HOLY ROSARY CHURCH, KUNDAPUR – 450 th JUBILEE SOUVENIR 2021

ಕಠೋರ ಕೊರೊನಾಕ್ಕೆ ಖ್ಯಾತ ‘ದಲಿತ ಕವಿ’ ನಾಡೋಜ ಡಾ.ಸಿದ್ದಲಿಂಗಯ್ಯ ಬಲಿ

ಬೆಂಗಳೂರು. ಜೂ.11: ಕಠೋರ ಕೊರೊನಾ ಸೋಂಕು ಹಲವಾರು ಖ್ಯಾತ  ನಾಮರನ್ನು ಬಲಿ ತೆಗೆದುಕೊಂಡಿದೆ, ಇದೀಗ  ಖ್ಯಾತ ಕವಿ, ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯರನ್ನು ಕೊರೊನಾ ಬಲಿಪಡೆದಿದೆ.

ನಗರದಖಾಸಗಿಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತ್ತಿದ್ದಕವಿ, ಸಾಹಿತಿಡಾ.ಸಿದ್ದಲಿಂಗಯ್ಯಅವರುಚಿಕಿತ್ಸೆಫಲಕಾರಿಯಾಗದೇ ಅಸು ನೀಗಿದ್ದಾರೆ.

   ಕನ್ನಡದಲೇಖಕರಲ್ಲಿಪ್ರಮುಖರಾದ 67 ವರ್ಷವಯಸ್ಸಿನಡಾ. ಸಿದ್ದಲಿಂಗಯ್ಯನವರು ‘ದಲಿತಕವಿ’ ಎಂದೇಪ್ರಸಿದ್ಧಿಪಡೆದಿದ್ದರು.

ವ್ಯಂಗಚಿತ್ರಕಾರ ಸತೀಶ್ ಆಚಾರ್ಯ ಇವರ ಚಿತ್ರ

    ಸಿದ್ಧಲಿಂಗಯ್ಯನವರುದಲಿತಹೋರಾಟಮತ್ತುಸಾಮಾಜಿಕಸಮಾನತೆಗಾಗಿಕಾವ್ಯಸಾಹಿತ್ಯಗಳನ್ನುಅಪಾರ ಮಟ್ಟದಲ್ಲಿರಚಿಸಿದ್ದು, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನಮುಂತಾದಪ್ರಕಾರಗಳಲ್ಲಿಸಾಹಿತ್ಯರಚನೆಮಾಡಿದ್ದಾರೆ. ಅವರ ಸಾವು ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಶ್ಟ ಉಂಟಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ನಾಳೆ ಕುಂದಾಪುರದಲ್ಲಿ ಕಾಂಗ್ರೆಸಿನಿಂದ ಪ್ರತಿಭಟನೆ

JANANUDI.COM NETWORK

ಕೋವಿಡ್-19 ಮಹಾಮಾರಿಯ ಹಿಡಿತಕ್ಕೆ ಸಿಕ್ಕಿ ಸಂಕಷ್ಟದಲ್ಲಿರುವ ಜನಸಾಮಾನ್ಯರ ದುಸ್ಥಿತಿಯ ನಡುವೆ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ದಿನೇ ದಿನೇ ಏರಿಸುತ್ತಿದೆ. ಇದರ ವಿರುದ್ಧ ಕೆಪಿಸಿಸಿ ಸೂಚನೆಯಂತೆ ನಾಳೆ (12.6.2021 ಶನಿವಾರ)
ಬೆಳಿಗ್ಗೆ 9.00 ಗಂಟೆಗೆ ಕುಂದಾಪುರ ಸರಕಾರಿ ಆಸ್ಪತ್ರೆ ಬಳಿಯ HP Petrol ಪಂಪ್ ಎದುರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪಕ್ಷದ ಮುಖಂಡರು ,ಜನಪ್ರತಿನಿಧಿಗಳು ,ಪದಾಧಿಕಾರಿಗಳು ,ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಯಶಸ್ವಿ ಗೊಳಿಸಬೇಕಾಗಿ ವಿನಂತಿ

ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ರೂ.4.50 ಕೋಟಿ ವೆಚ್ಚದ ಅಭಿವೃದ್ಧಿ ಟೆಂಡರ್ ಪ್ರಕ್ರಿಯೆ ಅವ್ಯವಹಾರ ಲೋಕಾಯುಕ್ತ ತನಿಖೆಗೆ ಒಳಪಡಿಸಿ : ಎನ್.ರಾಜೇಂದ್ರ ಪ್ರಸಾದ್

JANANUDI.COM NETWORK

ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ರೂ.4.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ನಡೆಯಲಾಗಿರುವ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎನ್.ರಾಜೇಂದ್ರ ಪ್ರಸಾದ್ ಆಗ್ರಹಿಸಿದರು.
ಎಪಿಎಂಸಿ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಅವಧಿಯಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕೆ ರೂ.4.50 ಕೋಟಿ ವಿಶೇಷ ಅನುದಾನ ಮಂಜೂರಾಗಿತ್ತು. ಆದರೆ ಎಪಿಎಂಸಿ ಹಾಲಿ ಅಧ್ಯಕ್ಷ ಎಸ್.ಸಿ.ರಮೇಶ್ ಅವರ ಅವಧಿಯಲ್ಲಿ, ಆಡಳಿತ ಮಂಡಳಿ ನಿರ್ದೇಶಕರ ಗಮನಕ್ಕೆ ತರದೆ ಟೆಂಡರ್ ಕರೆದು ಶೇಕಡಾವಾರು ಹೆಚ್ಚು ನಮೂದಿಸಿರುವ ಗುತ್ತಿಗೆ ದಾರರ ಟೆಂಡರ್ ಅನುಮೋದಿಸಲಾಗಿದೆ ಎಂದು ಆಪಾದಿಸಿದರು.
ಎಪಿಎಂಸಿ ಪ್ರಾಂಗಣದಲ್ಲಿ ಎರಡು ನಿವೇಶನಗಳನ್ನು ಹಣ ಪಡೆದು ನೋಂದಾವಣೆ ಮಾಡಿಕೊಡಲಾಗಿದೆ. ಪ್ರಾಂಗಣದ ಮೂರು ಎಕರೆ ಜಮೀನನ್ನು ಕೆಲವರು ಒತ್ತುವತಿ ಮಾಡಿಕೊಂಡಿದ್ದರು. ನನ್ನ ಅವಧಿಯಲ್ಲಿ ಅವರನ್ನು ತೆರವುಗೊಳಿಸಲಾಗಿತ್ತು. ಆದರೆ ಈಗ ಒತ್ತುವರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ವಿಷಯದಲ್ಲಿಯೂ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸಮಗ್ರ ತನಿಖೆ ನಡೆಸಿ ಎಪಿಎಂಸಿ ಜಮೀನು ಉಳಿಸಬೇಕು. ಅಮೂಲ್ಯವಾದ ಜಮೀನು ಪ್ರಭಾವಿಗಳ ಪಾಲಾಗುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ವಿನಾಕಾರಣ ಎಪಿಎಂಸಿ ವ್ಯವಹಾರದಲ್ಲಿ ಅನಗತ್ಯವಾಗಿ ತಲೆ ಹಾಕುತ್ತಿದ್ದಾರೆ. ಹಾಲಿ ಅಧ್ಯಕ್ಷರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನನ್ನ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ, ನಂಬಿಕೆ ದ್ರೋಹದ ಆಪಾದನೆ ಮಾಡಿದ್ದಾರೆ. ಅದು ಸತ್ಯಕ್ಕೆ ದೂರವಾದ ಎಂದು ಎಂದು ಹೇಳಿದರು.
ಮುಖಂಡರಾದ ಅಶೋಕರೆಡ್ಡಿ, ನಾರಾಯಣಸ್ವಾಮಿ, ಅಶೋಕ್ ಕುಮಾರ್, ಶ್ರೀನಿವಾಸರೆಡ್ಡಿ, ನಾರಾಯಣಸ್ವಾಮಿ ಇದ್ದರು.

ರಾಜ್ಯದಲ್ಲಿ ಲಾಕ್ ಡೌನ್ ನಿರ್ಬಂಧಗಳಲ್ಲಿ ಬದಲಾವಣೆ: 11 ಜಿಲ್ಲೆಗಳಲ್ಲಿ ಪೂರ್ಣ ಲಾಕ್, 19 ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್ ಜಾರಿ

ಬೆಂಗಳೂರು,ಜೂ. 10 : ರಾಜ್ಯದ ಕೆಲವು ಭಾಗಗಳಲ್ಲಿ ಕೋವಿಡ್-19 ಸೋಂಕು ಪ್ರಸರಣ  ಇಳಿಕೆಯಾಗುತ್ತಿದ್ದು, ಜೂನ್ 10 ರಂದು ಸಿಎಂ ಯಡಿಯೂರಪ್ಪ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಪರಿಷ್ಕೃತ ಮಾಡಿ ನಿಯಮಗಳನ್ನು ಪ್ರಕಟಿಸಿದ್ದಾರೆ. 

    “ಕೋವಿಡ್-19 ತಡೆ ನಿಟ್ಟಿನಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳ ಮೇರೆಗೆ ಈಗಿರುವ ನಿರ್ಬಂಧಗಳಲ್ಲಿ ಕೆಲವು ಮಾರ್ಪಾಡು ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ” ಎಂದು ಸಿಎಂ ಮಾಹಿತಿ ನೀಡಿದ್ದಾರೆ. 

    ಪರಿಷ್ಕೃತ ನೀತಿಯ ಪ್ರಕಾರವಾಗಿ ರಾಜ್ಯದ 11 ಜಿಲ್ಲೆಗಳಲ್ಲಿ ಮತ್ತೆ  ಪೂರ್ಣ ಪ್ರಮಾಣದ ಲಾಕ್ ಡೌನ್ ಮುಂದುವರೆಸಿ ಉಳಿದ 19 ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್ ನ್ನು ಘೋಷಣೆ ಮಾಡಲಾಗಿದೆ. ಇದೇ ವೇಳೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.  

    ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಅನ್ವಯವಾಗುವಂತೆ ಈಗಿರುವಂತೆ ಮಾರ್ಗಸೂಚಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರದೆ, ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ಗೆ ಸಂಬಂಧಿಸಿದ ನಿಯಮಗಳು ಯಥಾಸ್ಥಿತಿ ಮುಂದುವರೆಯುತ್ತದೆ. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ಇನ್ನೂ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ ಎಂದು ಸಿಎಂ.  ತಿಳಿಸಿದ್ದಾರೆ . 

    ಉಳಿದ ಜಿಲ್ಲೆಗಳಲ್ಲಿ ಪರಿಷ್ಕೃತ ನಿಯಮಗಳು ಜೂನ್ 14 ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ ಜೂನ್ 21ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಕೋವಿಡ್-19 ಪ್ರಸರಣ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಸಡಿಲಿಕೆಯಾದ ನಿರ್ಬಂಧಗಳ ಬಗ್ಗೆ ಮಾಹಿತಿ ಕೆಳಗೆ ಕಾಣುವಂತೆ ಇದೆ

  1. ಎಲ್ಲಾ ಕಾರ್ಖಾನೆಗಳನ್ನು ಶೇ. 50 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ಇದೆ. ಆದರೆ, ಗಾರ್ಮೆಂಟ್ ಕೈಗಾರಿಕೆಗಳಿಗೆ ಮಾತ್ರ ಶೇ. 30 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ. 
  2. ಎಲ್ಲಾ ಅಗತ್ಯ ಪದಾರ್ಥ ಖರೀದಿಸುವುದಕ್ಕೆ ಅನುವು ಮಾಡಿಕೊಡಲು ಅಂಗಡಿಗಳನ್ನು ಈಗಿರುವ ಸಮಯ ಬೆಳಿಗ್ಗೆ 6 ರಿಂದ 10 ಗಂಟೆಯನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ.
  3. ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ಹಾಗೂ ನಿರ್ಮಾಣ ಚಟುವಟಿಕೆ ಸಂಬಂಧಿಸಿದ ಅಂಗಡಿಗಳನ್ನು ವಿಶೇಷವಾಗಿ ಸಿಮೆಂಟ್ ಹಾಗೂ ಸ್ಟೀಲ್ ಅಂಗಡಿಗಳನ್ನು ತೆರೆಯಲು ಅವಕಾಶ. 
  4. ಪಾರ್ಕ್ ಗಳಲ್ಲ್ ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ಅವಕಾಶ .
  5. ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ
  6. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. 
  7. ಕೋವಿಡ್ ಕರ್ಫ್ಯೂ ರಾತ್ರಿ 7 ಗಂಟೆಯಿಂದ ಬೆಳಿಗ್ಗ 5 ಗಂಟೆಯವರೆಗೆ ಜಾರಿಯಲ್ಲಿ ಇರುತ್ತದೆ. 

ರಾಜ್ಯಾದ್ಯಂತ ವಾರಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ

ರೆಡ್ ಕ್ರಾಸ್ ಕುಂದಾಪುರ-ತಾಲೂಕು ಆಫೀಸಿನ ಕಂದಾಯ ಇಲಾಖೆಯ 35 ಜನ ಸಹಾಯಕರಿಗೆ ರೇಶನ್ ಕಿಟ್

JANANUDI.COM NETWORK

ಕುಂದಾಪುರ,ಜೂ.10: ಈ ದಿನ ಭಾರತೀಯ ರೆಡ್ ಕ್ರಾಸ್ ಕುಂದಾಪುರ ತಾಲೂಕು ಶಾಖೆ, ತಾಲೂಕು ಆಫೀಸಿನಲ್ಲಿ ಕಂದಾಯ ಇಲಾಖೆಯ 35 ಜನ ಸಹಾಯಕರಿಗೆ ರೇಶನ್ ಕಿಟ್ ( Dry ration kit) ನ್ನು ನೀಡಲಾಯಿತಯ. ಇದರ ಒಟ್ಟು ಬೆಲೆ ರೂ. 35000/- ಇದನ್ನು ರೆಡ್ ಕ್ರಾಸ್ ಸಂಸ್ಥೆಯ ಅದ್ಯಕ್ಷ ರಾದ ಸಹಾಯಕ ಕಮಿಷನರ್ ಶ್ರೀ ರಾಜು ಕೆ. ಇವರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸಭಾಪತಿ ಗಳಾದ ಶ್ರೀ ಎಸ್‌ ಜಯಕರ ಶೆಟ್ಟಿ, ಉಪಾಧ್ಯಕ್ಷ ರಾದ ಆನಂದಪ್ಪ ನಾಯಕ್ ( ತಶೀಲ್ದಾರರು), ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ, ಕಂದಾಯ ಅಧಿಕಾರಿ ದಿನೇಶ್ ಹಾಜರಿದ್ದರು.

ಮಕ್ಕಳಲ್ಲಿ ಕೊರೋನಾ ಬಂದರೆ ಏನು ಮಾಡಬೇಕು? ಮುನ್ನೆಚ್ಚರಿಕೆಯ ಬಗ್ಗೆ ಕೇಂದ್ರದಿಂದ ಮಾರ್ಗಸೂಚಿ

JANANUDI.COM NETWORK

ಕೊರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆ ದೇಶದಲ್ಲಿ ನಿಧಾನವಾಗಿ ಇಳಿಕೆಯಾಗುತ್ತಿದೆ. ಇದೇ ಹೊತ್ತಿಗೆ ಕೊರೋನಾ ಮೂರನೇ ಅಲೆ ಏಳುವ ಆತಂಕ ದೇಶವನ್ನು ಕಾಡುತ್ತಿದೆ.ಅದಕ್ಕಾಗಿ ಮಕ್ಕಳಿಗೆ ಕೊರೊನಾ ಬಂದರೆ ಏನು ಮಾಡಬೇಕು, ಕೇಂದ್ರ ಮಾರ್ಗ ಸೂಚಿ ನೀಡಿದೆ

ನವದೆಹಲಿ ಜೂ. ೧೦: ಕೊರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆ ದೇಶದಲ್ಲಿ ನಿಧಾನವಾಗಿ ಇಳಿಕೆಯಾಗುತ್ತಿದೆ. ಇದೇ ಹೊತ್ತಿಗೆ ಕೊರೋನಾ ಮೂರನೇ ಅಲೆ ಏಳುವ ಆತಂಕ ದೇಶವನ್ನು ತೀವ್ರವಾಗಿ ಕಾಡುತ್ತಿದೆ.

     ಮೂರನೇ ಅಲೆಯ ವೈರಸ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. “ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವುದಿಲ್ಲ. ಇದಕ್ಕೆ ಯಾವುದೇ ಪುರಾವೆ ಸದ್ಯಕ್ಕೆ ದೊರೆತಿಲ್ಲ”  ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.

    ಆದರೂ ಮುಂಜಾಗ್ರತಾ ಕ್ರಮವಾಗಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೊರೊನಾ ಬಂದರೆ ಏನು ಮಾಡಬೇಕು, ಏನು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂಬುದಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್‌ಎಸ್) ಮಾರ್ಗಸೂಚಿ ಹೊರಡಿಸಿದ್ದು ಹಿಗೀದೆ

ರೆಮ್ಡೆಸಿವಿರ್ ಉಪಯೋಗಿಸುವಂತಿಲ್ಲ: ಮಕ್ಕಳಲ್ಲಿ ರೆಮ್ಡೆಸಿವಿರ್ ಬಳಕೆ ಮಾಡುವಂತಿಲ್ಲ ಹಾಗೂ ಎಚ್‌ಆರ್‌ಸಿಟಿ ಇಮೇಜಿಂಗ್‌ನ ತರ್ಕ ಬದ್ಧ ಬಳಕೆ ಮಾಡಬೇಕೆಂದು ಸೂಚನೆ ನೀಡಲಾಗಿದೆ.

ಸ್ಟೆರಾಯ್ಡ್ ಬಳಕೆ ಮಾಡುವಂತಿಲ್ಲ: ಇದರ ಪ್ರಕಾರ ಮಕ್ಕಳಲ್ಲಿ ಸೌಮ್ಯ ಲಕ್ಷಣಗಳಿರುವ ಹಾಗೂ ಲಕ್ಷಣರಹಿತ ಸೋಂಕಿನ ಪ್ರಕರಣದಲ್ಲಿ ಸ್ಟೆರಾಯ್ಡ್‌ಗಳ ಬಳಕೆ ಹಾನಿಕಾರಕವಾಗಬಹುದು ಎಂದು ತಿಳಿಸಿದೆ. ಗಂಭೀರ ಪ್ರಕರಣಗಳಲ್ಲಿ ಮಾತ್ರ, ಆಸ್ಪತ್ರೆಗೆ ಸೇರಿದ ಮಕ್ಕಳಿಗೆ ಸ್ಟೆರಾಯ್ಡ್‌ ಬಳಸಬಹುದು ಎಂದು ತಿಳಿಸಿದೆ.  ಸ್ಟಿರಾಯ್ಡಾನ್ನು ಸೂಕ್ತ ಸಮಯದಲ್ಲಿ, ಸೂಕ್ತ ಪ್ರಮಾಣದಲ್ಲಿ ನೀಡಬೇಕು..

5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್ ಬೇಡ: 

ಆರೋಗ್ಯ ಸೇವೆಗಳ ನಿರ್ದೇಶನಾಲಯ ಮಾರ್ಗಸೂಚಿ ಪ್ರಕಾರ, 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾಸ್ಕ್ ಹಾಕುವ ಅಗತ್ಯವಿಲ್ಲ. ಪೋಷಕರ ಮತ್ತು ವೈದ್ಯರ ನಿಗಾದ ಅಡಿಯಲ್ಲಿ 6ರಿಂದ 11 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸಬಹುದು.

ಪೋಷಕರು ತಾವೇ ಮಕ್ಕಳಿಗೆ ಮಾತ್ರೆಗಳನ್ನು ನೀಡುವಂತಿಲ್ಲ

ಪೋಷಕರು ತಾವೇ ಮಕ್ಕಳಿಗೆ ಮಾತ್ರೆಗಳನ್ನು ನೀಡುವಂತಿಲ್ಲ ಎಂದು ಹೇಳಿದೆ, ಎಚ್ ಆರ್ ಸಿಟಿ ಸ್ಕ್ಯಾನ್ ಅನ್ನು ಕೂಡ ಮಕ್ಕಳಿಗೆ ಸುಖಾ ಸುಮ್ಮನೆ ಬಳಸಬೇಡಿ ಎಂದು ಹೇಳಿದ್ದು, ಅತಿ ಅಗತ್ಯವಿದ್ದರೆ ಮಾತ್ರ, ಗಂಭೀರ ಪ್ರಕರಣದಲ್ಲಿ ಎಚ್‌ಆರ್‌ಸಿಟಿ ಸ್ಕ್ಯಾನ್ ಮಾಡಿಸಬಹುದು. ಇನ್ನೂ ಹೆಚ್ಚುವರಿ ಮಾಹಿತಿ ಆಧಾರದ ಮೇಲೆ ಚಿಕಿತ್ಸೆ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದೆ.

ಕೋವಿಡ್ ಸೂಕ್ತ ನಡವಳಿಕೆ ಮತ್ತು ಪೌಷ್ಟಿಕ ಆಹಾರವನ್ನು ಸೂಚಿಸಲಾಗಿದೆ

    ಮಕ್ಕಳಲ್ಲಿ ಕೊರೋನಾ ಸೋಂಕು ಲಕ್ಷಣರಹಿತವಾಗಿದ್ದು ಪಾಸಿಟಿವ್ ಇದ್ದರೆ, ಕೋವಿಡ್ ಸೂಕ್ತ ನಡವಳಿಕೆ ಮತ್ತು ಪೌಷ್ಟಿಕ ಆಹಾರವನ್ನು ಸೂಚಿಸಲಾಗಿದೆ, ಆದರೆ ಯಾವುದೇ ನಿರ್ದಿಷ್ಟ ಔಷಧಿಗಳನ್ನು ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿಲ್ಲ. ದೊಡ್ಡ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸೌಮ್ಯವಾದ ಸೋಂಕಿಗೆ, ಜ್ವರ ಮತ್ತು ಗಂಟಲು ನೋವು ಇದ್ದರೆ ಪ್ರತಿ ನಾಲ್ಕರಿಂದ ಆರು ಗಂಟೆಗಳಿಗೊಮ್ಮೆ ಪ್ಯಾರಸಿಟಮಾಲ್ ಡೋಸ್ ಮತ್ತು ಕೆಮ್ಮು ಇದ್ದರೆ ಬೆಚ್ಚಗಿನ ಲವಣಯುಕ್ತ ಗಾರ್ಗಲ್‌ಗಳನ್ನು ಮಾಡಿಕೊಳ್ಳಲು ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ. ಆದಾಗ್ಯೂ, ಮಧ್ಯಮ ಪ್ರಮಾಣದ ಸೋಂಕು ಲಕ್ಷಣ ಹೊಂದಿರುವ ಮಕ್ಕಳಿಗೆ ತಕ್ಷಣದ ಚಿಕಿತ್ಸೆಯನ್ನು ಪ್ರಾರಂಭಿಸಲು ಶಿಫಾರಸು ಮಾಡಲಾಗಿದೆ.

ಮಕ್ಕಳಿಗೆ 6 ನಿಮಿಷ ನಡಿಗೆ ಮಾಡಿಸಿ

 ತೀವ್ರವಾದ ಕೋವಿಡ್ -19 ಸೋಂಕಿತ ಮಕ್ಕಳಲ್ಲಿ ಉಸಿರಾಟದ ತೊಂದರೆ ಹೊಂದಿದ್ದರೆ, ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಮಾರ್ಗಸೂಚಿಗಳು ತಿಳಿಸಿವೆ. ಪೋಷಕರು ಅಥವಾ ಪಾಲಕರ ಮೇಲ್ವಿಚಾರಣೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಆರು ನಿಮಿಷಗಳ ನಡಿಗೆ ಸಹ ಇದು ಶಿಫಾರಸು ಮಾಡಿದೆ. ಮಕ್ಕಳಿಗೆ ಪಲ್ಸ್​ ಆಕ್ಸಿಮೀಟರ್ ಅಳವಡಿಸಿ 6 ನಿಮಿಷ ನಡಿಗೆಗೆ ಸೂಚಿಸಬೇಕು, 6 ನಿಮಿಷ ನಡಿಗೆಯ ಮೂಲಕ ದೇಹದ ಆಕ್ಸಿಜನ್ ಮಟ್ಟದ ಮೇಲೆ ನಿಗಾ ವಹಿಸಿ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ಕೊಡೀಸಬೇಕು ಎಂದು ಮಾರ್ಗಸೂಚಿ ನೀಡಿದೆ..

ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರಗಳ ಆಡಳಿತದಿಂದಾಗಿ ಜನರು ನಲುಗಿ ಹೋಗಿದ್ದಾರೆ :ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ , ಜೂ .9: ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರಗಳ ಆಡಳಿತದಿಂದಾಗಿ ಜನರು ನಲುಗಿ ಹೋಗಿದ್ದಾರೆ . ಮೋದಿ ಹೆಸರಿನ ಅನೇಕರು ಈಗಾಗಲೇ ಲೂಟಿ ಮಾಡಿ ದೇಶ ಬಿಟ್ಟಿದ್ದು , ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯೂ ದೇಶ ಬಿಟ್ಟು ಹೋಗಲಿದ್ದಾರೆ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಲೇವಡಿ ಮಾಡಿದರು . ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಅಲ್ಪಸಂಖ್ಯಾತರ ಘಟಕದಿಂದ ಆಯೋಜಿಸಿದ್ದ ಫುಡ್ ಡಿಸ್ಸಿಷನ್ ಡೇ ಅಂಗವಾಗಿ ಹಮ್ಮಿಕೊಂಡಿದ್ದ ಆಹಾರ ಪೊಟ್ಟಣ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ ೭ ಕೆಜಿ ಅಕ್ಕಿ ನೀಡುತ್ತಿದ್ದರು . ಆದರೆ ಅದು ಇಂದು ಅದು ೨ ಕೆಜಿಗೆ ಇಳಿಕೆಯಾಗಿದೆ . ಇದರೊಟ್ಟಿಗೆ ಪೆಟ್ರೋಲ್- ಡೀಸಲ್ಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಕ್ರಮೇಣ ಗಗನಕ್ಕೇರಿದ್ದು , ನರೇಂದ್ರ ಮೋದಿ ಜನರಿಗೆ ಸಹಾಯವಾಗುವ ಯಾವ ಕೆಲಸ ಮಾಡುತ್ತಿಲ್ಲ . ಅಚ್ಛೇ ದಿನ್ ಬದಲಿಗೆ ಜನರ ಮೇಲೆ ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು . ಕೊರೊನಾ ಕಂಟಕದ ಬಗ್ಗೆ ರಾಹುಲ್‌ಗಾಂಧಿ ಎಚ್ಚರಿಸಿ ಹೇಳಿದಾಗ ಅವರನ್ನು ನೋಡಿ ಅನೇಕರು ನಕ್ಕರು . ಆ ಬಳಿಕ ಅನುಭವಿಸಿದ ಕಷ್ಟ ಎಲ್ಲರೂ ನೋಡಿದ್ದೇವೆ . ಲಸಿಕೆ ವಿಚಾರದಲ್ಲೂ ತಾರತಮ್ಯ ಮಾಡಿದ ಹಿನ್ನಲೆಯಲ್ಲಿ ನ್ಯಾಯಾಲಯವೂ ಕೇಂದ್ರ ಹಾಗೂ ಬಿಜೆಪಿ ಸರಕಾರಕ್ಕೆ ಛೀಮಾರಿ ಹಾಕಿದೆ . ಇನ್ನು ಪಿಎಂ ಕೇರ್ ಫಂಡ್ ಅನ್ನು ಆರಂಭಿಸಿದರು ಅದರ ಲೆಕ್ಕ ಕೇಳಿದರೆ ಕೊಡುವವರೇ ಇಲ್ಲ .. ಕಣ್ಮರೆಸುವ ತಂತ್ರಕ್ಕೆ ಮಾತ್ರ ಸಿಎಂ ಯಡಿಯೂರಪ್ಪ ಪ್ಯಾಕೇಜ್‌ಗಳನ್ನು ಘೋಷಿಸಿದ್ದಾರೆ . ಆದರೆ , ಆಟೋ ಚಾಲಕರಿಗೆ ಬ್ಯಾಡ್ಸ್ ಕೇಳುತ್ತಾರೆ , ಕಟ್ಟಡ ಕಾರ್ಮಿಕರು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಹಾಕಬೇಕು ಎಂದು ಹೇಳುತ್ತಾರೆ , ಇವೆಲ್ಲವೂ ಗಿಮಿಕ್ ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದರು , ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು , ಮುಖಂಡರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ . ಇನ್ನಷ್ಟು ದಿನಸಿ ಕಿಟ್ ಗಳನ್ನು ನೀಡಲು ಕ್ರಮಕೈಗೊಳ್ಳುತ್ತೇವೆ . ಈಗಾಗಲೇ ಆಂಬ್ಯುಲೆನ್ಸ್ ನೀಡಿದ್ದು ಉತ್ತಮವಾಗಿ ಕೆಲಸ ಮಾಡುತ್ತಿವೆ . ಮೆಡಿಕಲ್ ಕಿಟ್ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು , ಜಿಲ್ಲಾ ಅಲ್ಪಸಂಖ್ಯಾತರ ಸಮಿತಿಯಿಂದ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು . ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಮಾತನಾಡಿ , ಬಿಜೆಪಿಯವರು ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ ಹೊರತು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ . ಆದರೆ ನಮ್ಮ ಕಾಂಗ್ರೆಸ್ ವತಿಯಿಂದ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ . ಬಿಜೆಪಿಯವರು ದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ . ಜನರಿಗೆ ಅರ್ಥ ಆಗುತ್ತಿಲ್ಲ . ಮುಂದಿನ ದಿನಗಳಲ್ಲಿ ಎಲ್ಲವೂ ಅರಿವಾಗುತ್ತದೆ . ನ್ಯಾಯಾಲಗಳು ಸಹ ಛೀಮಾರಿ ಹಾಕುತ್ತಿದ್ದು , ಜನರು ಎಚ್ಚೆತ್ತು ತಕ್ಕಪಾಠ ಕಲಿಸಬೇಕು ಎಂದ ಅವರು , ದಿನಸಿ ಊಟ ನೀಡುವ ವಿಚಾರದಲ್ಲಿ ಪಕ್ಷಬೇಧ ಮರೆತು ನೀಡಬೇಕು . ಕಾಂಗ್ರೆಸ್ ಒಂದು ಜಾತಿಗೆ ಸೀಮಿತವಲ್ಲ . ಹಾಗಾಗಿ ಎಲ್ಲರಿಗೂ ಸಹಾಯ ಮಾಡುತ್ತಿದೆ ಎಂದರು . ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಪ್ಯಾರೇಜಾನ್ , ಮಾತನಾಡಿ , ಕೆಪಿಸಿಸಿ ಮೈನಾರಿಟಿ ವಿಭಾಗದಿಂದ ಜೂನ್ ೯ ರಂದು ಫುಡ್ ಡಿಸ್ಟ್ರಿಬ್ಯೂಷನ್ ಡೇ ಎಂದು ಆಚರಣೆ ಮಾಡುತ್ತಿದ್ದು , ಅದರ ಅದರ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಮೂಲಕ ಸುಮಾರು ೫೦೦ ಮಂದಿಗೆ ಆಗುವಷ್ಟು ಊಟದ ವ್ಯವಸ್ಥೆಯನ್ನು ಮಾಡಿದ್ದು , ಅಲ್ಪಸಂಖ್ಯಾತರ ವಿಭಾಗದಲ್ಲಿ ತಮ್ಮೊಟ್ಟಿಗೆ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು . ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ , ಅಲ್ಪಸಂಖ್ಯಾತರ ಮುಖಂಡ ವಿಕಾಲ್ ಮಾತನಾಡಿದರು . ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಲತೀಫ್ , ಜನಾರ್ಧನ್ , ಜೆ.ಕೆ.ಜಯರಾಂ , ವೆಂಕಟಪತಪ , ತಬ್ರೇಜ್ , ಕೃಪೇಗೌಡ ಮತ್ತಿತರರಿದ್ದರು .

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷಸ್ಥಾನದಲ್ಲಿರುವ ಕಾಂಗ್ರೆಸ್ ಬೆಂಬಲಿತ ಪಕ್ಷದ ಎಸ್.ಸಿ. ರಮೆಶ್, ಉಪಾಧ್ಯಕ್ಷ ಜಿ.ಕೆ. ರಾಜಣ್ಣ ಆದ ನಮ್ಮನ್ನು ಈ ಸ್ಥಾನದಿಂದ ಕೆಳಗಿಳಿಸಲು ಪ್ರೇರೇಪಿಸಿದವರಿಗೆ ಮುಖಭಂಗ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷಸ್ಥಾನದಲ್ಲಿರುವ ಕಾಂಗ್ರೆಸ್ ಬೆಂಬಲಿತ ಪಕ್ಷದ ಎಸ್.ಸಿ. ರಮೆಶ್, ಉಪಾಧ್ಯಕ್ಷ ಜಿ.ಕೆ. ರಾಜಣ್ಣ ಆದ ನಮ್ಮನ್ನು ಈ ಸ್ಥಾನದಿಂದ ಕೆಳಗಿಳಿಸಲು ನಮ್ಮದೆ ಪಕ್ಷದ ಇಬ್ಬರು ನಿರ್ದೇಶಕರು ವಿರೋಧ ಪಕ್ಷದವರೊಂದಿಗೆ ಕೈ ಜೋಡಿಸಿ ಅವಿಶ್ವಾಸ ನಿರ್ಣಯಕ್ಕೆ ಸಜ್ಜಾಗಿ ಇವರನ್ನು ಪ್ರೇರೇಪಿಸಿದ ಸ್ವ ಪಕ್ಷದವರೇ ಆದ ಮಾಜಿ ಅಧ್ಯಕ್ಷ ರಾಜೇಂದ್ರಪ್ರಸಾದ್ ಇವರಿಗೆ ಮುಖಭಂಗವಾಗಿದೆ, ನಮ್ಮ ಸ್ಥಾನ ಮತ್ತಷ್ಟು ಗಟ್ಟಿಯಾಯಿತು ಎಂದು ಅಧ್ಯಕ್ಷ ಎಸ್.ಸಿ. ರಮೇಶ್ ಬಾಬು ತಿಳಿಸಿದರು.

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 8 ಮಂದಿ ಕಾಂಗ್ರೆಸ್ ಪಕ್ಷದ ಬೆಂಬಲಿತ ನಿರ್ದೇಶಕರಿದ್ದು, ಇವರಲ್ಲಿ ಜೆ.ಡಿ.ಎಸ್. ಪಕ್ಷದ  4 ಮಂದಿ ಇದ್ದು, ಇವರ ಜೊತೆಗೆ ಸರ್ಕಾರದ ನಾಮಿನಿ ನಿರ್ದೇಶಕರು 3 ಮಂದಿ ಇದ್ದು, ಆಡಳಿತ ಕಾಂಗ್ರೆಸ್ ಪಕ್ಷದ ಶಾಸಕ ಕೆ.ಆರ್. ರಮೇಶ್ ಕುಮಾರ್ ರವರ ಕಟ್ಟಾ ಅಭಿಮಾನಿಸೋಮಯಾಜಲಹಳ್ಳಿ ಎಸ್.ಸಿ. ರಮೇಶ್ (ಬಾಬು) ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಜಿ.ಕೆ. ರಾಜಣ್ಣ 3ನೇ ಅವಧಿಯಲ್ಲಿ ಆಡಳಿತ ಮಂಡಳಿ ಪಕ್ಷದ ಎಲ್ಲರ ಸಹಕಾರದಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ  ಪಡೆದಿದ್ದರು.

ಇತ್ತೀಚೆಗೆ 2ನೇ ಅವಧಿಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿದ್ದ ಎಂ. ರಾಜೇಂದ್ರಪ್ರಸಾದ್ (ಪೆದ್ದರೆಡ್ಡಿ) ಇವರು ಶಾಸಕರ ಬೆಂಬಲಿಗರಾಗಿದ್ದು 20 ತಿಂಗಳು ಎ.ಪಿ.ಎಂ.ಸಿ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಿದ ಇವರು ಪ್ರಸ್ಥುತ ಬಂಡಾಯ ಎದ್ದು, ವಿರೋಧ ಪಕ್ಷದ 4 ಮಂದಿ ನಿರ್ದೇಶಕರೊಂದಿಗೆ ಕೈ ಜೋಡಿಸಿ ಪ್ರಸ್ಥುತ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಉಪಾಧ್ಯಕ್ಷರನ್ನು ಕೆಳಗಿಳಿಸಲು ಅಧ್ಯಕ್ಷ ಸ್ಥಾನಕ್ಕೆ ನಕ್ಕಲಗಡ್ಡ ಕೆ. ನಾರಾಯಣಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಕುಮಾರ್ ಜೆ.ಡಿ.ಎಸ್. ಬೆಂಬಲಿತ ನಿರ್ದೇಶಕರಾದ ಇವರು ಆಕಾಂಕ್ಷಿಗಳಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರು. 

ಇವರಿಗೆ ಬೆಂಬಲವಾಗಿ ಕಾಂಗ್ರೆಸ್ ಪಕ್ಷದ ಎನ್. ರಾಜೇಂದ್ರ ಪ್ರಸಾದ್ , ಕೆ.ವಿ ರೂಪಾವತಿ ಮತ್ತು ಜೆ.ಡಿ.ಎಸ್. ಪಕ್ಷದ ಟಿ.ವಿ. ನಾರಾಯಣರೆಡ್ಡಿ, ಅತಾವುಲ್ಲಾ ಖಾನ್ ಸರ್ಕಾರದ ನಾಮಿನಿ ಸದಸ್ಯರಾದ ಅಶೋಕ್ ರೆಡ್ಡಿ, ಶಿವಮ್ಮ ಇವರು ಬೆಂಬಲ ಸೂಚಿಸಿದ್ದ ಇವರು ಇಂದು ನಡೆದ ಅವಿಶ್ವಾಸ ನಿರ್ಣಯ ಸಭೆಗೆ ಇವರಾರು ಕೂಡ ಹಾಜರಾಗದೆ ಪ್ರಸ್ತುತ ಅಧ್ಯಕ,್ಷ ಉಪಾಧ್ಯಕ್ಷರಿಗೆ ಪರೋಕ್ಷವಾಗಿ ಬೆಂಬಲ ನೀಡಿ ಸಭೆಗೆ ಗೈರು ಹಾಜರಾಗಿದ್ದರಿಂದ ಈ ಎಲ್ಲಾ ಪ್ರಕ್ರಿಯೆಗೆ ಕಾರಣರಾಗಿದ್ದ ಶಾಸಕರ ಆಪ್ತರು ಆಗಿದ್ದ ಎನ್. ರಾಜೇಂದ್ರ ಪ್ರಸಾದ್ ಇವರಿಗೆ ಮುಖಬಂಗವಾಗಿದೆ.

ಪ್ರಸ್ತುತ ಅಧ್ಯಕ್ಷ ಉಪಾಧ್ಯಕ್ಷರಾಗಿರುವ ಎಸ್.ಸಿ. ರಮೇಶ್ ಹಾಗೂ ಜಿ.ಕೆ. ರಾಜಣ್ಣಈ ಇಬ್ಬರನ್ನು  ಮುಂದುವರಿಸಲು ಒಟ್ಟು 7 ಮಂದಿ ನಿರ್ದೇಶಕರುಗಳು ಇವರಿಗೆ ಬೆಂಬಲಿ ನೀಡಿರುತ್ತಾರೆ. ಈ 7 ಮಂದಿ ಪೈಕಿ ಬಿ.ಜೆ.ಪಿ. ಪಕ್ಷದ ನಾಮಿನಿ ನಿರ್ದೇಶಶಿತ ಸದಸ್ಯ ಕೆ.ಎನ್. ಶ್ರೀನಿವಾಸರೆಡ್ಡಿ ಇವರು ಬೆಂಬಲ ವ್ಯಕ್ತಪಡಿಸಿರುತ್ತಾರೆ. 

ಮುಂದುವರಿದು ಮಾತನಾಡಿದ ಅಧ್ಯಕ್ಷ ರಮೇಶ್  ಬಾಬು. ಈ ಎಲ್ಲಾಬೆಳವಣಿಗೆಗೆ ಕಾರಣ, ಅಧಿಕಾರ ವ್ಯಾಮೋಹ, ಹಿಂದೆ ಅಧಿಕಾರ ನಡೆಸಿದ ರಾಜೇಂದ್ರಪ್ರಸಾದ್, ಬೇಕಾದಷ್ಟು ವಿವಿಧ ಮೂಲಗಳಿಂದ ಶೇಕಡಾವಾರು ಹಣವನ್ನು ಗುಳುಂ ಮಾಡಿದ್ದು, ನನ್ನ ವಸ್ತುನಿಷ್ಟೆ ಅಧಿಕಾರಕ್ಕೆ ಧಕ್ಕೆ ತರಬೇಕೆಂಬ ದುರಾಸೆಯಿಂದ ಸ್ವ ಪಕ್ಷದಲ್ಲಿದ್ದುಕೊಂಡು ನಮಗೆ ದ್ರೋಹ ಮಾಡಲು ಮುಂದಾಗಿದ್ದ ಇವರಿಗೆ, ಇವರು ಯಾರನ್ನು ನಂಬಿದ್ದರೋ ಅವರೇ ತಕ್ಕ ಪಾಠವನ್ನು ಕಲಿಸಿ ನಮಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾ ನಿರ್ದೇಶಕರುಗಳೂ ಕೃತಜ್ನತೆಗಳನ್ನು ಸಲ್ಲಿಸಿ ಶಾಸಕ ರಮೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಎಲ್ಲರ ಸಹಕಾರದಿಂದ ಮಾರುಕಟ್ಟೆ ಅಭಿವೃದ್ದಿಗೆ ಶ್ರಮಿಸಿ ರೈತರ  ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ ಎಂದರು. 

ಇದೆ ಸಮಯದಲ್ಲಿ ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಎಂ. ಶ್ರೀನಿವಾಸನ್ ಮಾತನಾಡಿ ಅವಿಶ್ವಾಸ ನಿರ್ಣಯ ಸಭೆಗೆ ಪ್ರೇರೇಪಿಸಿದ ಮಾಜಿ ಅಧ್ಯಕ್ಷ ಹಾಗೂ  ಹಾಲಿ ನಿರ್ದೇಶಕರಾದ ರಾಜೇಂದ್ರ ಪ್ರಸಾದ್ ಇವ್ಬರ ಘನತೆಗೆ ತಕ್ಕದ್ದಲ್ಲ,ಇವರ ನಡೆಯನ್ನು ತೀವ್ರವಾಗಿ ಖಂಡಿಸಿದರು. 

	ಈ ಸಂದರ್ಭದಲ್ಲಿ ಕೃಷಿ ಮಾರಾಟ ಇಲಾಖೆ ಜಂಟಿ ನಿರ್ದೇಶಕರಾದ ರಾಜಣ್ಣ, ಕಾರ್ಯದರ್ಶಿ ಹಕೀಮ್ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದರು. 

	ಈ ಸಮಯದಲ್ಲಿ ನಿರ್ದೇಶಕರುಗಳಾದ  ಶ್ಯಾಮಲ ಗೋಪಾಲರೆಡ್ಡಿ, ಯೋಗೇಂದ್ರ ಗೌಡ, ಸಿ. ಪೆದ್ದರೆಡ್ಡಿ, ಟೈಲರ್ ಕೆ. ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ರೈತ ಮುಖಂಡರಾದ ಬೈರೆಡ್ಡಿ, ಸಿ.ವಿ. ಪ್ರಭಾಕರಗೌಡ,  ಜಾಮಚೆಟ್ಲು ಶ್ರೀನಿವಾಸ್, ಮುತ್ತಕಪಲ್ಲಿ ಶ್ರೀನಾಥ್, ವೆಂಕಟಾದ್ರಿ ಮತ್ತಿತರರು ಹಾಜರಿದ್ದರು. 

ತಹಸೀಲ್ದಾರನಿಂದ 72 ಸಾವಿರ ರೂ ದಂಡ- ಬಡ ಅನ್ನದಾತ ಹೃದಯಾಘಾತಕ್ಕೆ ಬಲಿ,ರೈತ ಬಲಿಯಾದಕ್ಕೆ, ಕ್ರಮ ಜರುಗಿಸಬೇಕು : ಶಾಸಕಿ ರೂಪಶಶಿಧರ್ ಆಗ್ರಹ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೃಷಿಭೂಮಿಯ ಫಲವತ್ತತೆಗಾಗಿ ಕೆರೆಯಲ್ಲಿ ಮಣ್ಣು ತೆಗೆಯುತ್ತಿದ್ದ ರೈತನಿಗೆ 72 ಸಾವಿರ ದಂಡ ಹಾಕಿ ಅನ್ನದಾತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಲು ಕಾರಣರಾದ ಕೆಜಿಎಫ್ ತಹಸೀಲ್ದಾರ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕಿ ರೂಪಕಲಾ ಶಶಿಧರ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಘಟನೆ ಹಿನ್ನಲೆಯಲ್ಲಿ ನೊಂದ ರೈತ ಕುಟುಂಬದ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರನ್ನು ಭೇಟಿಯಾದ ರೂಪಕಲಾ ಶಶಿಧರ್, ತೋಟದ ಫಲವತ್ತತೆಗಾಗಿ ತೋಟಕ್ಕೆ ಮಣ್ಣು ಹೊಡೆದುಕೊಂಡ ಅಮಾಯಕ ರೈತನನ್ನು ತಹಸೀಲ್ದಾರ್ ಅವರ ಅಮಾನವೀಯ ವರ್ತನೆ ಬಲಿ ಪಡೆದಿದೆ ಎಂದು ಆರೋಪಿಸಿದರು.
ಕಳೆದ ಒಂದು ವಾರದ ಹಿಂದೆ ಕೆಜಿಎಫ್ ತಾಲೂಕಿನ ಚಕ್ರಬಂಡೆ ಗ್ರಾಮದ ದೊಡ್ಡ ಕೆರೆಯಲ್ಲಿ ಅದೇ ಗ್ರಾಮದ ಚಂಗಾರೆಡ್ಡಿ ಎಂಬ ಮಣ್ಣು ತೆಗೆಯುತ್ತಿದ್ದರು. ಈ ವೇಳೆ ಸ್ಥಳಕ್ಕೆ ತೆರಳಿದ್ದ ತಹಸೀಲ್ದಾರ್ ಸುಜಾತ 2 ಟ್ರಾಕ್ಟರ್ ಹಾಗೂ ಜೆಸಿಬಿ ವಾಹನವನ್ನು ವಶಕ್ಕೆ ಪಡೆದುಕೊಂಡು, ಪೊಲೀಸರಿಗೆ ದೂರು ನೀಡಿದ್ದರು.
ಈ ವೇಳೆ ವಾಹನಗಳನ್ನು ಬಿಡಿಸಿಕೊಳ್ಳಲು ದಲ್ಲಾಳಿಯೊಬ್ಬರ ಮೂಲಕ 11 ಸಾವಿರರೂಗಳನ್ನು ತಹಸೀಲ್ದಾರ್‍ಗೆ ಲಂಚವಾಗಿ ನೀಡಲಾಗಿತ್ತು. ಆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ 72 ಸಾವಿರರೂ ದಂಡ ಹಾಕಲಾಗಿದ್ದು, ದಂಡದ ಮೊತ್ತ ಕೇಳಿ ರೈತ ಚಂಗಾರೆಡ್ಡಿ ಹೃದಯಾಘಾತದಿಂದ ಮೃತಪಟ್ಟಿದ್ದರು.
ಬಳಿಕ ಚಂಗಾರೆಡ್ಡಿ ಭಾವಮೈದ ಅಶೋಕ್‍ರೆಡ್ಡಿ ಮೀಟರ್ ಬಡ್ಡಿಗೆ ಹಣ ಪಡೆದು ದಂಡ ಕಟ್ಟಿ ಗಾಡಿಗಳನ್ನು ಬಿಡಿಸಿಕೊಂಡಿದ್ದಾರೆ. ರೈತನ ಸಾವಿಗೆ ಕಾರಣವಾಗಿರುವ ತಹಸೀಲ್ದಾರ್ ಸುಜಾತ ವಿರುದ್ಧ ಕ್ರಮಕೈಗೊಂಡು, ಪಾವತಿಸಿರುವ ದಂಡವನ್ನು ಮಾನವೀಯತೆಯಿಂದ ವಾಪಸ್ಸು ಕೊಡಿಸಬೇಕೆಂದು ಶಾಸಕಿ ಮತ್ತು ರೈತನ ಕುಟುಂಬಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಕೆರೆಯಲ್ಲಿ ಮಣ್ಣು ತೆಗೆಯುವುದಕ್ಕೆ ಅನುಮತಿ ಪಡೆದುಕೊಳ್ಳುವ ಸಂಬಂಧ ಮಾಹಿತಿ ಇಲ್ಲದೆ ಅವರು ಕೃಷಿ ಜಮೀನು ಫಲವತ್ತತೆಗಾಗಿ ಮಣ್ಣು ಕೊಂಡೊಯ್ಯಲು ಬಂದಿದ್ದರು. ಆಗ ತಹಸೀಲ್ದಾರ್ ಅವರು ದಾಳಿ ನಡೆಸಿ, ವಾಸ್ತವಾಂಶ ತಿಳಿಯದೆ ಈ ರೀತಿ ತೊಂದರೆಯನ್ನುಂಟು ಮಾಡಿದ್ದಾರೆ.
ತಹಸೀಲ್ದಾರ್ ವರ್ತನೆಯಿಂದ ರೈತನ ಕುಟುಂಬಕ್ಕೆ ತೊಂದರೆಯಾಗಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಹಸೀಲ್ದಾರ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಂಗಾರು ಮಳೆ ಆರಂಭವಾಗಿರುವುದರಿಂದ ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ, ಇಂತಹ ಸಂದರ್ಭದಲ್ಲಿ ಫಲವತ್ತತೆ ಕಾಪಾಡುವ ದೃಷ್ಟಿಯಿಂದ ಕೆರೆಯ ಮಣ್ಣನ್ನು ತೋಟಕ್ಕೆ ಸಾಗಿಸಲು ಪ್ರಯತ್ನಿಸಿದ್ದು ತಪ್ಪೇ ಎಂದು ಪ್ರಶ್ನಿಸಿದ ಅವರು, ಕಾನೂನಿನ ಅರಿವಿಲ್ಲದ ರೈತರ ವಿರುದ್ದ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇಂತಹ ಅಮಾನವೀಯ ವರ್ತನೆ ತೋರಿರುವ ತಹಸೀಲ್ದಾರ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ಮನವಿ ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಕೆರೆಗಳಲ್ಲಿ ಮಣ್ಣು ತೆಗೆಯುವುದಕ್ಕೆ ಗ್ರಾಮ ಪಂಚಾಯಿತಿಗಳಿಂದ ಅನುಮತಿ ನೀಡುವಂತಿಲ್ಲ. ಒಂದು ವೇಳೆ ಯಾರಾದರೂ ಪಿಡಿಒಗಳು ನೀಡಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು.
ರೈತರು ತಮ್ಮ ಕೃಷಿ ಜಮೀನುಗಳಿಗೆ ಮಣ್ಣು ಪಡೆದುಕೊಳ್ಳಬೇಕಾದರೆ ಹಣ ಕಟ್ಟುವಂತಿಲ್ಲ. ಬದಲಿಗೆ ನಮ್ಮ ಕಚೇರಿಯಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಇಟ್ಟಿಗೆ ಕಾರ್ಖಾನೆ ಇನ್ನಿತರೆ ವಾಣಿಜ್ಯ ಕೆಲಸಗಳಿಗೆ ಬೇಕಾದರೆ ಪ್ರತಿ ಟನ್‍ಗೆ 90ರೂ ಶುಲ್ಕ ನೀಡಬೇಕಾಗುತ್ತದೆ ಎಂದು ವಿವರಿಸಿದರು.
ಅಲ್ಲದೆ ರೈತ ಮೃತಪಟ್ಟಿರುವುದರಿಂದಾಗಿ ಮಾನವೀಯತೆ ದೃಷ್ಠಿಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರೊಂದಿಗೆ ಚರ್ಚಿಸಿ 72 ಸಾವಿರರೂ ಹಣ ವಾಪಸ್ಸು ಕೊಡಿಸುವುದಾಗಿ ಭರವಸೆ ನೀಡಿದರು.
ರೈತರ ವಿಷಯದಲ್ಲಿ ಇಂತಹ ಅಮಾನವೀಯ ವರ್ತನೆಗೆ ಅವಕಾಶವಿಲ್ಲದಂತೆ ಆದೇಶ ಹೊರಡಿಸುವ ಭರವಸೆಯನ್ನು ಡಿಸಿಯವರು ನೀಡಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮೃತ ರೈತ ಚಂಗಾರೆಡ್ಡಿ ಭಾಮೈದ ಅಶೋಕ್‍ರೆಡ್ಡಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಅ.ಮು.ಲಕ್ಷ್ಮಿನಾರಾಯಣ್, ಮುಖಂಡರಾದ ವಿಜಯಣ್ಣ, ವಿಜಯರಾಘವರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.