

ಕುಂದಾಪುರ; ಕುಂದಾಪುರ ವಿಧಾನ ಸಭಾ ಕ್ಷೇತ್ರ 119 ರ ವ್ಯಾಪ್ತಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)ಪ್ರಕ್ರಿಯೆಯಲ್ಲಿ ಈವರೆಗೆ ಒಟ್ಟು 222 ಮತಗಟ್ಟೆಗಳಲ್ಲಿ ಶೇಕಡಾ 100 ರಷ್ಟು ಗಣತಿ ನಮೂನೆಗಳನ್ನು (EF) ವಿತರಿಸಲಾಗಿರುತ್ತದೆ. ಮತದಾರರಿಂದ ಸ್ವೀಕೃತವಾಗುವ ಗಣತಿ ನಮೂನೆಗಳನ್ನು (EF) ಸೆಕ್ಟರ್ ಅಧಿಕಾರಿಗಳಿಂದ ಪರಿಶೀಲಿಸಲ್ಪಟ್ಟು ಎಲ್ಲಾ ಮತಗಟ್ಟೆಗಳಲ್ಲಿ (EF) ಗಳ ಗಣಕೀಕರಣ ಪ್ರಾರಂಭವಾಗಿ ಈವರೆಗೆ ಒಟ್ಟು ಶೇಕಡಾ 89.62 ರಷ್ಟು ಗಣತಿ ನಮೂನೆಗಳ ಗಣಕೀಕರಣಗೊಂಡಿರುತ್ತದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ನಿಗದಿತ ಅವಧಿಯೊಳಗೆ
ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲಾ ಸಾರ್ವಜನಿಕರು ತಮ್ಮ ಮನೆಗಳಿಗೆ ಭೇಟಿ ನೀಡುವ ಬಿ.ಎಲ್.ಓ ಗಳೂ೦ದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ 119 ರ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಆಯುಕ್ತರು (Assistant Commissioner) ರಶ್ಮಿ ಎಸ್. ಆರ್., ಇವರು ಮಾದ್ಯಮಕ್ಕೆ ತಿಳಿಸಿದ್ದಾರೆ.
ಕೆಳಗೆ ಕುಂದಾಪುರ ವಿಧಾನಸಭಾ ಕ್ಷೇತ್ರ 119 – ರ ವ್ಯಾಪ್ತಿಯಲ್ಲಿ Enumeration Forms ವಿತರಣೆ ಮತ್ತು ಡಿಜಿಟಲೀಕರಣದ ವಿವರ ನೀಡಲಾಗಿದೆ


