JANANUDI.COM NETWORK ಕೇಂದ್ರದ ಮಾಜಿ ಸಚಿವ ಹಿರಿಯ ಕಾಂಗ್ರೆಸ್‌ ನಾಯಕ ಓಸ್ಕರ್ ಫೆರ್ನಾಂಡಿಸ್‌ ಅವರ ನಿಧನಕ್ಕೆ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ಅತೀವ ಸಂತಾಪ ವ್ಯಕ್ತಪಡಿಸಿದೆಆಸ್ಕರ್‌ ಫೆರ್ನಾಂಡಿಸ್‌ ನಿಧನಕ್ಕೆ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ಸಂತಾಪಶ್ರೀಸಾಮಾನ್ಯರ ಪ್ರಭಾವಿ ಸಂಘಟನೆಯಾಗಿರುವ ಕೆಥೊಲಿಕ್‌ ಸಭಾವನ್ನು ಈ ಹಿಂದಿನ ಮಂಗಳೂರು ಧರ್ಮಪ್ರಾಂತ್ಯ ವಿದ್ದ ವೇಳೆಯಲ್ಲಿ ಹುಟ್ಟುಹಾಕಿ ಅದರ ಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯ ಏಳಿಗೆಗಾಗಿ ಅವರು ವಹಿಸಿದ ನಾಯಕತ್ವ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾದುದು. ಅವರು ಸಂಘಟನೆಗೆ ಹಾಕಿದ ಭದ್ರ ಬುನಾದಿಯ ಫಲವಾಗಿ ಇಂದು […]

Read More

JANANUDI.COM NETWORK ಕರಾವಳಿ ಕರ್ನಾಟಕದ ಅತ್ಯಂತ ಗೌರವಾನ್ವಿತ ರಾಜಕಾರಣಿ, ಜನಾನುರಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶ್ರೀಯುತ ಓಸ್ಕರ್ ಫೆರ್ನಾಂಡಿಸ್‍ರವರು ಅಸ್ತಂಗತರಾದ ಸುದ್ಧಿಯು ನಮ್ಮನ್ನು ಅತೀವ ದುಃಖಿತರನ್ನಾಗಿಸಿದೆ. ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವಾಗ, ಅವರ ಕುಟುಂಬದ ಸದಸ್ಯರಿಗೆ ಈ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿ ಅವರನ್ನು ಹೃತ್ಪೂರ್ವಕವಾಗಿ ಸಂತೈಸುತ್ತೇವೆ.ಉಡುಪಿಯ ದೇಶಭಕ್ತ ಫೆರ್ನಾಂಡಿಸ್ ಕುಟುಂಬದಲ್ಲಿ ಜನಿಸಿ, ಸಮುದಾಯದ ನಾಯಕನಾಗಿ, ಉಡುಪಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 1980 ರಿಂದ 1996 ರವರೆಗೆ […]

Read More

JANANUDI.COM NETWORK ರಾಷ್ಟ್ರೀಯ ನಾಯಕರು, ರಾಜ್ಯಸಭಾ ಸದಸ್ಯರು ಹಾಗೂ ನಮ್ಮೆಲ್ಲರ ಅಚ್ಚು ಮೆಚ್ಚಿನ ಶ್ರೀ ಆಸ್ಕರ್ ಫೆರ್ನಾಂಡಿಸ್ ಅವರ ನಿಧನದ ವಾರ್ತೆ ನಿಮಗೆ ಈಗಾಗಲೇ ತಿಳಿದಿರುತ್ತದೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ನಾಳೆ (14.9.2021 ಮಂಗಳವಾರ) ಬೆಳಿಗ್ಗೆ 9-30 ಗಂಟೆಗೆ ತಾವು ಕಾಂಗ್ರೆಸ್ ಭವನಕ್ಕೆ ಆಗಮಿಸಿ, ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮೃತರ ಅಂತಿಮ ದರ್ಶನ ಪಡೆಯುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ವಿನಂತಿಸಿಕೊಂಡಿದೆ

Read More

ಮಝರ್,ಕುಂದಾಪುರ. ಪಡುಕೋಣೆ : ಕಾಲು ಜಾರಿ ನದಿಗೆ ಉರುಳಿದ ಮಗುವನ್ನು ರಕ್ಷಿಸಲು ಹೋದ ತಾಯಿಯ ಸಹಿತ ಮಗು ಸಹ ದಾರುಣವಾಗಿ ಸಾವಿಗೀಡಾದ ಘಟನೆ ಸಮೀಪದ ಪಡುಕೋಣೆ ಬಳಿ ನಡೆದಿದೆ.ಪತ್ರಕರ್ತ ನೋಯೆಲ್ ಪಿರೇರಾ ಚುಂಗಿಗುಡ್ಡೆ ಅವರ ಪತ್ನಿ ರೋಜಾ ರೂಯಿ ಪಿರೇರಾ(34) ಮಗು ಶಾನ್ ರಿಚರ್ಡ್ ಪಿರೇರಾ (11) ಸಾವಿಗೀಡಾಗಿರುವ ದುರ್ದೈವಿಗಳಾಗಿದ್ದಾರೆ.ಬೆಳಿಗ್ಗೆ ವಾಕ್ ಹೋಗಿ ಬರುವಂತೆ ಮಗು ಹಠ ಮಾಡಿದ್ದರಿಂದ ಮನೆಯ ಕೂಗಳತೆಯಷ್ಟು ದೂರವಿರುವ ನದಿ ದಂಡೆಯಲ್ಲಿ ವಾಡಿಕೆಯಂತೆ ಮಗುವಿನ ಜತೆ ತಾಯಿತೆರಳಿದ್ದರು. ಅಲ್ಲಿ ದಂಡೆಯ ಮೇಲೆ ಪಾಚಿ […]

Read More

Reported by : Richard Dsouza ಉಡುಪಿ: ಕಾರ್ಕಳದಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ ದಾಂಧಲೆ ಎಬ್ಬಿಸಿರುವುದ ಖಂಡನೀಯ. ಪ್ರಾರ್ಥನೆಗೆ ತೆರಳಿದವರ ಮೇಲೆ ದಾಳಿ ನಡೆಸುವ ಬದಲು ಅವರ ಮನವೊಲಿಸಿ ಸಮಸ್ಯೆ ಅರಿಯುವ ಕೆಲಸ ಮಾಡಬೇಕಿತ್ತು ಎಂದು ಕ್ರೈಸ್ತ ನಾಯಕಿ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.ನೇರವಾಗಿ ಹೋಗಿ ದಾಳಿ ಮಾಡಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರಾರ್ಥನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದ್ದು ಎಲ್ಲಾ ಧರ್ಮದವರ ಪ್ರಾರ್ಥನೆಗಳು ಎಲ್ಲಾ ಕಡೆಯಲ್ಲೂ ನಡೆಯುತ್ತಿದ್ದು ಕೊನೆಯಲ್ಲಿ […]

Read More

JANANUDI.COM NETWORK ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಅರ್ಥಿಕವಾಗಿ ತೀರಾ ಹಿಂದುಳಿದ ಮನೆಯೊಂದಕ್ಕೆ ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸಿನ ಅಧ್ಯಕ್ಷರಾದ “ಅನಿತಾ ಡಿಸೋಜ ಬೆಳ್ಮಣ್” ಭೇಟಿ ನೀಡಿ ಗಣೇಶ ಚತುರ್ಥಿಯ ಪ್ರಯುಕ್ತ ದಿನಬಳಕೆ ವಸ್ತುಗಳು ಮತ್ತು ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು. ಹಾಗೂ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗೊಂಡು ದುಡಿಯಲಾಗದೇ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಬೋಳ ಗ್ರಾಮದ “ಸಂದೀಪ್” ಅವರ ಮನೆಗೂ ಭೇಟಿ ನೀಡಿ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ […]

Read More

JANANUDI.COM NETWORK ಬೆಳ್ಳೆ ಗ್ರಾಮ ಪಂಚಾಯತ್, ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಲಯನ್ಸ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಪರಿಸರ ಸಂಘ ಮೂಡುಬೆಳ್ಳೆ ಇವರ ಜಂಟಿ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಮೂಡುಬೆಳ್ಳೆ ಕಾರ್ಯಕ್ರಮಕ್ಕೆ ಪ್ರಾಯೋಗಿಕ ಚಾಲನೆಯನ್ನು ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ನೀಡಲಾಯಿತು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧಾಕರ್ ಪೂಜಾರಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಲೇರಿಯನ್ ನೊರೊನಾ ಎನ್ಎಸ್ಎಸ್ ಯೋಜನಾಧಿಕಾರಿ ಜಸಿಂತಾ ಲೋಬೋ , ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು, ಗ್ರಾಮ ಪಂಚಾಯತ್ […]

Read More

JANANUDI.COM NETWORK ಅಜೆಕಾರ್, ಸೆ.8: ಅಜೆಕಾರ್ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚಿನಲ್ಲಿ ಮಾತೆ ಮೇರಿಯವರ ಜನ್ಮದಿನದ ಹಬ್ಬವನ್ನು ಧರ್ಮಕೇಂದ್ರವು ಒಂದು ಕುಟುಂಬದಂತೆ ಸಂತೋಷದಿಂದ ಆಚರಿಸಿದರು. ಈ ಹಬ್ಬದ. ಸಿದ್ಧತೆಗಾಗಿ ಮಕ್ಕಳು ಮತ್ತು ಪೋಷಕರು ಸತತ 9 ದಿನಗಳ ನೊವೆನಾ ಪ್ರಾರ್ಥನೆ ಮತ್ತು ಪವಿತ್ರ ಬಲಿದಾನದಲ್ಲಿ ಭಾಗವಹಿಸಿದರು. ಚರ್ಚಿನ ಧರ್ಮಗುರು ವಂ| ಪ್ರವೀಣ್ ಅಮೃತ್ ಮಾರ್ಟಿಸ್ ನೊವೆನಾ ಮತ್ತು ಬಲಿದಾನವನ್ನು ನಡೆಸಿಕೊಟ್ಟರು. ಇವತ್ತು ಮೊಂತಿ ಸಂಭ್ರಮ ಭಕ್ತಿಯ ಹಬ್ಬಬಲಿ ಪೂಜೆಯನ್ನು ಅರ್ಪಿಸಿ ಫಾ| ಪ್ರವೀಣ್ ಅಮೃತ್ ಮಾರ್ಟಿಸ್ […]

Read More

JANANUDI.COM NETWORK ಗಂಗೊಳ್ಳಿ: ದಿನಾಂಕ 06-09-2021 ಸೋಮವಾರದಂದು 8ನೇ ತರಗತಿಯ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಅಪರಹ್ನ 1:00 ಗಂಟೆಗೆ ವಿದ್ಯಾರ್ಥಿಗಳು ಆಗಮಿಸಿದರು. ಮುಖ್ಯಶಿಕ್ಷಕಿಯ ಅನುಪಸ್ಥಿತಿಯಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ಫೆಲ್ಸಿಯಾನ ಡಿಸೋಜ ವಿದ್ಯಾರ್ಥಿಗಳಿಗೆ ಸ್ವಾಗತಿಸಿದರು. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪುಷ್ಪವನ್ನು ನೀಡಿದರು. ವಿದ್ಯಾರ್ಥಿಗಳ ಪರಿಚಯವನ್ನು ಮಾಡಿಕೊಂಡ ಶಿಕ್ಷಕರು, ತಮ್ಮ ಪರಿಚಯವನ್ನು ತಿಳಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಯನ್ನು ಹಂಚಲಾಯಿತು.

Read More