

ಶ್ರೀನಿವಾಸಪುರ : ಈ ಹೇಯ ಕೃತ್ಯವನ್ನು ಮಾಡಿರುವವರನ್ನು ಬಂದಿಸುವ ತನಕ ನಾವು ನಿಮ್ಮೊಂದಿಗೆ ಇದ್ದು ಹೋರಾಟಗಳಿಗೆ ಕೈಜೋಡಿಸುತ್ತೇವೆ ಎಂದರು. ಈ ಹಿಂದೆ ಕೆಲ ಸಂಘಟನೆಗಳ ವಿರುದ್ಧ ೨ ಸಾವಿರ ಜನ ಹೋರಾಟ ಮಾಡಲಾಗಿತ್ತು, ಆಂದ್ರ ಪ್ರದೇಶದ ಸರ್ಕಾರ ಈ ಘಟನೆಯಲ್ಲಿನ ಆರೋಪಿಗಳನ್ನು ಬಂದಿಸದ ಪಕ್ಷದಲ್ಲಿ ೨೦ ಸಾವಿರ ಜನ ಹೋರಾಟಕ್ಕೆ ಇಳಿಯಲಾಗುತ್ತದೆ ಎಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಎಚ್ಚರಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಶನಿವಾರ ನೆರಯ ಮದನಪಲ್ಲಿ ಬಳಿಯ ಬುದ್ದನ ಬೆಟ್ಟದಲ್ಲಿ ಇತ್ತೀಚಿಗೆ ಬುದ್ದನ ವಿಗ್ರಹವನ್ನು ಶಿರಚ್ಚೇದ ಮಾಡಿರುವ ಆರೋಪಿಗಳನ್ನು ಆಂದ್ರ ಪ್ರದೇಶದ ಸರ್ಕಾರ ಅತಿಶೀಘ್ರವಾಗಿ ಬಂದಿಸುವ ಸಲುವಾಗಿ ನಡೆದ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಅಂಬೇಡ್ಕರ್ ಸೇನಾ ಆಂದ್ರಪ್ರದೇಶದ ರಾಜ್ಯಾಧ್ಯಕ್ಷ ಪಿಟಿಎಂ ಶಿವಪ್ರಸಾದ್ ಮಾತನಾಡಿ ಆಂದ್ರಪ್ರದೇಶದ ಸರ್ಕಾರ ಸಂವಿದಾನ ಬದ್ದ ಮಾನವ ಹಕ್ಕುಗಳನ್ನು ದಮನಮಾಡುತ್ತಿದೆ. ಬುದ್ದನ ತಲೆ ಶಿರಚ್ಚೇದ ಮಾಡಿರುವವರನ್ನು ಬಂದಿಸಿದೆ ಆಂದ್ರದ ಪೊಲೀಸ್ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಆಂದ್ರಪ್ರದೇಶದ ಸರ್ಕಾರ ಈ ಘಟನೆಯ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೇಶಾದ್ಯಾಂತರ ದಲಿತ ಸಂಘಟನೆಗಳು ಹೋರಾಟ ಮಾಡಲಿವೆ ಎಂದು ಎಚ್ಚರಿಸಿದರು.
ಅಂತರರಾಜ್ಯ ಸಂಘಟನಾ ಸಂಚಾಲಕ ಎನ್. ಮುನಿಸ್ವಾಮಿ ಮಾತನಾಡಿ ಭಾರತ ದೇಶವು ಸಂವಿದಾನದ ಅಡಿಯಲ್ಲಿ ನಡೆಯುತ್ತಿದೆ. ಮತದಾರರಿಂದ ರಚನೆಯಾದ ಯಾವುದೇ ಸರ್ಕಾರವಾಗಲಿ ಎಲ್ಲ ಸಮುದಾಯದ ಏಳಿಗೆಗಾಗಿ ದುಡಿಯಬೇಕಾಗಿದೆ. ಅನ್ನಮಯ್ಯ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಗೆ ಯಾವುದೋ ಕಾಣದ ಕೈಗಳ ಒತ್ತಡ ಇರಬೇಕು , ಇಲ್ಲವಾದರೆ ಕಾನೂನಿನ ಅರಿವಿಲ್ಲವೇನೋ ಗೊತ್ತಾಗುತ್ತಿಲ್ಲ. ಬುದ್ದನ ಜೀವನ ಚರಿತ್ರೆಯನ್ನು ಓದುವಂತೆ ಎಸ್ಪಿ ರವರಿಗೆ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಆಂದ್ರ ಪ್ರದೇಶದ ಸರ್ಕಾರದ ಮುಖ್ಯ ಮಂತ್ರಿಗಳಾದ ಚಂದ್ರಬಾಬುನಾಯ್ಡು ರವರೇ ಬುದ್ದನ ವಿಗ್ರಹವನ್ನು ಪುನಃಪ್ರತಿಷ್ಟಾಪಿಸಬೇಕು ಎಂದು ಒತ್ತಾಯಿಸಿದರು.
ಬುದ್ದನ ವಿಗ್ರಹಕ್ಕೆ ಹಾಗು ಅಂಬೇಡ್ಕರ್ ಬಾವ ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಹಿಂದುಳಿದ ವಿಭಾಗದ ರಾಜ್ಯ ಸಂಘಟನಾ ಸಂಚಾಲಕ ಇಂದೂಧರ ಹೊನ್ನಾಪುರ, ರಾಜ್ಯ ಪದಾಧಿಕಾರಿಗಳಾದ ಎನ್.ವೆಂಕಟೇಶ್, ಗುರುಪ್ರಸಾದ್ ಕೆರೆಗೋಡು, ಮರಿಯಪ್ಪಹಳ್ಳಿ, , ಜಿಲ್ಲಾ ಪದಾಧಿಕಾರಿಗಳಾದ ಹಾರೋಹಳ್ಳಿ ರವಿ, ಸಿ.ಜೆ.ನಾಗರಾಜು, ಜಿಲ್ಲಾ ಸಂಘಟನಾ ಸಂಚಾಲಕ ಚಲ್ಡಿಗಾನಹಳ್ಳಿ ಸಿ.ವಿ.ಮುನಿವೆಂಕಟಪ್ಪ, ತಾಲೂಕು ಪದಾಧಿಕಾರಿಗಳಾದ ವಿ.ಮುನಿಯಪ್ಪ, ಟಿ.ಎಂ.ಮುಳವಾಗಲಪ್ಪ, ನಾಗದೇವ ಹಳ್ಳಿ ಎಂ.ಶ್ರೀನಿವಾಸ್, ಪಿ.ವಾಸು, ಎನ್.ನಾರಾಯಣಸ್ವಾಮಿ ಇದ್ದರು.


