ಕೆರೆಕಟ್ಟೆ ಸಂತ ಅಂತೋನಿಯವರ ವಾರ್ಷಿಕ ಮಹಾಹಬ್ಬ : ಬಿಶಪರಿಂದ ಅನಾಥಲಯಕ್ಕೆ ಶಿಲಾನ್ಯಾಸ

ಕುಂದಾಪುರ, ಜೂ.13: ಕುಂದಾಪುರ ವಲಯದ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಜೊತೆಗೆ ಸಂತ ಅಂತೋನಿಯವರಿಗೆ ಅನಾಥರು, ಬಡವರು ನಿರಾಶ್ರಿತರೆಂದರೆ ಬಹಳ ಪ್ರೀತಿ ಹಾಗಾಗಿ ಇಲ್ಲಿ ಅವರ ಹೆಸರಿನಲ್ಲಿ ಅನಾಥಲಯ ನಿರ್ಮಿಸಲು ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರ ಯೋಜನೆ ಹಮ್ಮಿಕೊಂಡಿದ್ದು ಇದರ ಶಿಲಾನ್ಯಾಸವನ್ನು ಬಿಶಪರು ಪ್ರಾರ್ಥನೆ ಮತ್ತು ಆಶಿರ್ವವಚನೇಯ ಮೂಲಕ ನೇರವೆರಿಸಿದರು.
ಉಡುಪಿ ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ ಅ|ವಂ|ಮೊನ್ಸಿಂಜೆರ್ ಫರ್ಡಿನಂಡ್ ಗೊನ್ಸಾಲ್ವಿಸ್ ದೇವರ ವಾಕ್ಯ ಪಟಿಸಿ ತಮ್ಮ ಪ್ರವಚನದಲ್ಲಿ “ಸಂತ ಅಂತೋನಿ ಇಡೀ ಪ್ರಪಂಚದಲ್ಲಿ ಅವರು ಪವಾಡಗಳನ್ನು ಮಾಡುತ್ತಾ ಇದ್ದಾರೆ. ಅವರಿಂದ ಭಕ್ತಾಧಿಗಳು ಅನೇಕ ವರಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರದೇಶವು ಬಹಳ ವರ್ಷಗಳ ಹಿಂದೆ ಧುರ್ಗಮ ಪ್ರದೇಶವಾಗಿದ್ದು, ಜನರು ಇಲ್ಲಿ ಸಂಚಾರ ಮಾಡುವುದಕ್ಕೆ ಭಯ ಪಡುತಿದ್ದರು, ಇಲ್ಲಿ ಸಂತ ಅಂತೋನಿಯವರ ದೇವಾಲಯ ನಿರ್ಮಾಣವಾದ ಮೇಲೆ ಇಲ್ಲಿ ಜನಸಂಚಾರ ಭಯವಿಲ್ಲದೆ ಸಾಗಿತು. ಈ ಪುಣ್ಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚುತ್ತಾ ಇದೆ. ಇಲ್ಲಿನ ಸಂತ ಅಂತೋನಿಯವರ ಮೂಲಕ ಹಲವಾರು ಭಕ್ತಾಧಿಗಳು, ಉಪಕಾರವನ್ನು ಪಡೆದುಕೊಂಡಿದ್ದಾರೆ, ಇಲ್ಲಿ ಅನೇಕ ಪವಾಡಗಳು ನಡೆದಿವೆ” ಎಂದು ತಿಳಿಸುತ್ತಾ ಅದರಲ್ಲಿ ಕೆಲವು ಪವಾಡಗಳನ್ನು ವಿವರಿಸಿ “ಇದೀಗ ಇಲ್ಲಿ ಅನಾಥ ದೀನದಲಿತರಿಗಾಗಿ, ಅನಾಥಶ್ರಮವನ್ನು ನಿರ್ಮಿಸಲಾಗುವುದು. ಸಂತ ಅಂತೋನಿಯವರು ದೀನ ದಲಿತರಬಗ್ಗೆ ಅನಾಥರ ಬಗ್ಗೆ ಕಾಳಜಿ ಇದ್ದು ಅವರು ದಾನಿಗಳಾಗಿದ್ದರು, ಅವರಂತೆ ನಾವು ದಾನಿಗಳಾಗಿ ಈ ಮಹಾನ ಯೋಜನೆ ಪೂರ್ಣವಾಗಲು ಸಹಕರಿಸೋಣ. ದೀನ ದಲಿತರಿಗೆ, ಬಡವರಿಗೆ, ಸಹಾಯ ನೀಡುವರೊ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡುತ್ತಾರೊ, ಹಸಿದವರಿಗೆ ಆಹಾರ ಕೊಡುತ್ತಾರೊ, ಬಾಯಾರಿದವರಿಗೆ ನೀರು ಕೊಡುತ್ತಾರೊ, ಅದು ನನಗೆ ಮಾಡಿದಂತೆ ಅದಕ್ಕೆ ನಿಮಗೆ ಸ್ವರ್ಗರಾಜ್ಯ ದೊರಕುವುದು ಎಂದು ಯೇಸು ತಿಳಿಸಿದ್ದಾರೆ, ಅದರಂತೆ ನಾವು ನೆಡೆದು ಸ್ವರ್ಗರಾಜ್ಯವನ್ನು ಪಡೆಯೋಣ” ಎಂದು ಸಂದೇಶ ನೀಡಿದರು.
ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ “ಸಂತ ಅಂತೋನಿಯವರು ಪವಾಡ ಪುರುಷರಾಗಿದ್ದು, ಅವರು ಬಡವರನ್ನು ಅನಾಥರನ್ನು, ರೋಗಿಗಳನ್ನು ಬಹಳವಾಗಿ ಪ್ರೀತಿಸುತಿದ್ದರು. ಅವರ ಹೆಸರಿನಲ್ಲಿ ಅವರ ನಡೆಯಂತೆ ಅನಾಥಶ್ರಾಲಯವನ್ನು ನಿರ್ಮಿಸಲು ಹೊರಟಿದ್ದೇವೆ. ನಿಮ್ಮ ಸಹಕಾರ ಮತ್ತು ಸಂತ ಅಂತೋನಿಯವರ ಆಶಿರ್ವಾದದಿಂದ ಬರುವ ವರ್ಷ ಇದೇ ದಿನದಂದು ಲೋಕಾರ್ಪಣೆಗೊಳ್ಳಲಿ” ಎಂದು ಹರಸಿದರು. ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರು ಶುಭಾಶಯಗಳನ್ನು ಅರ್ಪಿಸಿದರು. ದಾನಿಗಳಿಗೆ, ಬಲಿಪೂಜೆ ನಿವೇದನೆ ಮಾಡಿಕೊಂಡವರಿಗೆ ಮುಂಬತ್ತಿ ನೀಡಿ ಗೌರವಿಸಲಾಯಿತು. ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ವಾರ್ಷಿಕ ಮಹಾಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯದ, ಹೊರ ವಲಯದ ಹಲವಾರು ಧರ್ಮಗುರುಗಳು ಮತ್ತು ಅತಿಥಿ ಧರ್ಮಗುರುಗಳು ಭಾಗಿಯಾಗಿದ್ದು ಭಕ್ತಾಧಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಿಯುಸ್ ನಗರ ಚರ್ಚಿನ ಗಾಯನ ಮಂಡಳಿ ಗಾಯನಗಳನ್ನು ಹಾಡಿತು. ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ವಂದನೆಗಳನ್ನು ಸಲ್ಲಿಸಿದರು.

ಕುಂದಾಪುರ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಬಿಶಪ್ ಜೆರಾಲ್ಡ್ ಲೋಬೊರವರ ಭೇಟಿ


ಜೂ.13: ಕುಂದಾಪುರ ಹೋಲಿ ರೋಜರಿ ಚರ್ಚಿನ ಅಧೀನದಲ್ಲಿರುವ ಸಂತ ಮೇರಿಸ್ ಸಮೂಹ ಶಿಕ್ಶಣ ಸಂಸ್ಥೆಯ ಶಾಲೆಗಳಾದ ಸಂತ ಮೇರಿಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಹೋಲಿ ರೋe ರಿ ಆಂಗ್ಲಾ ಮಾದ್ಯಮ ಶಾಲೆ ಮತ್ತು ಸಂತ ಮೇರಿಸ್ ಪದವಿ ಪೂ.ಕಾಲೇಜಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಜೂನ್ 12 ರಂದು ಭೇಟಿಯಾಗಿ ಸಭೆ ನೆಡೆಸಿದರು.
“ಶಿಕ್ಷಣ ಅಂದರೆ ಮಕ್ಕಳ ಸರ್ವಾಂಗೀಣ ಅಭಿವ್ರದ್ದಿ. ವಿದ್ಯಾರ್ಥಿಗಳು ಮಾನಸಿಕ ಬೆಳವಣಿಗೆಯನ್ನು ಪಡೆದುಕೊಳ್ಳಬೇಕು, ದೈಹಿಕವಾಗಿ ಸುಧ್ರಡವಾಗಿರಬೇಕು, ಆತ್ಮವನ್ನು ಪರಿಶುದ್ದವಾಗಿಟ್ಟುಕೊಳ್ಳಬೇಕು, ಇಂದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತದೆ, ಆದರೆ ಮೌಲ್ಯ ಭರಿತ ಶಿಕ್ಷಣ ಲಭಿಸುವುದಿಲ್ಲ, ನಮ್ಮಲ್ಲಿ ಕ್ರೈಸ್ತ ಮಕ್ಕಳಿಗೆ ಕ್ರೈಸ್ತ ಶಿಕ್ಷಣ ಕೊಡಲಾಗುತ್ತೆ. ಕ್ರೈಸ್ತರೇತರ ಮಕ್ಕಳಿಗೆ ನೀತಿ ಶಿಕ್ಷಣವನ್ನು ನೀಡಲಾಗುತ್ತೆ.” ಎಂದು ತಿಳಿಸುತ್ತಾ “ನಾವು ಪರರ ಬಗೆ ಒಳಿತನ್ನೆ ಯೋಚಿಸಬೇಕು, ಅಂತೇಯೆ ಒಳಿತನ್ನೆ ಮಾಡಬೇಕು. ಪರರ ಬಗೆ ಒಳಿತನ್ನೆ ಯೋಚಿಸುತ್ತಾ, ಒಳಿತನ್ನೆ ಮಾಡಬೇಕು, ಆವಾಗ ದೇವರ ಆಶಿರ್ವಾದ ನಮ್ಮ ಮೇಲೆ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಬೇಕು ಎಂದು ಚಿಂತಿಸದರೆ ಮಾತ್ರ ಸಾಲದು, ಅದಕ್ಕೆ ಸತತವಾದ ಪ್ರಯತ್ನ ಪಡಬೇಕು. ಶಿಕ್ಷಕರೂ ಕೂಡ ಸಮಾಜದಲ್ಲಾಗುವ ಬದಲಾವಣೆಗಳನ್ನು ಗಮನಿಸಬೇಕು ಮತ್ತು ಹೊಸತನದ ಬಗ್ಗೆ ಓದಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು” ಎಂದು ಅವರು ಸಂದೇಶ ನೀಡಿದರು.
ಬಿಶಪರಿಗೆ ತಿಲಕವಿಟ್ಟು ಹೂವುಗಳನ್ನು ಅರ್ಪಿಸಿ ಆರತಿ ಎತ್ತಿ ವಿದ್ಯಾರ್ಥಿಗಳು ಬ್ಯಾಂಡು ವಾದನಗಳಿಂದ ಸಾಂಪ್ರಾದಾಯಕವಾಗಿ ಹಾಗೂ ಎನ್.ಸಿ.ಸಿ. ಕೇಡಟಗಳಿಂದ ಗೌರವಪೂರ್ವಕವಾಗಿ ಸ್ವಾಗತಿಸಿದರು


ಈ ಸಂದರ್ಭದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ,ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಡೋರಾ ಡಿಸೋಜಾ, ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅಸುಂಪ್ತಾ ಲೋಬೊ, ಹೋಲಿ ರೋಜಾರೀ ಆಂಗ್ಲಾ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪದವಿ ಪೂ.ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಎಮ್.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಉಪಸ್ಥಿತರಿದ್ದರು.
ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸಿದರು. ಪ್ರಾದ್ಯಪಕ ನಾಗರಾಜ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.

ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್‍ನಿಂದ ಜೂನ್ 19 ರಂದು ಸಹಾಯಧನ ವಿತರಣೆ


ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ.) ನಿಂದ ಪ್ರಥಮ ಪಿಯುಸಿ ಹಾಗೂ ಪ್ರಥಮ ಪದವಿ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಸಮಾರಂಭ ಜೂನ್ 19 ರಂದು ಸೋಮವಾರ ಕುಂದಾಪುರ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಸಮಾರಂಭ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಮಾಡಲಿದ್ದಾರೆ. ಖ್ಯಾತ ಶಿಕ್ಷಣ ತಜ್ಞ ನಿವೃತ್ತ ಪ್ರಾಂಶುಪಾಲ ಡಾ| ಎಂ. ಮಹಾಬಲೇಶ್ವರ ರಾವ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಸಾಧಕ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಲಾಗುತ್ತದೆ.
ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಬಿ. ಪ್ರಕಾಶ್ಚಂದ್ರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಹಾಯಧನಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಅಂಚೆ ಕಾರ್ಡು ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಪತ್ರದೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ತಿಳಿಸಲಾಗಿದೆ.
ಸಮಾರಂಭದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳ ಪೋಷಕರು, ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿನಿಧಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಜೀವನೋಪಾಯಕ್ಕೆ ದಾನಿ ಎಸ್.ಆರ್.ಧರ್ಮೇಶರಿಂದ ಸೈಕಲ್ ಕೊಡುಗೆ

ಶ್ರೀನಿವಾಸಪುರ ವಿಧಾನಸಭಾ ಕ್ಷೆತ್ರ ಹೊಸ ಮಟ್ನಹಳ್ಳಿ ಗ್ರಾಮದ ಮಡಿವಾಳ ವೃತ್ತಿಯಿಂದ ಜೀವನ ಮಾಡುವ ಬಸವರಾಜ್ ಅವರಿಗೆ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೊಸ ಸೈಕಲ್ ಕೊಡುಗೆಯಾಗಿ ನೀಡಿದರು.

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು:ಆನಂದ ಸುವರ್ಣ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹೇಳಿದರು.
ಪಟ್ಟಣದ ಕನಕ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸುಜ್ಞಾನ ನಿಧಿ ಶಿಷ್ಯವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ 47 ಸಾವಿರ ವಿದ್ಯಾರ್ಥಿಗಳಿಗೆ ರೂ.60 ಕೋಟಿ ಸುಜ್ಞಾನ ನಿಧಿ ಶಿಷ್ಯ ವೇತನ ನೀಡಲಾಗಿದೆ. ತಾಲ್ಲೂಕಿನಲ್ಲಿ ವೃತ್ತಿ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ 187 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಮಾತನಾಡಿ, ಒಂದು ಸರ್ಕಾರ ಮಾಡುವಂಥ ಅಭಿವೃದ್ಧಿ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡುತ್ತಿದ್ದಾರೆ. ಅವರ ಪಾರದರ್ಶಕ ಹಾಗೂ ಸಮಾಜ ಮುಖಿ ಚಟುವಟಿಕೆ ದೇಶಕ್ಕೆ ಮಾದರಿಯಾಗಿದೆ. ಫಲಾನುಭವಿಗಳು ಸೌಲಭ್ಯ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ಹೇಳಿದರು.
ಭೈರವೇಶ್ವರ ವಿದ್ಯಾನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ, ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಾಯಾ ಬಾಲಚಂದ್ರ ಮಾತನಾಡಿದರು. ಪೋಷಕರೊಂದಿಗೆ ಆಗಮಿಸಿದ್ದ 187 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರ ವಿತರಿಸಲಾಯಿತು.
ಯೋಜನೆ ಜಿಲ್ಲಾ ನಿರ್ದೇಶಕ ಪದ್ಮಯ್ಯ, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಗೊಪಾಲಕೃಷ್ಣ, ಪುಷ್ಪರಾಜ್ ಇದ್ದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ನಿವೃತ್ತಿ ಸಿಬ್ಬಂದಿ ಮತ್ತು ಮ್ರತ ಸದಸ್ಯರಿಗೆ ಪ್ರೋತ್ಸಾಹ ಧನ ಚೆಕ್‌ಗಳ ವಿತರಣೆ

ಶ್ರೀನಿವಾಸಪುರ :  ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. , ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಯವರ ನಿವೃತ್ತಿ ಪ್ರೋತ್ಸಾಹ ಧನ ಚೆಕ್‌ಗಳು ಮತ್ತು ಮೃತಪಟ್ಟ ಸದಸ್ಯರ ಕೋಮುಲ್ ವಿಮಾ ಚೆಕ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಎನ್.ಹನುಮೇಶ್ ರವರು ಮಾತನಾಡಿ , ನಿವೃತ್ತಿ ಹೊಂದಿದ ಎಲ್ಲಾ ಸಿಬ್ಬಂದಿಗಳನ್ನು ಸನ್ಮಾನಿಸಿ , ಸಂಘಗಳಿಗೆ ನೀಡಿದ ನಿರಂತರ ಸೇವೆಯನ್ನು ಸ್ಮರಿಸುತ್ತಾ ಸಿಬ್ಬಂದಿಯವರ ನಿವೃತ್ತಿ ಪ್ರೋತ್ಸಾಹ ಧನ ಚೆಕ್‌ಗಳು ಮೊತ್ತ 12,25,000 / – ರೂಗಳು ಹಾಗೂ ಮೃತಪಟ್ಟ ಸದಸ್ಯರ ಕೋಮುಲ್ ವಿಮಾ ಚೆಕ್ ರೂ .25,000 / ಗಳ ಚೆಕ್‌ಗಳನ್ನು ವಿತರಿಸಿದರು.

 ಮತ್ತು ಗಫಾರ್ ಖಾನ್ ಮೊಹಲ್ಲಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಕ.ಹಾ.ಮ. ಸಂಜೀವಿನಿ ಯೋಜನೆಯಡಿಯಲ್ಲಿ Automatic Milk Collection Unit with Milk Analyser ಘಟಕ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿನಲ್ಲಿರುವ ಫ್ಯಾಟ್ ಅಂಶವನ್ನು ಪರೀಕ್ಷಿಸಲು ಎಲೆಕ್ಟಿಕ್ ಗರ್ಭರ್ ಯಂತ್ರಗಳನ್ನು ಸಬ್ಸಿಡಿ ಧರದಲ್ಲಿ ವಿತರಿಸಿದರು . 

ಪ್ರಭಾರೆ ಉಪ ವ್ಯವಸ್ಥಾಪಕರಾದ ಕೆ.ಎಂ.ಮುನಿರಾಜು ರವರು ಮಾತನಾಡಿ , ಸಂಘಗಳಲ್ಲಿ ವೈಜ್ಞಾನಿಕವಾಗಿ ಹಾಲಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ , ಪ್ಯಾಟ್ ಮತ್ತು ಎಸ್.ಎನ್.ಎಫ್ . ಆಧಾರದ ಮೇಲೆ ಎಲ್ಲಾ ಯಂತ್ರಗಳನ್ನು ಬಳಸಿಕೊಂಡು ರೈತರಿಗೆ ಹೆಚ್ಚಿನ ಧರ ನೀಡಿದ್ದಲ್ಲಿ ರೈತರಿಗೆ ಸಂಘಗಳ ಮೇಲೆ ನಂಬಿಕೆ ಹೆಚ್ಚಾಗಿ ಉತ್ತಮ ಗುಣಮಟ್ಟ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ , ಸಹಕಾರ ಸಂಘಗಳು ಅಭಿವೃದ್ಧಿಯಾಗುತ್ತದೆ ಹಾಗೂ ಖಾಸಗಿ ಡೇರಿಗಳ ಹಾವಳಿ ಸಹ ಕಡಿಮೆ ಆಗುವುದೆಂದು ತಿಳಿಸಿದರು . 

ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ನಿರ್ದೇಶಕರು ದ್ವಾರಸಂದ್ರ  ಸಿ.ಮುನಿವೆಂಕಟಪ್ಪ , ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆಲಂಬಗಿರಿ ಅಯ್ಯಪ್ಪ ರವರು , ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕೇತಗಾನಹಳ್ಳಿ  ನಾಗರಾಜ್‌ರವರು , ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆ.ಕೆ.ಮಂಜು, ಶ್ರೀನಿವಾಸಪುರ ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ , ಎನ್.ಶಂಕರ್ , ಪಿ.ಕೆ.ನರಸಿಂಹರಾಜು , ಕೆ.ಪಿ.ಶ್ವೇತ , ಜಿ.ಎನ್.ಗೋಪಾಲಕೃಷ್ಣಾರೆಡ್ಡಿ ಹಾಗೂ ಶಿಬಿರದ ಸಿಬ್ಬಂದಿಯವರು ಮತ್ತು ಸಂಘದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು , ಸಿಬ್ಬಂದಿಯವರು ಮತ್ತು ಫಲಾನುಭವಿಗಳು ಹಾಜರಿದ್ದರು.

ಗಲ್ಫಾಂತ್ಲ್ಯಾ ಕೊಂಕಣಿ ವಾವ್ರಾಚೆರ್ ಏಕ್ ಪರಿಸಂವಾದ್

ಜ್ಯೂನ್ 10: ದೀಸ್ಪಡ್ತೊ ಗ್ರಾಸ್ ಜೊಡುಂಕ್ ಪರ್ಗಾಂವಾಕ್ ವಚುನ್ ಸಯ್ತ್ ಕೊಂಕಣಿ ಬಾವ್ಟೊ ಉಭೊ ಕರುನ್ ಕೊಂಕಣಿ ವಾವ್ರ್ ಕರುನ್ ಆಯಿಲ್ಲ್ಯಾ, ಪ್ರತ್ಯೇಕ್ ಜಾವ್ನ್ ಗಲ್ಫಾಂತ್ ಜಾಲ್ಲ್ಯಾ ಕೊಂಕಣಿ ವಾವ್ರಾಚಿ ಎಕಾಮೆಕಾ ಒಳೊಕ್ ಕರುನ್ ದಿಂವ್ಚ್ಯಾ ಇರಾದ್ಯಾನ್ ಆಶಾವಾದಿ ಪ್ರಕಾಶನಾನ್ ಸನ್ವಾರಾ, ಜ್ಯೂನ್ ೧೦ ತಾರಿಕೆರ್ ಏಕ್ ಡಿಜಿಟಲ್ ಪರಿಸಂವಾದ್ ಆಸಾ ಕೆಲೆಂ. ಅಖಿಲ್ ಭಾರತೀಯ್ ಕೊಂಕಣಿ ಪರಿಶದೆಚಿ ಆಧ್ಲಿ ಅಧ್ಯಕ್ಷ್ ಬಾಯ್ ಉಶಾ ರಾಣೆನ್ ಉಗ್ತಾವಣ್ ಉಲವ್ಪಾಂತ್ ’ವಿದೇಶಾಂತ್ ಕೊಂಕಣಿ ವಾವ್ರ್ ಕೆಲ್ಲೊ ವಿವರ್ ಕೊಂಕಣಿಂತ್ ಎಕಾ ಪುಸ್ತಕಾರುಪಾರ್ ಪರ್ಗಟುನ್ ಯೆಂವ್ಕ್ ಜಾಯ್ ಆನಿ ಆಮ್ಚ್ಯಾ ಲೊಕಾಕ್ ತ್ಯಾ ವಾವ್ರಾಚಿ ಮಾಹೆತ್ ಮೆಳುಂಕ್ ಜಾಯ್’ ಮ್ಹಣಾಲಿ. ಮುಖೆಲ್ ಸಯ್ರೊ ದೊ|ಆಸ್ಟಿನ್ ಪ್ರಭುನ್ ಆಮಿ ಎಕಾ ಸಾಂಕ್ಳಿಚ್ಯಾ ಗಾಂಚಿಪರಿಂ ವೆಗ್-ವೆಗಳ್ಯಾ ಲಿಪಿಚ್ಯಾಂನಿ ಸಾಂಗಾತಾ ಮೆಳುನ್ ಎಕಾ ಮನಾನ್ ಕೊಂಕಣಿ ವಾವ್ರ್ ಕರುಂಕ್ ಜಾಯ್ ಮ್ಹಣಾಲೊ. ಉತ್ತರ್ ಕರ್ನಾಟಕಾಚೊ ನಾಮ್ನೆಚೊ ತಿಯಾತ್ರಿಸ್ತ್ ಸ್ಯಾಮ್ಸನ್ ಲೊಪೆಜಾನ್ ಕೊಂಕಣಿ ಕಾಂತಾರಾಂ, ತಿಯಾತ್ರಾಂ ಮುಖಾಂತ್ರ್ ಕಶೆಂ ಹೆರ್ ಪ್ರಾಂತ್ಯಾಚ್ಯಾ ಕೊಂಕಣಿ ಲೊಕಾಂಕ್ ಮೆಳುಂಕ್ ಅಪ್ಣಾಕ್ ಆವ್ಕಾಸ್ ಲಾಭ್ಲೊ ಅಶೆಂಚ್ ಜಾಯ್ತೆಂ ಕೊಂಕಣಿ ತಾಲೆಂತ್ ಮುಕಾರ್ ಯೆವ್ಪಾಕ್ ಆವ್ಕಾಸ್ ಕರುಂಕ್ ಅಸಲಿಂ ವೆಬಿನಾರಾಂ ಸಕುಂದಿತ್ ಮ್ಹಣಾಲೊ. ಧೆಂಪೆ ಕೊಲೆಜಿಚ್ಯಾ ಕೊಂಕಣಿ ವಿಭಾಗಾಚಿ ಮುಖೆಸ್ತ್ ಬಾಯ್ ಅಂಜು ಸಾಖರ್‌ದಾಂಡೆನ್ ಅಪ್ಲ್ಯಾ ಉಲವ್ಪಾಂತ್ ಬಾಬ್ ದಾಮೋದರ್ ಮಾವ್ಜೊ, ಬಾಯ್ ಹೇಮಾ ನಾಯ್ಕ್, ಬಾಬ್ ಎಡ್ವಿನ್ ಜೆ.ಎಫ್.ಡಿ’ಸೋಜ್ ಆನಿ ಹೆರಾಂಚ್ಯಾ ಕಾದಂಬರೆಂನಿ ಗಲ್ಫಾಚೆಂ ಜಿವಿತ್ ಪಿಂತ್ರಾಯಿಲ್ಲೆಂ ಆಮಿ ಅಧ್ಯಯನ್ ಕರುನ್ ಆಯ್ಲ್ಯಾಂವ್ ಪುಣ್ ಪಯ್ಲೆಪಾವ್ಟಿಂ ಆಮ್ಕಾಂ ಹಿ ಸಂಧಿ ಮೆಳ್ಳಿ – ಗಲ್ಫಾಂತ್ಲ್ಯಾ ಕೊಂಕಣಿ ವಾವ್ರಾವಿಶಿಂ ಸಮ್ಜುಂಕ್, ಅಸಲಿಂ ಕಾಮಾಂ ಫುಡೆಂಯ್ ಜಾಂವ್ಕ್ ಜಾಯ್ ಮ್ಹಣಾಲಿ.

ಪರಿಸಂವಾದಾಚ್ಯಾ ಪಯ್ಲ್ಯಾ ವಾಂಟ್ಯಾಂತ್ ಸ್ಮಿತಾ ಶೆಣಯ್ ಹಿಣೆಂ ’ಪರ್ಗಾಂವ್ಚೊ ವಾವ್ರ್ ಅಮೊಲಿಕ್, ಪುಣ್ ಆಮಿ ಕೆದಿಂಚ್ ತ್ಯಾ ವಾವ್ರಾಕ್ ಮೋಲ್ ದಿಲ್ಲೆಂ ನಾ, ಸಾಮಾಜಿಕ್ ಸ್ಥಿತಿಯಂತರಾಂತ್ ಕೊಂಕಣಿ ಲೋಕ್ ಭಾಶಿಕ್/ಧರ್ಮಿಕ್ ಬಂಧಡೆಕ್ ಲಾಗುನ್ ಗೊಂಯಾಂ ಸೊಡುನ್ ಲಾಗ್ಶಿಲ್ಯಾ ರಾಜ್ಯಾಂನಿ ವಚುನ್ ಜಿಯೆಂವ್ಕ್ ಲಾಗ್ಲೊ ಆನಿ ತೆದ್ನಾಂ ತಾಣಿಂ ತಾಂಚ್ಯಾ ಕುಟ್ಮಾಸವೆಂ ಫಕತ್ ದೊನಾಂಕ್ ಅಪ್ಣಾಸವೆಂ ವ್ಹೆಲೆಂ; ಅಪ್ಲೊ ದೇವ್ ಆನಿ ಅಪ್ಲಿ ಆವಯ್ ಭಾಸ್. ತಿತ್ಲೆಂಚ್ ನ್ಹಯ್, ಅಪ್ಲ್ಯಾ ಆವಯ್ ಭಾಶೆಚೊ ಮೋಗ್ ಕರುನ್ ತಿಚೊ ಪೋಸ್ ಸಯ್ತ್ ಕೆಲೊ’ ಮ್ಹಣಾಲಿ. ಶೈಲೇಂದ್ರ ಮೆಹ್ತಾನ್ ಸಯ್ರ್ಯಾಂಚಿ ಒಳೊಕ್ ಕರುನ್ ದಿತಚ್ ಪರಿಸಂವಾದಾಚಿ ಸುರ್ವಾತ್ ಕರುನ್ ಹೇಮಾಚಾರ್ಯನ್ ಸತ್ತರಾವ್ಯಾ ದಾಕ್ಡ್ಯಾಥಾವ್ನ್ ಮೊಟ್ವಿ ಒಳೊಕ್ ಕರುನ್ ದಿವುನ್ ಉಪ್ರಾಂತ್ ದಾಯ್ಜಿದುಭಾಯ್ ಸಂಘಟನಾಚ್ಯಾ ವಾವ್ರಾವಿಶಿಂ ತಾಂಚ್ಯಾ ದಿಶ್ಟಾವ್ಯಾವಿಶಿಂ, ತಾಂಚ್ಯಾ ಸುರ್ವಿಲ್ಲ್ಯಾ ವಾವ್ರಾಂತ್ ಫುಡ್ ಕರುಂಕ್ ಮೆಳ್‌ಲ್ಲ್ಯಾ ಅಡ್ಚಣೆವಿಶಿಂ ಸವಿಸ್ತಾರ್ ರಿತಿನ್ ಉಲವ್ನ್, ಆಜ್ ಕೊಂಕಣಿಂತ್ ದಾಯ್ಜಿದುಭಯ್ ಏಕ್ ವ್ಹಡ್ ರೂಕ್ ಜಾವ್ನ್ ಮಂಗ್ಳುರಾಂತ್ ಸಯ್ತ್ ದಾಯ್ಜಿದುಭಾಯ್ ಸಂಘಟನಾಚೆ ಸಾಂದೆ ಗಾಂವಾರ್ ಗಾಂವ್ ವಚುನ್ ’ಯೆಯಾ ಆಮಿ ಕೊಂಕಣಿ ಉಲವ್ಯಾಂ’ ಮ್ಹಳ್ಳಿಂ ಕಾರ್ಯಿಂ ಚಲವ್ನ್ ಆಸಾತ್ ಮ್ಹಣಾಲೊ.

ತ್ಯೇ ಉಪ್ರಾಂತ್ ಕ್ಲೆರೆನ್ಸ್ ಕೈಕಂಬಾನ್ ಮಸ್ಕತಾಂತ್ಲ್ಯಾ ಬರ್ಪಿ ಮಿತ್ರಾಚ್ಯಾ ಸವಿಸ್ತಾರ್ ವಾವ್ರಾವಿಶಿಂ ಉಲವ್ನ್, ಮಸ್ಕತಾಂತ್ಲ್ಯಾ ಸಾಹಿತಿಕ್ ತಾಲೆಂತಾಂನಿ ಅಪ್ಲಿಂ ತಾಲೆಂತಾಂ ಫಕತ್ ಮಸ್ಕತಾಕ್ ಮಾತ್ರ್ ಸೀಮಿತ್ ಕರುನ್ ದವರಿನಾಸ್ತಾಂ, ದಾಯ್ಜಿದುಭಯ್.ಕೊಮ್, ಮಾಯ್‍ಭಾಸ್.ಕೊಮ್, ದಾಯ್ಜ್.ಕೊಮ್ ಅಶೆಂ ಸರ್ವ್ ನೇಮಾಳಿಂ ತಶೆಂಚ್ ಜಾಳಿಜಾಗ್ಯಾಂಕ್ ತೆಂಕೊ ದಿವುನ್ ಆಯ್ಲೆಂ ಮ್ಹಣಾಲೊ. ಖತಾರಾಂತ್ ಪಾಟ್ಲ್ಯಾ ಪಂಚ್ವೀಸ್-ತೀಸ್ ವರ್ಸಾಂ ಥಾವ್ನ್ ಚಲುನ್ ಆಸ್ಚ್ಯಾ ವಾವ್ರಾಚಿ ಮಾಹೆತ್ ದಿವ್ನ್ ಗ್ಲ್ಯಾಡ್ಸನ್ ಅಲ್ಮೇಡಾನ್ ಹೊಚ್ ವಾವ್ರ್ ಹಾಚ್ಯಾಕೀ ಬರೆ ರಿತಿನ್ ಮುಕಾರುನ್ ವ್ಹರ್ಚೊ ಆಶಾವಾದ್ ವೆಕ್ತ್ ಕೆಲೊ. ತ್ಯೇ ಉಪ್ರಾಂತ್ ಕುವೆಯ್ಟಾಂತ್ಲ್ಯಾ ಕೊಂಕಣಿ ವಾವ್ರಾವಿಶಿಂ ಉಲವ್ನ್ ಬಾಯ್ ಐಡಾ ಡಿಸಿಲ್ವಾ ಪಾಲಡ್ಕಾನ್ ಕೊಂಕಣಿ ಕುಳ್ವಾರ್ ಕುವೇಯ್ಟ್ ಸಂಘಟನಾಚ್ಯಾ ಬುನ್ಯಾದಿ ವಾವ್ರಾಚಿ ತಶೆಂಚ್ ಆಶಾವಾದಿ ಪ್ರಕಾಶನಾಚ್ಯಾ ಸುರ್ವಿಲ್ಯಾ ವಾವ್ರಾಚಿ ಒಳೊಕ್ ಕರುನ್ ದಿತಚ್ ವಲ್ಲಿ ಕ್ವಾಡ್ರಸಾನ್ ಸವಿಸ್ತಾರ್ ರಿತಿನ್ ಕುವೆಯ್ಟಾಂತ್ ಜಾಲ್ಲ್ಯಾ ಕೊಂಕಣಿ ಸಾಹಿತ್ಯಿಕ್ ವಾವ್ರಾಚಿ ಒಳೊಕ್ ಕರುನ್ ದಿಲಿ; ಸತ್ತಾವಿಸ್ ಕೊಂಕಣಿ ಪುಸ್ತಕಾಂ ಆಶಾವಾದಿ ಪ್ರಕಾಶನಾನ್ ಪರ್ಗಟ್ಲಿಂ, ಪಾಂತೀಸ್ ಮಯ್ನ್ಯಾಳಿಂ ಕಾಮಾಸಾಳಾಂ, ಬಾತ್ತೀಸ್ ಪುಸ್ತಕ್ ಸಮೀಕ್ಶಾ, ಸ ಕಥಾಪಾಠ್, ಕೊಂಕಣಿ ಅಭಿಯಾನ್, ಅಟ್ಟಾವೀಸ್ ಮಯ್ನ್ಯಾಳೆ ಕವಿತಾ ಸ್ಪರ್ಧೆ, ದೋನ್ ವರ್ಸಾಚೆ ಕವಿ, ತಶೆಂಚ್ ದೋನ್ ವರ್ಸಾಚೆ ಕಥಾಕಾರ್ ಪುರಸ್ಕಾರ್, ತಶೆಂಚ್ ೨೦೦೪ ಥಾವ್ನ್ ೨೦೦೭ ಪರ್ಯಾಂತ್ ವರ್ಸಾಳೆ ಸಾಹಿತಿಕ್ ಸ್ಪರ್ಧೆ ಮಾಂಡುನ್ ಹಾಡ್ಲೆ ಮಾತ್ರ್ ನ್ಹಯ್, ಮುಂಬಯ್ ಆನಿ ಗಾಂವಾಂತ್ ಸಯ್ತ್ ಕೊಂಕಣಿ ಕಾಮಾಸಾಳಾಂ ಚಲವ್ನ್ ವ್ಹೆಲಿಂ ಮ್ಹಣಾಲೊ.

ಪರಿಸಂವಾದಾಚೊ ವಾಂಟೊ ಗೌರಂಗ್ ಭಂಡಾಯೆನ್ ಚಲವ್ನ್ ವ್ಹೆಲೊ. ಅಖೇರಿಚೊ ವಾಂಟೊ ಶೈಲೇಂದ್ರ ಮೆಹ್ತಾನ್ ಚಲವ್ನ್ ವ್ಹೆಲೊ. ಕನ್ಸೆಪ್ಟಾ ಫೆರ್ನಾಂಡಿಸಾನ್ ಅಪ್ಲ್ಯಾ ಸಂಪ್ಣೆಚ್ಯಾ ಉಲವ್ಪಾಂತ್, ಪರಿಸಂವಾದಾಂತ್ ಜಾಲ್ಲ್ಯಾ ಸರ್ವ್ ಉಲವ್ಪಾಂಚೆರ್ ಏಕ್ ನದರ್ ಘಾಲುನ್ ಪ್ರಮುಕ್ ವಿಶ್ಯಾಂಚೆರ್ ಉಜ್ವಾಡ್ ಫಾಂಕಯಿತ್ತ್, ಹೆಂ ಖರೆಂಚ್ ಏಕ್ ಜಾಗತಿಕ್ ಪರಿಸಂವಾದ್, ಆನಿ ಹಿ ಏಕ್ ಸುರ್ವಾತ್ ಮಾತ್ರ್, ಫುಡೆಂ ಎಕೆಕಾ ರಾಶ್ಟ್ರಾಂತ್ ಜಾಲ್ಲ್ಯಾ ಸಮಗ್ರ್ ಕೊಂಕಣಿ ವಾವ್ರಾಚೆರ್ ಖೊಲಾಯೆಚೆಂ ಅಧ್ಯಯನ್ ಚಲಂವ್ಚ್ಯಾ ದಿಶೆನ್ ಪರಿಸಂವಾದ್ ಮಾಂಡುನ್ ಹಾಡುಂಕ್ ಉಲೊ ದಿಲೊ.

ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟವ್ನ್ ಜುಲಾಯ್ 1 ತಾರಿಕೆರ್ ’ಸಿರಿವಂತಾಚ್ಯಾ ಸಾಹಿತ್ಯಾಚೊ ಅಭ್ಯಾಸ್’ ಸುರ್ವಾತ್ ಜಾಂವ್ಕ್ ಆಸ್ಚ್ಯಾ ಕಥಾಪಾಠ್ ಚೊವ್ತ್ಯಾ ಶಿಂಕಳೆಚಿ ತಶೆಂಚ್ ಸಿರಿವಂತಾಚಿ ಮೊಟ್ವಿ ಒಳೊಕ್ ಕರುನ್ ದಿಲಿ. 

ಮನುಷ್ಯನಾಗಿ ಹುಟ್ಟುವುದೆ ಹೆಮ್ಮೆ: ಎಸ್ಪಿವೈಎಸ್ಸೆಸ್ಸ್ ಜಿಲ್ಲಾ ಶಿಕ್ಷಣ ಪ್ರಮುಖ ಚೌಡಪ್ಪ

ಕೋಲಾರ: ಮನುಷ್ಯನಾಗಿ ಹುಟ್ಟುವುದೆ ಹೆಮ್ಮೆ ಆದುದರಿಂದ ಸುಸಂಸ್ಕøತರಾಗಿ ಜೀವನದಲ್ಲಿ ಇಡುವ ಹೆಜ್ಜೆ ನೋಡುವ ನೋಟ ಉಡುವ ಬಟ್ಟೆ ಆಡುವ ಮಾತು ಸುಸಂಸ್ಕøತವಾಗಿದ್ದರೆ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಎಸ್ಪಿವೈಎಸ್ಸೆಸ್ಸ್ ಜಿಲ್ಲಾ ಶಿಕ್ಷಣ ಪ್ರಮುಖ ಚೌಡಪ್ಪ ಹೇಳಿದರು.
ಪಟ್ಟಣ ತ್ಯಾಗರಾಜ ಬಡಾವಣೆಯ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಏರ್ಪಡಿಸಿದ್ದ 91 ನೇ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಶಿಬಿರದ ಭಾರತ ಮಾತಾ ಪೂಜಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದಿಂದ ಎಲ್ಲವನ್ನು ಪಡೆಯುವ ಮನುಷ್ಯರು ಸಮಾಜಕ್ಕೇನು ಕೊಡದೆ ನಶ್ವರವಾಗುತ್ತಿದ್ದೇವೆ. ಭಾರತ ಎಂದರೆ ಬೆಳಕು, ರಮಿಸು, ತೇಜಸು ನಂಬಿಕೆ ಪ್ರಕೃತಿ ಭಾರತ ಮಾತೆ ಹೆಮ್ಮೆ ಎನ್ನುವುದು ಅರಿತರೆ ನಾವು ದನ್ಯರು. ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಿಕ ಸೇವಾ ಚೆಟುವಟಿಕೆಗಳು ಮಾಡುವಲ್ಲಿ ಜಾಗೃತರಾಗಿರಬೇಕು. ಎಲ್ಲಿಗೆ ಹೋದರು ಹೊಂದಿಕೊಂಡು ಹೋಗುವ ಸ್ವಾಭಾವ ಬೆಳೆಸಿಕೊಳ್ಳಬೇಕು. ಯೋಗ ಎಂದರೆ ದೇಹ ದಂಡಿಸುವುದಲ್ಲ. ಕುಂತರೆ ನಿಂತರೆ ನಿತ್ಯ ಜೀವನದಲ್ಲಿ ನಡೆಯುವ ನಡೆ ನುಡಿಯೇ ಯೋಗ. ಸತ್ಸಂಘಗಳ ಮೂಲಕ ಶ್ರೀಮನ್ನಾರಾಯಣ ನುಡಿಯಂತೆ ಮಾನವೀಯ ಮೌಲ್ಯಗಳು ಬೆಳೆಸಿಕೊಂಡು ಸಮಾಜದಿಂದ ಪಡೆದ ಯೋಗ ಶಿಕ್ಷಣಕ್ಕೆ ಸಮಾಜ ನಿಧಿ ಅರ್ಪಿಸುವ ಮೂಲಕ ಸಮಾಜಿಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಮುರಾರ್ಜಿ ಶಾಲೆ ಮುಖ್ಯ ಶಿಕ್ಷಕಿ ಸುಜಾತ ಮಾತನಾಡಿ ಜೀವನದಲ್ಲಿ ನಾವು ಆನಂದವಾಗಿರಲು ಧೈಹಿಕ ಮನಸಿಕ ನೆಮ್ಮದಿಗೆ ಯೋಗಾಭ್ಯಾಸ ಕಲಿತು ಶರೀರದಲ್ಲಿನ ಸೋಂಬೇರಿತನ ದೂರ ಮಾಡಿ. ಯೋಗ ಮಾಡಿದ್ದರೆ ಮದುಮೇಹ, ತೈರಾಯ್ಡ್ ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳು ನಮ್ಮಿಂದ ದೂರವಾಗಿ ದೇಹಕ್ಕೆ ರೋಗ ನಿರೋದಕ ಶಕ್ತಿ ಬರುತ್ತದೆ. ತಂತ್ರಜ್ಞಾನ ಬೆಳೆದ ಈ ದಿನಗಳಲ್ಲಿ ಪ್ರತಿ ವ್ಯಕ್ತಿ ಐಶಾರಾಮಿ ಜೀವನಕ್ಕೆ ಜೋತು ಬಿದ್ದು ದೇಹ ದಂಡನೆಯಾಗದೆ ದೇಹ ಬಂಜೇತನವಾಗುತ್ತದೆ. ತಾಯಿ ಮತ್ತು ಗುರು ಸ್ಥಾನ ಎಲ್ಲದ್ದಕ್ಕಿಂತ ಗುರುತ್ತರವಾದದ್ದು. ಅದಕ್ಕೆ ಬೆಲೆ ಕಟ್ಟಲಾಗದು ಕಲಿತ ವಿದ್ಯೆ ಹೆತ್ತ ತಾಯಿ ಹೊತ್ತ ಭೂಮಿಯ ಋಣ ತೀರಿಸುವುದೆಂದರೆ ಸಮಾಜದ ಸೇವಾ ಚೆಟುವಟಿಕೆಗಳಿಗೆ ಅರ್ಪಿಸುವ ಕಾಣಿಕೆಯಿಂದ ಋಣ ಮುಕ್ತರಾಗುತ್ತೇವೆಚಿದರು.
ಸಹ ಶಿಕ್ಷಕಿ ಉಷಾ ಪ್ರೇಮಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವೆ ಎಂದರೆ ತ್ಯಾಗದ ರೀತಿಯಲ್ಲಿರಬೇಕು. ನಾವು ಮಾಡುವ ಸೇವೆ ಯೋಗ್ಯವಾಗಿರಬೇಕು. ಮನಸು ದೇಹ ಶುದ್ಧವಾಗಿಟ್ಟುಕೊಂಡು ಸಾರ್ಥಕ ಸೇವೆ ಮಾಡಬೇಕು. ನಮ್ಮ ಸಮಿತಿ ಇರುವ ವಾಸ್ತವಾಂಶವನ್ನು ಸಮಾಜದ ಜನ ಸಮುದಾಯಕ್ಕೆ ಉಚಿತವಾಗಿ ಕಲಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಅನುರಾಧಾ ಪ್ರಾರ್ಥಿಸಿ, ಪ್ರಭಾವತಮ್ಮ ಸ್ವಾಗತಿಸಿ, ಉಮಾದೇವಿ ವಂದಿಸಿದರು, ವರಲಕ್ಷ್ಮಮ್ಮ ನಿರೂಪಿಸಿದರು.
10 ಶ್ರೀನಿವಾಸಪುರ 1: ಯೋಗ ಮಂದಿರದಲ್ಲಿ ಏರ್ಪಡಿಸಿದ್ದ ಭಾರತ ಮಾತಾ ಪೂಜೆ ಕಾರ್ಯಕ್ರಮದಲ್ಲಿ ಯೋಗ ಬಂದುಗಳು ಸಮಾಜ ನಿಧಿ ಅರ್ಪಿಸಿದರು.

ಗ್ರಾಮೀಣ ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆದು ಬದುಕು ರೂಪಿಸಿಕೊಳ್ಳಬೇಕು : ಡಾ. ಬಾಬುರೆಡ್ಡಿ

ಶ್ರೀನಿವಾಸಪುರ: ಗ್ರಾಮೀಣ ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಹೃದ್ರೋಗ ತಜ್ಞ ಡಾ. ಬಾಬುರೆಡ್ಡಿ ಹೇಳಿದರು.
ತಾಲ್ಲೂಕಿನ ಆರಿಕುಂಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಡಾ. ಅಬ್ದುಲ್ ಕಲಾಂ ಅವರಂಥ ಮಹಾನ್ ಚಿಂತಕರ ಆದರ್ಶದ ಬೆಳಕಲ್ಲಿ ಬೆಳೆಯಬೇಕು ಎಂದು ಹೇಳಿದರು.
ಗ್ರಾಮದ ಮುಖಂಡರಾಗಿದ್ದ ದಿವಂಗತ ಎ.ನಾರಾಯಣಸ್ವಾಮಿ ಬದ್ಧತೆಯಿಂದ ಕಾರ್ಯನಿರ್ವಹಿಸಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ನಿರ್ಮಿಸಿದರು. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಪೋಷಕರು ಹಾಗೂ ಶಿಕ್ಷಕರಿಗೆ ಹೆಸರು ತರಬೇಕು ಎಂದು ಹೇಳಿದರು.
ಡಾ. ಸಿರಿಲಕ್ಷ್ಮಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮೈಗೂಡಿಸಿಕೊಂಡು ಬೆಳೆಯಬೇಕು. ಪರಿಶ್ರಮದ ಮೂಲಕ ಸಾಧನೆ ಹಾದಿಯಲ್ಲಿ ಸಾಗಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಪಡೆದು, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಡಾ. ಬಾಬುರೆಡ್ಡಿ, ಡಾ. ಸಿರಿಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ವೆಂಕಟರೆಡ್ಡಿ, ಮುನಿರೆಡ್ಡಿ, ಶ್ರೀರಾಮರೆಡ್ಡಿ, ಅಶೋಕರೆಡ್ಡಿ, ಮುಖ್ಯ ಶಿಕ್ಷಕಿ ಕೆ.ಭಾಗ್ಯಲಕ್ಷ್ಮಿ, ಶಿಕ್ಷಕರಾದ ವೆಂಕಟೇಶ ಬಾಬು, ಶ್ರೀನಾಥ್, ಎಚ್.ಆಂಜನಪ್ಪ, ಸುಜಾತ, ಬಿ.ವಿ.ರತ್ನಮ್ಮ, ಮುರಳಿ ಬಾಬು ಇದ್ದರು.