ಕೋಲಾರ: ಕೋಲಾರದಲ್ಲಿ ಶನಿವಾರ ವಾಸವಿ ದೇವಾಲಯಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ, ವಾಸವಿ ಗೀತೆ ರಚನೆಕಾರರಾದ ಮುಳಗಾಗಿಲಿನ ವಾಸವಿ ಸಹೋದರರನ್ನು ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮಪ್ರಸಾದ್ ಸನ್ಮಾನಿಸಿದರು. ಗಮನ ಸೆಳೆದ ವಾಸವಿ ಗೀತೆ: ಗೀತೆ ರಚಿಸಿದ ವಾಸವಿ ಸಹೋದರರಿಗೆ ಸನ್ಮಾನ ಆರ್ಯವೈಶ್ಯ ಸಮುದಾಯ ಸಮಾಜದ ಎಲ್ಲ ರಂಗಗಳಲ್ಲೂ ಮುಂದೆ ಬರಬೇಕು. ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂದು ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮಪ್ರಸಾದ್ ಹೇಳಿದರು. ಕೋಲಾರದ ವಾಸವಿ ದೇವಾಲಯಕ್ಕೆ […]
ಶ್ರೀನಿವಾಸಪುರ : ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸುಮಾರು ೫೦ ರಿಂದ ೬೦ ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅವುಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಆರು ತಿಂಗಳೊಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದ್ದಾರೆ. ಪಟ್ಟಣಾಭಿವೃದ್ಧಿಗಾಗಿ ಹೆಚ್ಚುವರಿಯಾಗಿ ೩೦ ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದೆ. ಪಟ್ಟಣದ ನಾಲ್ಕು ರಾಜಕಾಲುವೆಗಳ ದುರಸ್ಥಿಗೆ ಒಂದೂವರೆ ಕೋಟಿ ರೂ. ಮೀಸಲಿರಿಸಲಾಗಿದ್ದು, ಚರಂಡಿ ಶುದ್ಧೀಕರಣ ಮತ್ತು ದುರಸ್ಥಿಗೂ ಕ್ರಮ ಕೈಗೊಳ್ಳಲಾಗಿದೆ. ನನ್ನ […]
ಶ್ರೀನಿವಾಸಪುರ : ಪದೇ ಪದೇ ಅರಣ್ಯ ಇಲಾಖೆ ರೈತರ ಭೂಮಿಯನ್ನು ಕಿತ್ತುಕೊಳ್ಳುವದರ ಮೂಲಕ ಹಿಂಸೆ ಮಾಡುತ್ತಿದ್ದು ಇದನ್ನ ಪ್ರಾಂತ ರೈತ ಸಂಘ ಖಂಡಿಸುತ್ತಿದೆ ಎಂದು ಕೆಪಿಆರ್ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಹೇಳಿದರು.ಪಟ್ಟಣದ ಶಂಕರಮಠದ ರಸ್ತೆಯಲ್ಲಿನ ಕೆಪಿಆರ್ಎಸ್ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ಅರಣ್ಯ ಇಲಾಖೆವತಿಯಿಂದ ರೈತರನ್ನ ಒಕ್ಕಲೆಬ್ಬಿಸುತ್ತಿರುವುದನ್ನ ವಿರೋಧಿಸಿ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.ಈ ಹಿಂದೆ 2021 ಇಸ್ವಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಸರ್ಕಾರದೊಂದಿಗೆ ಸಮಾಲೋಚಿಸದೆ ತಮ್ಮದೇ ಆದ ಕಾನೂನು ಬಾಹಿರ ರೀತಿಯಲ್ಲಿ ನಡೆದುಕೊಂಡಿರುವುದು […]
ಶ್ರೀನಿವಾಸಪುರ : ಪಟ್ಟಣದ ಪುರಸಭೆ ಮುಂಭಾಗದ ವಾಣಿಜ್ಯ ಮಳಿಗೆಗೆ ಮುಂದೆ ಮಂಗಳವಾರ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದವತಿಯಿಂದ 4 ನೇ ವರ್ಷದ ಪುಣ್ಯ ಸ್ಮರಣೆ ಆಚರಿಸಲಾಯತು. ಪೂಜಾ ಕಾರ್ಯಕ್ರಮವನ್ನ ಅರುಣ್ಕುಮಾರ್ಶರ್ಮ ನಡೆಸಿಕೊಟ್ಟರು. ಪೂಜಾ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕುಂದಾಪುರ; ಮೂಡಲಕಟ್ಟೆ ಎಂ ಐ ಟಿ ಕೆ ಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗ, ವಿದ್ಯಾರ್ಥಿಗಳನ್ನು ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧಗೊಳಿಸಲು, ಕಾಕುಂಜೆ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಕಂಪನಿಯೊಂದಿಗೆ ಒಪ್ಪಂದಕ್ಕೆ (MoU) ಸಹಿ ಮಾಡಿತು . ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ, ಕಾಕುಂಜೆ ಸಾಫ್ಟವೇರ್ ಸಿಇಒ ಡಾ. ಜಿ ಕೆ ಭಟ್, ಐ ಎಂ ಜೆ ಸಂಸ್ಥೆಗಳ ಅಕಾಡೆಮಿಕ್ಸ್ ನಿರ್ದೇಶಕ ಡಾ. ಎಸ್.ಎನ್. ಭಟ್, ಪ್ರಿನ್ಸಿಪಲ್ ಡಾ. ರಾಮಕೃಷ್ಣ ಹೆಗ್ಗಡೆ, […]
ಶ್ರೀನಿವಾಸಪುರ : ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಕೆಲವರು ಪವಿತ್ರ ನದಿ ತೀರಗಳಲ್ಲಿ ಜಲ ಸ್ನಾನ ಮಾಡುತ್ತಾರೆ. ವಿಶೇಷವಾಗಿ ಕಾರ್ತಿಕಮಾಸದಲ್ಲಿ ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು.ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಶನಿವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಲಕ್ಷ ದೀಪೋತ್ಸವ ಸಮಿತಿ ಹಾಗು ಭಕ್ತಮಂಡಲಿವತಿಯಿಂದ ಹಮ್ಮಿಕೊಳ್ಳಲಾದ ಪಕ್ಷಾತೀತವಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಇಂದು ದೇವಸ್ಥಾನಗಳು ನೆಮ್ಮದಿ […]
ಶ್ರೀನಿವಾಸಪುರ : ಕನ್ನಡ ನಾಡಿನ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಯಲ್ದೂರು ಹೋಬಳಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಕೆ ಪ್ರಕಾಶಯ್ಯ ತಿಳಿಸಿದರು. ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲ್ ರಂಗಮಂದಿರದಲ್ಲಿ ಕರವೇ ಹೋಬಳಿ ಘಟಕ ಖಾಸಪ ಹೋಬಳಿ ಘಟಕ ಹಾಗೂ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಕನ್ನಡ ನಾಡಿನ ಪರಂಪರೆ […]
ಶ್ರೀನಿವಾಸಪುರ: ಕೋಲಾರದಿಂದ ಬರುವ ರಾಷ್ಟ್ರೀಯ ಹೆದ್ದಾರಿ, ಆಂಧ್ರಪ್ರದೇಶದ ಪುಂಗನೂರು ಮತ್ತು ಮದನಪಲ್ಲಿ ಕಡೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಾದ ಶ್ರೀನಿವಾಸಪುರ ತಾಲೂಕಿನ ರಸ್ತೆಗಳು ಗುಂಡಿಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿವೆ. ಎರಡು ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು — “ಇದೇ ರಸ್ತೆನಾ ಅಥವಾ ಗುಂಡಿಗಳ ಮೇಳನಾ?” ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ.ನಗರಾಭಿವೃದ್ಧಿ ಇಲಾಖೆ ಮತ್ತು ಪWಆ ಅಧಿಕಾರಿಗಳ ನಿರ್ಲಕ್ಷ್ಯರಸ್ತೆಗಳ ದುಸ್ಥಿತಿ ಬಗ್ಗೆ ಹಲವರಿಂದ ಮರುವಿಮರ್ಶೆ ಆಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕ್ರಮ ಕೈಗೊಳ್ಳುವಲ್ಲಿ […]
ಶ್ರೀನಿವಾಸಪುರ : ಆರ್ಆರ್ಎಸ್ ಸಂಘಟನೆಯನ್ನು ಅರ್ಥ ಮಾಡಿಕೊಳ್ಳದ ಮತಿ ಹೀನರು ಮನಬಂದತೆ ಮಾತನಾಡುತ್ತಾರೆ.ಎಂದು ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಟೀಕಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆರ್ಆರ್ಎಸ್ ಶತಮಾನೋತ್ಸವದ ಅಂಗವಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ದೇಶದ ಹಿತ ರಕ್ಷಣೆಗಾಗಿ, ಹಗಲಿರಲು ಮನೆ ಮಠ ಬಿಟ್ಟು ಸ್ವಂಯಂಸೇವಕರು, ಪೂರ್ಣಾವಧಿ ಸ್ವಯಂಸೇವಕರು ಕಾಯುತ್ತಿದ್ದಾರೆ. ನೂರು ವರ್ಷಗಳ ಕಾಲ ದೇಶದಲ್ಲಿ ಸಂಸ್ಕಾರವನ್ನು ಬಿತ್ತಿ, ಸಮಾಜವನ್ನು ಪರಿವರ್ತನೆ ಮಾಡಲು ಚಿಂತನೆ ಮಾಡಿ ಹಗಲಿರಲು ಕೆಲಸ ಮಾಡುತ್ತಿದೆ. ಇಂತಹ ಸಂಘನೆಯನ್ನು ನೀಷೇಧಿಸಬೇಕು ಎನ್ನುವವರು ಮೂರ್ಖರು.ರಾಜ್ಯದಲ್ಲಿ ಸಚಿವರಾದ ಪ್ರಿಯಾಂಕ್ಖರ್ಗೆ, ಸಂತೋಷಲಾಡ್ […]

