

ಕುಂದಾಪುರ ಫೆ.23 : ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಫೆ. 22 ರಂದು ನಡೆಯಿತು. ಚರ್ಚಿನ ಅ।ವಂ। ಧರ್ಮಗುರು ಪಾವ್ಲ್ ರೇಗೊ ನೀತಿ ಶಿಕ್ಷಣ ಪಡೆಯುವ ಮಕ್ಕಳು ಹಾಗೂ ಶಿಕ್ಷಕರು ಪ್ರಾರ್ಥನ ವಿಧಿಯೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸಿ “ಕ್ರೈಸ್ತನೀತಿ ಶಿಕ್ಷಣ ನಮ್ಮ ಮಕ್ಕಳಿಗೆ ನೈತಿಕ ಜೀವನ ಅಡವಳಿಸಿಕೊಳ್ಳಲು ಅಗತ್ಯವಾಗಿದೆ ” ಎಂದು ಸಂದೇಶ ನೀಡಿದ ಅವರು, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕರನ್ನು ಸನ್ಮಾನಿಸಿದರು. ಕ್ರೈಸ್ತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು, ಬಲಿದಾನದ ಪ್ರಾರ್ಥನ ವಿಧಿಗಳಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಾದ ಪರ್ಲ್ ಬರೆಟ್ಟೊ, ಸಿಯಾನ್ನ ವಾಜ್ ಶಿಕ್ಷಕಿ ಜೂಲಿಯೆಟ್ ಪಾಯ್ಸ್ ಕ್ರೈಸ್ತ ಶಿಕ್ಷಣದ ಬಗ್ಗೆ ತಮ್ಮ ಅನ್ನಿಸಿಕೆಯನ್ನು ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದಲ್ಲಿ ಧರ್ಮಗುರು ಪಾವ್ಲ್ ರೇಗೊ ಅಧ್ಯಕ್ಷತೆಯನ್ನು ವಹಿಸಿಕೊಂಡು ನೀತಿ ಶಿಕ್ಷಣದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ವಿತರಿಸಿ, ಶಿಕ್ಷಕರಿಗೆ ನೆನಪಿನ ಕಾಣಿಕೆಯನ್ನು ನೀಡಿದರು.
1 ರಿಂದ 10 ನೇ ತರಗತಿ ಮಕ್ಕಳಿಂದ ನ್ರತ್ಯ, ಪ್ರಹಸನ, ಕಾರ್ಯಕ್ರಮಗಳು ನಡೆದವು. ನೀತಿ ಶಿಕ್ಷಣ ಶಿಕ್ಷರ ಸಂಚಾಲಕಿ ವೀಣಾ ಡಿಸೋಜಾ ವರದಿಯನ್ನು ವಾಚಿಸಿದರು, ಸಂಚಾಲಿಕೆಯಾಗಿ 9 ವರ್ಷಗಳ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು, ಸಭಾ ಕಾರ್ಯಕ್ರಮದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಪಾಲನಾ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಡಿಸೋಜಾ, ಕಾರ್ಯದರ್ಶಿ ಡೊಮಿನಿಕ್ ಬ್ರಗಾಂಜಾ, ಸರ್ವ ಆಯೋಗಗಳ ಸಂಯೋಜಕಿ ಶೋಭ ವಾಜ್ ಉಪಸ್ಥಿತರಿದ್ದು ಮಕ್ಕಳಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿ ಸಾನ್ಸಿಯಾ ಡಿಸೋಜಾ ಸ್ವಾಗತಿಸಿದರು. ವಿದ್ಯಾರ್ಥಿ ಡೆನಿಸನ್ ಬ್ರಗಾಂಜಾ, ವಿನೀಷಾ ಡಿಸೋಜಾ ನಿರೂಪಿಸಿದರು. ಶಿಕ್ಷಕಿ ವನಿತಾ ಬರೆಟ್ಟೊ ವಂದಿಸಿದರು.




































































