ಕುಂದಾಪುರ: ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ರಾ.ಹೆ.66ರ ಆರಾಟೆ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ರಾಹುಲ್ ಬಾಲಕೃಷ್ಣ ರಣಕಂಬೆ ಎಂದು ಗುರುತಿಸಲಾಗಿದೆ. ಮೂಲತಃ ಮಹಾರಾಷ್ಟ್ರದವರಾದ ರಾಹುಲ್ ಅವರು, ಮರವಂತೆ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ಬ್ಯಾಂಕಿನ ಕರ್ತವ್ಯ ಮುಗಿಸಿ ತನ್ನ ಬೈಕಿನಲ್ಲಿ ಕುಂದಾಪುರದ ಮನೆಗೆ ತೆರಳುತ್ತಿದ್ದ ವೇಳೆ ಆರಾಟೆ ಬಸ್ ನಿಲ್ದಾಣದ ಬಳಿ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ […]
ವರದಿ :-ಈಶ್ವರ್ ಸಿ ನಾವುಂದ. ಕುಂದಾಪುರದ ಅರುಣ್ ಮಧ್ಯಸ್ಥ ಮತ್ತು ಲತಾ ಮಧ್ಯಸ್ಥರ ಪ್ರೀತಿಯ ಕುವರಿ ಕುಂದಾಪುರದ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವಲಾಸ್ಯ ಮಧ್ಯಸ್ಥಳು ತನ್ನ ಎಳೆಯ ವಯಸ್ಸಿನಲ್ಲಿಯೇ ಮಹತ್ತರವಾದ ಸಾಧನೆಯನ್ನು ಮಾಡಿ ಹಲವರ ಪ್ರಶಂಸೆಗೆ ಪಾತ್ರಲಾಗಿದ್ದಾಳೆ. ಕರಾವಳಿ ಭಾಗದಲ್ಲಿಯ ಹಲವು ಗುರುಗಳಿಂದ ಯೋಗಾಭ್ಯಾಸವನ್ನು ಮಾಡಿರುವುದು ಡಾ. ನವೀನ್ ಕುಮಾರ್, ಕೆ ಆರ್ ವಿಷ್ಣು ಪ್ರಸಾದ್ ಶೆಟ್ಟಿ ರಂಜಿತ್ ಜಿಡಿ ಹಾಗೂ ಶ್ರೀ ಹರಿ ಅಯ್ಯಂಗಾರ್ ರವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದಾಳೆ ಯೋಗಭ್ಯಾಸದ […]
ಕುಂದಾಪುರ: ಎಲ್ಲರಿಗೂ ಬದುಕುವ ಹಕ್ಕಿದೆ ಎಂಬುದನ್ನು ಅರಿತಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬಹುದು ಪ್ರತಿಯೊಬ್ಬ ಮಗುವಿನಲ್ಲಿ ತಮಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ತಿಳಿಹೇಳಲು ಮಕ್ಕಳ ವಿಶೇಷ ಗ್ರಾಮಸಭೆ ಸಹಕಾರಿ.ಇದನ್ನು ಮಕ್ಕಳ ಹಬ್ಬದಂತೆ ಆಚರಿಸಲಾಗುತ್ತಿದೆ ಎಂದು ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷೀ ಎಚ್.ಎಸ್.ಹೇಳಿದರು. ಅವರು ತಲ್ಲೂರು ಗ್ರಾಮ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ತಾಪಂ ಕುಂದಾಪುರ ನೇತೃತ್ವದಲ್ಲಿ ನಮ್ಮ ಭೂಮಿ ಸಿಡಬ್ಲುಸಿ ಸ್ವಯಂಸೇವಾ ಸಂಸ್ಥೆ ಆಶ್ರಯದಲ್ಲಿ ತಲ್ಲೂರಿನ ಶೇಷಕೃಷ್ಣ ಸಭಾಂಗಣದಲ್ಲಿ ಶನಿವಾರ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆ ‘ಮಕ್ಕಳ […]
ಕುಂದಾಪುರ, ಫೆ.17: ಇತ್ತೀಚೆ ನೆಡೆದ ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷರಾಗಿ ವಿಲ್ಸನ್ ಡಿಆಲ್ಮೇಡಾ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶಾಂತಿ ಪಿಂಟೊ, ನಿಕಟಪೂರ್ವ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ನಿಯೋಜಿತ ಅಧ್ಯಕ್ಷೆಯಾಗಿ ಆಶಾ ಕರ್ವಾಲ್ಲೊ, ಉಪಾಧ್ಯಕ್ಷೆಯಾಗಿ ಡಾ.ಸೋನಿ ಡಿಕೋಸ್ತಾ, ಸಹಕಾರ್ಯದರ್ಶಿಯಾಗಿ ವಿನಯಾ ಡಿಕೋಸ್ತಾ, ಖಜಾಂಚಿಯಾಗಿ ಪ್ರೇಮಾ ಡಿಕುನ್ಹಾ, ಸಹ ಖಜಾಂಚಿಯಾಗಿ ಮಾರ್ಕ್ ಡಿಸೋಜಾ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ಜೂಲಿಯೆಟ್ ಪಾಯ್ಸ್, ರಾಜಕೀಯ ಸಂಚಾಲಕರಾಗಿ ಮೈಕಲ್ ಗೊನ್ಸಾಲ್ವಿಸ್, ಸರ್ಕಾರಿ ಸವಲತ್ತುಗಳ ಸಂಚಾಲಕರಾಗಿ ವಿನೋದ್ ಕ್ರಾಸ್ಟೊ, ಅಂತರೀಕ ಲೆಕ್ಕ ತಪಾಸಣೆಗಾರರಾಗಿ ಬರ್ನಾಡ್ ಡಿಕೋಸ್ತಾ, […]
ಕುಂದಾಪುರ: ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಫೆಬ್ರವರಿ 15ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲ್ತೊಡು ಇಲ್ಲಿ ನೆರವೇರಿತು.ಎನ್.ಎಸ್ ಗ್ರೂಪ್ ಮತ್ತು ಯುವ ಮನೀಷ್ ಇದರ ಮಾಲಕರಾದ ಜಯಶೀಲ ಶೆಟ್ಟಿ, ಶಿಬಿರವನ್ನು ಉದ್ಘಾಟಿಸಿ ಶಿಬಿರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶಿಬಿರಕ್ಕೆ ಶುಭಹಾರೈಸಿದರು.ತದನಂತರ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ಕಾಲ್ತೊಡು ಗ್ರಾಮಪಂಚಾಯತ್ ವತಿಯಿಂದ ಶಾಲೆಗೆ ನೀಡಿದ ಕುಡಿಯುವ ನೀರಿನ […]
ಕುಂದಾಪುರ, ಫೆ.17 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಂತರ ಜಿ ಎಸ್ ಟಿ ಸಂಗ್ರಹದಲ್ಲಿ 14% ಹೆಚ್ಚುವರಿ ಯಾಗಿರುವುದು ದೇಶಕ್ಕೆ ಮಾದರಿಯಾಗಿದೆ. ಕರಾವಳಿಯ ಮೀನುಗಾರರ ತುರ್ತು ರಕ್ಷಣೆಗೆ ಸಮುದ್ರ ಅಂಬುಲೆನ್ಸ್ ಖರೀದಿ ಘೋಷಿಸಿರುವುದು, ಮೀನುಗಾರರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ, ಮಾತ್ರವಲ್ಲದೆ ದುಡಿಯುವ ವರ್ಗದ ಪರ ಸರಕಾರವಿರುವುದು ಸ್ಪಷ್ಟವಾಗಿದೆ. 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಅನ್ನ ಸುವಿದಾ ಯೋಜನೆಯಿಂದ ಮನೆ ಬಾಗಿಲಿಗೆ ಆಹಾರಧಾನ್ಯ ವಿತರಣೆ, ಹಿರಿಯ ನಾಗರಿಕರಿಗೆ ಸಂದ ಗೌರವವಾಗಿದೆ. ಗೃಹ ಜ್ಯೋತಿ ಯೋಜನೆಯಲ್ಲಿ 10 ಯೂನಿಟ್ ಹೆಚ್ಚುವರಿ ವಿದ್ಯುತ್ ಅನ್ನು […]
ಉಡುಪಿ: ಬೆಳಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅತಿಥಿ ಉಪನ್ಯಾಸಕರೊಬ್ಬರು ಕಾಪು ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಪಡುಬಿದ್ರಿ ವಿನಯ ರಾವ್ (27) ಆತ್ಮಹತ್ಯೆ ಮಾಡಿಕೊಂಡವರು.ಮೃತ ವಿನಯ್ ಅವಿವಾಹಿತರಾಗಿದ್ದು ತಂದೆ, ತಾಯಿ, ಸಹೋದರಿ, ಸಹೋದರನನ್ನು ಅಗಲಿದ್ದಾರೆ. ಅತಿಥಿ ಉಪನ್ಯಾಸಕ ವಿನಯ್ ರಾವ್ ಗುರುವಾರ ಮನೆಯಿಂದ ಕಾಲೇಜಿಗೆ ತೆರಳಿದ್ದು, ಸಂಜೆ ಇನ್ನಂಜೆ ದೇಗುಲದ ಸುತ್ತಮುತ್ತ ಓಡಾಡಿಕೊಂಡ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರೆಯಾಗಿದೆ. ಶುಕ್ರವಾರ ಮುಂಜಾನೆ ದೇವಳದ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದ್ದು,ಕೆರೆಯ ದಡದಲ್ಲಿ ಲ್ಯಾಪ್ ಟ್ಯಾಪ್ ಸಹಿತ […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಸಂತೋಷ್ ಶೆಟ್ಟಿ ಮಹೇಂದ್ರ ಆಚಾರ್ಯ, ಸುಹಾಸ್ ಚಾತ್ರ, ಜಗದೀಶ್ ಹೆಚ್.ವಿ ಮತ್ತು ಗುರುರಾಜ್ ಕರ್ವಾಡಿ ಗೆಳೆಯರು ಕಾಲೇಜಿನ ಮಧ್ಯಾಹ್ನದ ಭೋಜನಕ್ಕೆ ಮೂವತ್ತು ಸಾವಿರ (30000) ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಕುಂದಾಪುರ, ಕರಾವಳಿ ಮೀನುಗಾರರು, ಮಹಿಳೆಯರು, ಅಲ್ಪ ಸಂಖ್ಯಾತರುಗಳೂ ಸೇರಿದಂತೆ ಎಲ್ಲರ ಶ್ರೇಯಕ್ಕೆ, ಸುಖಕ್ಕೆ ಸಮಗ್ರವಾಗಿ ಬಜೆಟ್ನಲ್ಲಿ ಅನುದಾನ ಒದಗಿಸಲಾಗಿದೆ. ವಡ್ಡರ್ಸೆಯವರ ಹೆಸರಲ್ಲಿ ಪ್ರಶಸ್ತಿ ಘೋಷಿಸಿದ್ದು ಸರಕಾರ ಸದಾ ಸಮ ಸಮಾಜದ ಪರವಾಗಿದೆ ಎನ್ನುವ ನಿಲುವನ್ನು ಧ್ವನಿಸುತ್ತದೆ. ಕೇಂದ್ರ ಸರಕಾರದ ಮಲತಾಯಿ ಧೋರಣೆಗೆ ಸೆಡ್ಡು ಹೊಡೆದು ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿಯುವಂತಿರುವ ಬಜೆಟ್ ಮಂಡನೆಗಾಗಿ ಕಾಂಗ್ರೆಸ್ ಮುಖಂಡರಾದ ಗಣೇಶ್ ಕೆ ನೆಲ್ಲಿಬೆಟ್ಟು ಮಾನ್ಯ ಸಿದ್ಧರಾಮಯ್ಯನವರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.

