

ಬಸ್ರೂರು ಸೈಂಟ್ ಫಿಲಿಪ್ ನೇರಿ ಚರ್ಚಿನಲ್ಲಿ ತೆನೆ ಹಬ್ಬ (ಮೊಂತಿ ಹಬ್ಬ ) ಮಕ್ಕಳು ಮಾತೆಗೆ ಪುಷ್ಪ ನಮನ ಸಲ್ಲಿಸಿ ಸಂಭ್ರಮದಿಂದ ಆಚರಿಸಲಾಯಿತು ಉಡುಪಿ ಕ್ರೖಸ್ತ ಧರ್ಮ ಕೇಂದ್ರದ ನಿರ್ದೇಶಕರಾದ ರೆವರೆಂಡ್ ಫಾದರ್ ವಿಲ್ಸನ್ ಡಿಸೋಜ ಹೊಸ ತೆನೆಗಳನ್ನು ಆಶೀರ್ವದಿಸಿ ಮೇರಿ ಮಾತೆಯ ಆದರ್ಶ ನಮಗೆ ವರದಾನ ಎಂಬ ಸಂದೇಶ ನೀಡಿದರು ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಫಾದರ್ ರೋಯ್ ಲೋಬೋ ಸಹಕರಿಸಿದ ಎಲ್ಲರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು ದಿಯಾಕೋನ್ ಕೆನಾನ್ ಫೆರ್ನಾಂಡಿಸ್ ಸಹಕರಿಸಿದರು ಕೊನೆಯಲ್ಲಿ ಎಲ್ಲರಿಗೂ ಹೊಸತೇನೆ ವಿತರಿಸಲಾಯಿತು ಬಳಿಕ ಪಾಯಸದೊಂದಿಗೆ ಸೇವಿಸಲಾಯಿತು.







