

ಕುಂದಾಪುರ, ದಿನಾಂಕ: 24.07.2026 ರಂದು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಂಡಾರ್ಕರ್ಸ್ ಕಾಲೇಜಿನಲ್ಲಿ ಮಾದಕ ವ್ಯಸನ ದುಷ್ಪರಿಣಾಮ, ಅರಿವು ಕಾರ್ಯಕ್ರಮನಡೆಯಿತು. ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಕುಂದಾಪುರ ನಗರದ ಬಿ. ಬಿ ಹೆಗ್ಡೆ ಕಾಲೇಜು ಕುಂದಾಪುರ, ಸಂತ ಮೇರಿಸ್ ಕಾಲೇಜು ಕುಂದಾಪುರ, ಆರ್. ಎನ್ ಶೆಟ್ಟಿ ಕಾಲೇಜು ಕುಂದಾಪುರ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಈ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಮಾದಕ ವ್ಯಸನ ದುಷ್ಪರಿಣಾಮ, ಅರಿವು ಕಾರ್ಯಕ್ರಮ ನಡೆಸಲಾಯಿತು
ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿ (ಶಾಸಕರು ಕುಂದಾಪುರ ವಿಧಾನ ಸಭಾ ಕ್ಷೇತ್ರ ) ರವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಶ್ರೀ ಸುಧಾಕರ ನಾಯಕ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉಡುಪಿ ಜಿಲ್ಲೆ ಶ್ರೀ ಡಾ. ಪ್ರೇಮಾನಂದ (ತಾಲೂಕು ಅರೋಗ್ಯ ಅಧಿಕಾರಿ ), ಶ್ರೀ ಡಾ. ಪ್ರಕಾಶ್ ತೋಳಾರ್ (ವೈದ್ಯರು ಮಾತಾ ಆಸ್ಪತ್ರೆ ಕುಂದಾಪುರ ) ಶ್ರೀ ಡಾ. ಶುಭಾಕರ (ಪ್ರಾಂಶುಪಾಲರು ಭಂಡಾರ್ಕರ್ಸ್ ಕಾಲೇಜು ಕುಂದಾಪುರ ), ಶ್ರೀ ಜಯರಾಮ. ಡಿ. ಗೌಡ (ಪೊಲೀಸ್ ನಿರೀಕ್ಷಕರು ಕುಂದಾಪುರ ಪೊಲೀಸ್ ಠಾಣೆ)ಶ್ರೀ ನಂಜಾನಾಯ್ಕ್. ಎನ್ (ಪೊಲೀಸ್ ಉಪನಿರಿಕ್ಷಕರು ಕುಂದಾಪುರ ಪೊಲೀಸ್ ಠಾಣೆ ) ಶ್ರೀ ಅನೂಪ್ ನಾಯಕ್ (ಪೊಲೀಸ್ ಉಪ ನಿರೀಕ್ಷಕರು ಕುಂದಾಪುರ ಸಂಚಾರ ಪೊಲೀಸ್ ಠಾಣೆ ) ಶ್ರೀಮತಿ ಪುಷ್ಪ ( ಪೊಲೀಸ್ ಉಪ ನಿರೀಕ್ಷಕರು ಕುಂದಾಪುರ ಪೊಲೀಸ್ ಠಾಣೆ )
ಹಾಗೂ 765 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ದುಷ್ಪರಿಣಾಮಗಳನ್ನು ತಿಳಿಸಿ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳಿಂದ ಮಾದಕ ವ್ಯಸನದಿಂದ ದೂರ ಇರುವುದಾಗಿ ಪ್ರಮಾಣ ವಚನ ಮಾಡಿಸಲಾಯಿತು.




