

ಕುಂದಾಪುರ; ಜುಲೈ 6 ರಂದು ಕುಂದಾಪುರ ಚರ್ಚಿನಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಕೊಂಕಣಿ ಲೇಖಕ ಸ್ಟೀಫನ್ ಕ್ವಾಡ್ರಸ್ ಅವರು ಭೂಮಿ ತಾಯಿಯನ್ನು ರಕ್ಷಿಸಲು ನಾವು ಮಾಡಬಹುದಾದ ಕ್ರಿಯಾ ಯೋಜನೆಯ ಬಗ್ಗೆ ದೊಡ್ಡವರಿಗೆ ಮತ್ತು ಮಕ್ಕಳಿಗೆ ತಿಳಿಸಿದರು. ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವುದು, ವಾಹನಗಳನ್ನು ಕಡಿಮೆ ಬಳಸುವುದು, ಸಸಿಗಳನ್ನು ನೆಡುವುದು, ನೀರಿನ ಮಿತ ಬಳಕೆ, ವಿದ್ಯುತ್ ಇತ್ಯಾದಿ ಬಳಕೆಯಲ್ಲಿ ಮಿತಿ ಮಾಡಿ ಪರಿಸರ ರಕ್ಷಣೆಗೆ ಸಹಕರಿಸಬೇಕು’ ತಿಳಿಸಿದರು.
ಮಕ್ಕಳಿಗಾಗಿ ಐ ಸಿ ವೈ ಎಂ ಸಂಘಟನೆ ಚಿತ್ರಕಲಾ ಸ್ಪರ್ಧೆಗಳು ಮತ್ತು ಪ್ರಬಂಧ ಸ್ಪರ್ಧೆಗಳನ್ನು ಇದೇ ವಿಷಯದ ಮೇಲೆ ಆಯೋಜಿಸಿತ್ತು.
ಚರ್ಚಿನ ಆವರಣದಲ್ಲಿ 36 ಹಣ್ಣು ಬಿಡುವ ಸಸ್ಯಗಳನ್ನು ನೆಡಲಾಯಿತು. ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಒಂದು ಕುಟುಂಬ ಕನಿಷ್ಠ ಒಂದು ಗಿಡವನ್ನು ನೆಟ್ಟು ಭೂ ಮಾತೆಯನ್ನು ರಕ್ಷಿಸಲು ಕರೆಕೊಟ್ಟರು.

































