆ ನೀ ಡಿದೆ

    ಉತ್ತರಒಳನಾಡಿನಲ್ಲಿಜೂನ್ 7 ರಿಂದ 11 ರವರೆಗೆಕೆಲವೆಡೆಮಾತ್ರಸಾಧಾರಣಮಳೆಇರಲಿದ್ದು, ದಕ್ಷಿಣಒಳನಾಡಿನಲ್ಲಿಜೂನ್ 7 ರಿಂದ 11 ರವರೆಗೆಕೆಲವುಪ್ರದೇಶಗಳಲ್ಲಿಹಗುರಮಳೆಯಾಗುವಮುನ್ಸೂಚನೆಇದೆ.

ಪಶ್ಚಿಮ ಬಂಗಾಳ: ಸಿಡಿಲಿಗೆ 26ಕ್ಕೂ ಹೆಚ್ಚು ಮಂದಿ ಬಲಿ

JANANUDI.COM NET WORK

ಕೊಲ್ಕತ್ತಾ,ಜೂ.8:ಪಶ್ಚಿಮ ಬಂಗಾಳದಲ್ಲಿ ಸಿಡಿಲು ಹೊಡೆದು ಸುಮಾರು 26ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ,  ಹೂಗ್ಲಿ ಜಿಲ್ಲೆಯಲ್ಲಿ. 11 ಮಂದಿ ಮುರ್ಶಿದಾಬಾದ್​ನಲ್ಲಿ 9, ಬಂಕುರಾದಲ್ಲಿ ಇಬ್ಬರು, ಮಿಡ್ನಾಪುರದಲ್ಲಿ ಇಬ್ಬರು ಹಾಗೂ ಪಶ್ಚಿಮ ಮಿಡ್ನಾಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

      ಈ ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಪ್ರಾಣಕಳೆದುಕೊಂಡ ಕುಟುಂಬ ಸದಸ್ಯರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ ಆರ್ ಎಫ್) ಯಿಂದ ತಲಾ ಎರಡು ಲಕ್ಷ ರೂಪಾಯಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.

    ಇನ್ನೂ ಸಿಡಿಲು ಹೊಡೆದು ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಕೊಡುವುದಾಗಿ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಕೊರೊನಾ ಸೋಂಕಿತ ಮಾವನನ್ನು ಬೆನ್ನ ಮೇಲೆ ಹೊತ್ತು ಕೊಂಡು ಆಸ್ಪತ್ರೆಗೆ ನಡೆದ ಸೊಸೆ!

JANANUDI.COM NETWORK

ಒಡಿಶಾ,ಜೂ, 7: ಕೊರೊನಾ ಅಂದರೆ ಕೆಲವರು ತಮ್ಮ ತಂದೆ ತಾಯಿವರನ್ನೆ ದೂರ ಮಾಡಿರುವಾಗ,ಅವರ ಶವಗಳನ್ನು ಸಹ ಬೇಡವೆಂದು ಹೇಳುತ್ತಿರುವಾಗ ಒಡಿಶಾಲೊಂದು ಅಭೂತ ಪೂರ್ವ ಘಟನೆ ನಡೆದಿದೆ. ಸೊಸೆಯಬ್ಬಳು ತನ್ನ ಕೊರೊನಾ ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತುಕೊಂಡು ಕೋವಿಡ್ ಕೇಂದ್ರಕ್ಕೆ ಸಾಗಿಸಿರುವ ಘಟನೆ ವರದಿಯಾಗಿದೆ.

      ಒಡಿಶಾದ ನಿಹಾರಿಕಾ ಎಂಬ ಮಹಿಳೆ ಸಮಾಜ ಮೆಚ್ಚುವ ಕೆಲಸವನ್ನು ಮಾಡಿದ್ದು,  ಮಾವನನ್ನು ಹೊತ್ತುಕೊಂಡು ಹೋಗುತ್ತಿರುವ ನಿಹಾರಿಕಾಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

      ನಿಹಾರಿಕಾ ಅವರ ಪತಿ ಸೂರಜ್​​ ಮನೆಯಲ್ಲಿರಲಿಲ್ಲ. ಹೀಗಾಗಿ ಮನೆಯ ಎಲ್ಲ ಜವಾಬ್ದಾರಿಯನ್ನು ನಿಹಾರಿಕಾ ನೋಡಿಕೊಳ್ಳುತ್ತಿದ್ದರು. ಪತಿಯ ತಂದೆ 75 ವರ್ಷದ ತಾಲೇಶ್ವರ್ ದಾಸ್ ಅವರಿಗೆ​ ಕೋವಿಡ್​ 19 ಸೋಂಕು ದೃಡಪಟ್ಟಿದೆ. ಇದರಿಂದಾಗಿ ಜಿಲ್ಲಾಡಳಿತ ತಾಲೇಶ್ವರ ದಾಸ್​ಗೆ ಆಸ್ಪತ್ರೆಗೆ ದಾಖಲಾಗಲು  ಹಾಗೂ ನಿಹಾರಿಕಾಗೆ ಮನೆಯಲ್ಲೇ ಐಸೋಲೇಟ್​ ಆಗಲು ಸೂಚಿಸಿತ್ತು.  ಆದರೆ ಆಸ್ಪತ್ರೆಗೆ ತೆರಳಲು ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಮಹಿಳೆ ಮಾವನನ್ನು ಹೊತ್ತುಕೊಂಡು ತೆರಳಿದ್ದಾರೆ.ಕಡೆಗೆ ಮಾರ್ಗ ಮಧ್ಯೆ ಅವರಿಗೆ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿಕೊಡಲಾಯಿತು.

     ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿ ನಾಗಾನ್​ ಭೋಗೇಶ್ವರಿ ಸಿವಿಲ್​ ಆಸ್ಪತ್ರೆಯಲ್ಲಿ ಬೆಡ್​ ವ್ಯವಸ್ಥೆ ಮಾಡಲಾಗಿದೆ. ಪತಿ ದೂರವಿದ್ದರೂ ಪತಿಯ ತಂದೆಯನ್ನು ನಿಹಾರಿಕಾ ಹೊತ್ತುಕೊಂಡು ಹೋದ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಮೆಚ್ಚುಗೆ ಆಕೆಗೆ ವ್ಯಕ್ತವಾಗಿದ್ದು ನೆಟ್ಟಿಗರು ನಿಹಾರಿಕಾಗೆ ಮಾದರಿ ಹೆಣ್ಣು ಎಂದು ಪ್ರೀತಿ ನೀಡಿದ್ದಾರೆ.  

ರಾಜ್ಯದಲ್ಲಿ ಪೆಟ್ರೋಲ್ ಸೆಂಚುರಿ ಬಾರಿಸಿತು..!!! ಇಂಧನ ಬೆಲೆ ನಿಯಂತ್ರಣ ಮಾಡಲಾಗದ ಸರಕಾರ : ಒಟ್ಟಾರೆ ಬಡವ ಜನಸಾಮನ್ಯರ ಗೋಳು

JANANUDI.COM NETWORK

ಎಲ್ಲಾ ರೀತಿಯಲ್ಲಿ ಬೆಲೆ ಉಬ್ಬರಿಕೆಗೆ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಕಾರಣ, ಎಲ್ಲಾ ರೀತಿಯ ಸರಕುಗಳನ್ನು ಅಲ್ಲಿಂದ ಇಲ್ಲಿಗೆ ಸಾಗಿಸಲು, ಪೆಟ್ರೋಲ್ ಮತ್ತು ಡೀಸೆಲ್ ಆಧಾರಿತ ವಾಹನಗಳೇ ಬೇಕು, ಇಂಧನದ ಬೆಲೆ ಹೆಚ್ಚಳವಾದರೆ, ಸ್ವಯಂ ಚಾಲಿತವಾಗಿ ಎಲ್ಲಾ ಥರಹದ ದಿನನಿತ್ಯ ಬಳಕೆಯ ಸಾಮಾನು ಪದಾರ್ಥತಗಳಿಗೆ ಬೆಲೆ ಹೆಚ್ಚುತ್ತದೆ. ಇದರ ಪರಿಣಾಮ ನೇರವಾಗಿ ಬಡವರು,ಜನ ಸಾಮನ್ಯರ ಮೇಲೆ ಬೀರುತ್ತದೆ.ಬಡತನ ಜಾಸ್ತಿಯಾಗುತ್ತದೆ,ಇದರಿಂದಾಗಿ ಕೆಲವರ ಜೀವನ ಕಶ್ಟದಾಯಕವಾಗಿ,ಕೆಲವರು ಅಡ್ಡ ದಾರಿ ಹಿಡಿಯುತ್ತಾರೆ, ಕೆಲವರಿಗೆ ಆತ್ಮಹತ್ಯೆಗೆ ಒಳಗಾಗುವ ಪರಿಸ್ಥಿತಿಗೆ ಬಂದು ಬಿಡುತ್ತಾರೆ.

ಶಿರಸಿ .ಜೂ.6:  ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪೆಟ್ರೋಲ್ 100.22 ಆಗಿದ್ದರೆ ಡೀಸೆಲ್ ಡೀಸೆಲ್ 92.95 ಆಗಿದ್ದು, ತೀವ್ರ ಕಳವಳಕಾರಿ ಸಂಗತಿಯಾಗಿದೆ. ಸರಕಾರಕ್ಕೆ ಈ ಬಗ್ಗೆ ನಿಯಂತ್ರಣವೇ ಇಲ್ಲವೆಂದು ಹೇಳ ಬೇಕಾಗುತ್ತದೆ. ಈಗಂತು ಅತ್ಯಂತ ಕೆಟ್ಟ ಕಾಲ,  ಕೊರೋನಾ ಕಾರಣದಿಂದ ಉದ್ಯೋಗವೂ ಇಲ್ಲದೇ ಗಳಿಕೆಯೂ ಇಲ್ಲದೇ ದಿನನಿತ್ಯದ ಜೀವನ ನಡೆಸಲು ಕಷ್ಟ ಪಡುತ್ತಿರುವ ವೇಳೆ ಮೊದಲಿನ ಸರಕಾರಗಳಿರುವಾಗ ಪೆಟ್ರೋಲ್ ಬೆಲೆಯಲ್ಲಿ ಮತ್ತು ಡೀಸೆಲ್ ಬೆಲೆಯಲ್ಲಿ ಬಹಳ ಅಂತರವಿದ್ದು ಡೀಸೆಲ್ ಬೆಲೆ ಕಡಿಮೆ ಇರುತಿತ್ತು, ಆದರೆ ಈಗ ಪೆಟ್ರೋಲ್ ಮತ್ತು ಡೀಸೆಲ್ ಸಾಧರಣ ಒಂದೇ ಬೆಲೆಯಂತ್ತೆ ಕಂಡು ಬರುತ್ತದೆ.

    ಈ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ  ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದೆ,  ವರ್ಷದ ಹಿಂದೆ 90 ರೂ ಇದ್ದ ಅಡುಗೆ ಎಣ್ಣೆ ಬೆಲೆ 185 ರೂಪಾಯಿಗಳಿಗೆ ಬಂದು‌ ತಲುಪಿ ಎಲ್ಲಾ ರೀತಿಯ ಪದಾಥಗಳಿಗೆ ಬೆಲೆ ದುಬಾರಿಯಾಗಿರುವುದು ಜನತೆಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

       ದೇಶದಲ್ಲಿ ಪೆಲ್ಟ್ರೋಲ್ ಏರಿದೆಯೆಂದು ಈಗಿನ ಸರಕಾರ ಅಂದಿನ ಸರಕಾರಕ್ಕೆ ಹೀಯಾಳಿಸಿದ್ದೆ ಹೀಯಾಳಿಸಿದ್ದು,  ಆದರೆ ಇವತ್ತಿನ ಸ್ಥಿತಿ ಪೆಟ್ರೋಲ್ ಬೆಲೆ ಏರಿ ದೇಶದ ಸ್ಥಿತಿ ಚಿಂತಾಜನಕವಾಗಿದೆ.

     ಈ ರೀತಿ ಲಂಗೂ ಲಗಾಮಿಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿಯಂತ್ರಣ ಇಲ್ಲದಂತ್ತೆ ಏರುತ್ತೀರುವಾಗ, ಈ ಸಮಸ್ಯೆ ನಿಯಂತ್ರ ಮಾಡಲು ಸಾಧ್ಯವಿಲ್ಲದಂತ್ತ ಸರಕಾರ ಇದಾಗೀದೆಯೆಂದು ಒತ್ತಿ ಒತ್ತಿ ಹೇಳಲೆ ಬೇಕಾಗುತ್ತದೆ. ಸರಕಾರ ನಡೆಸಲು,ದೇಶ ಆಳಲು ಇವರಿಂದ ಅಸಾಧ್ಯವೆಂಬ ಗುಮಾನಿ ಬರುವುದರಲ್ಲಿ ಸಂಶಯವಿಲ್ಲ.

ಉಡುಪಿ ಜಿಲ್ಲೆಯ ಸೀಲ್ ಡೌನ್ ಗ್ರಾಮಗಳಲ್ಲಿ ನಾಳೆ, ನಾಡಿದ್ದು ಅಗತ್ಯ ವಸ್ತು ಖರೀದಿಗೆ ಅವಕಾಶ : ಡಿಸಿ ಜಗದೀಶ್

JANANUDI.COM NETWORK

ಉಡುಪಿ : ಕೋವಿಡ್ ವೈರಸ್ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ 50ಕ್ಕಿಂತ ಅಧಿಕ ಕೋವಿಡ್ ಪ್ರಕರಣಗಳಿರುವ ಗ್ರಾಮ ಪಂಚಾಯ್ ಗಳ ಗಡಿಗಳನ್ನು ಸೀಲ್ ಡೌನ್ ಜಾರಿ ಮಾಡಲಾಗಿದ್ದು,  ಇದೀಗ  ಸೀಲ್ ಡೌನ್ ಗ್ರಾಮಗಳಲ್ಲಿ  ಜನರಿಗೆ ಅಗತ್ಯ ಸಾಮಾನುಗಳನ್ನು ಖರೀದಿಸಲಿಕ್ಕಾಗಿ ಜೂನ್ 7 ಮತ್ತು 8 ರಂದು ಅವಕಾಶ ಕಲ್ಪಿಸಲಾಗಿದೆ  ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 50ಕ್ಕೂ ಅಧಿಕ ಸೋಂಕಿತರಿರುವ ಸುಮಾರು 40ಕ್ಕೂ ಅಧಿಕ ಗ್ರಾಮ ಪಂಚಾಯತ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೀಲ್ ಡೌನ್ ಆಗಿರುವ ಗ್ರಾಮಗಳಲ್ಲಿನ ಗ್ರಾಮಸ್ಥರು ನಾಳೆ ಹಾಗೂ ನಾಡಿದ್ದು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿ ಮಾಡಬಹುದು ಎಂದು ಆದೇಶವನ್ನು ಹೊರಡಿಸಿದ್ದಾರೆ.

ಸೀಲ್ ಡೌನ್ ಆಗಿರುವ ಗ್ರಾಮಗಳಲ್ಲಿ ಸೀಲ್ ಡೌನ್ ಆದೇಶವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಅನ್ನುವ ಕುರಿತು ಜೂನ್ 8ರಂದು ನಿರ್ಧಾರ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಲಹಳ್ಳಿ ಗೋವಿಂದಗೌಡರಿಂದ ಸಾವಿರಾರು ಮಂದಿಗೆ ತರಕಾರಿ ವಿತರಣೆ ತರಕಾರಿ ಮಾರುಕಟ್ಟೆ ನಿರ್ವಹಣೆಗೆ ಅಧಿಕಾರಿ ನೇಮಿಸಿ – ಶ್ರೀನಿವಾಸಗೌಡ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ಕೋವಿಡ್ ಸಂಕಷ್ಟದ ಜತ ತಾನು ಬೆಳೆದ ಬೆಳೆಗೆ ಬೆಲೆ ಸಿಗದೇ ರೈತ ಕಣ್ಣೀರಿಡುತ್ತಿದ್ದಾನೆ , ನಿಮ್ಮ ಭರವಸೆಗಳು ಬೇಕಾಗಿಲ್ಲ , ಮಾರುಕಟ್ಟೆ ಸೌಲಭ್ಯ ವಿಸ್ತರಣೆ ಹಾಗೂ ರಫಿನ ಉಸ್ತುವಾರಿಗೆ ಓರ್ವ ದಕ್ಷ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಿ ಅನ್ನದಾತನ ನೆರವಿಗೆ ಧಾವಿಸಿ ಎಂದು ಸರ್ಕಾರವನ್ನು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಆಗ್ರಹಿಸಿದರು.

ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ರೈತರಿಂದ ನೇರವಾಗಿ ಖರೀದಿಸಿದ ೧೫ ಟನ್‌ಗೂ ಹೆಚ್ಚು ವಿವಿಧ ತರಕಾರಿಗಳನ್ನು ಖಾದ್ರಿಪುರ ವ್ಯಾಪ್ತಿಯ ಸಾವಿರಾರು ಕುಟುಂಬಗಳಿಗೆ ವಿತರಿಸಿ ಅವರು ಮಾತನಾಡುತ್ತಿದ್ದರು. ಕೊವಿಡ್ ವಕ್ಕರಿಸುತ್ತದೆ ಎಂದು ಯಾವ ರೈತರು ಕನಸು ಕಂಡಿರಲಿಲ್ಲ , ಇದು ಟಮೋಟೋ ಸೀಸನ್ ಆಗಿದ್ದು ಹೆಚ್ಚಿನ ಬಳಯ ಆವಕ ಬಂದಿದ , ಔಷಧಿಗೊಬ್ಬರ , ಬಿತ್ತನೆ ಬೀಜಕ್ಕೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ಸುಮಾರು ೨ ಸಾವಿರ ಕೋಟಿ ರೂ ಖರ್ಚು ಮಾಡಿದ್ದಾರೆ ಎಂದರು.

ಮದುಮುಂಜಿ , ಕಾರ್ಯಕ್ರಮಗಳಿಲ್ಲ , ಹೋಟೆಲ್ ಸಮಾರಂಭಗಳಿಲ್ಲದೇ ಬೆಳದ ತರಕಾರಿ ಮಾರಾಟವಾಗುತ್ತಿಲ್ಲ , ತೋಟದ ಗಿಡಗಳಲ್ಲೇ ಕೆಲವು ಕಡೆ ಕೊಳೆಯುತ್ತಿದ್ದರೆ ಕೆಲವು ರೈತರು ಮಾರುಕಟ್ಟೆಗೆ ತಂದು ಸಾಗಾಣಿಕೆಯ ವೆಚ್ಚವೂ ಸಿಗದ ಕಾರಣ ರಸ್ತೆಬದಿ , ಮಾರುಕಟ್ಟೆಯ ಸಮೀಪ ಸುರಿದು ಕಣ್ಣೀರಿಡುತ್ತಲೇ ಮನೆಗೆ ಹೋಗುತ್ತಿದ್ದಾರೆ ಎಂದರು. ದೇಶಕ್ಕೆ ಅನ್ನ ನೀಡುವ ರೈತರ ಬದುಕು ಇಷ್ಟೊಂದು ಸಂಕಷ್ಟಕ್ಕೆ ಎಂದೂ ಸಿಕ್ಕಿರಲಿಲ್ಲ .

ಸರ್ಕಾರ ಪ್ಯಾಕೇಜ್‌ಗಳ ಭರವಸೆ ರೈತರ ಕಣ್ಣೀರು ಹೊರಸಲು ಸಾಧ್ಯವಿಲ್ಲ , ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವ ಮೂಲಕ ಸಾಲದ ಶೂಲಕ್ಕೆ ಹೆದರಿ ಆತ್ಮಸ್ಥರ್ಯ ಕಳೆದುಕೊಳ್ಳುತ್ತಿರುವ ರೈತರ ನೆರವಿಗೆ ಬನ್ನಿ ಎಂದು ಒತ್ತಾಯಿಸಿದರು. ಯಾವ ಯಾವ ತರಕಾರಿ ಯಾವ ರಾಜ್ಯದೇಶಕ್ಕೆ ಅಗತ್ಯವಿದೆ ಎಂಬುದನ್ನು ಅರಿತು ಅಲ್ಲಿಗೆ ಸಾಗಾಣಿಕೆ , ರಫ್ತು ಮಾಡುವ ಪ್ರಯತ್ನ ಮಾಡಿ. ಮಾರುಕಟ್ಟೆ ಒದಗಿಸುವ ಕಾರ್ಯ ಕೈ ಉಸ್ತುವಾರಿಯಾಗಿ ಓರ್ವ ದಕ್ಷ ಐಎಎಸ್ ಅಧಿಕಾರಿಯನ್ನು ನೇಮಿಸಿ ರೈತರ ಬೆಳೆಗಳಿಗೆ ಮಾರುಕಟ್ಟೆ ಒದಗಿಸಿ ಎಂದು ಸಲಹೆ ನೀಡಿದರು.

ಅನ್ನದಾತನ ಕಣ್ಣೀರು ಒರಸೋಣ ಬನ್ನಿ ,

ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷರೂ ಹಾಗೂ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಬ್ಯಾಲಹಳ್ಳಿ ಗೋವಿಂದಗೌಡ , ಅನ್ನದಾತ ಕಣ್ಣೀರು ಹಾಕಿದರೆ ಅದು ಇಡೀ ಸಮಾಜ ದೇಶಕ್ಕೆ ಕಂಟಕ ಎಂದು ಎಚ್ಚರಿಸಿ , ರೈತರು ಆತ್ಮಸ್ಥರ್ಯ ಕಳೆದುಕೊಳ್ಳುವ ಮುನ್ನಾ ಅವರಿಗೆ ನೆರವಾಗಬೇಕು ಎಂದರು. ಈಗಾಗಲೇ ಲಾಕ್ ಡೌನ್ ಆರಂಭದಿಂದಲೂ ತಮ್ಮ ಕೈಲಾದಷ್ಟು ರೈತರ ನೆರವಿಗೆ ಧಾವಿಸುತ್ತಿದ್ದೇನೆ ರೈತರ ತೋಟದಿಂದಲೇ ನೇರವಾಗಿ ತರಕಾರಿ ಖರೀದಿಸಿ ಅದನ್ನು ಸಾವಿರಾರು ಬಡ ಕುಟುಂಬಗಳಿಗೆ ವಿತರಿಸುವ ಮೂಲಕ ಅನ್ನದಾತನಿಗಾಗಿ ಅಳಿಲು ಸೇವೆ ಮಾಡುತ್ತಿರುವುದಾಗಿ ತಿಳಿಸಿದರು.

ಕೋವಿಡ್‌ನಿಂದ ಇಡೀ ರೈತ ಸಂಕುಲ ತತ್ತರಿಸಿದ ಇದರ ಜತೆಗೆ ಸಾಲ ಮಾಡಿ , ಬೆವರು ಸುರಿಸಿ ಬೆಳಸಿದ ಬೆಳೆಗೆ ಬಲ ಸಿಗದೇ ಕಣ್ಣೆದುರೇ ಕೂಳತು ಕಸವಾಗುತ್ತಿರುವಾಗ ಕೃಷಿಕನ ಕಣ್ಣಲ್ಲಿ ಕಣ್ಣೀರು ಮಾತ್ರವಲ್ಲ , ರಕ್ತ ಹರಿಯುತ್ತಿದೆ , ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು ಎಂದರು. ರೈತ ಆತ್ಮಸ್ಥರ್ಯ ಕಳೆದುಕೊಂಡು ಕೃಷಿಯಿಂದ ವಿಮುಖರಾಗಿ ಆತ್ಮಹತ್ಯ ಕದ ತಟ್ಟುವ ಮುನ್ನಾ ಸರ್ಕಾರಗಳು , ಉಳ್ಳವರು ನೆರವಿಗೆ ಧಾವಿಸಬೇಕು , ಅನ್ನದಾತನ ಕೈಹಿಡಿಯಬೇಕು ಎಂದರು .

ದೇಶಕ್ಕೆ ಅನ್ನ ನೀಡುವವನೇ ಅನ್ನಕ್ಕಾಗಿ ಪರಿತಪಿಸುವ ಪರಿಸ್ಥಿತಿ ಬಂದರೆ ಸಹಿಸಲಾಗದು , ಸರ್ಕಾರ ಕೂಡಲೇ ರೈತರ ಬೆಳೆಗಳಿಗೆ ಮಾರುಕಟ್ಟೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು , ದಕ್ಷ ಅಧಿಕಾರಿಯೊಬ್ಬರ ಉಸ್ತುವಾರಿಯಲ್ಲಿ ಇಡೀ ರಾಜ್ಯದ ರೈತರ ಬೆಳೆಗಳನ್ನು ಅಗತ್ಯವಿರುವೆಡೆ ಸರಬರಾಜು ಮಾಡಿ ಬೆಲೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಮನ್ವಂತರ ಜನಸೇವಾ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ. ಅನಂತರಾಮ್ , ನಮ್ಮ ಟ್ರಸ್ಟ್‌ ಲಾಕ್‌ಡೌನ್ ಮುಗಿಯುವವರೆಗೂ ಇಂತಹ ಸಾಮಾಜಿಕ ಕಾರ್ಯ ಮುಂದುವರೆಸುವ ಸಂಕಲ್ಪ ಮಾಡಿದ , ಬಡವರೇ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ರೈತರ ತೋಟದಿಂದ ನೇರವಾಗಿ ಖರೀದಿಸಿದ ತಾಜಾ ತರಕಾರಿಯನ್ನು ವಿತರಿಸುವ ಮೂಲಕ ಕೋವಿಡ್ ವಿರುದ್ದ ಜನತೆಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಣ್ಣ ಪ್ರಯತ್ನ ಮಾಡುತ್ತಿದೆ ಎಂದರು. ಖಾದಿಪುರ , ಕಾರಂಜಿಕಟ್ಟೆ ಮತ್ತಿತರ ಬಡಾವಣೆಗಳ ಸಾವಿರಾರು ಕುಟುಂಬಗಳಿಗೆ ರೈತರ ತೋಟಗಳಿಂದ ನೇರವಾಗಿ ಖರೀದಿಸಿದ ಟಮೋಟೋ , ಆಲೂಗಡ್ಡ , ಪಡವಲಕಾಯಿ , ಸೋರೆಕಾಯಿಎಲೆಕೋಸು , ಪಾಲಾಕ್ , ದಂಟು ಸೊಪ್ಪು , ಕೊತ್ತಂಬರಿ , ಪುದೀನಾ ಮತ್ತಿತರ ಸುಮಾರು ೧೫ ಟನ್‌ಗೂ ಹೆಚ್ಚು ತಾಜಾ ತರಕಾರಿಯನ್ನು ವಿತರಿಸಲಯಿತು .

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ , ಸಹಕಾರಿ ಯೂನಿಯನ್ ನಿದೇಶಕಿ ಅರುಣಮ್ಮ , ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗರಾಜ್ , ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್‌ , ರೋಟರಿ ಸೆಂಟ್ರಲ್ ಅಧ್ಯಕ್ಷ ಸುಧಾಕರ್ , ಗ್ರಾಪಂ ಸದಸ್ಯರಾದ ಎಲ್.ನಿರಂಜನ್ , ಎಂ.ರಾಜೇಶ್ , ಲಿಂಗಪ್ಪ , ಗೋವಿಂದು , ನಾಗರತ್ನಬಾಬು , ಬಸವರಾಜು , ಮನ್ವಂತರ ಟ್ರಸ್ಟ್‌ನ ಸತ್ಯನಾರಾಯಣರಾವ್ , ಬಾಲನ್ , ಮುಖಂಡರಾದ ಆಟೋ ನಾರಾಯಣಸ್ವಾಮಿ , ಸಂತೋಷ್ ನವೀನ್ , ಕಿರಣ್ , ನಟರಾಜ್ ಶಂಕರ್ , ಮತ್ತಿತರರು ಸಾಮಾಜಿಕ ಅಂತರ ನಿರ್ವಹಿಸಿ ತರಕಾರಿ ವಿತರಣೆಯಲ್ಲಿ ಕಾರ್ಯನಿರ್ವಹಿಸಿದರು .

ಕುಂದಾಪುರ ಇಂಡಿಯನ್ ರೆಡ್ ಕ್ರಾಸ್ ನಿಂದ 23 ದಿನಗಳ ಕಾಲ ಕುಂದಾಪುರ ಪರಿಸರದಲ್ಲಿ ದಿನಾಲೂ ಹಸಿದವರಿಗೆ ಊಟ

JANANUDI.COM NETWORK

ಕುಂದಾಪುರ, ಜೂ. 6: ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರು 11-05-2021 ರಿಂದ 01-06-2021 ಮತ್ತು 06-06-2021 ರಂದು ಹೀಗೆ ಒಟ್ಟು 23 ದಿನಗಳ ಕಾಲ ಕುಂದಾಪುರ ಪರಿಸರದಲ್ಲಿ ಸುಮಾರು 230 ಕ್ಕಿಂತಲೂ ಹೆಚ್ಚು ಹಸಿದವರಿಗೆ ಪ್ರತಿ ದಿನ ಊಟವನ್ನು ನೀಡುವ ಕಾರ್ಯಕ್ರಮ ನಡೆಸಿತು. ಇಂದು ಈ ಸೇವೆಯ ಕಾರ್ಯಕ್ರಮವನ್ನು ನಡೆಸಲು ಸಹಕರಿಸಿದವರನ್ನು ಧನ್ಯವಾದಗಳನ್ನು ಅರ್ಪಿಸಲಾಯಿತು.


ಈ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ , ಕಾರ್ಯದರ್ಶಿ ವೈ ಸೀತಾರಾಮ ಶೆಟ್ಟಿ ಖಜಾಂಚಿ ಶಿವರಾಮ ಶೆಟ್ಟಿ ಸದ್ಯಸ್ಯರಾದ ಗಣೇಶ್ ಆಚಾರ್ಯ ಡಾ. ಸೋನಿ, ನಾರಾಯಣ, ಕುಂದಾಪುರ. ಅಬ್ದುಲ್ ಬಶೀರ್ ಕೋಟ ಹಾಜರಿದ್ದರು.

ಈ 23 ದಿನಗಳ ಪ್ರಾಯೋಜಕ ರಾದ ನಮ್ಮ ಕಾರ್ಯಕಾರಿ ಸಮಿತಿಯ ಸದಸ್ಯರು, ಪೋಷಕರು, ಉಪ ಪೋಷಕರು ಹಾಗೂ ಸದಸ್ಯರು ಗಳಿಗೆ ಮತ್ತು ಸದ್ರಿ ಕಾರ್ಯಕ್ರಮ ಆಯೋಜಿಸುವಲ್ಲಿ ನಮಗೆ ಸಹಕರಿಸಿದ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರು ಮತ್ತು ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.

ಮೂಡ್ಲಕಟ್ಟೆ ಎಂ ಐ ಟಿ: ವಿಶ್ವ ಪರಿಸರ ದಿನಾಚರಣೆ

JANANUDI.COM NETWORK

ಕುಂದಾಪುರ,ಜೂ. 6: ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಪರಿಸರದ ದಿನದ ಪ್ರಯುಕ್ತ ಆನ್ಲೈನ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪರಿಸರ ಸಂರಕ್ಷಣೆ ವಿಷಯದ ಮೇಲೆ ಮಾಹಿತಿ ನೀಡಲಾಯಿತು.  ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ದೀಪಕ್ ಶೆಟ್ಟಿ ಇವರು ಮಾತನಾಡಿ  ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಪರಿಸರವನ್ನು ಸ್ವಚ್ಚ ವಾಗಿಡುವುದರ ಜೊತೆ ಮರಗಳನ್ನ ಬೆಳೆಸುವುದರಿಂದ ಆಗುವ ಪ್ರಯೋಜನಗಳ ಮಾಹಿತಿಯನ್ನ ಸಮಾಜಕ್ಕೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದರೆ ಮುಂದಿನ ದಿನಗಲ್ಲಿ ಉತ್ತಮ ವಾತಾವರಣ ಕಾಣಬಹುದು ಎಂದು ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿ ಹೇಳಿದರು. ಕಾಲೇಜಿನ ಅಕಾಡೆಮಿಕ್ ಡೀನ್ ಡಾ|ಪ್ರತಿಭಾ ಪಾಟೇಲ್ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ವಿಧ್ಯಾರ್ಥಿಗಳ ಪಾತ್ರ ಪ್ರಮುಖವಾದುದು ಎಂದು ತಿಳಿಸಿದರು.
ಪರಿಸರಕ್ಕೆ ವಿದ್ಯಾರ್ಥಿಗಳ ಕೊಡುಗೆ ಕಾರ್ಯಕ್ರಮದಡಿ ತಮ್ಮ ಮನೆಯಲ್ಲಿ ಒಂದೊಂದು ಗಿಡ ನೆಟ್ಟು ವಿಶ್ವ ಪರಿಸರ ದಿನಕ್ಕೆ ಉತ್ತಮ ಅರ್ಥ ನೀಡಿ ಕಾರ್ಯಕ್ರಮದ ಮಹತ್ವ ಹೆಚ್ಚಿಸಿದರು. ಹಾಗೂ ವಿಧ್ಯಾರ್ಥಿಗಳು ಗಿಡ ನೆಡುತ್ತಿರುವ ವೀಡಿಯೋ ತುಣುಕುಗಳನ್ನು  ಪ್ರದರ್ಶಿಸಲಾಯಿತು.

ಪ್ರಾಂಶುಪಾಲರು, ಉಪ ಪ್ರಾಂಶುಪಾಲರು,ಡೀನ್ಗಳು, ವಿಭಾಗದ ಮುಖ್ಯಸ್ಥರು ಮತ್ತು ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಪರಿಸರಕ್ಕೆ ಕೊಡುಗೆ ಆಗಿ ಮನೆಯಲ್ಲಿಯೇ ಗಿಡಗಳನ್ನ ನೆಟ್ಟು ಕಾರ್ಯಕ್ರಮ ಮೆರುಗು ಹೆಚ್ಚಿಸಿದಕ್ಕೆ ಶ್ಲ್ಯಾಘನೆ ವ್ಯಕ್ತ ಪಡಿಸಿದರು. ಇ & ಸಿ ವಿಭಾಗದ ಪ್ರೊಫೆಸರ್ ಸೂಕ್ಷ್ಮ  ಅಡಿಗ ಕಾರ್ಯಕ್ರಮ ನಿರ್ವಹಿಸಿದರು.

ಬಾರಿ ವಾಗ್ವಾದ ಮಾಡಿಕೊಂಡಿದ್ದ ಮೈಸೂರಿನ ಇಬ್ಬರೂ ಲೇಡಿಸ್ IAS ಅಧಿಕಾರಿಗಳ ಎತ್ತಂಗಡಿ!

JANANUDI.COM NETWORK

ಬೆಂಗಳೂರು: ಕಳೆದ ಹಲವು ದಿನಗಳಿಂದ ಮುಂದುವರೆಯುತ್ತಿದ್ದ ಮೈಸೂರು ಇಬ್ಬರ ಐಎಎಸ್ ಅಧಿಕಾರಿಗಳ ಜಟಾಪಟಿ ಮೈಸೂರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿತ್ತು. ಇದೀಗ ರಾಜ್ಯ ಸರ್ಕಾರ ಇವರ ಜಗಳಕ್ಕೆ ಮಂಗಳ ಹಾಡಿದೆ. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಇಬ್ಬರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

       ಕೋವಿಡ್ ನಿರ್ವಹಣೆ ಸಂಬಂಧ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವೆ ಜಟಾಪಟಿ ಏರ್ಪಟ್ಟಿತ್ತು, ಬಳಿಕ ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ಕೂಡ ನೀಡಿತ್ತು. ಆದರೂ ಇಬ್ಬರ ವಾಗ್ವಾದ ಮತ್ತು ರಾಜಕಾರಣಿಗಳ ಹೇಳಿಕೆ ನಡೆಯುತ್ತಲೆಇತ್ತು

     ಇದೀಗ ಇಬ್ಬರೂ ಅಧಿಕಾರಿಗಳು ವರ್ಗಾವಣೆ ರಾಜ್ಯ ಸರ್ಕಾರ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿದೆ. ಮೈಸೂರು ಡಿಸಿಯಾಗಿದ್ದ ರೋಹಣಿ ಸಿಂಧೂರಿ ಅವರನ್ನು ಅವರು ಈ ಹಿಂದೆ ಸೇವೆ ನೀಡುತಿದ್ದ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು ಅವರ ಬದಲಿಗೆ ಮೈಸೂರಿಗೆ ನೂತನ ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಗೌತಮ್ ಬಗಾದಿ ಅವರನ್ನು ನೇಮಕ ಮಾಡಲಾಗಿದೆ.

      ಅಂತೆಯೇ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾನಾಗ್ ರನ್ನು ಆರ್ ಡಿಪಿಆರ್ ಇ ಆಯುಕ್ತರಾಗಿ ನೇಮಕ ಮಾಡಲಾಗಿದ್ದು, ಮೈಸೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಲಕ್ಷ್ನೀಕಾಂತ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ರೋಹಿಣಿ ಸಿಂಧೂರಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಭೇಟಿ ಮಾಡಿ ವರ್ಗಾವಣೆ ಹಿಂದಕ್ಕೆ ಪಡೆಯಬೇಕೆಂದು ವಿನಂತಿಸಿದ್ದು, ಇದನ್ನು ಮುಖ್ಯಮಂತ್ರಿ ಒಪ್ಪಲಿಲ್ಲವೆಂದು ತಿಳಿದು ಬಂದಿದೆ