HOLY ROSARY CHURCH, KUNDAPUR – 450 th JUBILEE SOUVENIR 2021

ಮುಂಬೈಯಲ್ಲಿ ಮಳೆಯ ಅಬ್ಬರಕ್ಕೆ ಕಟ್ಟಡ ಕುಸಿತ- ನಿದ್ದೆಯಲ್ಲಿದ್ದವರು ಮಕ್ಕಳು ಸೇರಿದಂತೆ 11 ಮಂದಿಯ ದುರ್ಮರಣ

JANANUD.COM NETWORK

ಮುಂಬೈ: ಮುಂಬಯ್ ಮಲಾಡ್  ವೆಸ್ಟನಲ್ಲಿ, ನಿನ್ನೆ ಮಧ್ಯರಾತ್ರಿ ಕಟ್ಟಡವೊಂದು ಕುಸಿದುಬಿದ್ದು, 11 ಮಂದಿ ದಾರುಣವಾಗಿ ಮೃತ ಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ವೆಸ್ಟ್‌ನ ನ್ಯೂ ಕಲೆಕ್ಟರ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಹಲವರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ.

      ಸದ್ಯ ಗಾಯಾಳುಗಳನ್ನು ಹತ್ತಿರದ ಬಿಡಿಬಿಎ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟೂ 15 ಮಂದಿಯನ್ನು ರಕ್ಷಿಸಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಡ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆಸಿದ್ದೇವೆ. ಇನ್ನೂ ಹೆಚ್ಚಿನ ಸಾವುನೋವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಉಪ ಪೊಲೀಸ್ ಆಯುಕ್ತ ವಿಶಾಲ್ ಠಾಕೂರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಪ್ರಧಾನಿಗೆ ಗಡ್ಡ ತೆಗೆಯಲು 100 ರೂಪಾಯಿ ಕಳಿಸಿದ ಚಾ ವಾಲ, ಅವರ ಸಂದೇಶ ಏನು !?

JANANUDI.COM NETWORK

ಮುಂಬೈ: ಮಹಾರಾಷ್ಟ್ರದ ಬಾರಾಮತಿಯ ಚಾ ಮಾರಾಟಗಾರನೊಬ್ಬ,  ಪ್ರಧಾನಿ ನರೇಂದ್ರ ಮೋದಿಗೆ ಗಡ್ಡ ತೆಗೆಯುವುದಕ್ಕೆ 100 ರೂಪಾಯಿನ್ನು ಮನಿ ಒರ್ಡರ್ ಮೂಲಕ ಕಳಿಸಿಕೊಟ್ಟು, ಸಂದೇಶ ಪತ್ರವನ್ನು ಬರೆದಿದ್ದಾರೆ. 

     ಕಳೆದ ಒಂದೂವರೆ ವರ್ಷದದಿಂದ  ಕೊರೋನಾ, ಲಾಕ್ ಡೌನ್ ನಿಂದ ದೇಶದ ಅಸಂಘಟಿತ ವಲಯ ತೀವ್ರವಾಗಿ ಕುಸಿತ ಗೊಂಡಿದೆ. ಇದರಿಂದ ತೀವ್ರವಾಗಿ ಬೇಸತ್ತ ಚಾ ವ್ಯಾಪಾರಿ ಪ್ರಧಾನಿ ಗಡ್ಡ ಬೆಳೆಸಿದ್ದಕ್ಕೆ ಅನಿಲ್ ಮೋರೆ, ಪ್ರಧಾನಿಗೆ ಪತ್ರ ಬರೆದಿದ್ದಾರೆ.

    ಅವರ ಸಂದೇಶ ಈ ರೀತಿ ಇದೆ “ಏನನ್ನಾದರೂ ಬೆಳೆಸುವುದಾದರೆ ದೇಶದ ಜನತೆಗೆ ಉದ್ಯೋಗದ  ಅವಕಾಶಗಳನ್ನು ಬೆಳೆಸಿ, ಲಸಿಕೆಯನ್ನು ಹೆಚ್ಚಿಸಿ, ಈಗಿರುವ ವೈದ್ಯಕೀಯ ಸೌಲಭ್ಯಗಳನ್ನು ಬೆಳೆಸಿ” ಎಂದು ಪತ್ರದಲ್ಲಿ ಬರೆದಿದ್ದಾರೆ. 

   ಕಳೆದ 2 ಲಾಕ್ ಡೌನ್ ಗಳ ದೇಶೆಯಿಂದ  ಕಂಗೆಟ್ಟಿರುವ ಜನತೆಯ ಸಮಸ್ಯೆಗಳು ವಾರಣೆಯಾಗುವುದನ್ನು ಪ್ರಧಾನಿ ಮೋದಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಚಾ ಮಾರಾಟಗಾರ ಅನಿಲ್ ಮೋರೆ ಅಭಿಪ್ರಾಯಪಟ್ಟಿದ್ದಾರೆ. 

ಪ್ರಧಾನಿಗಳ ಹುದ್ದೆ ದೇಶದ ಅತ್ಯುನ್ನತ ಹುದ್ದೆಯಾಗಿದೆ. ಪ್ರಧಾನಿಗಳ ಬಗ್ಗೆ ಅವರ ಆಡಳಿತದ ಬಗ್ಗೆ ಗೌರವವಿದೆ. ನನ್ನ ಉಳಿತಾಯದ ಹಣದಿಂದ 100 ರೂಪಾಯಿಗಳನ್ನು ನಾನು ಅವರಿಗೆ ಗಡ್ಡ ತೆಗೆಸಿಕೊಳ್ಳುವುದಕ್ಕಾಗಿ ಕಳಿಸುತ್ತಿದ್ದೇನೆ. ಅವರು ಅತ್ಯುನ್ನತ ನಾಯಕ ಅವರಿಗೆ ಅವಮಾನ ಮಾಡುವುದು ನನ್ನ ಉದ್ದೇಶವಲ್ಲ. ದೇಶದ ಬಡ ಜನತೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅವರ ಗಮನ ಸೆಳೆಯುವುದಕ್ಕಾಗಿ ಈ ರೀತಿ ಮಾಡಿದ್ದೇನೆ” ಎಂದು ಅನಿಲ್ ಮೋರೆ ತಿಳಿಸಿದ್ದಾರೆ. 

   ಅಲ್ಲದೆ ಕೋವಿಡ್-19 ನಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವವರಿಗೆ 5 ಲಕ್ಷ ರೂಪಾಯಿ ಹಾಗೂ ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವವರಿಗೆ 30,000 ರೂಪಾಯಿಗಳನ್ನು ನೀಡುವುದಕ್ಕೆ ಪ್ರಧಾನಿಗಳಿಗೆ ಪತ್ರದ ಮೂಲಕ ಒತ್ತಾಯ ಮಾಡಿದ್ದೇನೆ’ ಎಂದು  ಕೂಡ ಅನಿಲ್ ಮೋರೆ ಹೇಳಿದ್ದಾರೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಸೋಂಕಿತರಿಗೆ ಕನಿಷ್ಠ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವದು ಬಿಟ್ಟು ಕಮಿಷನ್‌ಗಾಗಿ ಪರದಾಟ ಕುರ್ಚಿಗಾಗಿ ಕಿತ್ತಾಟದಲ್ಲಿ ನಿರತರಾಗಿದ್ದಾರೆ: ಮಾಜಿ ಸಚಿವ ಕೃಷ್ಣಬೈರೇಗೌಡ ಟೀಕೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಮಾಲೂರು : – ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಸೋಂಕಿತರಿಗೆ ಕನಿಷ್ಠ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವದು ಬಿಟ್ಟು ಕಮಿಷನ್ಗಾಗಿ ಪರದಾಟ ಕುರ್ಚಿ ಗಾಗಿ ಕಿತ್ತಾಟದಲ್ಲಿ ನಿರತರಾ ಗಿದ್ದಾರೆಂದು ಮಾಜಿ ಸಚಿವ ಕೃಷ್ಣಬೈರೇಗೌಡ ಟೀಕಿಸಿದರು .
ಮಾಲೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಶಾಸಕ ಕೆ.ವೈ. ನಂಜೇಗೌಡ ಅವರ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಕೋವಿಡ್ ಸೋ೦ಕು ನಿಯಂತ್ರಿಸಲು ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕ ರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಅವರು ಸೇವೆಂ ರನ್ನು ಗುರುತಿಸಿ ಗೌರವಪೂವ೯ಕವಾಗಿ ಹರಿಶಿಣ ಕುಂಕುಮ ಸೀರೆ ಕುಪ್ಪಸನೀಡಿ ಆಹಾರ ದಿನಸಿಗಳನ್ನು ವಿತರಿಸಿ ಮಾತನಾಡಿದರು . 
ಕೆವಿಡ್ ಸೋಂಕಿನ ಎರಡನೇ ಅಲೆಯು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿದ್ದು ಅದರಂತೆ ಮರಣದ ಸಂಖ್ಯೆಯೂ ಹೆಚ್ಚಾಗಿದೆ ರಾಜ್ಯಸರ್ಕಾರ ಸಮರ್ಪಕವಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಜನರ ಸಾವಿಗೆ ಕಾರಣವಗುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೋಂಕಿತರ ಉಸಿರಾಟಕ್ಕೆ ಕನಿಷ್ಠ ಆಕ್ಸಿಜನ್ ಕೊಡುವ ಕೆಲಸವನ್ನು ಸಹ ಮಾಡುತ್ತಿಲ್ಲ ಕೋವಿಡ್ ಸಂದರ್ಭದಲ್ಲಿ ಸೇವೆ ಮಾಡುವುದನ್ನು ಬಿಟ್ಟು ವೈದ್ಯಕೀಯ ಸೌಲಭ್ಯಗಳಲ್ಲಿ ಕಮಿಷನ್ ಹಣ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ . ಆರ್ಥಿಕ ಸಂಕಷ್ಟದಲ್ಲಿರುವ ರೈತರು ಕೂಲಿ ಕಾರ್ಮಿಕರು ಬಡವ ರ್ಗದ ಜನತೆ ವಿವಿಧ ವೃತ್ತಿಬಾಂದ ‘ ವರಿಗೆ ರಾಜ್ಯ ಸರ್ಕಾರ ಎರಡು ಪ್ಯಾಕೇಜ್ ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದರು . 
ತೆರಿಗೆ ಪಾವತಿಸುವಲ್ಲಿ ಎರಡನೇ ದೊಡ್ಡ ರಾಜ್ಯ ಕರ್ನಾಟಕ ಆದರೆ ತೆರಿಗೆ ಕಡಿಮೆ ಪಾವತಿಸುವ ರಾಜ್ಯಗಳಿಗೆ ಆಕ್ಸಿಜನ್ ಹಾಗೂ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ ರಾಜ್ಯದಲ್ಲಿ ಬಿಜೆಪಿಯ  ಸಂಸದರನ್ನು ರಾಜ್ಯದ ಜನತೆ ಆಯ್ಕೆಮಾಡಿದ್ದಾರೆ ಆದರೆ ರಾಜ್ಯದ ಪಾಲಿಗೆ ಬೇಕಾಗಿರುವ ತೆರಿಗೆ ಹಣವನ್ನು ನೀಡುತ್ತಿಲ್ಲ ಅಲ್ಲದ ಜನರ ಉಸಿರಾಟದ ಪ್ರಾಣಾಯಾಮ ಆಕ್ಸಿಜನ್ ಹಾಗೂ ವೈದ್ಯಕೀಯ ಸೌಲಭ್ಯಗಳ ಅಗತ್ಯವಿರುವ ಬಗ್ಗೆ ಬಬ್ಬ ಸಂಸದರು ಸಹ ಪ್ರಧಾನ ಮಂತ್ರಿಗಳ ಬಳಿ ಧ್ವನಿ ಎತ್ತಿಲ್ಲ . ಜನರಪ್ರಾಣ ಉಳಿಸುವ ಚಿಂತೆಯನ್ನು ಬಿಟ್ಟು ಕೇವಲ ಅಧಿಕಾರಕ್ಕಾಗಿ ಕಚ್ಚಾಡುತಿದ್ದಾರೆ ಅವರಿಗೆ ಇದು ಸಮಯವೇ ಎಂದರು . ಸೋಂಕಿತರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಹೆಸರಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಣ ಲೂಟಿ ಮಾಡಿಕೊಂಡು ಕುರ್ಚಿಗಾಗಿ ಕಚ್ಚಾಟದಲ್ಲಿ ಮುಳುಗಿಹೋಗಿದ್ದಾರೆ ಜನರ ಪ್ರಾಣ ಉಳಿಸುವ ಚಿಂತೆ ಮಾಡುತ್ತಿಲ್ಲ ಈ ಸರ್ಕಾರ ಕೇವಲ 20 % ಕಮೀಷನ್ ಸರ್ಕಾರವಾಗಿದೆ. 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಿಂದಿನ ಸಮ್ಮಿಶ್ಕಾಂಗ್ರೆಸ್ ಸರ್ಕಾರವನ್ನು 10 % ಸರ್ಕಾರ ಎಂದು ಹೇಳುತ್ತಿದ್ದರು ಅಂದ್ರೆ ಈಗಿನ ರಾಜ್ಯ ಸರ್ಕಾರ ಜಿ.ಎಸ್ ಟಿ ಜೊತೆಗೆ ವಿ.ಎಸ್.ಟಿ ಅಂದ್ರೆ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ 20 % ಕಮೀಷನ್ ಸರ್ಕಾರಿವಾಗಿದೆ ಇದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಣಿ ಸಲಿಲ್ಲವೇ ಎಂದು ಪ್ರಶ್ನಿಸಿದರು . ಜನಗಳ ಪ್ರಾಣ ಉಳಿಸುವುದು ಬಿಟ್ಟು ಪ್ರಾಣ ಇರುತ್ತಿದ್ದಾರೆ ಗ್ರಾಮೀಣ ಭಾಷೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಸರ್ಕಾರ ಧರ್ಮದ ಹೆಸರಿನಲ್ಲಿ ರಾಮನ ಹೆಸರಿನಲ್ಲಿ ಜನರ ಬಳಿ ಮತ ಹಾಕಿಸಿಕೊಂಡು ಜನರ ಕಷ್ಟ ನೊಡದೆ ಅಧಿಕಾರಕ್ಕಾಗಿ ಕಚ್ಚಾಡುತಿದ್ದಾರೆ . ಕೋರೆನಾದಿಂದ ರಾಜ್ಯದಲ್ಲಿ ತತ್ತರಿಸಿಹೋಗಿರುವ ಜನತೆಗೆ ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್ 89 ಸಾವಿರ ಜನ ರೈತರಿಗೆ ಮಾತ್ರ ಆದರೆ 2 ಲಕ್ಷ ರೈತರಿಗೆ ಪ್ಯಾಕೇಜ್ ತಲುಪುತ್ತಿಲ್ಲ ಇದು ಕೇವಲ ಸರ್ಕಾರದ ರೈತರ ಕಣೋರೆಸುವ ತಂತ್ರವಾಗಿದೆ ರೈತರ ಬಡವರ ಜನಪರವಲ್ಲದ ಸರ್ಕಾರವನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸರ್ಕಾರವನ್ನು ಕಿತ್ತೊಗೆಂರುವ ಕೆಲಸ ಮಾಡಬೇಕು ಎಂದರು .
ಕೋಲಾರ ಜಿಲ್ಲೆಯ ಜನರು ಶ್ರಮಜೀವಿಗಳ ಆಗಿದ್ದು ಛಲವನ್ನು ಹೊಂದಿದ್ದಾರೆ ರೈತರು ಸ್ವಾಭಿಮಾನಿಯಾಗಿ ಬದುಕುವುದಕ್ಕೆ ನೆರವು ನೀಡಿದ್ದು ಕಾಂಗ್ರೆಸ್ ಸರ್ಕಾರ ಸರ್ಕಾರದ ಅವಧಿಯಲ್ಲಿ 1200 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಅದರಂತೆ ಕಾಮಗಾರಿ ಮುಗಿದು ಜಿಲ್ಲೆಯ ಕೆಲವೇ ಕೆರೆಗಳಿಗೆ ನೀರು ಹರಿಯುತ್ತಿವೆ ಕೆಸಿ ವ್ಯಾಲಿ ಎರಡನೇ ಹಂತದಲ್ಲಿ ಕ್ಯೂ ಹೆಚ್ಚು ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಕೋಟಿ ರೂಗಳನ್ನು ಬಜೆಟ್ನಲ್ಲಿ ನಿಗದಿಪಡಿಸಿ ಬಿಡುಗಡೆ ಮಾಡಲಾಗಿತ್ತು ಅದರಂತೆ ಟೆಂಡರ್ ಪ್ರಕ್ರಿಯೆ ಮುಗಿದಿದೆ ಗುತ್ತಿಗೆದಾರರು ಕಾಮಗಾರಿಯ ಗುತ್ತಿಗೆಯನ್ನು ಪಡೆದಿದ್ದು ಈಗಿನ ಸರ್ಕಾರಕ್ಕೆ ಕಮಿಷನ್ ನೀಡಿಲ್ಲ ವೆಂದು ಎರಡನೇ ಹಂತದ ಯೋ ಜನೆಗೆ ಹಸಿರು ನಿಶಾನೆ ನೀಡಿಲ್ಲ , ಎರಡು ವರ್ಷವಾದರೂ ಇದುವರೆಗೂ ಕಾಮಗಾರಿಯನ್ನು ಪ್ರಾರಂಭಿಸಲಿಲ್ಲ ಎಂದರು ಕುಡಿಯುವ ನೀರಿಗಾಗಿ ಎತ್ತಿನ ಹೊಳೆ ಯೋಜನೆ ಇದುವರೆಗೂ ಪ್ರಗತಿ ಕಾಣಲಿಲ್ಲ ಜಿಲ್ಲೆಯ ಕೆಲಸ ಮಾಡುವವರನ್ನು ಜಿಲ್ಲೆಯ ಜನತೆ ಬೆಂಬಲಿಸಬೇಕು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲಿದೆ ಸ್ಥಗಿತಕೊಡಿರುವ ನೀರಾವರಿಯೋ ಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು .
ಮಾಜಿ ಸಚಿವ ಜಮೀರ್ ಅಹ್ಮದ್‌ ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬಡವರ ಪರವಾಗಿ ಕಾಳಜಿ ಇಲ್ಲ ಕೋವಿಡ್ ಸಂದಭ೯ದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಸೋಂಕಿನಿಂದ ಮೃತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದಾರೆ ಸೋಂಕಿನ ಪ್ರಮಾಣ ಮೃತರ ಸಂಖ್ಯೆ ಸಮರ್ಪಕ ಮಾಹಿತಿ ನೀಡುತಿಲ್ಲ ರಾಜ್ಯದಲ್ಲಿ ಇದುವರೆಗೂ 20 ಸಾವಿರ ಮಂದಿ ಸೋಂಕಿನಿಂದ ಮೃತರಾಗಿದ್ದಾರೆ ಮೃತರ ಕುಟು೦ಬಗಳಿಗೆ ಪರಿಹಾರ ನೀಡಲಿಲ್ಲ ಸಚಿವರು ಕೋವಿಡ್ ಹೆಸರಿನಲ್ಲಿ ಹಣ ಮಾಡುವುದರಲ್ಲಿ ತೊಡಗಿದ್ದಾರೆ ಎಂದರು . 
ಕೇಂದ್ರ ಸರ್ಕಾರ ಪ್ರಧಾ ನಮಂತ್ರಿಗಳು ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು ಲಸಿಕೆ ತೆಗೆದುಕಕೊಂಡರೆ ಮಾತ್ರ ನಾವು ಜೀವಿ ಸುತ್ತವೆ ಸಲಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಬೀರುವುದಿಲ್ಲ ಆಶಾಕಾರ್ಯಕತೆಯರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು ಗಗನಕ್ಕೇರಿರುವ ಬೆಲೆಗೆಳನ್ನು ಇಳಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಬಿಜೆಪಿ ಜಾತಿ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ ಬಡವರಿಗೆ ಸಹಾಯ ಮಾಡುವುದು ನಮ್ಮ ಧರ್ಮ , ಕಾಂಗ್ರೆಸ್ ಪಕ್ಷದ ಎಲ್ಲಾ ಕ್ಷೇತ್ರಗಳ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್ ಸಂದರ್ಭದಲ್ಲಿ ರೈತರು ಬಡವರು ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದೆ ಎಂದರು. ಕೋರೊನಾ ಕಷ್ಟಕಾಲದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ದಿನಸಿ ವಿತರಿಸುವ ಮೂಲಕ ವಿಶೇಷವಾಗಿ ಇಲ್ಲಿನ ಶಾಸಕ ಕೆ.ವೈ.ನಂಜೇಗೌಡ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಅತ್ಯಂತ ಸಕ್ರಿಯ ಶಾಸಕರು ಕ್ಷೇತ್ರದ ಅಭಿವೃದ್ಧಿ ಜನಗಳಿಗೆ ಸಹಾಯ ಮಾಡುವುದರಲ್ಲಿ ಅಭಿವೃದ್ಧಿಪರ ಕ್ರಿಯಾಶೀಲರಾಗಿದ್ದಾರೆ ಕೋವಿ ಸಂದರ್ಭದಲ್ಲಿ ಸೋಂಕಿತರ ನೋವಿನಲ್ಲಿ ಇರುವ ವರಿಗೆ ಸ್ಪಂದಿಸಿ ಜನಸಾಮಾನ್ಯರಿಗೆ ನೆರವಾಗುತ್ತಿದ್ದಾರೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಭಿನಂದಿಸುವುದಾಗಿ ತಿಳಿಸಿದರು .

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಕೋವಿಡ್ ಸೋಂಕು ತಡೆಗಟ್ಟಲು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಕೋವಿಡ್ ಸಂದ ರ್ಭದಲ್ಲಿ ಕೋವಿಡ್ ಸೋಂಕು ತಡೆಗಟ್ಟಲು ಕರೋನಾ ವಾರಿಯರ್ಸ್ಗಳಾಗಿ ಆಶಾ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವೈದ್ಯರು ಸಿಬ್ಬಂದಿ ಸೇನಾನಿಗಳ ಹೋರಾಟದ ಹಾದಿಯಲ್ಲಿ ಶ್ರಮಿಸುತ್ತಿದ್ದಾರೆ ಇವರ ಸೇವೆ ಶ್ಲಾಘನೀಯವಾಗಿದೆ ಪ್ರತಿನಿತ್ಯ ತಾಲೂಕು ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಸಮಿತಿ ಸಭೆ ಸೇರಿ ಚರ್ಚಿಸಿ ತಾಲೂಕಿನ ಅಭಿವೃದ್ಧಿಯನ್ನು ಬದಿಗೊತ್ತಿ ತಾಲೂಕು ಆಡಳಿತ ಶ್ರಮಿಸುತ್ತಿದೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರ ಆದೇಶದಂತೆ  ಕರೋನಾ ವಾರಿಯ ರ್ಸ್ ಆಗಿ ಸೇವೆಸಲ್ಲಿ ಸುತ್ತಿರುವ ಆಶಾ ಅಂಗನವಾಡಿ ಕಾರ್ಯಕರ್ತರಿಗೆ ಆಹಾರಗಳನ್ನು ವಿತರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಅಸ್ಲಾಂ ಪಾಷಾ , ಜಿಪಂ ಮಾಜಿ ಅಧ್ಯಕ್ಷ ರತ್ನಮ್ಮ ನಂಜೇಗೌಡ , ಪುರಸಭಾಧ್ಯಕ್ಷ ಮುರಳಿಧರ್ , ಉಪಾಧ್ಯಕ್ಷೆ ಭಾರತ ‘ ಮ್ಮ ಶಂಕರಪ್ಪ , ಸದಸ್ಯರಾದ ಮಂಜುನಾಥ್ ಇಮ್ಮಿಯಾಜ್ ಖಾನ್ , ಚೈತ್ರ ರವಿಕುಮಾರ್ , ಗ್ರಾಪಂ ಅಧ್ಯಕ್ಷ ಹೇಮಾಮಾಲಿನಿ , ತಾಪಂ ಉಪಾಧ್ಯಕ್ಷ ನಾಗವೇಣಿ , ಸಹಕಾರ ಯೂನಿಯನ್ ಉಪಾ ಧ್ಯಕ್ಷ ಗೋವರ್ಧನ್ ರೆಡ್ಡಿ , ಜಿಪಂ ಮಾಜಿ ಸದಸ್ಯ ಹನುಮಂತರೆಡ್ಡಿ , ಪುರಸಭಾ ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ್ , ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ , ಮುಖಂಡರಾದ ಅಂಜನಿಸೋಮಣ್ಣ , ಸಿಎಂ ಅಶೋಕ್ ಕುಮಾರ್ , ಸಂತೇಹಳ್ಳಿ ನಾರಾಯಣಸ್ವಾಮಿ ಮಧುಸೂ ದನ್ , ಅಶ್ವತ್‌ರೆಡ್ಡಿ , ಪ್ರದೀಪ್‌ರೆಡ್ಡಿ , ಮೈಲಾಂಡಹಳ್ಳಿ ನಾರಾಯಣ ಸ್ವಾಮಿ , ಬ್ಯಾಲಹಳ್ಳಿ ರಮೇಶ್ , ಯುವ ಕಾಂಗ್ರೆಸ್ ಅಧ್ಯಕ್ಷ ತಸ್ವೀರ್ ಅಹ್ಮದ್ , ಇದ್ದರು .

ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಸೌಲಭ್ಯ ನೀಡಲಾಗುವುದು : ಸಮಾಜ ಸೇವಕ ಬಿ.ವಿ.ಶಿವಾರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಸೌಲಭ್ಯ ನೀಡಲಾಗುವುದು ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಬಿ.ವಿ.ಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ 10 ಆಮ್ಲಜನಕ ಸಿಲಿಂಡರ್‍ಗಳನ್ನು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಷರೀಫ್ ಅವರಿಗೆ ಹಸ್ತಾಂತರಿಸಿ ಮಾತನಾಡಿ, ಗಡಿ ಗ್ರಾಮದ ಆಸ್ಪತ್ರೆಗೆ ಬರುವ ಕೋವಿಡ್ ಪೀಡಿತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಸೌಲಭ್ಯ ಕಲ್ಪಿಸಲಾಗಿದೆ. ಗಡಿ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ಬಡವರಿದ್ದಾರೆ. ಅವರು ದೂರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಶಕ್ತರಾಗಿಲ್ಲ. ಅಂಥ ವ್ಯಕ್ತಿಗಳ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಈಗ 30 ಹಾಸಿಗೆಗೆ ಸಾಕಾಗುವಷ್ಟು ಆಮ್ಲಜನಕ ಒದಗಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಪ್ರಾರಂಭಕ್ಕೆ ಕೋವಿಡ್ ಪೀಡಿತರ ಚಿಕಿತ್ಸೆಗಾಗಿ 8 ಹಾಸಿಗಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಎಷ್ಟೇ ಹಾಸಿಗೆ ಸೌಲಭ್ಯ ಒದಗಿಸಿದರೂ, ಅಗ್ಯವಾದ ಆಮ್ಲಜನಕದ ಸಿಲಿಂಡರ್‍ಗಳನ್ನು ನೀಡಲಾಗುವುದು. ಇಷ್ಟು ಮಾತ್ರವಲ್ಲದೆ ಹೋಂ ಕ್ವಾರಂಟೈನ್‍ನಲ್ಲಿರುವ ಬಡ ಕೋವಿಡ್ ರೋಗಿಗಳಿಗೆ ಅಗತ್ಯವಾದ ಔಷಧಗಳನ್ನು ಪೂರೈಸಲಾಗುವುದು. ಸೋಂಕಿತರು ಹಾಗೂ ಆಸ್ಪತ್ರೆಗೆ ಯಾವುದೇ ಸೌಲಭ್ಯ ಬೇಕಿದ್ದರೂ ಕೇಳಿ ಪಡೆಯಬಹುದಾಗಿದೆ ಎಂದು ಹೇಳಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಷರೀಫ್, ಮುಖಂಡರಾದ ಬಕ್ಷುಸಾಬ್, ಶೇಷಾದ್ರಿ, ರಾಮ್ ಮೋಹನ್, ಅನಿಲ್, ವಿ.ಕೆ.ನಾಗರಾಜ್, ಅಬ್ಬು, ರೆಡ್ಡಪ್ಪ, ಪ್ರಶಾಂತ್, ಮಹೇಶ್, ಕಾರ್ತಿಕ್ ರೆಡ್ಡಿ ಇದ್ದರು
.

ಗಳಿಸಿದ ಧನ ಚಿರವಲ್ಲ ,ಪಡೆದ ಅಧಿಕಾರ ಸ್ಥಿರವಲ್ಲ, ಅಂತಸ್ತು ಶಾಶ್ವತವಲ್ಲ – ಸಂತಸ ಸಂಭ್ರಮ ನಶ್ವರ . ಸತ್ಕಾರ್ಯ , ಔದಾರ್ಯ ಅಜರಾಮರ : ಕೆ.ಆರ್.ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು 1 : ಗಳಿಸಿದ ಧನ ಚಿರವಲ್ಲ ,ಪಡೆದ ಅಧಿಕಾರ ಸ್ಥಿರವಲ್ಲ, ಏರಿದ ಅಂತಸ್ತು ಶಾಶ್ವತವಲ್ಲ, ಸಂತಸ ಸಂಭ್ರಮ ಸಕಲವೂ ನಶ್ವರ . ಮಾಡಿದ ಸತ್ಕಾರ್ಯ , ಮರೆದ ಔದಾರ್ಯ , ಆನಂದಿಸಿ ಅನುಭವಿಸಿದ ನೆನಪುಗಳ ಮಾಧುರ್ಯ ಎಂದಿಗೂ ಅಜರಾಮರ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ಗನಿಬಂಡೆಯ ಟಿಟಿಡಿ ಸಮುದಾಯ ಭವನದಲ್ಲಿ ತೆರದಿದ್ದ ಕೋವಿಡ್ ಕೇರ್ ಸೆಂಟರ್‍ಗೆ ಮಂಗಳವಾರ ಶ್ರೀನಿವಾಸಪುರ ರೋಟರಿಯಿಂದ 65ಸಾವಿರ ಮೌಲ್ಯದ 5 ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಕೊರೋನಾ ಎಂಬ ಸೋಂಕು ವಿಶ್ವದಲ್ಲೆಡೆ ಹಬ್ಬಿಕೊಂಡು ಹಲವಾರು ಜನರನ್ನು ಬಲಿ ಪಡೆದಿದೆ.ಬಡವರು,ನಿರ್ಗತಿಕರು,ಕೊರೋನಾದಿಂದ ಮೃತಪಟ್ಟ ಕುಟುಂಬದವರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಲವಾರು ಸಂಘಟನೆಗಳು,ಸಂಘ ಸಂಸ್ಥೆಗಳು ದಾನಿಗಳು ಸಮಾಜಸೇವಕರು ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದು ವಿಶ್ವದಿಂದಲೇ ಕೊರೋನಾ ಎಂಬ ಕಾಯಿಲೆಯು ದೂರವಾಗಲಿ ಎಂದು ಭಗವಂತನಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದು ತಿಳಿಸಿದರು.
ಡಾ.ಕವಿತ,ಶ್ರೀನಿವಾಸಪುರ ರೋಟರಿ ಸೆಂಟ್ರಲ್‍ನ ಅಧ್ಯಕ್ಷ ಶಿವಮೂರ್ತಿ,ಕಾರ್ಯದರ್ಶಿ ನಾಗೇಶ್,ಗೌವರ್ನರ್ ಎಸ್.ವಿ.ಸುದಾಕರ್, ಸದಸ್ಯರಾದ ಡಾ.ವೆಂಕಟಾಚಲ,ಬೈರೇಗೌಡ,ವೇಣು ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಬಿ.ಗೋಪಾಲಗೌಡ,ಆವಲಕುಪ್ಪ ಮಂಜು, ಮುಖಂಡರಾದ ವೈ.ಆರ್.ರಾಮಾಜನೇಯ, ಶ್ರೀನಿವಾಸರಾವ್,ಶ್ರೀನಿವಾಸಪುರ ಮಂಜು, ಗ್ರಾ.ಪಂ.ಮಾಜಿ ಸದಸ್ಯ ಬೈರೆಡ್ಡಿ, ಶಂಕರ,ಮರಿಮಾಕಲಪಲ್ಲಿ ವೇಣು ಕೂರಿಗೇಪಲ್ಲಿ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥರೆಡ್ಡಿ ಇದ್ದರು.


ಜಿಲ್ಲಾ ನೌಕರರ ಸಂಘದ ಅಧ್ಯಕ್ಷಗಿರಿಗೆ ಎದ್ದಿದ್ದ ಗೊಂದಲಗಳಿಗೆ ತೆರೆ ಅನಗತ್ಯ ಹೇಳಿಕೆಗಳ ವಿರುದ್ದ ಶಿಸ್ತುಕ್ರಮದ ಸಂದೇಶ ನೀಡಿದ ಷಡಕ್ಷರಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷಗಿರಿಗೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿರುವ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು, ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಸಂಘಟನೆಗೆ ಹಿನ್ನಡೆಯುಂಟು ಮಾಡಿದ್ದ ಕೆಲವರಿಗೆ ಶಿಸ್ತುಕ್ರಮದ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
ರಾಜ್ಯಾಧ್ಯಕ್ಷರು,ಪ್ರಧಾನಕಾರ್ಯದರ್ಶಿ,ಖಜಾಂಚಿಯವರ ಸಮಕ್ಷಮದಲ್ಲಿ ಕಳೆದ ಜ.12 ರಂದು ನಡೆದ ಜಿಲ್ಲಾ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಬೈಲಾ ನಿಯಮಗಳನ್ವಯ ಹಾಜರಿದ್ದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಜಿ.ಸುರೇಶ್‍ಬಾಬು ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಉಳಿದ ಅವಧಿಗೆ ಆಯ್ಕೆ ಮಾಡುವ ಮೂಲಕ ಸಭಾ ನಡವಳಿಯಲ್ಲಿ ದಾಖಲು ಮಾಡಲಾಗಿದೆ ಎಂಬುದನ್ನು ಅಧ್ಯಕ್ಷರಾದ ಷಡಕ್ಷರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ್ ಜಂಟಿಯಾಗಿ ನೀಡಿರುವ ಪತ್ರದಲ್ಲಿ ಸ್ವಷ್ಟೀಕರಿಸಿದ್ದಾರೆ.
ಆದರೆ ಜಿಲ್ಲೆಯ ಸಂಘದ ಒಂದಿಬ್ಬರು ನಿರ್ದೇಶಕರು ಅಧ್ಯಕ್ಷರ ಹುದ್ದೆ ಕುರಿತು ಗೊಂದಲ ಸೃಷ್ಟಿಸಿ ಈ ಸಂಬಂಧ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಅನಗತ್ಯ ಪ್ರಸ್ತಾಪ ಮಾಡುವ ಮೂಲಕ ಸಂಘದ ಸಂಘಟನೆಗೆ ಮುಜುಗರವುಂಟು ಮಾಡುತ್ತಿರುವುದನ್ನು ಮನಗಂಡು ಷಡಕ್ಷರಿ ಈ ಸ್ವಷ್ಟನೆ ನೀಡಿರುವುದಾಗಿ ತಿಳಿಸಿದ್ದಾರೆ.
ಸಂಘದ ಬೈಲಾ ನಿಯಮದಲ್ಲಿ ಸಂಘದ ಕಾರ್ಯಚಟುವಟಿಕೆಗಳ ಕುರಿತಂತೆ ಜಿಲ್ಲಾಧ್ಯಕ್ಷರು,ತಾಲ್ಲೂಕು ಅಧ್ಯಕ್ಷರು ಹಾಗೂ ಯೋಜನಾ ಶಾಖೆಗಳ ಅಧ್ಯಕ್ಷರು ಪತ್ರಿಕಾ ಹೇಳಿಕೆ ಅಥವಾ ಪ್ರಕಟಣೆ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸ್ವಷ್ಟಪಡಿಸಿದ್ದಾರೆ.
ಉಳಿದ ಪದಾಧಿಕಾರಿ,ನಿರ್ದೇಶಕರು ಹಾಗೂ ಸರ್ಕಾರಿ ನೌಕರರು ಸಂಘಕ್ಕೆ ಸಂಬಂಧಿಸಿದ ಪತ್ರಿಕಾ ಹೇಳಿಕೆ,ಪ್ರಕಟಣೆಗಳನ್ನು ಬಿಡುಗಡೆ ಮಾಡಲು ಅವಕಾಶವನ್ನು ಬೈಲಾ ಕಲ್ಪಿಸಿಲ್ಲ ಎಂದು ತಿಳಿಸಿದ್ದಾರೆ.
ಸಂಘಟನೆಗೆ ಮುಜುಗರವಾಗುವಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣ, ಮಾಧ್ಯಮದ ಮುಂದೆಯಾಗಲಿ ಹಂಚಿಕೊಳ್ಳುವುದು ಸಂಘ ವಿರೋಧಿ ಚಟುವಟಿಕೆಯಾಗುವುದರಿಂದ ಇದು ಬೈಲಾ ಉಲ್ಲಂಘನೆಯಾಗಿದ್ದು, ಅಂತಹವರ ವಿರುದ್ದ ಶಿಸ್ತುಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.
ಜಿಲ್ಲೆಯ ಸಂಘ,ಸಂಘಟನೆಗೆ ಸಂಬಂಧಿಸಿದ ಯಾವುದೇ ಗೊಂದಲಗಳು ಉದ್ಬವಿಸಿದ್ದಲ್ಲಿ ರಾಜ್ಯ ಸಂಘವನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಸೂಚಿಸಿದ್ದಾರೆ.
ಈ ಸ್ವಷ್ಟನೆಯ ನಡುವೆಯೂ ರಾಜ್ಯ,ಜಿಲ್ಲಾ,ತಾಲ್ಲೂಕು,ಯೋಜನಾ ಶಾಖೆಯ ಪದಾಧಿಕಾರಿಗಳು, ಸದಸ್ಯರು ಸಂಘದ ಸಂಘಟನೆಗೆ ಹಿನ್ನಡೆಯಾಗುವಂತಹ ಹೇಳಿಕೆ,ಪ್ರಕಟಣೆಗಳನ್ನು ಸಾಮಾಜಿಕ ಜಾಲತಾಣ,ಪತ್ರಿಕೆಗಳಲ್ಲಿ ಹಂಚಿಕೊಂಡರೆ ಅದು ಶಿಸ್ತುಕ್ರಮಕ್ಕೆ ಅರ್ಹವಾಗುತ್ತದೆ ಆದ್ದರಿಂದ ಅಂತಹವರ ವಿರುದ್ದ ನೌಕರರ ಸಂಘದ ಉಪವಿಧಿಗಳು-2020 ನಿಯಮ 24 (ಎಫ್)8(2)(ಎ)ಅನ್ವಯ ಶಿಸ್ತುಕ್ರಮ ಜರುಗಿಸಲಾಗುವುದು ಎಂದು
ಎಚ್ಚರಿಕೆ ನೀಡಿದ್ದಾರೆ.


ಸಂಘ ಮುನ್ನಡೆಸುವ ಹೊಣೆ ಸುರೇಶ್‍ಬಾಬುಗೆ


ಈಗಾಗಲೇ ಕಳೆದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡು ನಿದ್ರಾವಸ್ಥೆಗೆ ಜಾರಿದ್ದ ಸಂಘಟನೆಯನ್ನು ಕ್ರಿಯಾಶೀಲಗೊಳಿಸಿ, ನೌಕರರ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸುರೇಶ್‍ಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಸಿ, ಪ್ರಾಥಮಿಕ ಶಿಕ್ಷಕರ ಸಂಘವೂ ನೌಕರರ ಸಂಘದ ಭಾಗ ಎಂಬುದನ್ನು ತೋರಿಸಿಕೊಟ್ಟಿದ್ದರು.
ನೌಕರರ ಸಂಘಕ್ಕೆ ಜಮೀನು ಪಡೆಯಲು ಪ್ರಯತ್ನ, ನೌಕರರ ಸಮಸ್ಯೆ ಆಲಿಸಲು ಜಂಟಿ ಸಮಾಲೋಚನಾ ಸಮಿತಿ ರಚನೆಗೆ ಒತ್ತು ಮತ್ತಿತರ ಚಟುವಟಿಕೆಗಳ ಮೂಲಕ ನೌಕರರ ಗಮನ ಸೆಳೆದಿದ್ದರು.
ಇದೀಗ ರಾಜ್ಯಾಧ್ಯಕ್ಷರು ಗೊಂದಲಗಳಿಗೆ ತೆರೆ ಎಳೆದಿರುವುದರಿಂದ ಭಿನ್ನರಾಗ ತೆಗೆದಿದ್ದವರನ್ನು ಸೇರಿದಂತೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದೊಯ್ದು, ನೌಕರರ ಸಂಘವನ್ನು ಮತ್ತಷ್ಟು ಬಲಗೊಳಿಸುವ ಜವಾಬ್ದಾರಿ ಸುರೇಶ್‍ಬಾಬು ಹೆಗಲೇರಿದ್ದು, ಇನ್ನಾದರೂ ಇಂತಹ ಗೊಂದಲದ ಹೇಳಿಕೆಗಳಿಗೆ ಕೊನೆಯಾಡಿ ಸಂಘ ಸರಿದಾರಿಯಲ್ಲಿ ಸಾಗಲಿ ಎಂಬುದು ನೌಕರರ ಆಶಯವಾಗಿದೆ.

ಕೆಜಿಎಫ್‍ಗೆ ಪ್ರತ್ಯೇಕ ಎಪಿಎಂಸಿ,ಟಿಎಪಿಸಿಎಂಎಸ್.ಪಿಸಿಆರ್‍ಡಿ ಬ್ಯಾಂಕ್‍ಗೆ ಶಾಸಕಿ ರೂಪ ಶಶಿಧರ್ ಮನವಿಗೆ ಸಚಿವ ಸೋಮಶೇಖರ್ ಸ್ಪಂದನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಪ್ರತ್ಯೇಕ ತಾಲ್ಲೂಕು ಆಗಿರುವ ಕೆಜಿಎಫ್‍ಗೆ ಕೂಡಲೇ ಎಪಿಎಂಸಿ, ಟಿಎಪಿಸಿಎಂಎಸ್ ಹಾಗೂ ಪಿಸಿಆರ್‍ಡಿ ಬ್ಯಾಂಕ್‍ಅನ್ನು ಪ್ರತ್ಯೇಕಗೊಳಿಸಿ ಮಂಜೂರು ಮಾಡುವಂತೆ ಶಾಸಕಿ ರೂಪಕಲಾ ಶಶಿಧರ್ ಮಾಡಿದ ಮನವಿಗೆ ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಸ್ವಷ್ಟ ಭರವಸೆ ಸಿಕ್ಕಿದೆ.
ಮಂಗಳವಾರ ಸಚಿವರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುವ ಅವರು, ಕೆಜಿಎಫ್‍ಅನ್ನು ಹೊಸ ತಾಲ್ಲೂಕಾಗಿ ಘೋಷಿಸಿ 4 ವರ್ಷ ಉರುಳಿದೆ, ಇನ್ನೂ ತಾಲ್ಲೂಕಿನಲ್ಲಿ ಇರಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ,ತಾಲ್ಲೂಕು ಸೊಸೈಟಿ, ಪಿಸಿಆರ್‍ಡಿ ಬ್ಯಾಂಕ್ ಪ್ರತ್ಯೇಕಗೊಳಿಸಿಲ್ಲ ಎಂದು ಸಚಿವರ ಗಮನಕ್ಕೆ ತಂದರು.


50 ಎಕರೆ ಜಾಗಕ್ಕೆ ಸಚಿವರಿಗೆ ಮನವಿ


ಗಡಿ ತಾಲ್ಲೂಕಾಗಿದ್ದು, ಇಲ್ಲಿ ಹೆಚ್ಚಿನ ತರಕಾರಿ ಬೆಳೆಯಲಾಗುತ್ತಿದೆ, ಇಲ್ಲೊಂದು ದೊಡ್ಡ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸುವ ಮೂಲಕ ಇಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಕೋಲಾರಕ್ಕೆ ಸಾಗಿಸುವ ಸಾಗಾಣಿಕಾ ವೆಚ್ಚ ತಗ್ಗಿಸುವ ಅಗತ್ಯವೂ ಇದೆ ಎಂದು ಮನವರಿಕೆ ಮಾಡಿಕೊಟ್ಟರು.
ಎಪಿಎಂಸಿ ಮಾರುಕಟ್ಟೆಯನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲು ಅಗತ್ಯವಾಗುವಂತೆ 50 ಎಕರೆ ಜಮೀನು ಗುರುತಿಸಿ ಮಂಜೂರು ಮಾಡುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.


ಕೋಲಾರ ಎಪಿಎಂಸಿವಿಸ್ತರಣೆಗೆ ಮನವಿ


ಇದೇ ಸಂದರ್ಭದಲ್ಲಿ ಕೋಲಾರ ಎಪಿಎಂಸಿ ಕುರಿತು ಗಮನ ಸೆಳೆದ ರೂಪಕಲಾ ಶಶಿಧರ್, ಕೋಲಾರ ಟಮೋಟೋ ಮಾರುಕಟ್ಟೆ ಏಷ್ಯಾದಲ್ಲೇ ದೊಡ್ಡದೆಂಬ ಖ್ಯಾತಿ ಇದೆ, ಆದರೆ ಟಮೋಟೋ ಸೀಸನ್ ಬಂದರೆ ಜಾಗವಿಲ್ಲದೇ ಎಲ್ಲೆಂದರಲ್ಲಿ ಟಮೋಟೋ ರಾಶಿಗಳು, ವಾಹನಗಳ ಒತ್ತಡದಿಂದಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.
ಟಮೋಟೋ ಸೀಸನ್ ಆಗಿರುವ ಈಗ ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದಾನೆ, ಒಂದೆರಡು ದಿನಗಳಿಂದ ಬೆಲೆ ಸ್ವಲ್ಪಮಟ್ಟಿಗೆ ಸುಧಾರಣೆಯತ್ತ ಸಾಗಿದೆ, ಆದರೆ ಮಾರುಕಟ್ಟೆಯಲ್ಲಿ ಜಾಗವಿಲ್ಲದೇ ರೈತರು,ವ್ಯಾಪಾರಿಗಳಿಗೆ ತೊಂದರೆಯಾಗಿದೆ ಎಂದರು.
ಈ ಮಾರುಕಟ್ಟೆಗೆ ತಾವೇ ಖುದ್ದು ಭೇಟಿ ಕೊಟ್ಟು ಮಾರುಕಟ್ಟೆ ವಿಸ್ತರಣೆಗೆ ಕೂಡಲೇ ತಾತ್ಕಾಲಿಕ ಪರಿಹಾರ ನೀಡಿ, ನಂತರ 100 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕೆಜಿಎಫ್‍ಗೆ ಎಪಿಎಂಸಿ
ಸಚಿವರ ಭರವಸೆ
ಮನವಿಗೆ ಸ್ಪಂದಿಸಿದ ಸಚಿವ ಸೋಮಶೇಖರ್, ಕೃಷಿಉತ್ಪನ್ನ ಮಾರಾಟ ಇಲಾಖೆ ಪ್ರಧಾನ ಕಾರ್ಯದರ್ಶಿ ಕರೀಗೌಡರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಕೆಜಿಎಫ್‍ನಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಪಿಸಿಆರ್‍ಡಿ ಬ್ಯಾಂಕ್ ಹಾಗೂ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಸ್ಥಾಪನೆ ಕುರಿತು ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕುಡಿಯಲು ನೀರು ಸಿಗದೇ ಬಾಯಾರಿಕೆಯಿಂದ 5 ವರ್ಷದ ಬಾಲಕಿಯ ದಾರುಣ ಸಾವು!

JANANUDI.COM NETWORK

ಜೈಪುರ,ಜೂ.8: ಸಾವು ಯಾರಿಗೆ ಯಾವ ವಿಧದಲ್ಲಿ ಬರುತ್ತೆ ಎಂದು ಹೇಳಸಾಧ್ಯ, ಸಾವು ಕೆಲವೊಂದು ಸಲ ಎಂತಹ ಕಠೋರ ಬರುತ್ತದೆ ಎಂಬುದಕ್ಕೆ ರಾಜಸ್ಥಾನದ ಈ ಘಟನೆಯೇ ಸಾಕ್ಸಿಯಾಗಿದೆ. ನೆಂಟರ ಮನೆಗೆ ತೆರಳುತ್ತಿದ್ದ 5 ವರ್ಷದ ಬಾಲಕಿ ದಾರಿ ಮಧ್ಯದಲ್ಲಿ ಕುಡಿಯಲು ನೀರು ಸಿಗದೇ ಬಾಯಾರಿಕೆಯಿಂದ ವಿಲ ವೀಲನೆ ನರಳಿ ಸಾವನ್ನಪ್ಪಿದ್ದಾಳೆ.   

     ರಾಜಸ್ಥಾನದ ಜಲೋರ್ ಜಿಲ್ಲೆಯ ರಾಣಿವಾರಾದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಐದು ವರ್ಷದ ಬಾಲಕಿ ಬಾಯಾರಿಕೆಯಿಂದ ಸಾವನ್ನಪ್ಪಿದ್ದರೆ, ಆಕೆಯ  ಅಜ್ಜಿ ಬಾಯರಿಕೆಯಿಂದ ಪ್ರಜ್ಞಾಹೀನ ಬಿದ್ದಿರುವ ಸ್ಥಿತಿಯಲ್ಲಿದ್ದಳು,  ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

     ಸುದ್ದಿ ಮೂಲಗಳ ಪ್ರಕಾರ ಇಲ್ಲಿನ ರೋಡಾ ಗ್ರಾಮದಲ್ಲಿರುವ ಕುಟುಂಬ ಸದಸ್ಯರನ್ನು ನೋಡಲು ಸುಖಿ (60 ವರ್ಷ) ಮತ್ತು ಅವರ ಮೊಮ್ಮಗಳು ಮಂಜು (5 ವರ್ಷ) ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿರುವಾಗ ಅವರಿಗೆ ಬಾಯಾರಿಕೆಯಾಗಿದೆ ಆದರೆ ಸ್ಥಳವು ಜನವಸತಿ ಇಲ್ಲದ ಕಾರಣ ಸುತ್ತಲೂ ನೀರು ಸಿಗಲಿಲ್ಲ. ಈ ವೇಳೆ ಅಜ್ಜಿ ಮೊಮ್ಮಗಳು ಇಬ್ಬರೂ ರಸ್ತೆಯಲ್ಲಿ ನಿತ್ರಾಣರಾಗಿದ್ದಾರೆ.

     ಇದನ್ನು ದೂರದಲ್ಲಿ ಕುರಿ ಮೇಯಿಸುತ್ತಿದ್ದ ಕೆಲವರು ಗಮನಿಸಿ ಓಡಿ ಬಂದು ಇಬ್ಬರನ್ನೂ ಆರೈಕೆ ಮಾಡಿದ್ದಾರೆ. ಅಲ್ಲದೇ ಗ್ರಾಮದ ಸರ್ಪಂಚ್ ಗೆ ಮಾಹಿತಿ ನೀಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಥಮ ಚಿಕಿತ್ಸೆ  ನೀಡಿ ಆಸ್ಪತ್ರೆಗೆ ರವಾನಿಸಲು ಪ್ರಯತ್ನಿಸುತ್ತಿರುವಾಗಲೇ 5 ವರ್ಷದ ಮಂಜುವಿನ ಪ್ರಾಣ ಪಕ್ಷಿ ಹಾರಿ ಹೋಗಿದೆ.

     ಇನ್ನು ಅಜ್ಜಿ ಸುಖಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆಕೆ ಕೂಡ ದೇಹದ ನಿರ್ಜಲೀಕರಣ ಸಮಸ್ಯೆಯಿಂದ ಗಂಭೀರರಾಗಿದ್ದಾರೆ ಎಂದು ಸ್ಥಳೀಯ ಎಸ್ ಎಚ್ ಒ (ಆರೋಗ್ಯಾಧಿಕಾರಿ) ಮಾಹಿತಿ ನೀಡಿದ್ದಾರೆ.

ಇದೇ ವಿಚಾರವಾಗಿ ಮಾಹಿತಿ ನೀಡಿರುವ ಇಲ್ಲಿನ ಸ್ಟೇಷನ್ ಹೌಸ್ ಅಧಿಕಾರಿ ಪದ್ಮಾ ರಾಮ್ ಅವರು, ಕುರಿ ಕಾಯುವ ಹುಡುಗರು ಈ ಬಗ್ಗೆ ಮಾಹಿತಿ ನೀಡಿದಾಗ ಕೂಡಲೇ ನಮ್ಮ ತಂಡ ಸ್ಥಳ ತಲುಪಿತ್ತು. ಅದು ಕುರುಚಲು ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿಗೆ ವಾಹನಗಳಲ್ಲಿ ತೆರಳಲು ಅಸಾಧ್ಯವಾದ ಪ್ರದೇಶವಾಗಿದ್ದರಿಂದ. ನಾವು  ನಡೆದುಕೊಂಡೇ ವೇಗವಾಗಿ ಘಟನಾ ಸ್ಥಳ ತಲುಪಿದೆವು.

    ಆದರೆ ಅಷ್ಟು ಹೊತ್ತಿಗಾಗಲೇ ಅಜ್ಜಿ ಮತ್ತು ಮಗು ನಿತ್ರಾಣರಾಗಿದ್ದರು. ನಾವು ಪ್ರಥಮ ಚಿಕಿತ್ಸೆ ನೀಡಿ ಅಜ್ಜಿಗೆ ನೀರು ಕುಡಿಸಿದೆವು. ಬಳಿಕ ಇಬ್ಬರನ್ನೂ ಆಸ್ಪತ್ರೆ ಸಾಗಿಸುವಾಗ ಬಾಲಕಿ ಮೃತಪಟ್ಟಿದ್ದಾಳೆ. ಅಜ್ಜಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದ್ದಾರೆ. 

ಮಾವ ಅದೂ ಕುರುಡ, ತನ್ನ ಸೊಸೆಯನ್ನು 80,000 ರೂಪಾಯಿಗೆ ಮಾರಿದ

JANANUDI.COM NETWORK

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಮೀಪದ ಬರಾಬಂಕಿಯಲ್ಲಿ ಒಬ್ಬ ಮಾವ ಅದೂ ಕುರುಡ, ತನ್ನ ಸೊಸೆಯನ್ನು 80,000 ರೂಪಾಯಿಗೆ ಮಾರಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನಿಗೆ ಇದು ತಿಳಿದು ಅವನು ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಪೊಲೀಸರು ಎಫ್ಐಆರ್ ದಾಖಲಿಸಿ ಬಂದಿಸಿದ್ದಾರೆ

     ಪ್ರಕರಣ ಬರಾಬಂಕಿಯ ರಾಮನಗರ ತಹಸಿಲ್ ಸಮೀಪದಲ್ಲಿರುವ ಮಲ್ಲಾಪುರ ಗ್ರಾಮದಲ್ಲಾಗಿದೆ.. ಇಲ್ಲಿ ವಾಸವಾಗಿರುವ ಚಂದ್ರರಾಮ್ ವರ್ಮಾ ಅವರ ಪುತ್ರ ಪ್ರಿನ್ಸ್ 2019 ರಲ್ಲಿ ಅಸ್ಸಾಮಿ ಹುಡುಗಿಯನ್ನು ಮದುವೆಯಾದರು.ಇದು ಪ್ರೇಮ ವಿವಾಹವಿತ್ತು, ಅವರು ಆನ್‌ಲೈನ್ ಮೂಲಕ ಪರಿಚಯ ಆಗಿ ಮದುವೆಯಾದರು. ಮದುವೆಯ ನಂತರ ಇಬ್ಬರೂ ಸಂತೋಷದ ಜೀವನವನ್ನು ನಡೆಸುತ್ತಿದ್ದರು.

   ನಂತರ ಪ್ರಿನ್ಸ್ ತನ್ನ ಹೆಂಡತಿಯೊಂದಿಗೆ ಗಾಜಿಯಾಬಾದಿನಲ್ಲಿ ವಾಸಿಸಲು ಹೋಗಿದ್ದನು. ಅಲ್ಲಿ ಆತ ಟ್ಯಾಕ್ಸಿ ಓಡಿಸುತ್ತಿದ್ದ. ಇತನ್ಮಧ್ಯೆ, ಹಣದ ಆಮಿಷಕ್ಕೊಳಗಾದ ಅಂಧ ಮಾವ ಚಂದ್ರರಾಮ್ ತನ್ನ ಸೊಸೆಯನ್ನು 80,000 ಕ್ಕೆ ಮಾರಾಟ ಮಾಡಲು ಸಂಚು ಮಾಡಿದ. ಅದಕ್ಕಾಗಿ ಒಂದು ನೆಪ ಮಾಡಿ ಅವನು ಜೂನ್ 4 ರಂದು ಮಗನ ಹೆಂಡತಿಯನ್ನು ಮನೆಗೆ ಕರೆಸಿದ ಮತ್ತು ಯೋಜನೆಯಂತ್ತೆ ರಾಮು ಗೌತಮ್ ಎಂಬವನಿಂದ ಗುಜರಾತ್ ಯುವಕರಾದ ಸಾಹಿಲ್ ಮತ್ತು ಅವರ ಕುಟುಂಬವನ್ನು ಬರಾಬಂಕಿಗೆ ಕರೆಸಿ, ನಂತರ ಮಾರಟ ಮಾಡುವ ಒಪ್ಪಂದವನ್ನು  ಮಾಡಿ ಕೊಳ್ಳಲಾಯಿತು. ಇದೀಗ ಮಾವ ಮತ್ತು ಸಂಚು ರೂಪಿದವರನ್ನು ಪೊಲೀಸರು ಬಂದಿಸಿದ್ದಾರೆ