ಶ್ರೀನಿವಾಸಪುರ;ದಳಸನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ದ 13 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆಂದು ಕೋಲಾರ ಉಪವಿಭಾಗಾಧಿಕಾರಿ ಡಾ|| ಮೈತ್ರಿ ತಿಳಿಸಿದರು.ತಾಲ್ಲೂಕಿನ ಕಸಬಾ ಹೋಬಳಿ, ದಳಸನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ವೈ.ಎನ್. ಶ್ರೀನಿವಾಸ್ ರವರ ವಿರುದ್ದ ಅವಿಶ್ವಾಸ ಬಗ್ಗೆ ಎಲ್ಲಾ ಸದಸ್ಯರು ನಮಗೆ ಪತ್ರ ನೀಡಿದ್ದರಿಂದ ನಾವು ಈ ದಿನ ಸೋಮವಾರ ದಿನಾಂಕ ನಿಗದಿಪಡಿಸಿದ್ದು, ಈ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಒಟ್ಟು 16 ಸದಸ್ಯರ ಪೈಕಿ 13 ಸದಸ್ಯರು ಹಾಜರಾಗಿ 3 ಜನ ಗೈರು […]

Read More

ಶ್ರೀನಿವಾಸಪುರ :. ನಮ್ಮ ಜಿಲ್ಲೆಯನ್ನು ಸರಿಮಾಡಿ ಉಳಿದಂತೆ ರಾಜ್ಯದ್ಯಾಂತ ಮುಂದಿನ ಕ್ರಮಕೈಗೊಳ್ಳಲಾಗುವುದು . ನನ್ನ ಆಶಯಗಳಿಗೆ ಕೈಜೋಡಿಸಿ ಎಂದು ಅಧಿಕಾರಿಗಳಿಗೆ , ಸಾರ್ವಜನಿಕರಿಗೆ ಉಪಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.ಪಟ್ಟಣ ಹೊರವಲಯದಲ್ಲಿನ ಕನಕ ಸಮುದಾಯಭವನದಲ್ಲಿ ಶುಕ್ರವಾರ ಲೋಕಾಯುಕ್ತವತಿಯಿಂದ ತಾಲೂಕಿಗೆ ಸಂಬಂದಿಸಿದ ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಎಂಜುಲು ಕಾಸಿ ಕೈಒಡ್ಡುವವರು ದಯವಿಟ್ಟು ನಮ್ಮ ತಾಲೂಕು, ಜಿಲ್ಲೆಯಿಂದ ವರ್ಗಾವಣೆ ಮಡಿಕೊಂಡು ಹೊರಟು ಬಿಡಿ ಎಂದರು ಹಾಗು ಗ್ರಾಮಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆ , ನೈರ್ಮಲ್ಯವನ್ನು […]

Read More

ಶ್ರೀನಿವಾಸಪುರ : ಸರ್ಕಾರ ಬೆಂಬಲ ಬೆಲೆ ನೀಡುವುದಕ್ಕೆ 24 ರಂದು ಕೊನೆ ದಿನವೆಂದು ಘೋಷಿಸಿದ್ದು, ತಮ್ಮಲ್ಲಿ ಇರತಕ್ಕಂತ ರಶೀದಿ, ತೂಕದ ಬಿಲ್ಲು, ಆದಾರ್‍ಕಾರ್ಡ್ , ಮಂಡಿ ಬಿಲ್ಲು ಎಲ್ಲಾ ದಾಖಲೆಗಳನ್ನು 26 ರ ರಂದು ಸಂಜೆ ಒಳಗಾಗಿ ಶ್ರೀನಿವಾಸಪುರ ಕೃಷಿ ಮಾರುಕಟ್ಟೆ ಸಲ್ಲಿಸಬೇಕು. ಕೋಲಾರು, ಮುಳಬಾಗಿಲು, ಚಿಕ್ಕಬಳ್ಳಾಪುರದ ಮಾರುಕಟ್ಟೆಗೆ ಹಾಕಿದವರು ಅಲ್ಲಿ ಮೇಲಿನ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಬೆಂಬಲ ಬೆಲೆಯನ್ನು ಪಡೆಯಬೇಕೆಂದು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ […]

Read More

ಶ್ರೀನಿವಾಸಪುರ : ರೈತ ಕಾರ್ಮಿಕ ಮುಖಂಡರಾದ ಪಾತಕೋಟ ನವೀನ್ ಕುಮಾರ್ ಮಾತನಾಡಿ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿದ್ದರು ನಮ್ಮನ್ನು ಆಳುವ ಸರ್ಕಾರಗಳು ಗ್ರಾಮ ಪಂಚಾಯಿತಿ ನೌಕರರನ್ನು ನಿರ್ಲಕ್ಷಿಸುತ್ತಿ ವೇ ಕನಿಷ್ಠ ವೇತನ 36,000 ನೀಡುವುದಾಗಲಿ, ನಿವೃತ್ತಿ ವೇತನ, ಪ್ರಮೋಷನ್ ನೀಡುವುದು, ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಜಾರಿ ಮಾಡುತ್ತಿಲ್ಲ ಇತ್ತೀಚೆಗೆ ಕರಬಸೂಲಿಗಾರ ಮತ್ತು ಜಲಗಾರರಿಂದ ಕಂದಾಯ ವಸೂಲಿ ವಿಚಾರದಲ್ಲಿ ಮೇಲಧಿಕಾರಿಗಳಿಂದ ನಿರಂತರ ಕಿರುಕುಳ ನೀಡುತ್ತಿರುವುದು ನಿಲ್ಲಬೇಕು ಜಲಗಾರರಿಗೆ ಬ್ಯಾಟರಿ ಮತ್ತು ಶೂಗಳನ್ನು […]

Read More

ಶ್ರೀನಿವಾಸಪುರ : ಪ್ರತಿನಿತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಪ್ರಕ್ಷುಬ್ಧಗೊಂಡಿರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಮನಸ್ಸು ಶಾಂತಿ, ನೆಮ್ಮದಿ ದೊರೆಯುತ್ತದೆ. ಎಂಬುದನ್ನು ನಮ್ಮ ಹಿರಿಯರು ಅರಿತಿದ್ದರು ಎಂದು ಮಾಜಿ ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.ತಾಲೂಕಿನ ಕಲ್ಲೂರಿನ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಮಂಗಳವಾರ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.ದೇವಾಲಯದ ನಿರ್ಮಾಣದ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಕೆಪಿಸಿಸಿ ರಾಜ್ಯ ಸದಸ್ಯ ಸಂಜಯ್‍ರೆಡ್ಡಿ, ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮನೋಹರ್, ಸದಸ್ಯ ಬಿ.ಎಲ್.ವೆಂಕಟರೆಡ್ಡಿ, ಮುಖಂಡರಾದ […]

Read More

ಶ್ರೀನಿವಾಸಪುರ : ಎಲ್ಲಾ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಬೇಕು, ಮೃತಪಟ್ಟ ರಾಸುಗಳ ವಿಮಾ ಪರಿಹಾರ 07 ಚೆಕ್‍ಗಳು ಮೊತ್ತ 3,90,000/- ರೂಗಳ ಚೆಕ್‍ಗಳನ್ನು ಯಲ್ದೂರು ಕ್ಷೇತ್ರದ ನಿರ್ದೇಶಕ ಎನ್.ಹನುಮೇಶ್ ವಿತರಿಸಿದರು.ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ಸೋಮವಾರ ರಾಸು ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.ಒಕ್ಕೂಟದ ಅಡ್ಡಗಲ್ ಕ್ಷೇತ್ರದ ನಿರ್ದೇಶಕರಾದ ಶ್ರೀ ಕೆ ಕೆ ಮಂಜುನಾಥ ರವರು ಮಾತನಾಡಿ, ಪ್ರಸ್ತುತ ವರ್ಷಕ್ಕೆ 2 ಬಾರಿ ರಾಸುವಿಮೆ […]

Read More

ಕೋಲಾರ, ಜು.22.ಕಣ್ಣಿನ ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರೂ ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವಂತೆ ಹಿರಿಯ ಪತ್ರಕರ್ತರು ಹಾಗೂ ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾದ ಓಂಕಾರ್ ಮೂರ್ತಿ ತಿಳಿಸಿದರು. ನಗರದ ಕ್ಲಾಕ್ ಟವರ್ ಬಳಿ ಇರುವ ನೇತ್ರದೀಪ ಜಿ.ಇ.ಎಫ್ ಕಣ್ಣಿನ ಆಸ್ಪತ್ರೆ ಮತ್ತು ದ್ರಾವಿಡ ವಿಮೋಚನಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಪ್ರಸ್ತುತ ಹೆಚ್ಚಿನ ಮಕ್ಕಳು ಮೊಬೈಲ್ ನೋಡುವುದನ್ನು […]

Read More

ಶ್ರೀನಿವಾಸಪುರ : ತಾಲ್ಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲಿನಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ ಈಗಿನ ಕಾಲದ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಬಿಟ್ಟು ಮೊಬೈಲ್ ನೋಡುವುದರಲ್ಲಿ ನಿರತರಾಗಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಫಲಿತಾಂಶ ಕುಂಠಿತಗೊಳ್ಳುತ್ತದೆ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಮೊಬೈಲ್ ಭೂತದಿಂದ ಬಿಡಿಸಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಕರೆ ನೀಡಿದರು.  ಕೋಮುಲ್ ನೂತನ ನಿರ್ದೇಶಕ ಕೆ ಕೆ ಮಂಜುನಾಥ ರೆಡ್ಡಿ ಮಾತನಾಡುತ್ತಾ ಕ್ರೀಡೆಗಳಿಂದ […]

Read More

ಶ್ರೀನಿವಾಸಪುರ : ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ಸೋಮವಾರ ಹಾಲು ಉತ್ಪಾದಕರಿಗೆ ರಾಸು ವಿಮಾ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಯಲ್ಲೂರು ಕ್ಷೇತ್ರದ ನಿರ್ದೇಶಕರಾದ ಎನ್. ಹನುಮೇಶ್ ಅವರು ಮಾತನಾಡಿ, “ಎಲ್ಲಾ ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ವಿಮಾ ಪರಿಹಾರ ಪಡೆದ ಫಲಾನುಭವಿಗಳು ಇನ್ನು ಮುಂದೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘಗಳ ಬೆಳವಣಿಗೆಗೆ ಸಹಕಾರ […]

Read More
1 33 34 35 36 37 388