ಕೋಲಾರ:- ದಸರಾ ಮುಕ್ತಾಯದ ಹಿಂದಿನ ದಿನವಾದ ಆಯುಧಪೂಜೆಗಾಗಿ ನಗರದಲ್ಲಿ ಹಬ್ಬದ ವ್ಯಾಪಾರ ಜೋರಾಗೇ ನಡೆದಿದ್ದು, ಜನರಲ್ಲಿ ಹಬ್ಬ ಆಚರಣೆಯ ಉತ್ಸಾಹ ಎಲ್ಲೇ ಮೀರಿದೆ, ಹೂ,ಹಣ್ಣು,ಬುದುಗುಂಬಳದ ಬೆಲೆ ಗಗನಕ್ಕೇರಿ ಗ್ರಾಹಕನ ಜೇಬು ಕಚ್ಚುತ್ತಿದ್ದರೆ, ಕಳೆದೊಂದು ತಿಂಗಳಿಂದ ಹೂವಿನ ದರ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಖುಷಿ ತಂದಿದೆ.ಆಯುಧಪೂಜೆ ಹಿನ್ನಲೆಯಲ್ಲಿ ನಗರ ಹಾಗೂ ಗ್ರಾಮೀಣ ಜನತೆ ತಮ್ಮ ಮನೆಗಳ ಸ್ವಚ್ಚತೆಯ ಜತೆಗೆ ತಾವು ಬಳಸುವ ವಾಹನ,ಉಪಕರಣಗಳಿಗೆ, ವರ್ಷವಿಡೀ ಉದ್ಯೋಗ ನೀಡುವ ಅಂಗಡಿ,ಸಂಸ್ಥೆಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಈ ಬಾರಿಯೂ ನಡೆದಿದ್ದು, […]
ಶ್ರೀನಿವಾಸಪುರದ ಕನ್ಯಕಾಪರಮೇಶ್ವರಿ ದೇವಾಲಯದ ಮುಂದೆ ಏರ್ಪಡಿಸಿದ್ದ ಗಂಗಾ ಹಾರತಿ ಕಾರ್ಯಕ್ರಮವನ್ನು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹಮದ್ ಬಿ.ಗೊರವಿನಕೊಳ್ಳ ಹಾಗೂ ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿದರು. ಕನ್ಯಕಾ ಪರಮೇಶ್ವರಿ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಾವಿನ ಪಟ್ಟಣದಲ್ಲಿ ಗಂಗಾ ಹಾರತಿ, ತೆಪ್ಪೋತ್ಸವ ಉದ್ಘಾಟನೆಶ್ರೀನಿವಾಸಪುರ: ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ದಸರಾ ಪ್ರಯುಕ್ತ ಮಂಗಳವಾರ ಗಂಗಾ ಹಾರತಿ ಹಾಗೂ ತೆಪ್ಪೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹಮದ್ ಬಿ.ಗೊರವಿನಕೊಳ್ಳ ಹಾಗೂ ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿದರು.ಬಿ.ಆರ್.ಭಾಸ್ಕರ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗಂಗಾ […]
ಶ್ರೀನಿವಾಸಪುರ : ಪಟ್ಟಣದ ಹೊರವಲಯದ ಹೊಗಳಗರೆ ಕ್ರಾಸ್ ಬಳಿ ಮಂಗಳವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೇತಗಾನಹಳ್ಳಿ ಗ್ರಾಮದ ಪದ್ಮಮ್ಮ ( 48ವರ್ಷ), ರಘು ( 26 ವರ್ಷ ) ಸ್ಥಳದಲ್ಲಿ ಮೃತಪಟ್ಟಿದ್ದಾರೆ.ಮೃತರು ಶ್ರೀನಿವಾಸಪುರ ಪಟ್ಟಣದಿಂದ ಸ್ವಗ್ರಾಮ ಕೇತಗಾನಹಳ್ಳಿ ಗ್ರಾಮಕ್ಕೆ ತೆರಳುವ ವೇಳೆ ಘಟನೆ ನೆದಿದ್ದು, ಶ್ರೀನಿವಾಸಪುರ ಪೊಲೀಸರು ಕೇಸು ದಾಖಲಿಸಿಕೊಂಡು ಅಪರಚಿತ ವಾಹನದ ಪತ್ತೆಗಾಗಿ ಸಿಸಿ ಕ್ಯಾಮರಗಳ ಪರಿಶೀಲನೆ ಮಾಡುತ್ತಿದ್ದಾರೆ .
ಶ್ರೀನಿವಾಸಪುರ 3 : ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಕೂಡ ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್ ಗಳಿಂದ ಸಾಲ ತೆಗೆದು ಕೊಟ್ಟ ಹೆಗ್ಗಳಿಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದು. ಧರ್ಮಸ್ಥಳ ನಂಬಿಕೆಗೆ ಹೆಸರುವಾಸಿಯಾದ ಕ್ಷೇತ್ರ.. ಬಡಜನರ ಅಭಿವೃದ್ಧಿಗೆ ಪೂಜ್ಯರು ಮಾಡಿದ ನೂರಾರು ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯವಾದದ್ದು… ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಬೈರವೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎ.ವೆಂಕಟರೆಡ್ಡಿ ಹೇಳಿದರು.ಪಟ್ಟಣ ಹೊರವಲಯದ ಕನಕಭವನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ […]
ಶ್ರೀನಿವಾಸಪುರ : ತಾಲೂಕಿನ ತಾಡಿಗೋಳ್ ಕ್ರಾಸ್ ಬಳಿ ಇರುವ ಆರ್ಟಿಒ ಚೆಕ್ಪೋಸ್ಟ್ ಮೇಲೆ ಮಂಗಳವಾರ ಬೆಳ್ಳಂ ಬೆಳಗ್ಗೆ ಸುಮಾರು 3 ಗಂಟೆಯಲ್ಲಿ ಕೋಲಾರ ಜಿಲ್ಲಾ ಲೋಕಾಯುಕ್ತ ಎಸ್ಪಿ ಧನಂಜಯ್ ನೇತೃತ್ವದಲ್ಲಿ ದಾಳಿ ದಾಖಲೆಗಳ ಪರೀಶಿಲನೆ.ಆರ್ಟಿಒ ಚೆಕ್ ಪೋಸ್ಟ್ಗಳ ವಿರುದ್ಧ ಅತಿಯಾದ ದೂರುಗಳು ಬಂದ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಲಾಯಿತು ಎಂದು ಎಸ್ಪಿ ಧನಂಜಯ್ ಮಾಹಿತಿ ನೀಡುತ್ತಾ, ದಾಖಲೆಗಳನ್ನು ಪರೀಶಿಲಿಸಿದ ವೇಳೆ ದಾಖಲೆ ಹಣಕ್ಕಿಂತ 400 ರೂ ಕಡಿಮೆ ಇರುವುದಾಗಿ ಸ್ಪಷ್ಟಪಡಿಸಿದರು. ಸತತ 8 ಗಂಟೆಗಳ ಕಾಲ […]
ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ, ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೆಲವು ಬೇಡಿಕೆ ಈಡೇರಿಕೆಗೆ ಸರ್ಕಾರ ಅನುಮೋದನೆ ನೀಡಿದ್ದರೂ, ಸಂಬAಧಪಟ್ಟ ಅಧಿಕಾರಿಗಳು ಜಾರಿ ಮಾಡಲು ಮುಂದಾಗುತ್ತಿಲ್ಲ. ಪದೇ ಪದೇ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ […]
ಕೋಲಾರ,ಅ.07: ಅಸಂಘಟಿತ ಕಾರ್ಮಿಕರ ಹಾಗೂ ಕಲಾವಿದರ ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಕರ್ನಾಟಕ ಕಲಾ ಸಂಘ, ತಿರುಮಲ ಟ್ರಸ್ಟ್ ಕೋಲಾರ, ಸಂಜೀವಿನಿ ಜಾನಪದ ಕಲಾ ಸಂಸ್ಥೆ ಐತರಾಸನಹಳ್ಳಿ ಜ್ಞಾನ ಪ್ರಚಾರ ಶೈಕ್ಷಣಿಕ ಹಾಗೂ ಕ್ರೀಡಾ ಸಂಸ್ಥೆ ವೇಮಗಲ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಿವೃತ್ತ ಶಿಕ್ಷಕ ಹಾಗೂ ಕಲಾವಿದ ಬೀರಮಾನಹಳ್ಳಿ ಡಾ.ಬಿ.ವಿ.ವೆಂಕಟಗಿರಿಯಪ್ಪರಿಗೆ ಅಭಿನಂದನೆ ಹಾಗೂ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.ಜಿಲ್ಲಾಧಿಕಾರಿ ಅಕ್ರಂಪಾಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗಡಿನಾಡು ಕೊಲಾರ ಜಿಲ್ಲೆ ಸಂಸ್ಕøತಿ […]
ಕೋಲಾರ; ಅ.7: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ವಿಶೇಷತಂಡ ರಚನೆ ಮಾಡಿ ಬಡ ರೈತ ಕೂಲಿಕಾರ್ಮಿಕರ ಮಾಂಗಲ್ಯ ರಕ್ಷಣೆ ಮಾಡಬೇಕೆಂದು ಆಗ್ರಹಿಸಿರೈತಸಂಘದಿಂದ ಅಬಕಾರಿ ಆಯುಕ್ತರಿಗೆ ಗಿಡ ನೀಡಿ ಸ್ವಾಗತಿಸಿ, ಮನವಿ ಸಲ್ಲಿಸಲಾಯಿತು.ಜಿಲ್ಲೆಯಲ್ಲಿ ಕಿಲೋಮೀಟರ್ಗಟ್ಟಲೆ ಅಲೆದಾಡಿದರೂ ಕುಡಿಯಲು ಹನಿ ನೀರಿಗೆ ಆಹಾಕಾರಇದೆಯೇ ಹೊರತು ಜಿಲ್ಲಾದ್ಯಂತ ಯಾವುದೇ ಗ್ರಾಮೀಣ ಪ್ರದೇಶಗಳ ದಿನಸಿ ಅಂಗಡಿಗಳಲ್ಲಿರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಡಾಬಾಗಳಲ್ಲಿ ದಿನದ 24 ಗಂಟೆ ಮದ್ಯ ಮಾರಾಟನಿರಂತರವಾಗಿ ನಡೆಯುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ನೆಪಮಾತ್ರಕ್ಕೆ ದಾಳಿ ಮಾಡಿ […]
ಶ್ರೀನಿವಾಸಪುರ : ಪಟ್ಟಣದ ನೌಕರರ ಭವನದಲ್ಲಿ ಶುಕ್ರವಾರ ನೌಕರರ ಚುನಾವಣೆಯ ಬಗ್ಗೆ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಜನಾರ್ಧನ್ ಮಾತನಾಡಿ 2024-29 ರ ಸಾಲಿನ ಚುನಾವಣೆಯ ರಾಜ್ಯ ನೌಕರರ ಚುನಾವಣಾ ಅಧಿಕಾರಿ ಎಸ್.ಹನುಮನರಸಯ್ಯ ರವರು ಅದಿಸೂಚನೆಯನ್ನು ಹೊರಡಿಸಿದ್ದು, ತಾಲೂಕು ಶಾಖೆಯಿಂದ 9-10-24 ರಂದು ನಾಮಪತ್ರ ಸಲ್ಲಿಕೆ, 21-10-24 ಉಮೇದುವಾರಿಕೆಯನ್ನು ವಾಪಸ್ಸು ಪಡೆಯುವುದು 28-10 -24 ನಿರ್ದೇಶಕರ ಚುನಾವಣೆ ನಡೆಯಲಿದೆ. ಚುನುವಾಣಾಧಿಕಾರಿಯಾಗಿ ನಿವೃತ್ತ ಮುಖ್ಯ ಶಿಕ್ಷಕ ಐಮಾರೆಡ್ಡಿ ನೇಮಕಮಾಡಲಾಗಿದೆ ಚುನಾವಣೆಯ ಪಕ್ರಿಯೆಯನ್ನು ಕಾರ್ಯನಿರ್ವಹಿಸಲಿದ್ದಾರೆ ಎಂದು […]

