ವಿದ್ವಾನ್ ವಾಗೀಶ್ ಭಟ್ ಭಕ್ತಿ ಸಂಗೀತ ಕಾರ್ಯಕ್ರಮ


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಮೂಲ ಪುರುಷ ಶ್ರೀ ಸುಬ್ರಾಯ ಆಚಾರ್ಯ (ಸುಬ್ಬ ಪೈ) ಇವರ ಪುಣ್ಯ ಸ್ಮರಣೆಯ ಅಂಗವಾಗಿ ನಾದೋಪಾಸಕ, ವಿದ್ವಾನ್ ವಾಗೀಶ್ ಭಟ್ ಅವರಿಂದ ಭಕ್ತಿ ಸಂಗೀತ ಸಾಂಸ್ಕøತಿಕ ಕಾರ್ಯಕ್ರಮ ದೇವಸ್ಥಾನದಲ್ಲಿ ನಡೆಯಿತು.
ತಬಲಾದಲ್ಲಿ ವಿದ್ವಾನ್ ಸತೀಶ ಹಂಪಿಹೋಳಿ ಹಾಗೂ ಹಾರ್ಮೋನಿಯಂನಲ್ಲಿ ಲಕ್ಷ್ಮೀ ಗೋವಿಂದ ಭಟ್ ಸಹಕರಿಸಿದರು.

ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು : ಕೆ.ಎಲ್.ಜಯರಾಂ

ಶ್ರೀನಿವಾಸಪುರ: ಎಲ್ಲಾ ಕಡೆಗಳಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ಕೆ.ಎಲ್.ಜಯರಾಂ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಪ್ರೌಢ ಶಾಲೆ ಆವರಣದಲ್ಲಿ ಜಿಲ್ಲಾ ಎನ್‍ಡಿಆರ್‍ಎಫ್ ಇಲಾಖೆ, ತಾಲ್ಲೂಕು ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪ್ರೌಢ ಶಾಲೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಶಾಲಾ ಸುರಕ್ಷತೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎನ್‍ಡಿಆರ್‍ಎಫ್ ಇನ್ಸ್‍ಪೆಕ್ಟರ್ ಅಜಯ್ ಕುಮಾರ್ ಮಾತನಾಡಿ, ಸುರಕ್ಷತೆ ಸಾಮಾಜಿಕ ಜವಾಬ್ದಾರಿ. ಅದರ ನಿರ್ವಹಣೆ ಪ್ರತಿಯೊಬ್ಬರಿಗೂ ಸೇರಿದ್ದು. ಹಾಗಾಗಿ ವಿದ್ಯಾವಂತ ಸಮುದಾಯ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಬೆಂಕಿ, ನೀರು, ವಿಷ ಜಂತುಗಳಿಂದ ರಕ್ಷಣೆ ಪಡೆಯುವ ಬಗ್ಗೆ ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ ಕಲಿಯಬೇಕು. ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ದಳ, 108 ವಾಹನ, ಮಕ್ಕಳ ಸಹಾಯವಾಣಿಯಂಥ ಸಂಸ್ಥೆಗಳ ಸೇವೆ ಪಡೆಯಬೇಕು. ತುರ್ತು ಸೇವೆ ನೀಡುವ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಅವರಣದಲ್ಲಿ ಗಿಡ ನೆಡಲಾಯಿತು. ಪರಿಸರ ಮಾಲೀನ್ಯದ ದುಷ್ಪರಿಣಾಮ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.
ಪಿಡಿಒ ಮಂಗಳಾಂಬ, ಕಂದಾಯ ನಿರೀಕ್ಷಕ ಅಬೀಬ್, ಎನ್‍ಡಿಆರ್‍ಎಫ್ ಸಬ್ ಇನ್ಸ್‍ಪೆಕ್ಟರ್ ರಾಜ್ ಕುಮಾರ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಗೋವಿಂದರಾಜು, ಮುಖ್ಯ ಶಿಕ್ಷಕ ಕೆ.ಆರ್.ಶ್ರೀನಿವಾಸಲು, ಶಿಕ್ಷಕರಾದ ಸತೀಶ್ ರೆಡ್ಡಿ, ವೆಂಕಟರಮಣ, ಶಿಕ್ಷಕಿ ಅರುಣ, ಜಿಲ್ಲಾ ಅಗ್ನಿಶಾಮಕ ದಳಸ ಅಧಿಕಾಇ ಮುನಿರಾಜು, ತಾಲ್ಲೂಕು ಘಟಕದ ಅಧಿಕಾರಿ ಮುನಿರಾಜು, ಜಬೀವುಲ್ಲಾ ಇದ್ದರು.

ಬೈಂದೂರು ಚರ್ಚಿನ ನೂತನ ಪಾಲನಾಮಂಡಳಿ – ಉಪಾಧ್ಯಕ್ಷರಾಗಿ ಸ್ಟೇಪನ್ ಡಾಯಸ್ ಆಯ್ಕೆ

ಇಲ್ಲಿನ ಹೋಲಿಕ್ರಾಸ್ ಚರ್ಚಿನಲ್ಲಿ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊರವರ ನೇತ್ರತ್ವದಲ್ಲಿ ನೆಡೆದ 2023-2025ನೇ ಸಾಲಿನ ಪಾಲನಾ ಮಂಡಳಿಯ ಚುನಾವಣೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಸ್ಟೇಪನ್ ಡಾಯಸ್, ಕಾರ್ಯದರ್ಶಿಯಾಗಿ ವೀಣಾ ಫೆರ್ನಾಂಡಿಸ್, ಆಯೋಗಗಳ ಸಂಯೋಜಕಿಯಾಗಿ ಅನಿತಾ ನಜ್ರೆತ್ ರವರು ಆಯ್ಕೆಯಾಗಿರುತ್ತಾರೆ ಎಂದು ಮಾಧ್ಯಮ ಪ್ರತಿನಿಧಿ ಲಾರೆನ್ಸ್ ಫೆರ್ನಾಂಡಿಸ್ ರವರ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಪ್ರಧಾನ ಕಛೇರಿಯಲ್ಲಿ ರೋಜರಿ ಸಭಾ ಭವನ ಉದ್ಘಾಟನೆ – ಸಂಸ್ಥಾಪಕರ ದಿನಾಚರಣೆ

ಕುಂದಾಪುರ, ಡಿ.11: ಹೆಸರಾಂತ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆ ತನ್ನ 31 ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಕುಂದಾಪುರದ ಪ್ರಧಾನ ಕಛೇರಿಯ ಕಟ್ಟಡದಲ್ಲಿ ಸುಸಜ್ಜಿತ ನಿರ್ಮಿಸಲ್ಪಟ್ಟ ರೋಜರಿ ಸಭಾಭವನ ಉದ್ಘಾಟನ ಕಾರ್ಯಕ್ರಮ ಮತ್ತು ಸಂಸ್ಥಾಪಕರ ದಿನವನ್ನು ನೂತನ ಸಭಾಭವನದಲ್ಲಿ ಆಚರಿಸಲಾಯಿತು.
ನೂತನ ಸಭಾಭವನವನ್ನು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಇದರ ಅಧ್ಯಕ್ಷ ಜೊನ್ಸನ್ ಡಿ ಆಲ್ಮೇಡಾ ಉದ್ಘಾಟಿಸಿ “ನಮ್ಮ ಸಂಸ್ಥೆಯ ಹಲವಾರು ಯೋಜನೆಗಳಲ್ಲಿ ಈ ಸಭಾಭವನದ ಕನಸು ಒಂದಾಗಿತ್ತು, ಕಡಿಮೆ ಖರ್ಚಿನಲ್ಲಿ ಉತ್ತಮ ರೀತಿಯಲ್ಲಿ ಇದನ್ನು ನಿರ್ಮಿಸಿದ್ದೇವೆ, ಜೊತೆಗೆ ನಾವು ಇಂದು ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸುತಿದ್ದೇವೆ. ಇದು ಕೂಡ ನಮ್ಮ ಬಹಳ ದಿನಗಳ ಆಶೆಯಾಗಿತ್ತು, ಯಾಕೆಂದರೆ, ನಮ್ಮ ಹಿರಿಯರು ಬಹಳ ಒತ್ತಾಸೆಯಿಂದ ನಮ್ಮ ಹಿತಕ್ಕಾಗಿ ಸ್ಥಾಪಿಸಲ್ಪಟ್ಟ ಸೊಸೈಟಿಯಾಗಿದ್ದು. ಅವರೆಲ್ಲಾ ಈ ಸಂಸ್ಥೆಗೆ ನಿಸ್ವಾರ್ಥದಿಂದ ಸೇವೆ ನೀಡಿದ್ದಾರೆ,ಅವರ ನೆಟ್ಟ ಗೀಡ ಇಂದು ಹೆಮ್ಮರವಾಗಿ ಬೆಳೆದಿದೆ, ಅವರನೆಲ್ಲಾ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ ಎನ್ನುತ್ತಾ, ಬ್ಯಾಂಕಿನ ಏಳಿಗೆಯ ಜೊತೆ ನಮ್ಮ ಸಂಸ್ಥೆಯ ಸದಸ್ಯರ ಮಕ್ಕಳಿಗೆ ಕಡಿಮೆ ದರದಲ್ಲಿ ಶಿಕ್ಷಣಕ್ಕೆ ಸಾಲ ಕೊಡುವ ಯೋಜನಯನ್ನು ಜ್ಯಾರಿಗೊಳಿಸಿದ್ದೇವೆ, ಇದರ ಪ್ರಯೋಜನವನ್ನು ಸದಸ್ಯರು ಸದುಪಯೋಗವನ್ನು ಸದಸ್ಯರು ಪಡಿಸಿಕೊಳ್ಳಬೇಕೆಂದು” ಅವರು ತಿಳಿಸಿದರು.
ದೀಪ ಬೆಳಗಿಸಿ ಆಶಿರ್ವಚನ ಮಾಡಿದ ಸಂಸ್ಥೆಯ ಅಧ್ಯಾತ್ಮಿಕ ನಿರ್ದೇಶಕ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಂಸ್ಥೆ ವಿಶ್ವಾಸ, ಪ್ರಮಾಣಿಕತೆಯಿಂದ ಸೇವೆ ನೀಡಿದ್ದರಿಂದ ಸಮಾಜದಲ್ಲಿ ಗುರುತಿಸಿಕೊಂಡಿದೆ, ಇದರ ಯಶಸ್ಸಿ ಹಿಂದೆ ಸಂಸ್ಥಾಪಕರು, ನಿರ್ದೇಶಕರು ಮತ್ತು ಸಿಬಂದಿ ವರ್ಗ ಕಾರ್ಯಕ್ಷಮತೆ ಇದೆ, ಆದರೆ ರೋಜರಿ ಅಮ್ಮನವರ ಆಶಿರ್ವಾದದಿಂದ ಸ್ಥಾಪನೆಯಾದ ಈ ಸಂಸ್ಥೆಯ ಸಂಸ್ಥಾಪಕಿ ರೋಜರಿ ಮಾತೆಯೆ ಆಗಿದ್ದಾರೆ ಎಂದು ತಿಳಿಸಿ, ಅವರು ಇನ್ನೂ ಹೆಚ್ಚಿನದನ್ನು ಆಶಿರ್ವದಿಸಲಿ” ಎಂದು ಹರಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಬ್ರಹ್ಮಾವರ ಇದರ ಅಧ್ಯಕ್ಷರಾದ ವಲೇರಿಯನ್ ಮಿನೇಜಸ್ “ಸಹಕಾರಿ ಸಂಘ ಅಂದರೆ ಒಂದೊ ಅಟೋ ರಿಕ್ಷಾ ಇದ್ದಂತೆ, ಅದರ ಮುಂದಿನ ಚಕ್ರ ಸದಸ್ಯರು ಹಿಂದಿನ ಎರಡು ಚಕ್ರಗಳಲ್ಲಿ ಒಂದು ನಿರ್ದೇಶಕರು ಮತ್ತೊಂದು ಸಿಬಂದಿ, ಈ ಮೂವರು ಸಮಾನವಾಗಿ ನಡೆದರೆ, ಸಂಘ ಸುರಕ್ಷಿತವಾಗಿರುವುದು, ಸಂಘಕ್ಕೆ ಕಟ್ಟಡ, ಬ್ರಾಂಚುಗಳು, ಕೋಟಿಕಟ್ಟಲೆ ವ್ಯವಹಾರ ಮುಖ್ಯವಲ್ಲ, ಸಂಘದ ಸದಸ್ಯರ್ ಹಿತದ್ರಷ್ಟಿ ಮುಖ್ಯ ಸದಸ್ಯರಿಗೆ ಉಪಯೋಗ ಆಗುವಂತಹ ಯೋಜನೆಗಳಿರಬೇಕು, ಇಂತಹ ಸಹಕಾರಿ ಸಂಘಗಳು ಸೇರಿಕೊಂಡು ಒಂದು ಒಕ್ಕೂಟ ಆದರೆ ಉತ್ತಮ, ಎಲರೂ ಸೇರಿ ಉಪಯುಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡು ಪಡೆದು, ಸಹಕಾರಿ ಸಂಸ್ಥೆಗಳು ಇನ್ನಷ್ಟು ಯಶಸ್ವಿಯಾಗಿ ಮುನ್ನಡೆಸಬಹುದು” ಎಂದು ಅಭಿಪ್ರಾಯ ಪಟ್ಟರು.
ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಫಿಲಿಫ್ ಡಿಕೋಸ್ತಾ ರೋಜರಿ ಕ್ರೆಡಿಟ್ ಸಂಸ್ಥೆ ನಡೆದು ಬಂದ ನೋಟವನ್ನು ಸಭೆಯ ಮುಂದಿಟ್ಟರು.
ಈ ಸಂದರ್ಭದಲ್ಲಿ ಈ ಸಹಕಾರಿ ಸಂಘದ ಕನಸು ಕಂಡ ಸ್ಥಾಪಕ ಅಧ್ಯಕ್ಷರಾದ ಪಡುಕೋಣೆಯ ಆಲ್ಫೊನ್ಸ್ ಲೋಬೊ (ದಿವಂಗತ) ಅವರ ಪರವಾಗಿ ಅವರ ಪುತ್ರ ನವೀನ್ ಲೋಬೊ, ನಂತರ ಅಧ್ಯಕ್ಷರಾದ ಬೇಸಿಲ್ ಡಿಸೋಜಾ, ದಿವಗಂತ ಮಾರ್ಟಿನ್ ಡಾಯಸ್ ಪರವಾಗಿ ಅವರ ಪತ್ನಿ ಶಾಂತಿ ಡಾಯಸ್, ಫಿಲಿಫ್ ಡಿಕೋಸ್ತಾ, ಎ.ಜೆ ಬುತೆಲ್ಲೊ ಇವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಎಲ್ಲಾ ಮಾಜಿ ನಿರ್ದೇಶಕರನ್ನು ಸನ್ಮಾನಿಸಲಾಯಿತು, ಈ ಕಾರ್ಯಕ್ರಮವನ್ನು ಹಾಲಿ ನಿರ್ದೇಶಕಿ ಡಯಾನಾ ಡಿಆಲ್ಮೇಡಾ ನೇರವೆರಿಸಿದರು. ಎಲ್ಲಾ ಹಾಲಿ ನಿದೇಶಕರನ್ನು ಕೂಡ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಹಾಲಿ ನಿರ್ದೇಶಕಿ ಶಾಂತಿ ಆರ್. ಕರ್ವಾಲ್ಲೊ ನಡೆಸಿಕೊಟ್ಟರು. ಸುಧಿರ್ಘ ಸೇವೆ ನೀಡಿ ದಿವಂಗತ ಮುಖ್ಯ ನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾರ ಪರವಾಗಿ ಅವರ ಪತ್ನಿ ವಿನೀತಾ ಡಿಸೋಜಾರನ್ನು ಸನ್ಮಾನಿಸಲಾಯಿತು. ಸಭಾಭವನ ನಿರ್ಮಿಸುವಲ್ಲಿ ಸಹಕಾರ ನೀಡಿದ ಎಂಜಿನಿಯರ್ ಮತ್ತು ಇತರರಿಗೆ ಗುರುತಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ ಸ್ವಾಗತಿಸಿದರು, ಮುಖ್ಯ ನಿರ್ವಹಣಾಧಿಕಾರಿ ಮೇಬಲ್ ಡಿಆಲ್ಮೇಡಾ ವಂದಿಸಿದರು. ನಿರ್ದೇಶಕ ವಿನೋದ್ ಕ್ರಾಸ್ಟೊ ನಿರೂಪಿಸಿದರು.

PASSED AWAY MRS. THERESA D’SA (89) KUNDAPUR-THE FUNERAL WILL BE HELD ON12TH DECEMBER

PASSED AWAY MRS. THERESA D’SA (89) KUNDAPUR

WIFE OF LATE PHILIP D’SA

MOTHER OF STANLEY / RANJINI, DOROTHY, DAINY / DYMPHNA, JEEVAN / VEENA, ALEXANDER & VINOD.

GRAND MOTHER OF RAYNOLD, RICKY, SASKIA,  SAHIL, SHANA, DEONA, DELON, JOVIN, GAVIN, ALVITA & ALWIN PASSED AWAY ON 10TH DECEMBER 2022.

Funeral cortège leaves the residence 184A CHURCH ROAD KUNDAPURA FOR HOLY ROSARY CHURCH AT 3:30 PM ON 12TH December and Holy Mass at 4PM.

Contact. +918254233819

And Mobile: VINOD +919632095900

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳನ್ನು ಜಾಗತೀಕರಣಗೊಳಿಸಲು ಕೋಲಾರ ಸುದ್ಧಿ ಮನೆ ವೆಬ್ ಸೈಟ್‍ನ್ನು ಲೋಕಾರ್ಪಣೆ ಮಾಡಲಾಗುವುದು

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳನ್ನು ಜಾಗತೀಕರಣಗೊಳಿಸಲು ಕೋಲಾರ ಸುದ್ಧಿ ಮನೆ ವೆಬ್ ಸೈಟ್‍ನ್ನು ಜನವರಿ ತಿಂಗಳಿನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಕಟಿಸಿದರು.
ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ವೆಬ್‍ಸೈಟ್‍ಗೆ ಕೋಲಾರ ಸುದ್ದಿಮನೆ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.
ಜನವರಿ ತಿಂಗಳ ಸಂಕ್ರಾಂತಿ ವೇಳೆಗೆ ವೆಬ್‍ಸೈಟ್ ಲೋಕಾರ್ಪಣೆ ಮಾಡಲಾಗುವುದು. ಅದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಸದಸ್ಯರು ಮತ್ತು ಕುಟುಂಬದವರಿಗಾಗಿ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಿ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂಬ ರೂಪುರೇಶೆಗಳನ್ನು ದೊರಕಿಸುವ ರೀತಿಯಲ್ಲಿ ಸಂಘದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಎ.ಜಿ.ಸುರೇಶ್ ಕುಮಾರ್ ವಾರ್ಷಿಕ ಲೆಕ್ಕಪತ್ರಗಳಿಗೆ ಅನುಮೋಧನೆ ಪಡೆದುಕೊಂಡರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಉಪಾಧ್ಯಕ್ಷರಾದ ಅಪ್ಪಾಜಿಗೌಡ ಹಾಗೂ ಟೇಕಲ್ ಲಕ್ಷ್ಮೀಶ್, ಕಾರ್ಯದರ್ಶಿ ಸಿ.ಜಿ.ಮುರಳಿ ವೇದಿಕೆಯಲ್ಲಿದ್ದರು.

ಬಾಕ್ಸ್ ಕಲ್ಯಾಣಿನಿಧಿ ಸಂಗ್ರಹ

ಜಿಲ್ಲೆಯ ಪತ್ರಕರ್ತರಿಗೆ ಯಾವುದೇ ಅಪತ್ತಿನ ಸಂದರ್ಭದಲ್ಲಿ ಸಂಘದ ವತಿಯಿಂದ ನೆರವಾಗಲು ಅನುಕೂಲವಾಗುವಂತೆ 1 ಕೋಟಿ ರೂ.ಗಳ ಪತ್ರಕರ್ತರ ಕಲ್ಯಾಣ ನಿಧಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು.
ಕಲ್ಯಾಣ ನಿಧಿಗಾಗಿ ಇದುವರೆಗೂ ಸಂಗ್ರಹವಾಗಿರುವ 1 ಲಕ್ಷ 33 ಸಾವಿರ ರೂ.ಗಳನ್ನು ಬ್ಯಾಂಕ್‍ನಲ್ಲಿ ಠೇವಣಿ ಇರಿಸಲಾಗಿದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಸ್ವಾವಲಂಬನೆ ಮತ್ತು ಸ್ವಾಭಿಮಾನ ಹೆಚ್ಚಿಸುವುದು ನಮ್ಮ ಆಡಳಿತ ಮಂಡಳಿ ಉದ್ದೇಶವಾಗಿದೆ. ಹಾಗಾಗಿ ಯಾರ ಬಳಿಯೂ ಸಂಘದ ಕಾರ್ಯಚಟುವಟಿಕೆಗಳಿಗಾಗಿ ಕೈಯೂಡ್ಡದೆ ಸ್ವಂತ ಸಂಪನ್ಮೂಲ ಕ್ರೋಡಿಕರಣಕ್ಕೆ ಮುಂದಾಗಿದ್ದೇವೆ ಎಂದು ಗೋಪಿನಾಥ್ ವಿವರಿಸಿದರು.

ಕ್ರೈಸ್ತ ಮಿಷನರಿಸಂಸ್ಥೆಗಳು ಮತ್ತು ದಲಿತ ಕ್ರೈಸ್ತ ಮಹಿಳೆಯರ ಸಮಾಜೋ ಆರ್ಥಿಕ ಬದಲಾವಣೆಯ ಚಾರಿತ್ರಿಕ ಅಧ್ಯಯನಕ್ಕೆ, ಸರಿತ ಕುಮಾರಿಗೆ ಡಾಕ್ಟರೇಟ್

ಕೋಲಾರ:- ನಗರದ ಎಂ.ಸರಿತ ಕುಮಾರಿ ಮಂಡಿಸಿದ ಪ್ರೌಢ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಂಗಳೂರು ವಿವಿಯ 57 ನೇ ಘಟಿಕೋತ್ಸವಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಮತ್ತು ಉಪ ಕುಲಪತಿ ಡಾ.ಎಸ್.ಎಂ.ಜಯಕರ್ ಮತ್ತಿತರರು ಸರಿತಕುಮಾರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಕ್ರೈಸ್ತ ಮಿಷನರಿಸಂಸ್ಥೆಗಳು ಮತ್ತು ದಲಿತ ಕ್ರೈಸ್ತ ಮಹಿಳೆಯರ ಸಮಾಜೋ ಆರ್ಥಿಕ ಬದಲಾವಣೆಯ ಚಾರಿತ್ರಿಕ ಅಧ್ಯಯನ (1900-2001) ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಅವರು ಪಡೆದುಕೊಂಡಿದ್ದಾರೆ.
ಮುಳಬಾಗಿಲು ಪದವಿ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿ ಎಂ.ಸರಿತಕುಮಾರಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾ
ರೆ.

ರಾಜ್ಯಕ್ಕೆ ದೀಮಂತ ನಾಯಕರನ್ನು ನೀಡಿದ ಜಿಲ್ಲೆಯಲ್ಲಿ ಮತ ಮಾರಾಟದ ಪರಂಪರೆ ಬೇಡ
ಕೋಲಾರವನ್ನು ಕಳಂಕರಹಿತವಾಗಿಸಲು ಮಹಿಳೆಯರು ಸಂಕಲ್ಪಮಾಡಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿಯನ್ನು ನೀಡಿದ ಹಾಗೂ ಅಪ್ರತಿಮ ಜನನಾಯಕರ ಹುಟ್ಟಿಗೆ ಕಾರಣವಾದ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳು ಇಂದು ಮತ ಮಾರಾಟಕೇಂದ್ರಗಳಾಗುತ್ತ ವೆ ಎಂಬ ಕೆಟ್ಟ ಪರಂಪರೆಗೆ ಸಾಕ್ಷಿಯಾಗುತ್ತಿದ್ದು, ಇಂತಹ ಕಳಂಕವನ್ನು ಹೋಗಲಾಡಿಸಲು ಮಹಿಳೆಯರು ಸಂಕಲ್ಪ ಮಾಡಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ನಗರದ ಕೋಲಾರಮ್ಮ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ನಂತರ 22 ಮಹಿಳಾ ಸಂಘಗಳಿಗೆ 1.20ಕೋಟಿರೂ ಸಾಲ ವಿತರಿಸಿ ಅವರು ಮಾತನಾಡಿ, ಪ್ರಥಮ ಮುಖ್ಯಮಂತ್ರಿ ಕೆಸಿರೆಡ್ಡಿ, ಜನನಾಯಕರಾದ ಸಿ.ಬೈರೇಗೌಡರು, ವೆಂಕಟಗಿರಿಯಪ್ಪ, ನಾಗಿರೆಡ್ಡಿ ಸೇರಿದಂತೆ ಅನೇಕ ಮಹನೀಯರಿದ್ದ ಅವಿಭಜಿತ ಜಿಲ್ಲೆಯ ಘನತೆ ಉಳಿಸುವ ಕೆಲಸವನ್ನು ಮುಂಬರುವ ಚುನಾವಣೆಯಲ್ಲಿ ಮಾಡಿ ತೋರಿಸಿ ಎಂದು ಕಿವಿಮಾತು ಹೇಳಿದರು.
ಚುನಾವಣೆ ವೇಳೆ ಮತಕ್ಕೆ ಹಣ ನೀಡುವ ಮೂಲಕ ಯಾಮಾರಿಸುವ ಜನರನ್ನು ಧಿಕ್ಕರಿಸಬೇಕು. ಒಳ್ಳೆಯ ಕೆಲಸ ಮಾಡುವವರನ್ನು ಆಯ್ಕೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. 500 ಅಥವಾ 1000 ಪಡೆದು ಮತ ಹಾಕಿದರೆ ನಿಮಗೆ ಉಪಯೋಗವಾಗುವುದಿಲ್ಲ ಎಂದು ಎಚ್ಚರಿಸಿದರು.
ಅಂಬೇಡ್ಕರರು ಸಂವಿಧಾನದಲ್ಲಿ ಮತದಾನದ ಹಕ್ಕು ನೀಡಿದ್ದಾರೆ. ಗೌರವವಾಗಿ ಮತ ಹಾಕಿದರೆ ಮಾತ್ರವೇ ಜಿಲ್ಲೆಯ ರಾಜಕಾರಣ ಬದಲಾಗುತ್ತದೆ. ಕೈಚಾಚುವುದು ಬಿಡಿ. ಬೈರೇಗೌಡರ ಕಾಲದಲ್ಲಿ ದೇವಾಲಯದಲ್ಲಿ ಪೂಜೆ ಮಾಡಿ, ಎಲೆ-ಅಡಿಕೆ ಕೊಡುತ್ತಿದ್ದಂತಹ ವಾತಾವರಣ ಮತ್ತೆ ಸೃಷ್ಠಿಯಾಗಬೇಕು ಎಂದು ಕೋರಿದರು.
ಮಂಗಳೂರು ಭಾಗಕ್ಕೆ ಹೋದರೆ ಹಣ ನೋಡುವುದಿಲ್ಲ, ಒಳ್ಳೆಯ ಜನರನ್ನು ಆಯ್ಕೆ ಮಾಡುತ್ತಾರೆ.
ಜಿಲ್ಲೆಯ ಮಾನ ಮರ್ಯಾದೆ ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಅದರ ಜತೆಗೆ ಡಿಸಿಸಿ ಬ್ಯಾಂಕನ್ನೂ ಉಳಿಸಬೇಕು. ನೀವು ಹಣ ಪಡೆದು ಮತ ಹಾಕಿದ್ದೇ ಆದಲ್ಲಿ ಬೇರೆ ಭಾಗಕ್ಕೆ ಹೋದರೆ ಕೋಲಾರ ಜಿಲ್ಲೆಯ ಜನರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದರು.
ಪ್ರತಿವಾರದ ಉಳಿತಾಯದ ಹಣವನ್ನು ಹೆಚ್ಚಾಗಿ ಕಟ್ಟಿದರೆ ನಿಮಗೇ ಅನುಕೂಲವಾಗುತ್ತದೆ. ಪ್ರಚಾರಕ್ಕೆ ಅಥವಾ ಖುಷಿಗೋಸ್ಕರ ಸಾಲ ನೀಡುವುದಲ್ಲ, ಹೆಣ್ಣುಮಕ್ಕಳ ಜೀವನ ಉತ್ತಮವಾಗಿರಬೇಕೆನ್ನುವ ನಿಟ್ಟಿನಲ್ಲಿ ಸಾಲ ನೀಡಲಾಗುತ್ತಿದೆ. ಪ್ರತಿವಾರ ಕಡ್ಡಾಯವಾಗಿ ಸಭೆ ನಡೆಸಿ ಉಳಿತಾಯದ ಹಣ ಹೆಚ್ಚು ಮಾಡಬೇಕು. ಪ್ರತಿ ತಿಂಗಳು ಬ್ಯಾಂಕ್ ಗೆ ಹಣ ಕಟ್ಟಬೇಕು. ಉಳಿತಾಯ ಹಣ ಹೆಚ್ಚಾಗಿದ್ದರೆ ಯಾರಿಗಾದರೂ ನೀವೇ 2 ಲಕ್ಷರೂ ಹಣವನ್ನು ಬೇಕಾದರೂ ಕೊಡುವ ಮಟ್ಟಕ್ಕೆ ಬೆಳೆಯುತ್ತೀರಿ ಎಂದು ಸಲಹೆ ನೀಡಿದರು.


10 ಲಕ್ಷ ರೂ ಸಾಲ ಉದ್ಯಮಕ್ಕೆ ಚಿಂತನೆ


ಡಿಸಿಸಿ ಬ್ಯಾಂಕ್ ನಾಗನಾಳ ಸೋಮಣ್ಣ ಮಾತನಾಡಿ, ಉತ್ತಮವಾಗಿ ವಹಿವಾಟು, ವ್ಯವಹಾರ ಮಾಡುವ ಸಂಘಗಳಿಗೆ 10 ಲಕ್ಷರೂ ಸಾಲ ನೀಡುವ ಕೆಲಸವಾಗಲಿದೆ. ಎಲ್ಲಾ ಸಂಘಗಳನ್ನು ಸೇರಿಸಿ ಯಾವುದಾದರೂ ಉದ್ಯಮವನ್ನು ಮಾಡಲು ಬ್ಯಾಲಹಳ್ಳಿ ಗೋವಿಂದಗೌಡರು ಚಿಂತನೆ ನಡೆಸಿದ್ದು, ಅದರಿಂದಾಗಿ ಅನೇಕರಿಗೆ ಉದ್ಯೋಗವೂ ಸಿಗುವಂತಾಗುತ್ತದೆ ಎಂದು ಹೇಳಿದರು.
ಸರಕಾರವು ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಶೇ.6ರಷ್ಟು ಮಂದಿಗೆ ಸರಕಾರಿ ಉದ್ಯೋಗ ಸಿಕ್ಕಿದರೆ, ಉಳಿದವರು ಖಾಸಗಿ, ಸ್ವಯಂ ಉದ್ಯೋಗಗಳ ಮೇಲೆ ಅವಲಂಭಿತರಾಗಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಸಂಘಗಳು ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನೀವೂ ಮುಂದಾದರೆ ನಾವೂ ಸೇರಿದಂತೆ ಸರಕಾರವು ನಿಮ್ಮ ಜತೆಗಿರುತ್ತದೆ ಎಂದರು.
ಇತ್ತೀಚೆಗೆ ಕೊಡಗು ಡಿಸಿಸಿ ಬ್ಯಾಂಕ್‍ನವರು ಕೋಲಾರ ಡಿಸಿಸಿ ಬ್ಯಾಂಕಿಗೆ ಬಂದು ವೀಕ್ಷಣೆ ನೀಡಿದ್ದಾರೆ. ಕಾರಣ ಯಾವುದೇ ಭದ್ರತೆಯಿಲ್ಲದೆ 5, 10 ಲಕ್ಷರೂ ಸಾಲವನ್ನು ಯಾವ ರೀತಿ ನೀಡುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ನಾನು ಅಹಮದಾಬಾದ್‍ಗೆ ಹೋಗಿದ್ದಾಗ ಈ ವಿಚಾರ ಪ್ರಸ್ತಾಪಿಸಿದಾಗ ನಿಮ್ಮ ಅಧ್ಯಕ್ಷರಿಗೆ ಒಂದು ಗುಂಡಿಗೆ ಇದೆಯಾ ಅಥವಾ ಎರಡು ಗುಂಡಿಗೆ ಇದೆಯಾ ಇಷ್ಟು ಸಾಲ ನೀಡಿದ್ದೀರಿ ಎಂದು ಪ್ರಶ್ನಿಸಿದ್ದರು. ಆಗ ನಮ್ಮ ಜಿಲ್ಲೆಗಳ ಹೆಣ್ಣುಮಕ್ಕಳು ಪ್ರಾಮಾಣಿಕವಾಗಿದ್ದಾರೆ ಎಂದು ಹೇಳಿದ್ದೆ. ಅದೇ ಅಭಿಮಾನ, ಗೌರವವನ್ನು ನೀವು ಉಳಿಸಿಕೊಂಡು ಹೋಗಬೇಕೆಂದು ಕೋರಿದರು.
ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಈಗಾಗಲೇ 2-3 ಬಾರಿ ಸಾಲ ಪಡೆದಿದ್ದೀರಿ, ಅದೆಲ್ಲದ್ದಕ್ಕೂ ಉಳಿತಾಯದ ಹಣ ಕಾರಣವಾಗಿದೆ. ಆದರೆ, ಉಳಿತಾಯದ ಮೊತ್ತ ಮಾತ್ರ ಹಾಗೆಯೇ ಇದೆ. 10ರೂ ಬದಲಾಗಿ 20ರೂ ಕಟ್ಟುವವರಾಗಿದ್ದರೆ ಇಂದು 2 ಲಕ್ಷರೂ ಹಣ ಇರುತ್ತಿತ್ತು.
ಈಗಲೂ ಕಾಲಮೀರಿಲ್ಲ, ಈಗಿನಿಂದಲೇ ಹೆಚ್ಚಳ ಮಾಡಿಕೊಂಡರೆ ತುರ್ತು ಸಂದರ್ಭದಲ್ಲಿ ಬ್ಯಾಂಕ್ ನೀಡುವ ಸಾಲಕ್ಕೆ ಕಾಯದೆ ಅದನ್ನೇ ನಿಮ್ಮ ಸದಸ್ಯರು ಸಾಲವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ನಿಮ್ಮ ಸಂಘಕ್ಕೆ ಪಡೆದಿರುವ ತಲಾ 5 ಲಕ್ಷರೂಗಳನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳದೆ ಸ್ವಯಂ ಉದ್ಯೋಗಗಳನ್ನು ಆರಂಭಿಸಿದರೆ ಅನುಕೂಲ, ಲಾಭ ಆಗುತ್ತದೆ ಎಂದು ಸಲಹೆ ನೀಡಿದರು.
ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಕೋಲಾರ ಡಿಸಿಸಿ ಬ್ಯಾಂಕ್ ಹೆಣ್ಣು ಮಕ್ಕಳು ಸಾಲ ಪಡೆದು, ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿರುವುದಲ್ಲಿ ವಿಶ್ವದಲ್ಲೇ ಮಾದರಿಯಾಗಿದ್ದೀರಿ. ಉಳಿತಾಯದ ಹಣಕ್ಕೆ ಶೇ.7ರಷ್ಟು ಬಡ್ಡಿಯನ್ನೂ ನಾವು ಕೊಡುವುದರಿಂದಾಗಿ ಹೆಚ್ಚಾಗಿ ಉಳಿತಾಯದ ಹಣ ಇರಿಸಬೇಕು. ಡಾ.ಸುಧಾಮೂರ್ತಿ ಮೊದಲು ಸಣ್ಣ ಪ್ರಮಾಣದಲ್ಲಿ ಬಂಡವಾಳ ಹೂಡಿ ಸ್ವಯಂ ಉದ್ಯೋಗ ಆರಂಭಿಸಿ ಇಂದು ವಿಶ್ವದಲ್ಲೇ ಖ್ಯಾತಿರಾಗಿದ್ದಾರೆ. ಅಂತೆಯೇ ಸ್ವಯಂ ಉದ್ಯೋಗದ ಕಡೆಗೆ ನಮ್ಮ ಜಿಲ್ಲೆಗಳಲ್ಲಿಯೂ ಮಹಿಳೆಯರು ಹೆಚ್ಚಿನ ಆದ್ಯತೆ ನೀಡಿದರೆ ನಿಮ್ಮ ಕುಟುಂಬದ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಪಟ್ಟರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಅಂಬರೀಶ್, ಮೇಲ್ವಿಚಾರಕ ಅಮೀನಾ, ಕೇಂದ್ರ ಕಚೇರಿಯ ಪದ್ಮಮ್ಮ, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.