ಭಾರತ ದಾಖಲೆ ಪುಸ್ತಕ ಸೇರಿದ ಹೋರಾಟಗಾರ ಡಾ.ಕೋದಂಡ ರಾಮ್
ಜಿಲ್ಲಾಧಿಕಾರಿ ವೆಂಕಟ್‍ರಾಜಾ ರವರಿಂದ ಪ್ರಮಾಣಪತ್ರ ಸ್ವೀಕಾರ


ಕೋಲಾರ: ಜಿಲ್ಲಾಧಿಕಾರಿಗಳಾದ ವೆಂಕಟ್‍ರಾಜಾ ರವರು ಭಾರತ ದಾಖಲೆ ಪುಸ್ತಕ ಸೇರಿದ ಹೋರಾಟಗಾರ ಡಾ.ಕೋದಂಡ ರಾಮ್ ರವರಿಗೆ ‘ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ 2022’ ಪ್ರಮಾಣಪತ್ರ ನೀಡಿ ತಮ್ಮ ಸಾಮಾಜಿಕ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ಇನ್ನಷ್ಟು ಮುಂದುವರೆಯಲಿ ಎಂದು ಆಶಿಸುತ್ತಾ ಶುಭಕೋರಿದರು.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ದಳವಾಯಿಹೊಸಹಳ್ಳಿಯ ದಲಿತ ಕುಟುಂಬಕ್ಕೆ ಸೇರಿದ ದಿ.ರಾಮಪ್ಪ ನವರ ಮಗನಾದ ಕೋದಂಡ ರಾಮ್ ರವರು ದಲಿತ ಸಂಘಟನೆಗಳ ಹೋರಾಟಗಳನ್ನು ನಡೆಸಿಕೊಂಡು ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಅನಂತರ “ಅಂಬೇಡ್ಕರ್ ಸ್ವಾಭಿಮಾನಿ ಸೇನೆ” ಎಂಬ ರಾಜ್ಯ ಮಟ್ಟದ ಸಂಘಟನೆ ಸ್ಥಾಪಿಸಿ 5ವರ್ಷಗಳಿಂದ ಸಾಮಾಜಿಕವಾಗಿ ಚಳವಳಿ ನಡೆಸುತ್ತಾ ಬಂದಿದ್ದಾರೆ.
ದಲಿತರಲ್ಲಿ ಕಾನೂನು ಅರಿವಿನ ಕಾರ್ಯಕ್ರಮಗಳನ್ನು ಮೂಡಿಸುತ್ತಾ ಅವರಲ್ಲಿ ಬಹುಜನ ನಾಯಕರ ಬಗ್ಗೆ ಬಹುಜನರ ಇತಿಹಾಸದ ಬಗ್ಗೆ ಬುದ್ಧ, ಬಸವ, ಡಾ.ಅಂಬೇಡ್ಕರ್, ಪುಲೇ, ಪೆರಿಯಾರ್, ನಾರಾಯಣಗುರುಗಳ ಮತ್ತು ಇತರ ವಿಷಯಗಳ ಬಗ್ಗೆ ತಿಳಿಸುತ್ತಾ ಸಾಗಿ ಮುಂದೆ ಸಾಮಾಜಿಕ ಮತ್ತು ಕಾನೂನು ಕಾಯಿದೆಗಳ ಬಗ್ಗೆ ದಲಿತ ಕಾಲೋನಿಗಲ್ಲಿ ತನ್ನ ಸಂಘಟನಾ ಕಾರ್ಯಕರ್ತರಿಗೆ ಸುಮಾರು 200 ಕ್ಕೂ ಹೆಚ್ಚು ಅರಿವಿನ ಜಾಥಾ ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಅವರಲ್ಲಿ ಅರಿವು ಮೂಡಿಸಿ ಭಾರತ ದಾಖಲೆ ಪುಸ್ತಕ ಸೇರಿ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

  :- ಡಾ.ಕೋದಂಡ ರಾಮ್, ರಾಜ್ಯಾಧ್ಯಕ್ಷರು ಅಂಬೇಡ್ಕರ್ ಸ್ವಾಭಿಮಾನಿ ಸೇನೆ

ದುಬಾರಿ ಬೆಲೆಗೆ ಪಶು ಆಹಾರ ಮಾರಾಟ, ಅಂಗಡಿಗಳ ಬೆಲೆ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ಸಂಕಷ್ಟದಲ್ಲಿರುವ ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕು- ರೈತಸಂಘ ಪ್ರತಿಭಟನೆ

ಮುಳಬಾಗಿಲು; ಡಿ.13: ದುಬಾರಿ ಬೆಲೆಗೆ ಪಶು ಆಹಾರ ಮಾರಾಟ ಮಾಡುತ್ತಿರುವ ಖಾಸಗಿ ಅಂಗಡಿಗಳ ಬೆಲೆ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ಸಂಕಷ್ಟದಲ್ಲಿರುವ ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿ ರೈತಸಂಘದಿಂದ ಪಶು ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿ, ಸಹಾಯಕ ನಿರ್ದೇಶಕರ ಮೂಲಕ ಪಶು ಸಂಗೋಪನೆ ಹಾಗೂ ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಅತಿವೃಷ್ಠಿ, ಪ್ರಕೃತಿ ವಿಕೋಪಗಳಿಂದ ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಬೆಳೆದಿರುವ ರೈತರ ಬೆಳೆ ಕಣ್ಣ ಮುಂದೆಯೇ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ಸಿಲುಕಿರುವ ಲಕ್ಷಾಂತರ ರೈತ ಕುಟುಂಬಗಳಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿರುವ ಹೈನೋದ್ಯಮ ಹಾಲು ಒಕ್ಕೂಟದ ನಿರ್ಲಕ್ಷ್ಯ ಖಾಸಗಿ ಪಶು ಆಹಾರ ದುಬಾರಿ ಬೆಲೆಗೆ ಮಾರಾಟ ಮಾಡುವ ಅಂಗಡಿ ಮಾಲೀಕರ ನಿರ್ಲಕ್ಷ್ಯಕ್ಕೆ ಹೈನೋದ್ಯಮವೂ ದಿನೇದಿನೇ ದುಬಾರಿಯಾಗಿ ಅದನ್ನೇ ನಂಬಿರುವ ಕುಟುಂಬಗಳು ಬೀದಿಗೆ ಬೀಳುವಂತಾಗಿವೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಧಾನ ವ್ಯಕ್ತಪಡಿಸಿದರು.
ಹಾಲು ಒಕ್ಕೂಟ ರೈತರ ಉತ್ಪಾದನಾ ಹಾಲಿನ ಧರವನ್ನು 1 ರೂಪಾಯಿ ಲೀಟರಿಗೆ ಏರಿಕೆ ಮಾಡಿದರೆ ಪಶು ಆಹಾರವಾದ ಹಿಂಡಿ ಬೂಸ, ಬೆಲೆಯನ್ನು ಖಾಸಗಿ ಅಂಗಡಿ ಮಾಲೀಕರು ಕಚ್ಚಾ ವಸ್ತುಗಳ ನೆಪದಲ್ಲಿ 100 ರೂಪಾಯಿ ಪ್ರತಿ ಮೂಟೆ ಮೇಲೆ ಏರಿಕೆ ಮಾಡುವ ಮುಖಾಂತರ ಒಕ್ಕೂಟ ಕೊಟ್ಟ 1 ರೂಪಾಯಿಗೆ 10ರೂಪಾಯಿ ಕೈಯಿಂದ ಬಂಡವಾಳ ಹಾಕಬೇಕಾದ ಪರಿಸ್ಥಿತಿಯಿದೆ ಎಂದು ವಿವರಿಸಿದರು.
1 ಲೀಟರ್ ಹಾಲು ರೈತ ಉತ್ಪಾದನೆ ಮಾಡಬೇಕಾದರೆ ಪಶು ಆಹಾರ, ಮೇವು ಸೇರಿದಂತೆ ಇನ್ನಿತರೆ ಖರ್ಚುಗಳು 30 ರೂಪಾಯಿ ಪ್ರತಿ ಲೀಟರ್‍ಗೆ ಖರ್ಚು ಬರುತ್ತದೆ.
ಆದರೆ, ಒಕ್ಕೂಟ ನೀಡುವ 28 ರೂಪಾಯಿ ಧರಕ್ಕೆ ಕೈಯಿಂದ ಇನ್ನೆರೆಡು ರೂಪಾಯಿ ಬಂಡವಾಳ ಹಾಕಿ ಹಾಲು ಉತ್ಪಾದನೆ ಮಾಡಬೇಕಾದ ಪರಿಸ್ಥಿತಿಯಿದೆ. ಇದರ ಜೊತೆಗೆ ಹಾಲು ಉತ್ಪಾದಕ ಕೇಂದ್ರಗಳಲ್ಲಿ ಗುಣಮಟ್ಟದ ಹೆಸರಿನಲ್ಲಿ ನೋ ಪೇಮೆಂಟ್, ಎಲ್ ಎಲ್ ಆರ್ ನೀಡುವ ಮುಖಾಂತರ ಅದರಲ್ಲೂ ರೈತರಿಗೆ ವಂಚನೆಯಾಗುತ್ತಿದೆ ಎಂದು ದೂರಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಪಾಷ ಮಾತನಾಡಿ, ಹಾಲು ಒಕ್ಕೂಟ ಜಿಲ್ಲೆಯ ಹೈನೋದ್ಯಮದ ಉಳಿವಿಗಾಗಿ ಲಕ್ಷಾಂತರ ರೈತ ಕುಟುಂಬಗಳ ರಕ್ಷಣೆಗಾಗಿ ದುಬಾರಿ ಪಶು ಆಹಾರ ಮಾರಾಟ ಮಾಡುವ ಖಾಸಗಿ ಅಂಗಡಿ ಮಾಲೀಕರ ಸಭೆ ಕರೆದು ಇಂಡಿ, ಬೂಸ ಬೆಲೆ ನಿಯಂತ್ರಣ ಮಾಡಿ ಇಲ್ಲವೇ ಒಕ್ಕೂಟದಿಂದ ಸಬ್ಸಿಡಿ ಧರದಲ್ಲಿ ಪಶು ಆಹಾರವನ್ನು ವಿತರಣೆ ಮಾಡುವ ಮುಖಾಂತರ ರೈತರ ರಕ್ಷಣೆಗೆ ನಿಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೈನೋದ್ಯಮವೇ ಕಣ್ಮರೆಯಾಗುವ ಕಾಲ ದೂರವಿಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಹಾಲು ಒಕ್ಕೂಟ, ಪಶು ಇಲಾಖೆ ಪರಿಗಣಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ನಿರ್ದೇಶಕರು ಅನುರಾಧ, ಖಾಸಗಿ ಅಂಗಡಿ ಮಾಲೀಕರ ಸಭೆ ಕರೆದು ದುಬಾರಿ ಬೆಲೆಗೆ ಪಶು ಆಹಾರವನ್ನು ಮಾರಾಟ ಮಾಡದಂತೆ ಆದೇಶ ಮಾಡುವ ಜೊತೆಗೆ ಹೆಚ್ಚಿನ ಬೆಲೆ ಮಾರಾಟ ಮಾಡಿದರೆ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡುವುದಾಗಿ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ಜಿಲ್ಲಾ ಗೌರವಾಧ್ಯಕ್ಷ ವಿಶ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್‍ಪಾಲ್, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಗುರುಮೂರ್ತಿ, ಆನಂದ್‍ರೆಡ್ಡಿ, ಭಾಸ್ಕರ್, ಪದ್ಮಘಟ್ಟ ಧರ್ಮ, ಜುಬೇರ್ ಪಾಷ, ಆದಿಲ್ ಪಾಷ, ನಂಗಲಿ ನಾಗೇಶ್, ಯಾರಂಘಟ್ಟ ಗಿರೀಶ್ ಮುಂತಾದವರಿದ್ದರು.

ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಗೆ ಬೆಳ್ಳಿ ಹಬ್ಬದ ಸಂಭ್ರಮ – ಶಾಲೆ ಬೆಳೆದು ಬಂದ ಕಿರು ನೋಟ

ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ವಿದ್ಯಾ ಸಂಸ್ಥೆ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ. ಈ ವಿದ್ಯಾದೇಗುಲದ ಪೂರ್ವದಲ್ಲಿ ರಾಜ್ಯ ಹೆದ್ದಾರಿ, ಪಶ್ಚಿಮದಲ್ಲಿ 452 ವರ್ಷಗಳ ಇತಿಹಾಸವಿರುವ ವೈಭವದಿಂದ ಕಂಗೊಳಿಸುವ ರೋಜರಿ ಮಾತೆಯ ಚರ್ಚ್, ಉತ್ತರಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ದಕ್ಷಿಣ ಭಾಗದಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳು ಈ ಎಲ್ಲಾ ಬೌಗೋಳಿಕ ಸನ್ನಿವೇಶದ ಪರಿಸರದ ಮಧ್ಯೆ ನಡುವಣಗಿತ್ತಿಯಂತೆ ಬೆಳೆದು ನಿಂತು ಕಂಗೊಳಿಸುತ್ತಿರುವುದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ.
1997 ಜೂನ್ 2ನೇ ತಾರೀಖಿನಿಂದ ಪ್ರಾಥಮಿಕ ಹಂತದಿಂದ ಆರಂಭವಾದ ಈ ಶಾಲೆ ಹಂತ ಹಂತವಾಗಿ ಮೇಲೆರುತ್ತಾ ಪ್ರೌಢಶಾಲೆಯಾಗಿ ಮಾರ್ಪಾಡಾಗಿ ಸಾವಿರರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಾ ಬಂದಿದೆ. ಈ ಶಾಲೆಯನ್ನು ಪ್ರಾರಂಭಿಸಿದ ಕೀರ್ತಿ ವಂದನೀಯ ಗುರು ಸ್ಟ್ಯಾನಿ ಬಿ ಲೋಬೊರವರಿಗೆ ಸಲ್ಲುತ್ತದೆ. ಕುಂದಾಪುರದ ಆಸುಪಾಸಿನ ಜನರ ಬೇಡಿಕೆಯಾಗಿದ್ದ ಈ ಆಂಗ್ಲ ಮಾಧ್ಯಮ ಶಾಲೆಯನ್ನು 1997ರಲ್ಲಿ ರೋಜರಿ ಮಾತೆಯ ಚರ್ಚಿನ ಸಭಾಂಗಣದಲ್ಲಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಎನ್ನುವ ನಾಮಧೇಯದೊಂದಿಗೆ ಅಂದಿನ ಸಂಚಾಲಕರಾಗಿದ್ದ ವಂದನೀಯ ಸ್ಟ್ಯಾನಿ ಬಿ ಲೋಬೊರವರ ಅವಿರತ ಪ್ರಯತ್ನದಿಂದ ಪ್ರಾರಂಭವಾಯಿತು.
ಶ್ರೀಮತಿ ರೇಣುಕಾ ರೀನಾ ಸೋನ್ಸ್‍ರವರು ಮೊದಲ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ್ದರು. ಹಾಗೆ ಚರ್ಚ್ ಸಭಾಂಗಣದಲ್ಲಿ ಆರಂಭವಾದ ಈ ಶಾಲೆ ನಂತರದ ದಿನಗಳಲ್ಲಿ ಹೆಸಾರಾಂತ ಸಂತ ಮೇರಿಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಎನ್ನುವ ನಾಮಕರಣದಲ್ಲಿ ಸ್ಥಳಾಂತರ ಮಾಡಲಾಯಿತು.
1998ರಲ್ಲಿ ವಂದನೀಯ ಗುರು ಸ್ಟ್ಯಾನಿ ಬಿ ಲೋಬೊರವರ ವರ್ಗಾವಣೆಗೊಂಡು ಅವರ ಸ್ಥಾನಕ್ಕೆ ವಂದನೀಯ ಜಾನ್ ಬಿ ಕ್ರಾಸ್ತಾರವರು ಸಂಚಾಲಕರಾಗಿ ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋದರು. ನಂತರ 2005ರಲ್ಲಿ ಗುರುಗಳು ವರ್ಗಾವಣೆಗೊಂಡರು. ಮುಂದೆ ವಂದನೀಯ ಗುರುಗಳಾದ ಅ್ಯಂಟನಿ ಲೋಬೊರವರು ಸಂಚಾಲಕರಾಗಿ ಆಗಮಿಸಿದಾಗ, ಅದೇ ಆವರಣದಲ್ಲಿ ಒಂದು ಕಾಲದಲ್ಲಿ ಕುಂದಾಪುರ ಪ್ರೆಸ್ ಕುಂದಾಪುರ ರೋಜರಿ ಚರ್ಚ್ ಆಡಳಿತದಲ್ಲಿ ಇದ್ದ ಕಟ್ಟಡ ಇದ್ದ ಜಾಗದಲ್ಲಿ ಹೋಲಿ ರೋಜರಿ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿತು. 2008 ಎಪ್ರಿಲ್ 4ರಂದು ಸುಸಜ್ಜಿತ ಕಟ್ಟದಲ್ಲಿ ಶಾಲೆ ಆರಂಭವಾಯಿತು.
ಸುಮಾರು 25 ವರ್ಷಗಳ ಚರಿತ್ರೆಯನ್ನು ಹೊಂದಿರುವ ಈ ಶಾಲೆಯು ಜೂನ್ 2022 ಹೊತ್ತಿಗೆ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಲು ಸಜ್ಜುಗೊಂಡಿದೆ..
25 ವರ್ಷಾಗಳ ಅವಧಿಯಲ್ಲಿ ಸಂಚಾಲಕರಾಗಿ ಸೇವೆ ಸಲ್ಲಿಸಿದ ಗುರುಗಳನ್ನು ಸ್ಮರಿಸಬೇಕಾದುದು ನಮ್ಮ ಆಧ್ಯ ಕರ್ತವ್ಯ ವಂದನೀಯ ಗುರು ಸ್ಟ್ಯಾನಿ ಬಿ ಲೋಬೊ, ವಂದನೀಯ ಗುರು ಜಾನ್ ಬಿ ಕ್ರಾಸ್ತಾ, ವಂದನೀಯ ಗುರು ಆ್ಯಂಟನಿ ಲೋಬೊ, ವಂದನೀಯ ಗುರು ಆಲ್ಬನ್ ಡಿಸೋಜಾ, ವಂದನೀಯ ಗುರು ಅನಿಲ್ ಡಿಸೋಜಾ. ಪ್ರಸ್ತುತ ವಂದನೀಯ ಗುರುಗಳಾದ ಸ್ಟ್ಯಾನಿ ತಾವ್ರೊ ಸಂಚಾಲಕರಾಗಿ ಅಮೂಲ್ಯ ಸೇವೆಯೊಂದಿಗೆ ಹಗಲಿರುಳೆನ್ನದೆ ಶಾಲೆಯ ಶ್ರೇಯೋಭಿವೃದ್ದಿಗೆ ಅವಿರತ ಪ್ರಯತ್ನದಿಂದ ಶ್ರಮಿಸುತ್ತಿದ್ದಾರೆ. ಹತ್ತು ಹಲವು ಯೋಜನೆಗಳ ಅಭಿವೃದ್ದಿಯ ಪಥದಲ್ಲಿದ್ದಾರೆ ಪೂಜ್ಯನೀಯರು.
25 ವರ್ಷಗಳ ಅವಧಿಯಲ್ಲಿ ಸೇವೆ ನೀಡಿದ ಪ್ರಮುಖ ಮುಖ್ಯೋಪಾಧ್ಯಾಯಿನಿಯವರು ಶ್ರೀಮತಿ ರೇಣುಕಾ ರೀನಾ ಸೋನ್ಸ್, ಶ್ರೀಮತಿ ನೈನಾ ಟ್ರೀಜಾ ಪುರ್ಟಾಡೊ, ಶ್ರೀಮತಿ ಕೋನಿ ಮಿನೇಜಸ್ ಮತ್ತು ಸಿಸ್ಟರ್ ಜೊಯ್ಸ್ ಮರಿಯ ಲುವಿಸ್ ಎ.ಸಿ. ಪ್ರಸ್ತುತ ಸಿಸ್ಟರ್ ತೆರೇಜ್ ಶಾಂತಿ ಎ ಸಿ ರವರ ನೇತೃತ್ವದಲ್ಲಿ ಉತ್ತಮ ಮಾರ್ಗದರ್ಶನದಲ್ಲಿ ಸುಮಾರು 20 ಮಂದಿ ಅನುಭವಿ ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂಧಿಗಳ ಸೇವೆಯೊಂದಿಗೆ ಸಂಸ್ಥೆ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ.
ಗುಣಮಟ್ಟದ ವಿದ್ಯಾಬ್ಯಾಸವನ್ನು ನೀಡುತ್ತಾ ಮಕ್ಕಳ ಜೀವನದ ಬೆಳಕಾಗಿ ಯಶಸ್ಸಿನತ್ತ ಹೆಜ್ಜೆಗಳನ್ನು ಹಾಕುತ್ತಾ ಸಾಧನೆಯ ಹಾದಿಯಲ್ಲಿದೆ ಎಂಬುವುದಕ್ಕೆ, ಶಾಲೆಯ ಫಲಿತಾಂಶವೇ ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಇದುವರೆಗೆ ಎಸ್ ಎಸ್ ಎಲ್ ಸಿಯ 16 ತಂಡಗಳು ಉತ್ತಮ ಫಲಿತಾಂಶದೊಂದಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. 2012-13ನೇ ಸಾಲಿನಲ್ಲಿ ಮೊದಲ ಬಾರಿಗೆ 100% ಫಲಿತಾಂಶ ದೊರೆತಿದ್ದು ನಂತರ 2016 ರಿಂದ 2022 ರವರೆಗೆ ಕ್ರಮವಾಗಿ ಸತತ 5 ಬಾರಿ ಶೇಕಡಾ 100% ದಾಖಲೆಯ ಫಲಿತಾಂಶದ ಕೀರ್ತಿ ನಮ್ಮ ಸಂಸ್ಥೆಯ ಮಡಿಲಿನಲ್ಲಿದೆ.
ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಕೇವಲ ಪಠ್ಯವನ್ನು ಮಾತ್ರ ಬೋಧಿಸುತ್ತಿಲ್ಲ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸದಾ ಶ್ರಮಿಸುತ್ತಿದೆ. ಪಠ್ಯೇತರ ಚಟುವಟಿಕೆಗಳಿಂದ ಕರಾಟೆ, ಯೋಗ, ನೃತ್ಯ, ಸಂಗೀತ, ವಿಜ್ಞಾನ ಸಂಘ, ಇಂಟರ್ಯಾಕ್ಟ್, ವೈ.ಎಸ್.ಎಂ, ಪರಿಸರ ಕೂಟ, ಕ್ರೀಡಾ ಸಂಘ ಹೀಗೆ ಹತ್ತು ಹಲವು ಸಂಘಗಳ ಮೂಲಕ ವಿದ್ಯಾರ್ಥಿಗಳು ಕ್ರೀಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಶೃದ್ದೆ, ಸಂಯಮ, ಹೊಂದಾಣಿಕೆಯ ಮನೋಭಾವ ಮೂಡಿಸುವಲ್ಲಿ ಸಹಕಾರಿಯಾಗಿ ಸ್ಕೌಟ್ಸ್-ಗೈಡ್ಸ್,ರೆಡ್ ಕ್ರಾಸ್, ಬುಲ್-ಬುಲ್, ಕಬ್ಸ್ ತರಬೇತಿ ನೀಡಿ ಅವರನ್ನು ಮುನ್ನೆಡಸಲು ಉತ್ತಮ ಶಿಸ್ತನ್ನು ಅಳವಡಿಸಿಕೊಳ್ಳಲು ಸಂಸ್ಠೆಯು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ಜಯಗಳಿಸಿ ಈ ವಿದ್ಯಾ ದೇಗುಲದ ಕೀರ್ತಿ ಪತಾಕೆ ಆಕಾಶದೆತ್ತರಕ್ಕೆ ಹಾರಿಸುತ್ತಿದ್ದಾರೆ. ಸುಸಜ್ಜಿತ ಕಟ್ಟಡ, ಉತ್ತಮ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಅಗ್ನಿ ಸುರಕ್ಷತೆ, ವಿಶಾಲವಾದ ತರಗತಿ ಕೋಣೆ, ನುರಿತ ಅಧ್ಯಾಪಕ ವೃಂದ, ಕಂಪ್ಯೂಟರ್ ಲ್ಯಾಬ್, ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಗುಣಯುತ ಶಿಕ್ಷಣ ನೀಡುತ್ತಾ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ ಈ ಸಂಸ್ಥೆ.
ಈ ರೀತಿ ಎಲ್ಲಾ ರೀತಿಯಿಂದ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನ ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ನಮ್ಮ ವಿಶ್ವಾಸ.


-> ಸಂಚಾಲಕರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವ್ರಂದ

ಟಿ. ಬಿ. ಮುಕ್ತ ಭಾರತದ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕದಿಂದ ಸಹಾಯ ಹಸ್ತ

ಭಾರತ ಸರ್ಕಾರದ ಟಿ. ಬಿ. ಮುಕ್ತ ಭಾರತದ ಕಾರ್ಯಕ್ರಮ ದಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ ಸಾರ್ವಜನಿಕ ಆರೋಗ್ಯ ಕೇಂದ್ರಗಳೊಂದಿಗೆ ಕೈ ಜೋಡಿಸಿ ಇಪ್ಪತ್ತೈದು ರೋಗಿಗಳಿಗೆ ಅಗತ್ಯ ವಸ್ತುಗಳ ಸರಬರಾಜು ಮಾಡಲು ನಿಶ್ಚಯಿಸಿದೆ. ಒಂದೊಂದು ಸಾವಿರ ಬೆಲೆ ಬಾಳುವ ಈ ಸಾಮಾಗ್ರಿಗಳನ್ನು ಆರು ತಿಂಗಳ ಕಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಸರಬರಾಜು ಮಾಡಲು ಇಂದಿನಿಂದ ನೀಡುತ್ತಿದ್ದವು. ಸುಮಾರು ಒಂದುವರೆ ಲಕ್ಷದ ಈ ದೇಣಿಗೆಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ರೆಡ್ ಕ್ರಾಸ್ ನ ಕಲವೇ ಸದಸ್ಯರು ಬರಿಸಿದ್ದಾರೆ.

ರೋಟರಿ ಶಿರ್ವದ ವತಿಯಿಂದ ವಕೀಲರ ದಿನಾಚರಣೆ

ಶಿರ್ವ: ”ತಮ್ಮಲ್ಲಿ ನ್ಯಾಯ ಕೇಳಿ ಬಂದವರಿಗೆ ನ್ಯಾಯ ಒದಗಿಸುವುದು ನ್ಯಾಯವಾದಿಗಳ ಕರ್ತವ್ಯವಾಗಿರುತ್ತದೆ ಎಂದು ಶಿರ್ವ ರೋಟರಿ ಅಧ್ಯಕ್ಷ ಡಾ. ವಿಟ್ಠಲ್ ನಾಯಕ್ ಅಭಿಪ್ರಾಯ ಪಟ್ಟರು. ಅವರು ರೋಟರಿ ಶಿರ್ವದ ವತಿಯಿಂದ ಹಮ್ಮಿಕೊಂಡ ವಕೀಲರ ದಿನಾಚರಣೆ ಯಲ್ಲಿ ಮಾತನಾಡಿದರು.
ಹಿರಿಯ ವಕೀಲರಾದ ಜಯಕೃಷ್ಣ ಆಳ್ವ ಹಾಗೂ ಮೆಲ್ವಿನ್ ಡಿಸೋಜಾ ರವರನ್ನು ಸನ್ಮಾನಿಸಲಾಯಿತು. ಜಯಕೃಷ್ಣ ಆಳ್ವರವರು ಕ್ರಿಮಿನಲ್ ಹಾಗೂ ಮೆಲ್ವಿನ್ ಡಿಸೋಜಾ ರವರು, ಸಿವಿಲ್ ಕಾನೂನು ಮಾಹಿತಿ ನೀಡಿದರು. ಕ್ಲಬ್ ಸೇವಾ ಸಭಾಪತಿ ಮೈಕಲ್ ಮಥಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ವಿಟ್ಠಲ್ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ರೊ. ದಿನೇಶ್ ಕುಲಾಲ್ ವಂದಿಸಿದರು.

ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವ: ನಂಬಿಕೆ ಮತ್ತು ಶಕ್ತಿಯ ಸಮುದಾಯವನ್ನು ನಿರ್ಮಿಸಲು ಏಕತೆಯ ಪ್ರತಿಧ್ವನಿ

Report: Fr Anil Ivan Fernandes, CCC | Pics: Stanly Bantwal

ಮಂಗಳೂರು, ಡಿ.10: “ಧರ್ಮಪ್ರಾಂತ್ಯದ ಪಾಲನಾ ಪರಿಷತ್ತುಧರ್ಮಸಭೆಯಲ್ಲಿನ ಸಹಭಾಗಿತ್ವದ ದೃಷ್ಟಿಕೋನದ ಅಭಿವ್ಯಕ್ತಿಯಾಗಿದೆ. ಮಂಗಳೂರು ಧರ್ಮಪ್ರಾಂತ್ಯವು ನಂಬಿಕೆ, ಪರಸ್ಪರ ಸಹಕಾರ, ನಿರಂತರ ಸಂವಾದ ಮತ್ತು ದೇವರ ಚಿತ್ತದ ವಿವೇಚನೆಯ ಮೂಲಭೂತ ತತ್ವಗಳ ಮೇಲೆ ನಿರ್ಮಿಸಲಾದ ಸಮುದಾಯವಾಗಿದೆ. ನಿಮ್ಮ ಸೇವೆ ಮತ್ತು ಒಗ್ಗಟ್ಟಿನ ಮೂಲಕ ನಂಬಿಕೆಗೆ ಸಾಕ್ಷಿಯಾಗಿರುವ ನಿಮ್ಮೆಲ್ಲರನ್ನು ನಾನು ಪ್ರಶಂಸಿಸುತ್ತೇನೆ” ಎಂದು ಗೋವಾ ಮತ್ತು ಡಾಮನಿನ ಕಾರ್ಡಿನಲ್ ಫಿಲಿಪ್ ನೇರಿಫೆರಾವೊ ಹೇಳಿದರು.

ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‍ನಲ್ಲಿ ಶನಿವಾರ, ಡಿಸೆಂಬರ್ 10, 2022 ರಂದು ನಡೆದ ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ (ಡಿಪಿಪಿ) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ಮಂಗಳೂರಿನಲ್ಲಿ ಅವರ ಗೌರವಾನ್ವಿತ ಕಾರ್ಡಿನಲ್ ಫಿಲಿಪ್ ನೇರಿ ಆಗಮಿಸಿದ್ದರು. ನೂತನವಾಗಿ ಆಯ್ಕೆಯಾದ ಕಾರ್ಡಿನಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಇಂದಿನ ಸಂದರ್ಭದಲ್ಲಿ ಕ್ರೈಸ್ತರ ಒಗ್ಗಟ್ಟಿನ ಕುರಿತು ಮಾತನಾಡಿದ ಕಾರ್ಡಿನಲ್ ಫೆರಾವೊ, “ಸೇವೆಯ ಮೂಲಕ ನಾಯಕತ್ವ, ಮತ್ತು ಸಹಯೋಗ ಮತ್ತು ಸಮಾನತೆಯು ಪಾಲನಾ ಪರಿಷತ್ತನ್ನು ಬಲಪಡಿಸುವ ಪ್ರಮುಖ ಅಂಶಗಳಾಗಿವೆ. ಧರ್ಮಸಭೆಯಲ್ಲಿನ ನಾಯಕತ್ವವು ಏಕತೆ ಮತ್ತು ಭ್ರಾತೃತ್ವದಿಂದ ಕೂಡಿರಬೇಕು, ಇದು ಪೋಪ್ ಫ್ರಾನ್ಸಿಸ್ ಅವರು ರೂಪಿಸಿದ ಸಿನೊಡಲ್ ಚರ್ಚ್‍ಅನ್ನು ನಿರ್ಮಿಸಲು ನಮಗೆ ಸಹಾಯ ಮಾಡುತ್ತದೆ.

ಕಾರ್ಡಿನಲ್ ಮತ್ತು ಇತರೆಲ್ಲಾ ಗಣ್ಯರು ದೀಪ ಬೆಳಗಿಸುವ ಮೂಲಕ ಸುವರ್ಣ ಮಹೋತ್ಸವದ ಉದ್ಘಾಟನೆ ನಡೆಯಿತು. ತದನಂತರ. ಕಾರ್ಡಿನಲ್ ಅವರ ಅಧ್ಯಕ್ಷತೆಯಲ್ಲಿ ದಿವ್ಯ ಬಲಿಪೂಜೆ ಅರ್ಪಿಸಲಾಯಿತು.. ಗಣ್ಯರು ಮತ್ತು ಡಿಪಿಪಿ ಪದಾಧಿಕಾರಿಗಳು ಪೂಜೆಯ ಆರಂಭದಲ್ಲಿ ದೀಪ ಬೆಳಗಿಸುವ ಮೂಲಕ ಆಚರಣೆಯನ್ನು ಉದ್ಘಾಟಿಸಿದರು.

ಕಾರ್ಡಿನಲ್ ಫಿಲಿಪೆ ನೇರಿ ತಮ್ಮ ಪ್ರವಚನದಲ್ಲಿ, ಸಮುದಾಯದಲ್ಲಿ ಸಹಭಾಗಿತ್ವವನ್ನು ನಿರ್ಮಿಸಲು ಮತ್ತುಸಮಾಜದ ಪರಿವರ್ತನೆ ಕಾಣಲು ಯೇಸುಕ್ರಿಸ್ತನ ಮಾದರಿಯಂತೆ ನಮ್ಮ ಮಾತು ಮತ್ತು ಕಾರ್ಯಗಳಲ್ಲಿ ಪ್ರವಾದಿಯಾಗಿರ ಬೇಕು’ ಎಂದುಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್‍ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಬೆಂಗಳೂರು ಆರ್ಚ್ ಬಿಷಪ್‍ಅ ತೀ ವಂದನೀಯ ಡಾ| ಪೀಟರ್ ಮಚಾದೊ, ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರು ಶ್ರೀ ಜೋನ್ ಮೈಕಲ್‍ ಡಿಕುನ್ಹಾ ಮತ್ತು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಜಿ ನಿರ್ದೇಶಕರಾದ ಶ್ರೀಮತಿ ಫಿಲೋಮಿನಾ ಲೋಬೋ, ವಿಧಾನ ಪರಿಷತ್ತಿನ ಮಾಜಿ ಸದಸ್ಸ್ಯರಾದ ಶ್ರೀ ಐವನ್ ಡಿ ಸೋಜಾ, ವಿಧಾನ್ ಸಭೆಯ ಮಾಜಿ ಶಾಸಕಾರಾದ ಶ್ರೀ ಜೆ.ಆರ್. ಲೋಬೋ, ಫಾದರ್ ಮುಲ್ಲರ್‍ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್‍ ಕುವೆಲ್ಲೊ, ಧರ್ಮಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ. ಜೆ. ಬಿ. ಸಲ್ಡಾನ್ಹಾ ಮತ್ತು ಶ್ರೀ ರಾಯ್‍ ಕ್ಯಾಸ್ಟೆಲಿನೊ, ಪಾಲನಾ ಪರಿಷತ್ತಿನ ಪ್ರಸ್ತುತ ಕಾರ್ಯದರ್ಶಿ ಡಾ|ಜಾನ್ ಡಿ’ಸಿಲ್ವಾ ಮತ್ತು ಮಾಜಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಎಲ್ಲಾ ಸಂಕಷ್ಟಗಳ ವಿರುದ್ಧ ಹೋರಾಡಲು ಏಕತೆ ಮುಖ್ಯ ಎಂದು ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್‍ಡಿ’ಕುನ್ಹಾ ಹೇಳಿದರು. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಬದಲಾಗುತ್ತಿರುವ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಧರ್ಮಸಭೆಯ ವಿಶ್ವಾಸಕ್ಕೆ ಸಾಕ್ಷಿಯಾಗಬಹುದು. ನಮ್ಮ ನಂಬಿಕೆಯನ್ನು ಬೋಧಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನಮ್ಮ ಸಂವಿಧಾನವು ಖಾತರಿಪಡಿಸಿದೆ.” ಎಂದರು.

ಆರ್ಚ್‍ಬಿಷಪ್ ಪೀಟರ್ ಮಚಾದೊ ಅವರು ಈ ಸಂದರ್ಭದಲ್ಲಿ ಪ್ರಕಟಿಸಲಾದ “ಏಕ್ತಾರಾಚಿಂ ಭಾಂಗ್ರಾಳಿಂ ಮೆಟಾಂ” (ಏಕತೆಯ ಸುವರ್ಣ ಹೆಜ್ಜೆಗಳು) ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ಸ್ಮರಣಿಕೆಯು ಮಂಗಳೂರಿನ ಕ್ಯಾಥೋಲಿಕ್ ಸಮುದಾಯದ ಸಂಗತಿಗಳು, ಅಂಕಿ ಅಂಶಗಳು ಮತ್ತು ಸಾಧನೆಗಳನ್ನು ದಾಖಲಿಸಿದೆ.

“ಇಂದಿನ ಸಮಾಜದಲ್ಲಿ ಪ್ರವಾದಿಗಳಾಗಲು ಕರೆಯಲಾಗಿದೆ” ಎಂಬ ವಿಷಯದ ಕುರಿತು ಮಾತನಾಡಿದ ಆರ್ಚ್‍ಬಿಷಪ್ ಪೀಟರ್ ಮಚಾದೊ, “ಅನೈಕ್ಯತೆಯ ಭಾವ ಕ್ರಿಶ್ಚಿಯನ್ ಧರ್ಮದ ದೊಡ್ಡ ಕುಂದುಕೊರತೆಯಾಗಿದೆ, ಮೇಲಿನಿಂದ ಬರುವ ದೇವರ ಅನುಗ್ರಹವು ನಂಬಿಕೆಯಲ್ಲಿ ಐಕ್ಯವಾಗಿರಲು ಮತ್ತು ಸಂಪನ್ಮೂಲಗಳನ್ನು ಹುಡುಕಲು ಮತ್ತು ಸಮಾಜದ ಕೆಳಸ್ಥರದಲ್ಲಿ ಮತ್ತು ಆಂಚಿನಲ್ಲಿರುವವರನ್ನು ತಲುಪಲು ನಮಗೆ ಅನುವು ಮಾಡಿಕೊಡುತ್ತದೆ, ಎಂದರು.

ಮಂಗಳೂರಿನ ಕ್ರೈಸ್ತ ಸಮುದಾಯದ ಗತಕಾಲದ ವೀರರ ಅಮೋಘ ಸಾಧನೆಯನ್ನು ಸ್ಮರಿಸಿದ ಡಾ.ಫಿಲೋಮಿನಾ ಲೋಬೊ, ಮಂಗಳೂರು ಕೆಥೋಲಿಕ್ ಸಮುದಾಯ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರತಿಭಾನ್ವಿತ ಸಮುದಾಯವಾಗಿದೆ ಎಂದರು. ಅವರು ಹೇಳಿದರು, “ಇದು ಬಲವಾದ ಸಮುದಾಯವಾಗಿ ಬೆಳೆಯಲು ಸಾಕಷ್ಟು ಸಾಮಥ್ರ್ಯವನ್ನು ಹೊಂದಿದೆ. ಧರ್ಮಸಭೆ ಎಂದರೆ ಕೇವಲ ಪಾದ್ರಿಗಳು ಮತ್ತು ಕನ್ಯಾಸ್ತ್ರೀಯರು ಮಾತ್ರವಲ್ಲ. ಪ್ರತಿಯೊಬ್ಬ ನಿಷ್ಟಾವಂತವರಾಗಿದೆ. ಸಂಪನ್ಮೂಲಗಳು ಮತ್ತು ಪ್ರತಿಭೆಗಳನ್ನು ಸಮಾಜದ ಒಳಿತಿಗಾಗಿ ಬಳಸಿದಾಗ ಚರ್ಚ್ ಪೂರ್ಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಮಾಜಕ್ಕೆಉತ್ತಮ ನಾಯಕರನ್ನು ಸಿದ್ದ ಮಾಡಲು ಮತ್ತು ರೂಪಿಸಲು ಈ ಆಚರಣೆ ಕಣ್ಣು ತೆರೆದಿದೆ, ಎಂದರು.

ಬಿಷಪ್ ಅಲೋಶಿಯಸ್ ಪಾವ್ಲ್‍ ಡಿಸೋಜ ಅವರು ಸಮುದಾಯದ ಬೆಳವಣಿಗೆಯಲ್ಲಿ ಪಾಲನಾ ಪರಿಷತ್ತಿನ ಪಾತ್ರದ ಕುರಿತು ಮಾತನಾಡಿದರು. ಅವರು 50 ವರ್ಷಗಳಲ್ಲಿ ದಾಖಲಿಸಿದ ಗಮನಾರ್ಹ ಅಭಿವೃದ್ಧಿ ಮತ್ತು ಬೆಳವಣಿಗೆಯ ಬಗ್ಗೆ ಸಂತೋಷಪಟ್ಟರು, ದೇವರಅನುಗ್ರಹವು ಹೇರಳವಾಗಿದೆ ಮತ್ತು ಧರ್ಮಸಭೆಯಲ್ಲಿ ಶ್ರೀ ಸಾಮಾನ್ಯರ ಸಹಯೋಗ ಮತ್ತು ಬೆಂಬಲವು ಅಪಾರವಾಗಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಗಳಾಗಿವೆ’ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಅತಿ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, “ನಾವು ಈ ದೇಶದ ಪ್ರಜೆಗಳು. ನಮ್ಮ ಹಕ್ಕುಗಳನ್ನು ರಕ್ಷಿಸಲು ನಾವು ಧ್ವನಿ ಎತ್ತಬೇಕು ಮತ್ತು ಪ್ರತಿಕ್ರಿಯಿಸ ಬೇಕು.”ಆತ್ಮ ವಿಶ್ವಾಸ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡುವುದು ಒಗ್ಗಟ್ಟನ್ನು ಉತ್ತೇಜಿಸುವ ಪ್ರಮುಖ ಅಂಶಗಳಾಗಿವೆ’ ಎಂದು ಅವರು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಧರ್ಮಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಂಚಾಲಕರಾದ ನ್ಯಾಯವಾದಿ ಎಂ.ಪಿ ನೊರೊನ್ಹಾ ಸ್ವಾಗತಿಸಿ “ಈ ಆಚರಣೆಯ ಉದ್ದೇಶವು ಹಿಂದಿನ ಯಶಸ್ಸನ್ನು ಆಚರಿಸುವುದು ಮಾತ್ರವಲ್ಲದೆಎಲ್ಲಾಪಾಲನಾ ಪರಿಷತ್ ಸದಸ್ಯರು ಮತ್ತು ಸಮುದಾಯದ ಯುವಕರಲ್ಲಿ ಜಾಗೃತಿ ಮೂಡಿಸಲು ಮತ್ತು ನಾಯಕತ್ವದ ಗುಣವನ್ನು ಬೆಳೆಸುವ ಮೂಲಕ ಅವರನ್ನು ಸಮುದಾಯದ ನಾಯಕರನ್ನಾಗಿ ಮಾಡಲು ಯೋಜನೆ ರೂಪಿಸುವುದಕ್ಕೆಇಂದಿನ ಆಚರಣೆಯು ಒಂದು ಮೂಹೂರ್ತ” ಎಂದು ಅವರು ಹೇಳಿದರು.

ರಾಕ್ಣೊ ವಾರಪತ್ರಿಕೆಯ ನಿಯೋಜಿತ ಸಂಪಾದಕ ವಂದನೀಯ ರೂಪೇಶ್ ಮಾಡ್ತಾ ಮತ್ತು ಶ್ರೀಮತಿ ಅನಿತಾ ವೇಗಸ್‍ ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಪರಿಷತ್ತಿನ ಕಾರ್ಯದರ್ಶಿ ಡಾ|ಜಾನ್ ಡಿ ಸಿಲ್ವಾ ವಂದಿಸಿದರು.

ಆತೀ ವಂದನೀಯ ಶ್ರೇಷ್ಠ ಗುರು ಮ್ಯಾಕ್ಸಿಮ್ ಎಲ್ ನೊರೊನ್ಹಾ, ಭೋಜನದ ಆಶಿರ್ವಾದವನ್ನು ನೇರವೇರಿಸಿದರು. ಮೊದಲು ಪ್ರಾರ್ಥಿಸಿದರು.  

2000 ಕ್ಕೂ ಹೆಚ್ಚು ಶ್ರೀಸಾಮಾನ್ಯರು, ಯಾಜಕರು ಮತ್ತು ಕನ್ಯಾಸ್ರೀಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು..

ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ “ವಿಶ್ವ ಮಾನವ ಹಕ್ಕುಗಳ ದಿನಾಚರಣೆ”

ಕುಂದಾಪುರ: ಡಿಸೆಂಬರ್ 10ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ “ವಿಶ್ವ ಮಾನವ ಹಕ್ಕುಗಳ ದಿನಾಚರಣೆ” ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುಕ್ತಾಬಾಯಿ “ಮಾನವ ಹಕ್ಕುಗಳು ಮತ್ತು ಯುವಜನತೆ” ಎಂಬ ವಿಷಯದ ಕುರಿತು ಮಾತನಾಡಿ ಯಾವುದೇ ಕಾರಣಕ್ಕೂ ಕೆಟ್ಟ ಅಭ್ಯಾಸಗಳಿಂದ ದೂರ ಇದ್ದು ವಿದ್ಯಾರ್ಥಿಜೀವನವನ್ನು ಸಾಕಾರಗೊಳಿಸುವದರ ಜೊತೆಗೆ ಒಳ್ಳೆಯ ಅಧಿಕಾರಿಗಳಾಗಿ ಸಮಾಜದ ಋಣವನ್ನು ತೀರಿಸಲು ನಿಮ್ಮ ಪ್ರಯತ್ನ ಇರಬೇಕು. ಮಾದಕವಸ್ತು ವ್ಯಸನ , ಮೊಬೈಲ್ ಗೀಳಿಗೆ ಒಳಗಾಗಬೇಡಿ. ಅದು ನಮ್ಮ ಒಳ್ಳೆಯ ಹವ್ಯಾಸಗಳನ್ನು ನಾಶಮಾಡಿ ಸುಸ್ಥಿರ ಜೀವನವನ್ನು ಕಸಿದುಕೊಳ್ಳುವ ಮೊದಲೇ ಜಾಗೃತರಾಗಬೇಕು ಎಂದು ಹೇಳಿದರು. ಕೆಲವು ಮೂಲ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ನೆಹರು ಯುವ ಕೇಂದ್ರ ಉಡುಪಿ ಜಿಲ್ಲಾ ಯುವಜನ ಅಧಿಕಾರಿ ವಿಲ್ಫ್ರೆಡ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಮಾನವ ಹಕ್ಕುಗಳ ಕೋಶದ ಸಂಯೋಜಕರಾದ ಪ್ರೊ. ಗೋಪಾಲ್ ಕೆ ಸ್ವಾಗತಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ವಂದಿಸಿದರು.
ವಿದ್ಯಾರ್ಥಿನಿಯರಾದ ಚಂದ್ರಿಕಾ ಕಾರ್ಯಕ್ರಮ ನಿರ್ವಹಿಸಿ, ರೋಹಿಣಿ ಅತಿಥಿಗಳನ್ನು ಪರಿಚಯಿಸಿದರು.

ಸಂತ ಮೇರಿ ಮಹಾವಿದ್ಯಾಲಯ ಶಿರ್ವದಲ್ಲಿ ವೆಬ್ ಅಭಿವೃದ್ಧಿ ಕಾರ್ಯಗಾರ

ಶಿರ್ವ:ವೆಬ್ ಅಭಿವೃದ್ಧಿಯು ಇಂಟರ್ನೆಟ್ ಅಥವಾ ಇಂಟ್ರಾನೆಟ್ ಗಾಗಿ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಒಳಗೊಂಡಿರುವ ಕೆಲಸವಾಗಿದೆ. ವೆಬ್ ಅಭಿವೃದ್ಧಿಯು ಸರಳ ಪಠ್ಯದ ಏಕ ಸ್ಥಿರ ಪುಟವನ್ನು ಅಭಿವೃದ್ಧಿಪಡಿಸುವುದರಿಂದ ಹಿಡಿದು ಸಂಕೀರ್ಣ ವೆಬ್ ಅಪ್ಲಿಕೇಶನ್‌ಗಳು, ಎಲೆಕ್ಟ್ರಾನಿಕ್ ವ್ಯವಹಾರಗಳು ಮತ್ತು ಸಾಮಾಜಿಕ ನೆಟ್‌ವರ್ಕ್ ಸೇವೆಗಳವರೆಗೆ ಇರುತ್ತದೆ.
ವೆಬ್ ಅಭಿವೃದ್ಧಿಯು ಬೆಳೆಯುತ್ತಿದೆ ಮತ್ತು ಅದರ ಪರಿಧಿಯನ್ನು ವಿಸ್ತರಿಸುತ್ತಿದೆ.
ವೆಬ್ ಇಂಟರ್‌ಫೇಸ್‌ಗಳನ್ನು ಸ್ವಯಂಚಾಲಿತಗೊಳಿಸುವುದರಿಂದ ಹಿಡಿದು ಮಿಷನ್-ನಿರ್ಣಾಯಕ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವವರೆಗೆ, ವೆಬ್ ಅಭಿವೃದ್ಧಿಯು ಕನಸುಗಳನ್ನು ವಾಸ್ತವಿಕವಾಗಿ ಪರಿವರ್ತಿಸುತ್ತಿದೆ.ಕಂಪ್ಯೂಟರ್ ಪದವೀಧರರು ತಮ್ಮ ಕೌಶಲ್ಯಗಳನ್ನು ನಿಯಮಿತವಾಗಿ
ಅಭಿವೃದ್ಧಿ ಕೌಶಲ್ಯಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಲು ಉದ್ಯಮಕ್ಕೆ ಇದು ಅತ್ಯಂತ ಅಗತ್ಯವಾಗಿದೆ. ಇತ್ತೀಚಿನ ತಂತ್ರಜ್ಞಾನಗಳನ್ನು ಅಪ್ಡೇಟ್ ಮತ್ತು ಅಪ್‌ಗ್ರೇಡ್ ಆಗುವ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮದಲ್ಲಿ ವಿಫಲ ಉದ್ಯೋಗ ಅವಕಾಶಗಳಿವೆ ಎಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಮತ್ತು ಶ್ರೀ ಮದ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜ್, ಬಂಟ ಕಲ್ಲು ಸಂಯುಕ್ತವಾಗಿ ಒಡಂಬಡಿಕೆಯ ಅನ್ವಯ ಡಿಸೆಂಬರ್ 12 ಮತ್ತು 13 ರಂದು ಏರ್ಪಡಿಸಿದ ವೆಬ್ ಅಭಿವೃದ್ಧಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಬಂಟಕಲ್ಲಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಜೆ ಭಟ್ ಮಾತನಾಡಿದರು.

ಪ್ರಸ್ತುತ ಯುಗದಲ್ಲಿ ವಿದ್ಯಾರ್ಥಿಗಳು ಉದ್ಯಮದ ಗುಣಮಟ್ಟವನ್ನು ಪೂರೈಸುವ ಅಗತ್ಯವಿದೆ. ಕಾಲೇಜಿನ ವಿದ್ಯಾರ್ಥಿದೆಸೆಯಲ್ಲೇ ಉತ್ತಮ ಉದ್ಯೋಗವನ್ನು ಪಡೆಯಲು ಅವರು ಪ್ರಸ್ತುತ ಪ್ರವೃತ್ತಿಗಳನ್ನು ತಿಳಿದುಕೊಳ್ಳಬೇಕು ಮತ್ತು ಅವರ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು

ಬಂಟಕಲ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಸಹನಾ ಮತ್ತು ಸೌಮ್ಯ ಎಸ್ ರವರು ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರಾತೇಕ್ಷಿಕ ಮೂಲಕ ಕಾರ್ಯಗಾರ ಬಗ್ಗೆ ತರಬೇತಿ ನೀಡಿದರು.

ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಾಹಿತಿ ತಂತ್ರಜ್ಞಾನ ಕ್ಲಬ್ ನ ನಿರ್ದೇಶಕ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ರವರು ಕಾರ್ಯಗಾರದ ಮುಖ್ಯ ಉದ್ದೇಶ ಮತ್ತು ಪ್ರಾಮುಖ್ಯತೆ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಸುಷ್ಮಾ, ದಿವ್ಯಶ್ರೀ,ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು. ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳಾದ ರಕ್ಷಿತ್ ಎಚ್ ಕಲ್ಮಾಡಿ, ಸಂಪತ್ ಕುಮಾರ್, ಯಜ್ಞೇಶ್,ವಿಶ್ವಾಸ್ ಪ್ರಭು ಕಾಲೇಜಿನ ಅನುಪ್ ನಾಯಕ್, ಅಲಿಸ್ಟಾರ್ ಸುಜಯ್ ಡಿಸೋಜ ಸಹಕರಿಸಿದರು. ಕು. ಪದ್ಮಶ್ರೀ ಮತ್ತು ಬಳಗ ಪ್ರಾರ್ಥಿಸಿ, ಗೌರವ್ ಬಂಗೇರ ವಂದಿಸಿದರು. ವಿಕ್ಷಾ ಶೆಟ್ಟಿ ಸ್ವಾಗತಿಸಿ, ರಿತ ರಿಷಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಕುಸ್ತಿ ಪಂದ್ಯಾಟ:ಪುರುಷ/ಮಹಿಳಾ ವಿಭಾಗಳಲ್ಲಿ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಪುರುಷರ ಮತ್ತು ಮಹಿಳಾ ವಿಭಾಗದಗೆ ಆಳ್ವಾಸ್ ಕಾಲೇಜು ಮೂಡುಬಿದಿರೆ ಸಮಗ್ರ ಪ್ರಶಸ್ತಿಯೊಂದಿಗೆ ಪ್ರಥಮ ಸ್ಥಾನ ಪಡೆಯಿತು.
ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಮಂಗಳೂರಿನ ಎಸ್.ಜಿ.ಸಿ ಕಾಲೇಜು, ತೃತೀಯ ಸ್ಥಾನವನ್ನು ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು ಮತ್ತು ಚತುರ್ಥ ಸ್ಥಾನವನ್ನು ಮಂಗಳೂರಿನ ಕಾರ್ ಸ್ಟ್ರೀಟ್ ನ ಜಿ.ಎಫ್.ಜಿ.ಸಿ ಕಾಲೇಜು ಪಡೆಯಿತು.


ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ವಿಶ್ವವಿದ್ಯಾಲಯ ಕಾಲೇಜು ಮಂಗಳೂರು, ತೃತೀಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ, ಚತುರ್ಥ ಸ್ಥಾನವನ್ನು ಉಜಿರೆಯ ಎಸ್.ಡಿ.ಎಂ ಕಾಲೇಜು ಪಡೆಯಿತು.
ಬಹುಮಾನ ವಿತರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪೋಲಿಸ್ ಅಧಿಕಾರಿ ಆದರ್ಶ್ ಕುಮಾರ್ ಶೆಟ್ಟಿ, ವಕ್ವಾಡಿಯ ಗುರು ಹನುಮ ಕೇಟರಿಂಗ್ ಇದರ ಭರತ್ ಕುಮಾರ್ ಶೆಟ್ಟಿ, ಕಾಂತಾರ ಸಿನಿಮಾ ಖ್ಯಾತಿಯ ರಕ್ಷಿತ್ ಶೆಟ್ಟಿ, ವೀಕ್ಷಕರಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಡಾ. ಹರಿದಾಸ ಕೂಳೂರು, ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಕುಸ್ತಿ ಸಂಘಟನೆಯಿಂದ ಕಾಲೇಜಿನ ದೈಹಿಕ ನಿರ್ದೇಶಕ ಶಂಕರನಾರಾಯಣ ಅವರನ್ನು ಸನ್ಮಾನಿಸಲಾಯಿತು.