HOLY ROSARY CHURCH, KUNDAPUR – 450 th JUBILEE SOUVENIR 2021

ಭಂಡಾರ್ಕಾರ್ಸ್- ಸರಕಾರಿ, ಅನುದಾನಿತ, ಖಾಸಗಿ ಕಾಲೇಜುಗಳ ಪ್ರಾಂಶುಪಾಲರಿಗೆ ಉಪನ್ಯಾಸಕರಿಗಳಿಗೆ ವಿಶ್ವವಿದ್ಯಾನಿಲಯದಿಂದ ಕಾರ್ಯಾಗಾರ

JANANUDI.COM NETWORK


ಕುಂದಾಪುರ: ನವೆಂಬರ್ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಕುಂದಾಪುರದ ಸುತ್ತಮುತ್ತಲಿನ ಸರಕಾರಿ ಅನುದಾನಿತ ಖಾಸಗಿ ಮತು ್ತಅನುದಾನರಹಿತ ಖಾಸಗಿ ಕಾಲೇಜುಗಳ ಪ್ರಾಂಶುಪಾಲರುಗಳು ಮತ್ತು ಉಪನ್ಯಾಸಕರಿಗಳಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಕಾರ್ಯಾಗಾರವನ್ನು ಹಮ್ಮಿಕೊಂಡಿತು.
ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಇರುವ ಬಹುತೇಕ ವಿಷಯಗಳ ಕುರಿತಗೊಂದಲ ಮತ್ತು ಸಮಸ್ಯೆಗಳಿಗೆ ಪರಿಹಾರಗಳಿಲ್ಲವಾದರೂ ಸಮಾಧಾನಕರ ಉತ್ತರಗಳು ದೊರಕಿದವು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಶಿಕ್ಷಣ ನೀತಿಯ ಮಂಗಳೂರು ವ್ಯಾಪ್ತಿಯ ನೋಡಲ್ ಅಧಿಕಾರಿಗಳಾದ ರವೀಂದ್ರಆಚಾರ್ ಮಾತನಾಡಿ ಈ ಹಿಂದೆ ವಿದ್ಯಾರ್ಥಿಯು ಕೇವಲ ಓದುವುದು ಪರೀಕ್ಷೆ ಬರೆಯುವುದು ಮತ್ತು ಅಂಕ ಗಳಿಸುವುದು ಬಿಟ್ಟರೆ ಜ್ನಾನಾಧಾರಿತ ಶಿಕ್ಷಣಕ್ಕೆ ತೆರೆದುಕೊಳ್ಳುವ ಅವಕಾಶಗಳು ಕಡಿಮೆ ಇದ್ದವು. ಶಿಕ್ಷಣ ಕೇವಲ ಓದುವುದಕ್ಕೆ ಮತ್ತು ಅಂಕಕ್ಕೆ ಸೀಮಿತವಾU ಬಾರದು ಎಂಬುದನ್ನು ಮನಗಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಅನುಷ್ಠನ ಗೊಳಿಸಲಾಗಿದೆ. ಈಗಿನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯದ ಕುರಿತಂತೆ ಕೌಶಲ್ಯ ಮತ್ತು ಜ್ನಾನವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಆದರೆ ಅನಿಷ್ಠನಕ್ಕೆ ತರುವಲ್ಲಿ ನ್ಯುನತೆಗಳು ಮತ್ತು ಗೊಂದಲಗಳಿವೆ. ಅದಕ್ಕಾಗಿ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯು 2020-2040 ಎಂಬ ಸಮಯದ ಚೌಕಟ್ಟನ್ನು ತಂದಿದ್ದಾರೆ. ನಾವುಗಳು ಇನ್ನೂ ಈ ಹೊಸತನಕ್ಕೆ ನಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಕಷ್ಟ ಆದರೂ ತೋಡಗಿಸಿಕೊಂಡ ಮೇಲೆ ಖಂಡಿತ ಒಳ್ಳೆಯ ಅಭಿಪ್ರಾಯಗಳು ಅನುಭವಗಳು ಸಾಧ್ಯಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಕ್ಷರಾದ ಮಂಜುನಾಥ ಪಟ್ಟಾಭಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯುಕುರಿತ ರೂಪು ರೇಷೆಗಳನ್ನು ಪರಿಚಯಿಸದರು.
ನಂತರದಲ್ಲಿ ನಡೆದ ಸಂವಾದದಲ್ಲಿ ಉಪನ್ಯಾಸಕರು ಮತ್ತು ವಿವಿಧ ಕಾಲೇಜುಗಳ ಪ್ರಾಂಶುಪಾಲರು ಸಾಕಷ್ಟು ಬಿರುಸುನ ಚರ್ಚೆ ನಡೆಸಿ ಹಲವಾರು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಆದರೆ ಅಧಿಕಾರಿಗಳಿಂದ ಸಮಾಧಾನಕರ ಉತ್ತರಗಳಿಗಷ್ಟೇ ದೊರಕಿದವು ಆದರೆ ಪರಿಹಾರ ಸಿಗಲಿಲ್ಲ ಎಂಬುದು ಹೆಚ್ಚಿನ ಕಾಲೇಜುಗಳ ಉಪನ್ಯಾಸಕರ ಅಭಿಪ್ರಾಯವಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಪಾಠೇತರ ಚಟುವಟಿಕೆಗಳಲ್ಲಿ ಇರುವ ಯೋಗ ಮತ್ತು ಸ್ಪೋಟ್ರ್ಸ ಕುರಿತು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಯೋಗ ನಮ್ಮದೇಶದ ಶ್ರೇಷ್ಠ ವಿದ್ಯೆ. ಅದಕ್ಕೆ ಪರಿಣಿತರ ಅಗತ್ಯತೆ ಬೇಕಾಗುತ್ತದೆ. ಕಾಲೇಜುಗಳಲ್ಲಿ ಯೋಗ ಪರಿಣಿತರಿಂದ ಯೋಗ ಕಲಿಸಲು ತಾವು ಯಾವರೀತಿಯ ಅನುಕೂಲ ಮಾಡಿಕೊಡುವಿರಿ? ಅದರಲೂ ಆರು ಸೆಮಿಸ್ಟರ್ ಗಳಲ್ಲಿ ಸ್ಪೋಟ್ರ್ಸನ್ನು ಓದಲೇಬೇಕು. ಹಾಗಿರುವಾಗ ಸಾವಿರ ಸಂಖ್ಯೆಯ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಏಕಕಾಲದಲ್ಲಿ ಚಟುವಟಿಕೆಗಳನ್ನು ಮಾಡುವುದು ಹೇಗೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿಯವರು ಕೇಳಿದ ಪ್ರಶ್ನೆಗೆ ನೋಡಲ್ ಅಧಿಕಾರಿಗಳಾದ ರವೀಂದ್ರ ಆಚಾರ್ ಅವರು ಉತ್ತರಿಸಿ ಇದನ್ನು ಸರಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಒಪನ್ ಎಲೆಕ್ಟವ್ ಎನ್ನುವ ವಿಷಯಕ್ಕೆ ಬಂದರೆ ವಿದ್ಯಾರ್ಥಿಯು ತಾನೂ ಅಭ್ಯಸಿಸುವ ವಿಷಯವನ್ನು ಬಿಟ್ಟು ಬೇರೆಯದಾದ ವಿಷಯವನ್ನು ಅಭ್ಯಸಿಸಬೇಕು. ಆದರೆ ಇಲ್ಲಿ ಕೆಲವು ಕಾಲೇಜುಗಳಲ್ಲಿ ಕೆಲವು ಕೋರ್ಸಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇನ್ನೊಂದೆಡೆ ಕೇವಲ ವಾಣಿಜ್ಯ ವಿಷಯದ ಕಾಲೇಜುಗಳಿವೆ ಕೆಲವು ಕಡೆ ಕೆಲವು ಕೋರ್ಸಗಳಿದ್ದರೂ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುಲಾಗಿದೆ ಮತ್ತು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗಿರುವಾಗಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗಲಿಲ್ಲ ಎಂಬುದು ಹಲವು ಕಾಲೇಜುಗಳ ಉಪನ್ಯಾಸಕರ ಅಭಿಪ್ರಾಯವಾಗಿದೆ.


ಇವುಗಳನ್ನು ಮುಖ್ಯವಾಗಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಭ್ಯಸಿಸಬೇಕಾದ ಡಿಜಿಟಲ್ ಪ್ಲೂಯನ್ಸಿ ಮತ್ತು ಪರಿಸರ ಅಧ್ಯಯನ ಎಂಬ ವಿಷಯಕ್ಕೆ ಕುರಿತಂತೆ ಇರುವ ಗೊಂದಲವನ್ನು ಸ್ವಲ್ಪಮಟ್ಟಿಗೆ ಸರಿಪಡಿಸಿ ಸೆಮಿಸ್ಟರ್ ಗಳಿಗೆ ಪೂರಕವಾಗಿ ನೀಡಲಾಗುವುದಕೆ ಅನುಮತಿ ದೊರಕಿತು. ಡಿಜಿಟಲ್ ಪ್ಲೂಯನ್ಸಿ ಎಂಬ ವಿಷಯವನ್ನು ಯಾರು ಕಲಿಸುವುದು. ಅಲ್ಲದೇ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಇದು ಅಗತ್ಯವೇ ಎಂಬುದರ ಕುರಿತಾಗಿ ಪ್ರಶ್ನೇಗಳನ್ನು ಕೇಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿಯವರು ವಹಿಸಿದ್ದರು.
ಕನ್ನಡ ವಿಭಾಗ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಸ್ವಾಗತಿಸಿದರು. ಬೌತಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ಲಲಿತಾದೇವಿ ವಂದಿಸಿದರು. ಸೂಕ್ಷ್ಮಾಣು ಜೀವಶಾಸ್ತ್ರ ಮುಖ್ಯಸ್ಥೆ ಸುಮಾಜಿ.ಆರ್ ಕಾರ್ಯಕ್ರಮ ನಿರ್ವಹಿಸಿದರು.

ಜಗತ್ತಿಗೆ ಮತ್ತೆ ಭೀತಿ ಹುಟ್ಟಿಸಿದ ಕೋವಿಡ್ ಹೊಸ ರೂಪಾಂತರಿ “ಓಮಿಕ್ರಾನ್” ಬಗ್ಗೆ ಸ್ವಲ್ಪ ಮಾಹಿತಿ

JANANUDI.COM NETWORK


ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಓಮಿಕ್ರಾನ್ ವೈರಸ್ ವಿಶ್ವದಾದ್ಯಂತ ಮತ್ತೆ ಭೀತಿಯನ್ನು ಸೃಷ್ಟಿಸಿದೆ. ಈ ರೂಪಾಂತರವನ್ನು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಲಾಗಿದೆ. ಅದರಂತೆ ಓಮಿಕ್ರಾನ್ ಸೋಂಕು ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ ಮೊದಲ ಬಾರಿಗೆ ದೃಢೀಕರಿಸಲ್ಪಟ್ಟಿದೆ.
ಹಾಂಕಾಂಗ್ ಮತ್ತು ಬೆಲ್ಜಿಯಂನಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿದ್ದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದವರ ಬಗ್ಗೆ ಭಾರತದಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಹೊಸ ತಳಿಯ ಓಮಿಕ್ರಾನ್ ಪರಿಣಾಮಗಳು ಮತ್ತು ಅಪಾಯದ ಬಗ್ಗೆ ಅಧ್ಯಯನ ನಡೆಯುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಹಾಗೂ ಕೈಗಳನ್ನು ಆಗಾಗ ಸ್ವಚ್ಛಗೊಳಿಸುವಂತೆ ಮುಂಜಾಗ್ರತೆ ಕ್ರಮಗಳಿಗೆ ಸೂಚಿಸಲಾಗಿದೆ.
ಓಮಿಕ್ರಾನ್ ರೋಗಲಕ್ಷಣಗಳು
ಇತರ ಕೋವಿಡ್ ರೂಪಾಂತರಗಳಂತೆ ಕೆಮ್ಮು, ಶೀತ, ಜ್ವರ, ಗಂಟಲು ನೋವು, ತಲೆನೋವು ಇರುವುದು, ರುಚಿ ಮತ್ತು ವಾಸನೆಯ ನಷ್ಟ ಉಂಟಾಗುವುದು.
ಅಧಿಕ ದೇಹದ ಉಷ್ಣತೆ, ನಿರಂತರ ಕೆಮ್ಮು ಮತ್ತು ವಾಸನೆ ಅಥವಾ ರುಚಿಯ ನಷ್ಟ ಈ ರೂಪಾಂತರದಲ್ಲಿ ಹೆಚ್ಚು ಪ್ರಬಲವಾಗಬಹುದು.
ಸುಸ್ತು, ಗಂಟಲು ನೋವು, ತಲೆನೋವು, ಮೈಕೈ ನೋವು, ಅತಿಸಾರ, ಚರ್ಮದ ಮೇಲೆ ದದ್ದು, ಕಣ್ಣುಗಳು ಕೆಂಪಾಗಾಗುವುದು.
ಉಸಿರಾಟದಲ್ಲಿ ತೊಂದರೆ ತೊಂದರೆ ಉಂಟಾಗುವುದು
ನಡೆದಾಡಲು ಸಮಸ್ಯೆಯಾಗುವುದು
ಎದೆ ನೋವು ಸಮಸ್ಯೆ ಉದ್ಭವಿಸುತ್ತದೆ.
ಓಮಿಕ್ರಾನ್ ರೂಪಾಂತರವು ಇದುವರೆಗೆ ಪತ್ತೆಯಾಗಿರುವ ರೂಪಾಂತರಿಗಳಿಕಿಂತ ಹೆಚ್ಚು ಅಪಾಯಕಾರಿ ರೂಪಾಂತರಿ ಎಂದು ತಜ್ಞರು ತಿಳಿಸಿದ್ದಾರೆ.

ಒರ್ವ ವೈದ್ಯ 9 ಮಂದಿ ಮಹಿಳಾ ಸಿಬ್ಬಂದಿಗಳು ಆತನ ಚೆಲ್ಲಾಟಕ್ಕೆ ತುತ್ತು: ಆರೋಪಿ ಡಾ. ರತ್ನಾಕರ್ ಬಂಧನ ಮತ್ತು ಜಾಮೀನು

JANANUDI.COM NETWORK


ಮಂಗಳೂರು; ಆರೋಗ್ಯ ಇಲಾಖೆಯ 9 ಮಂದಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕುಷ್ಠ ರೋಗ ವಿಭಾಗದ ಅಧಿಕಾರಿಯಾದ ಡಾ. ರತ್ನಾಕರ್ ನನ್ನು ಬಂಧಿಸಲಾಗಿದ್ದು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಮಾಧ್ಯಮಗಳಲ್ಲಿ ಶುಕ್ರವಾರ ಡಾ. ರತ್ನಾಕರನ ರಾಸಲೀಲೆ ವೀಡಿಯೊ ಹಾಗೂ ಫೆÇೀಟೋಗಳು ಬಹಿರಂಗಗೊಳ್ಳುತ್ತಿದ್ದಂತೆ ಆರೋಪಿಯನ್ನು ಪಾಂಡೇಶ್ವರ ಮಹಿಳಾ ಪೆÇಲೀಸರು ವಶಕ್ಕೆ ಪಡೆದಿದ್ದರು. ಶನಿವಾರ ಈತನ ವಿರುದ್ಧ ನಾಲ್ವರು ಮಹಿಳೆಯರು ಠಾಣೆಗೆ ಬಂದು ದೂರು ನೀಡಿದ್ದಾರೆ. ಇವರಲ್ಲಿ ಮೂವರು ಸಂತ್ರಸ್ತೆಯಾಗಿದ್ದಾರೆ.
ಈಗಾಗಲೇ ಸೋರಿಕೆಯಾಗಿರುವ ವೀಡಿಯೋದಲ್ಲಿರುವಂತೆ ಆರೋಪಿಯು “ಸಂತ್ರಸ್ತ ಮಹಿಳೆಯರನ್ನು ಕುಂದಾಪುರ, ಮುರ್ಡೇಶ್ವರ, ಮಡಿಕೇರಿ, ಪಿರಿಯಾಪಟ್ಟಣಕ್ಕೆ ಕರೆದೊಯ್ದಿರುವುದು ತಿಳಿದುಬಂದಿದೆ” ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ರತ್ನಾಕರ ಚೆಲ್ಲಾಟ ನಡೆಸಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳಾ ಸಂಘಟನೆ ಕಾರ್ಯಕರ್ತೆಯೊಬ್ಬರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆರೋಪಿ ರತ್ನಾಕರನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದು. ಇನ್ಸ್ಪೆಕ್ಟರ್ ರೇವತಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಯ ಮೊಬೈಲ್ ಫೆÇೀನ್ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಗ್ಯ ಇಲಾಖೆಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾದ ಕುಷ್ಠರೋಗ ವಿಭಾಗದ ಅಧಿಕಾರಿ ಡಾ. ರತ್ನಾಕರ್ ಗೆ ನ್ಯಾಯಾಲಯವು 2 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿತ್ತು. ಅದರ ಅವಧಿ ಸೋಮವಾರ ಮುಗಿದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 3ನೇ ಜೆಎಂ ಎಫ್ ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಸರ್ಕಾರಿ ಆಸ್ತಿಗಳ ಅಕ್ರಮ ಒತ್ತುವರಿಗಳ ತೆರವು ಮತ್ತು ಕೋಲಾರ ಕೆರೆ ಕೋಡಿ ಮೇಲ್ಸೇತುವೆ ಹೊಸದಾಗಿ ನಿರ್ಮಿಸಲು ಒತ್ತಾಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ನವೆಂಬರ್ 29 : ಕೋಲಾರ ಜಿಲ್ಲೆಯಾದ್ಯಂತ ಸರ್ಕಾರಿ ಕೆರೆ ಗೋಕುಂಟೆ, ರಾಜಕಾಲುವೆ, ಗುಂಡುತೋಪು, ಗೋಮಾಳ ಜಮೀನುಗಳ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಹಾಗೂ ಕೋಲಾರ ನಗರದಲ್ಲಿ ಮಳೆಯಿಂದ ಹಾಳಾಗಿರುವ ಪ್ರಮುಖ ರಸ್ತೆಗಳನ್ನು ಮತ್ತು ಒಡೆದು ಹೋಗಿರುವ ಗಾಂಧಿನಗರದ ಹತ್ತಿರದ ಕೋಡಿ ಮೇಲುಸೇತುವೆಯನ್ನು ಹೊಸದಾಗಿ ನಿರ್ಮಿಸುವಂತೆ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಿ.ಆರ್.ಪಿ.ವೆಂಕಟೇಶ್ ಮತ್ತು ಉಪಾಧ್ಯಕ್ಷ ಮಾಲೂರು ಮಂಜುನಾಥ್ ರವರ ನೇತೃತ್ವದ ನಿಯೋಗವು ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಆರ್.ಪಿ. ವೆಂಕಟೇಶ್ ಮುಳಬಾಗಿಲು ತಾಲ್ಲೂಕು ವಿರೂಪಾಕ್ಷ ಗ್ರಾಮದ ಸರ್ವೇ ನಂ.28 4 ಎಕರೆ 14 ಗುಂಟೆ ಮತ್ತು 30ರಲ್ಲಿ 0.36 ಗುಂಟೆಯ ಸನ್ಯಾಸಿ ತೋಪು, ಅಮರಾಯಿ ತೋಪು ಎಂದು ಕರೆಯಲ್ಪಡುವ ಸರ್ಕಾರಿ ಗುಂಡುತೋಪಿನ ಜಾಗವನ್ನು ಬೆಂಗಳೂರಿನ ಬೆಲ್ಡರ್‍ಗಳು ಅಕ್ರಮವಾಗಿ ಒತ್ತುವರಿ ಮತ್ತು ಕಬ್ಜ ಮಾಡಿಕೊಂಡು ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸಿರುತ್ತಾರೆ.


ಕೋಲಾರದ ಅಮಾನಿಕೆರೆ, ಕೋಡಿಕಣ್ಣೂರು ಕೆರೆಯ ನೀರು ಮುಳುಗಡೆ ಪ್ರದೇಶ ಹಾಗೂ ರಾಜಕಾಲುವೆಗಳನ್ನು ಭೂಗಳ್ಳ ಮಾಫೀಯಾಗಳವರು ಅಕ್ರಮವಾಗಿ ಕೆರೆಯ ನೀರು ಮುಳುಗಡೆ ಪ್ರದೇಶವನ್ನು ಕಬ್ಜಾ ಮಾಡಿಕೊಂಡು, ಕೆಲವರು ಸಂಬಂಧಪಡದ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಮನೆಗಳನ್ನು, ವಾಣಿಜ್ಯ ಕಟ್ಟಡಗಳನ್ನು, ಇಟ್ಟಿಗೆ ಕಾರ್ಖಾನೆಗಳನ್ನು ಹಾಗೂ ಇತರೆ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇದೇ ರೀತಿ ಕೋಲಾರ ಜಿಲ್ಲೆಯಾದ್ಯಂತ ಇರುವಂತಹ ಸರ್ಕಾರಿ ಕೆರೆಗಳನ್ನು, ಗೋಕುಂಟೆಗಳನ್ನು, ಗುಂಡುತೋಪುಗಳನ್ನು, ಗೋಮಾಳಗಳನ್ನು, ರಾಜಕಾಲುವೆಳಗಳನ್ನು ಅನೇಕ ಕಡೆಗಳಲ್ಲಿ ಒತ್ತುವರಿ ಮತ್ತು ಕಬ್ಜಾ ಮಾಡಲಾಗಿದ್ದು, ಇವುಗಳನ್ನು ಸ್ಥಳ ಪರಿಶೀಲನೆ ನಡೆಸಿ ಸರ್ವೇ ನಡೆಸಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿರುತ್ತಾರೆ.
ಮಾಲೂರು ಎಂ.ಎನ್.ಮಂಜುನಾಥ್ ಮಾತನಾಡಿ ಇತ್ತೀಚಿನ ಚಂಡಮಾರುತದ ಮಳೆ ಪರಿಣಾಮವಾಗಿ ಕೋಲಾರ ಅನೇಕ ಪ್ರಮುಖ ರಸ್ತೆಗಳು ಗುಂಡಿಗಳ ಮಯವಾಗಿದ್ದು, ಸುಗಮ ವಾಹನ ಹಾಗೂ ಜನ ಸಂಚಾರಕ್ಕೆ ತುಂಬಾ ಅನಾನುಕೂಲವಾಗಿರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಅಪಘಾತಗಳಿಗೆ ಎಡೆ ಮಾಡಿಕೊಟ್ಟು ಪ್ರಾಣ ಹಾನಿಯಾಗುವ ಸಂಭವವು ಹೆಚ್ಚು ಇರುತ್ತದೆ.
ಕೋಲಾರ ಅಮಾನಿಕೆರೆಯ ಗಾಂಧಿನಗರದ ಬಳಿ ಇರುವ ಕೆರೆ ಕೋಡಿಯು ಅತೀ ಪ್ರಾಚೀನ ಮೇಲು ಸೇತುವೆಯಾಗಿದ್ದು, ಇದು ಕೆಲವು ದಿನಗಳ ಹಿಂದೆ ಕೋಡಿ ಹೋಗುವ ನೀರಿನ ರಭಸದ ಪರಿಣಾಮವಾಗಿ ಇದರ ಕೆಲವು ತಡೆಗೋಡೆಗಳು ಒಡೆದು ಹೋಗಿದ್ದು, ಸೇತುವೆಯು ಶಿಥಿಲಾವ್ಯವಸ್ಥೆಯನ್ನು ತಲುಪಿ ಬಿದ್ದು ಹೋಗುವ ಹಂತವನ್ನು ತಲುಪಿರುತ್ತದೆ. ಇವುಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು ಮತ್ತು ಮೇಲ್ಸೇತುವೆಯನ್ನು ಹೊಸದಾಗಿ ನಿರ್ಮಿಸಿ ಮುಂದೆ ಆಗಬಹುದಾದಂತಹ ಆಸ್ತಿಪಾಸ್ತಿ ನಷ್ಠ ಮತ್ತು ಪ್ರಾಣ ಹಾನಿಯನ್ನು ತಪ್ಪಿಸಬೇಕೆಂದು ಕೋರಿರುತ್ತಾರೆ.
ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂಧಿಸಿ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಅಲ್ಲಿಂದ ಅನುದಾನಗಳು ಬಂದ ತಕ್ಷಣ ದುರಸ್ತಿ ಕಾಮಗಾರಿಗಳನ್ನು ಮಳೆ ಮುಗಿದ ನಂತರ ಪ್ರಾರಂಭಿಸುವುದಾಗಿ ಮತ್ತು ಹಂತಹಂತವಾಗಿ ಜಿಲ್ಲೆಯಾದ್ಯಂತ ಸರ್ಕಾರಿ ಜಮೀನುಗಳ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.
ನಿಯೋಗದಲ್ಲಿ ಮಾಲೂರಿನ ಪ್ರೇಮ್, ಯಶವಂತ್, ಕೋಲಾರದ ಕೀಲುಕೋಟೆ ಆಂಜನಪ್ಪ, ಬಾಲಕುಮಾರ್, ಮೇಸ್ತ್ರಿ ಸೊಣ್ಣಪ್ಪ, ಚಿಕ್ಕಮುನಿಯಪ್ಪ, ನವೀನ್, ಹನುಮಂತ, ಮುನಿಯಪ್ಪ, ರಾಜಣ್ಣ ಹಾಗೂ ಇತರರು ಇದ್ದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : “ಆದ್ವಿತೀಯ” ವಿಶೇಷ ಕಾರ್ಯಕ್ರಮ

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು


ಪ್ರತಿಯೊಂದು ಸಮಸ್ಯೆಯನ್ನು ಜಾಣ್ಮೆಯಿಂದ ಪರಿಹರಿಸುವವನೇ ನಿಜವಾದ ನಾಯಕ, ನಾಯಕತ್ವ ಕೇವಲ ಒಂದು ಹುದ್ದೆಯಲ್ಲ ಅದೊಂದು ಜವಾಬ್ದಾರಿ. ಎಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯಬಲ್ಲ ಚಾಣಾಕ್ಷನೇ ನಿಜವಾದ ನಾಯಕ. ಪ್ರತಿ ಬಾರಿ ಹೊಸತನದ ಯೋಜನೆ ಹಾಗೂ ಹೊಸ ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ಬೆಳೆಸಬಲ್ಲ ವ್ಯಕ್ತಿಯೇ ನಿಜವಾದ ನಾಯಕ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಹೇಳಿದರು.
ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಆದಿತ್ಯವಾರ ಜರಗಿದ 22ನೇ ವರ್ಷದ ವರ್ಷಾಚರಣೆಯ ಪ್ರಯುಕ್ತ ಜರಗಿದ “ಆದ್ವಿತೀಯ” ವಿಶೇಷ ಕಾರ್ಯಕ್ರಮದ ಮೂಲಕ ಮಾತನಾಡಿದರು.
ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಗೌರವಾಧ್ಯಕ್ಷ ರಾಜು ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಸಿಹಿಸಿದ್ದರು. ಈ ಸಂದರ್ಭದಲ್ಲಿ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ದಿನೇಶ್ ಪೂಜಾರಿ ಬಿರೋಟ್ಟು, ರಾಜೇಶ್ ಕೋಟ್ಯಾನ್, ಸತೀಶ್ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಸದಸ್ಯರಾದ ಹರೀಶ್ ಪೂಜಾರಿ, ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಆರತಿ ಕುಮಾರಿ, ಪದ್ಮಶ್ರೀ ಪೂಜಾರಿ, ಅಶ್ವಿನಿ ಪ್ರಭಾಕರ್, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪೂಜಾರಿ, ಕಿರಣ್ ಶೆಟ್ಟಿ, ದೀಕ್ಷಿತ್ ಸುವರ್ಣ, ಆದರ್ಶ್ ಸುವರ್ಣ, ಪ್ರಶಾಂತ್ ಬೋಳ, ಸುದರ್ಶನ್ ಸಾಲ್ಯಾನ್, ಕೀರ್ತನ್ ಕುಮಾರ್, ಮೊದಲಾದವರಿದ್ದರು.
ಸಂಘದ ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ ಸ್ವಾಗತಿಸಿದರು, ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ವೀಣಾ ಪೂಜಾರಿ ತಿಂಗಳ ವರದಿ ಮಂಡಿಸಿದರು, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್ ವಂದಿಸಿದರು

ಜಾಗತಿಕ್ ಡಿಜಿಟಲ್ ಕೊಂಕಣಿ ದಿವಸ್ 2021/Zagotik Digitol Konkonni Divos 2021

JANANUDI.COM NETWORK

ಆಶಾವಾದಿ ಪ್ರಕಾಶನಾನ್ ಮಾಂಡುನ್ ಹಾಡ್‌ಲ್ಲೆಂ ’ಜಾಗತಿಕ್ ಡಿಜಿಟಲ್ ಕೊಂಕಣಿ ದಿವಸ್ 2021’ ವೆಬಿನಾರ್ 28 ನವೆಂಬರ್ (ಆಯ್ತಾರಾ) ಸಾಂಜೆರ್ 4 ಥಾವ್ನ್ 6 ಪರ್ಯಾಂತ್ ಚಲ್ಲೆಂ. ಪಾಂಚ್ ಡಿಜಿಟಲ್ ಇ-ಪುಸ್ತಕಾಂಚೆಂ ವಿಮೋಚನ್, ಪಯ್ಣಾರಿ-ವೀಜ್ ಸಾಹಿತಿಕ್ ಸರ್ತೆಂತ್ ಇನಾಮಾಂ ತಶೆಂಚ್ ಆಶಾವಾದಿ ಜಾಗತಿಕ್ ಡಿಜಿಟಲ್ ಪುರಸ್ಕಾರ್ 2021 ಘೋಶಿತ್ ಕೆಲೊ.
ಕಾರ್ಯೆಂ ನಿರ್ವಾಹಕಿ ಬಾಯ್ ಸಿಯಾಲಿನಿ ಫೆರ್ನಾಂಡಿಸಾನ್ ಆಯ್ಲೆವಾರ್ ದೆವಾಧಿನ್ ಜಾಲ್ಲ್ಯಾ ಬೆನ್ನಿ ಟೀಚರಿಚ್ಯಾ ಅತ್ಮ್ಯಾಕ್ ಶಾಂತಿ ಮಾಗುನ್ ಏಕ್ ಮಿನುಟ್ ಮಾವ್ನ್ ಪ್ರಾರ್ಥನಾಂತ್ ಕಾರ್ಯಾಚಿ ಸುರ್ವಾತ್ ಕರುನ್ ಉಪ್ರಾಂತ್ ಅಪ್ಲ್ಯಾ ಜಿಣ್ಯೆಂತ್ ಪನ್ನಾಸ್ ವರಸಾಂ ಸಂಪಯಿಲ್ಲ್ಯಾ ಬಾಬ್ ಲಾರೆನ್ಸ್ ವಿನೋದ್ ಬಾರ್ಬೋಜಾಕ್ ಪರ್ಬಿಂ ದಿವುನ್. ಕೊಂಕಣಿಕ್ ರಾಜ್ಯ್/ಲಿಪಿಚಿಂ ಸೀಮಾಂ ಉತ್ರುಂಕ್ ಕಶೆಂ ಡಿಜಿಟಲ್ ಮಾಧ್ಯಮ್ ಆಧಾರ್ ಜಾತಾ ಮ್ಹಳ್ಳೆಂ ಸಾಂಗುನ್ ಹ್ಯಾ ದಿಶೆನ್ ಆಶಾವಾದಿ ಪ್ರಕಾಶನಾಚ್ಯಾ ಡಿಜಿಟಲ್ ವಾವ್ರಾಚಿ ಮಟ್ವಿ ಝಳಕ್ ದಿತಚ್ ಪಯ್ಣಾರಿ.ಕೊಮ್ ಸಹ-ಸಂಪಾದಕ್ ಬಾಬ್ ಶೈಲೇಂದ್ರ ಮೆಹ್ತಾನ್ ಸ್ವಾಗತ್ ಉಲವ್ಪ್ ಕೆಲೆಂ. ಕಾರ್ಯಾಚೆಂ ಉಗ್ತಾವಣ್ ಕರುನ್ ಅಪ್ಲ್ಯಾ ಸಂಧೇಶಾಂತ್ ’ಡಿಜಿಟಲ್ ಮಾಧ್ಯಮಾಂತ್ ಬರೆಂ ತಶೆಂಚ್ ವಾಯ್ಟ್ ಎಕಾಚ್ ಮಾಪಾನ್ ಆಸುಂಕ್ ಸಾಧ್ಯ್ ಆಸಾ ತರ್‌ಯೀ ಬರೆಂ ವಿಂಚುನ್ ತೆಂ ಕೊಂಕಣಿಚ್ಯಾ ಬರೆಪಣಾಕ್ ವಾಪ್ರುಂಕ್ ಗೊಂಯ್, ತಶೆಂಚ್ ಗೊಂಯ್ ಭಾಯ್ಲಿಂ ಜಾಯ್ತಿಂ ಖೂಪ್ ಮಿನತ್ ಕರತಾತ್ ಆನಿ ಹಿ ಮಿನತ್ ಕೊಂಕಣಿಕ್ ವೆಗ್-ವೆಗಳ್ಯಾ ಥರಾಂನಿ ಥೆಂಕೊ ದೀಂವ್ಕ್ ಸಕ್ತಲೊ ಆನಿ ಕೊಂಕಣಿಕ್ ಮುಕಾರ್ ವರಪಾಕ್ ಅಸಲಿ ಮಿನತ್ ಭೋವ್ ಗರ್ಜೆಚಿ ಮ್ಹಣಾಲಿ ಡೊ|ಕಿರಣ್ ಬುಡ್ಕುಲೆ.
ಮುಕೆಲ್ ಉಲವ್ಪಿ ಬಾಬ್ ಮೆಲ್ವಿನ್ ರೊಡ್ರಿಗಸಾನ್ ಅಪ್ಲ್ಯಾ ಉಲವ್ಪಾಂತ್ ’ಡಿಜಿಟಲೀಕರಣ್ ಖಂಡಿತ್ ಕೊಂಕಣಿಚಿ ಏಕ್ ಗರ್ಜ್, ಪುಣ್ ಹೆಂ ಡಿಜಿಟಲೀಕರಣ್ ಜಾಲ್ಲೆಂ; ಜಾಂವ್ ಇ-ಪುಸ್ತಕಾಂ, ಆ-ಪುಸ್ತಕಾಂ, ಖಂಯ್ಚರ್ ಆನಿ ಕಿತ್ತುನ್ ಪರ್ಯಾಂತ್ ದವರ್ಚಿಂ ಆನಿ ತಾಚೊ ಖರ್ಚ್ ಕೊಣ್ ಆನ್ ಕಿತ್ತುನ್ ಪರ್ಯಾಂತ್ ಉಟಂವ್ಕ್ ಸಕ್ತಲೊ? ಮ್ಹಳ್ಳೆಂ ಪ್ರಶ್ನ್ ಮುಕಾರ್ ದವರುನ್ ಕೊಂಕಣಿಕ್ ಡಿಜಿಟಲ್ ಮಾಧ್ಯಮಾಂತ್ ಮುಕಾರ್ ಹಾಡುಂಕ್ ಪಾಟ್ಲ್ಯಾ ಕಾಂಯ್ ತೆಂಪಾಥಾವ್ನ್ ವಾವ್ರ್ ಕರುನ್ ಆಸ್ಚ್ಯಾ ಆಶಾವಾದಿ ಪ್ರಕಾಶನಾಚಿ ಥೊಕ್ಣಾಯ್ ಕೆಲಿ.
ಲಾರೆನ್ಸ್ ವಿ. ಬಾರ್ಬೋಜಾನ್ ವಿಮೋಚನ್ ಜಾಂವ್ಕ್ ಆಸ್ಚ್ಯಾ ಪಾಂಚ್ ಪುಸ್ತಕಾಂಚಿ ಮಟ್ವಿ ವಳೊಕ್ ಕರುನ್ ದಿತಚ್;
’ಸಿಸಿಫಸ್ ತೆಂಗ್‌ಶೆರ್’ (ಶೈಲೇಂದ್ರ ಮೆಹ್ತಾಚ್ಯಾ ನಾಗರಿ ಕವಿತೆಂಚೆಂ ಕನ್ನಡ್ ಲಿಪಿಯಂತರ್ ಡಿಜಿಟಲ್-ಪುಸ್ತಕ್) ಮೆಲ್ವಿನ್ ರೊಡ್ರಿಗಸಾನ್ ವಿಮೋಚನ್ ಕೆಲೆಂ. ’ಅಂತರ್‌ನಾದ್’ (ಉರ್ಜಿತಾ ಭೊಬೆಚ್ಯಾ ಕವಿತೆಂಚೆಂ ಕನ್ನಡ್ ಲಿಪಿಯಂತರ್ ಇ-ಪುಸ್ತಕ್) ಬಾಯ್ ಉಶಾ ರಾಣೆನ್ ವಿಮೋಚನ್ ಕೆಲೆಂ, ’ಇಂದ್ರಧೊಣು’ (ಉದಯ್ ಮಾಂಬ್ರೊಚ್ಯಾ ನಾಗರಿ ಕವಿತೆಂಚೆಂ ಕನ್ನಡ್ ಲಿಪಿಯಂತರ್ ಡಿಜಿಟಲ್-ಪುಸ್ತಕ್) ಬಾಬ್ ಚೇತನ್ ಆಚಾರ್ಯನ್ ವಿಮೋಚನ್ ಕೆಲೆಂ. ’ಚಾಬೂಕ್ ಆನಿ ಹೆರ್ ಕಥಾ’ (ರೊನಾಲ್ಡ್ ಮೊಂತೇರೊಚ್ಯೋ ಕೊಂಕಣಿ ಕಥೆಚೆಂ ಡಿಜಿಟಲ್-ಪುಸ್ತಕ್) ಡೊ|ಜಯವಂತ್ ನಾಯ್ಕ್ ಹಾಣೆಂ ವಿಮೋಚನ್ ಕೆಲೆಂ, ’ಫಾಂತ್ಯಾಪಾರಾಚೆಂ ಸಪಣ್’ (ವಾಲ್ಟರ್ ನಂದಳಿಕೆಚ್ಯೊ ಕೊಂಕಣಿ ಕಥೆಚೆಂ ಡಿಜಿಟಲ್-ಪುಸ್ತಕ್) ಬಾಯ್ ಡೊ|ಜಯಂತಿ ನಾಯ್ಕ್ ಹಿಣೆಂ ವಿಮೋಚನ್ ಕೆಲೆಂ. ಪುಸ್ತಕಾಂ ವಿಮೋಚನ್ ಕೆಲ್ಲ್ಯಾಂನಿ ತಶೆಂಚ್ ಬರವ್ಪ್ಯಾಂನಿ ಆಪಾಪ್ಲೆ ಸಂಧೇಶ್ ದಿಲೆ.
ತ್ಯೇ ಉಪ್ರಾಂತ್ ದೆ|ವಿಲ್ಫಿ ರೆಬಿಂಬಸ್ ಸ್ಮಾರಕ್ ಚಲ್‌ಲ್ಲ್ಯಾ ಪಯ್ಣಾರಿ-ವೀಜ್ ಜಾಗತಿಕ್ ಕೊಂಕಣಿ ಸಾಹಿತಿಕ್ ಸರ್ತ್ ೨೦೨೧ ಹಾಂತುಂ ಇನಾಮಾಂ ಜಿಕ್ಲಲ್ಯಾಂಚಿಂ ನಾಂವಾಂ ವಲ್ಲಿ ಕ್ವಾಡ್ರಸಾನ್ ಘೋಷಿತ್ ಕೆಲಿಂ. ಇನಾಮಾಂ ಜೊಡ್ಲೆಲ್ಯಾಂಚಿಂ ಇನಾಮಾಂ ತಶೆಂಚ್ ಶಿಫಾರಸ್ ಪತ್ರಾಂ ದಸೆಂಬರಾಂತ್ ತಾಂಕಾಂ ಪಾವಿತ್ ಜಾತಲಿಂ ಮ್ಹಣುನ್ ಸಾಂಗ್ಲೆಂ. ದಲ್ಗಾದೊ ಕೊಂಕಣಿ ಅಕಾಡೆಮಿಚೊ ಅಧ್ಯಕ್ಷ್ ಬಾಬ್ ವಿನ್ಸಿ ಕ್ವಾಡ್ರೊಸಾನ್ ದೆ|ಫ್ರೆಡ್ರಿಕ್ ಕ್ವಾಡ್ರಸ್ ಸ್ಮಾರಕ್ ಆಶಾವಾದಿ ಡಿಜಿಟಲ್ ಕೊಂಕಣಿ ಪುರಸ್ಕಾರ್ ’ಆಂಟನಿ ವೆರೊನಿಕಾ ಫೆರ್ನಾಂಡಿಸಾಚ್ಯಾ ’ಮಾಡಾಥಾವ್ನ್ ತೆಲಾಖಣಿ ಪರ್ಯಾಂತ್’ ಪುಸ್ತಕಾಕ್ ಘೋಶಿತ್ ಕರುನ್ ಅಪ್ಲೊ ಸಂಧೇಶ್ ದಿಲೊ.
ತ್ಯೇ ಉಪ್ರಾಂತ್ ಕಾರ್ಯಾಚೆ ಸಯ್ರೆ ಜಾವ್ನ್ ಹಾಜರ್ ಆಸ್ಲೆಲ್ಯಾ ಬಾಬ್ ಆರ್. ಎಸ್. ಭಾಸ್ಕರ್, ಬಾಬ್ ಗ್ಯಾನೇಶ್ವರ್ ತರೀ, ಬಾಬ್ ವಿಶಾಲ್ ಕೊಡಿಯಾಳ್ ತಶೆಂಚ್ ಬಾಬ್ ವಿಲ್ಲಿ ಗೋಯೆಸ್ ಹಾಣಿಂ ಆಪಾಪ್ಲೆ ಸಂಧೇಶ್ ದಿಲೆ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಠಯ್ಲೆ.

Zagotik Digitol Konkonni Divos 2021

Ashawadi Prokaxonan manddun hadd‌l’lem ’zagotik ddijittol konkonni divos 2021’ vebinar 28 novembor (aitara) sanjer 4 thaun 6 poreant chol’lem. Panch ddijittol i-pustokanchem vimochon, poinnari-viz sahitik sortent inamam toxench axavadi zagotik ddijittol puroskar 2021 ghoxit kelo.
Karyem nirvahoki Bai Cialini Fernandesan ailevar devadhin zal’lea Benny Teacherichea otmeak xanti magun ek minutt maun prarthonant kareachi survat korun uprant oplea jinnyent pon’nas vorosam sompoyil’lea Bab Lawrence V Barbozak porbim divun. Konkonnik rajy/lipichim simam utrunk koxem ddijittol madhyom’ adhar zata mholl’llem sangun hea dixen Ashawadi Prokaxonachea ddijittol vaurachi mottvi zhollok ditoch Poinnari.com’ soho-sompadok Bab Shailendra Mehtan svagot uloup kelem. Kareachem ugtaunn korun oplea sondhexant ’ddijittol madhyomant borem toxench vaitt ekach mapan asunk sadhy asa tor‌yi borem vinchun tem konkonnichea boreponnak vaprunk Gõy, toxench Gõy bhailim zaitim khup minot korotat ani hi minot konkonnik veg-vegollea thoramni thenko diunko soktolo ani konkonnik mukar voropak osoli minot bhovo gorjechi mhonnali.
Mukel uloupi bab melvin roddrigosan oplea uloupant ’ddijittolikoronn khonddit konkonnichi ek gorz, punn hem ddijittolikoronn zal’lem; zamv i-pustokam, a-pustokam, khoinchor ani kit’tun poreant dourchim ani tacho khorch konn an kit’tun poreant uttounko soktolo? mholl’llem proxn mukar dourun konkonnik ddijittol madhyomant mukar haddunk pattlea kaim tempathaun vaur korun aschea axavadi prokaxonachi thoknnai keli.
Larens vi. Barbozan vimochon zaunko aschea panch pustokanchi mottvi vollok korun ditoch;
’Sisifos Teng‌xer’ (Shailendra Mehtachea Nagari kovitenchem Kon’nodd lipiyontor ddijittol-pustok) Melwyn Rodriguesan vimochon kelem. ’Ontor‌nad’ (Urjita Bhobechea kovitenchem Kon’nodd lipiyontor i-pustok) Bai Usha Rannen vimochon kelem
’Indrodhonnu’ (Uday Mambrochea Nagari kovitenchem Kon’nodd lipiyontor ddijittol-pustok) Bab Chetan Acharyan vimochon kelem. ’Chabuk ani her Kotha’ (Ronald Monterocheo Konkonni kothechem ddijittol-pustok) Do|Jayavant Naik hannem vimochon kelem
’Fanteaparachem Soponn’ (Walter Nandallikecyem konkonni kothechem ddijittol-pustok) Bai Dr|Jayanti Naik hinnem vimochon kelem. Pustokam vimochon kel’leamni toxench boroupeamni apaple sondhex dile.
Tye uprant De|Wilfy Rebimbus smarok chol‌l’lea Poinnari-Viz zagotik konkonni sahitik sort 2021 hantum inamam jikloleanchim namvam Valley Quadrosan ghoxit kelim. Inamam zoddleleanchim inamam toxench xifaros potram dosemborant tankam pavit zatolim mhonnun sanglem. Dolgado Konkonni Okaddemicho odhyokx Bab Vincy Quadrosan De|Fredrik Quadros smarok Ashawadi ddijittol konkonni puroskar 2021’ Antony Veronica Fernandesachea ’Maddathaun elakhonni poreant’ pustokak ghoxit korun oplo sondhex dilo.
Tye uprant kareache soire zaun hazor aslelea bab R. S. Bhaskor, Bab Geanexvor Tori, Bab Vishal Koddiall toxench Bab Willy Goes hannim apaple sondhex dile. Valley Quadrosan dhinvas patthoile.

ಮುದೂರಿನ ಶ್ರೀ ಮಾತಾ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಯಶೋಧ ಶೆಟ್ಟಿಯವರಿಗೆ ಬೀಳ್ಕೊಡುಗೆ ಸಮಾರಂಭ.

ವರದಿ : ಮಝರ್, ಕುಂದಾಪುರ

ಬೈಂದೂರು; ಶ್ರೀ ಮಾತಾ ಹಿರಿಯ ಪ್ರಾಥಮಿಕ ಶಾಲೆ ಮುದೂರಿನ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಯಶೋಧ ಶೆಟ್ಟಿಯವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬೆಳ್ತಂಗಡಿಯ ಧರ್ಮಗುರುಗಳಾದ ವಂದನೀಯ ಫಾದರ್ ಜೋಸೆಫ್ ಮಟ್ಟಂ ರವರು ವಹಿಸಿದ್ದರು.

ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಯಶೋಧ ಶೆಟ್ಟಿ, ಶಾಲಾ ಆಡಳಿತ ಮಂಡಳಿಯ ಗೌರವ ಸದಸ್ಯರಾದ ಶ್ರೀ ದೀಪಕ್ ಕುಮಾರ್ ಶೆಟ್ಟಿ ಬೈಂದೂರು, ಶಾಲಾ ಸಂಚಾಲಕರಾದ ವಂದನೀಯ ಫಾದರ್ ಅಗಸ್ಟಿನ್,ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವನಜಾಕ್ಷಿ ಶೆಟ್ಟಿ,ಸುದೇಶ್ ಶೆಟ್ಟಿ ಕುಂದಾಪುರ.ಶಿಕ್ಷಣ ಇಲಾಖೆಯಿಂದ ಬಿ.ಆರ್.ಪಿ.ಶ್ರೀ ಮಂಜುನಾಥ, ಸಿ.ಆರ್.ಪಿ. ಶ್ರೀ ವಿಶ್ವನಾಥ ಮೇಸ್ತ,ಶಾಲಾ ನಿವೃತ್ತ ಶಿಕ್ಷಕ ಶ್ರೀ ಶಂಕರ್ ನಾಯ್ಕ್,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶೇಖರ ಭೋವಿ,ಮುಖ್ಯ ಶಿಕ್ಷಕರಾದ ಮನೋಹರ ಛಲವಾದಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಫಾದರ್ ಜೋಸೆಫ್  ಮಟ್ಟಂ ರವರು ಮಾತನಾಡಿ ನಿವೃತ್ತ ಮುಖ್ಯ ಶಿಕ್ಷಕಿಯವರ ಸೇವಾ ಕಾರ್ಯದ ಬಗ್ಗೆ  ಪ್ರಶಂಸೆಯನ್ನು ವ್ಯಕ್ತಪಡಿಸಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಯಶೋಧ ಶೆಟ್ಟಿಯವರು ಮಾತನಾಡಿ ಸೇವಾ ಅವಧಿಯಲ್ಲಿ‌ ಸಹಕಾರ ನೀಡಿದ ಸರ್ವರನ್ನು ಸ್ಮರಿಸಿ ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಪೋಷಕರು,ವಿದ್ಯಾರ್ಥಿಗಳು,ಹಳೆ ವಿದ್ಯಾರ್ಥಿಗಳು,ಆಡಳಿತ ಮಂಡಳಿಯ ಸರ್ವ ಸದಸ್ಯರು  ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.ಶಾಲಾ ಸಂಚಾಲಕಾರದ ವಂದನೀಯ ಫಾದರ್ ಅಗಸ್ಟಿನ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ,ಮುಖ್ಯ ಶಿಕ್ಷಕರಾದ ಮನೋಹರ ಛಲವಾದಿಯವರು ಸ್ವಾಗತಿಸಿ,ಉಪನ್ಯಾಸಕ ಉದಯ್ ನಾಯ್ಕ್ ಬೈಂದೂರು ಕಾರ್ಯಕ್ರಮ ನಿರೂಪಿಸಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶೇಖರ್ ಭೋವಿ ವಂದಿಸಿದರು.

ವಿಧಾನ ಪರಿಷತ್ ಚುನಾವಣೆಯ ಅಂತಿಮ ಕಣದಲ್ಲಿ 4 ಜನ ಅಭ್ಯರ್ಥಿಗಳು ಡಾ || ಆರ್.ಸೆಲ್ವಮಣಿ

JANANUDI.COM NETWORK

ಕೋಲಾರ : ಕರ್ನಾಟಕ ವಿಧಾನ ಪರಿಷತ್ತಿಗೆ ಕೋಲಾರ ನಂ -18 ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ದೈವಾರ್ಷಿಕ ಚುನಾವಣೆಯ ನಾಮಪತ್ರಗಳನ್ನು ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು ಯಾವುದೇ ಅಭ್ಯರ್ಥಿಯು ನಾಮಪತ್ರಗಳನ್ನು ಹಿಂಪಡೆದಿಲ್ಲ ಆದ್ದರಿಂದ ವಿಧಾನ ಪರಿಷತ್ ಚುನಾವಣೆ ಅಂತಿಮ ಕಣದಲ್ಲಿ 4 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಎಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ತಿಳಿಸಿದರು .

ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಕೋಲಾರ ನಂ 18 ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ದೈವಾರ್ಷಿಕ ಚುನಾವಣೆ ಹಾಗೂ ವಿಶ್ವ ಏಡ್ಸ್ ದಿನಾಚಾರಣೆ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ , ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಂ.ಎಲ್. ಅನಿಲ್ ಕುಮಾರ್ , ಜನತಾದಳ ( ಜಾತ್ಯತೀತ ) ಪಕ್ಷದ ಅಭ್ಯರ್ಥಿಯಾಗಿ ವಿ.ಇ.ರಾಮಚಂದ್ರ , ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಡಾ || ಕೆ.ಎನ್
ವೇಣುಗೋಪಾಲ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಪಿ.ಅನಿಲ್ ಕುಮಾರ್ ಅವರು ಸ್ಪರ್ಧಿಸಿದ್ದರೆ ಎಂದು ಅವರು ತಿಳಿಸಿದರು . ಚುನಾವಣೆ ಮತದಾನ ಡಿಸೆಂಬರ್ 10 ರಂದು ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭವಾಗಿ ಸಂಜೆ 4.00 ಗಂಟೆಗೆ ಮುಕ್ತಾಯವಾಗುತ್ತದೆ . ಗ್ರಾಮ ಪಂಚಾಯಿತಿ , ಪುರಸಭೆ ಹಾಗೂ ನಗರಸಭೆ ಸದಸ್ಯರು ಮತದಾನರಾಗಿದ್ದು ಕೋಲಾರ ಜಿಲ್ಲೆಯಲ್ಲಿ 2925 ಮತದಾರರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2925 ಮತದಾರರು , 2675 ಪುರುಷರು ಹಾಗೂ 2925 ಮಹಿಳೆಯರು ಸೇರಿ ಒಟ್ಟು 5600 ಮತದಾರರಿದ್ದರೆ , ಒಟ್ಟು 321 ಮತಗಟ್ಟೆಗಳನ್ನು ಆಯೋಜಿಸಿದ್ದು , 73 ಅತಿ ಸೂಕ್ಷ್ಮ ಮತ್ತು 105 ಸೂಕ್ಷ್ಮ ಮತಕಟ್ಟೆಗಳನ್ನು ಗುರುತಿಸಿದ್ದು ಸೂಕ್ತ ಬಂದೊಬಸ್ತ್ ಮತ್ತು ರಕ್ಷಣೆಯನ್ನು ಒದಗಿಸಲು ಪೋಲಿಸ್ ಸಿಬ್ಬಂದಿ ಸಿದ್ದರಾಗಿದ್ದಾರೆ . ಚುನಾವಣೆಯ ಮತ ಎಣಿಕೆಯನ್ನು ಡಿಸೆಂಬರ್ 14 ರಂದು ಬೆಳಿಗ್ಗೆ 8.00 ಗಂಟೆಗೆ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗುವುದು we ale ಎಂದು ಅವರು ತಿಳಿಸಿದರು . ಡಿಸೆಂಬರ್ 01 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಶ್ರೀ ಟಿ.ಚನ್ನಯ್ಯ ರಂಗಮಂದಿರದಲ್ಲಿ ವಿಶ್ವ ಏಡ್ಸ್ ದಿನಾಚಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಅಸಮಾನತೆಗಳನ್ನು ಕೊನೆಗೊಳಿಸಿ . ಏಡ್ಸ್‌ನ್ನು ಕೊನೆಗೊಳಿಸಿ . ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಈ ವರ್ಷದ ಘೋಷಣೆಯಾಗಿದೆ . ಸಮುದಾಯದಲ್ಲಿ ಏಡ್ಸ್ ಖಾಯಿಲೆಯನ್ನು ನಿರ್ಮೂಲನೆ ಮಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು . ಹೆಚ್.ಐ.ವಿ ಸೋಂಕು ಕೇವಲ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ , ತಪಾಸಣೆಗೊಳಿಸದ ರಕ್ತ ಮತ್ತು ರಕ್ತದ ಉಪ ಪದಾರ್ಥಗಳಿಂದ , ಸೋಂಕಿತ ತಾಯಿಯಿಂದ ಮಗುವಿಗೆ ಹಾಗೂ ಸೋಂಕಿತ ಸೂಜಿ , ಸಿರಿಂಜ್ ಮತ್ತು ಶಸ್ತ್ರಕ್ರಿಯಾ ಸಾಧನಗಳಿಂದ ಮಾತ್ರ ಹರಡುತ್ತದೆ ಎಂದು ಅವರು ತಿಳಿಸಿದರು . ಈ ಸಂದರ್ಭದಲ್ಲಿ ಚುನಾವಣೆ ತಶಿಲ್ದಾರ್ ನಾಗವೇಣಿ , ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ || ಕಮಲ ಅವರು ಉಪಸ್ಥಿತರಿದ್ದರು .

ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. 30 ನೇ ಸಭೆ- ಶೇಕಡ 18 ಡಿವಿಡೆಂಡ್ ಘೋಷಣೆ

JANANUDI.COM NETWORK


ಕುಂದಾಪುರ. ನ.28: ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ 30 ನೇ ಸಾಮಾನ್ಯ ಸಭೆ ಲಕ್ಷ್ಮಿ ನಾರಯಣ ಕಲಾಮಂದಿರದಲ್ಲಿ ನ.28 ರಂದು ಭಾನುವಾರ ನಡೆಯಿತು. ಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಸಂಘದ ಸದಸ್ಯರಿಗೆ ಶೇಕಡ 18 ಡಿವಿಡೆಂಡ್ ಘೋಶಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ‘ನಮ್ಮ ಸೊಸೈಟಿ ಹಿಂದಿನ ನಿರ್ದೇಶಕರು, ಇಂದಿನ ನಿರ್ದೇಶಕರು ಮತ್ತು ಸಿಬಂದ್ದಿ ವರ್ಗದವರ ಶ್ರಮದಿಂದ ಸಂಘ ಉತ್ತಮ ಪ್ರಗತಿ ಸಾಧಿಸಿದೆ. ಕೊರೊನಾ ವಿಪತ್ತಿನ ಕಾಲದಲ್ಲಿಯೂ, ನಾವು ಅಭಿವ್ರದ್ದಿ ಸಾಧಿಸಿದ್ದೇವೆ.

ಸಂಘವು ಕೊನೆಗೊಂಡ ವರ್ಷದಲ್ಲಿ ಒಟ್ಟಾರೆ 337 ಕೋಟಿ ವ್ಯವಹಾರ ನಡೆಸಿ, ಪ್ರಸ್ತುತ ಸುಮಾರು 114 ಕೋಟಿ ಠೇವಣಿ ಇದ್ದು 92 ಕೋಟಿ ಮುಗಂಡ ನೀಡಿದ್ದು, ದುಡಿಯುವ ಬಂಡವಾಳ 121 ಕೋಟಿ ಇದ್ದು ಸುಮಾರು 96 ಲಕ್ಷ ರೂ. ಲಾಭ ಗಳಿಸಿದೆ – ಜೋನ್ಸನ್ ಡಿಆಲ್ಮೇಡಾ

ಈಗಾಗಲೇ ನಮ್ಮ ಸೊಸೈಟಿಯ ಹಲವಾರು ಶಾಖೆಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ಬೈಂದೂರಿನಲ್ಲಿ ಮುಂದಿನ ತಿಂಗಳು ಸ್ವಂತ ಕಟ್ಟಡ ಸಿದ್ದವಾಗುತ್ತದೆ. ಮುಂದೆ ಕೋಟೆಶ್ವರ – ಹಂಗಳೂರು ಶಾಖೆಗೂ ಸ್ವಂತ ಕಟ್ಟಡ ನಿರ್ಮಿಸಗುವುದು ಎಂದು ತಿಳಿಸುತ್ತಾ ಸಿಬ್ಬಂದಿ ಕ್ಷೇಮ ನಿಧಿ, ಸಹಕಾರಿ ಶಿಕ್ಷಣ ನಿಧಿ ಇಂತ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ” ಎಂದು ತಿಳಿಸಿ ಲಾಭ ವಿಂಗಡನೆಯನ್ನು ವಿವರಿಸಿದರು.
ಸೊಸೈಟಿಯ ಮುಖ್ಯ ಸಲಹದಾರದಾದ ಕುಂದಾಪುರ ವಲಯ ಪ್ರಧಾನರಾದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂ| ಸ್ಟ್ಯಾನಿ ತಾವ್ರೊ ‘ರೋಜರಿ ಸೊಸೈಟಿ ಒಂದು ಬಲಿಷ್ಠ ಸೊಸೈಟಿಯಾಗಿದ್ದು, ಅಸು ಎಲ್ಲಾ ಸಮೂದಾಯದ ಜನರ ಅಭಿವ್ರದ್ದಿಯಲ್ಲಿ ತೊಡಗಿಸಿಕೊಂಡಿದೆ. ಸೊಸೈಟಿ ಬರೆ ಲಾಭವನ್ನು ಲೆಕ್ಕಿಸದೆ, ಶಸ್ತ್ರ ಚಿಕಿತ್ಸೆ ಸಾಲ, ವಿಧ್ಯಾ ಸಂಸ್ಥೆಗಳಿಗೆ, ಇನ್ನಿತರ ಸಂಸ್ಥೆಗಳಿಗೆ ದಾನ ನೀಡಿ ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ರೋಜರಿ ಮಾತಾ ಹೆಸರಿನಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಮಾತೆಯ ಆಶಿರ್ವಾದದಲ್ಲಿ ಯಶಸ್ಸು ಪಡೆಯುತ್ತಾ ಬಂದಿದ್ದು. ನಿರ್ದೇಶಕರು ಮತ್ತು ಸಿಬಂದಿ ವರ್ಗ ಉತ್ತಮಾವಾಗಿ ಶ್ರಮಿಸಿ ಇನ್ನೂ ಹೆಚ್ಚಿನ ಅಭಿವ್ರದ್ದಿ ಹೊಂದಲಿ’ ಎಂದು ಆಶಿರ್ವಚಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಮೇಬಲ್ ಡಿಆಲ್ಮೇಡಾ ವಾರ್ಷಿಕ ವರದಿಯನ್ನು ವಾಚಿಸಿದರು, ಕುಂದಾಪುರ ಶಾಖಾಧಿಕಾರಿ ದಾಮನ್ ಡಿಮೆಲ್ಲೊ ಲೆಕ್ಕ ಪರಿಶೋಧನ ವರದಿಯನ್ನು ವಾಚಿಸಿದರು. ಅಕಾಲಿಕ ಮರಣಕ್ಕೆ ತುತ್ತಾದ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಯಾದ ಪಾಸ್ಕಲ್ ಡಿಸೋಜಾರವರಿಗೆ ಸಭೆ ಶ್ರದ್ದಾಂಜಲಿ ಸಲ್ಲಿಸಿತು. ನಿರ್ದೇಶಕಿ ಶಾಂತಿ ಆರ್ ಕರ್ವಾಲ್ಲೊ ಪಿಗ್ಮಿ ಸಂಗ್ರಹಕಾರರಿಗೆ ಮಾತು ಸಿಬಂದಿ ವರ್ಗದವರಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಿರ್ದೇಶಕ ಪ್ರಕಾಶ ಲೋಬೊ ಬಜೆಟ್ ಮೀರಿ ಆದ ಖರ್ಚುಗಳ ವಿವರ ಮುಂದಿಟ್ಟರು. ನಿರ್ದೇಶಕರಾದ ಫಿಲಿಫ್ ಡಿಕೋಸ್ತಾ, ಡಯಾನಾ ಡಿಆಲ್ಮೇಡ, ಶಾಂತಿ ಡಯಾಸ್, ಬ್ಯಾಪ್ಟಿಸ್ಟ್ ಡಾಯಸ್, ಓಝ್ಲಿನ್ ರೆಬೆಲ್ಲೊ, ವಿಲ್ಸನ್ ಡಿಸೋಜಾ, ಸಂತೋಷ್ ಓಜ್ವಲ್ಡ್ ಡಿಸಿಲ್ವಾ, ವಿಲ್ಫ್ರೆಡ್ ಮಿನೇಜೆಸ್, ಟೆರೆನ್ಸ್ ಸುವಾರಿಸ್, ತಿಯೋದೊರ್ ಒಲಿವೆರಾ ಉಪಸ್ಥಿತರಿದ್ದರು.
ಸೊಸೈಟಿ ಉಪಾಧ್ಯಕ್ಷರಾದ ಕಿರಣ್ ಲೋಬೊ ಸ್ವಾಗತಿಸಿದರು, ನಿರ್ದೇಶಕ ಡೆರಿಕ್ ಡಿಸೋಜಾ ವಂದಿಸಿದರು. ನಿರ್ದೇಶಕ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.