ಶ್ರೀನಿವಾಸಪುರ: ಸ್ವಾತಂತ್ರ್ಯ ಯೋಧರ ತ್ಯಾಗ, ಹೋರಾಟ ಹಾಗೂ ಬಲಿದಾನದ ಮೂಲಕ ಪಡೆದುಕೊಂಡಿರುವ ಸ್ವಾತಂತ್ರ್ಯ ಅಮೂಲ್ಯವಾದುದು. ಅದು ಕೈಜಾರದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆದರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ ಜೈಲುವಾಸ ಅನುಭವಿಸಿದ, ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ನಿತ್ಯ ಸ್ಮರಣೀಯರು ಎಂದು ಹೇಳಿದರು.ಸ್ವಾತಂತ್ರ್ಯಾನಂತರ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. […]
ಕೋಲಾರ,ಆ.15: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಕಛೇರಿಯ ಕಾರ್ಯಾಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಸಂಘದ ಅಧ್ಯಕ್ಷರಾದ ಬಿ.ವಿ.ಗೋಪಿನಾಥ್ ಧ್ವಜಾರೋಹಣವನ್ನು ನೆರವೇರಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿ.ಮುನಿರಾಜು ಕೆ.ಎಸ್.ಗಣೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‍ಕುಮಾರ್, ಹಿರಿಯ ಪತ್ರಕರ್ತರಾದ ಬಿ.ಸುರೇಶ್, ಕೆ.ಬಿ.ಜಗದೀಶ್, ಕೋ.ನಾ.ಪ್ರಭಾಕರ್, ನಾ.ಮಂಜುನಾಥ್, ಶ್ರೀನಿವಾಸಮೂರ್ತಿ, ಕೋ.ನಾ.ಮಂಜುನಾಥ್, ಎಚ್.ಕೆ.ರಾಘವೇಂದ್ರ, ಸಿ.ಜಿ.ಮುರಳಿ, ಅಯ್ಯೂಬ್ ಖಾನ್, ಆಸೀಫ್ ಪಾಷ, ಎಸ್ ಸೋಮಶೇಖರ್, ಸಮೀರ್ ಅಹಮದ್, ಎಸ್.ರವಿಕುಮಾರ್, ವೆಂಕಟೇಶಪ್ಪ, ಅಮರ್, ಮಂಜುನಾಥ್, ರಘುರಾಜ್, ರಾಘವೇಂದ್ರ, ಸುಧಾಕರ್, […]
ಕೋಲಾರ : ಕೋಲಾರ ನಗರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ನಲ್ಲಿ ಅತಿ ಹೆಚ್ಚು ಅಂಕೆ ಪಡೆದಿರುವ ನಗರದ ಮಹಿಳಾ ಸಮಾಜ ಪಿಯು ಕಾಲೇಜಿನ ವಿದ್ಯಾರ್ಥಿನಿ ಅರ್ಫೈನ್ ಮೊಹಮ್ಮದಿ ಬಿನ್ ಮೊಹಮ್ಮದ್ ಸಿಬ್ಬತ್ಉಲ್ಲಾ ಮಹಾಲಕ್ಷ್ಮಿ ಲೇಔಟ್ ಕೋಲಾರ ರವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮೌಲಾನ ಅಬುಲ್ ಕಲಾಂ ಆಜಾದ್ ಪ್ರಶಸ್ತಿ ನೀಡಿ ಗೌರವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ , […]
ಶ್ರೀನಿವಾಸಪುರ: ಪಟ್ಟಣ ಹೊರವಲಯದ ಪುಂಗನೂರು ಕ್ರಾಸ್‍ನಲ್ಲಿದ್ದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಮಾನಸಿಕ ಅಸ್ವಸ್ಥನಿಂದ ಧ್ವಂಸ ಮಾಡಿರುವ ಘಟನೆ ನಡೆದಿದೆ.ಬುಧವಾರ ಬೆಳಗ್ಗೆ ಮಾನಸಿಕ ಅಸ್ವಸ್ಥ ಯರ್ರಂವಾರಪಲ್ಲಿ ಮೂಲದ ತಿರುಮಳಪ್ಪ (65 ವರ್ಷ) ಅಲಿಯಾಸ್ ಗಾಂದಿ ಎಂಬ ವ್ಯಕ್ತಿಯು ದ್ವಸಂ ಗೊಳಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಕಂಬಕ್ಕೆ ಕಟ್ಟಿ ಹಾಕಿದ್ದು, ವಿಷಯ ತಿಳಿದ ತಕ್ಷಣ ಶ್ರೀನಿವಾಸಪುರ ಪಟ್ಟಣದ ಪೊಲೀಸರ ನಿರೀಕ್ಷಕ ಎಂ.ಬಿ.ಗೂರವಕೊಳ್ಳ ತಂಡ ಸ್ಥಳಕ್ಕೆ ಬೇಟಿ ನೀಡಿ ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು , ಸ್ಥಳೀಯರನ್ನ ಸಮದಾನ ಪಡಿಸಿದರು.ಪೊಲೀಸರು ದೂರು ದಾಖಲಿಸಿಕೊಂಡು […]
ಕೋಲಾರ : ಸ್ವಾತಂತ್ರ್ಯ ದಿನದ ಅಂಗವಾಗಿ ಆ.15ರ ನಗರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಆಟದ ಮೈದಾನದಲ್ಲಿ ಮಾನ್ಯ ನಗರಾಧಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಎಸ್. ಸುರೇಶ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು. ಸರ್ಕಾರ ಜನರಿಗೆ ನೀಡಿದ ಭರವಸೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ಕೋಲಾರ ಜಿಲ್ಲೆಗೆ ಭರಪೂರ ಅನುದಾನ ಒದಗಿಸಲು ಶ್ರಮ ವಹಿಸಲಾಗಿದೆ. ಒಳಚರಂಡಿ ಜಾಲ, […]
ಶ್ರೀನಿವಾಸಪುರ :- ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಗೋಪಾಲ್ ರೆಡ್ಡಿ ರಾಜೀನಾಮೆ ನೀಡಿ ತೆರವಾಗಿದಂತಹ ಸ್ಥಾನಕ್ಕೆ ಆಗಸ್ಟ್ 13ರಂದು ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಮಂಜುಳಾರವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶ್ರೀನಿವಾಸನ್ ತಿಳಿಸಿದರು ಚುನಾವಣಾಧಿಕಾರಿ ಶ್ರೀನಿವಾಸನ್ ಮಾತನಾಡಿ ಹೊದಲಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರಿದ್ದು ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಂತಹ ಸಂದರ್ಭದಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದು ಮಂಜುಳಾ ಹಾಗೂ ಲಕ್ಷ್ಮೀದೇವಮ್ಮ ಎಂಬವರು ನಾಮಪತ್ರ ಸಲ್ಲಿಕೆ ಮಾಡಿದ್ದು ಚುನಾವಣಾ ಪ್ರಕ್ರಿಯೆಂತೆ ಗೌಪ್ಯ ಮತದಾನ ಮಾಡಲಾಗಿ […]
ಕೋಲಾರ,ಆ.13: ಹವೇಲಿ ಮೊಹಲ್ಲಾದ ನಿವಾಸಿ ಅಂಜದ್ ಪಾಷರನ್ನು ಬಿನ್ ಅಬ್ದುಲ್ ಬಷೀರ್ ಕರ್ನಾಟಕ ದಲಿತ ಪ್ರಜಾ ಸೇನೆ (ಅ) ಕೋಲಾರ ನಗರ ಘಟಕದ ಅಲ್ಪ ಸಂಖ್ಯಾತರ ವಿಭಾಗಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪ್ರತಿಯನ್ನು ನೀಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಮತ್ತು ಜಾಗೃತಿ ಸಮಿತಿ ಸದಸ್ಯ ಡಾ.ಎಂ.ಮುನಿರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತಾವು ಜವಾಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯ ನೀತಿ ನಿಯಮಗಳನ್ನು ಮೈಗೂಡಿಸಿಕೊಂಡು ನಗರದ ತಳಸಮುದಾಯಗಳ ಮತ್ತು ಶೋಷಣೆಗೆ ಒಳಪಟ್ಟ ಸಮುದಾಯಗಳ ಪರ ಹೋರಾಟಗಳನ್ನು ರೂಪಿಸುವ ಮೂಲಕ ಪ್ರಾಮಾಣಿಕವಾಗಿ ಪರಿಹಾರ ಕಂಡುಕೊಡುವ […]
ಶ್ರೀನಿವಾಸಪುರ : ಬೇರೆ ದೇಶಗಳಲ್ಲಿ ಇಂತಹ ಕೃತ್ಯಗಳು ನಡೆದರೆ ನಮ್ಮ ದೇಶದ ಬುದ್ದಿಜೀವಗಳು ಮಾತನಾಡುತ್ತಾರೆ. ಆದರೆ ದೇಶದಲ್ಲಿನ ಬುದ್ದಿಜೀವಿಗಳು ಈ ಘಟನೆಯ ಬಗ್ಗೆ ಚಕಾರವೆತ್ತದಿರುವುದು ಖಂಡನೀಯ ಎಂದು ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ವೇಮಣ್ಣ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಇಂದಿರಾಭವನ ವೃತ್ತದಲ್ಲಿ ಸೋಮವಾರ ಹಿಂದು ಸಂಘ ಪರಿವಾರದಿಂದ ಬಾಂಗ್ಲದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ಮಾನವ ಸರಪಳಿ ನಿರ್ಮಿಸಿ ಮಾತನಾಡಿದರು.ಈ ವಿಚಾರವಾಗಿ ಹಿಂದು ಯುವ ಪೀಳಿಗೆ ಜಾಗೃತರಾಗಿ ಎಚ್ಚೆತ್ತಿಕೊಳ್ಳಬೇಕಾಗಿದೆ. ಸರ್ಕಾರವು ಈ ವಿಷಯದ ಬಗ್ಗೆ ಗಂಭೀರವಾಗಿ ತಮ್ಮ […]
ಕೋಲಾರ:- ರಾಜ್ಯದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಲು ಕಾಂಗ್ರೆಸ್ ವರಿಷ್ಠರಿಗೆ ರಾಜ್ಯ ಆಹಾರ ಸಚಿವ ಕೆಹೆಚ್.ಮುನಿಯಪ್ಪ ಮನವಿ ಮಾಡಿದರು.ಈ ಸಂಬಂಧ ದೆಹಲಿಯಲ್ಲಿ ಅವರನ್ನು ಭೇಟಿ ಮಾಡಿದ ಅವರು, ದೇಶದಲ್ಲಿ ನಡೆದ 30 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಸೇರಿ ಏಳು ಜನ ನ್ಯಾಯಾಧೀಶರ ಒಳಗೊಂಡ ಪೀಠ ಮಹತ್ವದ ತೀರ್ಪು ನೀಡಿದ್ದು ಎಸ್ಸಿ ಎಸ್ಟಿ ಒಳಮೀಸಲಾತಿ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಆರ್ಥಿಕ, ಶೈಕ್ಷಣಿಕ,ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ತೀರ್ಮಾನ […]

