

ಪಡುಕೋಣೆ ; ದಿನಾಂಕ 27.7.2025 ರಂದು ಭಾನುವಾರ ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ಸೀನಿಯರ್ ಸಿಟಿಜನ್ ಸಂಘದ ಸದಸ್ಯರಿಂದ ಸಂತ ಜೊಕಿಮ್ ಮತ್ತು ಸಂತ ಅನ್ನಾ ಮಾತೆಯ (ಯೇಸುಕ್ರಿಸ್ತರ ಅಜ್ಜ -ಅಜ್ಜಿಯವರ) ಹಬ್ಬದ ದಿನವನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು.
ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ! ಫ್ರಾನ್ಸಿಸ್ ಕರ್ನೆಲಿಯೋ, ಅತಿಥಿ ಗುರುಗಳಾಗಿ ಆಗಮಿಸಿದ ವಂದನೀಯ ಫಾ! ಅರ್ನೊಲ್ಡ್ ಮಥಾಯಸ್ ಹಾಗೂ ಸೀನಿಯರ್ ಸಿಟಿಜನ್ ಸಂಘದ ಸದಸ್ಯರೆಲ್ಲರೂ ಚರ್ಚಿನ ಭಕ್ತಾಧಿಗಳ ಜೊತೆ ಸೇರಿ ಬಲಿ ಪೂಜೆಯನ್ನು ಅರ್ಪಿಸಿದರು. ಅನಂತರಾ 75 ವರ್ಷ ಮೇಲ್ಪಟ್ಟ ಹಿರಿಯ 30 ಭಕ್ತಾಧಿಗಳನ್ನು ಗುರ್ತಿಸಿ ಪುಷ್ಪಗಳನ್ನು ನೀಡಿ, ವಂ। ಫಾ.ಫ್ರಾನ್ಸಿಸ್ ಕರ್ನೆಲಿಯೋರವರು ಹಿರಿಯ ಸದಸ್ಯರನ್ನು ಗೌರವಿಸಿದರು.
ಚರ್ಚಿನ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಬಿಸಲಾಯಿತು. ಸ್ವಾಗತನೃತ್ಯದ ಮೂಲಕ ಆರಂಭವಾದ ಸಾಂಸ್ಕ್ರತಿಕ ಕಾರ್ಯಕ್ರಮ ವಿವಿಧ ವಿನೋದಾವಳಿಗಳಾದ ಹಾಸ್ಯಮಯ ಕಿರು ನಾಟಕ, ಹಾಡುಗಳನ್ನು ಹಾಡಿ, ವಿವಿಧ ರೀತಿಯ ನೃತ್ಯಗಳನ್ನು ಹಾಡುಗಳನ್ನು ಹಾಡಿ ಸೀನಿಯರ್ ಸಿಟಿಜನ್ ಸಂಘದ ಸದಸ್ಯರು ಹುಮ್ಮನ್ಸಿನಿಂದ ಭಾಗವಹಿಸಿ ಉತ್ತಮ ರೀತಿಯಲ್ಲಿ ಪ್ರದರ್ಶನ ಮಾಡಿದರು.
ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾದ ಪ್ರಭು ಕೆನಡಿ ಪಿರೇರಾ ಮಾತನಾಡಿ ‘ನಮ್ಮ ಈ ಸೀನಿಯರ್ ಸಿಟಿಜನ್ ಸಂಘಟನೆ ಬಹಳ ಚೆನ್ನಾಗಿ ನಡೆಯುವುದಲ್ಲದೆ ಪ್ರತಿಯೊಬ್ಬರ ಬಾಂಧವ್ಯ ತುಂಬಾ ಹೆಚ್ಚಾಗಿದೆ’ ಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾದ ವಂದನೀಯ ಫಾ।ಅರ್ನೊಲ್ಡ್ ಮಥಾಯಸ್ ರವರು ತಮ್ಮ ನುಡಿಯಲ್ಲಿ ನಾವು ಹಿರಿಯವರು ಮಾತ್ರವಲ್ಲಾ ನಮ್ಮಲ್ಲಿದ್ದ ಬುದ್ದಿವಂತಿಕೆ ಪ್ರತಿಭೆ ನಮ್ಮ ಮಕ್ಕಳಿಗೂ ಹಂಚಿ ಕೊಡಬೇಕು. ನಾವು ಹಿರಿಯವರು ಈ ಪ್ರಾಯದಲ್ಲಿ ಯಾರ ಮೇಲೂ ದ್ವೇಷ, ಸಿಟ್ಟು ಇಟ್ಟು ಕೊಳ್ಳಬಾರದು. ಪ್ರಪಂಚ ಬಿಟ್ಟು ಹೋಗುವಾಗ ಎಲ್ಲರಿಗೂ ನಮ್ಮ ಪ್ರೀತಿಯನ್ನು ಮಾತ್ರ ಹಂಚಿ ಹೋಗಬೇಕೆಂದು ತಮ್ಮ ಸಂದೇಶದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ರಾದ ವಂ। ಫಾ।ಫ್ರಾನ್ಸಿಸ್ ಕರ್ನೆಲಿಯೋ ರವರು “ನಮ್ಮ ಈ ಸೀನಿಯರ್ ಸಂಘದ ಸದಸ್ಯರು ಈ ಪ್ರಾಯದಲ್ಲಿ ಇಷ್ಟು ಆಸಕ್ತಿಯಿಂದ ನಟನೆ ಮತ್ತು ನೃತ್ಯ ಪ್ರದರ್ಶಿಸಿದ ಸರ್ವ್ ಸದಸ್ಯರಿಗೆ ನನ್ನ ಅಭಿನಂದನೆಗಳು. ತಮ್ಮ ಈ ಸಂಘದಿಂದ ನಮ್ಮಲ್ಲಿದ್ದ ಸಮಸ್ಯೆಗಳನ್ನು ಒಬ್ಬರಿಗೊಬ್ಬರು ತಿಳಿಸಿ ಪರಿಹರಿಸಿ ಕೊಳ್ಳಬಹುದು. ಕುಟುಂಬದಲ್ಲಿ ತಮ್ಮ ಕುಟುಂಬಗೋಸ್ಕರ ನಮ್ಮ ಮಕ್ಕಳಿಗೆ ಒಳ್ಳೆಯ ಶಿಸ್ತನ್ನು ಕಲಿಸಿ ಕುಟುಂಬದ ಹಿರಿಯರಿಗೆ ಪ್ರೀತಿ,ಗೌರವ ಸಲ್ಲಿಸಲು ಹೇಳಿ, ಆಗ ದೇವರು ನಮ್ಮನ್ನು ನಮ್ಮ ಮಕ್ಕಳನ್ನು ಆರ್ಶಿವದಿಸುತ್ತಾರೆ.ಕಿರಿಯರು ಹಿರಿಯವರಿಗೆ ಗೌರವಿಸಬೇಕೆಂದು ಕಿವಿ ಮಾತು ಹೇಳಿದರು.
78 ಮಂದಿ ಸಂಘದ ಸದಸ್ಯರು, ಅಭಿಮಾನಿಗಳು, ಐ.ಸಿ.ವೈ.ಎಮ್ ಯುವಕರು, ಮಕ್ಕಳು, ಇತರ ಸಂಘ ಸಂಸ್ಥೆಯವರು ಪಾಲ್ಗೊಂಡು ತಮ್ಮ ಹಿರಿಯ ಸದಸ್ಯರಿಗೆ ಫ್ರೋತ್ಸಾಹ ನೀಡಿದರು. ಐ.ಸಿ.ವೈ.ಎಮ್ ಸಂಘದ ಯುವಕರು ತಮ್ಮ ಹಿರಿಯ ಸದಸ್ಯರಿಗೆ ಕೆಲವು ಆಟಗಳನ್ನು ಆಡಿಸಿ, ಆಟದಲ್ಲಿ ಗೆದ್ದವರಿಗೆ ಬಹುಮಾನ ನೀಡಿ,ಅಭಿನಂದಿಸಲಾಯಿತು.ಫಲಾಹಾರ ನೀಡಿ, ಕಾರ್ಯಕ್ರಮನ್ನು ಮುಕ್ತಾಯ ಗೊಳಿಸಲಾಯಿತು. ಫಲಾಹಾರದ ಪ್ರಾಯೋಜಕರಾದ ಫೆಲ್ಸಿ ಒಲಿವೇರರವರನ್ನು ಗೌರವಿಸಲಾಯಿತು..
ಪಾಲನ ಮಂಡಳಿ ಕಾರ್ಯದರ್ಶಿ ಅಲೆಕ್ಸ್ ಎಂಟನಿ ಡಿ’ಸೋಜ, ಚರ್ಚಿನ ಸರ್ವ ಅಯೋಗಾದ ಸಂಯೋಜಕರಾದ ವಿನ್ಸೆಂಟ್ ಡಿ’ಸೋಜ, ಕುಟುಂಬ ಅಯೋಗಾದ ಸಂಚಾಲಕಿ ಫೆಲ್ಸಿ ಒಲಿವೇರಾ, ಅತೀ ಹಿರಿಯ ಸದಸ್ಯರಾದ ವೆನ್ಹನ್ಸಿಯಸ್ ಪಿರೇರಾ ಮತ್ತು ಶ ಕ್ಲೋಟಿಲ್ಡ್ ಲುವಿಸ್, ಕಾನ್ವೆಂಟಿನ ಸುಪೀರಿಯರ್ ಭಗಿನಿ ಪಾವನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೀನಿಯರ್ ಸಿಟಿಜನ್ ಸಂಘದ ಅಧ್ಯಕ್ಷರಾದ ಜೀನಾ ಮಥಾಯಸ್ ಕ್ರಾಸ್ತಾ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ಡೊಲ್ಫಿ ಡಿ’ಸಿಲ್ವರವರು ಧನ್ಯವಾದ ಅರ್ಪಿಸಿದರು. ಸಂಘದ ಕಾರ್ಯದರ್ಶಿ ಡೇರಿ ಸುವಾರಿಸ್ ಕಾರ್ಯಕ್ರಮ ನಿರೂಪಿಸಿದರು.




















