HOLY ROSARY CHURCH, KUNDAPUR – 450 th JUBILEE SOUVENIR 2021

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪದಗ್ರಹಣ ಸಮಾರಂಭ ಮತ್ತು ವಿವಿಧ ಪ್ರಶಸ್ತಿ ಪ್ರಧಾನ ಸಮಾರಂಭ

ವರದಿ:  ವಾಲ್ಟರ್ಮೊಂತೇರೊ, ಬೆಳ್ಮಣ್ಣು


ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಘಟಕ ಮಟ್ಟದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಸಂಘದ ಅಧ್ಯಕ್ಷ ಬೋಳ ಉದಯ ಅಂಚನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು
2021-22ನೇ ಸಾಲಿನ ನೂತನ ಅಧ್ಯಕ್ಷರಾಗಿ ನಂದಳಿಕೆ ಪ್ರಶಾಂತ್ ಪೂಜಾರಿ ಅವರು ಪದಪ್ರದಾನ ಸ್ವೀಕರಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮಾನ್ವಯಾಧಿಕಾರಿಗಳಾದ ವಿಲ್ಪ್ರೆಡ್ ಡಿಸೋಜಾ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದವರು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಕೇವಲ ಸಂಘಟನೆ ಮಾತ್ರವಲ್ಲ ಇದೊಂದು ಮಾದರಿ ಕುಟುಂಬವೆಂದರು, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಹೊಸತನದ ಕಾರ್ಯಕ್ರಮಗಳಿಂದಲೇ ಈ ಸಂಸ್ಥೆ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಂಡ್ಕೂರು ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷರಾದ ಇನ್ನ ಕುಶ ಆರ್. ಮೂಲ್ಯ, ಜೇಸಿಐ ರಾಷ್ಟ್ರೀಯ ತರಬೇತುದಾರ ಸುಧಾಕರ್ ಪೂಜಾರಿ ಕಾರ್ಕಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಘದ ನಿಕಟ ಪೂರ್ವಾಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಪೂರ್ವಾಧ್ಯಕ್ಷರಾದ ಬೋಳ ರಘುವೀರ್ ಶೆಟ್ಟಿ, ಆನಂದ ಪೂಜಾರಿ, ದಿನೇಶ್ ಪೂಜಾರಿ ಬಿರೋಟ್ಟು, ಸುರೇಶ್ ಪೂಜಾರಿ ಕಾಸ್ರಬೈಲು, ರಾಜೇಶ್ ಕೋಟ್ಯಾನ್, ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಜೊತೆಕಾರ್ಯದರ್ಶಿ ಪುಷ್ಪ ಕುಲಾಲ್, ಕೋಶಾಧಿಕಾರಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಶ್ರೀ ವನದುರ್ಗಾ ಸ್ವಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ ಮೊದಲಾದವರಿದ್ದರು.
ಸಂಘದ ಕಾರ್ಯದರ್ಶಿ ಹರಿಪ್ರಸಾದ್ ಆಚಾರ್ಯ ಅಬ್ಬನಡ್ಕ ವಾರ್ಷಿಕ ವರದಿ ಮಂಡಿಸಿದರು. ಸುಲೋಚನಾ ಕೋಟ್ಯಾನ್ ಪ್ರಾರ್ಥನೆಗೈದರು. ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ಪದ್ಮಶ್ರೀ ಪೂಜಾರಿ ನೂತನ ಅಧ್ಯಕ್ಷರ ಪರಿಚಯ ವಾಚಿಸಿದರು. ಆರತಿ ಕುಮಾರಿ ನೂತನ ಸದಸ್ಯರ ಪರಿಚಯ ಹೇಳಿದರು. ನೂತನ ಕಾರ್ಯದರ್ಶಿ ಸುರೇಶ್ ಪೂಜಾರಿ ಕಾಸ್ರಬೈಲು ವಂದಿಸಿದರು.

ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು – ಕೆ. ಶ್ರೀನಿವಾಸಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು – ಕೆ. ಶ್ರೀನಿವಾಸಗೌಡಕೋಲಾರ ಅ.5 : ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜ್ಞಾನದ ಶಿಲ್ಪಿಗಳಂತೆ ಆದ್ದರಿಂದ ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದು ಶಾಸಕ ಕೆ ಶ್ರೀನಿವಾಸಗೌಡ ತಿಳಿಸಿದರು .
ಕೋಲಾರ ತಾಲ್ಲೂಕು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ‘ವಿಶ್ವ ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು .
ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮತ್ತು ಶಿಸ್ತಿನ ಜೊತೆಜತೆಗೆ ಆರೋಗ್ಯಕರ ಸಮಾಜದ ಸೃಷ್ಟಿಗಾಗಿ ಯುವಕ ಯುವತಿಯರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯುತ್ತಮವಾಗಿದೆ ಎಂದು ತಿಳಿಸಿದರು .
ಅಂತರರಾಷ್ಟ್ರೀಯ ಮಟ್ಟದಲ್ಲಿ ಯುನೆಸ್ಕೋ ಮತ್ತು ಐಎಲ್‍ಒಗಳ ಪ್ರಸ್ತಾವನೆಯಂತೆ ಸೆಪ್ಟೆಂಬರ್ 5ರಂದು ವಿಶ್ವ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದ ಅವರು ಪಶು ಪ್ರಾಣಿ ಪಕ್ಷಿಗಳು ಕೂಡ ತನ್ನ ಶಿಕ್ಷಕ ತರಬೇತುದಾರರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಬಾಂಧವ್ಯ ಹೊಂದಿರುವಾಗ ಜೀವಜಾಲದ ಉನ್ನತ ಸ್ಥಾನದಲ್ಲಿರುವ ಮಾನವ ತನ್ನ ಅರಿವಿನ ಕಣ್ಣು ತೆರೆಯುವ ಶಿಕ್ಷಕರಿಗೆ ಸದಾ ಋಣಿಯಾಗಿರಬೇಕು ಮತ್ತು ಕೃತಜ್ಞತೆಯಿಂದ ಇರುವುದೇ ದ್ಯೋತಕÀ ಇದರ ಅಗತ್ಯವೇ ಶಿಕ್ಷಕರ ದಿನಾಚರಣೆಯ ಅರ್ಥಪೂರ್ಣ ಸಂದೇಶವಾಗಿದೆ ಎಂದರು .
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಕಿಕೊಟ್ಟ ಹಾದಿಯನ್ನು ಪಾಲಿಸುತ್ತಾ ಎರಡಕ್ಷರಕಲಿಸಿದಾತನೇ ಗುರು ಎಂಬಂತೆ ನಮ್ಮ ಬಾಲ್ಯದ ದಿನಗಳಿಂದ ನಮಗೆ ಸದಾ ಒಳ್ಳೆಯ ಆಚಾರ ವಿಚಾರ ನಡೆ ನುಡಿ ಕಲಿಸುವುದೇ ನಿಜವಾದ ಶಿಕ್ಷಣ ಎಂದರು .
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳು ಡಾ ರಾಧಾಕೃಷ್ಣನ್ ಮಾದರಿಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ಜೀವನದಲ್ಲಿ ಕನಸುಗಳನ್ನು ತುಂಬಬೇಕು ಗುರು ಸಾಕ್ಷಾತ್ ಪರಬ್ರಹ್ಮ ಆಗಿ ಮಾನವನು ಅರಿವು ಜ್ಞಾನ ಮತ್ತು ವಿವೇಕಗಳಿಗೆ ಕಾರಣವಾಗಿ ತ್ರಿಮೂರ್ತಿಗಳ ಸ್ವರೂಪವೇ ಆಗಿರೋದ್ರಿಂದ ಶಿಕ್ಷಕರು ಸದಾ ಉತ್ತಮ ನಡೆ, ನುಡಿ, ಕ್ರೀಡೆಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಲ್ಲುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕೆಂದರು.
ಇದೇ ಸಂದರ್ಭದಲ್ಲಿ ಕುರಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ರವರನ್ನು ಸನ್ಮಾನಿಸಲಾಯಿತು . ಸಮಾರಂಭದಲ್ಲಿ ರಾಜ್ಯ ಮುಖಂಡ ಆರ್. ಶ್ರೀನಿವಾಸನ್, ಜಿಲ್ಲಾ ಕಾರ್ಯದರ್ಶಿ ಬಿ. ಶ್ರೀನಿವಾಸ್ ಉಪಾಧ್ಯಕ್ಷರಾದ ಕೆ. ಶ್ರೀನಿವಾಸ್ ಮುಖಂಡರುಗಳಾದ ಹೆಚ್.ಆರ್. ನಾರಾಯಣಸ್ವಾಮಿ, ಚಾಮುಂಡೇಶ್ವರಿ ದೇವಿ, ಭಾಗ್ಯಲಕ್ಷ್ಮಮ್ಮ ರಾಮಚಂದ್ರಪ್ಪ, ಜೆ.ಜಗನ್ನಾಥ್, ಪರ್ವೀನ್ ತಾಜ್ ಮುಂತಾದವರು ಉಪಸ್ಥಿತರಿದ್ದರು

ಹಸಿರು ಶಾಲು ಹಾಗೂ ರೈತ ಮುಖಂಡರ ಬಗ್ಗೆ. ಹಗುರವಾಗಿ ಮಾತನಾಡಿರುವ ಸಂಸದರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ, ಹಸಿರು ಶಾಲು ಹಾಗೂ ರೈತ ಮುಖಂಡರ ಬಗ್ಗೆ. ಹಗುರವಾಗಿ ಮಾತನಾಡಿರುವ ಸಂಸದರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಗೇಟ್ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ ಇತ್ತೀಚಿಗೆ ಶಾಗೂತ್ತೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಹಸಿರು ಟವಾಲ್ ಬಗ್ಗೆ ಸಂಸದರಾದ ಎಸ್. ಮುನಿಸ್ವಾಮಿ ಆರೋಪ ಮಾಡಿರುವುದು ಸರಿಯಲ್ಲ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ಇವೆ ಅದರ ಬಗ್ಗೆ ಮಾತನಾಡದೆ ಪ್ರಚಾರಕ್ಕಾಗಿ ರೈತರ ಬಗ್ಗೆ ಅವಹೇಳನ ಹೇಳಿಕೆ ನೀಡಿರುವುದು ಖಂಡನೀಯ ನಿಮ್ಮ ವಿಚಾರಗಳು ನಮಗೆ ಗೊತ್ತಿದೆ ಯಾರ ಹೆಸರಿನಲ್ಲಿ ನೀವು ಎಲ್ಲಿ ಅಕ್ರಮವಾಗಿ ಅಸ್ತಿಯನ್ನು ಮಾಡಿದ್ದೀರಿ ಕಲ್ಲುಕ್ಯಾರಿ, ಯರ್ರಗೋಳ್ ಸಮೀಪ ರೆಸಾರ್ಟ್ ನಿರ್ಮಿಸುವುದು ಇನ್ನಿತರ ವಿಚಾರಗಳ ಬಗ್ಗೆ ನಮಗೆ ಗೊತ್ತಿದೆ. ಇದರ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾ ಕೂಡಲೆ ಕ್ಷೇಮೆಯಾಚಿಸಬೇಕೆಂದು ಅಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಎನ್. ಜಿ. ಶ್ರೀರಾಮರೆಡ್ಡಿ ಮಾತನಾಡಿ ರೈತ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಇವರಿಗೆ ಶೋಬೆ ತರವುದಿಲ್ಲ. ಹಸಿರು ಸಾಲು ಹಾಕಿಕೊಳ್ಳವವರು ರೈತರು ಅಲ್ಲ ಹೋರಾಟಗಾರರು ಹೊಲಗಳಿಗೆ ಹೋಗುವುದಿಲ್ಲ, ಕೆಲಸ ಮಾಡುವುದಿಲ್ಲ. ಕಛೇರಿಗೆಳಿಗೆ ಅಲೆದು ವೈಯುಕ್ತಿಕ ಕೆಲಸ ಮಾಡಿಕೊಳ್ಳುವುದರಲ್ಲಿ ನಿರತರಾಗಿತ್ತಾರೆ. ಎಂದಿರುವುದು ಖಂಡನೀಯ ಎಂದು ಕಿಡಿ ಕಾರಿದರು.

ನಮ್ಮ ರೈತ ಸಂಘಕ್ಕೆ ಇತಿಹಾಸ ಇದೆ 80 ರ ದಶಕದಿಂದ ನಮ್ಮ ಸಂಘ ಹೋರಾಟಗಳನ್ನು ಮಾಡಿಕೊಂಡು ರೈತರ ಸಮಸ್ಯೆಗಳ ಬಗ್ಗೆ ಹೋರಾಟಗಳನ್ನು ಮಾಡಿ ಬಂದಿದ್ದೇವೆ. ಸಂಸದರು ಸರಿಯಾಗಿ ಇತಿಹಾಸ ತಿಳಿದು ಮಾತನಾಡಲೀ ನಾವು ವ್ಯವಸಾಯ ಮಾಡಿಕೊಂಡೆ ಬಂದಿದ್ದೇವೆ. ಸಂದೇಹ ಇದ್ದರೆ ನಮ್ಮ ತೋಟಕ್ಕೆ ಬನ್ನಿ ಎಂದು ಸವಾಲನ್ನು ಹಾಕುತ್ತಾ ಸಂಸದರು ರೈತರಿಗೆ ಮತ್ತು ಸಂಘಕ್ಕೆ ಅವಮಾನದ ರೀತಿಯಲ್ಲಿ ಮಾತನಾಡಿದ್ದಾರೆ. ಕೂಡಲೆ ಇವರನ್ನು ಪಕ್ಷದಿಂದ ಉಚ್ಚಾಟಿಸಿ ಇವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು

ಇದೇ ಸಮಯದಲ್ಲಿ ಉಪತಹಶೀಲ್ದಾರ್‍ಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಪೆತ್ತಾಂಡ್ಲಾಹಳ್ಳಿ ಪಿ.ಎಸ್. ಗಂಗಾಧರ್, ಕಾರ್ಯದರ್ಶಿ ಹೆಬ್ಬಟ ರಮೇಶ್, ಪದಾಧಿಕಾರಿಗಳಾದ ಚಲ್ದಿಗಾನಹಳ್ಳಿ ಶ್ರೀಧರ್, ದೇವರಾಜ್, ರಾಜಣ್ಣ, ವೀರಪ್ಪರೆಡ್ಡಿ, ಪ್ರಧಾನ ಕಾರ್ಯದರ್ಶಿ ಅಸ್ಲಾಂ ಪಾಷಾ, ಸ ಕಾರ್ಯದರ್ಶಿ ರಾಮಕೃಷ್ಣ ಇನ್ನಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.

ಸಂಸದರೇ ಈ ದೇಶಕ್ಕೆ ಅನ್ನ ನೀಡುವ ರೈತನ ಬಗ್ಗೆ ಮಾತನಾಡುವ ಹಕ್ಕು ನಿಮಗೆ ಇಲ್ಲ ದೆಹಲಿಯಲ್ಲಿ ನಿರಂತರವಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಸತ್‍ನಲ್ಲಿ ಒಂದು ಬಾರಿಯಾದರು ದ್ವನಿಯತ್ತಿದ್ದೀರಾ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮನೆಗೆ ಹಾಲು ಕೂಡುವ ರೈತರು ನಾವು ನಮ್ಮ ಬಗ್ಗೆ ಮಾತನಾಡುವ ಹಕ್ಕು ನಿಮಗೆ ಇಲ್ಲ ಕೇಂದ್ರ ಸರ್ಕಾರ ರೈತ ವಿರೋದಿ ಕಾಯೆಗಳನ್ನು ಜಾರಿಗೆ ತಂದು ರೈತರು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಇದರ ಬಗ್ಗೆ ನಿಮಗೆ ಅರಿವು ಇದಿಯೇ ವಿನಾಕಾರಣ ಸಭೆ ಸಮಾರಂಭಗಳಲ್ಲಿ ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ನಿಮ್ಮ ಘನತೆಗೆ ತಕ್ಕದ್ದಲ್ಲ ನೀವು ಯಾವ ರೀತಿ ರಾಜಕೀಯಕ್ಕೆ ಬಂದಿರಿ ನಮಗೆ ಗೊತ್ತಿದ್ದೆ ಇನ್ನಿತರ ವಿಚಾರಗಳ ಬಗ್ಗೆ ಮಾತನಾಡಬೇಕಾಗುತ್ತದೆ. ಈ ಜಿಲ್ಲೆಯ ಅಭಿವೃದ್ದಿ ಕಡೆ ಗಮನಹರಿಸುವುದನ್ನು ಬಿಟ್ಟು ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸುವ ಸಲುವಾಗಿ ರೈತರ ಮುಖಂಡರ ಬಗ್ಗೆ ಹಸಿರು ಶಾಲು ಹಾಕಿಕೊಳ್ಳುವುದರ ಬಗ್ಗೆ ಪದೇ ಪದೇ ಹಗುರವಾಗಿ ಮಾತನಾಡುತ್ತಿರುವುದು ನೋವು ತಂದಿದೆ ಎಂದು ಬೇಸರ ವ್ಯಕ್ಷಪಡಿಸುತ್ತಾ ಕೂಡಲೆ ಕ್ಷೇಮಯಾಚಿಸಬೇಕೆಂದು ಅಗ್ರಹಿಸಿದರು.

ಇದೇ ಸಮಯದಲ್ಲಿ ಉಪತಹಶೀಲ್ದಾರ್‍ಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಪೆತ್ತಾಂಡ್ಲಾಹಳ್ಳಿ ಪಿ.ಎಸ್. ಗಂಗಾಧರ್, ಕಾರ್ಯದರ್ಶಿ ಹೆಬ್ಬಟ ರಮೇಶ್, ಪದಾಧಿಕಾರಿಗಳಾದ ಚಲ್ದಿಗಾನಹಳ್ಳಿ ಶ್ರೀಧರ್, ದೇವರಾಜ್, ರಾಜಣ್ಣ, ವೀರಪ್ಪರೆಡ್ಡಿ, ಪ್ರಧಾನ ಕಾರ್ಯದರ್ಶಿ ಅಸ್ಲಾಂ ಪಾಷಾ, ಸ ಕಾರ್ಯದರ್ಶಿ ರಾಮಕೃಷ್ಣ ಇನ್ನಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು
.

ಕುಂದಾಪುರ ಐತಿಹಾಸಿಕ ರೋಜರಿ ಮಾತಾ ಚರ್ಚಿನ 450 ವರ್ಷಗಳ ಸಮಾರೋಪ ಸಮಾರಂಭದ ಪತ್ರಿಕಾ ಗೋಷ್ಟಿ

JANANUDI.COM NET WORK


ಕುಂದಾಪುರ,ಅ.5.ಕುಂದಾಪುರ ಐತಿಹಾಸಿಕ ರೋಜರಿ ಮಾತಾ ಚರ್ಚಿನ 450 ವರ್ಷಗಳ ಸಮಾರೋಪ ಸಮಾರಂಭದ ಪತ್ರಿಕಾ ಗೋಷ್ಟಿಯು ಕುಂದಾಪುರ ಚರ್ಚಿನ ಸಭಾ ಬವನದಲ್ಲಿ ನಡೆಯಿತು.
ಪತ್ರಿಕಾ ಗೋಷ್ಟಿಯಲ್ಲಿ ಚರ್ಚಿನ ಚರಿತ್ರೆಯನ್ನು ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂದಿಸ್ ವಿವರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಚರ್ಚಿನ ಚರಿತ್ರೆಯ ಲೇಕನ
ನೀಡಲಾಯಿತು. ಸಮಾರೋಪ ಸಮಾರಂಭವು ಅಕ್ಟೋಬರ್ 7 ರಂದು ನಡೆಯಲಿದ್ದು ಅಹ್ವಾನ ಪತ್ರವನ್ನು ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಗಣ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಬಿಶಪ್ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ, ಶಿವಮೊಗ್ಗ ಧರ್ಮಪ್ರಾಂತ್ಯದ ಬಿಶಪ್ ಅ|ವಂ|ಡಾ| ಫ್ರಾನ್ಸಿಸ್ ಸೆರಾವೊ, ಉಡುಪಿ ಧರ್ಮಪ್ರಾಂತ್ಯದ ಅ|ವಂ| ಮೊನ್ಸಿಜೆಂರ್ ಬ್ಯಾಪ್ಟಿಸ್ಟ್ ಡಯಾಸ್, ವಂ|ಸಿಸ್ಟರ್ ಮರಿಯಾ ಶಮಿತಾ, ಪೆÇ್ರವಿನ್ಸಿಯಲ್ ಸುಪೀರಿಯರ್, ಶಾಶಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ 40 -45 ಧರ್ಮಗುರುಗಳು ಪವಿತ್ರ ಬಲಿದಾನದಲ್ಲಿ ಭಾಗವಸುರೆಂದು ತಿಳಿಸಿದರು

ಸಹಾಯಕ ಧರ್ಮಗುರು ವಂ|ವಿಜಯ್ ದಿಸೋಜಾ, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಆರ್ಥಿಕ ಮಂಡಳಿಯ ಜೋನ್ಸನ್ ಡಿಆಲ್ಮೇಡಾ, ಡಾ|ಸೋನಿ ಡಿಕೋಸ್ತಾ, ಒಸ್ವಲ್ಡ್ ಕರ್ವಾಲ್ಲೊ, ಶಾಂತಿ ಬಾರೆಟ್ಟೊ, ಶಾಲೆಟ್ ರೆಬೆಲ್ಲೊ, ಜೊಯ್ ಕರ್ವಾಲ್ಲೊ. ವಿಕ್ಟರ್ ಡಿಸೋಜ, ಡೊಮಿನಿಕ್ ಬ್ರಗಾಂಜಾ, ಶಾಂತಿ ಕರ್ವಾಲ್ಲೊ, ಎಲ್ಡ್ರಿನ್ ಡಿಸೋಜಾ, ಪ್ರೀತಿ ಕ್ರಾಸ್ತಾ ಮುತಾಂದ ಪ್ರಚಾರ ಸಮಿತಿಯ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಪಿ.ಆರ್. ರಾಮಯ್ಯ ಪ್ರಶಸ್ತಿ ಭಾಜನರಾದ ಪಂಚ ಗಂಗಾವಳಿ ಅಭಿವ್ರದ್ದಿಯ ಕನಸುಗಾರ ಪತ್ರಕರ್ತ ಯು.ಎಸ್.ಶೆಣ್ಯ ಅವರಿಗೆ ಗೌರವಿಸಲಾಯಿತು.
ಪ್ರಚಾರ ಸಮಿತಿಯ ಸಂಚಾಲಕ ಬರ್ನಾಡ್‍ಡಿಕೋಸ್ತಾ ಸ್ವಾಗತಿಸಿದರು. 450 ವರ್ಷಗಳ ಸಮಾರೋಪ ಸಂಭ್ರಮದ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ವಂದಿಸಿದರು
.

ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಅವರಿಗೆ ಸಾರ್ವಜನಿಕ ಸನ್ಮಾನ

JANANUDI.COM NETWORK

ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಅವರಿಗೆ ಸಾರ್ವಜನಿಕ ಸನ್ಮಾನ
ಕೋಟ:ನನ್ನೂರಿನ ಸಂಘ ಸಂಸ್ಥೆಗಳು ನನ್ನನ್ನು ಗುರುತಿಸಿ ಊರ ಗೌರವದ ಹೆಸರಿನಲ್ಲಿ ಸನ್ಮಾನಿಸಿರುವುದು ಸಂತಸ ತಂದಿದೆ. ಎಲ್ಲರಿಗೂ ಅಭಾರಿಯಾಗಿದ್ದೇನೆ. ಈ ಸನ್ಮಾನ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಹುಮ್ಮಸ್ಸು ನೀಡಿದೆ ಎಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಪಿ.ಕೆ ಹೇಳಿದರು.
ಅವರು ಶನಿವಾರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೀಜಾಡಿ-ಗೋಪಾಡಿಮಿತ್ರ ಸಂಗಮ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ
ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಊರ ಗೌರವ-ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾರಮಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷತೆ ಸುಮತಿ ನಾಗರಾಜ್ ವಹಿಸಿದ್ದರು. ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅಭಿನಂದನಾ ಭಾಷಣಗೈದರು.ವೇದಮೂರ್ತಿ ಶಂಕರನಾರಾಯಣ ಬಾಯರಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಪ್ರಕಾಶ ಗಾಣಿಗ, ಮುಖ್ಯ ಶಿಕ್ಷಕಿ ಶ್ರೀಮತಿ ಭಟ್, ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಬೀಜಾಡಿ ನಂದಿನಿ ಫ್ರೆಂಡ್ಸ್ ಅಧ್ಯಕ್ಷ ಪ್ರಶಾಂತ್ ಗೋಳಿಬೆಟ್ಟು, ಬೀಜಾಡಿ ಸಂಗಮ ಸ್ವಸಹಾಯ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ ಗೋಪಾಡಿ, ಬೀಜಾಡಿ-ಗೋಪಾಡಿ ರೋಟರಿ ಸಮುದಾಯ ದಳ ಅಧ್ಯಕ್ಷ ಗಿರೀಶ್ ಕೆ.ಎಸ್, ಬೀಜಾಡಿ ಬೆಳ್ಳಂಕಿ ಫ್ರೆಂಡ್ಸ್‍ನ ಉದಯ, ಕೋಟೇಶ್ವರ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಸುನೀಲ್ ನಾಯ್ಕ್, ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್ ಅಧ್ಯಕ್ಷ ರಾಮಕೃಷ್ಣ ಐತಾಳ್, ಬೀಜಾಡಿ ಮಿತ್ರ ಸಂಗಮದ ಕಾರ್ಯದರ್ಶಿ ರಾಜೇಶ್ ಆಚಾರ್ಯ,ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಚಂದ್ರ ಬಿ.ಎನ್ ಮೊದಲಾದವರು ಉಪಸ್ಥಿತರಿದ್ದರು.
ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ಡಾ.ಗಣೇಶ್ ಗಂಗೊಳ್ಳಿ ಪ್ರಾರ್ಥಿಸಿದರು. ಮಿತ್ರ ಸಂಗಮದ ಕೋಶಾಧಿಕಾರಿ ಅನುಪ್ ಕುಮಾರ್ ಬಿ.ಆರ್ ಸನ್ಮಾನಪತ್ರ ವಾಚಿಸಿದರು. ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಣೆ.

JANANUDI.COM NETWORK

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಛಾಯಾಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮಹಾನಾಯಕದ್ವಯರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಗಾಂಧೀಜಿ-ಶಾಸ್ತ್ರೀಜಿಯವರ ಸರಳ ತತ್ವಾದರ್ಶ, ದೇಶಪ್ರೇಮದ ಕಾರ್ಯಗಳನ್ನು ಉಲ್ಲೇಖಿಸಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ಸದಾಸ್ಮರಣೀಯರೆಂದು ತಿಳಿಸಿದರು.
ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. 

ಸಾರ್ಥಕ ಸೇವೆ ಪೂರೈಸಿ ನಿವೃತ್ತಿ ಹೊಂದಿದ ಹಿಂದಿ ಶಿಕ್ಷಕಿ ಫೆಲ್ಸಿಯಾನ ಡಿ’ಸೋಜರವರಿಗೆ ಸನ್ಮಾನ

JANANUDI.COM NETWORK


ಗಂಗೊಳ್ಳಿ ಸೆಪ್ಟೆಂಬರ್: 30 ತಮ್ಮ ಸಾರ್ಥಕ ಸೇವೆಯನ್ನು ಪೂರೈಸಿ ನಿವೃತ್ತಿ ಹೊಂದಿದ ಹಿಂದಿ ಶಿಕ್ಷಕಿ ಫೆಲ್ಸಿಯಾನ ಡಿ’ಸೋಜರವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿ ಸಾಧನೆ ಮಾಡಿದ ಶ್ರೇಯಾ ಮೇಸ್ತ, ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 9 ವಿದ್ಯಾರ್ಥಿಗಳಾದ ಅನನ್ಯ ಬಿ, ಶಶಿಕಾಂತ, ಅಮಿಷಾ, ಸಂಜಯ್, ಸ್ವಾತಿ,ಸಿಂಚನ ಬಿ , ಸುಶಾಂತ್, ಆದಿತ್ಯ, ಸ್ವಪ್ನ ಇವರೊಂದಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಗೌರವ ಪಡೆದ ಒಟ್ಟು 7 ವಿದ್ಯಾರ್ಥಿಗಳಾದ ಪ್ರೀತಿ, ರಶ್ಮಿತಾ, ಅನನ್ಯ, ಸ್ವಪ್ನ, ಅನ್ಸಿಟಾ, ರಶ್ಮಿತಾ, ರೂಪ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಭಾಧ್ಯಕ್ಷರಾದ ಮುಖ್ಯಶಿಕ್ಷಕಿ ಭ. ಕ್ರೆಸೆನ್ಸ್ ಗಣ್ಯರನ್ನು ಸ್ವಾಗತಿಸಿದರು. ಸ್ಥಳೀಯ ಚರ್ಚಿನ ಧರ್ಮಗುರುಗಳು ಆಶೀರ್ವಚನ ನುಡಿದರು. ಮುಖ್ಯ ಅತಿಥಿಗಳಾದ ಭ. ವೈಲೆಟ್ ಮಾತನಾಡಿ ಹಿಂದಿ ಶಿಕ್ಷಕಿಯವರ ಅಮೂಲ್ಯ ಸೇವೆಯನ್ನು ಕೊಂಡಾಡಿದರು. ಭ. ಡೋರಿನ್, ಜಾನ್ ಡಿ’ಸೋಜಾ, ಉಮೇಶ್ ಕರ್ಣಿಕ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ್, ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು. ಶಿಕ್ಷಕಿ ಶಾಂತಿ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು ಮತ್ತು ವಂದಿಸಿದರು. ಕಾರ್ಯಕ್ರಮದ ನಂತರ ಸಹಭೋಜನ ಮಾಡಲಾಯಿತು.

ಮಾರಿಕುಪ್ಪಂ ಸರ್ಕಾರಿ ಜಮೀನು ಅತಿಕ್ರಮದ ವಿರುದ್ದ ಕ್ರಮದ ಭರವಸೆ ನೆಲದಲ್ಲೇ ಕುಳಿತು ಜನರ ಸಮಸ್ಯೆ ಆಲಿಸಿದ ಶಾಸಕಿ ರೂಪಕಲಾ ಶಶಿಧರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆಯ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಜನರ ಸಮಸ್ಯೆ ಆಲಿಸಲು ಖುದ್ದು ಗ್ರಾಮಗಳಿಗೆ ತೆರಳಿ ಜನರ ನಡುವೆ ಬರಿನೆಲದಲ್ಲಿ ಕುಳಿತು ಕುಂದುಕೊರತೆ ಆಲಿಸಿ ಪರಿಹಾರ ಒದಗಿಸುತ್ತಿರುವುದು ಜನರ ಪ್ರಶಂಸೆಗೆ ಪಾತ್ರವಾಯಿತು.
ಜನಪ್ರತಿನಿಧಿಗಳು ಎಂದರೆ ಎಸಿ ರೂಮಿನಲ್ಲಿ ಕುಳಿತು ಅಲ್ಲಿಂದಲೇ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುವುದು ಮಾಮೂಲಿ ಆದರೆ ಶಾಸಕರೊಬ್ಬರು ಕ್ಷೇತ್ರದ ಕಟ್ಟಕಡೆಯ ಗ್ರಾಮಕ್ಕೂ ಖುದ್ದು ತೆರಳಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನರ ನಡುವೆ ಕುಳಿತು ಸಮಸ್ಯೆ ಆಲಿಸುವುದು ಶ್ಲಾಘನೀಯ ಎಂದು ಗ್ರಾಮಸ್ಥರು ತಿಳಿಸಿದರು.

ಸರ್ಕಾರಿ ಜಾಗಅತಿಕ್ರಮ-ಪರಾಮರ್ಶೆ
ಜಿಲ್ಲೆಯ ಮಾರಿಕುಪ್ಪಂ ಗ್ರಾಮದಲ್ಲಿ ಆಂಧ್ರಮೂಲದ ವ್ಯಕ್ತಿಯೊಬ್ಬರು ಸರ್ಕಾರಿ ಜಮೀನು ಅತಿಕ್ರಮಿಸಿರುವ ದೂರಿನ ಹಿನ್ನಲೆಯಲ್ಲಿ ಖುದ್ದು ಗ್ರಾಮಕ್ಕೆ ತೆರಳಿ ಜನರ ನಡುವೆ ಬರಿ ನೆಲದಲ್ಲೇ ಕುಳಿತು ಸಮಸ್ಯೆಗೆ ಪರಿಹಾರದ ಭರವಸೆ ನೀಡಿದ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಯಿತುಮಾರಿಕುಪ್ಪ ಗ್ರಾಮ ಪಂಚಾಯಿತಿಯ ನೀಲಿಗಿರಿಹಳ್ಳಿ ಗ್ರಾಮದ ಸರ್ಕಾರಿ ಸ.ನಂ.45 ರಲ್ಲಿ ಸುಮಾರು 20 ಎಕರೆ ಜಮೀನನ್ನು ಆಂದ್ರ ಮೂಲದ ವ್ಯಕ್ತಿಯೊಬ್ಬರು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಬಗ್ಗೆ ದೂರುಗಳು ಬಂದಿದ್ದು ಗ್ರಾಮಸ್ಥರು ಮಾನ್ಯ ಶಾಸಕರಿಗೆ ಮನವಿ ಮಾಡಿ ಗ್ರಾಮದ ಬಡವರಿಗೆ ಅನುಕೂಲ ಮಾಡಿಕೊಡಲು ಕೋರಿದ್ದರು.
ಈ ಹಿನ್ನಲೆಯಲ್ಲಿ ಇಂದು ಗ್ರಾಮಕ್ಕೆ ಆಗಮಿಸಿದ ಶಾಸಕಿ ರೂಪಕಲಾ ಎಂ ಶಶಿಧರ್ ನೀಲಿಗಿರಿಹಳ್ಳಿ ಗ್ರಾಮದ ವಿವಾದಿತ ಜಮೀನಿಗೆ ತೆರಳಿ ಆ ಜಮೀನಿನ ಮರವೊಂದರ ಕೆಳಗೆ ಬರಿ ನೆಲ್ಲದಲ್ಲೇ ಕುಳಿತು ಗ್ರಾಮಸ್ತರಿಂದ ವಾಸ್ತವ ಸ್ಥಿತಿಯ ಪರಾಮರ್ಶೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಸರ್ಕಾರಿ ಜಮೀನು ಬೇರೆ ರಾಜ್ಯದವರು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಬಗ್ಗೆ ದಾಖಲೆಗಳ ಸಮೇತ ವಿವರಿಸಿದರು. ಸದರಿ ಜಮೀನಿನಲ್ಲಿ ಪುರಾತನ ದೇವಸ್ಥಾನ ಇದ್ದು ಅದನ್ನು ಬಳಸಲು ಸಹಾ ಆಗುತ್ತಿಲ್ಲ ಎಂದು ನೋವು ತೋಡಿಕೊಂಡರು.
ಮಹಿಳೆಯರು ಮಾತನಾಡಿ ಗ್ರಾಮದಲ್ಲಿ ಸುಮಾರು ಕುಟುಂಬಗಳಿಗೆ ಸ್ವಂತ ಮನೆ ನಿವೇಶನ ಇರುವುದಿಲ್ಲ ಸದರಿ ಸರ್ಕಾರಿ ಜಮೀನಿನಲ್ಲಿ ನಿವೇಶನ ವಿಂಗಡಿಸಿ ಪರಿಶಿಷ್ಟ ಜನಾಂಗದವರಿಗೆ ಹಾಗೂ ಬಡವರಿಗೆ ಅನುಕೂಲ ಮಾಡಿಕೊಡಲು ಕೋರಿದರು.
ಶಾಸಕರು ಗ್ರಾಮಸ್ಥರ ಸಮಸ್ಯೆ ಆಲಿಸಿ ಗ್ರಾಮದ ಸರ್ಕಾರಿ ಜಮೀನನ್ನು ಯಾರೋ ಸಂಬಂಧವಿಲ್ಲದ ವ್ಯಕ್ತಿ ಅತಿಕ್ರಮಿಸಿಕೊಂಡಿದ್ದರೆ ಕಾನೂನು ರೀತಿ ಕ್ರಮ ಕೈಗೊಂಡು ಅವರನ್ನು ಹೊರ ಹಾಕಲಾಗುವುದು ಎಂದು ಭರವಸೆ ನೀಡಿದರು.
ಸದರಿ ಸರ್ಕಾರಿ ಜಮೀನನ್ನು ಅಳತೆ ಮಾಡಿಸಿ ಗಡಿ ಗರುತಿಸಲು ತಹಶಿಲ್ದಾರ್ ರವರಿಗೆ ಸೂಚಿಸಲಾಗುವುದು ಎಂದು ತಿಳಿಸಿದ ಅವರು, ನಂತರ ನಿಯಮಾನುಸಾರ ನಿವೇಶನಗಳನ್ನು ವಿಂಗಡಿಸಿ ನಿವೇಶನ ರಹಿತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಮೀನು ಮಂಜೂರಿಗಾಗಿ ಅರ್ಜಿ ಹಾಕಿಕೊಂಡಿರುವವರಿಗೆ ದರಖಾಸ್ತು ಸಮಿತಿ ಸಭೆಯಲ್ಲಿ ಕಡತ ಮಂಡಿಸಿ ಜಮೀನು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಈಗ ಉದ್ಭವವಾಗಿರುವ ಸಮಸ್ಯೆ ಬಗೆಹರಿಸಲು ಪ್ರತಿ ಹಂತದಲ್ಲೂ ತಮ್ಮ ಜೊತೆ ನಿಲ್ಲುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಪ್ರಮುಖ ಮುಖಂಡರು ಹಾಜರಿದ್ದರು.


ವೆಂಗಸಂದ್ರ-ರೈತರಸಮಸ್ಯೆಗೆ ಸ್ಪಂದನೆ
ಶಾಸಕಿ ರೂಪಕಲಾ ಎಂ ಶಶಿಧರ್ ಇದೇ ದಿನ ವೆಂಗಸಂದ್ರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ರೈತರಿಂದ ಸಮಸ್ಯೆ ಆಲಿಸಿದರು. ಭೇಟಿ ಸಂದರ್ಬದಲ್ಲಿ ಬೆಂಗಳೂರು – ಚನೈ ಎಕ್ಸ್‍ಪ್ರೆಸ್ ರಸ್ತೆಗೆ ಭೂಸ್ವಾಧೀನವಾಗಿರುವ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಜೀವನಾಧಾರವಾಗಿದ್ದ ಜಮೀನು ಕಳೆದುಕೊಂಡಿದ್ದು ಪರಿಹಾರ ಮೊತ್ತ ತೀರ ಕಡಿಮೆ ನೀಡಿದ್ದು, ಇದರ ಬಗ್ಗೆ ಸಂಬಂಧಪಟ್ಟವರಿಗೆ ಮಾತನಾಡಲು ರೈತರು ಕೋರಿದರು. ಇನ್ನು ಹಲವರದು ಖಾತೆ ಬದಲಾವಣೆಯಾಗದೆ ಪರಿಹಾರ ಹಣ ಬಂದಿಲ್ಲ ಎಂಬುದನ್ನೂ ಗಮನಕ್ಕೆ ತಂದರು.
ಶಾಸಕರು ರೈತರ ಸಮಸ್ಯೆ ಆಲಿಸಿ ಭೂಸ್ವಾಧೀನವಾದ ಜಮೀನಿಗೆ ಪರಿಹಾರದ ಹಣ ಕಡಿಮೆ ಬಂದಿರುವ ರೈತರ ಸಂಪೂರ್ಣ ವಿವರಗಳೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿ ಪರಿಹಾರ ಹಣವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಖಾತೆ ಬದಲಾವಣೆ ಆಗದೆ ಇರುವ ಪ್ರಕರಣಗಳನ್ನು ಕೂಡಲೆ ಬಗೆಹರಿಸಲು ತಹಶಿಲ್ದಾರ್ ರವರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದ ಅವರು, ರೈತರನ್ನು ಕಚೇರಿಗೆ ಅಲೆದಾಡಿಸಬೇಡಿ ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ವೆಂಗಸಂದ್ರ ಪಂಚಾಯಿತಿ ಅಧ್ಯಕ್ಷ ಶಂಕರ್, ಎ.ಪಿ.ಎಂ.ಸಿ. ಅಧ್ಯಕ್ಷ ವಿಜಯರಾಘವ ರೆಡ್ಡಿ, ಗ್ರಾ.ಪಂ ಸದಸ್ಯರಾದ ಅಪ್ಪಾಜಿ ಗೌಡ, ಮುರಳೀಕೃಷ್ಣ, ವೆಂಕಟರಾಮ್, ಮುಖಂಡರಾದ ರಾಜೇಂದ್ರ, ವೆಂಕಟಾಚಲಪತಿ, ಹೆಚ್.ಕೃಷ್ಣಪ್ಪ, ಚಂದ್ರಶೇಖರ್, ರವಿಕುಮಾರ್, ರಮೇಶ್, ವೆಂಕಟರಾಮಪ್ಪ,ಸುಧಾಕರ್, ಲಕ್ಷ್ಮೀಪತಿ, ಅಣ್ಣಯ್ಯ, ರೆಡ್ಡೆಪ್ಪ, ಕೃಷ್ಣಮೂರ್ತಿ, ಎಂ.ಡಿ. ನಾರಾಯಣ್, ಬಾಲಕೃಷ್ಣ, ಪದ್ಮನಾಭರೆಡ್ಡಿ, ಶ್ರೀನಿವಾಸರೆಡ್ಡಿ, ಶ್ರೀಧರ್ ರೆಡ್ಡಿ, ರಾಮಕೃಷ್ಣಪ್ಪ, ಮುನಿಸ್ವಾಮಿ ಮತ್ತಿತರ ಮುಖಂಡರು ಹಾಜರಿದ್ದರು.

ರೈತರು,ತಾಯಂದಿರ ಹೃದಯ,ನಾಲಿಗೆಯಲ್ಲಿ ನೆಲಸಿರುವ – ಡಿಸಿಸಿ ಬ್ಯಾಂಕ್‍ಗೆ ದ್ರೋಹ ಬಗೆದ ಸಿಬ್ಬಂದಿಯ ಸಮಾಜ ಕ್ಷಮಿಸದು-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಬಡವರು,ರೈತರು,ತಾಯಂದಿರ ಹೃದಯ, ನಾಲಿಗೆಯಲ್ಲಿ ಡಿಸಿಸಿ ಬ್ಯಾಂಕ್ ಹೆಸರು ಹರಿದಾಡುತ್ತಿದೆ, ಇಂತಹ ಸಂಸ್ಥೆಯನ್ನು ಹಾಳು ಮಾಡುವ ಪ್ರಯತ್ನ ನಡೆಸಿದರೆ ಸಮಾಜ ಎಂದಿಗೂ ಕ್ಷಮಿಸದು ಎಂಬುದನ್ನು ಅರಿತು ಕೆಲಸ ಮಾಡಿ ಎಂದು ಸಿಬ್ಬಂದಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ಭಾನುವರ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಪಾರದರ್ಶಕ ಆಡಳಿತಕ್ಕಾಗಿ ಮತ್ತು ಭ್ರಷ್ಟತೆ ಇಣುಕಿ ನೋಡದಂತೆ ತಡೆಯಲು ಇಡೀ ಪ್ಯಾಕ್ಸ್ ವ್ಯವಸ್ಥೆಯನ್ನೇ ಗಣಕೀಕರಣ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ.
ನ.1 ರಿಂದ ಪ್ಯಾಕ್ಸ್‍ಗಳ ಪೂರ್ಣ ಗಣಕೀಕರಣ ಮತ್ತು ವಹಿವಾಟು ಆರಂಭಗೊಳ್ಳಲಿದ್ದು, ಇದು ಸಹಕಾರ ಕ್ಷೇತ್ರದಲ್ಲೇ ಒಂದು ಮೈಲಿಗಲ್ಲು ಎಂದ ಅವರು, ಸೊಸೈಟಿಗಳ ಆಯಾದಿನದ ವಹಿವಾಟು ಕ್ಷಣಾರ್ಧದಲ್ಲಿ ಆನ್‍ಲೈನ್‍ನಲ್ಲಿ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಲಭ್ಯವಾಗಲಿದ್ದು, ತಾಯಂದಿರು,ರೈತರಲ್ಲಿ ಸಹಕಾರ ಸಂಸ್ಥೆಗಳ ಬಗೆಗಿನ ನಂಬಿಕೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.


ಗಣಕೀಕರಣವಾಗದಿದ್ದರೆಸಾಲಸೌಲಭ್ಯ ಇಲ್ಲ
ಡಿಸಿಸಿ ಬ್ಯಾಂಕ್ ಅಭಿವೃದ್ದಿಗೆ ಹಿನ್ನಡೆಯಾದರೆ ಅದು ಜಿಲ್ಲೆಯ ಬಡವರು,ತಾಯಂದಿರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತು ಬದ್ದತೆಯಿಂದ ನಿರೀಕ್ಷೆಗೂ ಮೀರಿ ಕೆಲಸ ಮಾಡಿ ಬ್ಯಾಂಕನ್ನು ಉಳಿಸಿ ಬೆಳೆಸುವ ಹೊಣೆ ನಿಮ್ಮ ಮೇಲಿದೆ ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಅವಿಭಜಿತ ಜಿಲ್ಲೆಯ ಎಲ್ಲ ಸೊಸೈಟಿಗಳನ್ನು ಆನ್‍ಲೈನ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಈ ಮೂಲಕ ಪಾರದರ್ಶಕ ಆಡಳಿತಕ್ಕೆ ದಿಟ್ಟ ಹೆಜ್ಜೆ ಇರಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಎಲ್ಲರೂ ಎಟಿಎಂ ಮೂಲಕ ಹಣ ಪಡೆದುಕೊಳ್ಳುವುದರಿಂದ ಸಿಬ್ಬಂದಿ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದ್ದು ಇದನ್ನು ಸಮರ್ಥವಾಗಿ ಎದುರಿಸುವ ಕೆಲಸ ಆಗಬೇಕಾಗಿದೆ ಎಂದರು.
ಗಣಕೀಕರಣದಿಂದ ಹೊರಗುಳಿಯುವ ಪತ್ತಿನ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕಿನಿಂದ ಯಾವುದೇ ಸಾಲಸೌಲಭ್ಯ ಸಿಗುವುದಿಲ್ಲ ಎಂದು ಎಚ್ಚರಿಸಿದ ಅವರು, ಪ್ರತಿ ಸೊಸೈಟಿಯೂ ಗಣಕೀಕರಣಗೊಳ್ಳಲು ಕ್ರಮ ಕೈಗೊಳ್ಳಿ, ಈ ಸಂಬಂಧ ಕೆಲಸದ ಜವಾಬ್ದಾರಿ ಹೊತ್ತಿರುವ ವಿ-ಸಾಫ್ಟ್ ಸಿಬ್ಬಂದಿಗೆ ಸಹಕಾರ ನೀಡಿ ಎಂದರು.


ಡಿಸಿಸಿ ಬ್ಯಾಂಕಿಗೆ ಸಾಧನೆಗಳ ಗರಿ
ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಈಗಾಗಲೇ ಅತಿ ಹೆಚ್ಚು ತಾಯಂದಿರಿಗೆ ಸಾಲ ನೀಡಿರುವುದು, ಎನ್‍ಪಿಎ ಕಡಿಮೆ ಮಾಡಿರುವುದರಲ್ಲಿ ರಾಷ್ಟ್ರ ಮಟ್ಟದ ಖ್ಯಾತಿಗೆ ಒಳಗಾಗಿದೆ, ಇದೀಗ ಇದರ ಜತೆಗೆ ಸಂಪೂರ್ಣ ಸೊಸೈಟಿಗಳ ಗಣಕೀಕರಣದ ಮೂಲಕ ಮತ್ತೊಂದು ಸಾಧನೆಯ ಗೌರವ ಸಿಗಲಿದೆ ಎಂದರು.
ಬ್ಯಾಂಕ್ ಅಭಿವೃದ್ದಿಯ ಹಾದಿಯಲ್ಲಿ ಸಾಗುವಾಗ ಸಹಜವಾಗಿ ಟೀಕೆ-ಟಿಪ್ಪಣಿ ಎದುರಾಗುತ್ತಿದ್ದು ಇದನ್ನು ಸಕಾರಾತ್ಮಕವಾಗಿ ಎದಿರಿಸುವ ಮೂಲಕ ಗುರಿ ಮುಟ್ಟಬೇಕು. ಟೀಕೆಗೆ ಸಾಧನೆ ಉತ್ತರವಾಗಬೇಕಿದ್ದು, ಮನುಷ್ಯ ಸುಲಭವಾಗಿ ಸಾವನ್ನು ಒಪ್ಪಬಹುದೇ ವಿನಃ ಸೋಲಲ್ಲ ಎಂದು ಕಿವಿಮಾತು ಹೇಳಿದರು.


ಠೇವಣಿ ಸಂಗ್ರಹ ಗುರಿ ಸಾಧನೆ ಮಾಡಿ
ಡಿಸಿಸಿ ಬ್ಯಾಂಕಿನಿಂದ ಬಿಡುಗಡೆ ಮಾಡಿರುವ ಬಾಂಡ್‍ನ್ನು ಮಾರಾಟ ಮಾಡಲು ಸಿಬ್ಬಂದಿ ಮುಂದಾಗಬೇಕಿದ್ದು ದಿನವೊಂದಕ್ಕೆ ಪ್ರತಿ ಶಾಖೆಯಿಂದ ಕನಿಷ್ಠ 50 ಬಾಂಡ್ ಬಿಕರಿ ಆಗಬೇಕು. ಪ್ರತಿ ಸೊಸೈಟಿಗೂ ಠೇವಣಿ ಸಂಗ್ರಹದ ಗುರಿಯನ್ನು ಬ್ಯಾಂಕ್ ವ್ಯವಸ್ಥಾಪಕರು ನೀಡಬೇಕಿದ್ದು 10 ಕೋಟಿ ರೂ. ಸಾಲಕ್ಕೆ 1 ಕೋಟಿ ರೂ ಡಿಪಾಸಿಟ್ ಆಗಲೇಬೇಕು ಎಂದು ತಾಕೀತು ಮಾಡಿದರು.
ಬ್ಯಾಂಕಿನ 125 ಸಿಬ್ಬಂದಿ ಸಹಾ ವೈಯಕ್ತಿಕವಾಗಿ ಠೇವಣಿ ಸಂಗ್ರಹ ಮಾಡುವ ಮೂಲಕ ಗುರಿ ಸಾಧನೆ ಮಾಡಬೇಕು ಎಂದು ಸೂಚಿಸಿದ ಅಧ್ಯಕ್ಷರು, ಸಾಲಕ್ಕಾಗಿ ಮಾತ್ರ ಡಿಸಿಸಿ ಬ್ಯಾಂಕ್ ಎಂಬ ಅಪವಾದ ದೂರಮಾಡಿ ಎಂದು ಸೂಚಿಸಿದರು.
ಸೊಸೈಟಿಗಳು ಸದಾ ಕ್ರಿಯಾಶೀಲವಾಗಿರಲು ಈಗಾಗಲೇ ದೇಶಿಸ್ಕಿಲ್ಸ್ ಸಂಸ್ಥೆ ಆಶ್ರಯದಲ್ಲಿ ಪ್ಯಾಕ್ಸ್‍ಗಳು ಶೂನ್ಯ ಬಂಡವಾಳದೊಂದಿಗೆ ಅಗತ್ಯವಸ್ತುಗಳ ಮಾರಾಟದ ಮಾಲ್ ಆರಂಭಕ್ಕೂ ಸೂಚಿಸಿದ್ದು, ಅದು ಕಾರ್ಯಗತವಾದರೆ ತಾಯಂದಿರು,ರೈತರು,ಸಾರ್ವಜನಿಕರೊಂದಿಗೆ ಸೊಸೈಟಿ ಸಂಪರ್ಕ ಹೆಚ್ಚಲಿದೆ, ಠೇವಣಿ ಹರಿದು ಬರಲು ಸಹಕಾರಿಯೂ ಆಗಲಿದೆ ಎಂದರು.
ಸಭೆಯಲ್ಲಿ ಬ್ಯಾಂಕಿನ ಎಜಿಎಂ ಖಲೀಮುಲ್ಲಾ, ಅಧಿಕಾರಿಗಳಾದ ಹುಸೇನ್ ದೊಡ್ಡಮನಿ, ಅರುಣ್‍ಕುಮಾರ್, ಶುಭಾ,ಪದ್ಮಮ್ಮ, ಬೇಬಿ ಶಾಮಿಲಿ, ಬಾಲಾಜಿ, ಜಬ್ಬಾರ್ ಮತ್ತಿತರ ಸಿಬ್ಬಂದಿ ಹಾಜರಿದ್ದರು.