ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಮಂಗಳೂರು ಮತ್ತು ಅಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಇವರ ಸಹಯೋಗದೊಂದಿಗೆ 16 ನೇ ಸ್ಟ್ಯಾನ್ ನೈಟ್ ಸಂಗೀತ ರಸಮಂಜರಿ ಫೆಬ್ರವರಿ 4 ರಂದು ಆದಿತ್ಯವಾರ ಸಂಜೆ 4 ಗಂಟೆಗೆ ಬೋಂದೆಲ್ ಆಂಗ್ಲ ಮಧ್ಯಮ ಶಾಲಾ ವಠಾರದಲ್ಲಿ ಆಯೋಜಿಸಲಾಗಿದೆ. ಈ ಕಾರ‍್ಯಕ್ರಮದಲ್ಲಿ ಹೆಸರಾಂತ ಸಂಗೀತಗಾರರು, ನೃತ್ಯಗಾರರು, ಹಾಸ್ಯಗಾರರು ಪ್ರದರ್ಶನ ನೀಡಲಿರುವರು. ಈ ಕಾರ‍್ಯಕ್ರಮವು ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ಉಚಿತ ಪ್ರವೇಶದೊಂದಿಗೆ ಏರ್ಪಡಿಸಲಾಗಿದೆ.

Read More

ಮಣಿಪಾಲ ಮಾಹೆಯ ಲೈಫ್ ಸಾಯನ್ಸ್ ನಲ್ಲಿ ಒರಲ್ ಕ್ಯಾನ್ಸರ್ ಬಗ್ಗೆ ಪಿ ಎಚ್ ಡಿ ಮಾಡುತ್ತಿರುವ ಕುಂಭಾಸಿಯ ಯು.ಸಂಗೀತಾ ಶೆಣೈ ಯವರಿಗೆ ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ “ಯಂಗ್ ಸಾಯನ್ಟಿಸ್ಟ್ ಅವಾರ್ಡ್” ಪ್ರದಾನ ಮಾಡಲಾಗಿದೆ. ಇಂಡಿಯನ್ ಸೊಸೈಟಿ ಆಫ್ ಹ್ಯೂಮನ್ ಜೆನೆಟಿಕ್ಸ್ ಹಾಗೂ ಗುಜರಾತ್ ಬಯೊ ಟೆಕ್ನಾಲಜಿ ರಿಸರ್ಚ್ ಸೆಂಟರ್ ಏರ್ಪಡಿಸಿದ ವಾರ್ಷಿಕ ಸಮ್ಮೇಳನ ದಲ್ಲಿ ಯು.ಸಂಗೀತಾ ಶೆಣೈ ತಮ್ಮ ಸಂಶೋಧನಾ ವಿಚಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಂಡಿಸಿದ್ದರು. ಇವಳು ಹಿರಿಯ ಪತ್ರಕರ್ತ ಯು.ಎಸ್ ಶೆಣೈ […]

Read More

ಕುಂದಾಪುರ: ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಆಳಿದ ಬ್ರಿಟನ್ ದೇಶದ ಪಾರ್ಲಿಮೆಂಟ್ ಕಟ್ಟಡದ ಮಧ್ಯೆ ಗಾಂಧಿ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಎಲ್ಲಿಯ ತನಕ ಗಾಂಧಿ ಅಲ್ಲಿ ಇರುತ್ತಾರೊ ಅಲ್ಲಿಯ ತನಕ ಗಾಂಧಿಗೆ ಸೋಲಿಲ್ಲ. ಗಾಂಧಿಯನ್ನು ಕುಗ್ಗಿಸಲೂ ಸಾಧ್ಯವಿಲ್ಲ. ಗಾಂಧಿ ಇಂದು ನಮಗೆ ಜಗತ್ತಿನ ಆಸ್ತಿಯಾಗಿದ್ದಾರೆ ಎಂದು ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಚಿಂತಕ ಎಮ್. ದಿನೇಶ್ ಹೆಗ್ಡೆ ಹೇಳಿದರು. ಮಹಾತ್ಮ ಗಾಂಧಿ ಹುತಾತ್ಮ ದಿನದಂದು ಕುಂದಾಪುರದ ಸಮಾನ ಮನಸ್ಕ ಸಂಘಟನೆಗಳಿಂದ ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿ-66ರ ಬಳಿ […]

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪ ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಡುಮದ್ದು ತಯಾರಿಕಾ ಘಟಕದಲ್ಲಿ ಭಾನುವಾರ ನಡೆದ ಸ್ಫೋಟದಲ್ಲಿ ಮೂವರು ಸಾವನಪ್ಪಿದ ದಾರುಣ ಘಟನೆ ನಡೆದಿದೆ. ಸಾವನ್ನಪ್ಪಿದವರ ದೇಹಗಳು  ಛಿದ್ರಗೊಂಡಿವೆ, ಸಾವನ್ನಪ್ಪಿದವರು ತ್ರಿಶೂರಿನ ವರ್ಗೀಸ್, ಹಾಸನದ ಚೇತನ್, ಕೇರಳದ ಸ್ವಾಮಿ ಎಂದು ತಿಳಿದು ಬಂದಿದೆ. ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ತ್ಯಾರು ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಸಮೀಪ ಸುಡುಮದ್ದು […]

Read More

ಕುಂದಾಪುರ: ಜನವರಿ 27ರಂದು ಬಳ್ಕೂರು ಗ್ರಾಮದ ಬಳಿ.ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪ ಅವರ ಪುತ್ರಿಯರಾದ ಯುಕ್ತಿ ಉಡುಪ ಮತ್ತು ಸುನಿಧಿ ಉಡುಪ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮತ್ತು ಕರ್ನಾಟಕ ಕಲಾಶ್ರೀ ಗುರು ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಮಂಗಳೂರು ಇವರು ಉದ್ಘಾಟಿಸಿ ಶುಭಹಾರೈಸಿದರು.ಇಬ್ಬರೂ ಕಲಾವಿದರ ಗುರು ನೃತ್ಯ ವಸಂತ ನಾಟ್ಯಾಲಯ (ರಿ) ಕುಂದಾಪುರದ ನಿರ್ದೇಶಕರಾದ ವಿದುಷಿ ಶ್ರೀಮತಿ […]

Read More

ಎಲಿಯಾರ್‌ ಪದವ್ ಪ್ಯಾರಿಷ್‌ನ ಫಾದರ್ ಸಂತೋಷ್ ಮಿನೇಜಸ್ ಅವರನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ಹಾ ಅವರು ಫಾದರ್ ಕ್ಲಿಫರ್ಡ್ ರೋಡ್ರಿಗಸ್ (ಗುರ್ಪುರ ಪ್ಯಾರಿಷ್) ಮತ್ತು ಫ್ರಾ ಪ್ರಣಾಮ್ ಫೆರ್ನಾಂಡಿಸ್ (ಪೆರ್ಮಾಯಿ ಪ್ಯಾರಿಷ್) ಅವರೊಂದಿಗೆ ಜನವರಿ 23 ರಂದು ಶಿಶು ಜೀಸಸ್ ಪುಣ್ಯಕ್ಷೇತ್ರ ಬಿಕರ್ನಕಟ್ಟೆಯಲ್ಲಿ ದೀಕ್ಷೆ ಸ್ವೀಕರಿಸಿದರು.ಜನವರಿ 27 ರ ಶನಿವಾರದಂದು ಹೋಲಿ ಕ್ರಾಸ್ ಚರ್ಚ್‌ನಲ್ಲಿ ಫಾದರ್ ಸಂತೋಷ್ ಮೆನೇಜಸ್ ಅವರು ತಮ್ಮ ಮೊದಲ ಕೃತಜ್ಞತಾ ಸಾಮೂಹಿಕ ಅರ್ಪಿಸಿದರು.ಫಾದರ್ ದೀಪ್ ಫೆರ್ನಾಂಡಿಸ್ ಅವರು ಧರ್ಮೋಪದೇಶವನ್ನು ಬೋಧಿಸಿದರು, […]

Read More

ಕುಂದಾಪುರ,ಜ. 28: ಜ.26 ರಂದು ಕುಂದಾಪುರಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ವಿಧಾನಪರಿಷತ್ ಸದಸ್ಯರಾದ ಶ್ರೀ ಮಂಜುನಾಥ ಭಂಡಾರಿಯವರನ್ನು ಕ್ರೈಸ್ತ ಮುಖಂಡರ ಆಯೋಗ ಅರ್ ಎನ್ ಶೆಟ್ಟಿ ಸಭಾಂಗಣದ ಬಳಿ ಭೇಟಿ ನೀಡಿ ,ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡ ಪ್ರತ್ಯೇಕ ವೆಲಂಕಣಿ ಚರ್ಚ್ ಗೆ ಇರುವ ರೈಲನ್ನು ಮತ್ತೆ ಪ್ರಾರಂಭಿಸಲು ಮನವಿಯನ್ನು ಸಲ್ಲಿಸಲಾಯಿತು. ದೇಶದ ಅತಿ ದೊಡ್ಡ ಕಥೋಲಿಕ್ ಯಾತ್ರಾ ಕೇಂದ್ರವಾಗಿರುವ ಬಸಿಲಿಕ ಆಫ್ ಅವರ್ ಲೇಡಿ ಆಫ್ ಗುಡ್ […]

Read More

ಕೋಟೇಶ್ವರ:ಸರಕಾರಿ ಶಾಲೆಯ ಅಭಿವೃದ್ದಿಯಲ್ಲಿ ದಾನಿಗಳು,ಪೋಷಕರು, ಹಳೆ ವಿದ್ಯಾರ್ಥಿಗಳು ಕೈ ಜೋಡಿಸಿದಾಗ ಅಭಿವೃದ್ದಿ ಸಾಧ್ಯ.ಬೀಜಾಡಿ ಮೂಡು ಶಾಲೆ ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ಇನ್ನೂ ಎತ್ತರಕ್ಕೆ ಏರಲಿ ಎಂದು ಕುಂದಾಪುರದ ಶಾಸಕ ಎ.ಕಿರಣಕುಮಾರ್ ಕೊಡ್ಗಿ ಹೇಳಿದರು. ಅವರು ಶುಕ್ರವಾರ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಸಂಭ್ರಮ ‘ಪರಿಕ್ರಮ-2024’ ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾ.ಪಂ.ಅಧ್ಯಕ್ಷ ಪ್ರಕಾಶ ಜಿ.ಪೂಜಾರಿ ವಹಿಸಿದ್ದರು. ಶಾಲಾ ವಾಹನದ ಕೀಯನ್ನು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ […]

Read More