

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕೊಡಿ ಹಬ್ಬದ ಕಟ್ಟೆ ಪೂಜೆ ಪ್ರಯುಕ್ತ ಕಾಲೇಜಿನ ಆವರ್ತ ಯಕ್ಷವೇದಿಕೆಯಿಂದ “ಭೀಷ್ಮ ವಿಜಯ” ಎಂಬ ಯಕ್ಷಗಾನ ಪ್ರದರ್ಶನವು ನವೆಂಬರ್ 22ರಂದು ಸಂಜೆ 7ಗಂಟೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಭೀಷ್ಮ ವಿಜಯ ಯಕ್ಷಗಾನದ ಭೀಷ್ಮನ ಪಾತ್ರದಲ್ಲಿ ಮಂಜುನಾಥ ಕೆ.ಜೆ, ಸಾಲ್ವನ ಪಾತ್ರದಲ್ಲಿ ಶಶಾಂಕ್ ಪಟೇಲ್ ಕೆಳಮನೆ, ಅಂಬೆ1 ಪಾತ್ರದಲ್ಲಿ ಸ್ಪೂರ್ತಿ ಭಟ್, ಅಂಬೆ2 ಪಾತ್ರದಲ್ಲಿ ಶೃತಿ ಕಾಶಿ, ಬ್ರಾಹ್ಮಣನ ಪಾತ್ರದಲ್ಲಿ ನಿತ್ಯಾನಂದ ಶೆಟ್ಟಿಗಾರ್, ಪ್ರತಾಪಸೇನನ ಪಾತ್ರದಲ್ಲಿ ಮಂಜುನಾಥ ಕೆ.ಎಸ್., ದೇಶಾಧಿಪಾಲರ ಪಾತ್ರದಲ್ಲಿ ವಿಧಾತ ಉಡುಪ, ವಿಶೇಷ ಪಾತ್ರದಲ್ಲಿ ವಿಜಯಕರ್ನಾಟಕ ಪತ್ರಿಕೆಯ ಕುಂದಾಪುರದದ ಹಿರಿಯ ವರದಿಗಾರ ಜಾನ್ ಡಿಸೋಜಾ ಅವರು ನಿರ್ವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಗಣೇಶ್ ಹೆಬ್ರಿ, ರಾಘವೇಂದ್ರ ಹೆಗಡೆ ಯಲ್ಲಾಪುರ, ರಾಧಾಕೃಷ್ಣ ಕುಂಜಿತ್ತಾಯ ಸಹಕರಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

