

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕುಂದಾಪುರ ವತಿಯಿಂದ ಸೈಂಟ್ ಫಿಲಿಪ್ ನೇರಿ ಸೆಂಟ್ರಲ್ ಸ್ಕೂಲ್ ಬಸ್ರೂರು ಕುಂದಾಪುರ ತಾಲೂಕು ಇಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಫಾದರ್ ಡ್ಯಾನ್ಸಿ ಸುನಿಲ್ ಮಾರ್ಟಿಸ್ ಇವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ಗುಣರತ್ನರವರು ಬೇಡನ್ ಪಾವಲ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ಸಂಸ್ಥೆಯ ಉಪಾಧ್ಯಕ್ಷೇ ಶ್ರೀಮತಿ ಗ್ರೇಟ್ಟಾ ಡಿಕೋಸ್ಟಾ ಸ್ಟ್ಯಾಂಪ್ ಬಿಡುಗಡೆ ಮಾಡಿದರು ಸಂಸ್ಥೆಯ ಕಾರ್ಯದರ್ಶಿ ಪಿಯುಸ್ ಡಿಸೋಜ ಹಾಗೂ ಗೈಡ್ ವಿಧ್ಯಾರ್ಥಿ ತ್ರಿಶಾ ದಿನದ ಮಹತ್ವ ತಿಳಿಸಿದರು ಸ್ಕೌಟ್ ಶಿಕ್ಷಕ ಸಾಹಿತ್ಯ ಗೈಡ್ ಶಿಕ್ಷಕಿ ಶ್ವೇತ ಮತ್ತು ಸೌಮ್ಯ ಉಪಸ್ಥಿತರಿದ್ದರು ಅನಿಕೇತ ಹಾಗೂ ವೆಲ್ಡನ್ ನಿರ್ವಹಿಸಿ ಸಮೃದ್ಧಿ ಸ್ವಾಗತಿಸಿ ಆದ್ರಿಕ ಧನ್ಯವಾದ ಅರ್ಪಿಸಿದರು.



