HOLY ROSARY CHURCH, KUNDAPUR – 450 th JUBILEE SOUVENIR 2021

ಶಂಕರನಾರಯಣ ಯಡಮೊಗೆ ಕೊಲೆ: ಆರೋಪಿ ಪಂಚಾಯತ್ ಅಧ್ಯಕ್ಷ ಪ್ರಾಣೇಶ ಪೊಲೀಸರ ವಶ

JANANUDI.COM NETWORK

ಶಂಕರನಾರಯಣ,ಜೂ.6: ಲಾಕ್ ಡೌನ್ ಮಾಡಿದ ಗ್ರಾಮಕ್ಕೆ ಗ್ರಾಮದ ಉದಯ ಗಾಣಿಗ ಯಾವುದೇ ಅಗತ್ಯ ವಸ್ತುಗಳನ್ನು ನೀಡದೆ ಗ್ರಾಮಕ್ಕೆ ಬೇಲಿ ಹಾಕಿರುವುದನ್ನು ವಿರೋಧಿಸಿದ್ದನು, ಈ ವ್ಯಕ್ತಿಯ ವ್ಯಕ್ತಿಯ ಕೊಲೆಯಾದ  ಘಟನೆ ಶನಿವಾರ ರಾತ್ರಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ, ಶಂಕರನಾರಯಣದ ಯಡಮೊಗೆಯಲ್ಲಿ ನಡೆದಿದ್ದು ಆರೋಪಿ ಗ್ರಾಮ‌ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಎಂದು ಪರಿಗಣಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ‌.

  ಎರಡು ದಿನಗಳ ಹಿಂದೆ ಗ್ರಾಮ ಪಂಚಾಯತ್ ಲಾಕ್ಡೌನ್ ಬಗ್ಗೆ ಸ್ಟೇಟಸ್ ಹಾಕಿದ್ದ ಉದಯ ಗಾಣಿಗ ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ ಪೋಸು ಕೊಡಬೇಡಿ, ಕೊರೋನಾ ಪೀಡಿತ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಆಮೇಲೆ ಪ್ರಚಾರ ತಗೊಳ್ಳಿ. ಸರಕಾರದ ಸಹಾಯ ಧನವನ್ನು ನುಂಗಬೇಡಿ ಎಂದು ಸ್ಟೇಟಸ್ ಹಾಕಿದ್ದರು ಎನ್ನಲಾಗಿದೆ.

 ಶನಿವಾರ ಸಂಜೆ ರಸ್ತೆಯಲ್ಲಿ ನಿಂತಿದ್ದ ಉದಯ ಗಾಣಿಗ (45) ರ ಮೇಲೆ ಗ್ರಾಮ‌ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಕಾರು ಢಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾರೆ. ನಂತರ ಕಾರು ಬಿಟ್ಟು ಓಡಿ ಪರಾರಿಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ನಡೆಯ ಬಗ್ಗೆ ಯಾವಾಗಲೂ ವಿರೋಧಿಸುತ್ತಿದ್ದ ಉದಯ ಗಾಣಿಗನನ್ನು ಪ್ರಾಣೇಶ್ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ..ಸಾರ್ವಜನಿಕರು 108 ಅಂಬ್ಯುಲೆನ್ಸ್ ಮೂಲಕ ಕರೆದೊಯ್ಯುವ ಮಾರ್ಗ ಮಧ್ಯೆ ಉದಯ ಗಾಣಿಗ ಸಾವು ಸಂಭವಿಸಿದೆಂದು ತಿಳಿದು ಬಂದಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ಈ ಸಂಬಂಧ ಉಳ್ಳೂರು – 74 ರ ಗ್ರಾಮ ಪಂಚಾಯತ್ ಸದಸ್ಯರ ಮನೆಯಲ್ಲಿ ಪ್ರಾಣೇಶ ಯಡಿಯಾಳ್ ತಡ ರಾತ್ರೆ 3 ಗಂಟೆಗೆ ಬಂದಿಸಿದ್ದಾರೆ

ಬೈಂದೂರು,ನಾಡ : ರೈಲಡಿಗೆ ಸಿಕ್ಕಿ ಚಿರತೆಯ ಸಾವು

JANANUDI.COM NETWORK

ಬೈಂದೂರು,ನಾಡ ಜೂ.6: ಬೈಂದೂರು ತಾಲೂಕು ನಾಡಾ ಗ್ರಾಮದ ಬಡಾಕೆರೆ ರೈಲ್ವೆ ಮೇಲ್ ಸೇತುವೆ ಬಳಿ ರೈಲು ಡಿಕ್ಕಿ ಹೊಡೆದು ನಾಲ್ಕು ವರ್ಷದ ಕಪ್ಪು ಚಿರತೆ ಮೃತಪಟ್ಟ ಘಟನೆ ಕೆಲದಿನಗಳ ಹಿಂದೆನಡೆದಿದೆ. ಆಹಾರ ಅರಸಿಕೊಂಡು ಚಿರತೆ ರೈಲ್ವೆ ಮೇಲ್ ಸೇತುವೆ ಬಳಿ ಬಂದಿದ್ದು, ಈ ವೇಳೆಗೆ ರೈಲಿಗೆ ಸಿಲುಕಿ ಸಾವನ್ನಪ್ಪಿದೆ ಎನ್ನಲಾಗಿದೆ.
ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಸಿಬ್ಬಂದಿ ಚಿರತೆ ಶವ ವಶಕ್ಕೆ ಪಡೆದು, ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ. ವನ್ಯಜೀವಿ ನಿಯಮದ ಪ್ರಕಾರ ಅಂತಿಮ ಸಂಸ್ಕಾರ ಮಾಡಿದರು

ಕೊರೋನ 2 ಗಂಟೆಗಳಲ್ಲಿ ಪಾಸಿಟಿವ್ / ನೆಗೆಟಿವ್ ವರದಿ ಪಡೆಯುವ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ವಾಹನ ಜಿಲ್ಲೆಗೆ ತರಲು ಕೋಲಾರ ಸಂಟ್ರಲ್ ರೋಟರಿಯ ಆಲೋಚನೆ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜೂ.4: ಕೊರೋನ ಸೋಂಕಿತರಿಗೆ ರೋಟರಿ ಸೆಂಟ್ರಲ್ ಮೂಲಕ ಕೇವಲ 2 ಗಂಟೆಗಳಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ವರದಿಯನ್ನು ಪಡೆಯುವ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ವಾಹನವನ್ನು ಜಿಲ್ಲೆಗೆ ತರಲು ರೋಟರಿ ಕೋಲಾರ ಸಂಟ್ರಲ್ ಸದ್ಯಸರ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರೋಟರಿ ಕೋಲಾರ ಸಂಟ್ರಲ್‍ನ ನಿಯೋಜಿತ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಹೇಳಿದರು.
ನಗರದ ರೋಟರಿ ಕೋಲಾರ ಸಂಟ್ರಲ್ ಭವನದಲ್ಲಿ ಭಾರತ್ ಸೇವಾದಳ ಹಾಗೂ ರೋಟರಿ ಕೋಲಾರ ಸಂಟ್ರಲ್ ಆಶ್ರಯದಲ್ಲಿ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡದ ಕಾರ್ಯವನ್ನು ರೋಟರಿ ಸಂಟ್ರಲ್ ಕೋಟ್ಯಾಂತರ ರೂ ವೆಚ್ಚಗಳಲ್ಲಿ ಸುಸಜ್ಜಿತ ಅತ್ಯಾಧುನಿಕ ಮೊಬೈಲ್ ವಾಹನ ಸಿದ್ದಪಡಿಸಲು ಮುಂದಾಗಿರುವ ಶ್ರಮ ಅಪಾರವಾಗಿದೆ ಎಂದು ತಿಳಿಸಿ, ಈ ಮೊಬೈಲ್ ವ್ಯಾನ್ ಸೌಲಭ್ಯ ಜಿಲ್ಲೆಗೆ ಒದಗಿ ಬಂದರೆ ಶೀಘ್ರದಲ್ಲೇ ನಗರ ಹಾಗೂ ಗ್ರಾಮಾಂತರ ಪ್ರದೇಶದ ಭಾಗಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಸ್ಥಳದಲ್ಲೇ ಕೋವಿಡ್ 19 ವರದಿಯನ್ನು ನೀಡಿ, ವರದಿಯಲ್ಲಿ ಪಾಸಿಟಿವ್ ಬಂದ ಸೋಂಕಿತರಿಗೆ ಸ್ಥಳದಲ್ಲೇ ಜೀವ ರಕ್ಷಕ ಮೆಡಿಸಿನ್ ಕಿಟ್ ಅನ್ನು ವಿತರಣೆ ಮಾಡಿ, ಸೋಂಕಿತರು ಹೋಂ ಐಸೋಲೇಶನ್ ಮತ್ತು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆಯನ್ನು ಪಡೆದು ಶೀಘ್ರದಲ್ಲೇ ಗುಣಮುಖರಾಗಿ ಬರುವಂತೆ ಆಶಿಸಿದರು.
ರೋಟರಿ ಕೋಲಾರ ಸಂಟ್ರಲ್ ಜಿಲ್ಲಾಧ್ಯಕ್ಷ ಎಸ್.ಸುಧಾಕರ್ ಮಾತನಾಡಿ, ಸಮಾಜ ಸೇವಕರಾದ ಸಿ.ಎಂ.ಆರ್ ಶ್ರೀನಾಥ್ ರವರು ಕೋವಿಡ್ ಪಾಸಿಟಿವ್ ಬಂದಿರುವವರ ಮನೆಗೆ ತೆರಳಿ ಮೆಡಿಸನ್ ಕಿಟ್ ನೀಡಿ ಆತ್ಮಸ್ತೈರ್ಯವನ್ನು ತುಂಬುವಂತ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು ಪತ್ರಿಕಾ ವಿತರಕರು ಪ್ರತಿ ದಿನ ಗಾಳಿ, ಮಳೆ, ಚಳಿ ಎನ್ನದೇ ಮನೆಮನೆಗೂ ಪತ್ರಿಕೆಯನ್ನು ವಿತರಿಸುವ ಅವರ ಶ್ರಮ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂದು ತಿಳಿಸಿದಾಗ ಅವರು ದಿನಸಿ ಕಿಟ್ ನೀಡಲು ವ್ಯವಸ್ತೆ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಿದ್ದಾರೆ ಎಂದರು. ಈಗಾಗಲೇ ರೋಟರಿ ಸಂಸ್ತೆಯು ರಾಜ್ಯಾದ್ಯಂತ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್ ಗಣೇಶ್, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್ ತಾಗರಾಜ್, ರೋಟರಿ ಕೋಲಾರ ಸಂಟ್ರಲ್ ರಾಜಕುಮಾರ್, ಚಂಪಕ್ ರಮೇಶ್, ಪತ್ರಕರ್ತರಾದ ಎಂ.ಡಿ ಚಾಂದ್‍ಪಾಷ, ಟಮಕ ವಿಶ್ವ, ಕಾರಂಜಿಕಟ್ಟೆ ಶಿವಕುಮಾರ್ ಉಪಸ್ಥಿತರಿದ್ದರು
.

ಖಾಸಗಿ ಶಾಲಾ ಶಿಕ್ಷಕರಿಗೆ 5 ಸಾವಿರ ಪ್ಯಾಕೇಜ್-ಸಿಎಂಗೆ ಧನ್ಯವಾದ ಇನ್ನೂ 5ಸಾವಿರ ಘೋಷಣೆಗೆ ಡಾ.ವೈ.ಎ.ನಾರಾಯಣಸ್ವಾಮಿ ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳ ಬೋಧಕ,ಬೋಧಕೇತರ ಸಿಬ್ಬಂದಿಗೆ ತಲಾ 5 ಸಾವಿರ ಪ್ಯಾಕೇಜ್ ಘೋಷಿಸಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿರುವ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಇನ್ನೊಂದು ಕಂತಿನಲ್ಲಿ ಮತ್ತೆ 5 ಸಾವಿರ ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ಸುರೇಶ್‍ಕುಮಾರ್ ನೇತೃತ್ವದ ಎಂಎಲ್‍ಸಿಗಳ ನಿಯೋಗಕ್ಕೆ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಯಡಿಯೂರಪ್ಪ 5 ಸಾವಿರ ರೂ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಆದರೆ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಿಕ್ಷಕರಿಗೆ ನೀಡಿರುವ 5 ಸಾವಿರ ರೂ ಏನೇನೂ ಸಾಲದು, ಮತ್ತೊಂದು ಕಂತಿನಲ್ಲಿ ಇನ್ನೂ 5 ಸಾವಿರ ಘೋಷಿಸುವ ಮೂಲಕ ಅವರ ನೆರವಿಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಕ್ಷೇತ್ರ ಶಿಕ್ಷಣ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದೆ, ಕೋವಿಡ್‍ನಿಂದಾಗಿ ಬಹುತೇಕ ಶಾಲಾ ಕಾಲೇಜುಗಳು ಸಂಕಷ್ಟಕ್ಕೆ ಒಳಗಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಬೋಧಕ,ಬೋಧಕೇತರ ಸಿಬ್ಬಂದಿ ಜೀವನ ನಡೆಸುವುದು ದುಸ್ತರವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಕ್ಕಾಗಿ ಅವರು ಈ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅನೇಕ ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಿಗೂ ಅಡಚಣೆಯಾಗಿದೆ, ಅದರಲ್ಲೂ ತಾಲ್ಲೂಕು, ಜಿಲ್ಲೆ, ಗ್ರಾಮೀಣ ಪ್ರದೇಶದ ಖಾಸಗಿ ಶಾಲೆಗಳ ಸ್ಥಿತಿ ಮತ್ತಷ್ಟು ಸಂಕಷ್ಟದಲ್ಲಿದೆ, ಸರ್ಕಾರ ನಿಗಧಿಗೊಳಿಸಿದ ಶುಲ್ಕವನ್ನೂ ಪೋಷಕರು ನೀಡಿಲ್ಲ ಎಂದು ತಿಳಿಸಿದ್ದಾರೆ.
6 ರಿಂದ 9 ನೇತರಗತಿ ವರೆಗೂ ಪರೀಕ್ಷೆ ಇಲ್ಲದೇ ಪಾಸ್ ಮಾಡಲು ಸೂಚಿಸಿದ್ದರಿಂದಾಗಿ ಪರೀಕ್ಷಾ ಸಂದರ್ಭದಲ್ಲಿ ವರ್ಷದ ಬಾಕಿ ಶುಲ್ಕ ಶಾಲೆಗೆ ಕಟ್ಟುತ್ತಿದ್ದ ಪೋಷಕರು ಶಾಲೆಗಳ ಕಡೆ ತಿರುಗಿ ನೋಡಿಲ್ಲ, ಕೋವಿಡ್ ಸಂಕಷ್ಟವೂ ಸಹಾ ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಸಿಗದಿರಲು ಮುಖ್ಯಕಾರಣವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೂ ಕೊರೋನಾ ಸಂಕಷ್ಟಕ್ಕೀಡಾಗಿದ್ದು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪೋಷಕರು ಶುಲ್ಕ ಭರಿಸದ ಕಾರಣ ಶಾಲೆಗಳ ಆಡಳಿತ ಮಂಡಳಿಗಳು ಈ ಶಿಕ್ಷಕರಿಗೆ ವೇತನ ನೀಡುತ್ತಿಲ್ಲ ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದುದಾಗಿ ತಿಳಿಸಿದ್ದಾರೆ.
ಒಟ್ಟಾರೆ 15 ತಿಂಗಳಿಂದ ಜಾತಕ ಪಕ್ಷಿಗಳಂತೆ ಕಾದಿದ್ದ ಸುಮಾರು 2.5 ಲಕ್ಷ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ,ಸಿಬ್ಬಂದಿಗೆ ಇದೀಗ ತಲಾ 5 ಸಾವಿರ ರೂ ಪ್ಯಾಕೇಜ್ ಘೋಷಿಸುವ ಮೂಲಕ ಬಿಜೆಪಿ ಸರ್ಕಾರ ಅವರ ಕೈಹಿಡಿದಿದೆ ಎಂದು ತಿಳಿಸಿರುವ ಅವರು, ಮತ್ತೆ ಇನ್ನೊಂದು ಕಂತಿನಲ್ಲಿ 5 ಸಾವಿರ ಘೋಷಣೆಗೆ ಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ
.

ಪಂಚಾಯತ್ ಹಾಗೂ ಮತ್ತು ಪುರಸಭೆ ವಾರ್ಡ್ ಗಳನ್ನು ಸೀಲ್ ಡೌನ್ ಮಾಡುವ ಬಗ್ಗೆ ಮಂಗಳವಾರದಂದು ಡಿ.ಸಿ. ಜಗದೀಶ್ ಸಭೆ

JANANUDI.COM NETWORK

ಕುಂದಾಪುರ,ಮೇ. : ಗ್ರಾ.ಪಂ ಗಳನ್ನು ಸೀಲ್ ಡೌನ್ ಮಾಡಿರುವುದು ಪರಿಣಾಮಕಾರಿಯಾಗಿ ಪರಿಣಮಿಸಿದೆ.ಆದರಿಂದ ಮಂಗಳವಾರದಂದು ಸಭೆ ನಡೆಸಿ ಯಾವ್ಯಾವ ಪಂಚಾಯತ್ ಮತ್ತು ಹಾಗೂ ಪುರಸಭೆ ವಾರ್ಡ್ ಗಳನ್ನು ಸೀಲ್ ಡೌನ್ ಮಾಡಬೇಕೆಂದು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

   ಇಂದು ಶನಿವಾರ ನಗರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸರಕಾರದ ಆದೇಶದಂತೆ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ. ಅರ್ಹರಿಗೆ ಮಾತ್ರ ಲಸಿಕೆ ದೊರೆಯಕಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಲಸಿಕಾ ಕೇಂದ್ರದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು,ಕುಂದಾಪುರ ಕಲಾಮಂದಿರದ ಲಸಿಕಾ ಕೇಂದ್ರಕ್ಕೆ  ಉಸ್ತುವಾರಿಯಾಗಿ ದಿನಕರ ಶೆಟ್ಟಿ(ಹಿರಿಯ ಭೂ ವಿಜ್ನಾನಿ, ಅಂತರ್ಜಲ ಇಲಾಖೆ,ಉಡುಪಿ) ನೋಡಲ್ ಅಧಿಕಾರಿಯಾಗಿ, ಕಾರ್ಕಳ ಬೋರ್ಡ್ ಹೈಸ್ಕೂಲ್ ಲಸಿಕಾ ಕೇಂದ್ರೆಕ್ಕೆ ಸೂರ್ಯಕಾಂತ ಖಾರ್ವಿ, ಕಾರ್ಕಳ ಪುರಸಭೆ ಮ್ಯಾನೇಜರ್,  ಇವರನ್ನು ನೋಡೊಲ್ ಅಧಿಕಾರಿಯಾಗಿ ನೇಮಿಸಲಾಗಿದೆಯೆಂದು ತಿಳಿದು ಬಂದಿದೆ.  

ಅಗಲಿದ ಮಾವುತನಿಗೆ ಗಜ ರಾಜನಿಂದ ಅಂತಿಮ ನಮನದ ವಿದಾಯ; ಕೇರಳದಲ್ಲಿ ನಡೆದ ಮನಕಲಕುವ ಘಟನೆ

JANANUDI.COM NETWORK

        (ಮಾನವರಲ್ಲಿ ಕೆಲವರಿಗೆ ನಮಗೆ ಸಾಕಿ ತರಬೇತಿ ನೀಡಿದವರಿಗೆ ಗೌರವ ಕೊಡುವ ಒಳ್ಳೆಯ ಗುಣಗಳು ಇರುವುದಿಲ್ಲಾ, ಆದರೆ ನಾವು ಸಾಕಿದ ಸಾಕು ಪ್ರಾಣಿಗಳಿಗೆ, ತಮ್ಮನ್ನು ಸಾಕಿದ, ಪೋಷಿಸಿದ, ಪ್ರೀತಿ ತೊರೀಸಿದ ಮಾನವನಿಗೆ ಅವುಗಳು ಅಪಾರ ಪ್ರೀತಿ ತೋರಿಸುತ್ತವೆ. ಅದಕ್ಕೆ ಪೂರಾವೆಯಂಬಂತ್ತೆ, ಕೇರಳದಲ್ಲಿ ಹ್ರದಯ ತುಂಬಿ ಬರುವ ಒಂದು ಘಟನೆ ನಡೆಯಿತು. ಹಲವಾರು ವರ್ಷಗಳ ಕಾಲ ತನಗೆ ಮಾವುತನಾಗಿ, ಸಾಕಿದ, ಪ್ರೀತಿ ತೋರಿಸಿದ ಮಾವುತ ಓಮನಚೆಟ್ಟನ್ (74) ಗುರುವಾರ ಬೆಳಗ್ಗೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾಗ ತನ್ನ ಮಾವುತನಿಗೆ ನಮನ ಮಾಡಿ ವಿದಾಯ ಹೇಳಲು, ಬ್ರಹ್ಮದಾತನ್ ಎಂಬ ಬ್ರಹತ್ ಆನೆ ಬಂದು ತನ್ನ ಮಾವುತನಿಗೆ ತನ್ನ ಸೊಂಡಿಲಿನಿಂದ ನಮಿಸಿದ, ದುಖಿಸಿದ ಘಟನೆ ಅಲ್ಲಿ ಸೇರಿದ ಎಲ್ಲರ ಹ್ರದಯಗಳು ಕರಗಿ ನೀರಾದವು)

JANANUDI.COM NETWORK

ಕೊಟ್ಟಾಯಮ್,ಜೂ.3; ಸುಮಾರು ಕಾಲು ಶತಮಾತಗಳವರೆಗೆ , ತನ್ನನ್ನು ಅಕ್ಕರೆಯಿಂದ ನೋಡಿಕೊಂಡ ಗುರುವಿಗೆ ವಿದಾಯ ಹೇಳಲು ಪಲ್ಲಟ್ ಬ್ರಹ್ಮದಾತನ್ ಬಂದಾಗ, ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಾಲಿಗಳು ತುಂಬಿ ಬಂದವು. ಬ್ರಹ್ಮದಾತನ್ ಒಂದು ಆನೆ ಮತ್ತು ಓಮನಚೆಟ್ಟನ್ ಅದರ ಮಾವುತ. ಓಮನಚೆಟ್ಟನ್ ಎಂದು ಪ್ರೀತಿಯಂದ ಕರೆಯಲ್ಪಡುವ , ಕೊಟ್ಟಾಯಮ್ ಸಮೀಪದ ಲಕ್ಕತ್ತೂರಿನ ನಿವಾಸಿ, ಕುಞಕ್ಕಾಡ್ ದಾಮೋದರನ್ ನಾಯರ್, ಬ್ರಹ್ಮದಾತನ್‍ನ ಪಾಲಿಗೆ ಆತ ಕೇವಲ ಒಬ್ಬ ಮಾವುತ ಮಾತ್ರವಲ್ಲ, ಆಟದ ಸಂಗಾತಿಯೂ ಕೂಡ ಆಗಿದ್ದರು.  ಅಂತಹ ಅಪರೂಪದ ಸ್ನೇಹದಲ್ಲಿ ಬ್ರಹ್ಮದಾತನ್ ಮತ್ತು ಓಮನಚೆಟ್ಟನ್ ಸ್ನೇಹವೂ ಒಂದು. ಕೇರಳ ರಾಜ್ಯದ ದೇವಾಲಯಗಳ ಯಾವುದೇ ಉತ್ಸವ ಇರಲಿ, ಬ್ರಹ್ಮದಾತನ್ ಮತ್ತು ಓಮನಚೆಟ್ಟನ್ ಇರಲೇಬೇಕಿತ್ತು. ಆ ಆನೆ ಮತ್ತು ಅದರ ಮಾವುತನ ಜೋಡಿ ಎಲ್ಲಾ ಗಜ ಪ್ರೇಮಿಗಳಿಗೂ ಅಚ್ಚುಮೆಚ್ಚು.

    ಓಮನಚೆಟ್ಟನ್ ಆನೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಅಕ್ಕರೆಯಿಂದ ಅವುಗಳ ಲಾಲನೆ-ಪಾಲನೆ ಮಾಡುತ್ತಿದ್ದ ಅಪರೂಪದ ಮಾವುತರಲ್ಲಿ ಅವರು ಕೂಡ ಒಬ್ಬರಾಗಿದ್ದರು. ಕೇರಳ ರಾಜ್ಯದ ಗಜಪ್ರೇಮಿಗಳ ಪ್ರಕಾರ, ಓಮನಚೆಟ್ಟನ್ ಯಾವುದೇ ಆನೆಗೆ, ಅದು ಎಷ್ಟು ಅವಿಧೇಯ ಆನೆಯೇ ಆಗಿರಲಿ ಯಾವತ್ತೂ ಏಟು ಹೊಡೆದಿಲ್ಲವಂತೆ.

     ಓಮನಚೆಟ್ಟನ್ ಜೂನ್ 3 ರಂದು ಗುರುವಾರ ಬೆಳಗ್ಗೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದಾಗ, ಬ್ರಹ್ಮದಾತನ್‍ನ ಒಡೆಯರಾದ ಪಲ್ಲಾಡ್ ರಾಜೇಶ್ ಮತ್ತು ಮನೋಜ್, ಮೆಲಂಪಾರದಿಂದ ಸುಮಾರು 20 ಕಿಮೀ ದೂರದಲ್ಲಿರುವ ಓಮನಚೆಟ್ಟನ್ ಅವರ ಮನೆಗೆ ಬ್ರಹ್ಮದಾತನ್‍ನನ್ನು ಕರೆದೊಯ್ದರು, 

   ಆಗ ಬ್ರಹ್ಮದಾತನ್‍ ತನ್ನ ಮಾವುತನ ಮನೆ ಮುಂದಿರುವ ಮ್ರತ ಶರೀರವನ್ನು ನೋಡಿ  ದುಖದಿಂದ ಘೀಳಿಡುತ್ತಾ, ಸೊಂಡಿಲಿನಿಂದ ನಮನ ಮಾಡಿ ವಿದಾಯ ಹೇಳಿತು. ಅಷ್ಟು ಮಾತ್ರವಲ್ಲ, ಮಾವುತನ ಮಗ ಬಂದು ಆನೆಯನ್ನು ತಬ್ಬಿ ಅತ್ತಾಗ, ಬ್ರಹ್ಮದಾತನ್‍ ನ ಕಣ್ಣಾಲಿಗಳಲ್ಲಿ ನೀರು ಜಿನಿಗಿತು, ಸುಮಾರು 5 ನಿಮೀಷಗಳಷ್ಟುಕಾಲ ಅಲಿದ್ದು ದುಖದಿಂದ ಘೀಳಿಡುತ್ತಾ ಹಿಂದಕ್ಕೆ ತೆರಳಿತು. ಇದೊಂದು ಅಪರೂಪದ ಹ್ರದಯ ವಿದ್ರಾವಕ  ವಿದಾಯವಾಗಿದ್ದು. ಆ ಭಾವುಕ ದೃಶ್ಯವನ್ನು ಕಂಡು ಅಲ್ಲಿ ನೆರೆದಿದ್ದ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಣ್ಣೀರನ್ನು ತಡೆದುಕೊಳ್ಳುವುದು ಕಷ್ಟ ಸಾಧ್ಯವಾಗಿತ್ತು.

ಕೋವಿಡ್ ನಿಯಂತ್ರಣ ಬಂದಲ್ಲಿ ಮಾತ್ರ ಎಸ್. ಎಸ್.ಎಲ್.ಸಿ. ಪರೀಕ್ಷೆ, ಇಲ್ಲದಿದ್ದರೆ ರದ್ದು- ಸಿ.ಎಂ. ಯಡಿಯೂರಪ್ಪ

JANANUDI.COM NETWORK

ಬೆಳಗಾವಿ,ಮೇ.೪: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯಲ್ಲಿ ಸುಧಾರಣೆಯಾದರೆ ಮಾತ್ರ ಎಸ್‌ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ

   ಅವರು ಇಂದು ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಯಾವುದೇ ಕಾರಣಕ್ಕೂ ಪಾಲಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ. ಕೋವಿಡ್  ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಎಸ್. ಎಸ್.ಎಲ್.ಸಿ. ಪರೀಕ್ಷೆ ರದ್ದು ಪಡಿಸಲಾಗುವದು ಎಂದರು ಅವರು ಧೈರ್ಯ ತುಂಬಿದ್ದಾರೆ.

ಕಾರ್ಕಳ ಬಿಳಿ ಬೆಂಡೆಯ ಬೀಜ ವಿತರಣೆಯ ಕಾರ್ಯಕ್ರಮ

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು


ರೋಟರಿ ಕ್ಲಬ್ ಬೆಳ್ಮಣ್ ಇದರ ನೇತೃತ್ವದಲ್ಲಿ ಹಾಗೂ ಬೆಳ್ಮಣ್ ಹಾಗೂ ನಂದಳಿಕೆ ಪರಿಸರದ ವಿವಿಧ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ನಂದಳಿಕೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕಾರ್ಕಳ ಬಿಳಿಬೆಂಡೆಯ ಬೀಜ ವಿತರಣೆಯ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಹಾಗೂ ಕರ್ನಾಟಕ ಸರಕಾರದ ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಇವರು ಬಿಳಿಬೆಂಡೆಯ ಬೀಜ ವಿತರಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

’ಅತ್ಯಧಿಕ ಪೌಷ್ಠಿಕಾಂಶವುಳ್ಳ  ಬಿಳಿಬೆಂಡೆಯನ್ನು ಎಲ್ಲರೂ ತಮ್ಮ ಮನೆಯಂಗಳದಲ್ಲಿ ಬೆಳೆಸ’ ಎನ್ನುವ ಪ್ರೋತ್ಸಾಹಕ ಮಾತುಗಳನ್ನಾಡಿದರು ಅಲ್ಲದೇ ’ಮುಂದಿನ ದಿನಗಳಲ್ಲಿ  ಕಾರ್ಕಳ ಬಿಳಿಬೆಂಡೆ ಹೆಸರಲ್ಲಿ ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ಕಾರ್ಯಯೋಜನೆ ಮಾಡಲಾಗಿದೆ’ ಎಂದು ನುಡಿದರು.

ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ರೇಷ್ಮಾ ಉದಯಕುಮಾರ್ ಶೆಟ್ಟಿ ಶಾಸಕರ ಕನಸಿನ ಯೋಜನೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಿ ಕಾರ್ಯಪ್ರವೃತ್ತರಾದಲ್ಲಿ  ಕಾರ್ಕಳ ಕ್ಷೇತ್ರವನ್ನು ಸ್ವರ್ಣ ಕಾರ್ಕಳ ಕ್ಷೇತ್ರವಾಗಿ ಪರಿವರ್ತಿಸುವುದು ಕಷ್ಟದ ವಿಷಯವೇ ಅಲ್ಲ ಎಂದು ನುಡಿದರು.

ವೇದಿಕೆಯಲ್ಲಿ ಬೆಳ್ಮಣ್ ರೋಟರಿಯ ಸ್ಥಾಪಕಾಧ್ಯಕ್ಷ ರೋ| ಸೂರ್ಯಕಾಂತ ಶೆಟ್ಟಿ, ಹಾಗೂ ಬೆಳ್ಮಣ್ ಭಾರತೀಯ ಜನತಾ ಪಕ್ಷದ ಸ್ಥಾನೀಯ ಸಮಿತಿಯ ಅಧ್ಯಕ್ಷ &  ರೋಟರಿ ಬೆಳ್ಮಣ್ಣೀನ ಪೂರ್ವಾಧ್ಯಕ್ಷ ರೋ| ದೇವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಜೇಸಿ ಐ, ಬೆಳ್ಮಣ್ ಸ್ಪೋರ್ಟ್ಸ್ ಕ್ಲಬ್, ಗುರುದುರ್ಗಾ ಮಿತ್ರ ಮಂಡಳಿ, ಕವಿ ಮುದ್ದಣ್ಣ ಮಿತ್ರ ಮಂಡಳಿ ನಂದಳಿಕೆ ಹಾಗೂ ಬೆಳ್ಮಣ್ ಹಾಗೂ ನಂದಳಿಕೆ ಪರಿಸರದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಬೆಳ್ಮಣ್ ನ ಅಧ್ಯಕ್ಷ ರೋ|  ಸುಭಾಷ್ ಕುಮಾರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು.

ಇತ್ತೀಚಿನ ದಿನಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ಪರೀಕ್ಷೆ ಸೃಷ್ಟಿಯಾಗಿದೆ:ಮಾಜಿ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ನೆರೆಯ ರಾಜ್ಯದ ವಿದ್ಯಾಂವತರು ಬೆಂಗಳೂರಿನಲ್ಲಿ ಕೆಲಸದ ನಿಮಿತ್ತ ವಾಸಗಿದ್ದು, ಕರೋನಾ ಮಹಾಮಾರಿಯಿಂದ ತಮ್ಮ ಸ್ವಂತ ಗ್ರಾಮಕ್ಕೆ ಹಿಂತುರುಗುತ್ತಿದ್ದಾರೆ. ಇಂತಹ ಸಮಯದಲ್ಲಿ ಪೊಲೀಸರು ಹಣಕೊಟ್ಟರೆ ಗಾಡಿ ಬಿಡುತ್ತೇವೆ ಇಲ್ಲವಾದರೆ ಇಲ್ಲವೆಂದು ಮನ ಬಂದಂತೆ ನಿಂದಿಸುವುದು. ಮೊದಲೇ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶ್ರಮದಿಂದ ಬಳುಲುತ್ತಿರುವ ಪ್ರಯಾಣೀಕರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ಪರೀಕ್ಷೆಯಾಗಿ ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ರಾಯಲ್ಪಾಡ್‍ನ ಹಕ್ಕಿಪಿಕ್ಕಿ ಚಕ್‍ಪೋಸ್ಟ್‍ನಲ್ಲಿ ಗುರುವಾರ ಪೊಲೀಸ್ ಇಲಾಖೆಯ ವಿರುದ್ಧ ಏಕಾಂಗಿಯಾಗಿ ಧರಣಿಗೆ ಕುಳಿತು ಮಾತನಾಡಿದರು.


ನಮಗೆ ಎಂದು ಅರಿಯದ, ನಮಗೆ ತಿಳಿಯದ ರೋಗವೊಂದು ದೇಶವ್ಯಾಪ್ತಿಯಾಗಿ ಜನರನ್ನು ಪೀಡಿಸುತ್ತಿದೆ. ರೋಗವನ್ನ ತಡೆಗಟ್ಟುವ ಸಲುವಾಗಿ ರಾಜ್ಯ ಹಾಗು ನೆರೆಯ ರಾಜ್ಯ ಸರ್ಕಾರವು ಕೆಲ ಮಾರ್ಗೋಪಾಯಗಳನ್ನು ಅನುಸರಿಸುತ್ತಿದೆ. ಇದರ ಹಿನ್ನಲೆಯಲ್ಲಿ ವಾಹನಗಳಿಗೆ ಕೆಲ ನಿರ್ಬಂಧನಗಳನ್ನು ಎರಡು ಸರ್ಕಾರಗಳು ವಿಧಿಸಿದೆ.ಸದುದ್ದೇಶದಿಂದ ಮಾಡಿರುವ ಮಾರ್ಗೋಪಾಯ ಮಾನವೀಯತೆ ಇಲ್ಲದೆ, ಒಂದಿಬ್ಬರು ಅಧಿಕಾರಿಗಳು ಇದೇ ಅವಕಾಶವನ್ನು ಬಳಿಸಿಕೊಂಡು ಇರಡು ರಾಜ್ಯಗಳ ರೈತ ವರ್ಗ ಹಾಗು ಸಾಮಾನ್ಯ ಜನತೆ ಬಳಿ ಇಲಾಖೆಯು ಅಮಾನೀಯವಾಗಿ ತೊಂದರೆ ಕೊಡುತ್ತಿದೆ ಎಂದು ಇಲಾಖೆಯ ವಿರುದ್ಧ ಗುಡುಗಿದರು .
ಭ್ರಷ್ಟಾಚಾರ, ಲಂಚವನ್ನು ಸ್ವೀಕರಿಸುವವರ ವಿರುದ್ದ ಅನೇಕ ಭಾರಿ ಹೋರಾಟಗಳನ್ನು ನಡೆಸಿದ್ದೇನೆ. ಅಮಾನತ್ತು ದಿನಕಳೆದಂತೆ ಪುನಃ ಇಲಾಖೆಗೆ ಸೇರ್ಪಡೆಯಾಗುತ್ತಾರೆ. ಆದರೆ ಇಂತಹ ಅಧಿಕಾರಿಯನ್ನ ವಜಾ ಮಾಡಿ ಇಲಾಖೆಯ ಗೌರವ ಕಾಪಾಡಿಕೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಇಲಾಖೆಯಲ್ಲಿ ಇಂತಹ ಘಟನೆ ಪುನಾರಾವರ್ತನೆಯಾಗದಂತೆ ಇಲಾಖೆ ಎಚ್ಚರ ವಹಿಸಬೇಕು.
ಜಿಲ್ಲೆಯ ಹಿರಿಯ ಅಧಿಕಾರಿಗಳು ಧರಣಿಯ ಸ್ಥಳಕ್ಕೆ ಬರುವ ತನಕ ಸ್ಥಳದಿಂದ ನಿರ್ಗಮಿಸುವುದಿಲ್ಲ ಎಂದಾಗ , ಜಿಲ್ಲೆಯ ಹಿರಿಯ ಅಧಿಕಾರಿಗಳು ಧರಣಿ ನಿರತ ಸ್ಥಳಕ್ಕೆ ಬೇಟಿ ನೀಡಿ ಶಾಸಕರರೊಂದಿಗೆ ಚರ್ಚೆ ಮಾಡಿದರು. ನಂತರ ಠಾಣಾಧಿಕಾರಿಯವರನ್ನ ಅಮಾನತ್ತು ಮಾಡಿದ ನಂತರ ಶಾಸಕರಾದ ಕೆ.ಆರ್.ರಮೇಶ್‍ಕುಮಾರ್‍ರವರು ಧರಣಿ ವಾಪಸ್ಸು ಪಡೆದರು.
ಅಡಿಸಿನಲ್ ಎಸ್ಪಿ ಬಿ.ಎಂ.ನಾರಾಯಣಸ್ವಾಮಿ, ಡಿವೈಎಸ್‍ಪಿ ಗಿರಿ, ಸಿಐ ಗಳಾದ ರಾಘವೇಂದ್ರಪ್ರಕಾಶ್,ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂಜಯ್‍ರೆಡ್ಡಿ, ಟಿಎಪಿಸಿಎಂಎಸ್ ತಾಲೂಕು ಅಧ್ಯಕ್ಷ ಬಗ್ಗಲಘಟ್ಟ ಶ್ರೀನಿವಾಸ್‍ರೆಡ್ಡಿ, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ರಾಯಲ್ಪಾಡು ಗ್ರಾ.ಪಂ.ಅಧ್ಯಕ್ಷೆ ಅರುಣ್‍ವೆಂಕಟ್, ಸದಸ್ಯರಾದ ಆರ್.ಗಂಗಾದರ್,ಅಶೋಕ್‍ರೆಡ್ಡಿ,ನಾಗೇಶ್, ಮುದಿಮಡುಗು ಗ್ರಾ.ಪಂ.ಅಧ್ಯಕ್ಷ ಚಿಕ್ಕನಾರಾಯಣಪ್ಪ, ಕೂರಿಗೇಪಲ್ಲಿ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥರೆಡ್ಡಿ ಇತರರಿದ್ದರು
.