ಕೋಲಾರ:- ಎಸ್ಸೆಸ್ಸೆಲ್ಸಿ ನಿಮ್ಮ ಜೀವನದ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಗೆ ಇನ್ನೂ ಕೇವಲ 15 ದಿನಗಳು ಮಾತ್ರವಿದೆ, ಪ್ರತಿಕ್ಷಣವೂ ಉಪಯುಕ್ತವಾಗಿದೆ, ಸಮಯ ವ್ಯರ್ಥ ಮಾಡದೇ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಾಧನೆ ಸುಲಭ ಎಂದು ಜಿಲ್ಲಾ ಶಿಕ್ಷಣ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಹಿರಿಯ ಉಪನ್ಯಾಸಕ ಬಾಲಾಜಿ ಕರೆ ನೀಡಿದರು.ಮಂಗಳವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ಮಾರ್ಗದರ್ಶನ ನೀಡಿದ ಅವರು, ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು, ಓದಲು ಕಿವಿಮಾತು ಹೇಳಿದರು.ಹೊರಗಿನ ತಿಂಡಿ ತಿನ್ನದೇ ಆರೋಗ್ಯ ಕಾಪಾಡಿಕೊಳ್ಳುವ […]
ಶ್ರೀನಿವಾಸಪುರ: ಎಲ್ಲ ವರ್ಗದ ಜನರ ಅಭ್ಯುದಯಕ್ಕಾಗಿ ಮತದಾರರು ಜೆಡಿಎಸ್ ಬೆಂಬಲಿಸಬೇಕು. ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ ಮುಖಂಡರು ಹೇಳುವುದರ ಮೂಲಕ ಅಲ್ಪ ಸಂಖ್ಯಾತರ ಮತ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದ ಸಂಗತಿ ಎಂಬುದು […]
ಶ್ರೀನಿವಾಸಪುರ: ಪಟ್ಟಣದಲ್ಲಿ ಭಾನುವಾರ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣ ಮಹೋತ್ಸವ ಏರ್ಪಡಿಸಲಾಗಿತ್ತು. ಅದರ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಪಟ್ಟಣದ ಕನಕ ಸಮುದಾಯ ಭವನದ ಸಮೀಪ ವಿಶೇಷವಾಗಿ ನಿರ್ಮಿಸಲಾಗಿದ್ದ ವಿಶಾಲವಾದ ಪೆಂಡಾಲ್ ಕೆಳಗಿನ ಭವ್ಯ ವೇದಿಕೆಯಲ್ಲಿ, ತಿರುಪತಿಯಿಂದ ತರಲಾಗಿದ್ದ ದೇವರ ವಿಗ್ರಹಗಳಿಗೆ ಪುಷ್ಪಾಲಂಕಾರ ಮಾಡಿ ಕಲ್ಯಾಣೋತ್ಸವ ನೆರವೇರಿಸಲಾಯಿತು.ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನ ಕಲ್ಯಾಣ ಮಹೋತ್ಸವ ಕಣ್ತುಂಬಿಕೊಂಡರು. ಕಲ್ಯಾಣೋತ್ಸವದ ನಡುವೆ ಭಕ್ತಾದಿಗಳಿಂದ ಗೋವಿಂದ ನಾಮ ಸ್ಮರಣೆ ಮುಗಿಲು ಮುಟ್ಟಿತ್ತು. ತಿರುಪತಿಯಿಂದ ಆಗಮಿಸಿದ್ದ […]
ಕಾಣೆಯಾದ ಶಾಸಕ ಹೆಚ್.ನಾಗೇಶ್ ಮುಳಬಾಗಿಲು, ಮಾ.11: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ನಾಪತ್ತೆ ಆಗಿರುವ ಉಸ್ತುವಾರಿ ಸಚಿವರಾದ ಮುನಿರತ್ನ ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕರದಾದ ಹೆಚ್.ನಾಗೇಶ್ರು ನಾಪತ್ತೆಯಾಗಿದ್ದು ಹುಡುಕಿಕೊಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾನ್ಯ ಮುಖ್ಯ ಮಂತ್ರಿಗಳನ್ನು ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರವರು ಚುನಾವಣೆ ಇನ್ನೂ 2 ತಿಂಗಳು ಬಾಕಿ ಇರುವಾಗಲೇ ಮುಳುಬಾಗಿಲು ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್ರವರು ಜನ ಸಾಮಾನ್ಯರ ಕೈಗೆ ಸಿಗದೆ ನಾಪತ್ತೆ ಆಗಿದ್ದಾರೆ. ತಾಲ್ಲೂಕಿನಾದ್ಯಾಂದ […]
ಕೋಲಾರ, ಮಾ,9: ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಗೌರವ ಕೊಡಬೇಕಾದ ಜವಬ್ದಾರಿ ಸ್ಥಾನದಲ್ಲಿರುವ ಸಂಸದರು ಕುಂಕುಮ ವಿಚಾರದಲ್ಲಿ ಸಾರ್ವಜನಿಕವಾಗಿ ಗಂಡ ಬದುಕಿದ್ದಾನಾ? ಕಾಮನ್ಸೆನ್ಸ್ ಇಲ್ಲ ಹಣಕ್ಕಾಗಿ ಮತಾಂತರ ಮಾಡಿಕೊಳ್ಳುತ್ತೀರಾ ಎಂದು ಸಾರ್ವಜನಿಕರವಾಗಿ ಅವಮಾನ ಮಾಡಿರುವುದನ್ನು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸಂಸದರ ಹೇಳಿಕೆಯನ್ನು ಪತ್ರಿಕಾ ಹೇಳಿಕೆ ಮುಖಾಂತರ ಸಂಸದರ ನಡೆ ಮಹಿಳಾ ವಿರೋದಿ ನಡೆಯಾಗಿದೆ ಎಂದು ಖಂಡಿಸಿದ್ದಾರೆ.
ಶ್ರೀನಿವಾಸಪುರ: ಇಲ್ಲಿ ಮಾ.12 ರಂದು ಸಂಜೆ 4.30 ಗಂಟೆಯಿಂದ 7 ಗಂಟೆ ವರೆಗೆ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.11 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ರಥಬೀದಿಯಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಏರ್ಪಡಿಸಲಾಗಿದೆ. ಮೆರವಣಿಗೆ ಬಳಿಕ ವಿವಿಧ ಧಾರ್ಮಿಕ ಕಾರ್ಯಗಳು ಮುಗಿದ ಬಳಿಕ, ಕನಕ ಮಂದಿರದ ಸಮೀಪ ನಿರ್ಮಿಸಲಾಗಿರುವ ವೇದಿಕೆಯಲ್ಲಿ ವಾದ್ಯಗೋಷ್ಠಿ ಏರ್ಪಡಿಸಲಾಗಿದೆ ಎಂದು ಹೇಳಿದರು.ಮಾ.12 […]
ಶ್ರೀನಿವಾಸಪುರ: ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ. ಆ ಸ್ಥಾನ ಉಳಿಸಿಕೊಂಡಿರುವುದು ಹೆಣ್ಣಿನ ಹೆಗ್ಗಳಿಕೆ ಎಂದು ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಹೇಳಿದರು. ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು , ಮಹಿಳೆ ಶಕ್ತಿ ಸ್ವರೂಪಿಣಿ , ಪುರುಷರ ಸಾಧನೆ ಹಿಂದೆ ಮಹಿಳೆಯ ಬೆಂಬಲ ಇದ್ದೇ ಇರುತ್ತದೆ. ಅದು ತಾಯಿಯಾಗಿರಬಹುದು ,ಹೆಂಡತಿಯಾಗಿರಬಹುದು ಅಥವಾ ಬೇರೆ ಯಾರಾದರೂ ಆಗಿರಬಹುದು ಎಂದು ಅಭಿಪ್ರಾಯಪಟ್ಟರು. ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ ಮಾತನಾಡಿ , […]
ಶ್ರೀನಿವಾಸಪುರ : ಎಲ್ ಐ ಸಿ ಒಂದು ಜನ ಕ್ಷೇಮಾಭಿವೃದ್ಧಿ ಸಂಸ್ಥೆಯಾಗಿದ್ದು , ಏಜೆಂಟರು ಭವಿಷ್ಯದ ದೃಷ್ಟಿಯಿಂದ ಜೀವ ವಿಮೆ ಮಾಡಿಸುವಂತೆ ಜನರ ಮನವೊಲಿಸಬೇಕು ಎಂದು ತಾಲ್ಲೂಕು ಎಲ್ಐಸಿ ಉಪ ಶಾಖೆ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ ಹೇಳಿದರು . ಪಟ್ಟಣದ ಎಲ್ಐಸಿ ಉಪ ಶಾಖೆಯಲ್ಲಿ ಏರ್ಪಡಿಸಿದ್ದ ಎಲ್ಐಸಿ ಏಜೆಂಟರ ಸಭೆಯಲ್ಲಿ ಮಾತನಾಡಿದ ಅವರು , ಎಲ್ಐಸಿ ದೇಶದ ಜನರ ಭವಿಷ್ಯದಕಡೆ ಗಮನ ಹರಿಸುವ ಸಂಸ್ಥೆಯಾಗಿ ಮಾತ್ರ ಉಳಿದಿಲ್ಲ. ದೇಶದ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ನೆರವು ನೀಡುತ್ತಿದೆ , […]
ಕೋಲಾರ : ಪತ್ರಕರ್ತರು ಸ್ವಾಭಿಮಾನ ಮತ್ತು ನಿರ್ದಾಕ್ಷಿಣ್ಯ ಮನೋಭಾವ ಉಳಿಸಿ ಕೊಂಡು ವೃತ್ತಿ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆದರೆ , ಇಂದಿನ ಬಹುತೇಕ ಪತ್ರಕರ್ತರಲ್ಲಿ ಈ ಎರಡೂ ಗುಣಗಳ ಕೊರತೆ ಕಂಡುಬರುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಿಷಾದಿಸಿದರು. ಕೆ ಯು ಡಬ್ಲ್ಯೂ ಜೆ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ್ ಅವರನ್ನು ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಅಭಿನಂದಿಸಿ ಅವರು […]

