ಶ್ರೀನಿವಾಸಪುರ : ಹಾಲಿ ಅಧ್ಯಕ್ಷರ ವಿರುದ್ಧ ಕೈ ಎತ್ತುವದರ ಮೂಲಕ ಅವಿಶ್ವಾವನ್ನು ತೋರಿಸಿದ್ದು, ಈ ಮೂಲಕ ರೋಣೂರು ಗ್ರಾಮಪಂಚಾಯಿತಿ ಅಧ್ಯಕ್ಷ ಅಮರಾವತಮ್ಮ ರವರನ್ನು ತೆರವು ಗೊಂಡಿದೆ ಘೋಷಣೆ ಮಾಡಲಾಗಿದೆ ಎಂದು ಉಪ ವಿಭಾಗಧಿಕಾರಿ ಮೈತ್ರಿ ಮಾಹಿತಿ ನೀಡಿದರು. ತಾಲೂಕಿನ ರೋಣೂರು ಗ್ರಾಮ ಪಂಚಾಯಿತಿ ೧೩ ಸದಸ್ಯರು ಜ.೨೪ ನೇ ತಾರೀಖಿನಂದು ನಮ್ಮ ಕಚೇರಿಗೆ ಬಂದು ಹಾಲಿ ಅಧ್ಯಕ್ಷರ ಬಗ್ಗೆ ಅವಿಶ್ವಾಸದ ಬಗ್ಗೆ ಮನವಿ ನೀಡಿದ್ದರು ಅದರಂತೆ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಒಟ್ಟು ೧೮ ಸದಸ್ಯರ ಪೈಕಿ ೧೨ […]
ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ಕ್ರಾಸ್ ನಲ್ಲಿರುವ ಮಿನರ್ವ ಶಾಲೆಯ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜಲಾನಯನ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ಸಹಾಯ ಕೃಷಿ ನಿರ್ದೇಶಕರು ಕೆ.ಸಿ.ಮಂಜುನಾಥ್ ನೆಲವಂಕಿ ಗ್ರಾ.ಪಂ ಅಧ್ಯಕ್ಷರಾದ ರಾಧಮ್ಮ ರಘುನಾಥರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಕುರಿತು ಸಹಾಯ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ್ ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಣ್ಣು ರಕ್ಷಣೆ, ನೀರು ರಕ್ಷಣೆ ಮಾಡುವ ಕುರಿತು ರೈತರಿಗೆ ಹಾಗೂ ಸಾರ್ವಜನಿಕರಿಗೆ […]
ಶ್ರೀನಿವಾಸಪುರದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಗುರುವಾರ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಶ್ರೀನಿವಾಸಪುರ: ಗ್ರಾಮ ಆಡಳಿತಾಧಿಕರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಸಾಂಘಿಕ ಪ್ರಯತ್ನ ನಡೆಸಬೇಕು. ಸರ್ಕಾರದ ಮೇಲೆ ಒತ್ತಡ ತಂದು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಎನ್.ಶಂಕರ್ ಹೇಳಿದರು.ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಗುರುವಾರ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರ ಈ ಹಿಂದೆ […]
ಶ್ರೀನಿವಾಸಪುರ : ಯದರೂರು ಹಾಗು ಸುತ್ತಮುತ್ತಲ ಗ್ರಾಮಗಳ ರೈತ ಕೂಲಿಕಾರರ ಕೃಷಿ ಭೂಮಿಯನ್ನು ಸುಲಭವಾಗಿ ಕಾರ್ಪೊರೇಟ್ ಉದ್ಯಮಿಗಳ ವಶಕ್ಕೆ ನೀಡಲು ಕೆಐಎಡಿಬಿ ಹೆಸರಿನಲ್ಲಿ ವಶಕ್ಕೆ ಪಡೆದುಕೊಳ್ಳುತ್ತಿರುವುದು ದುರದೃಷ್ಟಕರ ಹಾಗೂ ಆತಂಕದ ವಿಷಯವಾಗಿದೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತೂರು ನವೀನ್ ಆರೋಪಿಸಿದರು. ಶ್ರೀನಿವಾಸಪುರ ತಾಲೂಕಿನ ಯದರೂರು ರೈತ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡುತ್ತಾ ರಾಜ್ಯಾದ್ಯಂತ ಕೈಗಾರಿಕೆಗೆ ಎಂದು ಭೂ ಸ್ವಾಧೀನ ಪ್ರಕ್ರಿಯ […]
ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಶುಕ್ರವಾರ ಕಿರು ಉದ್ಯಮ ಶೀಲತಾ ತರಬೇತಿ ಶಿಬಿರವನ್ನು ಗ್ರಾಮ ಪಂಚಾಯಿತಿ ಸದ್ಯಸ ಬಕ್ಷುಸಾಬ್ ಉದ್ಘಾಟಿಸಿದರು.ಉದ್ಯಮಶೀಲತಾ ತರಬೇತಿ ಲಾಭ ಪಡೆಯಲು ಸಲಹೆಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಮಹಿಳೆಯರು ಉದ್ಯಮಶೀಲತಾ ತರಬೇತಿ ಶಿಬಿರದ ಲಾಭ ಪಡೆದು, ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಕ್ಷುಸಾಬ್ ಹೇಳಿದರು.ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ಮಾಲಿಕ್ ಫಂಕ್ಷನ್ ಹಾಲ್ನಲ್ಲಿ. ಬೆಂಗಳೂರಿನ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಿರು ಉದ್ಯಮಶೀಲತಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, […]
ಶ್ರೀನಿವಾಸಪುರ : ಸಮುದಾಯದ ವಿದ್ಯಾರ್ಥಿಗಳು ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಪಡೆದು ಸಮಾಜ ಮುಖಿ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿದರು. ಅಲ್ಲದೆ ಸಮುದಾಯ ಎಲ್ಲರೂ ಸಹ ಸಂಘಟನೆಯೊಂದಿಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಭಲರಾಗುವಂತೆ ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಸಲಹೆ ನೀಡಿದರು .ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ಸವಿತಾ ಮಹರ್ಷಿ ಜಯಂತಿಯನ್ನು ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.ಪುರಸಭೆ ಸದಸ್ಯ ಸಂಜಯ್ಸಿಂಗ್, ಮುಖ್ಯಾಧಿಕಾರಿ ವಿ.ನಾಗರಾಜ್, ಕಂದಾಯ ಅಧಿಕಾರಿ ಆರ್.ಶಂಕರ್, ಪರಿಸರ ಅಬಿಯಂತರ ಲಕ್ಷ್ಮೀಶ, ಸಿಬ್ಬಂದಿಗಳಾದ ನಾಗೇಶ್, ಸಂತೋಷ, ಪೌರಕಾರ್ಮಿಕರ […]
ಮುಳಬಾಗಿಲು, ಫೆ-5, ರಾಷ್ಟ್ರೀಯ, ರಾಜ್ಯ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಹುರಳಿ, ರಾಗಿ, ಒಕ್ಕಣಿ ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ರೈತರಲ್ಲಿ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಿ, ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ರೈತ ಸಂಘದಿಂದ ಲೋಕೋಪಯೋಗಿ ಇಲಾಖೆ ಮುಂದೆ ಹುರಳಿ ಸಮೇತ ಹೋರಾಟ ಮಾಡಿ, ಮನವಿ ನೀಡಿ, ಒತ್ತಾಯಿಸಲಾಯಿತು.ಕೋಟ್ಯಾಂತರ ರೂಪಾಯಿ ಅನುದಾನಗಳಲ್ಲಿ ಅಭಿವೃದ್ದಿ ಪಡಿಸಿರುವ ರಸ್ತೆಗಳಲ್ಲಿ ಮಾಡುತ್ತಿರುವ ಹುರಳಿ, ರಾಗಿ, ಒಕ್ಕಣಿಯಿಂದ ಆಗುತ್ತಿರುವ ಅನಾಹುತಗಳಿಗೆ ಜವಾಬ್ದಾರಿ ಯಾರು?. ಕೃಷಿ ಅಧಿಕಾರಿಗಳ ಬೇಜವಾಬ್ದಾರಿಯೇ ಇಲ್ಲವೆ, ಕಣ್ಮರೆಯಾಗಿರುವ ಹಳ್ಳಿಗಳಲ್ಲಿನ ಕಣಗಳ […]
ಶ್ರೀನಿವಾಸಪುರ :ವಕೀಲರ ಸಂಘದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ವಕೀಲ ರಮೇಶ್ಬಾಬು ಮಾತನಾಡಿ ತಾಲೂಕಿನಲ್ಲಿ ಒಟ್ಟು ೬೪ ಮತಗಳಿದ್ದು ಅದರಲ್ಲಿ ೬೩ ಮತಗಳು ಚಲಾವಣೆಯಾಗಿದೆ ಅಧ್ಯಕ್ಷ ಸ್ಥಾನಕ್ಕೆ ಎನ್.ವಿ.ಜಯರಾಮೇಗೌಡ ಪ್ರತಿ ಸ್ಪರ್ಧಿಯಾಗಿ ಟಿ. ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದರು. ಎನ್.ವಿ.ಜಯರಾಮೇಗೌಡ ೩೮ ಪ್ರತಿ ಸ್ಪರ್ಧಿ ಟಿ.ವೆಂಕಟೇಶ್ ೨೫ ಮತಗಳನ್ನು ಪಡೆದಿದ್ದು , ಎನ್.ವಿ.ಜಯರಾಮೇಗೌಡ ಜಯ ಶೀಲರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಆರ್.ಗೆಂಗಿರೆಡ್ಡಿ ೨೫ ಪ್ರತಿಸ್ಪರ್ಧಿ ಸಿ.ಸೌಭಾಗ್ಯ ೩೭ ಮತಗಳು ಪಡೆದಿದ್ದು, ಸಿ.ಸೌಭಾಗ್ಯ ಜಯಶೀಲರಾಗಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ವಿ.ಅರ್ಜುನ್ ೩೦ ಮತಗಳು, ಪ್ರತಿ ಸ್ಫರ್ಧಿ […]
ಕೋಲಾರ,ಫೆ.05: ಕೋಲಾರ ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಸಂಪಾದಕರ ಸಭೆಯನ್ನು ಫೆಬ್ರವರಿ 23 ರಂದು ಬೆಂಗಳೂರಿನ ಕಸಾಪ ಕೇಂದ್ರ ಕಚೇರಿಯಲ್ಲಿ ಕರೆದು, ಸಂಪಾದಕರ ಸಮಸ್ಯೆಗಳ ಸಾಧಕ ಬಾದಕಗಳನ್ನು ಚರ್ಚಿಸಿ, ಸರ್ಕಾರದ ಗಮನಕ್ಕೆ ತರುವ ಮೂಲಕ ಮುಂದಿನ ದಿನಗಳಲ್ಲಿ ಬಗೆಹರಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳ ಸಂಪಾದಕರ ಸಭೆಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘಕ್ಕೆ […]

