HOLY ROSARY CHURCH, KUNDAPUR – 450 th JUBILEE SOUVENIR 2021

ನಾಳೆ ಕೋಟೇಶ್ವರ ಗಾಣಿಗ ಯುವ ಸಂಘಟನೆಯ ದಶಮಾನೋತ್ಸವ ಸಮಾರೋಪ

JANANUDI.COM NETWORK


ಕೋಟೇಶ್ವರ: ಕೋಟೇಶ್ವರ ಗಾಣಿಗ ಯುವ ಸಂಘಟನೆಯ ದಶಮಾನೋತ್ಸವದ ಸಮಾರೋಪ ಸಮಾರಂಭ ಡಿ.5ರಂದು ಭಾನುವಾರ ಮಧ್ಯಾಹ್ನ 2.30ಕ್ಕೆ ಕುಂದಾಪುರ ವ್ಯಾಸರಾಜ ಕಲ್ಯಾಣಪದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ದಶಮಾನೋತ್ಸವದ ಪ್ರಯುಕ್ತ ಜರುಗಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಅಲ್ಲದೇ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದಿಂದ ಪ್ರತಿಭಾ ಪುರಸ್ಕøರ ಹಾಗೂ ಸಾಧಕರಿಗೆ ಸನ್ಮಾನ ಜರುಗಲಿದೆ.ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿಜೇತರು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಿ ತಮ್ಮ ಬಹುಮಾನವನ್ನು ಪಡೆಯಬೇಕೆಂದು
ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಅಭಿಲಾಷ ಬಿ.ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಕುಂದಾಪುರ ವಲಯ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಭೆ

JANANUDI.COM NETWORK

ಕುಂದಾಪುರ: ನಾಳೆ ಕುಂದಾಪುರ ವಲಯ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಭೆ ಕುಂದಾಪುರ: ಕುಂದಾಪುರ ವಲಯ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಭೆಯನ್ನು ಡಿ.4ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕುಂದಾಪುರ ಆರ್. ಎನ್.ಶೆಟ್ಟಿ ಮಿನಿ ಹಾಲ್‍ನಲ್ಲಿ ನಡೆಯಲಿದೆ. ಈ ಸಭೆಗೆ ಕುಂದಾಪುರ ವಲಯದ ಎಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರರು ಹಾಜರಾಗಿ ಸಂಘದ ಮುಂದಿನ ರೂಪುರೇಷೆಗಳ ಕುರಿತು ಸಲಹೆ ಸೂಚನೆಯನ್ನು ನೀಡಬೇಕಾಗಿದೆ. ಉಡುಪಿ ಜಿಲ್ಲೆಯ ಎಲ್ಲಾ ವಲಯದ ಪದಾಧಿಕಾರಿಗಳು ಈ ಸಭೆಗೆ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

ಜೆಡಿಎಸ್ ಪಕ್ಷದ ಅಬ್ಯರ್ಥಿಯನ್ನು ಬಾರೀ ಬಹುಮತದಿಂದ ಗೆಲ್ಲಿಸಿ :ಜಿ.ಕೆ. ವೆಂಕಟಶಿವಾರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿಯವರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿಧಾನಪರಿಷತ್ ಚುನಾವಣೆಯ ಅಬ್ಯರ್ಥಿ ವಕ್ಕಲೇರಿ ರಾಮು ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದಾರೆ ಹಾಗಾಗಿ ಗ್ರಾಮ ಪಂಚಾಯಿತಿ ಅದ್ಯಕ್ಷರು, ಉಪಾದ್ಯಕ್ಷರು, ಸದಸ್ಯರು ಮತ್ತು ಪುರಸಭೆ ಸದಸ್ಯರು ಒಮ್ಮತದಿಂದ ನಮ್ಮ ಜೆಡಿಎಸ್ ಪಕ್ಷದ ಅಬ್ಯರ್ಥಿಯನ್ನು ಬಾರೀ ಬಹುಮತದಿಂದ ಗೆಲ್ಲಿಸುವುದರ ಮೂಲಕ ವರಿಷ್ಠರ ವಿಶ್ವಾಸವನ್ನು ಉಳಿಸುವ ಕೆಲಸ ನಾವೆಲ್ಲರೂ ಮಾಡಬೇಕೆಂದು ಜೆಡಿಎಸ್ ಜಿಲ್ಲಾದ್ಯಕ್ಷ ಹಾಗು ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದರು.
ವಿಧಾನಪರಿಷತ್ ಚುನಾವಣೆ ಪ್ರಯುಕ್ತ ತಾಲ್ಲೂಕಿನ ರಾಯಲ್ಪಾಡು, ಲಕ್ಷ್ಮೀಪುರ, ರೋಣೂರು ಹಲವು ಬಾಗಗಳಲ್ಲಿ ಚುನಾವಣಾ ಪ್ರಚಾರ ಮುಗಿಸಿ ನಂತರ ಪಟ್ಟಣದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜಿ.ಕೆ ವೆಂಕಟಶಿವಾರೆಡ್ಡಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಜೆಡಿಎಸ್ ಪಕ್ಷದ ವರಿಷ್ಠರ ವಿಶ್ವಾಸ ನಂಬಿಕೆಗೆ ದಕ್ಕೆ ಬಾರದಂತೆ ಚುನಾವಣೆಯ ಉರಿಯಾಳು, ಸರಳ ಸಜ್ಜನಿಕೆ ಗೌವರಸ್ಥ ಅಬ್ಯರ್ಥಿ ವಕ್ಕಲೇರಿ ರಾಮು ಇವರಿಗೆ ನಮ್ಮ ಕ್ಷೇತ್ರದ ಮತದಾರರು ಕೆಲಸಮಾಡಬೇಕಾಗಿದೆ, ಕುಮಾರಸ್ವಾಮಿಯವರ ಮುಖ್ಯ ಮಂತ್ರಿ ಆಡಳಿತ ಅವದಿಯಲ್ಲಿ ರಾಜ್ಯದಲ್ಲಿ ಮಾಡಿರುವ ಜನಪರ ಆಡಳಿತ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಈ ರಾಜ್ಯದ ಮುಂದಿನ ರಾಜಕೀಯ ಬದಲಾವಣೆ ಪರ್ವಕ್ಕೆ ಬುನಾದಿಯಾಗಿ ನೀವೂ ನಾವೆಲ್ಲರೂ ಪಕ್ಷಾತೀತವಾಗಿ ನಮ್ಮ ಅಬ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸೋಣ ಎಂದರು.
ದೇವೇಗೌಡರು ಚಿಕ್ಕಬಳ್ಳಾಪುರ ಚಿಂತಾಮಣಿ ಇಂದು ಚುನಾವಣಾ ಪ್ರಚಾರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಶುಕ್ರವಾದದಂದು ಕುಮಾರಸ್ವಾಮಿ ಯವರು ಕೋಲಾರ, ಮುಳಬಾಗಿಲು ಸೇರಿದಂತೆ ವಿವಿಧ ಬಾಗಗಳಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದು ನೀವೂ ನಾವೆಲ್ಲರೂ ಹಾಜರಿದ್ದು ಪಕ್ಷದ ಗೆಲುವಿಗೆ ಕೆಲಸ ಮಾಡೋಣ ಎಂದರು.
ಇದೇ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅದ್ಯಕ್ಷೆ ಚೌಡೇಶ್ವರಿ ರಾಮು ಮಾತನಾಡಿ ನಾವು ಜಿಲ್ಲಾ ಪಂಚಾಯಿತಿ ಅದ್ಯಕ್ಷರ ಆಡಳಿತ ಅವದಿಯಲ್ಲಿ ಅನೇಕ ಜನಪರ ಆಡಳಿತ ಸೇವೆಗಳನ್ನು ಮಾಡಿದ್ದೇವೆ ಇಂದು ನಮ್ಮನ್ನು ಗುರುತಿಸಿ ಎರಡೂ ಜಿಲ್ಲೆಗಳ ಜೆಡಿಎಸ್ ಪಕ್ಷದ ಮುಖಂಡರ ಕಾರ್ಯಕರ್ತರ ಸಹಕಾರದಿಂದ ವಿದಾನ ಪರಿಷತ್ ಚುನಾವಣೆ ಸ್ಪರ್ದೆಯಲ್ಲಿ ನಿಲ್ಲಲು ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ ಹಾಗಾಗಿ ಮತದಾರರು ಆಶೀರ್ವಾದ ಮಾಡಿ ರಾಜ್ಯದಲ್ಲಿ ಮತ್ತೊಮ್ಮೆ ಜನಸೇವೆ ಮಾಡಲು ಅವಕಾಶವನ್ನು ಮಾಡಿಕೊಡಲು ವಿನಂತಿಸಿ ಮತಚಲಾಯಿಸುವ ಎಲ್ಲಾ ಸದಸ್ಯರು ಕಡ್ಡಾಯವಾಗಿ ಕೋವಿಡ್ ಎರಡು ಲಸಿಕೆಯನ್ನು ಪಡೆದು ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಪಾಲಿಸಿ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ಮಾಡಿಕೊಡಲು ಕೋರಿದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಪುರಸಬಾ ಅದ್ಯಕ್ಷಣಿ ಲಲಿತ ಶ್ರೀನಿವಾಸ್, ಜೆಡಿಎಸ್ ನ ರಾಜ್ಯ ಪ್ರದಾನ ಕಾರ್ಯದರ್ಶಿ ಬಿ.ವಿ ಶಿವಾರೆಡ್ಡಿ, ಜಿಲ್ಲಾ ಪಂ ಮಾಜಿ ಸದಸ್ಯ ರಾಜಣ್ಣ, ಪುರಸಭಾ ಉಪಾದ್ಯಕ್ಷಿಣಿ ಆಯಿಶಾ ನಯಾಜ್, ಪುರಸಭೆ ಹಿರಿಯ ಸದಸ್ಯ ಬಿ.ವಿ ರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಳೇ ಪೇಟೆ ಮಂಜುನಾಥ ರೆಡ್ಡಿ, ಪೂಲು ಶಿವಾರೆಡ್ಡಿ, ಕಾರ್ ಬಾಬು, ಡಿ.ವಿ.ಎಸ್ ಮಂಜು ಇನ್ನಿತರರು ಉಪಸ್ಥಿತರಿದ್ದರು.

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಆರ್ಥಿಕ ಲಾಭ ಪಡೆದುಕೊಳ್ಳಬೇಕು: ಕೋಚಿಮುಲ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದರ ಮೂಲಕ ಆರ್ಥಿಕ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಾಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಲು ಉತ್ಪಾದಕರಿಗೆ ರಾಸು ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿ, ಹಾಲು ಉತ್ಪಾದಕರು ರಸಮೇವು ಘಟಕಗಳನ್ನು ಪ್ರಾರಂಭಿಸಲು ಹಾಲು ಒಕ್ಕೂಟದಿಂದ ಪ್ರೋತ್ಸಾಹ ಧನ ನೀಡಲಾಗುವುದು. ಇತರ ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದು ಹೇಳಿದರು.
ಮೃತಪಟ್ಟ 17 ರಾಸುಗಳ ಮಾಲೀಕರಿಗೆ ರೂ. 9.75 ¯ಕ್ಷ ಮೌಲ್ಯದ ಚೆಕ್‍ಗಳನ್ನು ವಿತರಿಸಲಾಗಿದೆ. ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಕಟ್ಟಡ ಅನುದಾನವಾಗಿ ರೂ.1.50, ರಸಮೇವು ಘಟಕದ ಪ್ರಾರಂಭಿಸಲು ಪ್ರೋತ್ಸಾಹ ಧನವಾಗಿ ತಲಾ ರೂ.15 ಸಾವಿರ ಮೌಲ್ಯದ ಚೆಕ್ ವಿತರಿಸಲಾಗಿದೆ ಎಂದು ಹೇಳಿದರು.
ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ, ಗುಣಮಟ್ಟದ ಹಾಲು ಉತ್ಪಾದಿಸಲು ಹಸಿರು ಮತ್ತು ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋಧಾರ ಶಕ್ತಿ ಮತ್ತು ಟ್ರಿಯೋ ಎನ್‍ಬಿ ಸ್ಯಾಕ್ ಪುಡಿ ಬಳಸಬೇಕು. ಕೆಚ್ಚಲು ಬಾವು ಹಾಗೂ ಕಾಲುಬಾಯಿ ಜ್ವರ ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು, ಫಲಾನುಭವಿಗಳು, ವಿಸ್ತರಣಾಧಿಕರಿಗಳು ಇದ್ದರು.

ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಮೂಡುಬೆಳ್ಳೆಯಲ್ಲಿ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ.

JANANUDI.COM NETWORK

“ತಂಬಾಕು ಸೇವನೆಯು ಆರಂಭದಲ್ಲಿ ಆಕರ್ಷಕವಾಗಿ ಕಂಡರು ಅದರ ದೀರ್ಘಾವಧಿ ದುಷ್ಪರಿಣಾಮಗಳನ್ನು ನಾವು ಅರಿಯಬೇಕು .ತಂಬಾಕಿನಿಂದ ಮುಕ್ತ ಜೀವನವನ್ನು ಮಾಡಿದಲ್ಲಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು. ಈ ದಿಸೆಯಲ್ಲಿ ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಅತಿ ಅಗತ್ಯ” ಎಂದು ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ರವೀಂದ್ರ ಬೋರ್ಕರ್ ಹೇಳಿದರು. ಅವರು ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಇದರ ಅನ್ವಯ ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಮೂಡುಬೆಳ್ಳೆ ಇವರ ಜಂಟಿ ಆಶ್ರಯದಲ್ಲಿ ನಡೆದ ತಂಬಾಕು ಸೇವನೆಯ ದುಷ್ಪರಿಣಾಮಗಳು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ವಹಿಸಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀಮತಿ ಜೆಸಿಂತಾ ನತಾಲಿಯಾ ಲೋಬೋ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಜೋಸೆಫ್ ಡಿಸೋಜ ವಂದಿಸಿದರು .ಇತಿಹಾಸ ಉಪನ್ಯಾಸಕ ನವೀನ್ ಕೊರೆಯ ನಿರೂಪಿಸಿದರು ಎನ್ಎಸ್ಎಸ್ ಕಟಕ ನಾಯಕ ಶನ್ವಿನ್, ಘಟಕ ನಾಯಕಿ ಧನಲಕ್ಷ್ಮಿ , ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ರಾಜೀವಿ, ಶಿಕ್ಷಕ ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿ ಸಹಾಯಧನಕ್ಕೆ ಅರ್ಜಿ ಆಹ್ವಾನ

JANANUDI.COM NETWORK


ಬಸ್ರೂರು ಅಪ್ಪಣ್ಣ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕುಂದಾಪುರ ತಾಲೂಕಿನ ಶೇ.80 ಕ್ಕಿಂತ ಹೆಚ್ಚು ಅಂಕ ಪಡೆದ, ಉನ್ನತ ಶಿಕ್ಷಣಕ್ಕೆ ಸೇರ್ಪಡೆಗೊಂಡಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸಹಾಯಧನ ಡಿ. 24ರಂದು ವಿತರಣೆ ಮಾಡಲಾಗುತ್ತದೆ.
ಪ್ರಥಮ ವರ್ಷದ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಸೇರಿದಂತೆ ಪದವಿ ನಂತರದ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುವ ಅರ್ಹ, ಆರ್ಥಿಕವಾಗಿ ಹಿಂದುಳಿದ, ಕುಂದಾಪುರ ಮತ್ತು ಬೈಂದೂರು ತಾಲೂಕಿನ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತದೆ.
ಆಸಕ್ತ ವಿದ್ಯಾರ್ಥಿಗಳು ತಮ್ಮ ಕೈ ಬರಹದಲ್ಲಿ ಅರ್ಜಿ ಸಲ್ಲಿಸಿ ಅಂಕ ಪಟ್ಟಿ, ಕಾಲೇಜಿನ ಸೇರ್ಪಡೆ ಆದ ದಾಖಲೆ ಸೇರಿದಂತೆ ಸೂಕ್ತ ವಿವರಗಳನ್ನು ಡಿ. 12ರ ಒಳಗೆ ಬಿ ರಾಮ್‍ಕಿಶನ್ ಹೆಗ್ಡೆ, ಬಿ ಅಪ್ಪಣ್ಣ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಬಸ್ರೂರು ವಿಳಾಸಕ್ಕೆ ಕಳುಹಿಸಬೇಕೆಂದು ಎಂದು ಟ್ರಸ್ಟಿ ರಾಮಕಿಶನ್ ಹೆಗ್ಡೆ ತಿಳಿಸಿದ್ದಾರೆ.

ಕುಟ್ಮಾ ಆಯೋಗ ಥಾವ್ನ್ ಕುಂದಾಪುರ್ ವಾರಾಡ್ಯಾ ಮಟ್ಟಾರ್ ರೆತಿರ್ ಸಂಪನ್ನ್ ಜಾಲಿ

JANANUDI.COM NETWORK


ಕುಂದಾಪುರ್, ದೆ.2: ಉಡುಪಿ ದಿಯೆಸಿಜ್ ಕುಟ್ಮಾ ಆಯೋಗ ಥಾವ್ನ್ ದಸೆಂಬರಚ್ಯಾ 2 ತಾರಿಕೆರ್ ವಾರಾಡ್ಯಾ ಮಟ್ಟಾರ್ ಆಮ್ಚ್ಯಾ ಕುಂದಾಪುರ್ ಇಗರ್ಜೆ ಎಕಾ ದಿಸಾಚಿ ಕುಟ್ಮಾಚಿ ರೆತಿರ್ ಚಲ್ಲಿ. ಹಿ ರೆತಿರ್ ಕುಟ್ಮಾಚ್ಯಾ ಸರ್ವ್ ಸಾಂದ್ಯಾಕ್,ಕಾಜಾರಿ ಜೊಡ್ಯಾಂಕ್, ಯುವಜಣಾಂಕ್, ಮಾಲ್ಗಡ್ಯಾಂಕ್, ವಿಧ್ವಿ-ವಿಧುರಾಂಕ್, ಘಾಯೆಲ್ಯಾ ಕುಟ್ಮಾಚ್ಯಾ ಸಾಂದ್ಯಾಕ್, ಎಕ್ಸುರ್ಯಾಂಕ್, ಆಂಕ್ವಾರ್ಯಾಂಕ್, ಬಾಪಾಯಾಂಕ್, ಆವಯಾಂಕ್ ಆಸ್ತೆಲಿ. ದೆಕುನ್ ರೆತಿರೆಕ್ ಹಾಜರ್ ಜಾವ್ನ್ ಅತ್ಮಿಕ್ ಫಾಯ್ದೊ ಜೊಡ್ನ್ ಘೆಯಾ.*
ಮಾ|ಬಾ|ಹೆರಾಲ್ಡ್ ಪಿರೇರಾ, ಮಾ|ಬಾ|ರೊಯ್ಸನ್ ಫೆರ್ನಾಂಡಿಸ್ ಮಾ|ಬಾ|ದೊ| ಲೆಸ್ಲಿ ಡಿಸೋಜ್ ಆನಿ ಮಾ|ಬಾ|ಸಿರಿಲ್ ಲೋಬೊ ರೆತಿರ್ ಚಲವ್ನ್ ವ್ಹರುನ್ ಕುಟ್ಮಾಚಿ ಅತ್ಮಿಕತಾ, ಕುಟ್ಮಾ ಜಿಣಿಯೆಚೊ ಅನ್ಭೋಗ್ ಆನಿ ಪಂಥಾಹ್ವಾನ್ ಹ್ಯಾ ವಿಷಯಾಚೆರ್ ಶಿಕವ್ಣ್ ದಿಲಿ. ಉಡುಪಿ ದಿಯೆಸಿಜ್ ಕುಟ್ಮಾ ಆಯೋಗಾಚೊ ನಿರ್ದೇಶಕ್ ಲೆಸ್ಲಿ ಆರೋಜಾನ್ ಆಮೊರಿಸ್ ಲೆತ್ತಿಸಿಯಾ ವಿಶಿಂ ಸಮ್ಜೊಣಿ ದಿಲಿ. ವಾರಾಡ್ಯಾಚ್ಯಾ ಹರ್ಯೇಕ್ ಫಿರ್ಗಜೆ ಥಾವ್ನ್ ಕುಟ್ಮಾ ಆಯೋಗಾಚೆಂ ಸಾಂದೆಂ ಆನಿ ಹೇರಾನಿಂ ಹ್ಯಾ ರೆತಿರೆಚೊ ಫಾಯ್ದೊ ಜೊಡ್ಲೊ. ಕುಂದಾಪುರ್ ಫಿರ್ಗಜ್ ಸ್ತ್ರೀ ಸಂಘಟನಾನ್ ಜೆವಾಣ್ ತಯಾರಾಯ್ ಕರುಂಕ್ ಕುಮ್ಕೆ ಹಾತ್ ದಿಲ್ಲೊ. ಕುಂದಾಪುರ್ ವಾರಾಡೊ ವಿಗಾರ್ ವಾರ್ ಭೊ|ಮಾ|ಸ್ಟ್ಯಾನಿ ತಾವ್ರೊ ಆನಿ ಸಹಾಯಕ್ ಯಾಜಕ್ ಮಾ|ಬಾ|ವಿಜಯ್ ಡಿಸೋಜಾ ಹಾಜರ್ ಆಸ್ಲೆಂ.

ಸೌದಿ ಅರೇಬಿಯಾದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ

JANANUDI.COM NETWORK


ರಿಯಾದ್: ಕೋವಿಡ್ 19 ನ ಹಲವು ರೂಪಾಂತರ ವೈರಸ್‍ಗಳ ಬಳಿಕ ಇದೀಗ ಒಮಿಕ್ರಾನ್ ರೂಪಾಂತರ ವೈರಸ್ ಪ್ರಪಂಚದ ದೇಶಗಳಲ್ಲಿ ಆತಂಕವನ್ನು ಮೂಡಿಸಿದೆ. ಈ ನಡುವೆ ಗಲ್ಫಿನ ಸೌದಿ ಅರೇಬಿಯಾದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಗಲ್ಫ್ ನ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಉತ್ತರ ಆಫ್ರಿಕಾ ದೇಶದಿಂದ ಬಂದಿರುವ ನಾಗರಿಕನಲ್ಲಿ ಒಮಿಕ್ರಾನ್ ರೂಪಾಂತರ ವೈರಸ್ ಪತ್ತೆಯಾಗಿದ್ದು ಸದ್ಯ ಆತನನ್ನು ಪ್ರತ್ಯೇಕವಾಗಿರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕೊವಿಡ್ 19ನ ಹಲವು ರೂಪಾಂತರಿ ವೈರಸ್ ಗಳ ಪೈಕಿ ಒಮಿಕ್ರಾನ್ ಹೆಚ್ಚಿನ ವೇಗದಲ್ಲಿ ಹರಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ವಿವಿಧ ದೇಶಗಳು ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿವೆ.

ಕೋಲಾರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ :ಜೆ.ಚಂದ್ರಶೇಖರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಕೋಲಾರ ಬರಪೀಡಿತ ಜಿಲ್ಲೆ ಎಂಬ ಕಳಂಕ ದೂರವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೂಳೆತ್ತಿದ ಪರಿಣಾಮವಾಗಿ ತುಂಬಿದ ಕೆರೆಯನ್ನು, ಗ್ರಾಮ ಕೆರೆ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕೆರೆ ಅಭಿವೃದ್ಧಿಗೆ ರೂ.13.93 ಲಕ್ಷ ಮಂಜೂರು ಮಾಡಿದ್ದರು. ರೂ.13.86 ಲಕ್ಷ ವೆಚ್ಚಮಾಡಿ ಹೂಳು ತೆಗೆಯಲಾಗಿದೆ ಎಂದು ಹೇಳಿದರು.
ಕೆರೆಯ 12 ಎಕರೆ ಪ್ರದೇಶದಲ್ಲಿ ಹೂಳು ತೆಗೆಯಲಾಗಿದ್ದು, 22100 ಟ್ರ್ಯಾಕ್ಟರ್ ಲೋಡ್ ಹೂಳನ್ನು ಕೃಷಿ ಭೂಮಿಗೆ ಸಾಗಿಸಲಾಗಿದೆ. ಅದರಿಂದ ಕೃಷಿ ಭೂಮಿ ಫಲವತ್ತತೆ ಹೆಚ್ಚಿದೆ. ಉತ್ತಮ ಫಸಲು ಪಡೆಯಲು ಅನುಕೂಲವಾಗಿದೆ. ಪ್ರತಿ ವರ್ಷ ತಾಲ್ಲೂಕಿನ ಒಂದು ಕೆರೆಯನ್ನು ಆಯ್ಕೆ ಮಾಡಿಕೊಂಡು ಹೂಳು ತೆಗೆಯಲಾಗುವುದು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಈಗಾಗಲೆ ಹಲವು ಕೆರೆಗಳಲ್ಲಿ ಹೂಳು ತೆಗೆಯಲಾಗಿದ್ದು, ಹೂಳು ತೆಗೆದಿರುವ ಎಲ್ಲ ಕೆರೆಗಳೂ ಮಳೆ ನೀರಿನಿಂದ ತುಂಬಿ ತುಳುಕುತ್ತಿವೆ. ಅದರಿಂದ ಜನ ಹಾಗೂ ಜಾನುವಾರುಗಳಿಗೆ ಹೆಚ್ಚಿನ ಪ್ರಯೋಜನವಾಗಿದೆ. ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಲಾಗುತ್ತಿದೆ. ಮಳೆ ಜನ ಜೀವನದಲ್ಲಿ ಬದಲಾವಣೆ ತರಲಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರ ಕೆರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕೆರೆ ಸಂಸ್ಕøತಿ ಪುನರುಜ್ಜೀವನಗೊಳ್ಳುತ್ತಿದೆ. ಗ್ರಾಮಸ್ಥರು ಕೆರೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮಾಲೀನ್ಯಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್, ಯೋಜನಾಧಿಕಾರಿ ಸುರೇಶ್ ಗೌಡ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮನಾಥ್ ಇದ್ದರು