ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ : ತ್ರೋಬಾಲ್ ನಲ್ಲಿ ಬಾಲಕರು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಶ್ರೀ ವೆಂಕಟರಮಣ ವಿದ್ಯಾ ಸಂಸ್ಥೆ ಕುಂದಾಪುರ ಇಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಯೋಜಿಸಿರುವ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೆಮಿ ಫೈನಲ್ ನಲ್ಲಿ ವಿ. ಕೆ.ಆರ್ ತಂಡವನ್ನು ಮಣಿಸಿ, ಫೈನಲ್ ಪಂದ್ಯಾಟದ ಎದುರಾಳಿಯಾದ ಕುಂದಾಪುರ ಬೋರ್ಡ್ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಮಣಿಸಿ ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ತರಬೇತಿ ನೀಡುತ್ತಿರುವವರು ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಣಯ ಶೆಟ್ಟಿ ಮತ್ತು ಪ್ರಜ್ವಲ್ ಖಾರ್ವಿಯವರು.

ಕುಂದಾಪುರ ಸಂ. ಮೇರಿಸ್ ಹಿ. ಪ್ರಾ. ಶಾಲಾ ಬಾಲಕಿಯರು ತಾಲೂಕು ಮಟ್ಟದ ‘ತ್ರೋಬಾಲ್‌ ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ 

ಕುಂದಾಪುರ: ಬೆಳ್ವೆ ಸರಕಾರಿ ಹಿ. ಪ್ರಾ. ಶಾಲೆಯಲ್ಲಿ ನಡೆದ ಕುಂದಾಪುರ : ತಾಲೂಕು ಮಟ್ಟದ ‘ತ್ರೋಬಾಲ್‌  ಪಂದ್ಯಾವಳಿಯಲ್ಲಿ ಕುಂದಾಪುರದ  ಸಂತ ಮೇರಿಸ್ ಹಿರಿಯ ಪ್ರಾಥಮಿಕ  ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟ ಕ್ರೈ ಆಯ್ಕೆಯಾಗಿದೆ.

    ಶಾಲಾ ಜಂಟಿ ಕಾರ್ಯದರ್ಶಿ ಅ|ವಂ| ಫಾ|ಸ್ಟ್ಯಾನಿ ತಾವ್ರೊ ತಂಡವನ್ನು ತರಬೇತಿಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಿ ರಾಣಿ ಮತ್ತು ವಿದ್ಯಾರ್ಥಿಗಳಿಗೆ  ಮತ್ತು ಈ ಸಾಧನೆಗೆ ಶ್ರಮಿಸಿದ ಎಲ್ಲರನ್ನು ಅಭಿನಂದಿಸಿದ್ದಾರೆ.  

ತಂಡವನ್ನು ತರಬೇತಿಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಿ ರಾಣಿ ಮತ್ತು ವಿದ್ಯಾರ್ಥಿಗಳಿಗೆ  ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪಾಲನಾಮಂಡಲಿಯ ಉಪಾಧ್ಯಕ್ಷರಾದ ಲುವಿಸ್ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್, ತಂಡದ ವ್ಯವಸ್ಥಾಪಕಿ ಗೀತಾ ನೊರೊನ್ಹಾ ಹಾಜರಿದ್ದರು.

ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು:ವೆಂಕಟಲಕ್ಷ್ಮಿಮನವಿ

ಶ್ರೀನಿವಾಸಪುರ : ಸರ್ಕಾರವು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ಸೌಲಭ್ಯಗಳನ್ನು ಪರಿಚಯಿಸಿ ಸಮಾಜ ಕಟ್ಟಕಡೆಯ ವ್ಯಕ್ತಿಗೆ ಗ್ರಾಮವಾಸ್ಯವದ ಮೂಲಕ ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಉಪವಿಭಾಗ ಅಧಿಕಾರಿ ವೆಂಕಟಲಕ್ಷ್ಮಿ ಮನವಿ ಮಾಡಿದರು .

ಮಾಸ್ತೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಗಲಹಳ್ಳಿ ಶನಿವಾರ ನಡೆದ ಗ್ರಾಮವಾಸ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು . ಗ್ರಾಮೀಣ ಭಾಗದಲ್ಲಿ ಯಾವುದೇ ಸಮಸ್ಯೆಗಳು ಇದ್ದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಅರ್ಜಿಗಳನ್ನು ಸಲ್ಲಿಸಿ ಮುಕ್ತವಾಗಿ ಅಧಿಕಾರಿಗಳೊಂದಿಗೆ ಚರ್ಚಿಸುವ ಅವಕಾಶವಿರುವುದರಿಂದ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು .

ಅಲ್ಲದೆ ಪ್ರತಿಯೊಬ್ಬ ಮತದಾರರು ತಮ್ಮ ಗುರ್ತಿನ ಚೀಟಿಯನ್ನು ಕಡ್ಡಾಯವಾಗಿ ಆದಾರ್‌ ಕಾರ್ಡ್‌ಗೆ ಜೋಡಣೆ ಮಾಡಬೇಕು ಎಂದರು .

ತಹಶಿಲ್ದಾರ್ ಶರೀನ್‌ತಾಜ್ ಮಾತನಾಡಿ ಗ್ರಾಮದಲ್ಲಿ ಕಲ್ಯಾಣಿ , ರಸ್ತೆ , ಚರಂಡಿ , ಅಂಗನವಾಡಿ ಕೇಂದ್ರ ಹಾಗು ಶಾಲಾಕೊಠಡಿ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು .

ಪಿಂಚಣಿ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಿದರೆ ೭೨ ಗಂಟೆಗಳನ್ನು ಮಾಹಿತಿಯು ತಮ್ಮ ಮೊಬೈಲ್‌ಸಂಖ್ಯೆಗೆ ಬರುತ್ತದೆ ಎಂದರು .

ಪೌವತಿ ಖಾತೆ ದಾರರು ಮರಣಪ್ರಮಾಣ ಪತ್ರ ಹಾಗೂ ವಂಶವೃಕ್ಷ ಇತರೆ ದಾಖಲೆಗಳನ್ನು ನೀಡಿದರೆ ಅವುಗಳನ್ನು ಪರಿಶೀಲಿಸಿ , ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದರು .

ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮು ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು .

ಸಹಾಯಕ ನಿರ್ದೇಶಕ ರಾಮಪ್ಪ , ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ , ಗ್ರಾ.ಪಂ.ಅಧ್ಯಕ್ಷ ರವಿ , ಪಿಡಿಒ ಚನ್ನಪ್ಪ , ಉಪತಹಶೀಲ್ದಾರಾದ ಬಲರಾಮಚಂದ್ರೇಗೌಡ , ಗುರುಪಸಾದ್‌ , ಆರ್‌ಐ ಮುನಿರೆಡ್ಡಿ , ವಿಎಗಳಾದ ವಸುಂದರ , ಭೀಮರಾವ್ , ಕಾರ್ಯದರ್ಶಿ ಮಂಜುನಾಥ್ , ಜಿ . ಪಂ.ಮಾಜಿ ಸದಸ್ಯ ಶಶಿಕುಮಾರ್ , ಗ್ರಾ.ಪಂ. ಸದಸ್ಯೆ ಮಮತ , ರೈತ ಮುಖಂಡ ಬಚ್ಚೇಗೌಡ ಇದ್ದರು .

ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಸಿ.ಶಾಮಲಮ್ಮ ರಮೇಶ್, ಉಪಾಧ್ಯಕ್ಷೆಯಾಗಿ ಶ್ರೀದೇವಿ ಆಯ್ಕೆ

ಶ್ರೀನಿವಾಸಪುರ: ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಸಿ.ಶಾಮಲಮ್ಮ ರಮೇಶ್, ಉಪಾಧ್ಯಕ್ಷೆಯಾಗಿ ಶ್ರೀದೇವಿ ಆಯ್ಕೆಯಾಗಿದ್ದಾರೆ.
ಹಿಂದೆ ಅಧ್ಯಕ್ಷೆಯಾಗಿದ್ದ ವನಿತಾ ಹಾಗೂ ಉಪಾಧ್ಯಕ್ಷರಾಗಿದ್ದ ವೆಂಕಟರಾಮಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಸಲಾಯಿತು.
ಗ್ರಾಮ ಪಂಚಾಯಿತಿಯ ಒಟ್ಟು 25 ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಶಾಮಲಮ್ಮ ರಮೇಶ್ 18 ಮತ ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶ್ರೀದೇವಿ 7 ಮತ ಪಡೆದು ಸೋತರು. ಉಪಾಧ್ಯಕ್ಷರನ್ನಾಗಿ ಜಯರಾಮಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ.ಹುಸೇನ್ ಸಾಬ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಸುಬ್ರಮಣಿ, ಲೆಕ್ಕಾಧಿಕಾರಿ ಶ್ರೀನಿವಾಸ್, ಸಿಬ್ಬಂದಿ ಕೆ.ನಾರಾಯಣಸ್ವಾಮಿ, ಶಂಕರನಾರಾಯಣ, ಮುಖಂಡರಾದ ಮಂಜುನಾಥರೆಡ್ಡಿ, ಪ್ರಸಾದ್ ಬಾಬು, ಶಶಿಧರ್, ಸರಿತಾ, ಗೋವಿಂದರೆಡ್ಡಿ ಇದ್ದರು.

ಕುಂದಾಪುರ್ಚೊ ವಿಗಾರ್ ಬಾ|ಸ್ಟ್ಯಾನಿ ತಾವ್ರೊಚೊ 74 ವೊ ಜಲ್ಮಾ ದೀಸ್ ಆಚರಣ್

ಕುಂದಾಪುರ್,ಅ.21: ಕುಂದಾಪುರ್ ಫಿರ್ಗಜೆಚೊ ವಿಗಾರ್ ತಸೆಂ ಕುಂದಾಪುರ್ ವಾರಾಡ್ಯಾಚೊ ವಿಗಾರ್ ವಾರ್ ಅ|ಮಾ|ಬಾ|ಸ್ಟ್ಯಾನಿ ತಾವ್ರೊ ಹಾಂಚೊ 74 ವೊ ಜಲ್ಮಾ ದೀಸ್ (ಅಗೋಸ್ತ್ 21 ವೆರ್ ಆಸೊನ್, ಅಗೋಸ್ತ್ 20 ವೆರ್ ಆಯ್ತಾರಾ) ಫಿರ್ಗಜ್ ಲೋಕಾನ್ ಆಚರಣ್ ಕೆಲೊ. ಫಿರ್ಗಜೆಚೊ  ಉಪಾಧ್ಯಕ್ಷ್ ಎಲ್.ಜೆ.ಫೆರ್ನಾಂಡಿಸ್ ಹಾಣೆ ಸರ್ವಾಂಚ್ಯಾ ನಾವಿ ವಿಗಾರಾಕ್ ಬರೆ ಮಾಗ್ಲೆಂ.
  ಬಾ|ಸ್ಟ್ಯಾನಿ ತಾವ್ರೊನ್ ಪಯ್ಲೆಂ ರೊಜಾರ್ ಮಾಯೆಚ್ಯಾ ಇಗರ್ಜೆ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಜಲ್ಮಾ ದೀಸ್ ಆಚರಣ್  ಕರ್‍ನ್ ಬಾ|ಸ್ಟ್ಯಾನಿ ತಾವ್ರೊನ್ ಉಪ್ಕಾರ್ ಆಟವ್ನ್ , ದೆವಾನ್ ಮ್ಹಾಕಾ ಯಾಜಕ್ ಜಾವ್ನ್ ಸೆವಾ ದಿಂವ್ಕ್ ವರ್ತೊ ಅವ್ಕಾಸ್ ದಿಲ್ಯಾ ಖಾತಿರ್ ಉಪ್ಕಾರ್ ಭಾವುಡ್ತಾಂ. ಫಿರ್ಗಜ್ ಲೋಕಾನ್ ಮ್ಹಜೆ ವ್ಹಯ್ರ್ ಆನಿ ಫಿರ್ಗಜೆ ವ್ಹಯ್ರ್ ಮಸ್ತ್ ಮೋಗ್ ದಾಖಯ್ಲಾ. ಹಾಂವ್ ಸದಾಂಚ್ ತುಮ್ಚೆ ಖಾತಿರ್ ಮಾಗ್ತಾಂ. ಯೆಂವ್ಚ್ಯಾ ವರ್ಸಾ ಮ್ಹಾಕಾ 75 ಜಾತಾತ್, ಹಾಂಗಾಸರ್ ಮ್ಹಾಕಾ ಸೆವಾ ದಿಂವ್ಕ್ ಅವ್ಕಾಸ್ ಆಸಾಗಿ ನಾಂಗಿ ನೆಣಾ, ದೆವಾಚಿ ಖುಷಿ ತಶೆಂ ಆಸಾ ತಶೆಂ ಜಾಂವ್ ಮ್ಹಣ್ ಸರ್ವಾಂಚೊ ಉಪ್ಕಾರ್ ಆಟಯ್ಲೊ.    

ಸಹಾಯಕ್ ವಿಗಾರ್ ಮಾ|ಬಾ|ಅಶ್ವಿನ್ ಆರಾನ್ಹಾನ್ ಕಾರ್ಯೆ ಚಲೊನ್ ವೆಲೆಂ. ಹ್ಯಾ ಸಂದರ್ಭಿ ಗೊವ್ಳಿಕ್ ಮಂಡಳಿ. ಆರ್ಥಿಕ್ ಸಮಿತಿನ್ ಫಿರ್ಗಜೆಚ್ಯಾ ಸರ್ವ್ ಲೋಕಾಂಕ್ ಫಳಾಹಾರ್ ವ್ಯವಸ್ಥಾ ಕೆಲ್ಲಿ. ಫಿರ್ಗಜ್ ಲೋಕಾನ್ ವಿಗಾರಾಕ್ ಉಲ್ಲಾಸ್ ಪಾಟಯ್ಲೆಂ ಆಸ್ತಾಂ, ಹ್ಯಾ ವೇಳಾ 20 ಆಯೋಗಾಚಿಂ ಸಂಯೋಜಕಿ ಪ್ರೇಮಾ ಡಿಕುನ್ಹಾ, ಗುರ್ಕಾರ್, ಗೊವ್ಳಿಕ್ ಸಮಿತಿಚೆಂ ಸಾಂದೆ, ಸರ್ವ್ ಸಂಘಟನಾಚೆಂ ಸಾಂದೆ, ಕೊವೆಂತಾಚಿಂ ಧರ್ಮ್ ಭಯ್ಣಿ ಆನಿ ಫಿರ್ಗಜೆಚೊ ಲೋಕ್ ಹಾಜರ್ ಆಸ್ಲೊ.

ವಸಂತ ಪ್ರೊಡಕ್ಷನ್ ಹೌಸ್ ಕುಂದಾಪುರ: ನಾಳೆ ಬಾಲವನದ ಜಾದೂಗಾರ ಕಿರು ಚಿತ್ರದ ಪೋಸ್ಟರ್ ಬಿಡುಗಡೆ


ವಸಂತ ಪ್ರೊಡಕ್ಷನ್ ಹೌಸ್ ಕುಂದಾಪುರ ನಿರ್ಮಾಣದ ಖ್ಯಾತ ಚಲನ ಚಿತ್ರ ನಿರ್ದೇಶಕ ಇ. ಎಮ್. ಅಶ್ರಫ್ ಕಥೆ ಬರೆದು ನಿರ್ದೇಶಿಸಿರುವ ಬಾಲವನದ ಜಾದೂಗಾರ ಕಿರು ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಆದಿತ್ಯವಾರ ಆ. 21 ರಂದು ನಡೆಯಲಿದೆ. ಡಾ. ಕೋಟ ಶಿವರಾಮ ಕಾರಂತರ ಕೃತಿಗಳು ಮಕ್ಕಳ ಮೇಲೆ ಬೀರುವ ಉತ್ತಮ ಪ್ರಭಾವದ ಹಿನ್ನಲೆಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನರೋಟರಿ ಲಕ್ಷೀ ನರಸಿಂಹ ಕಲಾ ಮಂದಿರದಲ್ಲಿ ಸಂಜೆ 4ಕ್ಕೆ ನಡೆಯುವ ಸಮಾರಂಭವನ್ನು ಸಹಾಯಕ ಆಯುಕ್ತರಾದ ಕೆ. ರಾಜು ಉದ್ಘಾಟಿಸಲಿದ್ದಾರೆ. ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು ಕ್ಷೇತ್ರದ ಆಡಳಿತ ಧರ್ಮದರ್ಶಿ ಚಂದ್ರಶೇಖರ ಶೆಟ್ಟಿ ಕೆರಾಡಿ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಎ. ಎಸ್. ಎನ್. ಹೆಬ್ಬಾರ್, ಡಾ. ಕಾರಂತ ಪ್ರತಿಷ್ಠಾನ ಕೋಟದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಶ್ರೀ ವೆಂಕಟರಮಣ ಶಿಕ್ಷಣ ಸಂಸ್ಥೆಯ ಸಂಚಾಲಕ ಕೆ. ರಾಧಾಕೃಷ್ಣ ಶೆಣೈ, ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್, ಖ್ಯಾತ ನಿರ್ಮಾಪಕ ಮನ್ಸೂರ್ ಪಳ್ಳೂರ್, ನಮ್ಮ ಭೂಮಿಯ ಶಿವಾನಂದ ಶೆಟ್ಟಿ ಭಾಗವಹಿಸಲಿದ್ದಾರೆ. ಕುಂದಾಪುರ ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಬಿ.ಇ.ಓ. ಅರುಣ್ ಕುಮಾರ್, ಮನೋವೈದ್ಯ ಡಾ. ಕೆ. ಎಸ್. ಕಾರಂತ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದು ನಿರ್ಮಾಪಕ ಕೆ. ಪಿ. ಶ್ರೀಶನ್ ವಿನಂತಿಸಿದ್ದಾರೆ.

ಕುಂದಾಪುರ ಬ್ಲಾಕ್ ಕಾಂಗ್ರೆಸ್:ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾ. ಮು. ಮಂತ್ರಿ ದಿ.ದೇವರಾಜ ಅರಸುರವರ ಜನ್ಮದಿನ ಆಚರಣೆ

ಕುಂದಾಪುರ: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಗೋಸ್ತ್ ೨೦ ರಂದು ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ದಿ| ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಇಬ್ಬರು ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಕಾಂಗ್ರೆಸ್ ಮುಖಂಡರು ಗೌರವ ಸಲ್ಲಿಸಲಾಯಿತು.

      ಹಿರಿಯ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ “ಮಾಜಿ ಪ್ರಧಾನಿ ರಾಜೀವ ಗಾಂಧಿಯವರು ಅಂದಿನ ಕಾಲದಲ್ಲೆ ನವಭಾರತದ ಕಲ್ಪನೆಯನ್ನು ಮಾಡಿ,ಆಧುನಿಕ ಭಾರತವನ್ನು ನಿರ್ಮಾಣ ಮಾಡಲು ಶ್ರಮಿಸಿದವರು. ಅವರಂತೆಯೇ ರಾಜ್ಯದಲ್ಲಿ ದೇವರಾಜ ಅರಸು ಅವರು ಸಹ ಸಾಮಾಜಿಕ ನ್ಯಾಯದ ಹರಿಕಾರರಾಗಿ, ದೀನದಲಿತರ, ಬಡವರ, ಹಿಂದುಳಿದ ವರ್ಗದವರ ಏಳಿಗೆಗಾಗಿ ಶ್ರಮಿಸಿ ಜನಪರ ಕಾಳಜಿಯುಳ್ಳ ನಾಯಕ” ಎಂದು ಹೆಸರು ಗಳಿಸಿದವರು.  

      ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ರಾಜೀವ್ ಗಾಂಧಿಯವರು ಆ ಕಾಲದಲ್ಲಿಯೇ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಕಂಡವರು. ನಾವಿಂದು ಕಾಣುತ್ತಿರುವ ತಂತ್ರಜ್ಞಾನ, ಆಧುನೀಕರಣಗಳೆಲ್ಲದರ ಬಗ್ಗೆ ಅವರು ಅಂದಿನ ದಿನಗಳಲ್ಲೇ ದಿಟ್ಟ ಹೆಜ್ಜೆ ಇಟ್ಟವರು. ಇನ್ನು ದೇವರಾಜ ಅರಸು ಅವರೊಬ್ಬ ಈ ರಾಜ್ಯ ಕಂಡ ನೆಚ್ಚಿನ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದವರು. ಅವರಂತಯೇ ಈಗ ನಮ್ಮ ಸಿದ್ದರಾಮಯ್ಯನವರು ಎಲ್ಲ ವರ್ಗದವರ ಬಗ್ಗೆ, ಕೆಳವರ್ಗದವರ ಬಗ್ಗೆ ಅತೀವವಾದ ಕಾಳಜಿಯುಳ್ಳ ನಾಯಕರಾಗಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರ ಮೇಲೆ ಮೊಟ್ಟೆ ಎಸೆಯುವ ನೀಚ ಕೃತ್ಯವನ್ನು ಮಾಡಿರುವ ಬಿಜೆಪಿ, ಅತ್ಯಂತ ಕೀಳು ಮಟ್ಟಕ್ಕಿಳಿದಿದೆ” ಎಂದವರು ಕೀಡಿಕಾರಿದರು.

     ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ಪಕ್ಷದ ಮುಖಂಡ ಗಂಗಾಧರ ಶೆಟ್ಟಿ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಕೆ. ವಿಕಾಸ್ ಹೆಗ್ಡೆ, ದೇವಕಿ ಸಣ್ಣಯ್ಯ, ರೇವತಿ ಶೆಟ್ಟಿ, ರಮೇಶ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕೇಶವ ಭಟ್, ಜೋಸೆಫ್ ರೆಬೆಲೋ, ಅಭಿಜಿತ್ ಪೂಜಾರಿ, ದೋಲಿನ್, ಶೋಭಾ ಸಚ್ಚಿದಾನಂದ, ಸಂಗೀತ ಉಪಸ್ಥಿತರಿದ್ದರು.

     ಆಶಾ ಕರ್ವಾಲೋ ಸ್ವಾಗತಿಸಿ, ಜ್ಯೋತಿ ಡಿ. ವಂದಿಸಿದರು. ನಾರಾಯಣ ಆಚಾರ್ ಪ್ರಸ್ತಾವಿಸಿ, ಕಾರ್‍ಯಕ್ರಮ ನಿರೂಪಿಸಿದರು.

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಪುರಸಭಾಧ್ಯಕ್ಷ ಎಂ.ಎನ್.ಲಲಿತಾ ಶ್ರೀನಿವಾಸ್, ಮುಖ್ಯ ಕಾರ್ಯದರ್ಶಿ ಎಂ.ಜಯರಾಮ್ ಹಾಗೂ ಸಿಬ್ಬಂದಿ ಇದ್ದರು.

ಶ್ರೀನಿವಾಸಪುರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ರಥಗಳ ಮೆರವಣಿಗೆ

ಶ್ರೀನಿವಾಸಪುರದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ರಥಗಳ ಮೆರವಣಿಗೆ ಏರ್ಪಡಿಸಲಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್, ತಾಲ್ಲೂಕು ಯಾದವರ ಸಂಘದ ಕಾರ್ಯದರ್ಶಿ ಕೆ.ವಿ.ಗೋವಿಂದಪ್ಪ, ಪುರಸಭಾ ಸದಸ್ಯ ಅಪ್ಪೂರು ರಾಜು, ಅಪ್ಪೂರು ಬಾಲಾಜಿ ಇದ್ದರು.